Author: Nammur Express Admin

ಅಪ್ರಾಪ್ತಳ ಮೇಲೆ ಪದೇ ಪದೇ ಅತ್ಯಾಚಾರ! – ಕರಾವಳಿಯಲ್ಲಿ ಮತ್ತೊಂದು ಹೇಯ ಘಟನೆ – ಮಂಗಳೂರು: 5ನೇ ಮಹಡಿಯಿಂದ ಬಿದ್ದು ಸಾವು! – ಮಗಳ ಮೇಲೆ ಅತ್ಯಾಚಾರ-ತಂದೆ ಬಂಧನ – ಕೃಷಿ ಹೊಂಡದಲ್ಲಿ ಬಿದ್ದು ದಂಪತಿ ಜೀವ ಹೋಯಿತು – ಬೈಕ್ ಕೀ ವಿಚಾರಕ್ಕೆ ಗಲಾಟೆ: ಕೊಲೆಯಲ್ಲಿ ಅಂತ್ಯ..! NAMMUR EXPRESS NWES ಮಂಗಳೂರು: ಅಪ್ರಾಪ್ತ ವಯಸ್ಕಳ ಮೇಲೆ ಮೂವರು ಯುವಕರು ಅತ್ಯಾಚಾರ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಅಪ್ರಾಪ್ತ ಬಾಲಕಿ ಮೇಲೆ ಮೂವರು ಯುವಕರು ಅತ್ಯಾಚಾರ ಎಸಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸದ್ಯ ವಿಟ್ಲ ಪೊಲೀಸ್ ಠಾಣೆಯಲ್ಲಿ ಮೂವರು ಯುವಕರ ವಿರುದ್ಧ ಪ್ರಕರಣ ದಾಖಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ ನಡೆದಿದೆ ಎನ್ನಲಾಗಿದ್ದು ಮೂವರು ಬಂಧಿತ ಆರೋಪಿಗಳನ್ನು ಅಕ್ಷಯ್ ದೇವಾಡಿಗ (24), ಕಮಲಾಕ್ಷ ಬೆಳ್ಳಾಡ (30), ಸುಕುಮಾರ ಬೆಳ್ಳಾಡ (28) ಬಂಧಿಸಲಾಗಿದೆ. ಈ ಮೂವರು, 2019ರಿಂದ ನಿರಂತರವಾಗಿ ವಿವಿಧ ಕಡೆ ಅತ್ಯಾಚಾರ ಎಸಗಿದ್ದರು ಎನ್ನುವ ಆರೋಪವೂ ಕೇಳಿಬಂದಿದೆ.…

Read More

ತೀರ್ಥಹಳ್ಳಿಯ ಬಳಿ ಮನೆ ಮುಂದೆಯೇ ಬಿದ್ದ ಕಾರು! – ಚರಂಡಿಗೆ ಉರುಳಿದ ಓಮಿನಿ: ಅಪಾಯದಿಂದ ಪಾರು – ಕೂದಲೆಳೆಯ ಅಂತರದಲ್ಲಿ ವಾಹನ ಸವಾರರು ಪಾರು – ಮಳೆ ಹೆಚ್ಚುತ್ತಿರುವುದರಿಂದ ಹೆಚ್ಚುತ್ತಿರುವ ಆಕ್ಸಿಡೆಂಟ್! NAMMUR EXPRESS NEWS ತೀರ್ಥಹಳ್ಳಿ: ( Thirthahalli ) ಮಳೆಗಾಲದಲ್ಲಿ ಅಪಘಾತ ಹೆಚ್ಚುತ್ತಿದ್ದು, ಶನಿವಾರ ರಾತ್ರಿ ಹಿಟ್ ಅಂಡ್ ರನ್ ಘಟನೆ ನಡುವೆಯೇ ತೀರ್ಥಹಳ್ಳಿ ಸಮೀಪದ ಕೈಮರ ಬಳಿ ಎರಡು ಅಪಘಾತಗಳು ಸಂಭವಿಸಿದೆ. ಒಂದು ಘಟನೆಯಲ್ಲಿ ಕೈಮರ ಬಳಿ ಸುಣ್ಣದ ಮನೆ ಸಮೀಪ ( Omni car ) ಓಮಿನಿ ಚರಂಡಿಗೆ ಬಿದ್ದಿದ್ದು ಕೂದಲೆಳೆಯ ಅಂತರದಲ್ಲಿ ಚಾಲಕರು ಪಾರಾಗಿದ್ದಾರೆ. ಇನ್ನೊಂದು ಘಟನೆಯಲ್ಲಿ ಹಾಲಿಗೆ ಎಂಬಲ್ಲಿ ಮನೆಯ ಮೇಲೆ ಕಾರು ಬಿದ್ದಿರುವಂತಹ ಘಟನೆ ನಡೆದಿದ್ದು, ಮನೆಯಲ್ಲಿ ಇದ್ದವರು ಮತ್ತು ಕಾರಲ್ಲಿ ಇದ್ದವರು ಅಪಾಯದಿಂದ ಪಾರಾಗಿದ್ದಾರೆ. ಮಳೆ ಹೆಚ್ಚುತ್ತಿದ್ದಂತೆ ಅಪಾಯ ಕೂಡ ಹೆಚ್ಚುತ್ತಿದ್ದು, ಜನ ಎಚ್ಚರಿಕೆ ವಹಿಸಬೇಕಿದೆ ಮತ್ತು ವಾಹನ ಸವಾರರು ಕೂಡ ಎಚ್ಚರಿಕೆಯ ಚಾಲನೆ ಮಾಡಬೇಕಿದೆ. ಇದನ್ನೂ ಓದಿ :…

Read More

ಟೊಮ್ಯಾಟೋ ಬೆಲೆ ಕೆಜಿಗೆ 200 ರೂ.? – ಪ್ರತಿ ಕೆಜಿಗೆ 200 ರಿಂದ 250 ರೂ.ಗೆ ಏರಿಕೆ ಸಾಧ್ಯತೆ – ಟೊಮ್ಯಾಟೊ ಬಳಕೆಯೇ ಬಿಟ್ರು! NAMMUR EXPRESS NEWS ನವದೆಹಲಿ: ರಾಜ್ಯದಲ್ಲಿ ತಮಿಳುನಾಡಿನಲ್ಲಿ ಟೊಮ್ಯಾಟೊ ಬೆಲೆ ಗಗನಕ್ಕೇರಿದ್ದು, ರಾಜ್ಯದ ರಾಜಧಾನಿಯಲ್ಲಿ ಕೆಂಪು ಹಣ್ಣಿನ ಸಗಟು ಬೆಲೆ ಕಿಲೋಗ್ರಾಂಗೆ 200 ರೂ. ಸಗಟು ಮಾರುಕಟ್ಟೆಯಲ್ಲಿ ಟೊಮ್ಯಾಟೊ ಕಿಲೋಗೆ 200 ರೂ.ಗೆ ಮಾರಾಟವಾಗುತ್ತಿದ್ದರೆ, ಕೆಲವು ಚಿಲ್ಲರೆ ಅಂಗಡಿಗಳಲ್ಲಿ ಟೊಮ್ಯಾಟೊ ಕೆಜಿಗೆ 185 ರೂ. ಒಂದು ವಾರದಲ್ಲಿ ಪ್ರತಿ ಕೆಜಿಗೆ 250 ರೂ.ಗೆ ಏರುವ ಸಾಧ್ಯತೆಯಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ. ತಮಿಳುನಾಡಿನಲ್ಲಿ ಹೆಚ್ಚಳ!: ಕೊಯಂಬೆಡು ಸಗಟು ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ಪಿ ಸುಕುಮಾರನ್ ಐಎಎನ್‌ಎಸ್‌ನೊಂದಿಗೆ ಮಾತನಾಡುತ್ತಾ, “ಈ ಮಾರುಕಟ್ಟೆ ಪ್ರಾರಂಭವಾದ ನಂತರ ಇದೇ ಮೊದಲ ಬಾರಿಗೆ ಟೊಮೆಟೊ ಬೆಲೆ ಕಿಲೋಗ್ರಾಂಗೆ 200 ರೂಪಾಯಿ ತಲುಪಿದೆ. ಜುಲೈ 20 ರ ವೇಳೆಗೆ ದರಗಳು ಸ್ಥಿರವಾಗಿರುತ್ತವೆ ಎಂದು ನಾವು ನಿರೀಕ್ಷಿಸಿದ್ದೇವೆ. ಆದರೆ ಹಠಾತ್ ಮಳೆಯು ಬೆಳೆಗಳ ನಷ್ಟಕ್ಕೆ ಕಾರಣವಾಗಿದೆ…

Read More

ಮಲೆನಾಡಲ್ಲಿ ನೋ ನೆಟ್ವರ್ಕ್: ಟವರ್ ನಿರ್ಮಾಣ ಯಾವಾಗ? – ಸರ್ಕಾರಿ ಕಚೇರಿ, ಗ್ಯಾರಂಟಿ ಯೋಜನೆ ನೋಂದಣಿಗೆ ನೆಟ್ವರ್ಕ್ ಕಂಟಕ! – ಮೊಬೈಲ್ ನೆಟ್ವರ್ಕ್ ಸಿಗದಕ್ಕೆ ಅಧಿಕಾರಿಗಳಿಗೆ ದಿಗ್ಬಂಧನ NAMMUR EXPRESS NEWS ಶಿವಮೊಗ್ಗ: ( Shivamogga )  ಶಿವಮೊಗ್ಗ ಜಿಲ್ಲೆಯ ಅನೇಕ ಭಾಗದಲ್ಲಿ ಇಂದಿಗೂ ನೆಟ್ವರ್ಕ್ ಸಿಗುತ್ತಿಲ್ಲ. ತುರ್ತು ಕೆಲಸ ಮಾಡಲು ಅಥವಾ ಸಂದೇಶ ನೀಡಲು ಕೂಡ ಸಾಧ್ಯ ಆಗುತ್ತಿಲ್ಲ. ಇದರಿಂದ ಜನತೆಗೆ ಭಾರಿ ತೊಂದರೆ ಆಗುತ್ತಿದೆ. ಹೊಸನಗರ, ಸಾಗರ, ತೀರ್ಥಹಳ್ಳಿ, ಶಿವಮೊಗ್ಗ ಗ್ರಾಮಾಂತರ ತಾಲೂಕು ಸೇರಿ ಅನೇಕ ಕಡೆ ಮೊಬೈಲ್ ಸಂಪರ್ಕ ಸಾಧ್ಯವಾಗುತ್ತಿಲ್ಲ ಎಂಬ ಆಕ್ರೋಶ ಹೆಚ್ಚಾಗಿದೆ. ಒಂದು ಕಡೆ ಬಿಎಸ್ಎನ್ ಎಲ್ ಅತ್ಯಂತ ಕಳಪೆ ನೆಟ್ವರ್ಕ್ ನೀಡಿದರೆ ಇನ್ನೊಂದು ಕಡೆ ಖಾಸಗಿ ಮೊಬೈಲ್ ಸೇವಾ ಸಂಸ್ಥೆಗಳು ಕೂಡ ಇತ್ತೀಚಿಗೆ ಉತ್ತಮ ಸೇವೆ ನೀಡುವಲ್ಲಿ ನಿರ್ಲಕ್ಷ್ಯ ಮಾಡುತ್ತಿವೆ ಎಂಬ ದೂರು ಕೇಳಿ ಬಂದಿದೆ. ಅಧಿಕಾರಿಗಳ ಜತೆ ರಾಘವೇಂದ್ರ ಮಹತ್ವದ ಸಭೆ ಶಿವಮೊಗ್ಗ ಜಿಲ್ಲೆಗೆ ಮಂಜೂರಾಗಿರುವ ( BSNL ) ಬಿಎಸ್‌ಎನ್‌ಎಲ್…

Read More

ಮತ್ತೆ ಕಸ್ತೂರಿ ರಂಗನ್ ವರದಿ ಭೂತದ ಸದ್ದು! – ಮಲೆನಾಡಿನಲ್ಲಿ ಸಾವಿರಾರು ಹಳ್ಳಿಗಳು ಅರಣ್ಯ ವ್ಯಾಪ್ತಿಗೆ? – ಮತ್ತೆ ಶುರುವಾಯ್ತಾ ಈ ಪ್ರಕ್ರಿಯೆ… ಏನಿದು? NAMMUR EXPRESS NEWS ಚಿಕ್ಕಮಗಳೂರು: ರಾಜ್ಯ ಸರ್ಕಾರದ ಅರಣ್ಯ ಜೀವಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಅಂತರ್ ರಾಜ್ಯ ಸಚಿವರ ಜೊತೆ ನಡೆದ ಸಮಾವೇಶವೊಂರಲ್ಲಿ ಪಶ್ಚಿಮ ಘಟ್ಟಗಳ ಜೀವ ವೈವಿದ್ಯತೆಯನ್ನು ಸಂರಕ್ಷಿಸಲು ಕಸ್ತೂರಿ ರಂಗನ್ ವರದಿಯನ್ನು ಜಾರಿಗೆ ತರಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿರುವ ಹೇಳಿಕೆ ಈಗ ಮಲೆನಾಡಿಗರ ಆತಂಕಕ್ಕೆ ಕಾರಣ ಆಗಿದೆ. ಹತ್ತಾರು ವರ್ಷಗಳಿಂದ ಈ ಯೋಜನೆ ಬಗ್ಗೆ ಮಲೆನಾಡು ಭಾಗದ ಜನರಿಗೆ ಭಯ ಇದೆ. ಈ ಯೋಜನೆ ಜಾರಿ ಆದ್ರೆ ಸಾವಿರಾರು ಹಳ್ಳಿಗಳ ಲಕ್ಷ ಲಕ್ಷ ಜನ ತೊಂದರೆಗೆ ಒಳಗಾಗಲಿದ್ದಾರೆ. ಪಶ್ಚಿಮ ಘಟ್ಟಗಳನ್ನು ಹೊಂದಿರುವ ರಾಜ್ಯದ 11 ಜಿಲ್ಲೆಗಳಿಗೆ ಅರಣ್ಯ ಕಾಯ್ದೆ 1980 ಅನ್ವಯಿಸುತ್ತದೆ. ಈಗಾಗಲೇ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನು ಈ ಕಾಯ್ದೆಯ ಮೂಲಕ ಸಂರಕ್ಷಿಸುವ ಕೆಲಸ ನೆಡೆಯುತ್ತಿದೆ. ಮತ್ತೆ ಕಸ್ತೂರಿ ರಂಗನ್…

Read More

ಕ್ರಿಕೆಟ್ ಆಡಲು ಹೋದ ಇಬ್ಬರು ನೀರಿಗೆ ಬಿದ್ದು ಸಾವು! – ಮಂಗಳೂರಲ್ಲಿ ನಡೆದ ದುರಂತ: ಶವ ಪತ್ತೆ – ಮಳೆಗಾಲದಲ್ಲಿ ನದಿ, ಹಳ್ಳ, ಕೆರೆ ನೀರು ಹುಷಾರ್! NAMMUR EXPRESS NEWS ಮಂಗಳೂರು: ( Mangalore )  ಈಜಲು ಹೋಗಿದ್ದ ಇಬ್ಬರು ಯುವಕರು ನೀರುಪಾಲಾದ ಘಟನೆ ಮಂಗಳೂರಲ್ಲಿ ನಡೆದಿದೆ. ಮಂಗಳೂರು ನಗರದ ಪಡೀಲ್ ಅಳಪೆ ಪಡ್ಡು ರೈಲ್ವೇ ಬ್ರಿಡ್ಜ್ ಸಮೀಪ ಈ ಘಟನೆ ನಡೆದಿದೆ. ಅಳಪೆ ಪಡ್ಡುರೆಂಜ ನಿವಾಸಿ ವರುಣ್ (27) ಮತ್ತು ಎಕ್ಕೂರು ಕೆಎಚ್‌ಬಿ ಕಾಲನಿ ನಿವಾಸಿ ವೀಕ್ಷಿತ್ (28) ಮೃತರು. ಭಾನುವಾರ ಸಂಜೆ ವೇಳೆ 6 ಮಂದಿ ಗೆಳೆಯರು ಒಟ್ಟಾಗಿ ಕ್ರಿಕೆಟ್ ಆಡಲು ತೆರಳಿದ್ದು, ಈ ಸಂದರ್ಭ ವರುಣ್ ಮತ್ತು ವೀಕ್ಷಿತ್ ರೈಲ್ವೆಯ ಟ್ರಾಕ್ ಪಕ್ಕದ ಹಳ್ಳದ ದಡದಲ್ಲೇ ಕುಳಿತಿದ್ದರು. ಉಳಿದವರು ಕ್ರಿಕೆಟ್ ಮೈದಾನಕ್ಕೆ ತೆರಳಿದ್ದರು. ಹಳ್ಳದ ದಡದಲ್ಲಿ ಕುಳಿತಿದ್ದ ಸಂದರ್ಭ ವರುಣ್ ನೀರಿಗೆ ಬಿದ್ದಿದ್ದು, ಇದನ್ನು ನೋಡಿದ ವೀಕ್ಷಿತ್ ಕೂಡಲೇ ಹಳ್ಳಕ್ಕೆ ಅವರನ್ನು ರಕ್ಷಿಸಲು ಧುಮಿಕಿದರು. ಆದರೆ…

Read More

ಅಡಿಕೆ ದರ ಎಷ್ಟಿದೆ…ಹೆಚ್ಚಾಯ್ತಾ..? ಕಡಿಮೆ ಆಯ್ತಾ? – ಸರಕು ಕೊಂಚ ಏರಿಕೆ… ಇಲ್ಲಿದೆ ಡೀಟೇಲ್ಸ್ NAMMUR EXPRESS NEWS ಸರಕು – 60009 – 80400 ಬೆಟ್ಟೆ –   52009 – 54509 ರಾಶಿ –   51009 – 55099 ಗೊರಬಲು – 40009 – 42509 ಇದನ್ನೂ ಓದಿ : ರಾಜ್ಯದಲ್ಲಿ ಮತ್ತೆ ಸುದ್ದಿ ಮಾಡಿದ ತೀರ್ಥಹಳ್ಳಿ ಪ್ರತೀಕ್ ಗೌಡ ಕೇಸ್! HOW TO APPLY : NEET-UG COUNSELLING 2023

Read More

ಅಡಿಕೆ ಆಯ್ತು, ಈಗ ಕೊಬ್ಬರಿಗೂ ಡಿಮ್ಯಾಂಡ್! – ಇನ್ನೊಂದೆಡೆ ಟೊಮೆಟೊ, ಶುಂಠಿಗೆ ಕಳ್ಳರ ಕಾಟ! – ಕುಸಿತವಾಗಿದ್ದ ಕೊಬ್ಬರಿ ದರವೂ ಏರಿಕೆ NAMMUR EXPRESS NEWS ರಾಜ್ಯ ಮಾರುಕಟ್ಟೆಯಲ್ಲಿ ತೀವ್ರ ಕುಸಿತ ಕಂಡಿದ್ದ ಕೊಬ್ಬರಿ ಬೆಲೆ ಸದ್ಯ ಏರಿಕೆಯ ಹಾದಿಯಲ್ಲಿದ್ದು ತೆಂಗು ಬೆಳೆಗಾರರಲ್ಲಿ ಆತ್ಮ ವಿಶ್ವಾಸ ಮೂಡಿಸಿದೆ. ತಿಪಟೂರು ಸೇರಿದಂತೆ ಪ್ರಮುಖ ಮಾರುಕಟ್ಟೆಗಳಲ್ಲಿ ಕೊಬ್ಬರಿ ಕ್ವಿಂಟಾಲ್‌ಗೆ ಗರಿಷ್ಠ 10000 ರೂಪಾಯಿಗಳಿಗೆ ಮಾರಾಟವಾಗಿದೆ. ಇನ್ನು 57 ಸಾವಿರ ದಾಟಿದ ಬಳಿಕ ಅಲ್ಪ ಕುಸಿತ ಕಂಡಿದ್ದ ಅಡಿಕೆ ಕೂಡ ಏರಿಕೆಯಾಗುತ್ತಿದೆ. ರಾಜ್ಯದ ಪ್ರಮುಖ ಕೊಬ್ಬರಿ ಮಾರುಕಟ್ಟೆಯಾದ ತಿಪಟೂರಿನಲ್ಲಿ ಕೂಡ ಕೊಬ್ಬರಿ ದರ ಏರಿಕೆ ಕಂಡಿದೆ. ಕ್ವಿಂಟಾಲ್ ಕೊಬ್ಬರಿ ಗರಿಷ್ಠ 10000 ರೂಪಾಯಿಗೆ ಮಾರಾಟವಾಗಿದ್ದರೆ, ಸರಾಸರಿ ದರ 9500 ರೂಪಾಯಿ ಆಗಿತ್ತು. ಜುಲೈ 26ರಂದು ಗರಿಷ್ಠ ದರ 10206 ರೂಪಾಯಿವರೆಗೆ ಮಾರಾಟವಾಗಿತ್ತು. ಅರಸೀಕೆರೆ ಕೊಬ್ಬರಿ ಮಾರುಕಟ್ಟೆಯಲ್ಲಿ ಕೊಬ್ಬರಿ ಗರಿಷ್ಠ 10008 ರೂಪಾಯಿ ತಲುಪಿದೆ. ತುರುವೇಕೆರೆಯಲ್ಲಿ ಕ್ವಿಂಟಾಲ್ ಕೊಬ್ಬರಿ ದರ ಗರಿಷ್ಠ 10,200 ವರೆಗೆ ಮಾರಾಟವಾಗಿದೆ. ತುಮಕೂರು…

Read More

ಕದ್ದ ಬೈಕ್ ಕೊಡಿಸಿದ ಕಲ್ಕುಡ ದೇವರು?! – ದಕ್ಷಿಣ ಕನ್ನಡದ ಸುಳ್ಯದಲ್ಲಿ ನಡೆದ ಪವಾಡ ಘಟನೆ – ಸರ್ಕಾರಿ ಬಸ್ಸಲ್ಲಿ ಕಿರುಕುಳ: ಒಬ್ಬನ ಬಂಧನ NAMMUR EXPRESS NEWS ಸುಳ್ಯ( ದಕ್ಷಿಣ ಕನ್ನಡ): ಇತ್ತೀಚಿಗೆ ದೈವ ಪವಾಡಗಳು ಹೆಚ್ಚಾಗಿ ವರದಿ ಆಗುತ್ತಿವೆ. ಕರಾವಳಿಯಲ್ಲಿ ಕೊರಗಜ್ಜ ಬಾಲಕಿಯೊಬ್ಬಳನ್ನು ರಕ್ಷಿಸಿದ ಘಟನೆ ಭಾರೀ ಸುದ್ದಿ ನಡುವೆ ಕಳವಾಗಿದ್ದ ಬೈಕ್ ಕಳಕೊಂಡವರು ಕಲ್ಕುಡ ದೇವರಲ್ಲಿ ಹರಕೆ ಹೇಳಲು ಹೋಗುತ್ತಿದ್ದಾಗ ಆತನ ಕೈಗೆ ಕಳ್ಳ ಸಿಕ್ಕಿಬಿದ್ದ ಘಟನೆ ಸುಳ್ಯದಲ್ಲಿ ನಡೆದಿದೆ. ಬೈಕನ್ನು ಕದ್ದು ಮರುದಿನ ಅದೇ ಬೈಕಿನಲ್ಲಿ ತೆರಳುತ್ತಿದ್ದ ಕಳ್ಳ ಹರಕೆ ಹೇಳಲು ಹೋಗುತ್ತಿದ್ದ ಬೈಕ್ ಮಾಲಿಕನಿಗೆ ಸಿಕ್ಕಿಬಿದ್ದಿದ್ದಾನೆ. ಸಿಕ್ಕಿಬಿದ್ದ ಕಳ್ಳನನ್ನು ಮೈಸೂರಿನ ಮೆಡಿಕಲ್ ಕಾಲೇಜು ವಿದ್ಯಾರ್ಥಿ ನಿರಂಜನ್ ಎಂದು ಗುರುತಿಸಲಾಗಿದೆ. ಉಬರಡ್ಕದ ಕಾರ್ತಿಕ್ ಸುಳ್ಯಕೋಡಿ ಎಂಬವರು ಪುತ್ತೂರಿನಲ್ಲಿ ಕ್ಯಾಂಪ್ಸ್ ಉದ್ಯೋಗಿಯಾಗಿದ್ದು, ಜು.25ರಂದು ಸಂಜೆ ತನ್ನ ಬೈಕ್‌ನ್ನು ಸುಳ್ಯ ಸರಕಾರಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಿ ರಾತ್ರಿ ಪಾಳಿಯ ಕೆಲಸಕ್ಕೆ ಬಸ್ ನಲ್ಲಿ ಪುತ್ತೂರಿಗೆ ತೆರಳಿದ್ದರು. ಮರುದಿನ ಬಂದಾಗ…

Read More

ತೀರ್ಥಹಳ್ಳಿಯಲ್ಲಿ ಪತ್ರಕರ್ತರ ದಿನದ ರಂಗು! – ಒಂದೇ ವೇದಿಕೆಯಲ್ಲಿ ಒಟ್ಟಿಗೆ ಕುಳಿತ ಮೂವರು ನಾಯಕರು – ಸಾಧಕರು, ಪತ್ರಕರ್ತರ ಸೇವೆಗೆ ಗೌರವ: ಕಾರ್ಯಕ್ರಮದಲ್ಲಿ ಯಾರು ಏನು ಹೇಳಿದರು? NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಪತ್ರಕರ್ತರ ದಿನವನ್ನು ಶನಿವಾರ ತಾಲೂಕಿನ ಎಲ್ಲಾ ಪ್ರಮುಖ ನಾಯಕರು, ಸಂಘಟನೆ, ಜನರ ಸಮ್ಮುಖದಲ್ಲಿ ನಡೆಸಲಾಯಿತು. ತೀರ್ಥಹಳ್ಳಿ ಪಟ್ಟಣದ ತುಂಗಾ ತೀರದ ಲಯನ್ಸ್ ಭವನದಲ್ಲಿ ಒಂದೇ ವೇದಿಕೆಯಲ್ಲಿ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಸಹಕಾರಿ ನಾಯಕ ಡಾ. ಮಂಜುನಾಥ ಗೌಡ ಒಟ್ಟಿಗೆ ಕುಳಿತ ಮೂವರು ನಾಯಕರು ಗಮನ ಸೆಳೆದರು. ಸಾಧಕರು, ಪತ್ರಕರ್ತರ ಸೇವೆಗೆ ಗೌರವ: ಕಾರ್ಯಕ್ರಮದಲ್ಲಿ ಉದ್ಘಾಟನೆ ಮೂಲಕ ಮಾತನಾಡಿದ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಸಂವಿಧಾನದ ನಾಲ್ಕನೇ ಅಂಗವಾಗಿರುವ ಮಾಧ್ಯಮಗಳನ್ನು ಗುರುತಿಸುತ್ತೇವೆ. ಪತ್ರಿಕೋದ್ಯಮ ಈಗ ಬಹಳ ದೊಡ್ಡದಾಗಿ ಬೆಳೆದಿದೆ. ಒಬ್ಬನ ಚಾರಿತ್ರ್ಯ ಹರಣ ಮಾಡಲು ಪತ್ರಿಕೆಯೊಂದು ಸಾಕು. ಭ್ರಷ್ಟಾಚಾರ ಮಾಡಿದವನನ್ನು ತೋರಿಸುವುದಕ್ಕೂ ಮಾಡದೇ ಇರುವನನ್ನು ತೋರಿಸುವುದಕ್ಕೂ…

Read More