Author: Nammur Express Admin

ಅರಣ್ಯ ಒತ್ತುವರಿ ತೆರವು ಶುರು! – ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯಲ್ಲಿ ನೋಟಿಸ್ – ಒತ್ತುವರಿ ಬಡಾವಣೆ, ತೋಟ, ಹೋಂ ಸ್ಟೇ, ರೆಸಾರ್ಟ್ ಖುಲ್ಲಾ? NAMMUR EXPRESS NEWS ಶಿವಮೊಗ್ಗ/ಚಿಕ್ಕಮಗಳೂರು: ರಾಜ್ಯದಲ್ಲಿ ಅಕ್ರಮವಾಗಿ ಅರಣ್ಯ ಒತ್ತುವರಿ ಮಾಡಿದವರಿಗೆ ಇದೀಗ ಸಂಕಷ್ಟ ಎದುರಾಗಿದೆ. ಒತ್ತುವರಿ ಕಾರಣದಿಂದ ಪ್ರಕೃತಿ ವಿಕೋಪ ಎಂದ ಸರ್ಕಾರ ಇದೀಗ ಅಕ್ರಮ ಒತ್ತುವರಿ ವಿರುದ್ಧ ಸಮರ ಸಾರಿದೆ. ಚಿಕ್ಕಮಗಳೂರು ಜಿಲ್ಲೆ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಈಗಾಗಲೇ ನೂರಾರು ಎಕರೆ ಅರಣ್ಯ ಭೂಮಿ ಒತ್ತುವರಿ ತೆರವು ಮಾಡಲಾಗಿದೆ. ಇನ್ನು ಅನೇಕರಿಗೆ ನೋಟೀಸ್ ನೀಡಲಾಗಿದೆ. ಪಶ್ಚಿಮ ಘಟ್ಟದ ಎಲ್ಲ ಗಿರಿ ಪ್ರದೇಶಗಳಲ್ಲಿ ಅನಧಿಕೃತವಾಗಿ ಮತ್ತು ಅರಣ್ಯ ಪ್ರದೇಶ ಒತ್ತುವರಿ ಮಾಡಿ ನಿರ್ಮಿಸಲಾಗಿರುವ ಬಡಾವಣೆ, ತೋಟ, ಹೋಂ ಸ್ಟೇ ಮತ್ತು ರೆಸಾರ್ಟ್ ಗಳ ವಿರುದ್ಧ ಕ್ರಮ ಕೈಗೊಳ್ಳಲು, ಮತ್ತು ಅರಣ್ಯ ಒತ್ತುವರಿಯನ್ನು ತಕ್ಷಣದಿಂದಲೇ ತೆರವುಗೊಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ತೀರ್ಥಹಳ್ಳಿ, ಕೊಪ್ಪ, ಶೃಂಗೇರಿ, ಚಿಕ್ಕಮಗಳೂರು ಭಾಗದಲ್ಲಿ ಕಾರ್ಯಾಚರಣೆ ಶುರುವಾಗಿದೆ.

Read More

ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಸಂಘಕ್ಕೆ ಆ.11ಕ್ಕೆ ಚುನಾವಣೆ – ಅನೇಕ ಅಭ್ಯರ್ಥಿಗಳ ಸ್ಪರ್ಧೆ: ಮಾಜಿ ಅಧ್ಯಕ್ಷರ ಸ್ಪರ್ಧೆ – ಬಂಡೆ ವೆಂಕಟೇಶ್, ತಾಯಿಮನೆ ಸುದರ್ಶನ್ ಗೆಲ್ಲುವ ವಿಶ್ವಾಸ NAMMUR EXPRESS NEWS ತೀರ್ಥಹಳ್ಳಿ: ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಸಂಘಕ್ಕೆ ಆ.11ಕ್ಕೆ ಚುನಾವಣೆ ನಡೆಯಲಿದೆ. ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿ ಚುನಾವಣೆಯಲ್ಲಿ ನಿರ್ದೇಶಕ ಸ್ಥಾನಕ್ಕೆ ಅನೇಕ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. * ಕಡಿದಾಳ್ ಗೋಪಾಲ್ ಮೊ . 9845537070 * ಹೆಚ್.ಬಿ.ಆದಿಮೂರ್ತಿ ಮೊ. 9480829593 * ಬಿ.ಎ.ರಮೇಶ್ ಹೆಗ್ಡೆ ಮಾಜಿ ನಗರಸಭಾ ಅಧ್ಯಕ್ಷರು ಹಾಗೂ ಮಹಾನಗರ ಪಾಲಿಕೆ ಸದಸ್ಯರು, ಶಿವಮೊಗ್ಗ ಮೊ . 9448257999 * ಉಂಬಳೇಬೈಲು ಮೋಹನ್ ಮೊ. 9980584569 * ಅಶಿತ್ ಬಿ.ಎಸ್‌. ಕೋಂ. ಬಳಗಟ್ಟೆ ಶ್ಯಾಮಯ್ಯ ಮೊ. 9448105166 * ಎಂ.ಎ.ರಮೇಶ್ ಹೆಗ್ಡೆ ಮೊ . 9900213777 * ಎನ್.ಹೆಚ್.ನಾಗರಾಜ್‌ ನೀರುಳ್ಳಿ ಮೊ . 9449783101 * ಕೆ.ಪಿ.ಪುಟ್ಟಸ್ವಾಮಿ (ಕೀಗಡಿ) ಮೊ . 9449230384 *…

Read More

ತೀರ್ಥಹಳ್ಳಿ: ರಸ್ತೆ ಅವ್ಯವಸ್ಥೆ ಕೇಳೋರು ಯಾರು? – ಮಹಿಷಿ-ಹೆದ್ದೂರು ಸಂಪರ್ಕ ರಸ್ತೆ ಕೆಸರುಮಯ – ಕಳಪೆ ರಸ್ತೆ ಮಾಡಿ ಹಲವೆಡೆ ರಸ್ತೆ ಕುಸಿತ – ಜನ ನಾಯಕರು, ಅಧಿಕಾರಿಗಳ ಜಾಣ ಕುರುಡು! NAMMUR EXPRESS NEWS ನಾವಿಂದು ಸಾಧಾರಣ ರಸ್ತೆಗಳಿಂದ ಶುರುವಾಗಿ, ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿ, ದ್ವಿಪಥ, ಚತುಷ್ಪಥ ಹೀಗೆ ಹಲವು ವಿಭಾಗಗಳಾಗಿ ವಿಂಗಡಿಸುವಷ್ಟು ಮುಂದೆ ಬಂದಿದ್ದೇವೆ, ಆದರೂ ಸಹ ಹಳ್ಳಿಗಳ ರಸ್ತೆ ದುರಸ್ತಿ ಬಗೆಗೆ ಆಸಕ್ತಿ ವಹಿಸದಿರುವುದು ದುಃಖದ ಸಂಗತಿ. ಇಂದು ಎಷ್ಟೋ ಹಳ್ಳಿಗಳಲ್ಲಿ ಜನ ಸರಿಯಾದ ರಸ್ತೆ ಸಂಪರ್ಕವಿಲ್ಲದೆ ಬದುಕುತ್ತಿದ್ದಾರೆ. ಮಳೆಗಾಲದಲ್ಲಿ ಈ ರಸ್ತೆಗಳು ಇನ್ನಷ್ಟು ಹದಗೆಟ್ಟಿರುತ್ತವೆ. ಹೊಂಡ ಬಿದ್ದ ರಸ್ತೆಗಳು ಮಳೆಗಾಲದಲ್ಲಿ ನೀರು ತುಂಬಿ ನಿಂತಿರುತ್ತವೆ, ವಾಹನ ಚಾಲಕರಿಗಷ್ಟೇ ಅಲ್ಲದೆ, ಪಾದಚಾರಿಗಳಿಗೂ ಸಹ ಓಡಾಡಲು ಕಷ್ಟವಾಗುತ್ತದೆ. ಹೌದು. ತೀರ್ಥಹಳ್ಳಿ ತಾಲೂಕಿನ ಹಲವೆಡೆ ರಸ್ತೆ ಅವ್ಯವಸ್ಥೆ ಇದೀಗ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇದಕ್ಕೆ ಒಂದು ಉದಾಹರಣೆ ಮಹಿಷಿ ಮತ್ತು ಹೆದ್ದೂರು ಸಂಪರ್ಕ ರಸ್ತೆ. ಕೋಟಿ ಕೋಟಿ ವೆಚ್ಚ ಮಾಡಿ…

Read More

ಭೀಕರ ವಿಮಾನ ದುರಂತಕ್ಕೆ 70 ಮಂದಿ ಬಲಿ! – ಭೂಮಿಗೆ ಅಪ್ಪಳಿಸುತ್ತಲೇ ವಿಮಾನಕ್ಕೆ ಬೆಂಕಿ – ಬ್ರೆಜಿಲ್‌ನಲ್ಲಿ ಭೀಕರ ವಿಮಾನ ದುರಂತ NAMMUR EXPRESS NEWS ಬ್ರೆಸಿಲಿಯಾ: ಬ್ರೆಜಿಲ್‌ನಲ್ಲಿ ಭೀಕರ ವಿಮಾನ ದುರಂತ ಸಂಭವಿಸಿದೆ. 62 ಪ್ರಯಾಣಿಕರು ಸೇರಿ ಒಟ್ಟು 70 ಜನರಿದ್ದ ವಿಮಾನವು ಬ್ರೆಜಿಲ್‌ನ ಸಾವೋ ಪೌಲೋದಲ್ಲಿ ಪತನಗೊಂಡಿದ್ದು , ಭೂಮಿಗೆ ಅಪ್ಪಳಿಸುತ್ತಲೇ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದೆ. ಪತನಗೊಂಡ ಕೆಲವೇ ಸೆಕೆಂಡ್‌ಗಳಲ್ಲಿ ಭೀಕರವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಸುತ್ತಲೂ ಹೊಗೆ ಆವರಿಸಿದೆ. ಇದರಿಂದಾಗಿ ವಿಮಾನದಲ್ಲಿದ್ದ ಎಲ್ಲ 70 ಜನರೂ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ ಎಂಬುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಕಾಸ್ಕಾವೆಲ್‌ನಿಂದ ಗುವಾರುಲ್ಹೋಸ್‌ ಏರ್‌ಪೋರ್ಟ್‌ಗೆ ತೆರಳುತ್ತಿದ್ದ ವೇಳೆ ಸಾವೋ ಪೌಲೋ ರಾಜ್ಯದ ವಿನ್ಹೇಡೋ ಎಂಬ ಪ್ರದೇಶದಲ್ಲಿ ವಿಮಾನವು ಪತನಗೊಂಡಿದೆ. ಅದೃಷ್ಟವಶಾತ್‌, ವಿಮಾನವು ಜನವಸತಿ ಪ್ರದೇಶದಲ್ಲಿ ಪತನಗೊಂಡಿಲ್ಲ. ಆದರೂ, ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಪತನಗೊಂಡ ಬಳಿಕ ಹೊತ್ತಿಕೊಂಡ ಬೆಂಕಿಯಲ್ಲಿ ಸುಟ್ಟು ಕರಕಲಾಗಿದ್ದಾರೆ ಎಂಬುದಾಗಿ ಮಾಹಿತಿ ಲಭ್ಯವಾಗಿದೆ. ಬ್ರೆಜಿಲ್‌ನಲ್ಲಿಯೇ ಇದು ಇತ್ತೀಚೆಗೆ ಸಂಭವಿಸಿದ ಭೀಕರ…

Read More

ಶೃಂಗೇರಿ: ಕೃಷಿಕನ ಮೇಲೆ ಕರಡಿ ದಾಳಿ! – ತೋಟದಲ್ಲಿ ಔಷಧಿ ಹೊಡೆಯುವಾಗ ಘಟನೆ – ಕಾಡಿನೊಳಗೆ ಕರಡಿ ಕಣ್ಮರೆ: ಜನರಲ್ಲಿ ಆತಂಕ NAMMUR EXPRESS NEWS ಶೃಂಗೇರಿ: ಕೃಷಿಕನ ಮೇಲೆ ಕರಡಿ ದಾಳಿ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮರ್ಕಲ್ ಗ್ರಾಮ ಪಂಚಾಯಿತಿಯ ಮಾಗೋಡಿನಲ್ಲಿ ನಡೆದಿದೆ. ಸುರೇಂದ್ರ ಕರಡಿ ದಾಳಿಗೊಳಗಾದ ಕೃಷಿಕ. ಮಧ್ಯಾಹ್ನ ತೋಟದಲ್ಲಿ ಕಾಳುಮೆಣಸಿನ ಬೋರ್ಡೋ ದ್ರಾವಣ ಸಿಂಪಡಿಸುತ್ತಿದ್ದಾಗ ಕರಡಿ ಏಕಾಏಕಿ ದಾಳಿ ಮಾಡಿದೆ. ಕರಡಿಯ ದಿಢೀ‌ರ್ ದಾಳಿಯಿಂದ ಕೆಳಕ್ಕೆ ಬಿದ್ದ ಕೃಷಿಕ ಸುರೇಂದ್ರ ಅವರನ್ನು ಕಚ್ಚಿದ್ದು, ಕೂಗಿಕೊಂಡಾಗ ಮನೆಯಲ್ಲಿದ್ದ ನಾಯಿಗಳು ಕರಡಿಯನ್ನು ಅಟ್ಟಿಸಿಕೊಂಡು ಹೋಗಿದ್ದು, ಕಾಡಿನೊಳಗೆ ಕರಡಿ ಕಣ್ಮರೆಯಾಗಿದೆ. ಕರಡಿ ದಾಳಿಯಿಂದ ಸುರೇಂದ್ರ ಅವರ ಕೈ ಕಾಲು ಹಾಗೂ ಎದೆ ಭಾಗಕ್ಕೆ ಗಾಯವಾಗಿದ್ದು, ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

Read More

ಹೆಬ್ರಿ ಬಸ್ ನಿಲ್ದಾಣದ ಬಳಿ ಎಟಿಎಂ ಇಲ್ಲ! – ಕೆಲಸಕ್ಕಾಗಿ ಬರುವ ಜನರು, ಪ್ರಯಾಣಿಕರ ಪರದಾಟ – ಇಂಡಿಯಾ ಒನ್ ಅಥವಾ ಯಾವುದೇ ಎಟಿಎಂ ಅಳವಡಿಸಲು ಪಟ್ಟು ವರದಿ: ರಕ್ಷಿತ್ ಕುಮಾರ ಶೆಟ್ಟಿ ಹೆಬ್ರಿ: ಹೆಬ್ರಿ ಕರಾವಳಿ ಮತ್ತು ಮಲೆನಾಡು ಸಂಪರ್ಕದ ಊರು. ಆದರೆ ಇಲ್ಲಿ ಸಮರ್ಪಕ ಸೌಲಭ್ಯ ಇಲ್ಲದೆ ನಲುಗುತ್ತಿದೆ. ಅದರಲ್ಲಿ ಎಟಿಎಂ ಕೂಡ ಒಂದು..! ಹೆಬ್ರಿ ಮುಖ್ಯ ಬಸ್ ನಿಲ್ದಾಣ ಬಳಿ ಯಾವುದೇ ಬ್ಯಾಂಕ್ ಎಟಿಎಂ ಇಲ್ಲ. ಇದರಿಂದ ಹೆಬ್ರಿ ತಾಲೂಕು ಜನ ಸೇರಿದಂತೆ ಇಲ್ಲಿಗೆ ಬರುವ ಪ್ರಯಾಣಿಕರು ಪರದಾಟ ನಡೆಸುವಂತಾಗಿದೆ. ಹೆಬ್ರಿ ಗ್ರಾಮಗಳಿಗೆ ಬೇರೆ ಬೇರೆ ಗ್ರಾಮಗಳಿಂದ ಬಸ್ಸುಗಳಿಂದ ಬಂದು ಇಳಿದು ಹಣದ ಅಗತ್ಯತೆಗೆ ೨೦೦-೩೦೦ ಮೀಟರ್ ಹೊಗಬೇಕಾಗುತ್ತದೆ. ಬಸ್ಸು ನಿಲ್ದಾಣ ಹತ್ತಿರ ಇಂಡಿಯಾ ಒನ್ ಅಥವಾ ಯಾವುದೇ ಬ್ಯಾಂಕಿನ ಎಟಿಎಂ ಇದ್ದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಹೆಬ್ರಿ ತಾಲೂಕು ಕಛೇರಿ ಇದ್ದರಿಂದ ಬೇರೆ ಬೇರೆ ಗ್ರಾಮಗಳಿಂದ ಜನರು ತಮ್ಮ ಕೆಲಸಕ್ಕಾಗಿ ಬರುತ್ತಾರೆ. ಹೆಬ್ರಿ ಬಸ್ಸು ನಿಲ್ದಾಣಕ್ಕೆ ಬೇರೆ…

Read More

ಇಬ್ಬರು ಮಕ್ಕಳನ್ನು ಬಾವಿಗೆ ತಳ್ಳಿ ಮಹಿಳೆ ಆತ್ಮಹತ್ಯೆ! – ಹೊಸನಗರ ತಾಲೂಕು ಚಂಪಕಾಪುರದಲ್ಲಿ ಘಟನೆ – ದೇಶದಲ್ಲಿ ಜಲಕಂಟಕ, ಅಗ್ನಿ ಕಂಟಕ, ವಾಯು ಕಂಟಕ ಜಾಸ್ತಿ: ಭವಿಷ್ಯ – ಮದುವೆಗೆ ಒಪ್ಪದ ಕಾರಣ ಪ್ರೇಮಿಗಳ ಆತ್ಮಹತ್ಯೆ! ಇಬ್ಬರು ಮಕ್ಕಳನ್ನು ಬಾವಿಗೆ ತಳ್ಳಿ ತಾನು ಹಾರಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೊಸನಗರ ತಾಲೂಕು ಮತ್ತಿಕೈ ಗ್ರಾಮ ವ್ಯಾಪ್ತಿಯ ಚಂಪಕಾಪುರದಲ್ಲಿ ಹೃದಯ ವಿದ್ರಾವಕ ಘಟನೆ ಸಂಭವಿಸಿದೆ. ರಾಜೇಶ್‌ ಎಂಬುವವರ ಪತ್ನಿ ವಾಣಿ (32), ಮಕ್ಕಳಾದ ಸಮರ್ಥ (12), ಸಂಪದ (6) ಮೃತರು. ಗುರುವಾರ ರಾತ್ರಿ ವಾಣಿ ತನ್ನ ಇಬ್ಬರು ಮಕ್ಕಳನ್ನು ಬಾವಿಗೆ ತಳ್ಳಿ ತಾನು ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಬಾವಿಯಿಂದ ಮೃತದೇಹವನ್ನು ಮೇಲೆತ್ತಲಾಗಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ನಗರ ಠಾಣೆ ಪಿಎಸ್‌ಐ ರಮೇಶ್‌ ಘಟನೆ ಸ್ಥಳಕ್ಕೆ ಭೇಟಿ ನೀಡಿದ್ದರು. ಶ್ರಾವಣ ಮಾಸದ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಕೋಡಿ ಮಠದ ಶ್ರೀ ಚಿಕ್ಕಬಳ್ಳಾಪುರ: ದೇಶದಲ್ಲಿ ಜಲಕಂಟಕ, ಅಗ್ನಿ ಕಂಟಕ, ವಾಯು…

Read More

ಇಂದು ಶ್ರಾವಣ ಶನಿವಾರದ ರಾಶಿ ಭವಿಷ್ಯ ಹೇಗಿದೆ? – ಶನಿ ದೇವನ ಕೃಪೆಯಿಂದ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಮನೆಗೆ ಅತಿಥಿಗಳ ಆಗಮನದಿಂದಾಗಿ ನಿಮ್ಮ ಸಂತೋಷ ಹೆಚ್ಚಾಗುವುದು. ಇದರಿಂದಾಗಿ ನಿಮಗೆ ಲಾಭ ಹೆಚ್ಚಾಗಬಹುದು. ವ್ಯಾಪಾರ ಮಾಡುವವರು ಈ ದಿನ ತಮ್ಮ ಪಾಲದಾರರೊಂದಿಗೆ ಎಚ್ಚರಿಕೆಯಿಂದ ಇರಬೇಕು. ಇಲ್ಲದಿದ್ದರೆ ನಷ್ಟ ಉಂಟಾಗುವ ಸಾಧ್ಯತೆ ಇದೆ. ಇಂದು ನೀವು ನಿಮ್ಮ ತಾಯಿಗೆ ಉಡುಗೊರೆಯನ್ನು ಖರೀದಿಸುವಿರಿ. ** ವೃಷಭ ರಾಶಿ : ಈ ದಿನ ಸಮಸ್ಯೆಗಳನ್ನು ಎದುರಿಸಬಹುದು. ಆದರೆ ಈ ಎಲ್ಲಾ ಸಮಸ್ಯೆಗಳ ನಡುವೆ ನಿಮ್ಮ ಸಂಬಂಧ ಉತ್ತಮವಾಗಿರುವುದು. ಸಂಜೆ ವೇಳೆಗೆ ನಿಮ್ಮ ಎಲ್ಲಾ ಸಮಸ್ಯೆಗಳನ್ನು ಮಾತುಕತೆಯ ಮೂಲಕ ಬಗೆಹರಿಸುವಿರಿ. ನಿಮ್ಮ ಆರ್ಥಿಕ ಸ್ಥಿತಿ ಈ ದಿನ ಉತ್ತಮವಾಗಿರುವುದು.…

Read More

ಭಾರತಕ್ಕೆ ಬಂತು ಮತ್ತೊಂದು ಕಂಚು! – ಕುಸ್ತಿಪಟು ಅಮನ್ ಸೆಹ್ರಾವತ್ ಕುಸ್ತಿಯಲ್ಲಿ ಕಂಚಿನ ಪದಕ ಗೆಲುವು – ಭಾರತಕ್ಕೆ 6ನೇ ಪದಕ ತಂದುಕೊಟ್ಟ ಅಮನ್ NAMMUR EXPRESS NEWS ಹಾಕಿ ಮತ್ತು ಜಾವಲಿನ್ ಥ್ರೋ ಅಲ್ಲಿ ಕಂಚು ಹಾಗೂ ಬೆಳ್ಳಿ ಪದಕ ಪಡೆದಿದ್ದ ಭಾರತ ಶುಕ್ರವಾರ ಮಧ್ಯ ರಾತ್ರಿ ಮತ್ತೊಂದು ಕಂಚು ಪದಕ ಗೆದ್ದಿದೆ. ಕುಸ್ತಿಪಟು ಅಮನ್ ಸೆಹ್ರಾವತ್ ಕುಸ್ತಿಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಭಾರತಕ್ಕೆ 6ನೇ ಪದಕ ತಂದಿದ್ದಾರೆ. 21 ವರ್ಷದ ಅಮನ್ ಸೆಹ್ರಾವತ್ 13-5 ಅಂತರದಲ್ಲಿ ಡೇರಿಯನ್ ಕ್ರೂಜ್ ಅವರನ್ನು ಸೋಲಿಸುವ ಮೂಲಕ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕ ಗೆದ್ದುಕೊಟ್ಟ ಎಂಟನೇ ಕುಸ್ತಿಪಟು ಎನ್ನುವ ಹೆಗ್ಗಳಿಕೆ ಅಮನ್ ಸೆಹ್ರಾವತ್ ಅವರ ಪಾಲಾಗಿದೆ. ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಐದನೇ ಭಾರತೀಯ ಕುಸ್ತಿಪಟು ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಶುಕ್ರವಾರ ನಡೆದ ಪುರುಷರ 57 ಕೆ.ಜಿ. ಫ್ರೀಸ್ಟೈಲ್‌ ಕುಸ್ತಿ ಪಂದ್ಯದಲ್ಲಿ ಅಮನ್ ಸೆಹ್ರಾವತ್ ಪದಕ ಗೆದ್ದರು. ಭಾರತ…

Read More

ಕರಾವಳಿಯಾದ್ಯಂತ ನಾಗರಪಂಚಮಿ ಸಂಭ್ರಮ! – ನಾಗ ಬನಗಳಿಗೆ ತೆರಳಿ ನಾಗದೇವರಿಗೆ ಪೂಜೆ ಸಲ್ಲಿಕೆ – ಕುಕ್ಕೆ ಸೇರಿ ದೇಗುಲಗಳಲ್ಲಿ ಕೂಡ ವಿಶೇಷ ಪೂಜೆ – ಶ್ರದ್ದಾ ಭಕ್ತಿಯಿಂದ ನಾಗರ ಪಂಚಮಿ ಆಚರಣೆ NAMMUR EXPRESS NEWS ಉಡುಪಿ/ಮಂಗಳೂರು: ಕರಾವಳಿಯಾದ್ಯಂತ ನಾಗರಪಂಚಮಿ ಸಂಭ್ರಮ ಮನೆ ಮಾಡಿದೆ. ಜನ ಮುಂಜಾನೆಯಿಂದಲೇ ನಾಗ ಬನಗಳಿಗೆ ತೆರಳಿ ನಾಗದೇವರಿಗೆ ಪೂಜೆ ಸಲ್ಲಿಕೆ ಮಾಡಿದ್ದಾರೆ. ಕುಕ್ಕೆ ಸುಬ್ರಮಣ್ಯ ಸೇರಿ ದೇಗುಲಗಳಲ್ಲಿ ಕೂಡ ವಿಶೇಷ ಪೂಜೆ ನಡೆಯಿತು. ಎಲ್ಲೆಡೆ ಶ್ರದ್ದಾ ಭಕ್ತಿಯಿಂದ ನಾಗರ ಪಂಚಮಿ ಆಚರಣೆ ನಡೆಯಿತು. ಕುಡುಪುವಿನಲ್ಲಿ ಸಾವಿರಾರು ಜನ ಮಂಗಳೂರಿನ ಕುಡುಪುವಿನ ಅನಂತ ಪದ್ಮನಾಭ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು. ಸಾವಿರಾರು ಜನ ಭಕ್ತರು ಪೂಜೆಯಲ್ಲಿ ಭಾಗಿಯಾದ್ರು. ಸುಮಾರು 3 ಲೋಡ್ನಷ್ಟು ಎಳೆನೀರು ಅಭಿಷೇಕ ಮಾಡಲಾಯಿತು. ಕಾಪುವಿನಲ್ಲಿ ನಿಜ ಹಾವಿಗೆ ಪೂಜೆ ಕಾಪುವಿನ ಮಜೂರು ನಿವಾಸಿ ಗೋವರ್ಧನ್ ರಾವ್ ರವರು ಮಾತ್ರ ಪ್ರತಿ ವರ್ಷದಂತೆ ಈ ವರ್ಷವೂ ದಿಟ ನಾಗನಿಗೆ ಅಭಿಷೇಕ ನೆರವೇರಿಸಿದ್ದಾರೆ. ಗಾಯಗೊಂಡ ನಾಗರ ಹಾವನ್ನು…

Read More