ರೈತರ ಜಾಗ ಒತ್ತುವರಿ: ಆ. 17ಕ್ಕೆ ಶೃಂಗೇರಿ ಕ್ಷೇತ್ರ ಬಂದ್! – ಹಲವು ಸಂಘಟನೆಗಳ ಸಾಥ್: ಏನಿರುತ್ತೆ..? ಏನಿರಲ್ಲ? – ಕೊಪ್ಪ, ಶೃಂಗೇರಿ, ಎನ್. ಆರ್. ಪುರ 3 ತಾಲೂಕು ಬಂದ್ – ತುರ್ತು ಸೇವೆ ಹೊರತುಪಡಿಸಿ ಉಳಿದ ಎಲ್ಲವು ಸಂಪೂರ್ಣ ಬಂದ್ NAMMUR EXPRESS NEWS ಶೃಂಗೇರಿ: ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ಶೃಂಗೇರಿ ಕ್ಷೇತ್ರ ರೈತರ ಜಾಗ ಒತ್ತುವರಿ ವಿರೋಧಿಸಿ ಕರೆ ಕೊಟ್ಟಿರುವ ಶೃಂಗೇರಿ ಬಂದ್ ಭಾರೀ ಜನ ಸ್ಪಂದನೆ ಸಿಗುತ್ತಿದೆ. ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗೂ ಹೋರಾಟ ವ್ಯಾಪಿಸುತ್ತಿದ್ದು, ಶೃಂಗೇರಿ ಕ್ಷೇತ್ರದಲ್ಲಿ ಜನ ಸಿದ್ಧತೆ ನಡೆಸಿದ್ದಾರೆ. ತುರ್ತು ಸೇವೆಗಳನ್ನು ಹೊರತುಪಡಿಸಿ ಉಳಿದ ಎಲ್ಲವು ಸಂಪೂರ್ಣ ಬಂದ್ ಆಗಿರುತ್ತದೆ. ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ತಾಲ್ಲೂಕು ಕೇಂದ್ರಗಳು, ಖಾಂಡ್ಯ ಹೋಬಳಿ ಹಾಗೂ 3 ತಾಲೂಕಿನ ಎಲ್ಲಾ ಹೋಬಳಿ ಕೇಂದ್ರಗಳೂ ಬಂದ್ ಆಗಿರಲಿವೆ. ಏನಿರುತ್ತೆ? ಆಸ್ಪತ್ರೆ ಮೆಡಿಕಲ್ ಸ್ಟೋರ್ ಪೇಪರ್ – ಹಾಲು ಅಂಬುಲೆನ್ಸ್ ಪೋಸ್ಟ್ ಆಫೀಸ್ …
Author: Nammur Express Admin
ವರ ಮಹಾಲಕ್ಷ್ಮಿ ಹಬ್ಬದಂದು ರಾಶಿ ಭವಿಷ್ಯ ಹೇಗಿದೆ? – ಯಾವ ರಾಶಿಯವರಿಗೆ ಶುಭ ? ಯಾವ ರಾಶಿಯವರಿಗೆ ಅಶುಭ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಈ ದಿನ ತಮ್ಮ ಸುಖ, ಸಮೃದ್ಧಿಗಾಗಿ ಹೆಚ್ಚಿನ ಖರ್ಚು ಮಾಡುವರು ಮತ್ತು ನಿಮ್ಮ ಕೆಲಸದಲ್ಲಿ ವೃದ್ಧಿಯನ್ನು ಕಾಣುವಿರಿ. ಇಂದು ನಿಮ್ಮ ಮನೆಯ ಸದಸ್ಯರು ನಿಮಗೆ ಸಹಾಯ ಮಾಡಲು ಮುಂದೆ ಬರುವವರು ಮತ್ತು ವೃತ್ತಿ ಜೀವನದಲ್ಲಿ ಪ್ರಗತಿ ಹೊಂದುವ ಯೋಗವಿದೆ. ಸಂಜೆ ನೀವು ಶುಭ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶವನ್ನು ಪಡೆಯವಿರಿ. ವ್ಯಾಪಾರಕ್ಕೆ ಸಂಬಂಧಿಸಿದಂತೆ ಉತ್ತಮ ಅವಕಾಶ ಸಿಗುವುದು ಮತ್ತು ಮನೆಯಲ್ಲಿ ಪಾರ್ಟಿಯನ್ನು ಆಯೋಜಿಸಬಹುದು. ** ವೃಷಭ ರಾಶಿ : ತೀರ್ಥಯಾತ್ರೆ ಹೋಗುವ ಬಗ್ಗೆ ಯೋಚಿಸುವರು. ಇದರಿಂದ ಮನಸ್ಸು ಶಾಂತವಾಗಿರುವುದು ಮತ್ತು ಸಂತೋಷದಿಂದಿರುವಿರಿ. ಈ ದಿನ ನ್ಯಾಾಲಯದಲ್ಲಿನ…
ವರವ ಕೊಡೆ ವರ ಮಹಾಲಕ್ಷ್ಮಿ! – ಎಲ್ಲೆಡೆ ವರಮಹಾಲಕ್ಷ್ಮಿ ಹಬ್ಬಕ್ಕೆ ಜನ ಸಿದ್ಧತೆ! – ದೇವಾಲಯಗಳಲ್ಲಿ ವಿಶೇಷ ಪೂಜೆ: ಮನೆಯಲ್ಲೂ ಸಿದ್ಧತೆ – ಸತತವಾಗಿ ರಜೆ: ತವರೂರು ಕಡೆ ಮುಖ ಮಾಡಿದ ಜನ NAMMUR EXPRESS NEWS NEWS ರಾಜ್ಯದಲ್ಲಿ ವರಲಕ್ಷ್ಮಿ ದೇವಿ ಪೂಜೆಯನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಮಾಡಲಾಗುತ್ತದೆ. ಈ ವರ್ಷ ವರಲಕ್ಷ್ಮಿ ವ್ರತವು ಆಗಸ್ಟ್ 16 ರಂದು ಬರುತ್ತದೆ. ಸಾಂಪ್ರದಾಯಿಕ ಹಿಂದೂ ಧರ್ಮದಲ್ಲಿ ಲಕ್ಷ್ಮಿ ದೇವಿಗೆ ವಿಶೇಷ ಸ್ಥಾನವಿದೆ. ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಯನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ. ದೇವಿಯ ಕೃಪೆಯಿಂದ ಜೀವನದಲ್ಲಿ ಐಶ್ವರ್ಯವಿರುತ್ತದೆ ಹಾಗೂ ಜೀವನದಲ್ಲಿ ಹಣದ ಕೊರತೆ ಇರುವುದಿಲ್ಲ ಎಂಬ ನಂಬಿಕೆ ಇದೆ. ಅಷ್ಟಲಕ್ಷ್ಮಿ ಗಳಲ್ಲಿ ವರಲಕ್ಷ್ಮಿ ದೇವಿಗೆ ವಿಶೇಷತೆ ಇದೆ. ಇತರ ಲಕ್ಷ್ಮಿ ಪೂಜೆಗಳಿಗಿಂತ ವರಲಕ್ಷ್ಮಿ ೂಜೆ ಉತ್ತಮ ಎಂದು ಶಾಸ್ತ್ರ ಗ್ರಂಥಗಳು ಹೇಳುತ್ತವೆ. ವರಲಕ್ಷ್ಮಿ ವ್ರತವನ್ನು ಶ್ರಾವಣ ಮಾಸದಲ್ಲಿ ಆಚರಿಸಲಾಗುತ್ತದೆ. ಇದು ವಿಷ್ಣುವಿಗೆ ಪ್ರಿಯವಾದದ್ದು ಮತ್ತು ವಿಷ್ಣುವಿನ ಜನ್ಮ ನಕ್ಷತ್ರದ ಹೆಸರನ್ನು ಇಡಲಾಗಿದೆ. ಇದಲ್ಲದೆ,…
ಟಾಪ್ ನ್ಯೂಸ್ ಕರ್ನಾಟಕ – ಸ್ವಾತಂತ್ರ್ಯ ದಿನದ ಆಚರಣೆಗೆ ಕೆಲವೆಡೆ ಬಿಸಿಲ ಬೇಗೆಯ ಎಫೆಕ್ಟ್ .! – ಹೆಚ್ಚಾದ ಬಿಸಿಲ ತಾಪಮಾನ ಕುಸಿದು ಬಿದ್ದ ವಿದ್ಯಾರ್ಥಿಗಳು .! – ವಿಜಯಪುರದಲ್ಲಿ ಧ್ವಜಾರೋಹಣದ ವೇಳೆ ಹೊಡೆದಾಟ! – ಹಾಸನದಲ್ಲಿ 2500 ಅಡಿ ಉದ್ದದ ತ್ರಿವರ್ಣ ಧ್ವಜ ಪ್ರದರ್ಶನ – ತುಮಕೂರು: ಪ್ಯಾಲಿಸ್ತೀನ್ ಬಾವುಟ ಹಾರಿಸಲು ಯತ್ನ NAMMUR EXPRESS NEWS 78ನೆ ಸ್ವಾತಂತ್ರ್ಯ ದಿನದ ಸಂಭ್ರಮಾಚರಣೆಯ ರಂಗು ಎಲ್ಲೆಡೆಯೂ ಆವರಿಸಿದ್ದು ಹಬ್ಬದ ವಾತಾವರಣ ಹಲವೆಡೆ ಮನೆ ಮಾಡಿದ್ರೆ, ಕೆಲವೆಡೆ ಬಿಸಿಲ ಬೇಗೆಗೆ ಬೆಂಡಾಗಿ ಮಕ್ಕಳು ಕುಸಿದು ಬಿದ್ದಿರುವ ಘಟನೆಯೂ ನಡೆದಿದೆ. ಚಿಕ್ಕಬಳ್ಳಾಪುರ ನಗರದ ಸರ್. ಎಂ. ವಿ ಕ್ರೀಡಾಂಗಣದಲ್ಲಿ ಸಚಿವ ಡಾ ಎಂ. ಸಿ ಸುಧಾಕರ್ ಸ್ವಾತಂತ್ರ್ಯ ದಿನಾಚರಣೆ ಕುರಿತು ಭಾಷಣ ಮಾಡುತ್ತಿದ್ದರು. ಈ ವೇಳೆ ತುಂಬ ಹೊತ್ತು ಬಿಸಿಲಿನಲ್ಲೇ ನಿಂತಿದ್ದ ಮಕ್ಕಳು ಸುಸ್ತಾಗಿ ಕುಸಿದು ಬಿದ್ದಿದ್ದಾರೆ. ಕುಸಿದು ಬಿದ್ದ ಮಕ್ಕಳನ್ನು ಆಂಬ್ಯುಲೆನ್ಸ್ ಮೂಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಮಹಿಳಾ ತುಕಡಿಯ ನೇತೃತ್ವ ವಹಿಸಿದ್ದ…
ಶೃಂಗೇರಿಯಲ್ಲಿ ಸ್ವಾತಂತ್ರ್ಯ ಸಂಭ್ರಮಕ್ಕೆ ಆನೆಗಳ ಪಥ ಸಂಚಲನ! – ಶೃಂಗೇರಿ ಮಠದ ಶ್ರೀಲಕ್ಷ್ಮೀ, ಜಯಲಕ್ಷ್ಮಿ ಆನೆಗಳು ಮೆರವಣಿಗೆಯಲ್ಲಿ ಭಾಗಿ – ಚಿಕ್ಕಮಗಳೂರು ಜಿಲ್ಲೆಯಲ್ಲಿ ಸ್ವಾತಂತ್ರ್ಯ ಉತ್ಸವ – ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ತಿರಂಗಾ ಬೈಕ್ ಜಾಥಾ NAMMUR EXPRESS NEWS ಚಿಕ್ಕಮಗಳೂರು: ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯಾದ್ಯಂತ 78ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಕಂಡು ಬಂತು. ಪ್ರತಿ ತಾಲೂಕು, ಗ್ರಾಮ ಮಟ್ಟದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಕಂಡು ಬಂದಿತು. ಮಧ್ಯಾಹ್ನ ಬಳಿಕ ಮಳೆ ಹಲವೆಡೆ ಸ್ವಾತಂತ್ರ್ಯ ಸಂಭ್ರಮಕ್ಕೆ ಮಂಕು ತಂದಿತು. ಪ್ರತಿ ತಾಲೂಕಲ್ಲಿ ಶಾಸಕರು, ತಹಸೀಲ್ದಾರ್ ಧ್ವಜಾರೋಹಣ ನೆರವೇರಿಸಿದರು. ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ತಿರಂಗಾ ಬೈಕ್ ಜಾಥಾ ಚಿಕ್ಕಮಗಳೂರಿನಲ್ಲಿ ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ತಿರಂಗಾ ಬೈಕ್ ಜಾಥಾ ನಡೆಸಲಾಯಿತು.ಈ ರ‍್ಯಾಲಿಯನ್ನು ವಿಧಾನ ಪರಿಷತ್ ಸದಸ್ಯರಾದ ಸಿ.ಟಿ ರವಿ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷರಾದ ಎಂ.ಆರ್ ದೇವರಾಜ್ ಶೆಟ್ಟಿ ಅವರು ಉದ್ಘಾಟಿಸಿದರು. ಶ್ರೀಮಠದ ಆನೆಗಳಾದ ಶ್ರೀಲಕ್ಷ್ಮೀ, ಜಯಲಕ್ಷ್ಮೀ ಪಥ ಸಂಚಲನ…
ತೀರ್ಥಹಳ್ಳಿಯಲ್ಲಿ ಸಂಭ್ರಮದ ಸ್ವಾತಂತ್ರ್ಯ ಹಬ್ಬ! – ಎಲ್ಲೆಡೆ ಸ್ವಾತಂತ್ರ್ಯ ದಿನಾಚರಣೆಯ ರಂಗು – ಬಿಸಿಲು ಜಾಸ್ತಿ ಆಗಿ ಕುಸಿದು ಬಿದ್ದ ಮಕ್ಕಳು! NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ಹಳ್ಳಿ ಹಳ್ಳಿಯಲ್ಲೂ ತಿರಂಗಾ ಹಾರಿಸಲಾಗಿದೆ. ಜನ ದೇಶ ಭಕ್ತಿಯನ್ನು ಮೆರೆದಿದ್ದಾರೆ. ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳು, ಖಾಸಗಿ ಸಂಸ್ಥೆಗಳು ಸೇರಿ ಆಟೋ, ಬಸ್, ಕಾರು ನಿಲ್ದಾಣಗಳಲ್ಲಿ ಸ್ವಾತಂತ್ರ್ಯ ಸಂಭ್ರಮ ಕಂಡು ಬಂತು. ಮಕ್ಕಳು ಕೂಡ ಸಂಭ್ರಮದಿಂದ ಭಾಗಿಯಾದರು. ತೀರ್ಥಹಳ್ಳಿ ತಾಲೂಕು ಆಡಳಿತ ಮತ್ತು ಮತ್ತು ರಾಷ್ಟ್ರೀಯ ಹಬ್ಬಗಳ ಸಮಿತಿಯಿಂದ ತೀರ್ಥಹಳ್ಳಿಯಲ್ಲಿ 78ನೇ ಸ್ವಾತಂತ್ರೋತ್ಸವನ್ನು ಸಂಭ್ರಮದಿಂದ ಆಚರಿಸಲಾಯಿತು. ತೀರ್ಥಹಳ್ಳಿಯ ಯು.ಆರ್.ಅನಂತಮೂರ್ತಿ ಶಾಲೆಯ ಕ್ರೀಡಾಂಗಣದಲ್ಲಿ ನಡೆದ ಸ್ವಾತಂತ್ರೋತ್ಸವದಲ್ಲಿ ತೀರ್ಥಹಳ್ಳಿಯ ಎಲ್ಲಾ ಶಾಲಾ ಮಕ್ಕಳು ಭಾಗವಹಿಸಿದ್ದರು ಧ್ವಜಾರೋಹಣವನ್ನು ತಾಲೂಕು ದಂಡಾಧಿಕಾರಿ ಜಕ್ಕಣ್ಣ ಗೌಡರ್ ನೆರವೇರಿಸಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರದ ಶಾಸಕರಾದ ಆರಗ ಜ್ಞಾೇಂದ್ರ ವಹಿಸಿದ್ದರು. ಧ್ವಜಾರೋಹಣದ ನಂತರ ಧ್ವಜ ವಂದನೆಯನ್ನು ಸಲ್ಲಿಸಲಾಯಿತು. ತೀರ್ಥಹಳ್ಳಿ ಪಟ್ಟಣದ ಎಲ್ಲಾ ಶಾಲೆಯ ಮಕ್ಕಳು…
ರಾಜ್ಯದಲ್ಲಿ ಸ್ವಾತಂತ್ರ್ಯ ಸಂಭ್ರಮ! – ಮಾಣೆಕ್ ಷಾ ಮೈದಾನದಲ್ಲಿ ಸಿಎಂ ಧ್ವಜಾರೋಹಣ – ದೇಶಕ್ಕಾಗಿ ಜೀವತೆತ್ತ ಮಹನೀಯರ ಸ್ಮರಣೆ – ರಾಜ್ಯದಲ್ಲಿ ಎಲ್ಲೆಡೆ ಜನರಿಂದ ಸ್ವಾತಂತ್ರ್ಯ ಹಬ್ಬ – ದೇಶಕ್ಕಾಗಿ ಜೀವ ತೆತ್ತ ಮಹನೀಯರನ್ನು ನೆನೆದ ಸಿಎಂ NAMMUR EXPRESS NEWS ಬೆಂಗಳೂರು: ರಾಜ್ಯದಲ್ಲಿ ಸ್ವಾತಂತ್ರ್ಯ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಹಳ್ಳಿ ಹಳ್ಳಿಯಲ್ಲೂ ತಿರಂಗಾ ಹಾರಿಸಲಾಗಿದೆ. ಜನ ದೇಶ ಭಕ್ತಿಯನ್ನು ಮೆರೆದಿದ್ದಾರೆ. ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳು, ಖಾಸಗಿ ಸಂಸ್ಥೆಗಳು ಸೇರಿ ಆಟೋ, ಬಸ್, ಕಾರು ನಿಲ್ದಾಣಗಳಲ್ಲಿ ಸ್ವಾತಂತ್ರ್ಯ ಸಂಭ್ರಮ ಕಂಡು ಬಂತು. ಸಿಎಂ ಧ್ವಜಾರೋಹಣ: ಬೆಂಗಳೂರಿನ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ 78ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸಿಎಂ ಸಿದ್ದರಾಮಯ್ಯ ಧ್ವಜಾರೋಹಣ ನೆರವೇರಿಸಿ ಪರೀಡ್ ವೀಕ್ಷಿಸಿದರು.ಬಳಿಕ ಸಿಎಂ ಭಾಷಣ ಮಾಡಿ ಪ್ರಾಣದ ಹಂಗು ತೊರೆದು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನಿಯರನ್ನು ಸ್ಮರಿಸಿದರು. ದೃಷ್ಟರ ಆಟ ಬಹಳ ಕಾಲ ನಡೆಯುದಿಲ್ಲ ಎನ್ನುವುದನ್ನು ಜನರೇ ನಿರ್ಧಾರ ಮಾಡಿದದಾರೆ ಎಂದು…
ಮೂಡುಬಿದಿರೆ ನ್ಯೂ ವೈಬ್ರೆಂಟ್ ಪಿಯು ಕಾಲೇಜಲ್ಲಿ ಉಪನ್ಯಾಸ – ಮಕ್ಕಳಿಗೆ ಸ್ವಚ್ಛತೆ ಬಗ್ಗೆ ಡಾ.ವೃಂದಾ ಬೆಡೇಕರ್ ವಿಶೇಷ ಅರಿವು – ವಿಭಿನ್ನ ಕಾರ್ಯಕ್ರಮ, ಉಪನ್ಯಾಸದ ಮೂಲಕ ವಿದ್ಯಾರ್ಥಿಗಳಿಗೆ ಜಾಗೃತಿ NAMMUR EXPRESS NEWS ಮೂಡುಬಿದಿರೆ: ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿರುವ ನ್ಯೂ ವೈಬ್ರೆಂಟ್ ಪದವಿ ಪೂರ್ವ ಕಾಲೇಜಿನ ಮಹಿಳಾ ಕಲ್ಯಾಣ ಸಮಿತಿಯ ವತಿಯಿಂದ ಇತ್ತೀಚೆಗೆ ಕಾಲೇಜಿನ ವಿದ್ಯಾರ್ಥಿನಿಯರಿಗೆ “ಆರೋಗ್ಯ ಮತ್ತು ಶುಚಿತ್ವ” ಎಂಬ ವಿಷಯದ ಕುರಿತು ವಿ-ಪ್ರೇರಣಾ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೆಳ್ತಂಗಡಿಯ ಪ್ರಸನ್ನ ಕಾಲೇಜ್ ಆಫ್ ಆಯುರ್ವೇದ ಮತ್ತು ಹಾಸ್ಪಿಟಲ್ ಪ್ರಾಧ್ಯಾಪಕಿ ಡಾ. ವೃಂದಾ ಬೆಡೇಕರ್ ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಮಾತನಾಡುತ್ತಾ, ದೈನಂದಿನ ಬದುಕಿನಲ್ಲಿ ಸ್ವಚ್ಛತೆ ಅತ್ಯಗತ್ಯ. ವೈಯಕ್ತಿಕ ಸ್ವಚ್ಛತೆಯಿಂದ ಮಾತ್ರ ತಾವು ಉತ್ತಮ ಆರೋಗ್ಯವಂತರಾಗಿ ಬದುಕಲು ಸಾಧ್ಯ ಎಂದು ಹೇಳಿದರು. ವಾತಾವರಣದಲ್ಲಿ ಉಷ್ಣತೆ ಕಡಿಮೆಯಾದಾಗ ಸೂಕ್ಷ್ಮಾಣು ಜೀವಿಗಳು ಬೆಳೆಯುತ್ತವೆ. ತಾವು ಈ ಸಂದರ್ಭದಲ್ಲಿ ವೈಯಕ್ತಿಕ ಸ್ವಚ್ಛತೆಯ ಕಡೆಗೆ ಗಮನಹರಿಸದಿದ್ದಾಗ ಆರೋಗ್ಯದಲ್ಲಿ ಏರುಪೇರುಗಳು ಉಂಟಾಗಿ ಬೇರೆ ಬೇರೆ…
ಜೈ ಭಾರತ್…ವಿಕಸಿತ ಭಾರತವೇ ನಮ್ಮ ಹೆಜ್ಜೆ! – ಕೆಂಪುಕೋಟೆಯಲ್ಲಿ ಮೊಳಗಿದ ಮೋದಿ ಭಾಷಣ – ದೇಶದ ಮನೆ ಮನೆಯಲ್ಲಿ ಮೊಳಗಿದ ದೇಶ ಪ್ರೇಮ – ಸತತ 11ನೇ ಭಾರಿಗೆ ಧ್ವಜಾರೋಹಣ ಮಾಡಿದ ಮೋದಿ NAMMUR EXPRESS NEWS ನವ ದೆಹಲಿ: 78ನೇ ಸ್ವಾತಂತ್ರೋತ್ಸವ ನಿಮಿತ್ತ ಪ್ರಧಾನಿ ಮೋದಿಯವರು ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿದರು. ಕೆಂಪುಕೋಟೆಗೆ ಆಗಮಿಸಿದ ಪ್ರಧಾನಿ ಮೋದಿಗೆ ಮೂರು ಸೇನಾಪಡೆಗಳು ಗೌರವ ಸಲ್ಲಿಸಿದವು. ಇದಕ್ಕೂ ಮುನ್ನ ರಾಜ್ಘಾಟ್ಗೆ ತೆರಳಿ ಮೋದಿ ನಮನ ಸಲ್ಲಿಸಿದರು. ಕೆಂಪುಕೋಟೆಯ ಮೇಲೆ ಹಾರಾಡಿದ ತ್ರಿವರ್ಣ ಧ್ವಜಕ್ಕೆ ಸೇನಾ ಹೆಲಿಕಾಪ್ಟರ್ನಿಂದ ಹೂಮಳೆಗೈದು ಗೌರವ ಸೂಚಿಸಲಾಯಿತು. ನರೇಂದ್ರ ಮೋದಿಯವರು ಸತತ 11ನೇ ಭಾರಿಗೆ ಸ್ವಾತಂತ್ರೋತ್ಸವ ಧ್ವಜಾರೋಹಣ ಮಾಡಿದ್ದು ಇದಕ್ಕೂ ಮುನ್ನ ಭಾರತೀಯರಿಗೆ ಸ್ವಾತಂತ್ರ್ಯ ದಿನದ ಶುಭಾಶಯವನ್ನ ತಮ್ಮ ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದರು. ಹಾಗೇ, ದೆಹಲಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಪ್ರಧಾನಿ ಮೋದಿ ದೇಶವನ್ನ ಉದ್ದೇಶಿಸಿ ಮಾತನಾಡಿದರು. ಮೊದಲು ಸ್ವಾತಂತ್ರ್ಯ ಹೋರಾಟಗಾರರನ್ನ ಸ್ಮರಿಸಿ, ಗೌರವ ಸಲ್ಲಿಸಿದ ಪ್ರಧಾನಿ…
ತೀರ್ಥಹಳ್ಳಿಯಲ್ಲಿ ಸ್ವಾತಂತ್ರ್ಯ ಸಂಭ್ರಮ: ಬೆಳಕಿನ ರಂಗು! – ಸರ್ಕಾರಿ ಕಚೇರಿಗಳಿಗೆ ವಿದ್ಯುತ್ ಅಲಂಕಾರ – ಎಲ್ಲೆಡೆ ಹಬ್ಬದ ವಾತಾವರಣ: ಜನರಿಂದ ಜೈ ಹೋ NAMMUR EXPRESS NEWS ತೀರ್ಥಹಳ್ಳಿ: 78ನೇ ವರ್ಷದ ಸ್ವಾತಂತ್ರ್ಯ ಸಂಭ್ರಮ ತೀರ್ಥಹಳ್ಳಿಯಲ್ಲಿ ಸಂಭ್ರಮದಿಂದ ನಡೆಯುತ್ತಿದೆ. ಎಲ್ಲಾ ಸರ್ಕಾರಿ ಕಚೇರಿ, ಶಾಲೆ, ಮನೆ ಮನೆಗಳಲ್ಲಿ ಆಚರಣೆ ಆಗುತ್ತಿದೆ. ತೀರ್ಥಹಳ್ಳಿಯಲ್ಲಿ ಸರ್ಕಾರಿ ಕಚೇರಿಗಳು ವಿದ್ಯುತ್ ದೀಪದಿಂದ ಅಲಂಕರಿಸಿದ್ದು ಗಮನ ಸೆಳೆದಿದೆ. ತೀರ್ಥಹಳ್ಳಿಯಲ್ಲಿರುವ ಗ್ರಾಮೀಣಾಭಿವೃದ್ಧಿ ಕಟ್ಟಡ ಕೇಸರಿ, ಬಿಳಿ, ಹಸಿರಿನ ಸಂಗಮದಿಂದ ಕಾಣಿಸಿಕೊಂಡಿರುವ ದೃಶ್ಯ ಎಲ್ಲರ ಗಮನವನ್ನು ಸೆಳೆಯುತ್ತಿದೆ. ಜನ ಕಟ್ಟಡದ ಮುಂದೆ ನಿಂತು ಸೆಲ್ಸಿ, ಫೋಟೋಗಳನ್ನು ತೆಗೆದುಕೊಳ್ಳುತ್ತಿರುವ ದೃಶ್ಯ ಕೂಡ ಕಂಡು ಬಂತು.ಇನ್ನು ಲೋಕೋಪಯೋಗಿ ಇಲಾಖೆ ಟ್ಟಡ, ಜಿಲ್ಲಾ ಪಂಚಾಯತ್ ಕಟ್ಟಡ, ಮೆಸ್ಕಾಂ ಕಟ್ಟಡ, ಕೊಪ್ಪ ಸರ್ಕಲ್, ಕುವೆಂಪು ಪ್ರತಿಮೆಗೆ ವಿದ್ಯುತ್ ಅಲಂಕಾರ ಮಾಡಲಾಗಿದೆ. ಎಲ್ಲಾ ಕಡೆ ಸ್ವಾತಂತ್ರ್ಯ ಸಂಭ್ರಮ ಕಂಡು ಬರುತ್ತಿದೆ.