ಪ್ರವಾಸ ಸಂಕಟ: ಕೊಡಚಾದ್ರಿಗೆ ಪ್ರವೇಶ ನಿರ್ಬಂಧ! – ಮುಳ್ಳಯ್ಯನಗಿರಿ ವೀಕ್ಷಣೆಗೆ ವಿಧಿಸಿದ್ದ ನಿರ್ಬಂಧ ತೆರವು – ಕೊಲ್ಲೂರು ಸುತ್ತ ಮುತ್ತ ಸೇರಿ ಹಲವು ಕಡೆ ಎಂಟ್ರಿ ಇಲ್ಲ NAMMUR EXPRESS NEWS ತೀರ್ಥಹಳ್ಳಿ: ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು ಹಳ್ಳ- ಕೊಳ್ಳಜಲಪಾತಗಳಲ್ಲಿ ನೀರು ಧುಮ್ಮಿಕ್ಕುತ್ತಿದೆ. ನಿರಂತರ ಮಳೆಯಿಂದ ಭೂ ಕುಸಿತ ಗಳೂ ಘಟಿಸುತ್ತಿವೆ. ಪ್ರವಾಸಿ ತಾಣಗಳಿಗೆ ತೆರಳುವವರು ಸ್ಥಳದ ಸೂಕ್ತ ಪರಿಚಯ ಇಲ್ಲದ ಅನಾಹುತಗಳಿಗೆ ಈಡಾಗಿ ಸಾವು- ನೋವುಗಳು ಸಂಭವಿಸುತ್ತಿರುವುದನ್ನು ತಡೆಯುವ ಉದ್ದೇಶದಿಂದ ಕುದುರೆ ಮುಖ ವನ್ಯಜೀವಿ ವಿಭಾಗವು ಕೊಡಚಾದ್ರಿ ಗಿರಿಶಿಖರಕ್ಕೆ ತಾತ್ಕಾಲಿಕವಾಗಿ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿದೆ. ಕೊಡಚಾದ್ರಿ ಶಿಖರದ ಮಾರ್ಗದಲ್ಲಿ ಸಣ್ಣ ಸಣ್ಣ ಜಲಪಾತಗಳು ಸೃಷ್ಟಿಯಾಗಿ ನೀರು ಮಾರ್ಗದ ಮೇಲೂ ಬರುತ್ತದೆ. ಭೂ ಕುಸಿತಗಳಾಗುವ ಸಾಧ್ಯತೆಯೂ ಜಾಸ್ತಿ ಇರುವುದರಿಂದ ಪ್ರವಾಸಿಗರ ಹಿತದೃಷ್ಟಿಯಿಂದ ಪ್ರವೇಶ ನಿರ್ಬಧಿಸಿ ಆದೇಶ ಪ್ರಕಟಿಸಲಾಗಿದೆ. ಇದರಿಂದ ಸಹಜವಾಗಿ ಚಾರಣಿಗರಿಗೆ, ಪ್ರವಾಸಿ ಗರಿಗೆ ನಿರಾಶೆಯಾದರೆ ಇಲ್ಲಿ ಪ್ರವಾಸೋದ್ಯಮವನ್ನು ಅವಲಂಬಿಸಿರುವ ಜೀಪ್ ಮಾಲೀಕರು, ಚಾಲಕರು, ಹೋಟೆಲ್,ಹೋಂ ಸ್ಟೇ ಮಾಲೀಕರು, ವ್ಯಾಪಾರಸ್ಥರು…
Author: Nammur Express Admin
ವಿಶ್ವವಿಖ್ಯಾತ ಮೈಸೂರು ದಸರಾ ಸಂಭ್ರಮಕ್ಕೆ ಸಜ್ಜು! – ಅ.15ರಂದು ದಸರಾಗೆ ಅದ್ದೂರಿ ಚಾಲನೆ – ದಸರಾದಲ್ಲಿ ಏನೇನು ಇರಲಿದೆ…? ಇಲ್ಲಿದೆ ಡೀಟೇಲ್ಸ್ NAMMUR EXPRESS NEWS ಮೈಸೂರು : ( Mysore Dasara ) ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಅ.15 ರಂದು ಅದ್ದೂರಿಯಾಗಿ ಚಾಲನೆ ನೀಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ವಿಧಾನಸೌಧದಲ್ಲಿ ನಡೆದ ದಸರಾ ಪೂರ್ವಭಾವಿ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು. ಈ ಬಾರಿ ಅದ್ದೂರಿಯಾಗಿ ದಸರಾ ಆಚರಣೆ ನಡೆಸಲು ತೀರ್ಮಾನಿಸಲಾಗಿದೆ. ದಸರಾದಲ್ಲಿ ಪ್ರಮುಖವಾಗಿ ದೀಪಾಲಂಕಾರ ಇರುತ್ತದೆ ಎಂದರು. ಈ ಬಾರಿ ದೀಪಾಲಂಕಾರ ದಸರಾ ಉದ್ಘಾಟನೆಯಾದ ದಿನದಿಂದ ದಸರಾ ಮುಗಿಯುವವರೆಗೂ ಹಾಗೂ ನಂತರ ಒಂದು ವಾರದವವರೆಗೆ ದೀಪಾಲಂಕಾರ ಇರಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದರು. ದಸರಾ ಸ್ಥಬ್ದಚಿತ್ರದಲ್ಲಿ ರಾಜ್ಯದ ಪರಂಪರೆ, ಜಿಲ್ಲಾ ವಿಶೇಷತೆ ಹಾಗೂ ನಮ್ಮ ಸರ್ಕಾರದ ಐದು ಗ್ಯಾರಂಟಿ ಸ್ಥಬ್ಧ ಚಿತ್ರ ಇರಲಿವೆ. ಅಕ್ಟೋಬರ್ 15ರಂದು ದಸರಾ ಮಹೋತ್ಸವ ಉದ್ಘಾಟನೆ ಆಗಲಿದೆ. ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ…
ಕಾಳುಮೆಣಸು ಬೆಳೆಗಾರರಿಗೆ ಬಂಪರ್! – 6 ವರ್ಷಗಳ ಬಳಿಕ 60,000 ರೂ. ಗಡಿ ದಾಟಿತು ದರ – ರೈತರಿಗೆ ಖುಷ್: ಇನ್ನಷ್ಟು ಬೆಳೆಯಲು ಆಸಕ್ತಿ! NAMMUR EXPRESS NEWS ‘ಕಪ್ಪು ಬಂಗಾರ’ ಎಂದೇ ಕರೆಯಲ್ಪಡುವ ಕಾಳು ಮೆಣಸು ಬೆಳಗಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ. 6 ವರ್ಷಗಳ ಬಳಿಕ ಮತ್ತೆ 60,000 ರೂಪಾಯಿ ಗಡಿ ದಾಟಿದ್ದು, ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚಳವಾಗಬಹುದೆಂಬ ನಿರೀಕ್ಷೆಯಲ್ಲಿ ಬೆಳೆಗಾರರಿದ್ದಾರೆ. ಎಂಟು ದಿನಗಳ ಹಿಂದಿನವರೆಗೂ ಪ್ರತಿ ಕ್ವಿಂಟಾಲ್ ಗೆ 45,000 ರೂಪಾಯಿಗಳಿಂದ 49,000 ರೂಪಾಯಿ ಆಸುಪಾಸಿನಲ್ಲಿದ್ದ ಕಾಳು ಮೆಣಸಿನ ದರ ಸೋಮವಾರದಂದು ಶಿರಸಿ ಮಾರುಕಟ್ಟೆಯಲ್ಲಿ 61,599 ರೂಪಾಯಿಗೆ ಟೆಂಡರ್ ಆಗಿದೆ. ಇದು ಕಾಳುಮೆಣಸು ದಾಸ್ತಾನು ಮಾಡಿದ್ದ ಬೆಳೆಗಾರರಿಗೆ ಸಂತಸ ತಂದಿದೆ. ಆರು ವರ್ಷಗಳ ಹಿಂದೆ ಅಂದರೆ 2017ರಲ್ಲಿ ಕಾಳುಮೆಣಸಿಗೆ ಇದಕ್ಕಿಂತ ಹೆಚ್ಚಿನ ಬೆಲೆ ಸಿಕ್ಕಿತೆಂದು ಹೇಳಲಾಗಿದ್ದು, ಇದಾದ ಬಳಿಕ ಮತ್ತೆ ಕಾಳುಮೆಣಸಿಗೆ ಬಂಗಾರದ ಬೆಲೆ ಬಂದಿದೆ. ಕಾಳುಮೆಣಸಿಗೆ ಇದುವರೆಗೆ ಸೂಕ್ತ ಬೆಲೆ ಸಿಗದೇ ನಿರಾಸೆಗೊಂಡಿದ್ದ ಬೆಳೆಗಾರರಿಗೆ ಈಗ…
ಧರ್ಮಸ್ಥಳ ಬಗ್ಗೆ ವಿವಾದಿತ ಹೇಳಿಕೆ ನೀಡಿದ ದುನಿಯಾ ವಿಜಯ್! – ಸೌಜನ್ಯ ಕೊಲೆ ಪ್ರಕರಣ: ನ್ಯಾಯ ಸಿಗುವವರೆಗೂ ಧರ್ಮಸ್ಥಳ ಮಂಜುನಾಥನ ದರ್ಶನ ಮಾಡಕೂಡದು ಅನ್ನಿಸುತ್ತಿದೆ- ನಟ ದುನಿಯಾ ವಿಜಯ್ NAMMUR EXPRESS ( Soujanya case ) ಸೌಜನ್ಯ ಕೊಲೆ ಪ್ರಕರಣದ ನ್ಯಾಯ ಸಿಗುವವರೆಗೂ ಧರ್ಮಸ್ಥಳ ಮಂಜುನಾಥನ ದರ್ಶನ ಮಾಡಕೂಡದು ಅನ್ನಿಸುತ್ತಿದೆ ಎಂದು ನಟ ದುನಿಯಾ ವಿಜಯ್ ( Duniya Vijay ) ವಿವಾದಿತ ಹೇಳಿಕೆ ನೀಡಿದ್ದಾರೆ. ದುನಿಯಾ ವಿಜಯ್ ಈ ಬಗ್ಗೆ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಅವರು, ಪ್ರತಿ ವರ್ಷ ಧರ್ಮಸ್ಥಳದ ದರ್ಶನ ಪಡೆಯುವುದು ವಾಡಿಕೆಯಾಗಿತ್ತು, ಆದರೆ ಸೌಜನ್ಯಳ ಪ್ರಕರಣದ ಇಂದಿನ ಬೆಳವಣಿಗೆ ನೋಡಿ ಸೌಜನ್ಯ ಮತ್ತು ಕುಟುಂಬಸ್ಥರಿಗೆ ನ್ಯಾಯ ಸಿಗುವವರೆಗೂ ಮಂಜುನಾಥನ ದರ್ಶನ ಮಾಡಕೂಡದು ಅನಿಸುತ್ತಿದೆ.ಸತ್ಯ ಎಂಬುದು ಸೂರ್ಯನ ಬೆಳಕಿದಂತೆ ಯಾರು ಹೆಚ್ಚು ಸಮಯ ಮರೆಮಾಚಲಾಗದು – ಬುದ್ಧ ಎಂದು ಹೇಳಿದ್ದಾರೆ ಎನ್ನುವ ಬರಹದಡಿ ಇಟ್ಟು ಶೇರ್ ಮಾಡಿದ್ದು ಇದೀಗ ವೈರಲ್ ಆಗುತ್ತಿದೆ. https://twitter.com/OfficialViji/status/1686253089614151680?s=20 …
ಹಿಂದೂ ಮುಸ್ಲಿಂ ಸಾಮರಸ್ಯದ ಹಬ್ಬ! – ಗದಗದ ಮುಂಡರಗಿಯಲ್ಲಿ ಕತ್ತಲ ರಾತ್ರಿಯ ಮಡಿಕೆ ಖರೀದಿ ಹಬ್ಬ – ಪಾದಯಾತ್ರೆ ಮುಖಾಂತರ ಬರಿಗಾಲ ನಡಿಗೆ ವಿಶೇಷ! NAMMUR EXPRESS NEWS ಗದಗ ಜಿಲ್ಲಾ ಮುಂಡರಗಿ ತಾಲೂಕಿನ ಮಕ್ತುಂಪುರ ಗ್ರಾಮದ ವಾಲ್ಮೀಕಿ ಸಮಾಜ ಬಾಂಧವರು ಹಾಗೂ ಉಪ್ಪಾರ ಸಮಾಜದ ಕಲ್ಲಪ್ಪನವರ ಕುಟುಂಬ ಹಾಗೂ ಅಯ್ಯಪ್ಪನವರ,ಮಕಾಂದಾರ ಕುಟುಂಬವರ್ಗದವರು ಒಗ್ಗಾಟ್ಟಾಗಿ ಬಂದು ಕತ್ತಲ ರಾತ್ರಿಯ ನಿಮಿತ್ಯವಾಗಿ ಮಕ್ತುಂಪೂರ ಗ್ರಾಮದಿಂದ ಮುಂಡರಗಿ ಪಟ್ಟಣಕ್ಕೆ ಬರಿಗಾಲಿನಿಂದ ಪಾದಯಾತ್ರೆಯ ಮುಖಾಂತರ ಮುಂಡರಗಿ ಪಟ್ಟಣಕ್ಕೆ ಬಂದು ಮಡಿಕೆಯನ್ನು ಖರೀದಿಸುವುದು ವಿಶೇಷವಾಗಿತ್ತು. ಸೋಮವಾರ ಕತ್ತಲರಾತ್ರಿ ನಿಮಿತ್ತ ಹೊಸ ಮಡಿಕೆಯಲ್ಲಿ ಜೊಳದ ಕಿಚಡಿಯನ್ನು ತಯಾರಿಸಿ ರಾತ್ರಿ ಸಮಾಜ ಭಾಂದವರು ಕೂಡಿಕೊಂಡು ದೀಡ ನಮಸ್ಕಾರ ಹಾಕುವುದರೊಂದಿಗೆ ಅಲೈ ದೇವರಿಗೆ ನೈವೇದ್ಯ ಅರ್ಪಿಸುವುದು ಹಿಂದಿನಿಂದ ಕಾಲದ ಬಂದ ಪ್ರತೀತಿ. ಇನ್ನೊಂದು ವಿಶೇಷವೆಂದರೆ ಈ ಹೊಸ ಮಡಿಕೆಯಲ್ಲಿ ಜೋಳದ ಕಿಚಡಿಯನ್ನು ತಯಾರಿಸುವಾಗ ಒಮ್ಮೆ ಹಚ್ಚಿದ ಓಲೆಯು ಆರುವುದೇ ಇಲ್ಲ ಹಾಗೂ ಕಿಚಡಿ ಆಗುವವರೆಗೂ ಒಲೆಯನ್ನು ಸಹ ಊದುವುದಿಲ್ಲ ಅಂತಹ ವಿಶೇಷತೆ…
ತಾಯಿ ಸೀರೆಯಿಂದ ನೇಣಿಗೆ ಕೊರಳೊಡ್ಡಿದ ಬಾಲಕ! – ಮೊಬೈಲ್ ಚಾರ್ಜರ್ ಕೊಡಿಸದಿದ್ದಕ್ಕೆ ನೇಣಿಗೆ ಶರಣು! – ತುಮಕೂರು ಜಿಲ್ಲೆಯ ಪಾವಗಡದಲ್ಲಿ ನಡೆದ ಘಟನೆ – ಟೊಮೆಟೊ ಗಿಡಕ್ಕೆ ಆಸಿಡ್ ಹಾಕಿದ ಕಿಡಿಗೇಡಿಗಳು NAMMUR EXPRESS NWES ತುಮಕೂರು: ಮೊಬೈಲ್ ಚಾರ್ಜರ್ ಕೊಡಿಸಲಿಲ್ಲವೆಂದು ಯುವಕನೊಬ್ಬ ನೇಣಿಗೆ ಶರಣಾದ ಘಟನೆ ತುಮಕೂರಿನ ಪಾವಗಡದಲ್ಲಿ ನಡೆದಿದೆ. ಶಾಂತಿ ಎಸ್ ಎಸ್ ಕೆ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ನಿಖಿಲ್ ಗೌ ಭಾನುವಾರ ರಜೆ ಕಾರಣ ಮನೆಯಲ್ಲಿದ್ದ. ತಾಯಿಯ ಬಳಿ ಚಾರ್ಜರ್ ಕೊಡು ಎಂದು ಗಲಾಟೆ ಮಾಡಿದ್ದ. ಹೆಚ್ಚು ಅನಗತ್ಯದ ವಸ್ತುಗಳನ್ನು ಕೇಳುತ್ತಿದ್ದ ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳದೆ ತಾಯಿ ಸುಮ್ಮನಿದ್ದರು.ಹತ್ತಿರದವರ ಮನೆಗೆ ಹೂ ಕಟ್ಟಲು ಹೋಗಿದ್ದ ತಾಯಿ ಮರಳಿ ಬಂದ ನಂತರ ಬಾಗಿಲು ತಟ್ಟಿದಾಗ ಒಳಗಡೆಯಿಂದ ಶಬ್ದ ಬರದ ಕಾರಣ ಅನುಮಾನ ಬಂದು ಗ್ರಾಮಸ್ಥರಿಂದ ಮನೆ ಬಾಗಿಲು ಒಡೆದು ನೋಡಿದಾಗ ತಾಯಿಯ ಸೀರೆಯಿಂದ ನೇಣು ಬಿಗಿದು ಸಾವನ್ನಪ್ಪಿರುವ ಘಟನೆ ಪಾವಗಡ ತಾಲೂಕಿನ ಸಿಂಗರೆಡ್ಡಿ…
ಕಸ್ತೂರಿ ರಂಗನ್ ವರದಿ ಹೇಳಿಕೆ ವಿರುದ್ಧ ಹೋರಾಟ! – ತೀರ್ಥಹಳ್ಳಿಯಲ್ಲಿ ಶಾಸಕ, ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಪ್ರತಿಭಟನೆ NAMMUR EXPRESS NEWS ತೀರ್ಥಹಳ್ಳಿ: ( Thirthahalli ) ರಾಜ್ಯ ಕಾಂಗ್ರೆಸ್ ಸರ್ಕಾರದ ಜವಾಬ್ದಾರಿಯುತ ಸ್ಥಾನದಲ್ಲಿರುವ ಅರಣ್ಯ ಸಚಿವರಾದ ಈಶ್ವರ ಖಂಡ್ರೆಯವರು ಮಲೆನಾಡಿಗರ ಬದುಕಿಗೆ ಮರಣ ಶಾಸನದಂತಿರುವ ಕಸ್ತೂರಿ ರಂಗನ್ ವರದಿ ಜಾರಿಯ ಕುರಿತು ವರದಿ ಜಾರಿಗೊಳಿಸಲು ಪೂರಕವಾದ ಅಭಿಪ್ರಾಯ ವ್ಯಕ್ತ ಪಡಿಸಿರುವುದು ಮಲೆನಾಡಿಗರ ಅದರಲ್ಲೂ ತೀರ್ಥಹಳ್ಳಿ ಕ್ಷೇತ್ರದ ರೈತರ ಬದುಕಿನ ಮೇಲೆ ಮರಣ ಮೃದಂಗ ಬಾರಿಸಿದಂತೆ ಆಗಿದೆ. ಕಾಂಗ್ರೆಸ್ ಸರ್ಕಾರದ ಸಚಿವರ ಈ ಹೇಳಿಕೆ ಹಾಗೂ ಕಾಂಗ್ರೆಸ್ ಸರ್ಕಾರದ ವಿವಿಧ ಜನ ವಿರೋಧಿ ನೀತಿಯನ್ನು ಖಂಡಿಸಿ ತೀರ್ಥಹಳ್ಳಿ ತಾಲೂಕು ಬಿಜೆಪಿ ನೇತೃತ್ವದಲ್ಲಿ ತೀರ್ಥಹಳ್ಳಿ ತಾಲೂಕು ಕಛೇರಿ ಮುಂದೆ ಆಗಸ್ಟ್ 1ರ ಮಂಗಳವಾರ ದಿನ ಬೆಳಿಗ್ಗೆ 11 ಕ್ಕೆ ಶಾಸಕರಾದ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಪ್ರತಿಭಟನಾ ಸಭೆ ಏರ್ಪಡಿಸಲಾಗಿದೆ. ಇದನ್ನೂ ಓದಿ : ಅಡಿಕೆ ದರ ಎಷ್ಟಿದೆ…ಹೆಚ್ಚಾಯ್ತಾ..? ಕಡಿಮೆ…
ಮತ್ತೆ ಮಳೆ ಹೆಚ್ಚಾಗುತ್ತೆ..! – ಕರಾವಳಿ, ಮಲೆನಾಡು ಭಾಗದಲ್ಲಿ ಮಳೆ – 3-4 ದಿನದಿಂದ ಕಡಿಮೆಯಾದ ಮಳೆ – ಅಡಿಕೆ ಭತ್ತದ ಕೃಷಿ ಚಟುವಟಿಕೆ ಜೋರು NAMMUR EXPRESS NEWS ಬೆಂಗಳೂರು: ಕಳೆದ 3-4 ದಿನಗಳಿಂದ ಮಳೆ ಅಬ್ಬರ ಕೊಂಚ ಕಡಿಮೆ ಆಗಿದೆ. ಒಂದು ವಾರದಲ್ಲಿ ರಾಜ್ಯದಲ್ಲಿ ಅತೀ ಹೆಚ್ಚು ಮಳೆ ಆಗಿತ್ತು. ಈ ನಡುವೆ ಮತ್ತೆ ಮಳೆ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಕರಾವಳಿ ಭಾಗಗಳಲ್ಲಿ ಆಗಸ್ಟ್ 3ರ ನಂತರ ಮತ್ತೆ ಮಳೆಯ ಅಬ್ಬರ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗಲಿದ್ದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇನ್ನುಳಿದಂತೆ ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ವಿಜಯನಗರ ಜಿಲ್ಲೆಗಳಲ್ಲಿ ಮಳೆಯಾಗಲಿದೆ.…
ದೇಶದಲ್ಲೇ ಈಗ ಕ್ರಿಯೇಟಿವ್ ಕಾಲೇಜು ಹೆಸರು! – ಜಾಗೃತಿ ಕೆ.ಪಿ ದೇಶದ ಪ್ರತಿಷ್ಠಿತ ವೈದ್ಯಕೀಯ ಶಿಕ್ಷಣ ಸಂಸ್ಥೆ ಜಿಪ್ಮರ್ (JIPMER)ಗೆ, ಉದ್ಭವ್ ಎಂ.ಆರ್ AIIMSಗೆ ಆಯ್ಕೆ – ವಿದ್ಯಾರ್ಥಿಗಳ ಸಾಧನೆಗೆ ಅಭಿನಂದನೆ NAMMUR EXPRESS NEWS ಕಾರ್ಕಳ: ( Karkala ) ಕಳೆದ ಮೇ ತಿಂಗಳಿನಲ್ಲಿ ನಡೆದ ನೀಟ್ ಪರೀಕ್ಷೆಯಲ್ಲಿ ವೈದ್ಯಕೀಯ ಮಹಾವಿದ್ಯಾಲಯಗಳಿಗೆ ಪ್ರವೇಶ ಆರಂಭಗೊಂಡಿದ್ದು ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಜಾಗೃತಿ ಕೆ ಪಿ ದೇಶದ ಪ್ರತಿಷ್ಠಿತ ವೈದ್ಯಕೀಯ ವಿದ್ಯಾಲಯ ಪುದುಚೆರಿಯ ಜಿಪ್ಮರ್ ಸಂಸ್ಥೆಯಲ್ಲಿ ಪ್ರವೇಶ ಪಡೆದುಕೊಂಡಿದ್ದಾರೆ. ದೇಶಾದ್ಯಂತ ಇಪ್ಪತ್ತು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಬರೆದ ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ (JIPMER) ನಲ್ಲಿ ಪ್ರವೇಶ ಪಡೆಯುವುದು ಅಸಾಮಾನ್ಯ ಸಾಧನೆಯಾಗಿದೆ. ಕು.ಜಾಗೃತಿ ಕೆ ಪಿ ನೀಟ್ ಪರೀಕ್ಷೆಯಲ್ಲಿ 661 ಅಂಕ ಗಳಿಸುವುದರ ಮೂಲಕ ಜಿಪ್ಮರ್ (JIPMER) ನಂತಹ ಉನ್ನತ ವಿದ್ಯಾಲಯದಲ್ಲಿ ದೇಶದಲ್ಲಿಯೇ ಕೇವಲ 243 ಸೀಟ್‌ಗಳನ್ನು ಹೊಂದಿರುವ ಸಂಸ್ಥೆಯಲ್ಲಿ ಪ್ರವೇಶ ಪಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ. ಕ್ರಿಯೇಟಿವ್…
ನಿದ್ದೆ ಮಂಪರಲ್ಲಿ 3 ಬೈಕ್ ಡಿಕ್ಕಿ ಹೊಡೆದ ಕಾರು! – ತೀರ್ಥಹಳ್ಳಿ ತಾಲೂಕಿನ ರಾಮಕೃಷ್ಣಪುರದಲ್ಲಿ ಘಟನೆ – ಮೂರು ಬೈಕ್ ಪುಡಿ ಪುಡಿ… ಪ್ರಾಣಾಪಾಯದಿಂದ ಪಾರು NAMMUR EXPRESS NEWS ತೀರ್ಥಹಳ್ಳಿ: ( Thirthahalli ) ನಿದ್ದೆ ಮಂಪರಲ್ಲಿದ್ದ ಚಾಲಕನೊಬ್ಬ ಕಾರನ್ನು 3 ಬೈಕಿಗೆ ಡಿಕ್ಕಿ ಹೊಡೆಸಿ ಹಲಸಿನ ಮರಕ್ಕೆ ಡಿಕ್ಕಿ ಹೊಡೆದ ಘಟನೆ ತೀರ್ಥಹಳ್ಳಿ ತಾಲೂಕು ರಾಮಕೃಷ್ಣಪುರದಲ್ಲಿ ಸೋಮವಾರ ಸಂಭವಿಸಿದೆ. ಕಮ್ಮರಡಿಯ ಮಾನಪ್ಪ ಎಂಬುವರ ಕಾರು ಅಪಘಾತಕ್ಕೆ ಒಳಗಾಗಿದ್ದು, 3 ಬೈಕಿಗೆ ಡಿಕ್ಕಿ ಹೊಡೆದ ಕಾರು ಕೂಡ ನುಜ್ಜು ಗುಜ್ಜಾಗಿದೆ.ಘಟನೆಯಲ್ಲಿ ಮೂರು ಬೈಕ್ ಪುಡಿ ಪುಡಿಯಾಗಿದ್ದು ಚಾಲಕ ಮತ್ತು ಸ್ಥಳದಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ : ಅಡಿಕೆ ದರ ಎಷ್ಟಿದೆ…ಹೆಚ್ಚಾಯ್ತಾ..? ಕಡಿಮೆ ಆಯ್ತಾ? HOW TO APPLY : NEET-UG COUNSELLING 2023