Categories
ಚಿಕ್ಕಮಗಳೂರು

ಶೃಂಗೇರಿಯಲ್ಲಿ ಸ್ವಾತಂತ್ರ್ಯ ಸಂಭ್ರಮಕ್ಕೆ ಆನೆಗಳ ಪಥ ಸಂಚಲನ!

ಶೃಂಗೇರಿಯಲ್ಲಿ ಸ್ವಾತಂತ್ರ್ಯ ಸಂಭ್ರಮಕ್ಕೆ ಆನೆಗಳ ಪಥ ಸಂಚಲನ!
– ಶೃಂಗೇರಿ ಮಠದ ಶ್ರೀಲಕ್ಷ್ಮೀ, ಜಯಲಕ್ಷ್ಮಿ ಆನೆಗಳು ಮೆರವಣಿಗೆಯಲ್ಲಿ ಭಾಗಿ
– ಚಿಕ್ಕಮಗಳೂರು ಜಿಲ್ಲೆಯಲ್ಲಿ ಸ್ವಾತಂತ್ರ್ಯ ಉತ್ಸವ
– ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ತಿರಂಗಾ ಬೈಕ್ ಜಾಥಾ

NAMMUR EXPRESS NEWS
ಚಿಕ್ಕಮಗಳೂರು: ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯಾದ್ಯಂತ 78ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಕಂಡು ಬಂತು.
ಪ್ರತಿ ತಾಲೂಕು, ಗ್ರಾಮ ಮಟ್ಟದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಕಂಡು ಬಂದಿತು. ಮಧ್ಯಾಹ್ನ ಬಳಿಕ ಮಳೆ ಹಲವೆಡೆ ಸ್ವಾತಂತ್ರ್ಯ ಸಂಭ್ರಮಕ್ಕೆ ಮಂಕು ತಂದಿತು.
ಪ್ರತಿ ತಾಲೂಕಲ್ಲಿ ಶಾಸಕರು, ತಹಸೀಲ್ದಾರ್ ಧ್ವಜಾರೋಹಣ ನೆರವೇರಿಸಿದರು.

ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ತಿರಂಗಾ ಬೈಕ್ ಜಾಥಾ

ಚಿಕ್ಕಮಗಳೂರಿನಲ್ಲಿ ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ತಿರಂಗಾ ಬೈಕ್ ಜಾಥಾ ನಡೆಸಲಾಯಿತು.ಈ ರ‍್ಯಾಲಿಯನ್ನು ವಿಧಾನ ಪರಿಷತ್ ಸದಸ್ಯರಾದ ಸಿ.ಟಿ ರವಿ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷರಾದ ಎಂ.ಆರ್ ದೇವರಾಜ್ ಶೆಟ್ಟಿ ಅವರು ಉದ್ಘಾಟಿಸಿದರು.

ಶ್ರೀಮಠದ ಆನೆಗಳಾದ ಶ್ರೀಲಕ್ಷ್ಮೀ, ಜಯಲಕ್ಷ್ಮೀ ಪಥ ಸಂಚಲನ

ಶೃಂಗೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಹಶೀಲ್ದಾರ್‌ರವರು ಧ್ವಜಾರೋಹಣ ನಡೆಸಿದರು. ನಂತರ ನಡೆದ ಮೆರವಣಿಗೆಯಲ್ಲಿ ಶ್ರೀಮಠದ ಆನೆಗಳಾದ ಶ್ರೀಲಕ್ಷ್ಮೀ, ಜಯಲಕ್ಷ್ಮೀ ಪಾಲ್ಗೊಂಡಿದ್ದು ಮೆರವಣಿಗೆಯ ಆಕರ್ಷಣೆ ಹೆಚ್ಚಿಸಿತ್ತು. ಶೃಂಗೇರಿಗೆ ಸುಪ್ರೀಂ ಕೋರ್ಟ್ ಮುಖ್ಯನ್ಯಾಯ ಮೂರ್ತಿಗಳು ಆಗಮಿಸಿ ತಾಲೂಕು ನ್ಯಾಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಧ್ವಜಾರೋಹಣ ನಡೆಸಿದರು ನಂತರ ಶ್ರೀಶಾರದಾ ಪೀಠಕ್ಕೆ ಭೇಟಿ ನೀಡಿ ತಾಯಿ ಶಾರದೆ ಹಾಗೂ ಉಭಯ ಜಗದ್ಗುರುಗಳ ದರ್ಶನ ಪಡೆದರು.

ಜಯಪುರದ ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಧ್ವಜಾರೋಹಣ

ಜಯಪುರ: ಕೊಪ್ಪ ತಾಲೂಕಿನ ಜಯಪುರದ ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಧ್ವಜಾರೋಹಣ ನಡೆಸಲಾಯಿತು. ಬಿಜಿಎಸ್ ಸಮೂಹ ಶಿಕ್ಷಣ ಸಂಸ್ಥೆ ಜಯಪುರದ ಗೌರವ ಕಾರ್ಯದರ್ಶಿಗಳದಾದ ಶ್ರೀವಜ್ರಪ್ಪ ರವರು ಧ್ವಜಾರೋಹಣ ನರವೇರಿಸಿದರು. ಪ್ರಾಂಶುಪಾಲರಾದ ಶ್ರೀಮುಷ್ತಾಕ್ ಅಹಮ್ಮದ್, ಸಂಸ್ಥೆಯ ಶಿಕ್ಷಕ ವರ್ಗ,ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕೊಪ್ಪ ಪಟ್ಟಣದಲ್ಲಿ ಧ್ವಜಾರೋಹಣ

ಕೊಪ್ಪ ಪಟ್ಟಣದಲ್ಲಿ ತಹಶೀಲ್ದಾರಿಂದ ಧ್ವಜಾರೋಹಣ ನೆರವೇರಿತು.
ಪಟ್ಟಣದ ಬಿಜೆಪಿ ಕಛೇರಿಯಲ್ಲಿ ತಾಲೂಕು ಅಧ್ಯಕ್ಷರ ದಿನೇಶ್ ಹೊಸೂರು‌ರವರು ಧ್ವಜಾರೋಹಣ ನೆರವೇರಿಸಿದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.