Categories
ತೀರ್ಥಹಳ್ಳಿ

ತೀರ್ಥಹಳ್ಳಿ ಪ್ರಮುಖ ರಸ್ತೆಗಳೇ ಹೊಂಡ ಗುಂಡಿ.!

ತೀರ್ಥಹಳ್ಳಿ ಪ್ರಮುಖ ರಸ್ತೆಗಳೇ ಹೊಂಡ ಗುಂಡಿ.!
– ಸಾರ್ವಜನಿಕರ ಗೋಳು ಕೇಳೋರು ಯಾರು?
– ಸಂಬಂಧಪಟ್ಟ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುವರೆ.?

NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿ ಪಟ್ಟಣದ ಪ್ರಮುಖ ರಸ್ತೆಗಳಾದ ಸೀಬಿನಕೆರೆ, ಸೊಪ್ಪುಗುಡ್ಡೆ ರಸ್ತೆ, ಗಾಂಧಿನಗರ ಸೇರಿದಂತೆ ಹಲವೆಡೆ ರಸ್ತೆಗಳು ಹೊಂಡ ಗುಂಡಿ ಬಿದ್ದಿವೆ. ಇದರಿಂದ ವಾಹನ ಸವಾರರಿಗೆ ಪಟ್ಟಣದಲ್ಲಿ ಓಡಾಡಲು ತೊಂದರೆ ಉಂಟಾಗುತ್ತಿದೆ. ಆದರೂ ಕೂಡ ಸಂಬಂಧ ಪಟ್ಟ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ. ಅಪ್ಪಿ ತಪ್ಪಿ ವಾಹನ ಸವಾರರು ರಸ್ತೆಯಿಂದ ಕೆಳಗೆ ವಾಹನಗಳನ್ನು ಇಳಿಸಿದರೆ ಅದೊ ಗತಿ ಎಂಬಂತಾಗಿದೆ.
ಪಟ್ಟಣದ ಪ್ರಮುಖ ರಸ್ತೆಗಳಲ್ಲಿಯೇ ಹೊಂಡ ಗುಂಡಿಗಳು ಬಿದ್ದಿವೆ ಮಳೆಗಾಲದಲ್ಲಂತೂ ಈ ಭಾಗಗಳಲ್ಲಿ ಪಾದಚರಿಗಳಿಗೂ ಕೂಡ ಓಡಾಡುವುದು ಬಹಳ ಕಷ್ಟ. ಇದರಿಂದ ನಾಗರೀಕರು ರಸ್ತೆಯಲ್ಲಿ ಹಿಡಿ ಶಾಪ ಹಾಕುತ್ತಾ ಓಡಾಡುವಂತಹ ಸ್ಥಿತಿಗೆ ತಲುಪಿದೆ . ಪಟ್ಟಣ ಪಂಚಾಯತ್ ವಾರ್ಡ್ ಗಳ ರಸ್ತೆಗಳ ಸ್ಥಿತಿಯಂತೂ ಅದೋಗತಿ ಎಂಬಂತಾಗಿದೆ. ಹೊಂಡ ಮಯ ರಸ್ತೆಗಳಿಂದಾಗಿ ನಿತ್ಯ ಪಟ್ಟಣದಲ್ಲಿ ಓಡಾಡುವ ಸಾರ್ವಜನಿಕರು ಯಾತನೆ ಅನುಭವಿಸುತ್ತಿದ್ದಾರೆ. ಇನ್ನು ಲಾರಿಗಳಂತ ದೊಡ್ಡ ವಾಹನಗಳಂತೂ ಸಂಚರಿಸುವುದು ಹರಸಾಹಸವಾಗಿಬಿಟ್ಟಿದೆ. ಆದ್ದರಿಂದ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ರಸ್ತೆಗಳ ದುಸ್ಥಿತಿಯನ್ನು ಗಮನಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.