ಈ ದಿನದ ರಾಶಿ ಭವಿಷ್ಯ ಹೇಗಿದೆ? – ಶಿವ ಕೃಪೆಯಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಇಂದು ಅತ್ಯಂತ ಶುಭ ದಿನವಾಗಿರುತ್ತದೆ. ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ನಿಮ್ಮ ಕೆಲಸದಲ್ಲಿ ಉತ್ತಮ ಫಲಿತಾಂಶಗಳನ್ನು ನೀವು ಪಡೆಯುತ್ತೀರಿ. ಆದರೂ, ನೀವು ಕೆಲಸದ ನಿಮಿತ್ತ ಇದ್ದಕ್ಕಿದ್ದಂತೆ ಪ್ರಯಾಣಿಸಬೇಕಾಗಬಹುದು. ಪಾಲುದಾರಿಕೆ ವ್ಯವಹಾರದಲ್ಲಿ ಯಾರನ್ನೂ ಕುರುಡಾಗಿ ನಂಬಬೇಡಿ. ವಿಶೇಷ ಸ್ನೇಹಿತರ ಸಹಾಯದಿಂದ, ನೀವು ಹಣಕಾಸಿನ ಮುಗ್ಗಟ್ಟುಗಳಿಂದ ಪರಿಹಾರವನ್ನು ಪಡೆಯುತ್ತೀರಿ. ** ವೃಷಭ ರಾಶಿ : ಜನರು ಇಂದು ಯಶಸ್ಸನ್ನು ಸಾಧಿಸಲು ಹೆಚ್ಚು ಶ್ರಮಿಸಬೇಕಾಗುತ್ತದೆ. ಕೆಲಸದ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಯಶಸ್ವಿಯಾಗುತ್ತವೆ. ಸಂವಾದದ ಮೂಲಕ ಕುಟುಂಬದಲ್ಲಿ ಉದ್ಭವಿಸುವ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿ. ** ಮಿಥುನ…
Author: Nammur Express Admin
ಮಾನವೀಯತೆಗೆ ಸಾಕ್ಷಿಯಾದ ಶೃಂಗೇರಿ ಸಹಾಯ ಹಸ್ತ ತಂಡ! – ವಾಟ್ಸಪ್ ಗ್ರೂಪ್ ಮೂಲಕ ಕಷ್ಟದಲ್ಲಿರುವವರಿಗೆ ಸ್ಪಂದನೆ – ಪ್ರತಿ ತಿಂಗಳ ತಮ್ಮ ಉಳಿತಾಯದಲ್ಲಿ 200/-ರೂ.ಉಳಿಸಿ ಸೇವೆ NAMMUR EXPRESS NEWS ಶೃಂಗೇರಿ: ಆರೋಗ್ಯ ಸಮಸ್ಯೆಯಿಂದ ಕಷ್ಟದಲ್ಲಿರುವ ಬಡ ಕುಟುಂಬಗಳಿಗೆ ಕೈಲಾದ ಸಹಾಯ ಮಾಡುವ ನಿಟ್ಟಿನಲ್ಲಿ 20-30 ಜನ ಸಮಾನ ಮನಸ್ಕರು ಸೇರಿ ಶುರುಮಾಡಿದ ವಾಟ್ಸ್ ಆಪ್ ತಂಡ ಶೃಂಗೇರಿ ಸಹಾಯ ಹಸ್ತ ತಂಡ ಈಗ ಮಾನವೀಯ ಮುಖಕ್ಕೆ ಸಾಕ್ಷಿಯಾಗಿದೆ. ತಂಡದಲ್ಲಿರುವ ಪ್ರತಿ ತಿಂಗಳ ತಮ್ಮ ಉಳಿತಾಯದಲ್ಲಿ 200/-ರೂ.ಗಳನ್ನು ಒಂದು ಅಕೌಂಟ್‌ಗೆ ಒಗ್ಗೂಡಿಸಿ ಹಣ ಒಟ್ಟುಗೂಡಿಸಲಾಗುತ್ತದೆ. ತುರ್ತು ಚಿಕಿತ್ಸೆ, ಅರೋಗ್ಯ ಕಾರಣಕ್ಕಾಗಿ ಆರ್ಥಿಕ ಸಹಾಯಕ್ಕೆ ಮನವಿ ಬಂದ ಶೃಂಗೇರಿ ತಾಲೂಕಿನ ಅರ್ಹ ಬಡ ಕುಟುಂಬಕ್ಕೆ ಕೈಲಾದಷ್ಟು ಧನ ಸಹಾಯ ಮಾಡುವ ಈ ತಂಡ ಈಗ ಮತ್ತಷ್ಟು ಜನರಿಗೆ ಸಹಕಾರ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಫೆಬ್ರವರಿಯಿಂದ ಈ ತಂಡ ತನ್ನ ಕಾರ್ಯ ಶುರು ಮಾಡಿದ್ದು ಇಲ್ಲಿಯವರೆಗೆ 7-8 ಅಶಕ್ತ ಕುಟುಂಬಗಳ ಆರೋಗ್ಯ ಸಮಸ್ಯೆಗೆ ನೆರವಾಗಿ ಸಹಕರಿಸಿದೆ.…
ತೀರ್ಥಹಳ್ಳಿಯಲ್ಲಿ ಸಂಭ್ರಮದ ನಾಗರ ಪಂಚಮಿ! – ರಾಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ – ಅನ್ನದಾನ ಸಮಿತಿಯಿಂದ 600 ಮಂದಿಗೆ ಊಟ – ನಂಟೂರು, ಆರಗ, ರಾಮನ ಸರ, ಹಡ್ಸೆ ಸೇರಿ ಹಲವೆಡೆ ಪೂಜೆ NAMMUR EXPRESS NEWS ತೀರ್ಥಹಳ್ಳಿ: ನಾಗರ ಪಂಚಮಿಯಂದು ತೀರ್ಥಹಳ್ಳಿ ತಾಲೂಕಿನ ಪಟ್ಟಣದ ರಾಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು. ಅಲ್ಲಿನ ನಾಗರ ಕಲ್ಲಿಗೆ ಪೂಜೆ ನಡೆಯಿತು. ಸಾವಿರಾರು ಭಕ್ತರು ಭಾಗವಹಿಸಿದ್ದರು. ಎಲ್ಲಾ ಕಡೆ ನಾಗರ ಕಲ್ಲಿಗೆ ಪೂಜೆ ಪುನಸ್ಕಾರಗಳು ನಡೆದವು. ಇನ್ನು ತೀರ್ಥಹಳ್ಳಿ ತಾಲೂಕಿನ ಪ್ರಸಿದ್ಧ ದೇವಾಲಯಗಳಾದ ನಂಟೂರು, ಆರಗ ಅಗ್ರಹಾರ, ಹಡ್ಸೆ, ರಾಮನ ಸರ ಸೇರಿ ಬಹುತೇಕ ನಾಗ ದೇವಾಲಯಗಳಲ್ಲಿ ಪೂಜೆ ನಡೆಯಿತು. 600ಕ್ಕೂ ಹೆಚ್ಚು ಮಂದಿಗೆ ಅನ್ನದಾನ ಸೇವ ಶ್ರೀ ರಾಮೇಶ್ವರ ದೇವರ ನಿತ್ಯ ಅನ್ನ ಸಂತರ್ಪಣಾ ಮತ್ತು ಧಾರ್ಮಿಕ ಸೇವಾ ಸಮಿತಿಯು ನಾಗರ ಪಂಚಮಿಯಂದು ದಾನಿಗಳ ಸಹಾಯದಿಂದ 600ಕ್ಕೂ ಹೆಚ್ಚು ಮಂದಿಗೆ ಅನ್ನದಾನ ಮಾಡಿತು. ಕಷ್ಟದ ನಡುವೆ ಸೇವೆ ಮಾಡುತ್ತಿರುವ ಸೇವಾಕರ್ತರಿಗೆ ಇನ್ನಷ್ಟು…
ವಿದ್ಯಾರ್ಥಿನಿ ಮೇಲೆ ಬೀದಿ ನಾಯಿಗಳ ಗ್ಯಾಂಗ್ ಅಟ್ಯಾಕ್! – ಉಡುಪಿ ಭಾಗದಲ್ಲಿ ಹೆಚ್ಚಾದ ಬೀದಿ ನಾಯಿಗಳ ಕಾಟ – ಕುಕ್ಕೆ ಲಡ್ಡು ಪ್ರಸಾದದಲ್ಲಿ ರಬ್ಬರ್ ಬ್ಯಾಂಡ್ ಪತ್ತೆ! – ಮಂಗಳೂರಲ್ಲಿ ಲವ್ ಜಿಹಾದ್!?: ಮತಾಂತರಗೊಳಿಸಿ ವಿವಾಹ – ಕುಂದಾಪುರ: ನಿಂತ ಬಸ್ಸಿಗೆ ಲಾರಿ ಡಿಕ್ಕಿ: ಹಲವರಿಗೆ ಗಾಯ – ಕಾರ್ಕಳ: ಓವರ್ ಟೇಕ್ ಭರದಲ್ಲಿ ಕಾರು ಪಲ್ಟಿ! – ಬ್ರಹ್ಮಾವರ: ಕಪ್ಪೆ ಚಿಪ್ಪು ತೆಗೆಯಲು ಹೋದ ವ್ಯಕ್ತಿ ಹೊಳೆ ಪಾಲು! NAMMUR EXPRESS NEWS ಉಡುಪಿ: ಶಾಲಾ ವಿದ್ಯಾರ್ಥಿನಿಯ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದ ಭಯಾನಕ ಘಟನೆ ಉಡುಪಿಯ ಹೂಡೆ ಪರಿಸರದಲ್ಲಿ ನಡೆದಿದೆ.ಬೆಳಿಗ್ಗೆ ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿನಿಯ ಮೇಲೆ ನಾಯಿಗಳು ದಾಳಿ ಮಾಡಿವೆ. ಕೈಯಲ್ಲಿ ಕೊಡೆ ಹಿಡಿದು ನಿಂತಿದ್ದ ವಿದ್ಯಾರ್ಥಿನಿಯತ್ತ ಬೀದಿ ನಾಯಿಗಳು ಒಮ್ಮೇಲೆ ನುಗ್ಗಿ ಬಂದಿವೆ. ನಾಲೈದು ನಾಯಿಗಳು ಒಮ್ಮೆಲೇ ದಾಳಿ ಮಾಡಿದ್ದರಿಂದ ವಿದ್ಯಾರ್ಥಿನಿ ಬೊಬ್ಬೆ ಹಾಕಿದ್ದಾಳೆ. ಬಳಿಕ ಕೈಯಲ್ಲಿದ್ದ ಕೊಡೆಯನ್ನು ಬೀಸಿ, ನಾಯಿಗಳಿಂದ ರಕ್ಷಿಸಿಕೊಂಡು ಬಚಾವಾಗಿದ್ದಾಳೆ.ವಿದ್ಯಾರ್ಥಿನಿಯ ಮೇಲೆ…
ಹೊಸದುರ್ಗದಲ್ಲಿ ಅತೀ ದೊಡ್ಡ ದೇಗುಲ ಉದ್ಘಾಟನೆ – ಶನೇಶ್ವರ ಸ್ವಾಮಿಯ ನೂತನ ದೇವಾಲಯ ಉದ್ಘಾಟನೆ, ಕಳಸಾರೋಹಣ – ಸಾವಿರಾರು ಭಕ್ತರ ಆಗಮನ: ಸ್ವಾಮೀಜಿಗಳ ಸಮಾಗಮ NAMMUR EXPRESS NEWS ಹೊಸದುರ್ಗ: ರಾಜ್ಯದಲ್ಲಿ ಅತಿ ದೊಡ್ಡ ಮೂರನೇ ದೇವಾಲಯ ಶನೇಶ್ವರ ಸ್ವಾಮಿಯ ನೂತನ ದೇವಾಲಯ ಉದ್ಘಾಟನೆ ಹಾಗೂ ಕಳಸಾರೋಹಣ ಕಾರ್ಯಕ್ರಮಕ್ಕೆ ಸಾವಿರಾರು ಮಂದಿ ಭಾಗವಹಿಸಿ , ಸಂಸ್ಕಾರಯುತ ಕಾರ್ಯಗಳನ್ನು ಮಾಡಿದರು. ಹೆಚ್ಚಾಗಿ ಯುವ ಜನತೆ ಈ ಕಾರ್ಯದಲ್ಲಿ ಭಾಗಿಯಾಗಿದ್ದಾರೆಂದು ಬೆಂಗಳೂರಿನ ಮಹರ್ಷಿ ಮಂದಿರ ನವರತ್ನ ಅಗ್ರಹಾರದ ಆನಂದ್ ಗುರೂಜಿ ಸಂತಸ ವ್ಯಕ್ತಪಡಿಸಿದರು. ನಗರದ ಎಪಿಎಂಸಿ ಮುಂಭಾಗ ನಿರ್ಮಿಸಿರುವ ನೂತನ ಶನೇಶ್ವರ ಸ್ವಾಮಿ ದೇವಾಲಯದ ಪ್ರಾರಂಭೋತ್ಸವದ ಧಾರ್ಮಿಕ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಮುಂದಿನ ದಿನಗಳಲ್ಲಿ ಶನೇಶ್ವರ ಸ್ವಾಮಿಗೆ ಭಕ್ತರ ಸಂಖ್ಯೆ ಹೆಚ್ಚಾಗಲಿದೆ, ಆ ಶಕ್ತಿ ಗರ್ಭಗುಡಿಯಲ್ಲಿದೆ. ತಾಲ್ಲೂಕಿನ ಬೆಲಗೂರು ಅನ್ನದಾಸೋಹಕ್ಕೆ ಪ್ರಖ್ಯಾತಿ ಪಡೆದಿದೆ. ಬಿಂದು ಮಾಧವ ಶರ್ಮ ಸ್ವಾಮೀಜಿ ಅವರ ಪ್ರೀತಿಗೆ ಪ್ರತಿಯೊಬ್ಬರು ತಲೆ ಬಾಗಲೇಬೇಕು. ನನಗೆ ಪ್ರಥಮವಾಗಿ ಬೆಳ್ಳಿ ಕಿರೀಟ ಧಾರಣೆ ಮಾಡಿದ್ದು…
ಒತ್ತುವರಿ ತೆರವು ವಿರುದ್ಧ ಸಿಡಿದೆದ್ದ ರೈತ ಸಂಘಟನೆಗಳು! – ಮಲೆನಾಡ ನೈಸರ್ಗಿಕ ಕೃಷಿ ವಿರುದ್ಧ ಸರ್ಕಾರದ ನಿಲುವು – ಮಳೆ ಹಾನಿ ಅವೈಜ್ಞಾನಿಕ ಪರಿಹಾರ ವಿರುದ್ದ ಆಕ್ರೋಶ – ಮಲೆನಾಡಲ್ಲಿ ಜೋರಾಗಲಿದೆ ರೈತ ಹೋರಾಟ?! NAMMUR EXPRESS NEWS ತೀರ್ಥಹಳ್ಳಿ: ಒತ್ತುವರಿ ತೆರವು, ಮಳೆ ಹಾನಿ ಅವೈಜ್ಞಾನಿಕ ಪರಿಹಾರ ಸೇರಿ ಸರ್ಕಾರಗಳ ಧೋರಣೆ ವಿರುದ್ಧ ಇದೀಗ ರೈತರು ಹೋರಾಟಕ್ಕೆ ಮುಂದಾಗಿದ್ದಾರೆ. ‘ಸಮಾನ ಮನಸ್ಕರು’ ಹಾಗೂ ತೀರ್ಥಹಳ್ಳಿ ತಾಲ್ಲೂಕಿನ ಎಲ್ಲಾ ರಾಜಕೀಯ ಪಕ್ಷಗಳ ಮುಂದಾಳುಗಳು, ಕರ್ನಾಟಕ ರಾಜ್ಯ ರೈತ ಸಂಘ: ತೀರ್ಥಹಳ್ಳಿ, ಕರ್ನಾಟಕ ರಕ್ಷಣಾ ವೇದಿಕೆ, ದಲಿತ ಸಂಘರ್ಷ ಸಮಿತಿ, ಮಲೆನಾಡು ಸಂಘರ್ಷ ಕ್ರಿಯಾ ಸಮಿತಿ, ತೀರ್ಥಹಳ್ಳಿ ಇವರ ಸಮಾಲೋಚನಾ ಸಭೆ ತೀರ್ಥಹಳ್ಳಿ ಮಯೂರ ಹೋಟೆಲ್ ಸಭಾಂಗಣ.ದಲ್ಲಿ ಶುಕ್ರವಾರ ನಡೆಯಿತು. ಮಳೆಗಾಲ ಕೇಡುಗಾಲ ತಂದಿದೆ. ಮಳೆಗಾಲ ಇನ್ನೂ ಎರಡು ತಿಂಗಳು ಇರುವುದಾದರು ಈಗಾಗಲೇ ದಾಖಲೆ ಮೀರಿ ಮಳೆ ಸುರಿದು ಭತ್ತ, ಬಾಳೆ, ಅಡಿಕೆ, ಕಾಳುಮೆಣಸು ಮುಂತಾದ ಬೆಳೆಗಳು ನಾಶವಾಗುತ್ತಿವೆ. ಇವುಗಳಿಗೆ ಪರಿಹಾರ ಒದಗಿಸಲು…
ರೈಲ್ವೆ ಹಳಿ ಮೇಲೆ ಉರುಳಿದ ಬಂಡೆಗಳು! – ಹಾಸನ-ಮಂಗಳೂರು ರೈಲು ಮಾರ್ಗದಲ್ಲಿ ಮತ್ತೆ ಭೂಕುಸಿತ – ರೈಲು ಸಂಚಾರ ಸ್ಥಗಿತ: ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ – ಮತ್ತೆ ಮತ್ತೆ ಘಟನೆ: ಪ್ರಕೃತಿಯ ಎಚ್ಚರಿಕೆ ಕರೆಗಂಟೆ NAMMUR EXPRESS NEWS ಸಕಲೇಶಪುರ: ರೈಲ್ವೆ ಹಳಿ ಮೇಲೆ ಮತ್ತೆ ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿತವಾಗಿದ್ದು ಮರಗಳ ಸಮೇತವಾಗಿ ರೈಲ್ವೆ ಹಳಿ ಮೇಲೆ ಮಣ್ಣು ಕುಸಿದಿರುವ ಘಟನೆ ತಾಲೂಕಿನ ಬಾಳ್ಳುಪೇಟೆ ಸಮೀಪ ಕಿಲೋಮೀಟರ್ ಸಂಖ್ಯೆ 42/43 ರ ಮಧ್ಯೆ ನಡೆದಿದ್ದು ಇದರಿಂದ ಹಾಸನ- ಮಂಗಳೂರು ಮಾರ್ಗದ ರೈಲುಗಳ ಸಂಚಾರ ಸ್ಥಗಿತವಾಗಿದೆ. ಶುಕ್ರವಾರ (ಆಗಸ್ಟ್ 9) ಮಧ್ಯರಾತ್ರಿ ಈ ಘಟನೆ ನಡೆದಿದ್ದು ಹಾಸನದಿಂದ ಮಂಗಳೂರಿಗೆ, ಮಂಗಳೂರಿನಿಂದ ಹಾಸನಕ್ಕೆ ತೆರಳುತ್ತಿದ್ದ ರೈಲುಗಳ ಸಂಚಾರ ಸ್ಥಗಿತವಾಗಿದೆ. ಸಕಲೇಶಪುರ, ಯಡಕುಮಾರಿ, ಶಿರವಾಗಿಲು, ಆಲೂರು ಸೇರಿ ಆರು ಕಡೆ ಆರು ರೈಲುಗಳು ನಿಂತಿವೆ. ದಿಢೀರ್ ರೈಲುಗಳು ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಪರದಾಡುವಂತಾಗಿದೆ. ರೈಲುಗಳಲ್ಲಿ ಸಾವಿರಾರು ಪ್ರಯಾಣಿಕರು ಇದ್ದು ಪರ್ಯಾಯ ವಾಹನ ವ್ಯವಸ್ಥೆ ಮಾಡಲಾಯಿತು.ಮಣ್ಣು ತೆರವು…
ಅರಣ್ಯ ಒತ್ತುವರಿ ಇನ್ನು ಸಲೀಸಲ್ಲ: ಒತ್ತುವರಿ ಖಚಿತ! – ತೀರ್ಥಹಳ್ಳಿ ಭಾರತಿಪುರ ಬಳಿ ರೆಸಾರ್ಟ್ ಒತ್ತುವರಿ ಜಾಗ ತೆರವು – ಆಗುಂಬೆ, ಆಯನೂರು, ಮೇಗರವಳ್ಳಿ, ಕುರುವಳ್ಳಿ ಭಾಗದಲ್ಲೂ ತೆರವು – ಗ್ರಾಮ ಮಟ್ಟದಲ್ಲಿ ಅಕ್ರಮ ತೆರವು ಶುರು? NAMMUR EXPRESS NEWS ತೀರ್ಥಹಳ್ಳಿ: ಅಕ್ರಮ ಒತ್ತುವರಿ ತೆರವು ಮುಂದಾಗಿರುವ ಅರಣ್ಯ ಇಲಾಖೆ ಅಧಿಕಾರಿಗಳು ತೀರ್ಥಹಳ್ಳಿ ತಾಲೂಕಿನ ಭಾರತೀಪುರದ ತುಂಗಾ ನದಿ ದಡದಲ್ಲಿರುವ ವಿಹಂಗಮ ಹಾಲಿಡೇ ರೆಸಾರ್ಟ್ ಎಂಬ ಖಾಸಗಿ ರೆಸಾರ್ಟ್ ಸೇರಿದ ಅಂದಾಜು 2.20 ಎಕರೆ ಅಕ್ರಮ ಒತ್ತುವರಿಯನ್ನು ತೆರವುಗೊಳಿಸಿದ್ದಾರೆ. ಇದಲ್ಲದೆ ಹತ್ತಾರು ರೆಸಾರ್ಟ್ ಹಾಗೂ ಹೋಂ ಸ್ಟೇಗಳಿಗೆ ನೋಟಿಸ್ ನೀಡಲಾಗಿದೆ. ಭಾರತೀಪುರ ಕಿರು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಕಲ್ಲುಕಂಬ ತಂತಿ ಬೇಲಿ ನಿರ್ಮಿಸಿ ಅಡಿಕೆ ಕಾಫಿ ಇನ್ನಿತರೆ ಬೆಳೆ ಬೆಳೆದಿದ್ದು, ಅಲ್ಲದೆ ಮನೆ ಮತ್ತು ಇತರೆ ಕಟ್ಟಡಗಳನ್ನು ನಿರ್ಮಿಸಿ ಕಾನೂನು ಬಾಹಿರ ಒತ್ತುವರಿ ಮಾಡಿಕೊಂಡಿದ್ದರು. ಡಿಸಿಎಫ್‌ಒ ನೇತೃತ್ವದಲ್ಲಿ ವಿಹಂಗಮ ಹಾಲಿಡೇ ರೆಸಾರ್ಟ್ ಪ್ರದೇಶದ ಅಂದಾಜು 2.20 ಎಕರೆ ಅಕ್ರಮ ಒತ್ತುವರಿಯನ್ನು…
ಮಲೇಷ್ಯಾದಲ್ಲಿ ಕಿಮ್ಮನೆಗೆ ಪ್ರತಿಷ್ಠಿತ ಅವಾರ್ಡ್! – ಮಲೇಷ್ಯಾ-ಇಂಡಿಯಾ ಇಂಟರ್ನ್ಯಾಷನಲ್ ಐಕಾನಿಕ್ ಅವಾರ್ಡ್ – ಇನ್ನಷ್ಟು ಜನ ಸೇವೆಗೆ ಪ್ರೇರಣೆ ನೀಡಿದೆ: ಕಿಮ್ಮನೆ ರತ್ನಾಕರ್ NAMMUR EXPRESS NEWS ಬೆಂಗಳೂರು: ಕರ್ನಾಟಕದ ಪ್ರತಿಷ್ಠಿತ ಸುದ್ದಿ ವಾಹಿನಿ ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ದಿನಪತ್ರಿಕೆ ಕನ್ನಡಪ್ರಭ ಸಂಸ್ಥೆಯ ಪ್ರಾಯೋಜಕತ್ವದಲ್ಲಿ 2024-25 ಸಾಲಿನ ಕರುನಾಡಿನ ಸಾಧಕರಿಗೆ “ಮಲೇಷ್ಯಾ-ಇಂಡಿಯಾ ಇಂಟರ್ನ್ಯಾಷನಲ್ ಐಕಾನಿಕ್ ಅವಾರ್ಡ್ 2024 ಮಾಜಿ ಸಚಿವ, ಮಾಜಿ ಶಾಸಕರು ಆದ ಕಿಮ್ಮನೆ ರತ್ನಾಕರ್ ಅವರಿಗೆ ಲಭಿಸಿದ್ದು ಮಲೇಷಿಯಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶುಕ್ರವಾರ ಪ್ರದಾನ ಮಾಡಲಾಯಿತು. ಕಿಮ್ಮನೆ ರತ್ನಾಕರ್ ಅವರು ನಾಡಿನ ರಾಜಕೀಯ ಕ್ಷೇತ್ರದಲ್ಲಿನ ನಿಮ್ಮ ಸಾಧನೆಯನ್ನು ಗುರುತಿಸಿ “ಮಲೇಷ್ಯಾ-ಇಂಡಿಯಾ ಇಂಟರ್ನ್ಯಾಷನಲ್ ಐಕಾನಿಕ್ ಅವಾರ್ಡ್ 2024” ಪುರಸ್ಕಾರ ನೀಡಿ ಗೌರವಿಸಲಾಯಿತು. ಕಿಮ್ಮನೆ ರತ್ನಾಕರ್ ರಾಜ್ಯ ಕಂಡ ಅಪರೂಪದ ರಾಜಕೀಯ ನಾಯಕರು. ತೀರ್ಥಹಳ್ಳಿ ಕ್ಷೇತ್ರದ ಶಾಸಕರಾಗಿ, ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದವರು. ತಮ್ಮ ಸೇವೆ, ಪ್ರಾಮಾಣಿಕ ವ್ಯಕ್ತಿತ್ವ ಇಂದಿನ ರಾಜಕಾರಣಿಗಳಿಗೆ ಮಾದರಿ. ಈಗ ಈ ಹಿಂದೆ ಅವರಿಗೆ ವಿವಿಧ ಮಾಧ್ಯಮ…
ಅರಣ್ಯ ಒತ್ತುವರಿ ತೆರವು ಶುರು! – ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯಲ್ಲಿ ನೋಟಿಸ್ – ಒತ್ತುವರಿ ಬಡಾವಣೆ, ತೋಟ, ಹೋಂ ಸ್ಟೇ, ರೆಸಾರ್ಟ್ ಖುಲ್ಲಾ? NAMMUR EXPRESS NEWS ಶಿವಮೊಗ್ಗ/ಚಿಕ್ಕಮಗಳೂರು: ರಾಜ್ಯದಲ್ಲಿ ಅಕ್ರಮವಾಗಿ ಅರಣ್ಯ ಒತ್ತುವರಿ ಮಾಡಿದವರಿಗೆ ಇದೀಗ ಸಂಕಷ್ಟ ಎದುರಾಗಿದೆ. ಒತ್ತುವರಿ ಕಾರಣದಿಂದ ಪ್ರಕೃತಿ ವಿಕೋಪ ಎಂದ ಸರ್ಕಾರ ಇದೀಗ ಅಕ್ರಮ ಒತ್ತುವರಿ ವಿರುದ್ಧ ಸಮರ ಸಾರಿದೆ. ಚಿಕ್ಕಮಗಳೂರು ಜಿಲ್ಲೆ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಈಗಾಗಲೇ ನೂರಾರು ಎಕರೆ ಅರಣ್ಯ ಭೂಮಿ ಒತ್ತುವರಿ ತೆರವು ಮಾಡಲಾಗಿದೆ. ಇನ್ನು ಅನೇಕರಿಗೆ ನೋಟೀಸ್ ನೀಡಲಾಗಿದೆ. ಪಶ್ಚಿಮ ಘಟ್ಟದ ಎಲ್ಲ ಗಿರಿ ಪ್ರದೇಶಗಳಲ್ಲಿ ಅನಧಿಕೃತವಾಗಿ ಮತ್ತು ಅರಣ್ಯ ಪ್ರದೇಶ ಒತ್ತುವರಿ ಮಾಡಿ ನಿರ್ಮಿಸಲಾಗಿರುವ ಬಡಾವಣೆ, ತೋಟ, ಹೋಂ ಸ್ಟೇ ಮತ್ತು ರೆಸಾರ್ಟ್ ಗಳ ವಿರುದ್ಧ ಕ್ರಮ ಕೈಗೊಳ್ಳಲು, ಮತ್ತು ಅರಣ್ಯ ಒತ್ತುವರಿಯನ್ನು ತಕ್ಷಣದಿಂದಲೇ ತೆರವುಗೊಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ತೀರ್ಥಹಳ್ಳಿ, ಕೊಪ್ಪ, ಶೃಂಗೇರಿ, ಚಿಕ್ಕಮಗಳೂರು ಭಾಗದಲ್ಲಿ ಕಾರ್ಯಾಚರಣೆ ಶುರುವಾಗಿದೆ.