Author: Nammur Express Admin

  ಶಿವಮೊಗ್ಗ ಜಿಲ್ಲೆಯ ಸಾಧಕರಿಗೆ ರಾಜರತ್ನ ಪ್ರಶಸ್ತಿ! • ಚಿತ್ರೋತ್ಸವ, ಸಿನಿಮಾ, ಕಿರುಚಿತ್ರಗಳ ಕ್ಷೇತ್ರದಲ್ಲಿ ಮಲೆನಾಡೇ ಮೇಲು ಗೈ • ಜನತೆಗೆ ಹೆಮ್ಮೆ ಮೂಡಿಸಿದ ಶಿವಮೊಗ್ಗ ಸಾಧಕರು NAMMUR EXPRESS NEWS ಶಿವಮೊಗ್ಗ: ಶಿವಮೊಗ್ಗದ ಸಾಧಕರನ್ನು ರಾಜರತ್ನ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ಜನತೆಯಲ್ಲಿ ಹೆಮ್ಮೆ ಮೂಡಿಸಿದೆ. ಕಿಮ್ ಸ್ಟಾರ್ ಉಡುಪಿ ವತಿಯಿಂದ ಆ. 25ರಂದು ಬೆಂಗಳೂರಿನಲ್ಲಿ ಚಿತ್ರೋತ್ಸವ, ಸಿನಿಮಾ ಹಾಗೂ ಕಿರುಚಿತ್ರಗಳ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಿವಮೊಗ್ಗದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ನಡೆಯಿತು. ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ವೈದ್ಯೆ ಡಾ. ರಕ್ಷಾ ರಾವ್, ಉದ್ಯಮಿ ಎ.ಆರ್.ಅವಿನಾಶ್, ವಿದ್ಯಾ, ಉಮಾ ದಿಲೀಪ್, ಪುನೀತ್ ಬೆಳ್ಳೂರು, ಪೂರ್ಣಿಮಾ, ಅಮೃತಾ ಹಾಗೂ ವಿಷ್ಣುಪ್ರಸಾದ್ ಅವರಿಗೆ ರಾಜರತ್ನ ಪ್ರಶಸ್ತಿ ನೀಡಿ ಅಭಿನಂದನೆ ಸಲ್ಲಿಸಿದರು. ಬೆಂಗಳೂರಿನ ಮೂಡಲಪಾಳ್ಯ ಕಲ್ಯಾಣ ನಗರದಲ್ಲಿರುವ ಜ್ಞಾನ ಸೌಧದಲ್ಲಿ ಆ. 25ರಂದು ಶಿವಮೊಗ್ಗ ಜಿಲ್ಲೆಯ ಸಾಧಕರು ಸೇರಿದಂತೆ ವಿವಿಧ ಕ್ಷೇತ್ರದ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮವು ನಡೆಯಿತು. ಅತ್ಯುತ್ತಮ ಕಿರುಚಿತ್ರಗಳಿಗೆ ಪ್ರಶಸ್ತಿ ಪ್ರದಾನ,ಚಿತ್ರಗೀತೆಗಳ…

Read More

BREAKING NEWS ಬಂದೂಕು ಸಿಡಿದು ವ್ಯಕ್ತಿ ಸಾವು! – ಚಿಕ್ಕಮಗಳೂರಿನ ಕಳವಾಸೆ ಗ್ರಾಮದಲ್ಲಿ ನಡೆದ ಘಟನೆ – ಆತ್ಮಹತ್ಯೆಯೋ ಅಥವಾ ಮಿಸ್ ಫೈರ್ ಆಯ್ತೋ..? NAMMUR EXPRESS NEWS ಚಿಕ್ಕಮಗಳೂರು: ಚಿಕ್ಕಮಗಳೂರಿನ ಕಳವಾಸೆ ಗ್ರಾಮದಲ್ಲಿ ಗನ್ ತೆಗೆದಿಡುವಾಗ ಮಿಸ್ ಫೈರ್ ಆಗಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ. ಗ್ರಾಮದ ಅರುಣ್ (47) ಮೃತನಾದ ದುರ್ದೈವಿ. ಶೆಡ್‌ನಲ್ಲಿದ್ದ ಗನ್‌ ಅನ್ನು ಒಳಗಿಡಲೆಂದು ಒರೆಸುವಾಗ ಮೃತನ ಬಲಗಣ್ಣಿನ್ನು ಸೀಳಿ ಗುಂಡು ಹೊರಬಂದಿದೆ. ಆದರೆ ಇದು ಆತ್ಮಹತ್ಯೆಯೋ ಅಥವಾ ಮಿಸ್ ಫೈರ್ ಅನ್ನುವುದು ಸ್ಪಷ್ಟವಾಗಿಲ್ಲ. ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಶೆಡ್‌ನಲ್ಲಿ ಈ ದುರಂತ ಸಂಭವಿಸಿದೆ. ಮೃತ ದೇಹವನ್ನು ಹಾಸನದ ಆಸ್ಪತ್ರೆಗೆ ಪರೀಕ್ಷೆಗಾಗಿ ರವಾನಿಸಿದ್ದು,ಮಲ್ಲಂದೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಈ ದಿನದ ರಾಶಿ ಭವಿಷ್ಯ ಹೇಗಿದೆ? – ಲಕ್ಷ್ಮೀನಾರಾಯಣನ ಅನುಗ್ರಹದಿಂದ ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ನಿಮ್ಮ ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಶೈಕ್ಷಣಿಕ ಕೆಲಸಗಳತ್ತ ಗಮನ ಹರಿಸಿ. ಅಡೆತಡೆಗಳು ಇರಬಹುದು. ಮಿತ್ರರ ನೆರವಿನಿಂದ ವ್ಯಾಪಾರ ವೃದ್ಧಿಯಾಗಬಹುದು. ಉದ್ಯೋಗ ಬದಲಾವಣೆ ಸಾಧ್ಯತೆ ಇದೆ. ಕೆಲಸದ ಸ್ಥಳದಲ್ಲೂ ಕೆಲವು ಬದಲಾವಣೆಗಳಾಗಬಹುದು. ಆದಾಯ ಹೆಚ್ಚಲಿದೆ. ಹೆಚ್ಚಿನ ಶ್ರಮ ಇರುತ್ತದೆ. ಮಾನಸಿಕ ನೆಮ್ಮದಿ ಇರುತ್ತದೆ. ದಾಂಪತ್ಯ ಸುಖ ಹೆಚ್ಚಲಿದೆ. ** ವೃಷಭ ರಾಶಿ : ಮನಸ್ಸು ಸಂತೋಷದಿಂದ ಕೂಡಿರುತ್ತದೆ. ಬರವಣಿಗೆ ಇತ್ಯಾದಿ ಕೆಲಸಗಳು ಆದಾಯದ ಮೂಲವಾಗಬಹುದು. ನೀವು ಸ್ನೇಹಿತರಿಂದ ಬೆಂಬಲವನ್ನು ಪಡೆಯುತ್ತೀರಿ. ನಿಮ್ಮ ಆರೋಗ್ಯವನ್ನು ನೋಡಿಕೊಳಳಿ. ಾತಿನಲ್ಲಿ ಮಾಧುರ್ಯ ಇರುತ್ತದೆ. ಕುಟುಂಬದೊಂದಿಗೆ ಪ್ರಯಾಣ…

Read More

ಮತ್ತೆ ಗೆದ್ದ ತೀರ್ಥಹಳ್ಳಿ ರಾಜಕೀಯ ಜೋಡೆತ್ತುಗಳು! – ಕಿಮ್ಮನೆ, ಮಂಜುನಾಥ ಗೌಡ ಸಾರಥ್ಯದಲ್ಲಿ ತೀರ್ಥಹಳ್ಳಿ ಪಟ್ಟಣ ಪಂಚಾಯತಿ ಮತ್ತೆ ಕಾಂಗ್ರೆಸ್ ಪಾಲು – 1 ಸ್ಥಾನ ಉಲ್ಟಾ ಪಲ್ಟಾ ಆಗಿದ್ದರೂ ಬಿಜೆಪಿಗೆ ಕುರ್ಚಿ – ಪಕ್ಷನಿಷ್ಠೆ ಮೆರೆದ ಕಾಂಗ್ರೆಸ್ ಬೆಂಬಲಿತ ಸದಸ್ಯರು NAMMUR EXPREES NEWS ತೀರ್ಥಹಳ್ಳಿ: ತೀರ್ಥಹಳ್ಳಿ ನೂತನ ಪಟ್ಟಣ ಪಂಚಾಯ್ತಿ ಅಧ್ಯಕ್ಷರಾಗಿ ರಹಮತುಲ್ಲಾ ಅಸಾದಿ, ಉಪಾಧ್ಯಕ್ಷರಾಗಿ ಮಾಜಿ ಅಧ್ಯಕ್ಷರಾದ ಗೀತಾ ರಮೇಶ್ ಆಯ್ಕೆಯಾಗಿದ್ದಾರೆ. ಇದರ ಹಿಂದೆ ತೀರ್ಥಹಳ್ಳಿ ಇಬ್ಬರು ನಾಯಕರಾದ ಕಿಮ್ಮನೆ ರತ್ನಾಕರ್, ಸಹಕಾರಿ ನಾಯಕರಾದ ಡಾ.ಆರ್. ಎಂ.ಮಂಜುನಾಥ ಗೌಡ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಳಿಗ್ಗೆಯಿಂದಲೇ ಚುನಾವಣೆ ಪ್ರಕ್ರಿಯೆ ಶುರುವಾಗಿತ್ತು. ಬಿಜೆಪಿ ಮತ್ತು ಕಾಂಗ್ರೆಸ್ ಎರಡು ಪಕ್ಷದಿಂದ ಅಧ್ಯಕ್ಷ ಮತ್ತು ಉಪಾಧ್ಯರ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್ ಸದಸ್ಯ ಮಾಜಿ ಅಧ್ಯಕ್ಷರಾದ ರಹಮತುಲ್ಲಾ ಅಸಾದಿ, ಬಿಜೆಪಿಯಿಂದ ಸೊಪ್ಪುಗುಡ್ಡೆ ರಾಘವೇಂದ್ರ, ಉಪಾಧ್ಯಕ್ಷರ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಗೀತಾ ರಮೇಶ್, ಿಜೆಪಿಯಿಂದ ಜ್ಯತಿ ಗಣೇಶ್ ನಾಮ ಪತ್ರ…

Read More

ಕೋಣಂದೂರು ವಾರದ ಸಂತೆಯಲ್ಲಿ ಮೀನು ಗೋಲ್ ಮಾಲ್?! – ತಿನ್ನಲು ಯೋಗ್ಯವಲ್ಲದ ಮೀನುಗಳ ಮಾರಾಟ – ಗೋಪಿ ನೇತೃತ್ವದಲ್ಲಿ ಗ್ರಾಮ ಪಂಚಾಯತ್ ಆಡಳಿತದಿಂದ ಎಚ್ಚರಿಕೆ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಕೋಣಂದೂರಲ್ಲಿ ಮಂಗಳವಾರ ವಾರದ ಸಂತೆ ನಡೆಯುತ್ತಿದ್ದು , ಈ ಸಂತೆಯಲ್ಲಿ ಕೆಲ ಮೀನು ವ್ಯಾಪಾರಿಗಳು ಈಗಾಗಲೇ ನಿಷೇಧ ಮಾಡಿರುವ ಮುರುಗೋಡು ಮೀನಿನಂತೆ ಕಾಣುವ ಆಫ್ರಿಕನ್ ಕ್ಯಾಟ್ ಫಿಷ್ ಮತ್ತು ಬಾಳೆಮೀನುಗಳನ್ನು ಕದ್ದು ಮುಚ್ಚಿ ವ್ಯಾಪಾರ ಮಾಡುತ್ತಿದ್ದಾರೆ. ಈ ಬಗ್ಗೆ ಕೋಣಂದೂರು ಗ್ರಾಮ ಪಂಚಾಯತ್ ಆಡಳಿತ ಖಡಕ್ ಕ್ರಮ ಕೈಗೊಂಡಿದೆ. ಇಲ್ಲಿ ಮಾರಾಟವಾಗುತ್ತಿದ್ದ ಕೆಲವು ಮೀನುಗಳು ಆರೋಗ್ಯಕ್ಕೆ ಹಾನಿಕಾರಕವಾಗಿದೆ ದೇಶ ವಿದೇಶಗಳಲ್ಲಿ ತಿನ್ನಲು ಯೋಗ್ಯವಲ್ಲ ಮನುಷ್ಯನ ದೇಹ ಮಲೆ ವ್ಯತಿರಿಕ್ತವಾಗಿ ಪರಿಣಾಮ ಉಂಟಾಗುತ್ತದೆ. ಆದ್ದರಿಂದ ಬ್ಯಾನ್ ಮಾಡಲಾಗಿದೆ ಎಂದು ತಿಳಿದುಬಂದಿದ್ದು, ಇದನ್ನು ಮನಗಂಡು ಕೋಣಂದೂರು ಗ್ರಾಮ ಪಂಚಾಯತಿ ಅಧ್ಯಕ್ಷ ಮಂಗಳ ಗೋಪಿ, ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮಂಜುನಾಥ್, ಪಂಚಾಯತ್ ಅಡಳಿತಾಧಿಕಾರಿ ನಾಗರಾಜ್ ಮತ್ತು ಸಂತೋಷ್‌ ಸಂತೆಯಲ್ಲಿ ಈ ಮೀನುಗಳನ್ನು…

Read More

ಟಾಪ್ 3 ನ್ಯೂಸ್ ಕರ್ನಾಟಕ ದೇವರ ಪ್ರಸಾದ ಸೇವಿಸಿದ ತಕ್ಷಣ ಮೂವರು ಸಾವು! – ಇನ್ನು ಮೂವರಿಗೆ ಪ್ರಾಣ ಭಯ: ತುಮಕೂರಲ್ಲಿ ಘಟನೆ – ಗದ್ದೆ ಉಳುಮೆ ವೇಳೆ ಟ್ರ್ಯಾಕ್ಟರ್ ಪಲ್ಟಿ: ರೈತನ ಸಾವು – ಪ್ರೇಯಸಿ ಹೆಸರಿಗೆ ಹಣ: ಅರಣ್ಯ ಅಧಿಕಾರಿ ಚಂದನ್ ಅಮಾನತು NAMMUR EXPRESS NEWS ತುಮಕೂರು:ತುಮಕೂರಿನ ಮಧುಗಿರಿಯಲ್ಲಿ ದೇವರ ಅನ್ನಪ್ರಸಾದ ಸೇವಿಸಿ ಮೂರು ಮಹಿಳೆಯರು ತೀವ್ರ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ. ಆರು ಮಂದಿ ತೀವ್ರತೆಯಿಂದ ಬಳಲುತ್ತಿದ್ದು,ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದೇವರ ಕಾರ್ಯಕ್ಕೆ ಮಾಡಿದ್ದ ಊಟ ಸೇವನೆ ಮಾಡಿದವರಿಗೆ ವಾಂತಿ ಬೇಧಿ ಕಾಣಿಸಿಕೊಂಡಿದೆ. ವಾಂತಿ ಬೇಧಿಯಿಂದ ಮೂರು ಮಹಿಳೆಯರು ಮೃತಪಟ್ಟರೆ, ಆರು ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಬುಳ್ಳಸಂದ್ರ ಗ್ರಾಮದಲ್ಲಿ ಘಟನೆ ನಡೆದಿದ್ದು ಕಾಟಮ್ಮ(45), ಬುಳ್ಳುಸಂದ್ರ ಗ್ರಾಮದಲ್ಲಿ ವೃದ್ದೆ ತಿಮ್ಮಕ್ಕ (85), ಬಳಿಕ ವೃದ್ದೆ ಗಿರಿಯಮ್ಮ(90) ಎಂಬವರು ಮೃತಪಟ್ಟ ಮಹಿಳೆಯರು. ್ರಾಮದಲ್ಲಿ ುತ್ತುರಾಯಸ್ವಾಮಿ, ಕರಿಯಮ್ಮ ದೇವರಿಗೆ ಹರಿಸೇವೆ ಮಾಡಲಾಗಿತ್ತು. ಗ್ರಾಮಸ್ಥರಿಗೆ ಊಟ ಸೇವೆ…

Read More

ತೀರ್ಥಹಳ್ಳಿ ಪಟ್ಟಣ ಪಂಚಾಯತಿಗೆ ಅಸಾದಿ ಸಾರಥಿ! – ಅಧ್ಯಕ್ಷರಾಗಿ ರಹಮತುಲ್ಲಾ ಅಸಾದಿ ಆಯ್ಕೆ, ಗೀತಾ ರಮೇಶ್ ಉಪಾಧ್ಯಕ್ಷೆ – ನೂತನ ಪದಾಧಿಕಾರಿಗಳಿಗೆ ಶುಭಾಶಯಗಳು NAMMUR EXPREES NEWS ತೀರ್ಥಹಳ್ಳಿ: ತೀರ್ಥಹಳ್ಳಿ ನೂತನ ಪಟ್ಟಣ ಪಂಚಾಯ್ತಿ ಅಧ್ಯಕ್ಷರಾಗಿ ರಹಮತುಲ್ಲಾ ಅಸಾದಿ, ಉಪಾಧ್ಯಕ್ಷರಾಗಿ ಮಾಜಿ ಅಧ್ಯಕ್ಷರಾದ ಗೀತಾ ರಮೇಶ್ ಆಯ್ಕೆಯಾಗಿದ್ದಾರೆ. ಮುಂದಿನ 26 ತಿಂಗಳಿಗೆ ಅಧ್ಯಕ್ಷಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗದ ಮಹಿಳೆಗೆ ಮೀಸಲಾಗಿದ್ದು, ಆಗಸ್ಟ್ 27ರ ಮಂಗಳವಾರ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಸದಸ್ಯ ಮಾಜಿ ಅಧ್ಯಕ್ಷರಾದ ರಹಮತುಲ್ಲಾ ಅಸಾದಿ, ಬಿಜೆಪಿಯಿಂದ ಸೊಪ್ಪುಗುಡ್ಡೆ ರಾಘವೇಂದ್ರ, ಉಪಾಧ್ಯಕ್ಷರ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಗೀತಾ ರಮೇಶ್, ಬಿಜೆಪಿಯಿಂದ ಜ್ಯೋತಿ ಗಣೇಶ್ ನಾಮ ಪತ್ರ ಸಲ್ಲಿಸಿದ್ದರು. ನೂತನ ಅಧ್ಯಕ್ಷರಾಗಿ ರಹಮತುಲ್ಲಾ ಅಸಾದಿ ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಗೀತಾ ರಮೇಶ್ ಆಯ್ಕೆಯಾಗಿದ್ದಾರೆ. ಅಸಾದಿ, ರತ್ನಾಕರ್ ಶೆಟ್ಟಿ, ಜಯಪ್ರಕಾಶ್ ಶೆಟ್ಟಿ ಅವರಿಗೆ ತಲಾ 8 ತಿಂಗಳ ಅಧಿಕಾರ ಸಿಗಲಿದೆ ಎಂದು…

Read More

ಕುವೆಂಪು ವಿವಿ ಅವ್ಯವಸ್ಥೆಗೆ ಹೊಣೆ ಯಾರು? – ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾದರೂ, ಡಿಗ್ರಿ ಕಾಲೇಜುಗಳು ಆರಂಭವಾಗಿಲ್ಲ – ಕಾಲೇಜು ಅಡ್ಮಿಶನ್ ಆಗದೆ ವಿದ್ಯಾರ್ಥಿಗಳ ಆತಂಕ! NAMMUR EXPRESS NEWS ಶಂಕರಘಟ್ಟ: ರಾಜ್ಯದಲ್ಲಿ ಅತಿ ಕಳಪೆ ವಿಶ್ವ ವಿದ್ಯಾನಿಲಯವಾಗಿ ಕುವೆಂಪು ವಿವಿ ಬೆಳೆಯುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್ ಅರುಣ್ ಶಾಸಕ ದೂರಿದ್ದಾರೆ. ರಾಜ್ಯದಲ್ಲಿ 41 ವಿಶ್ವವಿದ್ಯಾಲಯಗಳಿವೆ, ಇದರಲ್ಲಿ ಡೀಮ್ಡ್ ವಿಶ್ವವಿದ್ಯಾಲಯ 11 ಇದೆ. ನ್ಯಾಷನಲ್ ಇನ್ಸ್ಟಿಟ್ಯೂಟ್ 9 ಇದೆ. ಕುವೆಂಪು ವಿವಿಯಲ್ಲಿ ಆರಂಭದಲ್ಲಿ 4 ಜಿಲ್ಲೆ ಇತ್ತು. ಈಗ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆ ಮಾತ್ರ ವಿಶ್ವ ವಿದ್ಯಾಲಯ ಉಳಿದುಕೊಂಡಿದೆ. ಇನ್ನು ಡಿಗ್ರಿ ಕಾಲೇಜು ಶುರುವಾಗಿಲ್ಲ ಏ.11ರಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಇಲ್ಲಿಯವರೆಗೂ ಡಿಗ್ರಿ ಕಾಲೇಜುಗಳು ಆರಂಭವಾಗಿಲ್ಲ. 4 ತಿಂಗಳು 11 ದಿನ ಆದರೂ ಡಿಗ್ರಿ ಕಾಲೇಜು ಆರಂಭವಾಗಿಲ್ಲ. 84 ಕಾಲೇಜು ಇದೆ. ಇವುಗಳಿಗೆ ಪ್ರತಿವರ್ಷ ಅಫೀಲಿಯೇಷನ್ ಗೆ ಬರೆಯಲಾಗುತ್ತದೆ. ಅರ್ಜಿ ಬರೆದಾಗ ಸ್ಥಯ ತಪಾಸಣೆ ನಡೆಸಿ…

Read More

ಆಸ್ತಿ ನೋಂದಣಿ ಸೆ.2ರಿಂದ ಹೊಸ ಯೋಜನೆ ಜಾರಿ! – ಏನಿದು ಎನಿವೇರ್ ಆಸ್ತಿ ನೋಂದಣಿ ಪದ್ಧತಿ – ನಕಲಿ ಅಸ್ತಿ ನೋಂದಣಿಗೆ ಇನ್ಮೇಲೆ ಮೂಗುದಾರ? NAMMUR EXPRESS NEWS ಬೆಂಗಳೂರು: ಆಸ್ತಿ ವಂಚನೆ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಯಾರದ್ದೋ ಆಸ್ತಿಗೆ ಮತ್ಯಾರೋ ನಕಲಿ ದಾಖಲೆ ಕೊಟ್ಟು ಮೋಸ ಮಾಡುವುದು, ವೈಯಕ್ತಿಕ ದಾಖಲೆ ನಕಲು ಮಾಡಿ ನಾನೇ ವಾರಸುದಾರ ಎಂದು ವಂಚಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ, ಇದಕ್ಕೆ ಕಡಿವಾಣ ಹಾಕಲು ಮುಂದಾಗಿದ್ದು, ಆಸ್ತಿ ಸೇಫ್ಟಿಗಾಗಿ ಎಲ್ಲಾ ಉಪ ನೋಂದಣಿ ಕಚೇರಿಗಳಲ್ಲಿ ಕಾವೇರಿ-2 ಜಾರಿಗೊಳಿಸಲಾಗಿದ್ದ, ಇಂದಿನಿಂದ ಎಲ್ಲಾ ಉಪ ನೋಂದಣಿ ಕಚೇರಿಗಳಲ್ಲಿ ತಮ್ಮ-ತಮ್ಮ ಆಸ್ತಿ ಒಡೆತನದವರು ಆಧಾರ್, ಪಾಸ್ಪೋರ್ಟ್, ಪ್ಯಾನ್ ಈ 3ರಲ್ಲಿ ಒಂದು ದಾಖಲೆ ನೀಡುವುದು ಕಡ್ಡಾಯವಾಗಿದೆ. ಎಲ್ಲಾ ಉಪ ನೋಂದಣಿ ಕಚೇರಿಗಳಲ್ಲಿ ಕಾವೇರಿ-2 ಜಾರಿಗೊಳಿಸಿದ್ದೇವೆ. ಅಪಾಯಿಂಟ್ಮೆಂಟ್ ಸಿಸ್ಟಮ್ ಸರಿಯಾಗಿ ಪಾಲಿಸದೆ ಜನಜಂಗುಳಿಯಿತ್ತು. ಇನ್ಮುಂದೆ ಅಪಾಯಿಂಟ್ಮೆಂಟ್ ಸಿಸ್ಟಮ್ ಕಡ್ಡಾಯ ಮಾಡಿದ್ದೇವೆ ರಾಜ್ಯದಲ್ಲಿ 257 ಉಪನೋಂದಣಿ ಕಚೇರಿಗಳಿವೆ,…

Read More

ಅಮೃತ ಭಾರತಿ ಶಿಕ್ಷಣ ಸಂಸ್ಥೆ ಹೆಬ್ರಿ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ!! * ಶ್ರೀ ಕೃಷ್ಣ ಜನ್ಮಾಷ್ಟಮಿ ಶೋಭಯಾತ್ರೆ ಕಾರ್ಯಕ್ರಮ!! * ಕುಚ್ಚೂರು ಗೇರುಬೀಜ ಕಾರ್ಖಾನೆಯಿಂದ ಶೋಭಯಾತ್ರೆಗೆ ಆಗಮಿಸಿದ ವಿದ್ಯಾರ್ಥಿಗಳು!! NAMMUR EXPRESS NEWS ಹೆಬ್ರಿ:ಬಂಟರ ಭವನ, ಅಮೃತ ಭಾರತಿ ವಿದ್ಯಾ ಸಂಸ್ಥೆ ಹೆಬ್ರಿ ಶೋಭಯಾತ್ರೆಯು ಶ್ರೀಕೃಷ್ಣನನ್ನು ವಾಹನದ ಮೂಲಕ ಆರಾಧಿಸಿ ಪ್ರಾರಂಭಿಸಿದರು.ಸುಮಾರು ಒಂದು ಸಾವಿರಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಕುಚ್ಚೂರು ಗೇರುಬೀಜ ಕಾರ್ಖಾನೆಯಿಂದ ಶೋಭಯಾತ್ರೆಗೆ ಮೆರವಣಿಗೆಯಲ್ಲಿ ಭಾಗವಹಿಸಿದ್ದು,ಹುಲಿವೇಷ, ಯಕ್ಷಗಾನ, ನೃತ್ಯ, ಭರತನಾಟ್ಯ, ಕೋಲಾಟ, ಭಜನೆ, ಮೊಸರು ಕುಡಿಕೆ ಮತ್ತು ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶೋಭಯಾತ್ರೆಯಲ್ಲಿ ಮಕ್ಕಳ ರಾಧಾಕೃಷ್ಣಛದ್ಮವೇಷ,ಯಕ್ಷಗಾನ,ನೃತ್ಯ, ಭರತನಾಟ್ಯ, ಕೋಲಾಟ, ಭಜನೆ, ಮೊಸರು ಕುಡಿಕೆ,ಹಾಗೂ ಸಾಂಪ್ರದಾಯಿಕ ಶೈಲಿಯಲ್ಲಿ ಕಲಶಗಳ ಜೊತೆಗೆ ಶೋಭಾಯಾತ್ರೆ ಕಾರ್ಯಕ್ರಮ ನಡೆಯಿತು. ಶ್ರೀ ಕೃಷ್ಣನ ಜನ್ಮದಿನದಂದು ರಸ್ತೆ ಬದಿಗಳಲ್ಲಿ ಜೈ ಕಾರಗಳು ವಿಜೃಂಭಣೆಯಿಂದ ಸದ್ದು ಮಾಡುತಿತ್ತು. ಆಧುನಿಕ ಯುಗದಲ್ಲಿ ಮೈಲ್ ಹಿಡಿದು ಮೂಲೆ ಸೇರುವ ಮಕ್ಕಳ ಮಧ್ಯೆ ಬಂಟರ ಭವನ, ಅಮೃತ ಭಾರತಿ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು…

Read More