Categories
ಮಲ್ನಾಡ್

ಪ್ರವಾಸ ಸಂಕಟ: ಕೊಡಚಾದ್ರಿಗೆ ಪ್ರವೇಶ ನಿರ್ಬಂಧ!

ಪ್ರವಾಸ ಸಂಕಟ: ಕೊಡಚಾದ್ರಿಗೆ ಪ್ರವೇಶ ನಿರ್ಬಂಧ!
– ಮುಳ್ಳಯ್ಯನಗಿರಿ ವೀಕ್ಷಣೆಗೆ ವಿಧಿಸಿದ್ದ ನಿರ್ಬಂಧ ತೆರವು
– ಕೊಲ್ಲೂರು ಸುತ್ತ ಮುತ್ತ ಸೇರಿ ಹಲವು ಕಡೆ ಎಂಟ್ರಿ ಇಲ್ಲ

NAMMUR EXPRESS NEWS
ತೀರ್ಥಹಳ್ಳಿ: ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು ಹಳ್ಳ- ಕೊಳ್ಳಜಲಪಾತಗಳಲ್ಲಿ ನೀರು ಧುಮ್ಮಿಕ್ಕುತ್ತಿದೆ. ನಿರಂತರ ಮಳೆಯಿಂದ ಭೂ ಕುಸಿತ ಗಳೂ ಘಟಿಸುತ್ತಿವೆ. ಪ್ರವಾಸಿ ತಾಣಗಳಿಗೆ ತೆರಳುವವರು ಸ್ಥಳದ ಸೂಕ್ತ ಪರಿಚಯ ಇಲ್ಲದ ಅನಾಹುತಗಳಿಗೆ ಈಡಾಗಿ ಸಾವು- ನೋವುಗಳು ಸಂಭವಿಸುತ್ತಿರುವುದನ್ನು ತಡೆಯುವ ಉದ್ದೇಶದಿಂದ ಕುದುರೆ ಮುಖ ವನ್ಯಜೀವಿ ವಿಭಾಗವು ಕೊಡಚಾದ್ರಿ ಗಿರಿಶಿಖರಕ್ಕೆ ತಾತ್ಕಾಲಿಕವಾಗಿ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿದೆ.
ಕೊಡಚಾದ್ರಿ ಶಿಖರದ ಮಾರ್ಗದಲ್ಲಿ ಸಣ್ಣ ಸಣ್ಣ ಜಲಪಾತಗಳು ಸೃಷ್ಟಿಯಾಗಿ ನೀರು ಮಾರ್ಗದ ಮೇಲೂ ಬರುತ್ತದೆ. ಭೂ ಕುಸಿತಗಳಾಗುವ ಸಾಧ್ಯತೆಯೂ ಜಾಸ್ತಿ ಇರುವುದರಿಂದ ಪ್ರವಾಸಿಗರ ಹಿತದೃಷ್ಟಿಯಿಂದ ಪ್ರವೇಶ ನಿರ್ಬಧಿಸಿ ಆದೇಶ ಪ್ರಕಟಿಸಲಾಗಿದೆ. ಇದರಿಂದ ಸಹಜವಾಗಿ ಚಾರಣಿಗರಿಗೆ, ಪ್ರವಾಸಿ ಗರಿಗೆ ನಿರಾಶೆಯಾದರೆ ಇಲ್ಲಿ ಪ್ರವಾಸೋದ್ಯಮವನ್ನು ಅವಲಂಬಿಸಿರುವ ಜೀಪ್ ಮಾಲೀಕರು, ಚಾಲಕರು, ಹೋಟೆಲ್,ಹೋಂ ಸ್ಟೇ ಮಾಲೀಕರು, ವ್ಯಾಪಾರಸ್ಥರು ನಷ್ಟದ ಆತಂಕದಲ್ಲಿದ್ದಾರೆ.

ಮುಳ್ಳಯ್ಯನಗಿರಿ, ದತ್ತಪೀಠ ವೀಕ್ಷಣೆಗೆ ವಿಧಿಸಿದ್ದ ನಿರ್ಬಂಧ ತೆರವು

ಮಲೆನಾಡಿನಲ್ಲಿ ಮಳೆಯ ಪ್ರಮಾಣ ತಗ್ಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳಾಗಿರುವ ಮುಳ್ಳಯ್ಯನಗಿರಿ, ದತ್ತಪೀಠ ಸೇರಿದಂತೆ ಗಿರಿ ಪ್ರದೇಶಗಳ ವೀಕ್ಷಣೆಗೆ ಜಿಲ್ಲಾಡಳಿತ ವಿಧಿಸಿದ್ದ ನಿರ್ಬಂಧವನ್ನು ತೆರವುಗೊಳಿಸಲಾಗಿದೆ.
ಕೆಲ ದಿನಗಳ ಹಿಂದೆ ಮುಳ್ಳಯ್ಯನ ಗಿರಿ ಸಾಲಿನಲ್ಲಿ ಧರೆ ಕುಸಿತ ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ಮುಳ್ಳಯ್ಯನಗಿರಿ, ದತ್ತಪೀಠ ಸೇರಿದಂತೆ ಗಿರಿ ಪ್ರದೇಶಗಳಿಗೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು.ಇದೀಗ ಮಳೆ ತಗ್ಗಿರುವುದರಿಂದ ಸೋಮವಾರದಿಂದ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ತೆರಳಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.

ಹಿಡ್ಲುಮನೆ ಜಲಪಾತಕ್ಕೂ ನಿಷೇಧ!

ಕೊಲ್ಲೂರು ವನ್ಯಜೀವಿ ವಲಯದಲ್ಲಿ ಅತೀಯಾದ ಮಳೆಯಿಂದಾಗಿ ಹಿಡ್ಲುಮನೆ ಜಲಪಾತದಲ್ಲಿ ನೀರಿನ ರಭಸ ಜಾಸ್ತಿಯಾಗಿರುವುದರಿಂದ ತುಂಬಾ ಅಪಾಯಕಾರಿಯಾಗಿದ್ದು, ಪ್ರವೇಶವನ್ನು ನಿಷೇದಿಸಲಾಗಿದೆ.

ಇದನ್ನೂ ಓದಿ : ಕಾಳುಮೆಣಸು ಬೆಳೆಗಾರರಿಗೆ ಬಂಪರ್!

HOW TO APPLY : NEET-UG COUNSELLING 2023

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.