Categories
ತೀರ್ಥಹಳ್ಳಿ

ತೀರ್ಥಹಳ್ಳಿಯಲ್ಲಿ ಪತ್ರಕರ್ತರ ದಿನದ ರಂಗು!

ತೀರ್ಥಹಳ್ಳಿಯಲ್ಲಿ ಪತ್ರಕರ್ತರ ದಿನದ ರಂಗು!
– ಒಂದೇ ವೇದಿಕೆಯಲ್ಲಿ ಒಟ್ಟಿಗೆ ಕುಳಿತ ಮೂವರು ನಾಯಕರು
– ಸಾಧಕರು, ಪತ್ರಕರ್ತರ ಸೇವೆಗೆ ಗೌರವ: ಕಾರ್ಯಕ್ರಮದಲ್ಲಿ ಯಾರು ಏನು ಹೇಳಿದರು?

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಪತ್ರಕರ್ತರ ದಿನವನ್ನು ಶನಿವಾರ ತಾಲೂಕಿನ ಎಲ್ಲಾ ಪ್ರಮುಖ ನಾಯಕರು, ಸಂಘಟನೆ, ಜನರ ಸಮ್ಮುಖದಲ್ಲಿ ನಡೆಸಲಾಯಿತು. ತೀರ್ಥಹಳ್ಳಿ ಪಟ್ಟಣದ ತುಂಗಾ ತೀರದ ಲಯನ್ಸ್ ಭವನದಲ್ಲಿ ಒಂದೇ ವೇದಿಕೆಯಲ್ಲಿ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಸಹಕಾರಿ ನಾಯಕ ಡಾ. ಮಂಜುನಾಥ ಗೌಡ ಒಟ್ಟಿಗೆ ಕುಳಿತ ಮೂವರು ನಾಯಕರು ಗಮನ ಸೆಳೆದರು.

ಸಾಧಕರು, ಪತ್ರಕರ್ತರ ಸೇವೆಗೆ ಗೌರವ:

ಕಾರ್ಯಕ್ರಮದಲ್ಲಿ ಉದ್ಘಾಟನೆ ಮೂಲಕ ಮಾತನಾಡಿದ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ,
ಸಂವಿಧಾನದ ನಾಲ್ಕನೇ ಅಂಗವಾಗಿರುವ ಮಾಧ್ಯಮಗಳನ್ನು ಗುರುತಿಸುತ್ತೇವೆ. ಪತ್ರಿಕೋದ್ಯಮ ಈಗ ಬಹಳ ದೊಡ್ಡದಾಗಿ ಬೆಳೆದಿದೆ. ಒಬ್ಬನ ಚಾರಿತ್ರ್ಯ ಹರಣ ಮಾಡಲು ಪತ್ರಿಕೆಯೊಂದು ಸಾಕು. ಭ್ರಷ್ಟಾಚಾರ ಮಾಡಿದವನನ್ನು ತೋರಿಸುವುದಕ್ಕೂ ಮಾಡದೇ ಇರುವನನ್ನು ತೋರಿಸುವುದಕ್ಕೂ ಬಹಳ ವ್ಯತ್ಯಾಸವಿದೆ. ಪತ್ರಿಕೋದ್ಯಮದವರ ಬಳಿ ಇರುವ ಆಯುಧ ರಾಜಕೀಯದವರ ಬಳಿ ಇರುವುದಿಲ್ಲ. ಪತ್ರಕರ್ತ ಈ ಸಮಾಜದ ಪ್ರಮುಖ ವ್ಯಕ್ತಿ. ಪತ್ರಿಕಾರಂಗ ಲಾಭದಾಯಕ ಮಾಡುವ ಕೆಲಸವಲ್ಲ. ಪತ್ರಿಕಾರಂಗದಲ್ಲಿ ಅಡ್ಡದಾರಿಯನ್ನು ಹಿಡಿದು ಕೆಲಸ ಮಾಡುವ ಅವಶ್ಯಕತೆ ಇಲ್ಲ ಎಂದರು.

ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ಪ್ರತಿಯೊಬ್ಬ ಮಕ್ಕಳು ಪತ್ರಿಕೆ ಓದಬೇಕು ಅಂತ ಹೇಳುತ್ತಿದ್ದರು ಈಗ ಓದುವುದೇ ಬೇಡ ಅನಿಸುತ್ತದೆ, ಮುಖಪುಟದಲ್ಲಿ ಸುದ್ದಿಗಿಂತ ಜಾಹಿರಾತುಗಳೇ ಇರುತ್ತದೆ. ದೃಶ್ಯ ಮಾಧ್ಯಮಗಳಿಗಿಂತ ಮುದ್ರಣ ಮಾಧ್ಯಮಗಳು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತದೆ. ಮಾಧ್ಯಮಗಳು ಕೆಲಸ ನಿರ್ವಹಿಸಿಸುವಾಗ ಮತ್ತೊಬ್ಬರಿಗೆ ಪಾಠ ಮಾಡುವಂತೆ ಇರಬೇಕು. ಓದಿದವರಿಂದಲೇ ಸಮಾಜ ಹಾಳಾಗುತ್ತಿದೆ ಎಂದರೆ ತಪ್ಪಾಗಲ್ಲ. ಸಮಾಜವನ್ನು ಸರಿಪಡಿಸುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು ಎಂದರು.

ಸಹಕಾರಿ ನಾಯಕ ಡಾ. ಆರ್. ಎಂ. ಮಂಜುನಾಥ ಗೌಡ ಮಾತನಾಡಿ, ಸಮಾಜದ ಸ್ವಾಸ್ಥ್ಯವನ್ನು ಕೆದಡುವ ಕೆಲಸ ಪತ್ರಿಕಾರಂಗ ಮಾಡಬಾರದು. ಇದೊಂದು ಅವಿಸ್ಮರಣೀಯ ಕಾರ್ಯಕ್ರಮ ಎಂದರು. ಇದಕ್ಕೂ ಮೊದಲು ಪ್ರಾಸ್ತಾವಿಕವಾಗಿ ಮಾತನಾಡಿದ ತೀರ್ಥಹಳ್ಳಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ಮೋಹನ್ ಶೆಟ್ಟಿ ತೀರ್ಥಹಳ್ಳಿ ಪತ್ರಕರ್ತರಿಗಾಗಿ ಪತ್ರಿಕಾಭವನ ನಿರ್ಮಿಸಿ ಎಂದು ಮನವಿ ಮಾಡಿದರು. ಖ್ಯಾತ ವ್ಯಂಗ್ಯ ಚಿತ್ರಕಾರ, ನಿವೃತ್ತ ಪ್ರಿನ್ಸಿಪಾಲರಾದ ಪ್ರೊ. ನಟರಾಜ್ ದಿಕ್ಕು ಸೂಚಿ ಭಾಷಣ ಮಾಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಖ್ಯಾತ ಜಾದೂ ಕಲಾವಿದ ನಿಶ್ಚಲ್ ಜಾದೂಗಾರ ಪಾರಿವಾಳ ಹಾರಿಸಿ ಜಾದೂ ಮಾಡಿ ಉದ್ಘಾಟನೆ ಮಾಡಿದರು.

ಕಾ ಪ ಸಂಘದ ಅಧ್ಯಕ್ಷ ಮುನ್ನೂರು ಮೊಹನ್ ಶೆಟ್ಟಿ, ಜಿಲ್ಲಾ ಕಾ.ಪ.ಸಂ.ನ ಅಧ್ಯಕ್ಷ ಶಿವಕುಮಾರ್, ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ರಾಜ್ಯ ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಡಾ.ಆರ್.ಎಂ. ಮಂಜುನಾಥ ಗೌಡ, ತೀರ್ಥಹಳ್ಳಿ ಪೋಲಿಸ್ ಉಪ ಅಧೀಕ್ಷಕ ಗಜಾನನ ವಾಮನ ಸುತಾರ, ಪ.ಪಂ.ಅಧ್ಯಕ್ಷೆ ಸುಶೀಲಾ ಶೆಟ್ಟಿ, ಕಾಂಗ್ರೆಸ್ ನಾಯಕರು, ಪತ್ರಕರ್ತರಾದ ವಿಶ್ವನಾಥ್ ಶೆಟ್ಟಿ, ಯುವ ಮುಖಂಡ ಮುಡುಬ ರಾಘವೇಂದ್ರ, ಜಿಲ್ಲಾ ಕಾ.ಪ.ಸಂ.ದ ಉಪಾಧ್ಯಕ್ಷ ಹಾಲಸ್ವಾಮಿ ಮುರುಘರಾಜ್ ಸೇರಿದಂತೆ ತಾಲೂಕು ಘಟಕದ ಎಲ್ಲಾ ಪತ್ರಕರ್ತರು ಸೇರಿ ಹಲವರು ಉಪಸ್ಥಿತರಿದ್ದರು.

ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ

ತೀರ್ಥಹಳ್ಳಿ ತಾಲೂಕಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಜಿ.ಎಸ್. ನಾರಾಯಣರಾವ್ ( ಅಧ್ಯಕ್ಷರು, ರಾಷ್ಟ್ರೀಯ ಶಿಕ್ಷಣ ಸಂಸ್ಥೆ, ಶಿವಮೊಗ್ಗ), ಮಹಮ್ಮದ್ ಶಫಿ (ಆಜಾದ್ ಫೈವುಡ್, ನಿರ್ದೇಶಕರು, ಆಜಾದ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ, ತೀರ್ಥಹಳ್ಳಿ), ಕುಮಾರ್ ಮಾಸ್ಟರ್ ( ಶಿಕ್ಷಕರು ಹಾಗೂ ವಿಶೇಷ ಚೇತನ ಮಕ್ಕಳ ಟ್ರೈನರ್, ತೀರ್ಥಹಳ್ಳಿ), ಬಿ.ಮಂಜುನಾಥ ಶೆಟ್ಟಿ (ವಾಹನ ಚಾಲನಾ ಕ್ಷೇತ್ರ), ಮ್ಯಾಥ್ಯ ಸುರಾನಿ (ರಂಗ ನಟ, ನಿರ್ದೇಶಕ), ಕೊಕ್ಕೊಡ್ತಿ ಕೃಷ್ಣಮೂರ್ತಿ ( ಕೊಕ್ಕೊಡ್ತಿ ಕೃಷ್ಣಾಚಾರ್), (ಹಿರಿಯ ಯಕ್ಷಗಾನ ಕಲಾವಿದ), ಗೋಪಾಲ ಪೂಜಾರಿ ( ಸಮಾಜ ಸೇವಕರು, ಮೇಲಿನ ಕುರುವಳ್ಳಿ, ತೀರ್ಥಹಳ್ಳಿ), ಶ್ರೀಮತಿ ಡಾ.ಅನುಪಮ ಡಿ.ಎಸ್. (ಆರೋಗ್ಯ ಕ್ಷೇತ್ರ), ರಮೇಶ್ ಗಾಂವಸ್ಕರ್ (ಗಾಯಕರು) ಪತ್ರಿಕಾ ಕ್ಷೇತ್ರದಲ್ಲಿ ದುಡಿಯುತ್ತಿರುವ ತೀರ್ಥಹಳ್ಳಿಯ ಶ್ರೀಮತಿ ಭಾಗ್ಯ ಅನಿಲ್ (ಸಂಪಾದಕರು, ಬೆಳಗಿನ ವಿಧಾತ ದೈನಿಕ, ತೀರ್ಥಹಳ್ಳಿ), ಪ್ರವೀಣ್ ಭಟ್ ( ಹಿರಿಯ ಪತ್ರಕರ್ತ ಮತ್ತು ಮುದ್ರಕ), ರಾಮಚಂದ್ರ ಕೊಪ್ಪಲು (ಪತ್ರಕರ್ತ, ಪ್ರಸಿದ್ಧ ವ್ಯಂಗ್ಯಚಿತ್ರಕಾರ), ತ.ರ. ರಾಘವೇಂದ್ರ (ಪ್ರಧಾನ ಸಂಪಾದಕರು, ನಮ್ಮೂರ್ ಎಕ್ಸ್‌ಪ್ರೆಸ್ ಮೀಡಿಯಾ, ತೀರ್ಥಹಳ್ಳಿ), ಪಾರ್ಥಿಬನ್ (ಮುದ್ರಣ ಕ್ಷೇತ್ರ ಮತ್ತು ಕು. ಸಿಂಚನ ಮುರುಘರಾಜ್ ( ಕುವೆಂಪು ವಿ.ವಿ. ಬಯೋ ಕೆಮಿಸ್ಟ್ರಿ ಎಂ.ಎಸ್.ಸಿ. 4 ನೇ ರಾಂಕ್, ಕು.ಪ್ರಣತಿ ಸಿ.ಎಸ್. (ಪಿಯುಸಿ 92%), ಸಂದೇಶ್ ( ಪತ್ರಿಕಾ ವಿತರಕ), ನವ ಎಸ್.ನಾಯಕ್, ಉದಯೋನ್ಮುಖ ಬಾಲ ಕಲಾವಿದ) ಇವರನ್ನು ಸನ್ಮಾನಿಸಲಾಯಿತು.

ಇದನ್ನೂ ಓದಿ : ರಾಜ್ಯದಲ್ಲಿ ಮತ್ತೆ ಸುದ್ದಿ ಮಾಡಿದ ತೀರ್ಥಹಳ್ಳಿ ಪ್ರತೀಕ್ ಗೌಡ ಕೇಸ್!

HOW TO APPLY : NEET-UG COUNSELLING 2023

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.