ಟಾಪ್ 5 ನ್ಯೂಸ್ ಮಲ್ನಾಡ್ ದರ್ಶನ್ ಗ್ಯಾಂಗ್ ಶಿವಮೊಗ್ಗ ಜೈಲಿಗೆ ಶಿಫ್ಟ್! – ಶಿವಮೊಗ್ಗ: ಚಾಲಕನ ನಿರ್ಲಕ್ಷ್ಯದಿಂದ ಸೇತುವೆ ಕೆಳಗೆ ಬಿದ್ದ ಕಾರು! – ರಿಪ್ಪನಪೇಟೆ : ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಅಪಘಾತ – ಆಗುಂಬೆ : ಮದ್ಯಪಾನ ನಿಷೇಧ: ವಾಹನ ಸವಾರರೇ ಎಚ್ಚರ – ಶಿವಮೊಗ್ಗ: ಬಸ್ಸಲ್ಲಿ ಪ್ರಯಾಣಿಸುವಾಗ ಚಿನ್ನಾಭರಣ ಕಳವು NAMMUR EXPRESS NEWS ಶಿವಮೊಗ್ಗ: ಕೇಂದ್ರ ಕಾರಾಗೃಹಕ್ಕೆ ದರ್ಶನ್ ಗ್ಯಾಂಗಿನ ಇಬ್ಬರು ಸದಸ್ಯರನ್ನು ಶಿಫ್ಟ್ ಮಾಡಲಾಗುತ್ತಿದೆ. ಶಿವಮೊಗ್ಗ ಪೊಲೀಸ್ ಈ ಕಾರಣಕ್ಕಾಗಿ ಸೋಗಾನೆಯಲ್ಲಿರುವ ಸೆಂಟ್ರಲ್ ಜೈಲ್ ಮೇಲೆ ದಾಳಿಯನ್ನು ಮಾಡಿದ್ದಾರೆ. ಶಿವಮೊಗ್ಗದ ಸೊಗಾನೆಯಲ್ಲಿರುವ ಕೇಂದ್ರ ಕಾರಾಗೃಹದ ಮೇಲೆ ಶಿವಮೊಗ್ಗ ಎಸ್.ಪಿ ಮಿಥುನ್ ಕುಮಾರ್ ನೇತೃತ್ವದ ಟೀಮ್ ದಾಳಿ ನಡೆಸಿದೆ. ಎಸ್.ಪಿ ಮಿಥುನ್ ಕುಮಾರ್ ಮತ್ತು ಟೀಮ್ ನಲ್ಲಿ ಹಲವು ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಇರುವುದನ್ನು ಖಚಿತಪಡಿಸಲಾಗಿದೆ. ಪೊಲೀಸರು ಜೈಲಿನ ಪ್ರತಿ ಬ್ಯಾರಕ್ ಗಳನ್ನು ತಪಾಸನೆ ನಡೆಸಿದದಾರ. ಅಲ್ಲದೆ ನಿಷೇಧಿಸಿದ ವಸ್ತುಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಈ…
Author: Nammur Express Admin
ಶೃಂಗೇರಿಯಲ್ಲಿ ಜಾರುಗಂಬ ಸ್ಪರ್ಧೆ ರಂಗು! – ಶೃಂಗೇರಿಯ ರಥ ಬೀದಿಯಲ್ಲಿ ಶ್ರೀಕೃಷ್ಣನ ಉತ್ಸವ – ಮಡಿಕೆ ಒಡೆಯುವುದು ಹಾಗೂ ಜಾರುಗಂಬ ಹತ್ತುವ ಸ್ಪರ್ಧೆ NAMMUR EXPRESS NEWS ಶೃಂಗೇರಿ: ಶೃಂಗೇರಿ ಶ್ರೀಶಾರದಾ ಪೀಠದಲ್ಲಿ ಕೃಷ್ಣಜನ್ಮಾಷ್ಟಮಿ ಪ್ರಯುಕ್ತ ಪ್ರತಿವರ್ಷದ ಆಚರಣೆಯಂತೆ ಈ ವರ್ಷವೂ ಕೂಡ ಜಾರುಗಂಬ ಸ್ಪರ್ಧೆ ಏರ್ಪಡಿಸಲಾಗಿದ್ದು, ಸಂಭ್ರಮ ಕಂಡು ಬಂತು. ಮೊದಲು ಶೃಂಗೇರಿಯ ರಥ ಬೀದಿಯಲ್ಲಿ ಶ್ರೀಕೃಷ್ಣನ ಉತ್ಸವ ನಡೆಯಿತು.ಉತ್ಸವದಲ್ಲಿ ಶ್ರೀಮಠದ ಶ್ರೀಲಕ್ಷ್ಮೀ ಗಜಲಕ್ಷ್ಮೀ ಆನೆಗಳು,ಪುರೋಹಿತ ವರ್ಗ ಪಾಲ್ಗೊಂಡು ಮಂತ್ರಘೋಷದೊಡನೆ ಉತ್ಸವ ನೆರವೇರಿತು. ನಂತರ ಶ್ರೀಮಠದ ಆವರಣದಲ್ಲಿ ಮಡಿಕೆ ಒಡೆಯುವುದು ಹಾಗೂ ಜಾರುಗಂಬ ಹತ್ತುವ ಸ್ಪರ್ಧೆ ನೆರವೇರಿತು. ಈ ಸ್ಪರ್ಧೆಯಲ್ಲಿ ತಾಲೂಕಿನ ತೆಕ್ಕೂರು ಗ್ರಾಮದ ಶ್ರೀಕಾಂತ್‌ರವರು ಜಯಗಳಿಸದರು. ಇರನ್ನು ಶ್ರೀಮಠದ ವತಿಯಿಂದ ಸನ್ಮಾನಿಸಿ ಬಹುಮಾನ ನೀಡಲಾಯಿತು. ಈ ಸಾಂಪ್ರದಾಯಿಕ ಸ್ಪರ್ಧೆಯನ್ನು ನೋಡಲು ಸಾರ್ವಜನಿಕರು ನೆರೆದಿದ್ದರು ಹಾಗೂ ಸ್ಪರ್ಧಿಗಳನ್ನು ಪ್ರೋತ್ಸಾಹಿಸಿದರು.
ಉಡುಪಿಯಲ್ಲಿ ಹೊಂಡದ ರಸ್ತೆಯಲ್ಲಿ ಪ್ರೇತಾತ್ಮ! – ಸಂಪೂರ್ಣ ಹೊಂಡಮಯ ಹೈವೇ: ದೆವ್ವ ಕುಣಿತದ ಮೂಲಕ ಜಾಗೃತಿ – ಯಮನೂ ಬಂದು ರಸ್ತೆ ನೋಡುವಂತೆ ಅಣಕು ಪ್ರದರ್ಶನ NAMMUR EXPRESS NEWS ಉಡುಪಿ: ಉಡುಪಿಯಲ್ಲಿ ಹೊಂಡದ ರಸ್ತೆಯಲ್ಲಿ ಪ್ರೇತಾತ್ಮ!.ಸಂಪೂರ್ಣ ಹೊಂಡಮಯವಾದ ಹೈವೇ. ದೆವ್ವ ಕುಣಿತದ ಮೂಲಕ ಜಾಗೃತಿ. ಯಮನೂ ಬಂದು ರಸ್ತೆ ನೋಡುವಂತೆ ಅಣಕು ಪ್ರದರ್ಶನ. ಹೌದು.ಸಂಪೂರ್ಣ ಹೊಂಡಮಯವಾದ ಆದಿ ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಯಮಧರ್ಮ, ಚಿತ್ರಗುಪ್ತ ಹಾಗೂ ಪ್ರೇತಾತ್ಮದ ವೇಷ ತೊಟ್ಟ ವೇಷಧಾರಿಗಳು ಹೆದ್ದಾರಿ ಸಮಸ್ಯೆಯನ್ನು ಪ್ರದರ್ಶಿಸುವ ಮೂಲಕ ಗಮನ ಸೆಳೆದರು. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆದಿಉಡುಪಿಯ ರಸ್ತೆ ಸಂಪೂರ್ಣ ಹೊಂಡ ಗುಂಡಿಗಳಿಂದ ತುಂಬಿದೆ. ಈ ರಸ್ತೆಯಲ್ಲಿ ಸಾರ್ವಜನಿಕರು ವಾಹನ ಸಂಚಾರ ಮಾಡುವಾಗ ಭಾರೀ ತೊಂದರೆ ಅುಭವಿಸು್ತಿದ್ದಾರೆ. ಅಪಾಯಕಾರಿ ಎನಿಸಿರುವ ಈ ರಸ್ತೆಯನ್ನು ಕೂಡಲೇ ದುರಸ್ತಿಗೊಳಿಸುವಂತೆ ಆಗ್ರಹಿಸಿ ವೇಷಧಾರಿಗಳು ವಿಶಿಷ್ಟ ರೀತಿಯ ಪ್ರದರ್ಶನ ನೀಡಿ ಆಡಳಿತ ಹಾಗೂ ಸಾರ್ವಜನಿಕರ ಗಮನ ಸೆಳೆದು ಮೆಚ್ಚುಗೆಗೆ…
ಜೋಕೆ!..ಬಲಿಗಾಗಿ ಕಾದಿದೆ ಗುಂಡಿ ರಸ್ತೆಗಳು..! – ಗುಂಡಿ ತಪ್ಪಿಸುವ ಹರಸಾಹಸದಲ್ಲಿ ಜನರು – ತೀರ್ಥಹಳ್ಳಿ ಪಟ್ಟಣದಲ್ಲಿ ಹೊಂಡ ಗುಂಡಿ ಮುಚ್ಚೋರು ಯಾರು? NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದ ಪ್ರಮುಖ ರಸ್ತೆಗಳ ಹೊಂಡ ಗುಂಡಿ ಇದೀಗ ಪ್ರಯಾಣಿಕರ ಜೀವ ತೆಗೆಯುವ ಭೀತಿ ಎದುರಾಗಿದೆ. ಯಡೇಹಳ್ಳಿ ಕೆರೆ ಬಳಿ, ಸಹ್ಯಾದ್ರಿ ಪಾಲಿಟೆಕ್ನಿಕ್ , ಸಾಗರ ಹೊಸನಗರ ಮುಖ್ಯ ರಸ್ತೆ, ಸೊಪ್ಪುಗುಡ್ಡೆ ರಸ್ತೆ, ಮುಖ್ಯ ರಸ್ತೆ ಸೇರಿ ಹಲವೆಡೆ ರಸ್ತೆಗಳಲ್ಲಿ ಹೊಂಡ ಗುಂಡಿಗಳ ರಸ್ತೆಯೇ ತುಂಬಿಹೋಗಿದ್ದು ವಾಹನ ಸವಾರರು ಓಡಾಡಲು ಪರದಾಟ ನಡೆಸುತ್ತಿದ್ದಾರೆ. ದಿನ ಕಳೆದಂತೆ ರಸ್ತೆ ಗುಂಡಿಗಳು ಮೃತ್ಯುಸ್ವರೂಪಿಯಾಗಿ ಪರಿಣಮಿಸಿವೆ. ಗುಂಡಿಗೆ ಬಿದ್ದು, ಗುಂಡಿ ತಪ್ಪಿಸಲು ಹೋಗಿ ಪ್ರಾಣ ಕಳೆದುಕೊಳ್ಳುವುದು, ಗಾಯಗಳಾಗುವ ಆತಂಕಕ್ಕೆ ಒಳಗಾಗಿರುವ ಜನರು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಳೆ ಸುರಿದು ರಸ್ತೆ ಗುಂಡಿ ಸಮಸ್ಯೆ ವರ್ಷವಿಡೀ ಜನರನ್ನು ಬಿಡದೆ ಕಾಡುತ್ತಿದೆ. ಇತ್ತೀಚೆಂತೂ ರಸ್ತೆ ಗುಂಡಿಯಿಂದಾಗಿ ಸಾವುನೋವು ಭಯ ಕಾಡತೊಡಗಿದೆ. ಇಷ್ಟಾದರೂ ಅಧಿಕಾರಿಗಳು ರಸ್ತೆ ದುರಸ್ತಿಗೆ ಆದ್ಯತೆ ನೀಡದಿರುವುದು…
ಕೊಪ್ಪ ಬಿಜೆಪಿ ಕಚೇರಿಯಲ್ಲಿ ವರಮಹಾಲಕ್ಷ್ಮೀ ಪೂಜೆ – ಸಂಭ್ರಮದಿಂದ ಭಾಗವಹಿಸಿದ ಮಹಿಳಾ ಪ್ರಮುಖರು ಹಾಗೂ ಕಾರ್ಯಕರ್ತರು NAMMUR EXPRESS NEWS ಕೊಪ್ಪ: ಕೊಪ್ಪ ತಾಲೂಕಿನ ಬಿಜೆಪಿ ಕಛೇರಿಯಲ್ಲಿ ಮಹಿಳಾ ಮೋರ್ಚಾ ವತಿಯಿಂದ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮ ಸಂಭ್ರಮ ಸಡಗರದಿಂದ ನಡೆಯಿತು. ಕೊಪ್ಪ ತಾಲೂಕಿನ ಮಹಿಳಾ ಮೋರ್ಚಾ ಅಧ್ಯಕ್ಷರಾದ ಅನುಸೂಯ ಕೃಷ್ಣಮೂರ್ತಿ ಹಾಗೂ ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೃತಿ ರೋಹಿತ್ ಸೇರಿದಂತೆ ಹಲವು ಮಹಿಳಾ ಕಾರ್ಯಕರ್ತರು ಪೂಜೆಯಲ್ಲಿ ಭಾಗವಹಿಸಿದ್ದರು. ಚಿಕ್ಕಮಗಳೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಣ್ಯಪಾಲ್, ಜಗದೀಶ್ ನುಗ್ಗಿ,ಜಯಂತ್ ನಿಲುವಾಗಿಲು ಸೇರಿದಂತೆ ತಾಲೂಕಿನ ಪದಾಧಿಕಾರಿಗಳು,ಕಾರ್ಯಕರ್ತರು ಪೂಜಾ ಸಮಯದಲ್ಲಿ ಉಪಸ್ಥಿತರಿದ್ದರು.
ಟೆಲಿಗ್ರಾಮ್ ಶೀಘ್ರದಲ್ಲಿ ನಿಷೇಧ? – ಕಂಪನಿಯ ವಿರುದ್ಧ ಸುಲಿಗೆ ಮತ್ತು ಜೂಜಾಟದ ತನಿಖೆ – ಸಿನಿಮಾ ಫೈರಸಿಯಲ್ಲಿ ಈ ಆಪ್ ಸಹಕಾರ NAMMUR EXPRESS NEWS ನವ ದೆಹಲಿ: ಭಾರತದಲ್ಲಿ 5 ಮಿಲಿಯನ್‌ಗಿಂತಲೂ ಹೆಚ್ಚು ನೋಂದಾಯಿತ ಬಳಕೆದಾರರನ್ನು ಹೊಂದಿರುವ ಟೆಲಿಗ್ರಾಮ್ ಮೆಸೇಜಿಂಗ್ ಅಪ್ಲಿಕೇಶನ್ ನಿಷೇಧವನ್ನು ಎದುರಿಸುವ ಸಾಧ್ಯತೆ ಇದೆ. ಕಂಪನಿಯ ವಿರುದ್ಧ ಸುಲಿಗೆ ಮತ್ತು ಜೂಜಾಟದ ತನಿಖೆಯನ್ನು ಕೇಂದ್ರವು ಪ್ರಾರಂಭಿಸಿದೆ. ಭಾರತದಲ್ಲಿ ಮೆಸೇಜಿಂಗ್ ಅಪ್ಲಿಕೇಶನ್‌ನ ಭವಿಷ್ಯವು ತನಿಖೆಯ ಆವಿಷ್ಕಾರಗಳ ಮೇಲೆ ಅವಲಂಬಿತವಾಗಿರುತ್ತದೆ. ಗೃಹ ವ್ಯವಹಾರಗಳ ಸಚಿವಾಲಯ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಎರಡೂ ತನಿಖೆಯನ್ನು ಪ್ರಾರಂಭಿಸಿವೆ ಮತ್ತು ಕಂಪನಿಯ P2P ಸಂವಹನಗಳನ್ನು ಪರಿಶೀಲಿಸುತ್ತಿವೆ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ. ಭಾರತದಲ್ಲಿ ಟೆಲಿಗ್ರಾಮ್ ತನಿಖೆಯಲ್ಲಿದೆ. ಆದರೆ ನಿಷೇಧವು ಸನ್ನಿಹಿತವಾಗಿಲ್ಲ ಎಂದು ಭಾರತದಲ್ಲಿ ಅನೇಕ ವರದಿಗಳು ಹೇಳಿವೆ. ಸಿಇಒ ಪಾವೆಲ್ ಡುರೊವ್ ಅವರನ್ನು ಫ್ರಾನ್ಸ್‌ನಲ್ಲಿ ಬಂಧಿಸಿದ ನಂತರ ಭಾರತದ ಮಾಹಿತಿ ತಂತ್ರಜ್ಞಾನ ಸಚಿವಾಲಯವು ೆಲಿಗ್ರಾಮ್ ತನಿಖೆಯ ನವೀಕರಣಕ್ಕಾಗಿ ರಾಷ್ಟ್ರದ ಗೃಹ…
ರಾಜಕೀಯ ಷಡ್ಯಂತ್ರ ಎಂದ ಪುತ್ತಿಲ! – ಪುತ್ತಿಲ ಪರಿವಾರದ ಲೆಟರ್ ಹೆಡ್ಡಿನಲ್ಲೇ ಮಹಿಳೆಯೊಂದಿಗಿನ ವೈರಲ್ ಆಡಿಯೋ ಕುರಿತು ಸ್ಪಷ್ಟನೆ NAMMUR EXPRESS NEWS ಪುತ್ತೂರು : ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಆಡಿಯೋ ಹಾಗೂ ಈ ಕುರಿತು ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ವರದಿಗಳ ಕುರಿತಾಗಿ ಅರುಣ್ ಕುಮಾರ್ ಪುತ್ತಿಲ ಸ್ಪಷ್ಟನೆ ನೀಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ಮತ್ತು ನಂತರ ನಡೆದಿರುವ ಆರೋಪ ಪ್ರತ್ಯಾರೋಪಗಳು ಎಲ್ಲವೂ ಜನತೆಯ ಮುಂದಿರುವುದು ನಮಗೆಲ್ಲ ತಿಳಿದ ವಿಚಾರ. ಚುನಾವಣಾ ಸಂದರ್ಭದಲ್ಲಿ 3.5 ಕೋಟಿ ರೂಪಾಯಿ ವ್ಯವಹಾರದ ಆಪಾದನೆ ಮತ್ತು ನಾನು ಅದರ ಬಗ್ಗೆ ಸಾರ್ವಜನಿಕ ಸಭೆಯಲ್ಲಿ ಹೇಳಿರುವ ವಿಚಾರಕ್ಕೆ ಇಂದು ಕೂಡ ಬದ್ಧನಾಗಿದ್ದೇನೆ ಎಂದು ಹೇಳಿದ್ದು, ಆದರೆ ಈ ರೀತಿಯಾಗಿ ಸುಳ್ಳು ಆರೋಪ ಮಾಡುವುದು ಸರಿಯಲ್ಲ ಎಂದು ನಾನು ಭಾವಿಸಿದ್ದೇನೆ. ಮುಂದಿನ ದಿನಗಳಲ್ಲೂ ಇದೇ ರೀತಿಯ ರಾಜಕೀಯ ಷಡ್ಯಂತರಗಳನ್ನು ನಡೆಯುವ ಬಗ್ಗೆ ನಾನು ಹಿರಿಯರ ಹಾಗೂ ಅಧಿಕಾರಿಗಳ ಸೂನೆಯಂತೆ ಕಾನೂನನ ಚೌಕಟ್ಟಿನಲ್ಲಿ ಮುಂದುವರಿಯುತ್ತೇನೆ. ಎಂದು ಹೇಳಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಧಕರಿಗೆ ರಾಜರತ್ನ ಪ್ರಶಸ್ತಿ! • ಚಿತ್ರೋತ್ಸವ, ಸಿನಿಮಾ, ಕಿರುಚಿತ್ರಗಳ ಕ್ಷೇತ್ರದಲ್ಲಿ ಮಲೆನಾಡೇ ಮೇಲು ಗೈ • ಜನತೆಗೆ ಹೆಮ್ಮೆ ಮೂಡಿಸಿದ ಶಿವಮೊಗ್ಗ ಸಾಧಕರು NAMMUR EXPRESS NEWS ಶಿವಮೊಗ್ಗ: ಶಿವಮೊಗ್ಗದ ಸಾಧಕರನ್ನು ರಾಜರತ್ನ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ಜನತೆಯಲ್ಲಿ ಹೆಮ್ಮೆ ಮೂಡಿಸಿದೆ. ಕಿಮ್ ಸ್ಟಾರ್ ಉಡುಪಿ ವತಿಯಿಂದ ಆ. 25ರಂದು ಬೆಂಗಳೂರಿನಲ್ಲಿ ಚಿತ್ರೋತ್ಸವ, ಸಿನಿಮಾ ಹಾಗೂ ಕಿರುಚಿತ್ರಗಳ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಿವಮೊಗ್ಗದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ನಡೆಯಿತು. ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ವೈದ್ಯೆ ಡಾ. ರಕ್ಷಾ ರಾವ್, ಉದ್ಯಮಿ ಎ.ಆರ್.ಅವಿನಾಶ್, ವಿದ್ಯಾ, ಉಮಾ ದಿಲೀಪ್, ಪುನೀತ್ ಬೆಳ್ಳೂರು, ಪೂರ್ಣಿಮಾ, ಅಮೃತಾ ಹಾಗೂ ವಿಷ್ಣುಪ್ರಸಾದ್ ಅವರಿಗೆ ರಾಜರತ್ನ ಪ್ರಶಸ್ತಿ ನೀಡಿ ಅಭಿನಂದನೆ ಸಲ್ಲಿಸಿದರು. ಬೆಂಗಳೂರಿನ ಮೂಡಲಪಾಳ್ಯ ಕಲ್ಯಾಣ ನಗರದಲ್ಲಿರುವ ಜ್ಞಾನ ಸೌಧದಲ್ಲಿ ಆ. 25ರಂದು ಶಿವಮೊಗ್ಗ ಜಿಲ್ಲೆಯ ಸಾಧಕರು ಸೇರಿದಂತೆ ವಿವಿಧ ಕ್ಷೇತ್ರದ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮವು ನಡೆಯಿತು. ಅತ್ಯುತ್ತಮ ಕಿರುಚಿತ್ರಗಳಿಗೆ ಪ್ರಶಸ್ತಿ ಪ್ರದಾನ,ಚಿತ್ರಗೀತೆಗಳ…
BREAKING NEWS ಬಂದೂಕು ಸಿಡಿದು ವ್ಯಕ್ತಿ ಸಾವು! – ಚಿಕ್ಕಮಗಳೂರಿನ ಕಳವಾಸೆ ಗ್ರಾಮದಲ್ಲಿ ನಡೆದ ಘಟನೆ – ಆತ್ಮಹತ್ಯೆಯೋ ಅಥವಾ ಮಿಸ್ ಫೈರ್ ಆಯ್ತೋ..? NAMMUR EXPRESS NEWS ಚಿಕ್ಕಮಗಳೂರು: ಚಿಕ್ಕಮಗಳೂರಿನ ಕಳವಾಸೆ ಗ್ರಾಮದಲ್ಲಿ ಗನ್ ತೆಗೆದಿಡುವಾಗ ಮಿಸ್ ಫೈರ್ ಆಗಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ. ಗ್ರಾಮದ ಅರುಣ್ (47) ಮೃತನಾದ ದುರ್ದೈವಿ. ಶೆಡ್‌ನಲ್ಲಿದ್ದ ಗನ್ ಅನ್ನು ಒಳಗಿಡಲೆಂದು ಒರೆಸುವಾಗ ಮೃತನ ಬಲಗಣ್ಣಿನ್ನು ಸೀಳಿ ಗುಂಡು ಹೊರಬಂದಿದೆ. ಆದರೆ ಇದು ಆತ್ಮಹತ್ಯೆಯೋ ಅಥವಾ ಮಿಸ್ ಫೈರ್ ಅನ್ನುವುದು ಸ್ಪಷ್ಟವಾಗಿಲ್ಲ. ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಶೆಡ್‌ನಲ್ಲಿ ಈ ದುರಂತ ಸಂಭವಿಸಿದೆ. ಮೃತ ದೇಹವನ್ನು ಹಾಸನದ ಆಸ್ಪತ್ರೆಗೆ ಪರೀಕ್ಷೆಗಾಗಿ ರವಾನಿಸಿದ್ದು,ಮಲ್ಲಂದೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ದಿನದ ರಾಶಿ ಭವಿಷ್ಯ ಹೇಗಿದೆ? – ಲಕ್ಷ್ಮೀನಾರಾಯಣನ ಅನುಗ್ರಹದಿಂದ ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ನಿಮ್ಮ ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಶೈಕ್ಷಣಿಕ ಕೆಲಸಗಳತ್ತ ಗಮನ ಹರಿಸಿ. ಅಡೆತಡೆಗಳು ಇರಬಹುದು. ಮಿತ್ರರ ನೆರವಿನಿಂದ ವ್ಯಾಪಾರ ವೃದ್ಧಿಯಾಗಬಹುದು. ಉದ್ಯೋಗ ಬದಲಾವಣೆ ಸಾಧ್ಯತೆ ಇದೆ. ಕೆಲಸದ ಸ್ಥಳದಲ್ಲೂ ಕೆಲವು ಬದಲಾವಣೆಗಳಾಗಬಹುದು. ಆದಾಯ ಹೆಚ್ಚಲಿದೆ. ಹೆಚ್ಚಿನ ಶ್ರಮ ಇರುತ್ತದೆ. ಮಾನಸಿಕ ನೆಮ್ಮದಿ ಇರುತ್ತದೆ. ದಾಂಪತ್ಯ ಸುಖ ಹೆಚ್ಚಲಿದೆ. ** ವೃಷಭ ರಾಶಿ : ಮನಸ್ಸು ಸಂತೋಷದಿಂದ ಕೂಡಿರುತ್ತದೆ. ಬರವಣಿಗೆ ಇತ್ಯಾದಿ ಕೆಲಸಗಳು ಆದಾಯದ ಮೂಲವಾಗಬಹುದು. ನೀವು ಸ್ನೇಹಿತರಿಂದ ಬೆಂಬಲವನ್ನು ಪಡೆಯುತ್ತೀರಿ. ನಿಮ್ಮ ಆರೋಗ್ಯವನ್ನು ನೋಡಿಕೊಳಳಿ. ಾತಿನಲ್ಲಿ ಮಾಧುರ್ಯ ಇರುತ್ತದೆ. ಕುಟುಂಬದೊಂದಿಗೆ ಪ್ರಯಾಣ…