Author: Nammur Express Admin

ಈ ದಿನದ ರಾಶಿ ಭವಿಷ್ಯ ಹೇಗಿದೆ? – ಮಹಾವಿಷ್ಣುವಿನ ವಿಶೇಷ ಕೃಪೆಯಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಇಂದು ಉದ್ಯೋಗ ಮತ್ತು ವ್ಯವಹಾರದಲ್ಲಿ ಮಿಶ್ರ ಪರಿಣಾಮಗಳು ಕಂಡುಬರುತ್ತವೆ. ಕೆಲಸದ ಸ್ಥಳದಲ್ಲಿ ಅಡೆತಡೆಗಳು ಉಂಟಾಗಬಹುದು. ಸಹೋದ್ಯೋಗಿಗಳ ಸಹಾಯದಿಂದ ಕಷ್ಟಕರವಾದ ಕೆಲಸಗಳನ್ನು ಸಹ ಸಾಧಿಸಬಹುದು. ವ್ಯಾಪಾರದಲ್ಲಿ ಲಾಭದ ಅವಕಾಶಗಳು ಉಂಟಾಗುತ್ತವೆ. ನೀವು ಸಹೋದ್ಯೋಗಿಗಳಿಂದ ಬೆಂಬಲವನ್ನು ಪಡೆಯುತ್ತೀರಿ. ಆರ್ಥಿಕ ಲಾಭದ ಅವಕಾಶಗಳು ಒದಗಲಿವೆ. ಹೆಚ್ಚುವರಿ ಖರ್ಚು ಕೂಡ ಇರುತ್ತದೆ. ** ವೃಷಭ ರಾಶಿ : ಮನಸ್ಸು ತೊಂದರೆಗೊಳಗಾಗುತ್ತದೆ. ಸ್ವಯಂ ನಿಯಂತ್ರಣದಲ್ಲಿರಿ. ನಿಮ್ಮ ಕೆಲಸದಲ್ಲಿ ಅಧಿಕಾರಿಗಳೊಂದಿಗೆ ಸಾಮರಸ್ಯವನ್ನು ಕಾಪಾಡಿಕೊಳ್ಳಿ. ಉದ್ಯೋಗದಲ್ಲಿ ಕೆಲಸದ ಸ್ಥಳದಲ್ಲಿ ಬದಲಾವಣೆ ಉಂಟಾಗಬಹುದು. ದಾ ಹೆಚ್ಚಾಗಬಹುದು. ಉತ್ತಮ ಸ್ಥಿತಿಯಲ್ಲಿರಿ. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.…

Read More

ತೀರ್ಥಹಳ್ಳಿ ಕುವೆಂಪು ಶಾಲೆಯಲ್ಲಿ ಚೆಸ್, ಯೋಗ ಸ್ಪರ್ಧೆ – ವಿವಿಧ ಶಾಲೆಗಳಿಂದ ಆಗಮಿಸಿದ ಮಕ್ಕಳು: ಆರಗ ಜ್ಞಾನೇಂದ್ರ ಉದ್ಘಾಟನೆ – ಶಾಲಾ ಸಮಿತಿಯಿಂದ ನೂತನ ಪಟ್ಟಣ ಪಂಚಾಯತ್ ಪದಾಧಿಕಾರಿಗಳಿಗೆ ಸನ್ಮಾನ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದ ಮುಖ್ಯ ಬಸ್ ನಿಲ್ದಾಣ ಹಿಂಭಾಗದ 6-14 ವರ್ಷ ಒಳಗಿನ ಚೆಸ್, ಯೋಗ ಸ್ಪರ್ಧೆ ಬುಧವಾರ ನಡೆಯಿತು. ಶಾಸಕ ಆರಗ ಜ್ಞಾನೇಂದ್ರ ಅವರು ಚೆಸ್, ಯೋಗ ಪಂದ್ಯಾವಳಿಯನ್ನು ಉದ್ಘಾಟನೆ ಮಾಡಿ ಮಾತನಾಡಿ, ತೀರ್ಥಹಳ್ಳಿ ಎಲ್ಲಾ ಕ್ಷೇತ್ರದಲ್ಲಿ ಮುಂದಿದೆ. ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮೂಲಕ ತೀರ್ಥಹಳ್ಳಿ ಹೆಸರು ಗಳಿಸಿದೆ. ಎಲ್ಲಾ ಶಿಕ್ಷಕರಿಗೆ ಅಭಿನಂದನೆಗಳು. ಯೋಗ ಮತ್ತು ಚೆಸ್ ಎರಡು ಕ್ರೀಡೆಗಳು ಮಕ್ಕಳ ಭವಿಷ್ಯಕ್ಕೆ ಅವಶ್ಯ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಗಣೇಶ್ ಅವರು ಮಾತನಾಡಿ, ಕುವೆಂಪು ಓದಿದ ಶಾಲೆಯಲ್ಲಿ ಯೋಗ, ಚೆಸ್ ಆಯೋಜನೆ ಮಾಡಿದ್ದೇವೆ. 150 ವಿದ್ಯಾರ್ಥಿಗಳು ವಿವಿಧ ಭಾಗದಿಂದ ಆಗಮಿಸಿದ್ದಾರೆ. ಯೋಗ ಆರೋಗ್ಯ, ಚೆಸ್ ಬುದ್ದಿಮತ್ತೆಯನ್ನು ಹೆಚ್ಚಿಸುತ್ತದೆ. ಶೈಕ್ಷಣಿಕ ಹಾಗೂ ಕ್ರೀಡೆಯಲ್ಲಿ ತೀರ್ಥಹಳ್ಳಿ ತಾಲೂಕು…

Read More

ಮಂಡ್ಯ ನಗರಸಭೆ ಗದ್ದುಗೆ ‘ಜೆಡಿಎಸ್‌-ಬಿಜೆಪಿ’ ಮೈತ್ರಿ ಪಾಲು! • ಅಧಿಕಾರ ಹಿಡಿಯಲು ಎರಡು ಪಕ್ಷದವರಿಂದ ತಂತ್ರ-ಪ್ರತಿತಂತ್ರ • ಜೆಡಿಎಸ್‌-ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ! NAMMUR EXPRESS NEWS ಮಂಡ್ಯ: ತೀವ್ರ ಕುತೂಹಲ ಮೂಡಿಸಿದ್ದ ಮಂಡ್ಯ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಕ್ಕೆ ಆ.28ರಂದು ನಡೆದ ಚುನಾವಣೆಯಲ್ಲಿ ಮಂಡ್ಯ ನಗರಸಭೆ ಗದ್ದುಗೆ ಜೆಡಿಎಸ್‌-ಬಿಜೆಪಿ ಮೈತ್ರಿ ಪಾಲಾಗಿದೆ. ಎರಡನೇ ಅವಧಿಗೆ ಅಧ್ಯಕ್ಷರಾಗಿ ನಾಗೇಶ್, ಉಪಾಧ್ಯಕ್ಷರಾಗಿ ಅರುಣ್ ಕುಮಾರ್ ಆಯ್ಕೆಯಾಗಿದ್ದಾರೆ. ತೀವ್ರ ಕುತೂಹಲ ಮೂಡಿಸಿದ್ದ ಮಂಡ್ಯ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನ, ಚುನಾವಣೆಯಲ್ಲಿ ಮಂಡ್ಯ ನಗರಸಭೆ ಗದ್ದುಗೆ ಜೆಡಿಎಸ್‌-ಬಿಜೆಪಿ ಮೈತ್ರಿ ಪಾಲಾಗಿದೆ. ಮಂಡ್ಯ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನದ ಚುನಾವಣೆಯಲ್ಲಿ ಎರಡನೇ ಅವಧಿಗೆ ಅಧ್ಯಕ್ಷರಾಗಿ ನಾಗೇಶ್, ಉಪಾಧ್ಯಕ್ಷರಾಗಿ ಅರುಣ್ ಕುಮಾರ್ ಆಯ್ಕೆಯಾದರು. ಅಧಿಕಾರ ಹಿಡಿಯಲು ಎರಡು ಪಕ್ಷದವರಿಂದ ತಂತ್ರ-ಪ್ರತಿತಂತ್ರ ರೂಪಿಸಲಾಗಿತ್ತು. ಕಾಂಗ್ರೆಸ್ಸಿಗೆ ಸೆಡ್ಡು ಹೊಡೆದ ಸಂಸದ ಹಾಗೂ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ, ರಿವರ್ಸ್ ಆಪರೇಷನ್ ಮಾಡಿ ಕಾಂಗ್ರೆಸ್ಸಿನ ಓರ್ವ ಸದಸ್ಯನನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡು ಮಂಡ್ಯ ನಗರಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.…

Read More

ಇನ್ಮೇಲೆ ಕೆಲವೇ ನಿಮಿಷದಲ್ಲಿ ಸಿಗುತ್ತೆ ಸಾಲ! – ಡಿಜಿಟಲ್ ಪೇಮೆಂಟ್: ಇನ್ನೊಂದು ಕ್ರಾಂತಿಕಾರಿ ಪೇಮೆಂಟ್ ಸಿಸ್ಟಮ್! • UPI ನಂತರ ULI ಗೆ ಮುಹೂರ್ತ ಫಿಕ್ಸ್!? NEWS EXPRESS NEWS ಸಾಲ ಪಡೆಯಬೇಕು ಎಂದರೆ ಅದರಷ್ಟು ಕಷ್ಟ ಯಾವುದಿಲ್ಲ. ದಾಖಲೆ ಕೊಡಬೇಕು, ಬ್ಯಾಂಕ್ ಸುತ್ತಾಡಬೇಕು. ಹೀಗೆ ನೂರೆಂಟು ತೊಂದರೆ ಇದ್ದದ್ದೇ. ಈ ಹೊಸ ಸಾಲ ವ್ಯವಹಾರದ ಯು.ಎಲ್.ಐ ಲಾಂಚ್ ಬಗ್ಗೆ ಆರ್.ಬಿ.ಐ ಗವರ್ನರ್ ಶಕ್ತಿಕಾಂತ್ ದಾಸ್ ಮಾತನಾಡಿದ್ದಾರೆ. ಡಿಜಿಟಲ್ ಪೇಮೆಂಟ್ ಗಳಿಗೆ ಯುಪಿಐ ತರಹದ ಸಾಲ ವ್ಯವಹಾರಕ್ಕಾಗಿ ULI ಬರುತ್ತಿವೆ. ULIನಿಂದ ರೈತರು ಹಾಗೂ ಸಣ್ಣ ಉದ್ಯಮಿಗಾರರಿಗೆ ಸಾಲ ಅನುಮೋದನೆಯಾಗುವ ಅವಧಿ ಗಣನೀಯವಾಗಿ ಇಳಿಯಲಿದೆ. ಕೆಲವೇ ನಿಮಿಷಗಳಲ್ಲಿ ಜನರಿಗೆ ಸಾಲ ದೊರೆಯುವ ಸೌಲಭ್ಯ ಸಿಗಲಿದೆ. ಹಾಗಿದ್ದರೆ ಏನಿದು ULI? 2016ರಲ್ಲಿ ಲಾಂಚ್ ಆದ UPI ಭಾರತದಲ್ಲಷ್ಟೇ ಅಲ್ಲದೆ ಬೇರೆ ದೇಶಗಳಲ್ಲೂ ನಗದು ರಹಿತ ವ್ಯವಹಾರಗಳಲ್ಲಿ ಕಾರ್ಯನಿರ್ವಹಿಸಿದೆ. UPI ರೀತಿಯಲ್ಲಿ ವ್ಯವಹಾರ್ಕಾಗಿ ಂದು ವೇದಿಕೆಯನ್ನು ನಿರ್ಮಿಸುವುದಾಗಿ RBI ನಿರ್ಧರಿಸಿತ್ತು. ಇದೀಗ ಈ ಪ್ಲಾಟ್ಫಾರ್ಮ್…

Read More

ಅತ್ಯಾಚಾರ ಆರೋಪಿ ಎಂದು ಸುಳ್ಳು ಸಂದೇಶದ ಬಗ್ಗೆ ದೂರು – ಕಾರ್ಕಳ ಹಿಂ.ಜಾ.ವೇ. ಕಾರ್ಯಕರ್ತನಿಂದ ಪೊಲೀಸ್‌ ಠಾಣೆಗೆ ದೂರು – ಫೋಟೋ ಬಿಡುಗಡೆ ಮಾಡಿದ್ದ ಕಾಂಗ್ರೆಸ್ ಮುಖಂಡರು NAMMUR EXPRESS NEWS ಕಾರ್ಕಳ : ಕಾರ್ಕಳ ಅತ್ಯಾಚಾರ ಪ್ರಕರಣದ ಆರೊಪಿಗೆ ಡ್ರಗ್ ನೀಡಿದ ಮೂರನೆಯ ಆರೋಪಿ ಅಭಯ್ ಎಂದು ಹಿಂದು ಜಾಗರಣಾ ವೇದಿಕೆಯ ಕಾರ್ಯಕರ್ತ ಅರವಿಂದ್ ಅವರ ಪೋಟೊ ಬಳಸಿ ವಾಟ್ಸಪ್‌ನಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದು ಆರೋಪಿಸಿ ಕಾರ್ಕಳ ಹಿಂ.ಜಾ.ವೇ. ಕಾರ್ಯಕರ್ತರು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ. ಆರೋಪಿ ಅಭಯ್‌ನ ಬಂಧನವಾದ ಬಳಿಕ 95913846665 ಸಂಖ್ಯೆಯಿಂದ ಹಾಗೂ ಕಣ್ಣೀರಿನ ನ್ಯಾಯಕ್ಕಾಗಿ ಎಂಬ ವಾಟ್ಸಾಪ್ ಗ್ರೂಪ್‌ನಲ್ಲಿ 9900442728 ವಾಟ್ಸಾಪ್‌ ಸಂಖ್ಯೆಯವರು ಹಿಂದೂ ಸಂಘಟಣೆಯವರು ಮಾಡಿದ ಪ್ರತಿಭಟನೆಯಲ್ಲಿ ಭಾಗವಹಿಸಿದ ಅರವಿಂದ ಎಂಬವರನ್ನು ಅತ್ಯಾಚಾರ ಆರೋಪಿ ಅಭಯ್ ಎಂದು ವಾಟ್ಸಪ್ ಮೂಲಕ ಸಂದೇಶ ಹರಡಿಸಿದ್ದಾರೆ. ಅಲ್ಲದೆ ಕಾರ್ತಿಕ್ ಎಂಬವರು ಈ ಫೋಟೋವನ್ನು ಸ್ಟೇಟಸ್‌ನಲ್ಲಿ ಹಾಕಿದ್ದಾರೆ ಎಂದು ಅರವಿಂದ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ.…

Read More

ಅಡಿಕೆ ಬೆಳೆಗಾರರ ಬದುಕಿಗೆ ಸಹ್ಯಾದ್ರಿ ಸಂಸ್ಥೆ ಸಂಜೀವಿನಿ! – ರೈತ ಸೇವೆ ಮೂಲಕ ದಾಖಲೆ ಬರೆದ ಸಹ್ಯಾದ್ರಿ ಸಂಸ್ಥೆ – ಸೆ. 17ರಂದು ತೀರ್ಥಹಳ್ಳಿಯಲ್ಲಿ ಸರ್ವ ಸದಸ್ಯರ ಸಭೆ – ಈ ವರ್ಷ 28 ಸಾವಿರ ಚೀಲ ಅಡಿಕೆ ದಾಖಲೆಯ ವ್ಯವಹಾರ NAMMUR EXPRESS NEWS ತೀರ್ಥಹಳ್ಳಿ: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವ್ಯವಹಾರ ನಡೆಸುವ ಮೂಲಕ ಸಹಕಾರಿ ಕ್ಷೇತ್ರದ ಜೀವನಾಡಿಯಾಗಿ ಹೊರಹೊಮ್ಮಿರುವ ತೀರ್ಥಹಳ್ಳಿ ಮೂಲದ ಸಹ್ಯಾದ್ರಿ ವಿವಿದೋದ್ದೇಶ ಅಡಿಕೆ ಬೆಳೆಗಾರರ ಮಾರಾಟ ಸಹಕಾರ ಸಂಘ ಈ ವರ್ಷ 10 ಕೋಟಿಗೂ ಮಿಕ್ಕಿ ಲಾಭ ಗಳಿಸಿದ್ದು, ತನ್ನ ಸಹಸ್ರಾರು ಷೇರುದಾರರಿಗೆ ಶೇ. 10 ರ ಲಾಭಾಂಶ ಹಂಚಿಕೆ ಮಾಡಿ ದಾಖಲೆ ಬರೆದಿದೆ. ತೀರ್ಥಹಳ್ಳಿ ಸಹ್ಯಾದ್ರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಬಸವಾನಿ ವಿಜಯದೇವ್ ಅವರು ವಿವಿಧ ಬಾಬತ್ತುಗಳಿಗೆ ಲಾಭಾಂಶ ತೆಗೆದಿರಿಸಿ ನಿವ್ವಳ 2 ಕೋಟಿ 75 ಲಕ್ಷ ರೂ. ಲಾಭವನ್ನು ತನ್ನ ಷೇರುದಾರರಿಗೆ ವರ್ಗಾಯಿಸುವ ದಿಟ್ಟ ನಿರ್ಧಾರ ಕೈಗೊಂ ಸಹ್ಯಾದ್ರಿ ಸಂಸ್ಥೆ…

Read More

ನಮ್ಮೂರ್ ಸಾಧಕರು – ಕುವೆಂಪು ವಿವಿ ಸಿಂಡಿಕೇಟ್ ಸದಸ್ಯರಾಗಿ ಕೆ.ಪಿ.ಶ್ರೀಪಾಲ್ – ಮುದ್ದು ತೀರ್ಥಹಳ್ಳಿ ಕಾದಂಬರಿ ಬಿಡುಗಡೆ ಮಾಡಿದ ಸಿಎಂ! NAMMUR EXPRESS NEWS ತೀರ್ಥಹಳ್ಳಿ: ಖ್ಯಾತ ವಕೀಲರೂ,ಹೋರಾಟಗಾರರೂ,ಅನೇಕ ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಸಮಾಜಮುಖಿ ವ್ಯಕ್ತಿತ್ವದ ಕೆ.ಪಿ.ಶ್ರೀಪಾಲ್ ಕುವೆಂಪು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ನೇಮಕವಾಗಿದ್ದಾರೆ. ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಕುವೆಂಪು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರನ್ನಾಗಿ ಕೆ.ಪಿ.ಶ್ರೀಪಾಲ್ ರನ್ನು ರಾಜ್ಯ ಸರ್ಕಾರ ನಾಮನಿರ್ದೇಶನಗೊಳಿಸಿದೆ. ಶಿವಮೊಗ್ಗದಲ್ಲಿ ವಕೀಲರಾಗಿರುವ ಶ್ರೀಪಾಲ್ ಅವರು ಮಲೆನಾಡು ಕಂಡ ಅತ್ಯುತ್ತಮ ವಕೀಲರಲ್ಲಿ ಒಬ್ಬರು. ಜತೆಗೆ ಜನಪರ ಹೋರಾಟಗಾರರಾಗಿ ಗುರುತಿಸಿಕೊಂಡವರು. ಇದೀಗ ಅವರಿಗೆ ಮಹತ್ವದ ಹುದ್ದೆ ಸಿಕ್ಕಿದೆ. ಮುದ್ದು ತೀರ್ಥಹಳ್ಳಿ ಕಾದಂಬರಿ ಬಿಡುಗಡೆ ಮಾಡಿದ ಸಿಎಂ! ಖ್ಯಾತ ಬರಹಗಾರ್ತಿ, ತೀರ್ಥಹಳ್ಳಿ ಮೂಲದ ಮುದ್ದು ತೀರ್ಥಹಳ್ಳಿ ( ವಿತಾಷಾ ರಿಯಾ) ಅವರ ಇಂಗ್ಲೀಷ್ ಕಾದಂಬರಿ ‘An Introvert Who Becomes a Lawyer!’ ಅನ್ನು ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರು ಬಿಡುಗಡೆ ಮಾಡಿದರು. ಈಗಾಗಲೇ ಅನೇಕ ಪುಸ್ತಕ ಬರೆದಿರುವ ಮುದ್ದು ತೀರ್ಥಹಳ್ಳಿ ಅವರ…

Read More

ಟಾಪ್ 5 ನ್ಯೂಸ್ ಕರಾವಳಿ ಕಾರ್ಕಳ ರೇಪ್ ಕೇಸ್: 3ನೇ ಆರೋಪಿ ಬಿಜೆಪಿ ಕಾರ್ಯಕರ್ತ! – ಕಡಬ: ಶಾಲಾ ಕಟ್ಟಡ ಕುಸಿದು ವಿದ್ಯಾರ್ಥಿಗಳಿಗೆ ಗಾಯ! – ಮಣಿಪಾಲ: ಈಜಲು ಹೋಗಿ ವಿದ್ಯಾರ್ಥಿ ನೀರು ಪಾಲು! – ಉಡುಪಿ: ಕೆರೆಗೆ ಬಿದ್ದು ವಿದ್ಯಾರ್ಥಿ ಸಾವು – ಉಡುಪಿ : ಮನೆಗೆ ನುಗ್ಗಿ ಚಿನ್ನಾಭರಣ ಕಳ್ಳತನ NAMMUR EXPRESS NEWS ಉಡುಪಿ: ಕಾರ್ಕಳದಲ್ಲಿ ಇತ್ತೀಚೆಗೆ ನಡೆದಿದ್ದ ಅತ್ಯಾಚಾರ ಪ್ರಕರಣದ ಮೂರನೇ ಆರೋಪಿ ಬಿಜೆಪಿ ಕಾರ್ಯಕರ್ತ ಎಂದು ಹೇಳಿರುವ ಕಾಂಗ್ರೆಸ್ ಈ ಸಂಬಂಧ ಆತನ ಫೋಟೋಗಳನ್ನು ಬಿಡುಗಡೆ ಮಾಡಿದೆ. ಕಾರ್ಕಳ ಮತ್ತು ಉಡುಪಿ ಯುವ ಕಾಂಗ್ರೆಸ್ ನಾಯಕರು ಫೋಟೋ ಬಿಡುಗಡೆಗೊಳಿಸಿದ್ದು, ಬಿಜೆಪಿಯ ದ್ವಂದ್ವ ನಿಲುವಿನ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಮೊದಲ ಆರೋಪಿ ಅಲ್ತಾಫ್ ಬಂಧನ ನಡೆದಾಗ ಬಿಜೆಪಿ ಪಟಾಲಂ ಅಬ್ಬರಿಸಿ ಬೊಬ್ಬಿರಿಯಿತು. ಸಂತ್ರಸ್ತ ಹುಡುಗಿ ಹಿಂದುವಾಗಿ ಕಂಡಳು. ಅತ್ಯಾಚಾರ ಪ್ರಕರಣವನ್ನು “ಜಿಹಾದಿ” ಕೃತ್ಯವಾಗಿ ಚಿತ್ರಿಸಾಯಿತು. ಸರಣಿ ಪ್ರತಭಟನೆ, ಪತ್ರಿಕಾ ಹೇಳಿಕೆಗಳು ಹೊರಟವು. ಎನ್ ಐಎ ತನಿಖೆ…

Read More

ಬಳ್ಳಾರಿ ಜೈಲಿಗೆ ದರ್ಶನ್: ಎಲ್ಲಾ ಜೈಲುಗಳು ಅಲರ್ಟ್! – ಜೈಲು ಅವ್ಯವಹಾರ ಪ್ರಕರಣ ತನಿಖೆ ಜೋರು – ದರ್ಶನ್ ಹೇಳಿದ್ದೇನು…? ಏನಿದು ಜೈಲು ಕಥೆ? NAMMUR EXPRESS NEWS ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪ್ರಸ್ತುತ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಕನ್ನಡ ನಟ ದರ್ಶನ್ ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ಹಾಗೂ ಕೊಲೆ ಪ್ರಕರಣದ ಇತರ ಸಹ ಆರೋಪಿಗಳನ್ನು ರಾಜ್ಯದ ವಿವಿಧ ಜೈಲುಗಳಿಗೆ ಸ್ಥಳಾಂತರಿಸಲು ನ್ಯಾಯಾಲಯ ಅನುಮತಿ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ ಪರಮೇಶ್ವರ ಇಬ್ಬರೂ, ದರ್ಶನ್ ಅವರನ್ನು ವರ್ಗಾವಣೆ ಮಾಡುವ ಆಯ್ಕೆಯನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ಸೂಚಿಸಿದರು, ಅವರು ಜೈಲಿನ ಹುಲ್ಲುಹಾಸಿನ ಮೇಲೆ ರೌಡಿಶೀಟರ್ ಸೇರಿದಂತೆ ಇತರ ಮೂವರ ಜೊತೆ ಸುತ್ತಾಡುತ್ತಿರುವ ಫೋಟೋ ವೈರಲ್ ಆಗಿದ್ದು, ಗದ್ದಲ ಎಬ್ಬಿಸಿದೆ. ಅಲ್ಲದೆ, ದರ್ಶನ್ ಜೈಲಿನಿಂದ ವೀಡಿಯೋ ಕಾ ಮೂಲಕ ವ್ಯಕ್ತಿಯೊಬ್ಬನೊಂದಿಗೆ ಮಾತನಾಡಿರುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿತ್ತು. ದರ್ಶನ್ ನ್ಯಾಯಾಂಗ ಬಂಧನ ಆ.28ರಂದು…

Read More

ಚಿಕ್ಕಮಗಳೂರು ಜಿಲ್ಲೆಯಲ್ಲೂ ಭಾರೀ ಮಳೆ – ಮತ್ತೆ ಹೆಚ್ಚಿದ ತುಂಗಾ ನದಿ ನೀರು: ಜನರಲ್ಲಿ ಹೆಚ್ಚಿದ ಅನಾರೋಗ್ಯ – ಅಪಘಾತ: ಕೂದಲೆಳೆ ಅಂತರದಲ್ಲಿ ಇಬ್ಬರು ಮಕ್ಕಳು ಸೇರಿ 7 ಮಂದಿ NAMMUR EXPRESS NEWS ಮೂಡಿಗೆರೆ/ಚಿಕ್ಕಮಗಳೂರು: ಕಳೆದೊಂದು ವಾರದಲ್ಲಿ ಮತ್ತೆ ಕಾಫಿ ನಾಡಲ್ಲಿ ಮಳೆ ಜೋರಾಗಿದೆ. ಮಳೆ ಕಾರಣ ನದಿ, ಹಳ್ಳಗಳಲ್ಲಿ ನೀರು ಹೆಚ್ಚಾಗಿದೆ. ಚಿಕ್ಕಮಗಳೂರಿನಲ್ಲಿ ಗಾಳಿ ಮಳೆಯ ಅಬ್ಬರ ಮುಂದುವರೆದಿದ್ದು, ಭಾರೀ ಮಳೆಗೆ ದಾರಿ ಕಾಣದೆ ಚಾಲಕರ ನಿಯಂತ್ರಣ ತಪ್ಪಿ 2 ಪ್ರತ್ಯೇಕ ಅಪಘಾತ ಸಂಭವಿಸಿದೆ. ಕೂದಲೆಳೆ ಅಂತರದಲ್ಲಿ ಇಬ್ಬರು ಮಕ್ಕಳು ಸೇರಿ 7 ಮಂದಿ ಪಾರಾಗಿದ್ದಾರೆ. ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಹೆಬ್ಬರಿಗೆ, ನಜರತ್ ಸ್ಕೂಲ್ ಬಳಿ ಈ ಘಟನೆ ನಡೆದಿದೆ. ಪೌಲ್ಸ್ ಎಂಬುವರ ಮನೆಗೆ ಕಾರೊಂದು ಗುದ್ದಿದೆ. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ಮೇಲಿಂದ ಮೇಲೆ ಅಪಘಾತ ಸಂಭವಿಸಿದೆ ಎಂದು ಕಿಡಿಕಾರಿದ್ದಾರೆ. ಒಂದೇ ಜಗದಲ್ಲಿ ವರ್ದಲ್ಲಿ 60ಕ್ಕೂ…

Read More