Author: Nammur Express Admin

ಟಾಪ್ 4 ನ್ಯೂಸ್ ಮಲ್ನಾಡ್ ತೀರ್ಥಹಳ್ಳಿ : ಆ.19 ತೀರ್ಥಹಳ್ಳಿಯಲ್ಲಿ ಬೃಹತ್ ಪ್ರತಿಭಟನೆ – ಶಿವಮೊಗ್ಗ : ಹೋಮ್ ಗಾರ್ಡ ರೈಲಿಗೆ ಬಿದ್ದು ಆತ್ಮಹತ್ಯೆ – ಸಾಗರ: ಕುಡಿದು ವಾಹನ ಚಾಲನೆ, 24 ಸಾವಿರ ರೂ. ದಂಡ – ಶಿವಮೊಗ್ಗ : ಜಿಂಕೆ ಶಿಕಾರಿ ಐವರು ಸೆರೆ NAMMUR EXPRESS NEWS ತೀರ್ಥಹಳ್ಳಿ: ಈಗಾಗಲೇ ಅರಣ್ಯ ಒತ್ತುವರಿ ತೆರವು ಬಗ್ಗೆ ನಾವೆಲ್ಲರೂ ಸಭೆ ನಡೆಸಿದ್ದೇವೆ. ಅದೊಂದು ಅವೈಜ್ಞಾನಿಕ ಒತ್ತುವರಿ ತೆರವು ಪ್ರಕ್ರಿಯೆ ಆಗಿದೆ. ಈ ಕಾರಣಕ್ಕೆ ಆಗಸ್ಟ್ 19 ಕ್ಕೆ ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ ಎಂದು ರೈತ ಸಂಘದ ಮುಖಂಡರಾದ ಕಂಬಳಿಗೆರೆ ರಾಜೇಂದ್ರ ತಿಳಿಸಿದರು. ಅವೈಜ್ಞಾನಿಕ ಒತ್ತುವರಿ ತೆರವು ಖಂಡಿಸಿ 19 ರಂದು ಪಕ್ಷಾತೀತವಾಗಿ ಪ್ರತಿಭಟನೆ ನಡೆಯಲಿದೆ. ಈ ಪ್ರತಿಭಟನೆಗೆ ರೈತ ಸಂಘ, ಸಮಾನ ಮನಸ್ಕರು, ಕರ್ನಾಟಕ ರಕ್ಷಣಾ ವೇದಿಕೆ, ದಲಿತ ಸಂಘರ್ಷ ಸಮಿತಿ ಸೇರಿ ಹಲವು ಸಂಘಟನೆಗಳು ಭಾಗಿಯಾಗಲಿವೆ ಎಂದರು. ತೀರ್ಥಹಳ್ಳಿಯ ವಿಚಾರಗಳನ್ನು ರಾಜ್ಯದ ಪ್ರತಿಯೊಬ್ಬರು ಗಮನವಿಟ್ಟು ನೋಡುತ್ತಾರೆ. ಹಗಾಗಿ…

Read More

ಶಾಲಾ ಮಕ್ಕಳಿಗೆ ಸಮವಸ್ತ್ರ ನೀಡಿದ ಸದ್ಗುರು ಆಯುರ್ವೇದ ಸಂಸ್ಥೆ – ಹೊಸದುರ್ಗ ತಾಲ್ಲೂಕಿನ ಹಾಗಲಕೆರೆ ಶಾಲಾ ಮಕ್ಕಳಿಗೆ ಸಮವಸ್ತ್ರ  – ಸೇವೆ ಮಾಡುವ ಮನೋಭಾವ ಬೆಳೆಸಿಕೊಳ್ಳೋಣ: ಡಿ.ಎಸ್. ಪ್ರದೀಪ್ NAMMUR EXPRESS NEWS  ಹೊಸದುರ್ಗ: ಹೊಸದುರ್ಗ ತಾಲ್ಲೂಕಿನ ಮತ್ತೋಡು ಹೋಬಳಿಯ ಹಾಗಲಕೆರೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಸದ್ಗುರು ಆಯುರ್ವೇದ ಸಂಸ್ಥೆ ವತಿಯಿಂದ ಬುಧವಾರ ಉಚಿತವಾಗಿ ಸಮವಸ್ತ್ರವನ್ನು ಕೊಡುಗೆಯಾಗಿ ನೀಡಲಾಯಿತು. ಇದೇ ಸಂದರ್ಭದಲ್ಲಿ ಸದ್ಗುರು ಆಯುರ್ವೇದ ಸಂಸ್ಥೆಯ ಮಾಲೀಕ ಡಿ.ಎಸ್. ಪ್ರದೀಪ್ ಮಾತನಾಡಿ, ಸೇವೆ ಮಾಡುವ ಕೈಗಳು, ಮಾತನಾಡುವ ತುಟಿಗಳು ಶ್ರೇಷ್ಠ. ಸೇವೆ ಮಾಡುವ ಮನೋಭಾವನೆಯನ್ನು ಭಾರತೀಯರಾದ ನಾವು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು. ಅಂಬೇಡ್ಕರ್, ಗಾಂಧೀಜಿ ಇನ್ನಿತರ ಮಹಾತ್ಮರು ಹೇಳಿದಂತೆ ಆಧುನಿಕ ಜತ್ತಿನಲ್ಲಿ ಪ್ರಗತಿ ಕಾಣಲು ಶಿಕ್ಷಣವೇ ದೊಡ್ಡ ಅಸ್ತ್ರ. ನಾವು ಓದುವ ರಾಮಾಯಣ, ಮಹಾಭಾರತ ಹಾಗೂ ಇತರ ಗ್ರಂಥಗಳು ನಮ್ಮಲ್ಲಿ ಸಂಸ್ಕಾರ ಬೆಳೆಸಬೇಕು. ಆಗ ಓದಿದ್ದಕ್ಕೂ ಸಾರ್ಥಕವಾಗುತ್ತದೆ ಎಂಬುದನ್ನು ಮನವರಿಕೆ ಮಾಡಿದರು. ಕೆಲವು ಗ್ರಾಮಗಳಲ್ಲಿ ತಮ್ಮ ಮಕ್ಕಳು ವಿದ್ಯಾಭ್ಯಾಸ ಮಾಡುವ…

Read More

ಜಯ ಹೇ ಭಾರತ ಮಾತೆ..! – 78ನೇ ಸ್ವಾತಂತ್ರ್ಯ ಹಬ್ಬಕ್ಕೆ ದೇಶ ಸಜ್ಜು – ದೇಶ ಪ್ರೇಮದ ದಿನವನ್ನು ಆಚರಿಸೋಣ NAMMUR EXPRESS NEWS ಭಾರತವು ಆಗಸ್ಟ್ 15ರ 78ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ಸಜ್ಜಾಗುತ್ತಿದೆ. ಸ್ವಾತಂತ್ರ್ಯ ದಿನಾಚರಣೆಯ ರಂಗು ಎಲ್ಲೆಡೆಯೂ ಬೀರಿ, ಸಡಗರ ಸಂಭ್ರಮದಿಂದ ಆಚರಣೆಯ ತಯಾರಿ ಜರುಗುತ್ತಿದೆ. 78ನೇ ಸ್ವಾತಂತ್ರ್ಯ ದಿನಾಚರಣೆಯ ಈ ಸಂದರ್ಭದಲ್ಲಿ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಸ್ವಾತಂತ್ರ್ಯ ಸಂಗ್ರಾಮದ ಅಂದಿನ ಚಿತ್ರಣ ನಮ್ಮ ಮುಂದೆ ಬರುತ್ತದೆ .ದೇಶವನ್ನು ಪ್ರೀತಿಸುತ್ತಿದ್ದ ಜನರು ,ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸಾವಿರಾರು ಜನರ ಹೆಸರು ,ತ್ಯಾಗ ,ದೇಶಭಕ್ತಿ ,ದೇಶಪ್ರೇಮ ನಮ್ಮ ಕಣ್ಣ ಮುಂದೆ ಹಾದು ಹೋಗುತ್ತದೆ. ನಮ್ಮ ದೇಶದ ಸಾರ್ವಭೌಮತೆಯನ್ನು ಎತ್ತಿ ಹಿಡಿಯುವುದೇ ಸ್ವಾತಂತ್ರ್ಯವಾಗಿದ್ದು ,ಈ ಸ್ವಾತಂತ್ರ್ಯ ದಿನಾಚರಣೆ ಕೇವಲ ಒಂದು ದಿನದ ಆಚರಣೆಗೆ ಸೀಮಿತವಾಗದೆ ಬ್ರಿಟಿಷರ ಆಳ್ವಿಕೆಯಿಂದ ಹೊರ ಬಂದು ಪೂರ್ಣ ಸ್ವರಾಜ್ಯ ದೇಶವನ್ನು ನಿರ್ಮಿಸಿದ ಲಕ್ಷಾಂತರ ಹೋರಾಟಗಾರರ ಶ್ರಮ, ಬಲಿದಾನದ ಮಹತ್ವವನ್ನು ಪ್ರತಿಕ್ಣ, ಪ್ರತಿದಿನವೂ ಭಾರತದ ಪ್ರಜೆಗಳಾದ…

Read More

ಸ್ವಾತಂತ್ರ್ಯ ಸಂಭ್ರಮ: ನೃತ್ಯ ಹಾಗೂ ನೃತ್ಯ ರೂಪಕ ಸ್ಪರ್ಧೆ – ಕಾರ್ಗಿಲ್ ವಿಜಯೋತ್ಸವದ ರಜತ ಮಹೋತ್ಸವ ಕಾರ್ಯಕ್ರಮ – ಪ್ರಾಥಮಿಕ / ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ನೃತ್ಯ ಹಾಗೂ ನೃತ್ಯ ರೂಪಕ ಸ್ಪರ್ಧೆ NAMMUR EXPRESS NEWS ರೋಟರಿ ಕ್ಲಬ್, ತೀರ್ಥಹಳ್ಳಿ ಇವರ ಸಹಯೋಗದಲ್ಲಿ ಆಟೋರಿಕ್ಷಾ ಚಾಲಕರ ಮತ್ತು ಮಾಲೀಕರ ಸಂಘ, ತೀರ್ಥಹಳ್ಳಿ, ನ್ಯಾಷನಲ್ ಗೋಲ್ಡ್ & ಡೈಮಂಡ್, ತೀರ್ಥಹಳ್ಳಿ ಗಾಯತ್ರಿ ಜ್ಯುವೆಲ್ಲರ್ಸ್, ತೀರ್ಥಹಳ್ಳಿ, ಮಲ್ನಾಡ್ ಕ್ಲಬ್‌, ತೀರ್ಥಹಳ್ಳಿ ಟಿ.ಎಸ್.ಟಿ ಹೈಪರ್ ಮಾರ್ಟ್, ತೀರ್ಥಹಳ್ಳಿ, ಸಪ್ತಸಿರಿ ಚಿಟ್ ಫಂಡ್ಸ್, ತೀರ್ಥಹಳ್ಳಿ, ಎಸ್.ಪಿ ಕೇಟರರ್ಸ್, ರಥಬೀದಿ, ತೀರ್ಥಹಳ್ಳಿ, ಬಳಗಟ್ಟೆ ಗ್ರೀನ್ಸ್ ನೇತೃತ್ವದಲ್ಲಿ 78 ನೇ ಸ್ವಾತಂತ್ರೋತ್ಸವದ ಅಂಗವಾಗಿ ತೀರ್ಥಹಳ್ಳಿ ಪಟ್ಟಣ ವ್ಯಾಪ್ತಿಯ ಪ್ರಾಥಮಿಕ / ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ನೃತ್ಯ ಹಾಗೂ ನೃತ್ಯ ರೂಪಕ ಸ್ಪರ್ಧೆ ಹಾಗೂ ಕಾರ್ಗಿಲ್ ವಿಜಯೋತ್ಸವದ ರಜತ ಮಹೋತ್ಸವ ಕಾರ್ಯಕ್ರಮ ದಿನಾಂಕ : 15.08.2024, ಸಮಯ: ಸಂಜೆ 5.30, ಸ್ಥಳ: ಗೋಪಾಲ ಗೌಡ ರಂಗಮಂದಿರ, ಸೊಪ್ಪುಗುಡ್ಡೆ, ತೀರ್ಥಹಳ್ಳಿ ಈ ಕಾರ್ಯಕ್ರಮ ನೆರವೇರಲಿದೆ.…

Read More

ತೀರ್ಥಹಳ್ಳಿ ಪ್ರಮುಖ ರಸ್ತೆಗಳೇ ಹೊಂಡ ಗುಂಡಿ.! – ಸಾರ್ವಜನಿಕರ ಗೋಳು ಕೇಳೋರು ಯಾರು? – ಸಂಬಂಧಪಟ್ಟ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುವರೆ.? NAMMUR EXPRESS NEWS ತೀರ್ಥಹಳ್ಳಿ : ತೀರ್ಥಹಳ್ಳಿ ಪಟ್ಟಣದ ಪ್ರಮುಖ ರಸ್ತೆಗಳಾದ ಸೀಬಿನಕೆರೆ, ಸೊಪ್ಪುಗುಡ್ಡೆ ರಸ್ತೆ, ಗಾಂಧಿನಗರ ಸೇರಿದಂತೆ ಹಲವೆಡೆ ರಸ್ತೆಗಳು ಹೊಂಡ ಗುಂಡಿ ಬಿದ್ದಿವೆ. ಇದರಿಂದ ವಾಹನ ಸವಾರರಿಗೆ ಪಟ್ಟಣದಲ್ಲಿ ಓಡಾಡಲು ತೊಂದರೆ ಉಂಟಾಗುತ್ತಿದೆ. ಆದರೂ ಕೂಡ ಸಂಬಂಧ ಪಟ್ಟ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ. ಅಪ್ಪಿ ತಪ್ಪಿ ವಾಹನ ಸವಾರರು ರಸ್ತೆಯಿಂದ ಕೆಳಗೆ ವಾಹನಗಳನ್ನು ಇಳಿಸಿದರೆ ಅದೊ ಗತಿ ಎಂಬಂತಾಗಿದೆ. ಪಟ್ಟಣದ ಪ್ರಮುಖ ರಸ್ತೆಗಳಲ್ಲಿಯೇ ಹೊಂಡ ಗುಂಡಿಗಳು ಬಿದ್ದಿವೆ ಮಳೆಗಾಲದಲ್ಲಂತೂ ಈ ಭಾಗಗಳಲ್ಲಿ ಪಾದಚರಿಗಳಿಗೂ ಕೂಡ ಓಡಾಡುವುದು ಬಹಳ ಕಷ್ಟ. ಇದರಿಂದ ನಾಗರೀಕರು ರಸ್ತೆಯಲ್ಲಿ ಹಿಡಿ ಶಾಪ ಹಾಕುತ್ತಾ ಓಡಾಡುವಂತಹ ಸ್ಥಿತಿಗೆ ತಲುಪಿದೆ . ಪಟ್ಟಣ ಪಂಚಾಯತ್ ವಾರ್ಡ್ ಗಳ ರಸ್ತೆಗಳ ಸ್ಥಿತಿಯಂತೂ ಅದೋಗತಿ ಎಂಬಂತಾಗಿದೆ. ಹೊಂಡ ಮಯ ರಸ್ತೆಗಳಿಂದಾಗಿ ನಿತ್ಯ…

Read More

ತೀರ್ಥಹಳ್ಳಿಯ ಗಿರೀಶ್ ಅವರಿಗೆ ರಾಷ್ಟ್ರ ಪತಿಗಳ ಚಿನ್ನದ ಪದಕ – ದೇಶದ ಅತ್ಯುತ್ತಮ ಗೌರವಕ್ಕೆ ಭಾಜನರಾದ ಚಂದಕಮಕ್ಕಿ ಗಿರೀಶ್ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ಚಂದಕಮಕ್ಕಿ ಮೂಲದ ಡೆಪ್ಯೂಟಿ ಎಸ್ಪಿ ಗಿರೀಶ್ ಅವರಿಗೆ ರಾಷ್ಟ್ರ ಪತಿಗಳ ಚಿನ್ನದ ಪದಕ ಲಭಿಸಿದೆ. ದೇಶದ ಅತ್ಯುತ್ತಮ ಗೌರವ ಆಗಿರುವ ರಾಷ್ಟ್ರಪತಿ ಚಿನ್ನದ ಪದಕ ಪಡೆದ ಅವರಿಗೆ ತೀರ್ಥಹಳ್ಳಿಯ ಅವರ ಸ್ನೇಹಿತರು ಶುಭಾಶಯ ಸಲ್ಲಿಸಿದ್ದಾರೆ. ಕೃಷ್ಣಮೂರ್ತಿ ಮತ್ತು ನಾಗರತ್ನ ದಂಪತಿಗಳ ಪುತ್ರ. ತೀರ್ಥಹಳ್ಳಿ ತುಂಗಾ ಮಹಾವಿದ್ಯಾಲಯದಲ್ಲಿ ಡಿಗ್ರಿ ಅಧ್ಯಯನ ಮಾಡಿ ಬಳಿಕ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಇದೀಗ ಡಿಎಸ್ಪಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

Read More

ಹಿಂದೂಗಳ ಮೇಲೆ ದೌರ್ಜನ್ಯಕ್ಕೆ ಹೋರಾಟದ ಕಿಚ್ಚು! – ತೀರ್ಥಹಳ್ಳಿಯಲ್ಲಿ ಹಿಂದೂ ಕಾರ್ಯಕರ್ತರ ಮೌನ ಮೆರವಣಿಗೆ – ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ಪ್ರತಿಭಟನೆ NAMMUR EXPRESS NEWS ತೀರ್ಥಹಳ್ಳಿ: ಬಾಂಗ್ಲಾದೇಶದ ಆಮಾಯಕ ಹಿಂದುಗಳ ಕೊಲೆ ಅತ್ಯಾಚಾರ ಹಾಗೂ ಹಿಂದು ಮಂದಿರಗಳನ್ನು ಹಾಳು ಮಾಡುವುದನ್ನು ತಡೆಯುವ ಬಗ್ಗೆ ಹಿಂದೂ ಕಾರ್ಯಕರ್ತರ ಮೌನ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ತೀರ್ಥಹಳ್ಳಿ ಪಟ್ಟಣದಲ್ಲಿ ಮೌನ ಮೆರವಣಿಗೆ ನಡೆಸಲಾಯಿತು. ಮೆರವಣಿಗೆ ನಡೆಸಿದ ಬಳಿಕ ತಾಲೂಕ್ ಆಫೀಸ್ ಆವರಣದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಆರಗ ಜ್ಞಾನೇಂದ್ರ,ಬಾಂಗ್ಲಾದೇಶದ ಹಿಂದುಗಳ ಮೇಲೆ ನಡೆಯುವಂತ ಹತ್ಯೆ ಮತ್ತು ದೌರ್ಜನ್ಯದ ವಿರುದ್ಧ ನಮ್ಮ ಭಾರತ ಸರ್ಕಾರ ಕ್ರಮ ಕೈಗೊಳ್ಳುವಂತಾಗಬೇಕು. ನಮ್ಮಲ್ಲಿ ಸೆಕ್ಯುಲರ್ ಗಳು ಯಾರು ಇದರ ವಿರುದ್ಧ ದನಿಯ ಎತ್ತುವುದಿಲ್ಲ, ಮತ್ತು 70ರ ದಶಕದಲ್ಲಿ ಪಾಕಿಸ್ತಾನ ಬಾಂಗ್ಲಾದೇಶಕ್ಕೆ ಮಿಲಿಟರಿನ ನುಗ್ಗಿಸಿ ರಕ್ತಪಾತ ಮಾಡಿದ್ದು ಆ ಸಮಯದಲ್ಲಿ ಭಾರತ ಮಧ್ಯ ಪ್ರವೇಶಿಸಿ ಗಲಭೆಯನ್ನು ನಿ್ಲಿಸಿದ್ದು, ಆದರೆ ಬಾಂಗ್ಲಾ ಆ…

Read More

ಕರಾವಳಿ ಟಾಪ್ ನ್ಯೂಸ್ ಉಡುಪಿ ವೈದ್ಯರೊಬ್ಬರಿಗೆ 1.33 ಕೋಟಿ ವಂಚನೆ: ದೂರು ದಾಖಲು – ಕಸ್ಟಮ್ಸ್ ಅಧಿಕಾರಿಗಳ ಹೆಸರಲ್ಲಿ ವಂಚನೆ: ದುಡ್ಡು ಕಳೆದುಕೊಂಡಿದ್ದು ಹೇಗೆ? – ಮೂಡುಬಿದರೆ: ಕಡಂದಲೆ ಶಾಂಭವಿ ನದಿಯಲ್ಲಿ ದನದ ತಲೆಗಳು ಪತ್ತೆ! – ಮಂಗಳೂರು: ಅಬುಧಾಬಿಯಲ್ಲಿ ಕಟ್ಟಡದಿಂದ ಬಿದ್ದು ಮೃತ್ಯು – ಕಡಬ: ರಸ್ತೆ ದಾಟಲು ನಿಂತಿದ್ದ ವ್ಯಕ್ತಿಗೆ ಸ್ಕೂಟ‌ರ್ ಡಿಕ್ಕಿ: ವ್ಯಕ್ತಿ ಸಾವು NAMMUR EXPRESS NEWS ಉಡುಪಿ: ಮುಂಬೈಯ ಕಸ್ಟಮ್ ಅಧಿಕಾರಿಗಳ ಹೆಸರಿನಲ್ಲಿ ವೈದ್ಯರೊಬ್ಬರಿಗೆ ಕೋಟ್ಯಂತರ ರೂ. ಪಂಗನಾಮ ಹಾಕಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿಯ ವೈದ್ಯರಾಗಿರುವ ಡಾ.ಅರುಣ್ ಕುಮಾರ್ (53) ಹಣ ಕಳೆದುಕೊಂಡ ವ್ಯಕ್ತಿ. ಈ ಬಗ್ಗೆ ಉಡುಪಿ ಸೆನ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜು.29ರಂದು ಡಾ. ಅರುಣ್ ಅವರಿಗೆ ಅಪರಿಚಿತರು ಕಸ್ಟಮ್ಸ್‌ನಿಂದ ಕರೆ ಮಾಡಿ, ನಿಮ್ಮ ಆಧಾರ್ ನಂಬ್ರ ಬಳಸಿ ಬುಕ್ ಆಗಿರುವ ಕೊರಿಯರ್‌ನಲ್ಲಿ 5 ಪಸ್‌ಪೋರ್ಟ್, 5 ಎಟಿಎಂ ಕಾರ್ಡ್, 200ಗ್ರಾಂ ಎಂಡಿಎಂಎ ಹಾಗೂ 5000 ಯುಎಸ್ ಡಾಲರ್…

Read More

ಒತ್ತುವರಿ ತೆರವು: ಆ.17ರಂದು ಶೃಂಗೇರಿ ಕ್ಷೇತ್ರ ಬಂದ್‌?! – ಒತ್ತುವರಿ ತೆರವು ವಿರುದ್ದ 17ರಂದು ಬೃಹತ್ ಪ್ರತಿಭಟನೆ – ಮಲೆನಾಡು ರೈತ ಹಿತರಕ್ಷಣಾ ವೇದಿಕೆ ಕರೆ: ಬಿಜೆಪಿ, ಜೆಡಿಎಸ್, ಸಂಘಟನೆಗಳ ಸಾಥ್ – ಕೊಪ್ಪದ ಮುಖ್ಯ ಬೀದಿಯಲ್ಲಿ ಪ್ರತಿಭಟನೆ NAMMUR EXPRESS NEWS ಕೊಪ್ಪ: ಮಲೆನಾಡನ್ನು ಕಾಡುತ್ತಿರುವ ಒತ್ತುವರಿ ಸಮಸ್ಯೆ, ಸೆಕ್ಷನ್ 4, ಡೀಮ್ಸ್ ಮತ್ತು ಸೊಪ್ಪಿನಬೆಟ್ಟ ಸಮಸ್ಯೆ, ಕಸ್ತೂರಿ ರಂಗನ್ ವರದಿ, ಪರಿಸರ ಸೂಕ್ಷ್ಮ ವಲಯ ಸೇರಿದಂತೆ ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ವತಿಯಿಂದ ಶೃಂಗೇರಿ ಕ್ಷೇತ್ರ ಬಂದ್‌ಗೆ ಆ.17ರ ಶನಿವಾರದಂದು ಕರೆ ನೀಡಲಾಗಿದೆ ಎಂದು ಸಮಿತಿಯ ಅಧ್ಯಕ್ಷ ನಾಗೇಶ್ ಎಂ.ಎನ್ ತಿಳಿಸಿದ್ದಾರೆ. ಅನಾದಿ ಕಾಲದಿಂದ ಮಲೆನಾಡಲ್ಲಿ ಕಾಡನ್ನು ಪೋಷಿಸಿಕೊಂಡು ಬದುಕು ಕಟ್ಟಿಕೊಂಡು ಬರುತ್ತಿದ್ದ ಜನರಿಗೆ ಸರ್ಕಾರಗಳು ತರುತ್ತಿರುವ ಕಾಯ್ದೆಗಳು ಮುಳುವಾಗುತ್ತಿದೆ. ಈ ಕಾರಣಗಳಿಂದ ಶೃಂಗೇರಿ ವಿಧಾನ ಸಭಾ ಕ್ಷೇತ್ರದ ಕೊಪ್ಪ, ಎನ್.ಆರ್.ಪುರ, ಶೃಂಗೇರಿ, ಜಯಪುರ, ಬಾಳೆಹೊನ್ನೂರು ಭಾಗದಲ್ಲಿ ಸ್ವಯಂ ಪ್ರೇರಿತವಾಗಿ ಬಂದ್ ಮಾಡಲಾಗುತ್ತದೆ.…

Read More