ಈ ದಿನದ ರಾಶಿ ಭವಿಷ್ಯ ಹೇಗಿದೆ? – ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಇಂದು ನಿಮ್ಮಲ್ಲಿ ಪೂರ್ಣ ವಿಶ್ವಾಸ ಇರುತ್ತದೆ. ಅನಗತ್ಯ ಕೋಪ ಮತ್ತು ಚರ್ಚೆಯನ್ನು ತಪ್ಪಿಸಿ. ವ್ಯಾಪಾರ-ವ್ಯವಹಾರದಲ್ಲಿ ಹೆಚ್ಚಿನ ಜಂಜಾಟವಿರುತ್ತದೆ. ನೀವು ಸ್ನೇಹಿತರಿಂದ ಬೆಂಬಲವನ್ನು ಪಡೆಯಬಹುದು. ಮಾನಸಿಕ ಶಾಂತಿ ಇರುತ್ತದೆ, ಆದರೆ ಅಧಿಕ ಖರ್ಚುಗಳಿಂದ ನೀವು ಚಿಂತಿತರಾಗುತ್ತೀರಿ. ನಕಾರಾತ್ಮಕ ಆಲೋಚನೆಗಳ ಪ್ರಭಾವವನ್ನು ತಪ್ಪಿಸಿ. ** ವೃಷಭ ರಾಶಿ : ಇಂದು ನೀವು ಆತ್ಮವಿಶ್ವಾಸದಿಂದ ಕೂಡಿರುತ್ತೀರಿ. ಮನಸ್ಸು ಸಂತೋಷವಾಗಿ ಉಳಿಯುತ್ತದೆ. ಸಂಭಾಷಣೆಯಲ್ಲಿ ತಾಳ್ಮೆಯಿಂದಿರಿ. ತಂದೆಯ ಆರೋಗ್ಯ ಸುಧಾರಿಸಲಿದೆ. ಮನಸ್ಸಿನಲ್ಲಿ ನಿರಾಶೆ ಮತ್ತು ಅತೃಪ್ತಿಯ ಭಾವನೆ ಇರುತ್ತದೆ. ಕುಟುಬಲ್ಲಿ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಬಟ್ಟೆಗಳನ್ನು ಉಡುಗೊರೆಯಾಗಿ ಸ್ವೀಕರಿಸಬಹುದು. ** ಮಿಥುನ ರಾಶಿ…
Author: Nammur Express Admin
ಚಿಕ್ಕಮಗಳೂರು ಜಿಲ್ಲಾ ಟಾಪ್ ನ್ಯೂಸ್ ಕಾಫಿನಾಡಲ್ಲಿ ಸಂಸದರ ಅಭಿವೃದ್ಧಿ ಚರ್ಚೆ – ಶೃಂಗೇರಿಯಲ್ಲಿ ಸೆ.1ರಂದು ರಕ್ತದಾನ ಶಿಬಿರ – ಬಾಳೆಹೊನ್ನೂರಿನಲ್ಲಿ ಸೆ.2ಕ್ಕೆ ರೈತರ ಪರ ಪ್ರತಿಭಟನೆ NAMMUR EXPRESS NEWS ಚಿಕ್ಕಮಗಳೂರು: ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಚಿಕ್ಕಮಗಳೂರು ಪ್ರವಾಸದಲ್ಲಿದ್ದು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ನಂತರ ನಗರದ ಪ್ರವಾಸಿ ಮಂದಿರದಲ್ಲಿ ವಿಶ್ವಕರ್ಮ ಯೋಜನೆಯ ಅಧಾಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಯೋಜನೆಯ ಪ್ರಗತಿಯ ಬಗ್ಗೆ ಚರ್ಚಿಸಿದರು. ನಂತರ ಅಧಿಕಾರಿಗಳೊಡನೆ ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಯ ಬಗ್ಗೆ ಚರ್ಚಿಸಿದರು. ಬಿಎಸ್‌ಎನ್‌ಎಲ್ ಹಾಗೂ ಮೆಸ್ಕಾಂ ಅಧಿಕಾರಿಗಳೊಂದಿಗೆ ಸಭೆ ಸಡೆಸಿ ಜಿಲ್ಲೆಯಲ್ಲಿನ ಇಲಾಖೆಯ ಕಾರ್ಯ, ಪ್ರಗತಿ,ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಶೃಂಗೇರಿಯಲ್ಲಿ ಸೆ. 1ರಂದು ರಕ್ತದಾನ ಶಿಬಿರ ಶೃಂಗೇರಿ: ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳವರ 32ನೇ ವರ್ಧ0ತೋತ್ಸವದ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ. ಕಾರ್ಮಿಕ ಮಿ್ರ ಬಳಗ ಶೃಂಗೇರಿ, ರಕ್ತ ದಾನಿಗಳು ಶೃಂಗೇರಿ ಮತ್ತು ಅಭಿನವ ವಿದ್ಯಾತೀರ್ಥ ಮಲ್ಟಿ…
ಬಿಎಸ್ಎನ್ಎಲ್ ಗ್ರಾಹಕರಿಗೆ ಭಾರೀ ಆಫರ್ – 5ಜಿ ಸೇವೆ ನೀಡಲು ಸಕಲ ಸಿದ್ಧತೆ: ಜಿಯೋಗೆ ಸಡ್ಡು – ಕೇವಲ 397 ರೂ.ಗೆ 5 ತಿಂಗಳು ಸೌಲಭ್ಯ NAMMUR EXPRESS NEWS ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ಘೋಷಿಸಿದೆ. ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಕೇವಲ 397ರೂ.ಗಳಿಗೆ 5 ತಿಂಗಳ ಅನಿಯಮಿತ ಡೇಟಾ ಜೊತೆಗೆ ಅನಿಯಮಿತ ಕರೆಗಳನ್ನು ಘೋಷಿಸಿದೆ. ಜಿಯೋ, ಏರ್‌ಟೆಲ್, VI ಟೆಲಿಕಾಂ ಸೇವಾ ಕಂಪನಿಗಳು ಈಗಾಗಲೇ ಗ್ರಾಹಕರಿಗೆ ಅನಿಯಮಿತ ಕರೆಗಳು, ಡೇಟಾ ಮತ್ತು ಇತರ ಕೊಡುಗೆಗಳನ್ನು ಘೋಷಿಸಿದ್ದಾರೆ. ಇದೀಗ ಖಾಸಗಿ ಟೆಲಿಕಾಂ ಕಂಪನಿಗಳಿಗೆ ಸಡ್ಡು ಹೊಡೆಯಲು ಬಿಎಸ್‌ಎನ್‌ಎಲ್ ಮುಂದಾಗಿದೆ. ಇದೇ ಕಾರಣದಿಂದಲೇ ಭರ್ಜರಿ ಆಫರ್ ಘೋಷಣೆ ಮಾಡಿದೆ. ಕೇವಲ 397 ರೂಪಾಯಿಗೆ 150 ದಿನ ಅಂದರೆ 5 ತಿಂಗಳ ವ್ಯಾಲಿಡಿಟಿಯನ್ನು ನೀಡಿದೆ. ಇಷ್ಟೇ ಅಲ್ಲ ಅನಿಯಮಿತ ಕರೆಗಳು ಮತ್ತು ಡೇಟಾ ಆಫರ್ ಬಗ್ಗೆ ಮಹತ್ವದ ಘೋಷಣೆ ಮಾಡಿದೆ. BSNL ಘೋಷಿಸಿರುವ ರೂ. 397 ಯೋಜನೆಯಲ್ಲಿ ಹಲವು…
ಕಲ್ಪವೃಕ್ಷ ಸೊಸೈಟಿ ಶೀಘ್ರ ಆಗಲಿದೆ ಬ್ಯಾಂಕ್ – ವಾರ್ಷಿಕ ಮಹಾ ಸಭೆಯಲ್ಲಿ ಈರೇಗೋಡು ಶ್ರೀಧರ್ ಮೂರ್ತಿ – ಶೈಕ್ಷಣಿಕ ಸಾಧನೆ ಮಾಡಿದ ಮಕ್ಕಳಿಗೆ ಪ್ರೋತ್ಸಾಹ ಧನ, ಸನ್ಮಾನ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ ಕಲ್ಪವೃಕ್ಷ ಸೊಸೈಟಿ ಶೀಘ್ರ ಆಗಲಿದೆ ಬ್ಯಾಂಕ್ ಎಂದು ಸೊಸೈಟಿ ಅಧ್ಯಕ್ಷರು, ಹಿರಿಯ ಸಹಕಾರಿಗಳಾದ ಈರೇಗೋಡು ಶ್ರೀಧರ್ ಮೂರ್ತಿ ಹೇಳಿದ್ದಾರೆ. ತೀರ್ಥಹಳ್ಳಿಯ ಬಂಟರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿರಿಯ ಸಹಕಾರಿ ಹೆಚ್.ಎನ್. ವಿಜಯದೇವ್‌ರವರ ಮೂಲ ಬಂಡವಾಳದಿಂದ ಆರಂಭಿಕ ಸಾಲ ಪಡೆದು ನಂತರ ಡೆಪಾಸಿಟ್ ಕಲೆಕ್ಷನ್ ಮಾಡಿ ಶೇ. 11 ರ ಬಡ್ಡಿಯಲ್ಲಿ ಸಾಲ ಕೊಡಲು ಪ್ರಾರಂಭಿಸಿದೆವು. ಇದಕ್ಕೆ ಪೂರಕವಾಗಿ ಜಿಲ್ಲಾ ಕೇಂದ್ರ ಬ್ಯಾಂಕ್ ಹಣಕಾಸಿನ ಉತ್ತೇಜನ ನೀಡುತ್ತಾ ಬಂದಿದ್ದು, ಇದೀಗ ನಮ್ಮ ಸೊಸೈಟಿ ಬ್ಯಾಂಕ್ ಆಗುವತ್ತ ಹೆಜ್ಜೆ ಇಟ್ಟಿದೆ. ಎಲ್ಲಾ ಸದಸ್ಯರು, ಷೇರುದಾರರ ಸಹಕಾರಕ್ಕೆ ಧನ್ಯವಾದ ಎಂದರು. ಈವರೆಗೆ ಸುಮಾರು 5 ಕಟಿ ಸಂಗ್ರಹವಾಗಿದೆಯಲ್ಲದೇ, ಉತ್ತರೋತ್ತರವಾಗಿ ಶೀಘ್ರ ಬ್ಯಾಂಕ್ ಆಗಿ ಪರಿವರ್ತನೆಯಾಗಲಿದೆ…
ಹಾಸನ ಎಚ್.ಕೆ ಎಸ್ ಕಾಲೇಜು ವಿದ್ಯಾರ್ಥಿಗಳ ಸಾಧನೆ – ಚರ್ಚಾ ಸ್ಪರ್ಧೆಯಲ್ಲಿ ವಿಜೇತರಾದ ಗೌತಮ್ ಸಿ ವೈ, ಅಕ್ಷರ – ವಿಜೇತ ಮಕ್ಕಳಿಗೆ ಆಡಳಿತ ಮಂಡಳಿ ಅಭಿನಂದನೆಗಳು NAMMUR EXPRESS NEWS ಹಾಸನ: ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ, ಕಾರ್ಕಳ ಇದರ ಶೈಕ್ಷಣಿಕ ಸಹಭಾಗಿತ್ವದಲ್ಲಿ ಕಾರ್ಯಾಚರಿಸುತ್ತಿರುವ ಹಾಸನದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಹೆಚ್. ಕೆ. ಎಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಇತ್ತೀಚಿಗೆ ನಡೆದ ಚರ್ಚಾ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ್ದಾರೆ. ಸಹಕಾರ ಚಳುವಳಿಯ ಸಾಧನೆ ಕುರಿತಂತೆ ಜನರಲ್ಲಿ ಅರಿವು ಮೂಡಿಸುವ ಮತ್ತು ಚಳುವಳಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಹಾಸನ ಜಿಲ್ಲಾ ಸಹಕಾರ ಯೂನಿಯನ್ (ನಿ), ಹಾಸನ ಇವರ ವತಿಯಿಂದ ಹಾಸನ ಜಿಲ್ಲೆಯ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಚರ್ಚಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಇದರ ಅಂಗವಾಗಿ ನಡೆದ ಚರ್ಚಾ ಸ್ಪರ್ಧೆಯಲ್ಲಿ ಹೆಚ್. ಕೆ. ಎಸ್ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಯ ಗೌತಮ್ ಸಿ ವೈ ಮತ್ತು ಪ್ರಥಮ…
ಶಾಂತಿಯುತ ಗಣೇಶೋತ್ಸವಕ್ಕೆ ಹೊಸದುರ್ಗ ಸಜ್ಜು! – ಪೊಲೀಸ್ ಇಲಾಖೆಯಿಂದ ಸಭೆ: ಜನರಿಗೆ ಮಾಹಿತಿ – ಪರವಾನಗಿ ಕಡ್ಡಾಯವಾಗಿ ಪಡೆಯಬೇಕು.. ಡಿಜೆ ಇಲ್ಲ! NAMMUR EXPRESS NEWS ಹೊಸದುರ್ಗ: ಗಣೇಶೋತ್ಸವ ಹಾಗೂ ಈದ್ ಮಿಲಾದ್ ಹಬ್ಬದ ಅಂಗವಾಗಿ ಹೊಸದುರ್ಗದಲ್ಲಿ ಶಾಂತಿ ಸಭೆ ನಡೆಯಿತು. ಊರುಗಳಲ್ಲಿ ಆಚರಿಸುವ ಗಣೇಶ ಮೂರ್ತಿಗಳನ್ನು ಸಾರ್ವಜನಿಕ ರಸ್ತೆಗಳಲ್ಲಿ ಪ್ರತಿಷ್ಠಾಪಿಸಿ ಬೇರೆಯವರಿಗೆ ಕಿರಿಕಿರಿ ಉಂಟು ಮಾಡಬಾರದು, ಸಂಘಟನೆಯವರು ಪೊಲೀಸ ಇಲಾಖೆ ನೀಡಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಇಲ್ಲದಿದ್ದರೆ ಅದರ ಪರಿಣಾಮ ಎದುರಿಸಬೇಕಾಗುವುದು ಎಂದು ಹೊಸದುರ್ಗ ಪೊಲೀಸ್ ಇನ್ಸ್ಪೆಕ್ಟರ್ ಎನ್ ತಿಮ್ಮಣ್ಣ ತಿಳಿಸಿದ್ದಾರೆ. ಹೊಸದುರ್ಗ ಪೊಲೀಸ್ ಠಾಣೆ ಆವರಣದಲ್ಲಿ ನಡೆದ ಗಣೇಶೋತ್ಸವ ಹಾಗೂ ಈದ್ ಮಿಲಾದ್ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು ಗಣೇಶೋತ್ಸವ ಪ್ರತಿಷ್ಠಾಪನೆ ಮಾಡುವವರು ಪುರಸಭೆ ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಕಡ್ಡಾಯವಾಗಿ ಪರವಾನಗಿ ಪಡೆದುಕೊಳ್ಳಬೇಕು, ಅಗ್ನಿಶಾಮಕ ಠಾಣೆ ಹಾಗೂ ಪೊಲೀಸ್ ಇಲಾಖೆಯಿಂದ ಪರವಾನಿಗೆ ಪಡೆಯಬೇಕು. ಗಣೇಶೋತ್ಸವ ಿತಿಯವರು ಕಡ್ಡಾಯವಾಗಿ ಅವರ ಹೆಸರು ಮತ್ತು ದೂರವಾಣಿ ಸಂಖ್ಯೆಗಳನ್ನು ಪೊಲೀಸ್…
ತೀರ್ಥಹಳ್ಳಿ ಪಟ್ಟಣದಲ್ಲಿ 2 ದಿನ ನೀರಿಲ್ಲ! – ಹೂಳು ತೆಗೆಯುವ ಕಾಮಗಾರಿ ಕಾರ್ಯ: ನೀರು ಸರಬರಾಜು ಸ್ಥಗಿತ – ಸಾರ್ವಜನಿಕರು ಸಹಕರಿಸಬೇಕಾಗಿ ಪಟ್ಟಣ ಪಂಚಾಯತ್ ಮನವಿ – ಕೊಳಕು ನೀರು ತಡೆಗಟ್ಟಿ: ಹೊಸ ತಂತ್ರಜ್ಞಾನ ಅಳವಡಿಕೆಗೆ ಪಟ್ಟು NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಪಂಚಾಯ್ತಿ ನೀರು ಶುದ್ದೀಕರಣ ಕಾರ್ಯಕ್ರಮದಡಿಯಲ್ಲಿ ಘಟಕದ ಜಾಕ್‌ವೆಲ್‌ನಲ್ಲಿ ಹೂಳು ತುಂಬಿದ್ದ ಕಾರಣ ಆಗಸ್ಟ್ 31 ಹಾಗೂ ಸೆಪ್ಟೆಂಬರ್ 1ರಂದು ಹೂಳು ತೆಗೆಯುವ ಕಾಮಗಾರಿ ನಡೆಯಲಿದೆ. ಆದ್ದರಿಂದ ಸೆಪ್ಟೆಂಬರ್ 1ರ ಭಾನುವಾರ ಮತ್ತು ಸೆಪ್ಟೆಂಬರ್ 2ರ ಸೋಮವಾರ ತೀರ್ಥಹಳ್ಳಿ ಪಟ್ಟಣದಾದ್ಯಂತ ನೀರು ಸರಬರಾಜು ಸ್ಥಗಿತವಾಗಲಿದೆ. ಸಾರ್ವಜನಿಕರು ಶನಿವಾರವೇ ಅಗತ್ಯ ಪ್ರಮಾಣದ ನೀರು ಸಂಗ್ರಹಿಸಿಕೊಟ್ಟುಕೊಳ್ಳುವಂತೆ ಪ.ಪಂ.ಮುಖ್ಯಾಧಿಕಾರಿ ನಾಗರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸ್ವಚ್ಛ ನೀರು ಕೊಡಲಿ: ತಂತ್ರಜ್ಞಾನ ಅಳವಡಿಕೆ ಆಗಲಿ! ತೀರ್ಥಹಳ್ಳಿ ಪಟ್ಟಣದ ಜನರಿಗೆ ಸ್ವಚ್ಛ ನೀರು ಸಿಗಬೇಕು ಎಂಬ ಅಗ್ರಹ ಜನರಿಂದ ಕೇಳಿ ಬಂದಿದೆ. ಇತ್ತೀಚಿಗೆ ಕಲುಷಿತ ನೀರು ಹೆಚ್ಚು ಬರುತ್ತಿದ್ದು ಜನರ ಆರೋಗ್ಯ ಏರುಪೇರಾಗುತ್ತಿದೆ. ಈ…
ಟಾಪ್ 4 ನ್ಯೂಸ್ ಕರಾವಳಿ ಕುಕ್ಕೆ ಸುಬ್ರಹ್ಮಣ್ಯ ಲಡ್ಡು ಅವ್ಯವಹಾರದ ತನಿಖೆ?! – ಮೂಡುಬಿದ್ರೆ: ರಸ್ತೆಯಲ್ಲೇ ಯುವತಿಗೆ ಹಲ್ಲೆ: ಆರೋಪಿ ಅರೆಸ್ಟ್! – ಉಡುಪಿ: ಕನ್ನಡದಲ್ಲೇ ಮಾತನಾಡಿ ಹಣ ವಂಚನೆಗೆ ಯತ್ನ – ಬೆಳ್ತಂಗಡಿ: ಮಹೇಶ್ ಶೆಟ್ಟಿ ತಿಮರೋಡಿಗೆ ಎಚ್ಚರಿಕೆ ನೀಡಿದ ಕೋರ್ಟ್ NAMMUR EXPRESS NEWS ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಲಡ್ಡು ಪ್ರಸಾದದಲ್ಲಿ ಅವವ್ಯವಹಾರ ನಡೆದಿರುವ ಶಂಕೆ ಹಿನ್ನೆಲೆ ನಾಲ್ವರು ಸಿಬ್ಬಂದಿಗಳಿಗೆ ನೋಟಿಸ್ ಜಾರಿ ಮಾಡಿ ಸಿಬ್ಬಂದಿಗಳ ಕರ್ತವ್ಯ ಬದಲಿಸಲಾಗಿದೆ ಎನ್ನಲಾಗಿದೆ. ಲಡ್ಡು ತಯಾರಿಕೆಯಾಗಿರುವ ಸಂಖ್ಯೆ ಮತ್ತು ಅದರ ವಿತರಣೆಯಲ್ಲಿ ಸಾಮ್ಯತೆ ಇಲ್ಲದೇ ರಶೀದಿ ಮತ್ತು ಇತರೇ ಹೆಚ್ಚುವರಿ ಲಡ್ಡು ವಿತರಣೆ ಆಗಿರುವುದರ ಲೆಕ್ಕಾಚಾರದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ. ಲಡ್ಡು ಪ್ರಸಾದದ ಬಗ್ಗೆ ಬಂದ ದೂರನ್ನು ಪರಿಗಣಿಸಿ ದೇಗಲದ ಆಡಳಿಧಿಕಾರಿ, ಸಹಾಯಕ ಆಯುಕ್ತ ಜುಬಿನ್ ಮಹಾಪತ್ರ ರವರ ಆದೇಶದ ಮೇರೆಗೆ ದೇವಳದ ಕಾರ್ಯನಿರ್ವಾಹಕ ಅಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಕ್ರಮ ಕೈಗೊಂಡಿದ್ದಾರೆ.…
ತೀರ್ಥಹಳ್ಳಿ ಟಾಪ್ 2 ನ್ಯೂಸ್ ಶಿಕ್ಷಣ ಇಲಾಖೆ ನಿವೃತ್ತ ಅಧಿಕಾರಿ ಚಂದ್ರಶೇಖರ್ ಟಿ ಸಿ. ವಿಧಿವಶ – ಆನ್ಲೈನ್ ಬೆಟ್ಟಿಂಗ್ ಹುಚ್ಚು ಹುಡುಗನ ಜೀವ ತೆಗೆಯಿತಾ? NAMMUR EXPRESS NEWS ತೀರ್ಥಹಳ್ಳಿ: ಶಿಕ್ಷಣ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಚಂದ್ರಶೇಖರ್ ಟಿ ಸಿ. ತುಂಬೆಕೋಡಿಗೆ ಇವರು ಶನಿವಾರಬೆಳಿಗ್ಗೆ ದೀರ್ಘಕಾಲಿಕ ಅನಾರೋಗ್ಯ ಕಾರಣ ನಿಧನ ಹೊಂದಿರುತ್ತಾರೆ. ಮೃತರು ಪತ್ನಿ, ಓರ್ವ ಪುತ್ರಿಯವರನ್ನು ಹಾಗೂ ಅಪಾರ ಸ್ನೇಹಿತರು ಬಂದು ಬಳಗಗಳನ್ನು ಹೊಂದಿದ್ದರು. ಚಂದ್ರಶೇಖರ್ ಅವರು ಅಂದಗೆರೆ ಗ್ರಾಮದವರಾಗಿದ್ದು, ಉತ್ತಮ ಸೇವೆ ಮೂಲಕ ಹೆಸರು ಮಾಡಿದ್ದರು. ಇಂದು ಮಧ್ಯಾಹ್ನ 2:30ಕ್ಕೆ ಮೃತರ ನಿವಾಸದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ. ಮೃತರು ಶಿಕ್ಷಣ ಇಲಾಖೆಯಲ್ಲಿ ಸುಮಾರು ಮೂವತ್ತೈದು ವರ್ಷಗಳಿಗೂ ಹೆಚ್ಚುಕಾಲ ಬೆಂಗಳೂರಿನಲ್ಲಿ ತಮ್ಮ ಉತ್ತಮ ಕಾರ್ಯ ನಿರ್ವಹಿಸಿ, ನಿವೃತ್ತರಾಗಿದ್ದರು. ಇವರು ಶಿಕ್ಷಣ ನೌಕರರ ಸಘದ ರಾಜ್ಯಾಧ್ಯಕ್ಷರಾಗಿ ಕೂಡ ಕೆಲವು ವರ್ಷಗಳ ಕಾಲ ತಮ್ಮ ಸೇವೆ ಸಲ್ಲಿಸಿದ್ದರು. – ಆನ್ಲೈನ್ ಬೆಟ್ಟಿಂಗ್ ಹುಚ್ಚು ಹುಡುಗನ ಜೀವ ತೆಗೆಯಿತಾ?…
ಡೆತ್ ನೋಟ್ ಸ್ಟೇಟಸ್ ಹಾಕಿ ಹೊಳೆಗೆ ಹಾರಿದನಾ ಯುವಕ? – ತೀರ್ಥಹಳ್ಳಿಯಲ್ಲಿ ದುರಂತ: ಯುವಕನಿಗಾಗಿ ಹುಡುಕಾಟ – ಆನ್ಲೈನ್ ವಂಚನೆ… ಲವ್… ಸಾಲಗಾರರ ಕಾಟಕ್ಕೆ ಬೇಸರ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ಸರ್ಕಾರಿ ಡಿಗ್ರಿ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಯೊಬ್ಬ ಡೆತ್ ನೋಟ್ ಸ್ಟೇಟಸ್ ಹಾಕಿ ತುಂಗಾ ನದಿ ಬಳಿ ಬೈಕ್ ಬಿಟ್ಟು ನಾಪತ್ತೆಯಾಗಿದ್ದಾನೆ. ಯುವಕ ಜೀವನದಲ್ಲಿ ಜಿಗುಪ್ಪೆಗೊಂಡ ತನ್ನ ವಾಟ್ಸಪ್ ಸ್ಟೇಟಸ್ ನಲ್ಲಿ ಕೆಲವೊಂದು ಮಾಹಿತಿ ಹಂಚಿಕೊಂಡು ನದಿಗೆ ಹಾರಿದ್ದಾನಾ ಎಂಬ ಬಗ್ಗೆ ಇದೀಗ ಹುಡುಕಾಟ ಶುರುವಾಗಿದೆ. ತೀರ್ಥಹಳ್ಳಿ ಸರ್ಕಾರಿ ಕಾಲೇಜಿನ ಅಂತಿಮ ವರ್ಷದ ಬಿಎ ಓದುತ್ತಿರುವ ತೀರ್ಥಹಳ್ಳಿ ಸಮೀಪದ ಇಂದಾವರ ಗ್ರಾಮದ ಜಗದೀಶ್ ಅವರ ಪುತ್ರ ಜಯದೀಪ್ ( 24 ವರ್ಷ) ದ ಯುವಕ ತುಂಗಾ ನದಿಗೆ ಹಾರಿದ್ದಾನೆ ಎನ್ನಲಾಗಿದೆ. ಉತ್ತಮವಾಗಿ ಓದುತ್ತಿದ್ದ ಹುಡುಗ ಸಾಲ, ಆನ್ಲೈನ್ ವಂಚನೆ, ಲವ್ ಎಂಬ ಬಗ್ಗೆ ತಮ್ಮ ಡೆತ್ ಸ್ಟೇಟಸ್ ಇದೀಗ ವೈರಲ್ ಆಗುತ್ತಿದೆ.