Author: Nammur Express Admin

ಟೋಮೋಟೋ, ಬೆಳ್ಳುಳ್ಳಿ ದುಬಾರಿ! – ಮತ್ತೆ 400ರೂ. ಗೆ ತಲುಪಿದ ಬೆಳ್ಳುಳ್ಳಿ ದರ, ಟೋಮೋಟೋ 100 ರೂನತ್ತ – 34,863 ಹುದ್ದೆ ಭರ್ತಿ ಮಾಡಲು ಸಿಎಂ ಸೂಚನೆ NAMMUR EXPRESS NEWS ಬೆಂಗಳೂರು: ಆರು ತಿಂಗಳ ಬಳಿಕ ಮತ್ತೆ ಬೆಳ್ಳುಳ್ಳಿ ದರ ಕೆಜಿಗೆ 350ರೂ.- 400ರೂ ದರ ಹೆಚ್ಚಳ ಆಗಿದೆ. ಈಗಾಗಲೇ ಚೈನಾ ಬೆಳ್ಳುಳ್ಳಿ ಅಬ್ಬರ ಶುರುವಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಇತ್ತ ಟೋಮೋಟೋ ದರ ಕೂಡ ಕೆಜಿಗೆ 100 ರೂ. ನತ್ತ ಹೆಚ್ಚುವ ಸಾಧ್ಯತೆ ಇದೆ. ಹೊರ ರಾಜ್ಯಗಳಿಂದ ಕಡಿಮೆ ಸರಬರಾಜು ಆಗುತ್ತಿರುವುದು ದರ ಹೆಚ್ಚಳಕ್ಕೆ ಕಾರಣವಾಗಿದ್ದು, ನವೆಂಬ‌ರ್ ಹೊತ್ತಿಗೆ ಗಗನಕ್ಕೇರುವ ಎಲ್ಲ ಲಕ್ಷಣಗಳಿವೆ ಎಂದು ವರ್ತಕರು ಹೇಳುತ್ತಿದ್ದಾರೆ. ಈರುಳ್ಳಿ, ಟೊಮೆಟೋ ಬಳಿಕ ಈಗ ಬೆಳ್ಳುಳ್ಳಿಯ ದರ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದೆ. ಕಳೆದ ಫೆಬ್ರವರಿಯಲ್ಲಿ ಕೆಜಿಗೆ ₹500 ಸಮೀಪಿಸಿತ್ತು. ಇದೀಗ ಪುನಃ ಬೆಲೆ ಏರಿಕೆಯಾಗಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ಮೊದಲ ದರ್ಜೆ ಬೆಳ್ಳುಳ್ಳಿಗೆ ಕೆಜಿಗೆ ಗರಿಷ್ಠ 360-370 ಬೆಲೆಯಿದ್ದು,…

Read More

ಚಿನ್ನದ ದರ ಸಾರ್ವಕಾಲಿಕ ಗರಿಷ್ಠ! * ಬೆಳ್ಳಿ ದರವೂ ಲಕ್ಷ ರೂ. ತಲುಪುವ ಸಾಧ್ಯತೆ! * ಚಿನ್ನದ ಮೇಲೆ ಹೆಚ್ಚು ಹೂಡಿಕೆ ಮಾಡುತ್ತಿರುವ ಹೂಡಿಕೆದಾರರು! NAMMUR EXPRESS NEWS ಮುಂಬಯಿ: ದಸರಾ ಹಬ್ಬದ ಸಡಗರದ ನಡುವೆ ಚಿನ್ನದ ದರ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿದೆ. ಚಿನಿವಾರ ಪೇಟೆಯಲ್ಲಿ ಅ. 7ರಂದು ಪ್ರತಿ ಗ್ರಾಂಗೆ 250ರೂ. ಹೆಚ್ಚಳದೊಂದಿಗೆ 10 ಗ್ರಾಂ ಶುದ್ದ ಚಿನ್ನದ ದರ 78,700 ರೂ.ಗೆ ತಲುಪಿತು. ಇದುವರೆಗಿನ ಗರಿಷ್ಠ ದರವಾಗಿದೆ. ಬೆಳ್ಳಿ ದರವೂ 1 ಕೆ.ಜಿ.ಗೆ 94,000 ರೂ.ಗೆ ತಲುಪಿದ್ದು, ಸದ್ಯದಲ್ಲೇ 1 ಲಕ್ಷ ರೂ. ಮುಟ್ಟಬಹುದೆಂದು ಅಂದಾಜಿಸಲಾಗಿದೆ. ಮಧ್ಯ ಪ್ರಾಚ್ಯದಲ್ಲಿ ಯುದ್ಧದ ಬಿಕ್ಕಟ್ಟು, ಭೌಗೋಳಿಕ ಉದ್ವಿಗ್ನತೆಗಳಿಂದಾಗಿ ಸತತ ಆರು ದಿನಗಳಿಂದ ಷೇರುಪೇಟೆಯಲ್ಲಿ ಇಳಿಮುಖ ಪ್ರವೃತ್ತಿ ಮುಂದುವರಿದಿದೆ. ಜಾಗತಿಕ ಅಸ್ಥಿರತೆಯಿಂದಾಗಿ ಹೂಡಿಕೆದಾರರು ಚಿನ್ನದ ಮೇಲೆ ಹೆಚ್ಚು ಹೂಡಿಕೆ ಮಾಡುತ್ತಿರುವುದು ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ

Read More

ಶೃಂಗೇರಿ ಕ್ಷೇತ್ರ: ಫಲಾನುಭವಿಗಳಿಗೆ ಸವಲತ್ತು ನೀಡಲು ಪ್ರತಿಪಕ್ಷಗಳಿಂದ ಅಡ್ಡಿ * ಶಾಸಕ ರಾಜೇಗೌಡ ಆರೋಪ: ನಾನು ಬಡ ರೈತರ ಪರವಾಗಿದ್ದೇನೆ.. ಆದ್ರೂ ಅಪ ಪ್ರಚಾರ * ಎನ್ ಆರ್ ಪುರದಲ್ಲಿ 29 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ NAMMUR EXPRESS NEWS ಎನ್.ಆರ್.ಪುರ: ಪ್ರತಿ ಪಕ್ಷಗಳು ಪದೇಪದೆ ಅಡ್ಡಿಪಡಿಸಿದ್ದರಿಂದ ಬಡವರಿಗೆ ಹಕ್ಕುಪತ್ರ ವಿತರಣೆ ಮಾಡಲು ವಿಳಂಬವಾಗುತ್ತಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಆರೋಪಿಸಿದ್ದಾರೆ. ಎನ್ ಆರ್ ಪುರದ ಪ್ರವಾಸಿ ಮಂದಿರದಲ್ಲಿ 29 ಫಲಾನುಭವಿಗಳಿಗೆ 94ಸಿಸಿ ಅಡಿ ಹಕ್ಕುಪತ್ರ ವಿತರಿಸಿದ ಶಾಸಕ ರಾಜೇಗೌಡ ಪ್ರತಿಪಕ್ಷದವರು ಅರಣ್ಯ ಇಲಾಖೆಯ ಒಪ್ಪಿಗೆ ಇಲ್ಲದೆ ಹಕ್ಕುಪತ್ರ ನೀಡದಂತೆ ಅಧಿಕಾರಿಗಳಿಗೂ ಒತ್ತಡ ಹೇರಿದ್ದರು, ಹಕ್ಕುಪತ್ರ ನೀಡಲು ಹಲವು ಬಾರಿ ದಿನಾಂಕ ನಿಗದಿ ಮಾಡಿದ್ದರೂ ಕೆಲವರು ಅಡ್ಡಿಪಡಿಸಿದ್ದರಿಂದ ವಿಳಂಬವಾಯಿತು. ಇದೇ ಮೊದಲ ಬಾರಿಗೆ 94ಸಿಸಿ ಅಡಿ ಫಲಾನುಭವಿಗಳಿಗೆ ಸವಲತ್ತು ನೀಡಲಾಗಿದೆ,ಈ ಹಿಂದೆ ಜನತಾ ದರ್ಶನದಲ್ಲಿ 49 ಫಲಾನುಭವಿ ಗಳಿಗೆ ಹಾಗೂ ಇತ್ತೀಚೆಗೆ ತಾಲೂಕಿನ ವಿವಿಧ ಗ್ರಾಮ ಗಳಲ್ಲಿ 94ಸಿಸಿ ಅಡಿ 32 ಹಕ್ಕುಪತ್ರಗಳನ್ನು…

Read More

ತೀರ್ಥಹಳ್ಳಿ ತಾಲ್ಲೂಕು ಜಿ.ಎಸ್.ಬಿ ಸಮಾಜದ ಕಾರ್ಯಕಾರಿ ಸಮಿತಿ ರಚನೆ! * ಅಧ್ಯಕ್ಷರಾಗಿ ಸಂದೇಶ್‌ ಜವಳಿ ಸತತ 8 ನೇ ಬಾರಿ ಆಯ್ಕೆ * ಉಪಾಧ್ಯಕ್ಷರಾಗಿ ಕುಕ್ಕೆ ನಾಗರಾಜ ಪ್ರಭು, ಕಾರ್ಯದರ್ಶಿಯಾಗಿ ಅಚ್ಚುತ ನಾಯಕ್ ಆಯ್ಕೆ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕು ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಕಾರ್ಯಕಾರಿ ಸಮಿತಿ ರಚನೆ ಪ್ರಕ್ರಿಯೆ ಅಕ್ಟೋಬರ್ 6 ರಂದು ನೆರವೇರಿದ್ದು ನೂತನ ಸಮಿತಿ ಆಯ್ಕೆ ಆಗಿದೆ. ನೂತನ ಆಡಳಿತ ಮಂಡಳಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಸಂದೇಶ್‌ ಜವಳಿ ಸತತ 8 ನೇ ಬಾರಿಗೆ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಕುಕ್ಕೆ ನಾಗರಾಜ ಪ್ರಭು, ಕಾರ್ಯದರ್ಶಿಯಾಗಿ ಅಚ್ಚುತ ನಾಯಕ್ ಬಿ.ಎಸ್, ಸಹಕಾರ್ಯದರ್ಶಿಯಾಗಿ ಬೊಬ್ಬಿ ನಾಗರಾಜ ಕಾಮತ್, ಖಜಾಂಚಿಯಾಗಿ ಶಿರವಂತೆ ರಾಜೇಶ್ ರಾವ್, ನಿರ್ದೇಶಕರುಗಳಾಗಿ ಶ್ರೀನಿವಾಸ ಭಟ್ ಯಾನೆ ನಾಗೇಶ್ ಭಟ್, ದಿವಾಕರ ಮಲ್ಯ, ಎ. ವೆಂಕಟದಾಸ್ ಪೈ, ವಾಸುದೇವ ಕಾಮತ್, ಗಣೇಶ್ ಪ್ರಭು, ಗೌರಿ ಭರತ್ ಪ್ರಭು, ಮಹಿಮಾ ಶೆಣೈ, ಪ್ರಶಾಂತ್‌ ಪ್ರಭು, ನೀಲೇಶ್…

Read More

ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನ ನೋಂದಣಿ ಶುರು * ಮಂಗಳೂರಿನಲ್ಲಿ ಅಕ್ಟೋಬರ್ 26, 27ರಂದು ಆಯೋಜನೆ * ಯುವಜನರಿಗೆ ವಿಶೇಷ ಅವಕಾಶ: ಎರಡು ದಿನ ನೋಂದಣಿಗೆ 100 ರೂ. NAMMUR EXPRESS NEWS ಮಂಗಳೂರು : ಕೊಂಕಣಿ ಮಾತೃಭಾಷೆ ಜನರು ಕರ್ನಾಟಕ, ಗೋವಾ,ಕೇರಳ ಮಹಾರಾಷ್ಟ್ರ ರಾಜ್ಯದ ವಿವಿಧೆಡೆ ಇದ್ದು ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಗೋವಾದ ಮಡ್ಗಾಂವ್ ರವೀಂದ್ರ ಕಲಾಕ್ಷೇತ್ರದಲ್ಲಿ ಅಕ್ಟೋಬರ್ 26,27 ರಂದು ನಡೆಯಲಿದೆ. ಆಖಿಲ ಭಾರತ ಕೊಂಕಣಿ ಪರಿಷತ್ತಿನ ಕಾರ್ಯಾಧ್ಯಕ್ಷ ಚೇತನ್ ಆಚಾರ್ಯ ಮಾಹಿತಿ ನೀಡಿದರು. ಮಂಗಳೂರು ಕೊಂಕಣಿ ಭಾಷಾ ಮಂಡಲ ಕರ್ನಾಟಕ ಇದರ ಸಮ್ಮೇಳನದ ಮೊದಲ ನೋಂದಣಿ ಹಿರಿಯ ಕೊಂಕಣಿ ಕಾರ್ಯಕರ್ತೆ ಗೀತಾ ಕಿಣಿ ಅವರು ಸ್ವೀಕರಿಸಿ ಮಾತನಾಡಿದರು. ಪ್ರದೇಶದ ಪ್ರಭಾವ ಭಾಷೆಯ ಮೇಲೆ ಇದೆ ಅದರೂ ಮಾತೃಭಾಷೆ ಹೃದಯದಿಂದ ಅರ್ಥವನ್ನು ನೀಡುತ್ತದೆ ಎಂದು ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಗೋವಾದ ಚಳುವಳಿಯ ಹಿರಿಯ ಪ್ರಶಾಂತ್ ನಾಯಕ್ ನುಡಿದರು. ಈ ಬಾರಿಯ ಸಮ್ಮೇಳನದಲ್ಲಿ ಯುವಜನರಿಗೆ ವಿಶೇಷ…

Read More

ತೀರ್ಥಹಳ್ಳಿ ಹುಲಿಮಂಡೆ ಜ್ಞಾನದರ್ಶನಿ ಆಂಗ್ಲಮಾಧ್ಯಮ ಶಾಲೆ ವಿದ್ಯಾರ್ಥಿನಿ ಸಾಧನೆ! * ತೀರ್ಥಹಳ್ಳಿಯ ಹಿರಿಮೆ ಹೆಚ್ಚಿಸಿದ ವಿದ್ಯಾರ್ಥಿನಿ ಖುಷಿಕಿರಣ್!! * ಜಿಲ್ಲಾ ಮಟ್ಟದ ಗುಂಡು ಎಸೆತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ! * ವಿದ್ಯಾರ್ಥಿನಿ ಖುಷಿಕಿರಣ್ ರಾಜ್ಯಮಟ್ಟಕ್ಕೆ ಆಯ್ಕೆ! NAMMUR EXPRESS NEWS ತೀರ್ಥಹಳ್ಳಿ:ಪಲಿಮಾರು ಮಠ ಎಜುಕೇಶನ್ ಕೌನ್ಸಿಲ್ ನ ಅಂಗ ಸಂಸ್ಥೆಯಾದ ಜ್ಞಾನದರ್ಶಿನಿ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ  ಶಾಲೆ ಹುಲಿಮಂಡೆ ತೀರ್ಥಹಳ್ಳಿ ತಾಲೂಕು ವಿದ್ಯಾರ್ಥಿಯಾಗಿರುವ ಖುಷಿಕಿರಣ್ ತೀರ್ಥಹಳ್ಳಿಯ ಹೆಮ್ಮೆಗೆ ಪಾತ್ರರಾಗಿದ್ದಾರೆ. ಏಳನೇ ತರಗತಿ ವಿದ್ಯಾರ್ಥಿನಿ ಕುಮಾರಿ ಖುಷಿಕಿರಣ್ ಇವರು ಶಿವಮೊಗ್ಗದಲ್ಲಿ ನಡೆದ  ಜಿಲ್ಲಾ ಮಟ್ಟದ 14 ವರ್ಷ ವಯೋಮಿತಿಯ ಬಾಲಕಿಯರ ಅಥ್ಲೆಟಿಕ್ಸ್ ವಿಭಾಗದ ಗುಂಡು ಎಸೆತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರ ತರಬೇತುದಾರರಾಗಿ ದೈಹಿಕ ಶಿಕ್ಷಣ ಶಿಕ್ಷಕರು ಪರಶುರಾಮ್ ಮಾರ್ಗದರ್ಶನ ನೀಡಿದ್ದಾರೆ. ಇವರಿಗೆ ಆಡಳಿತ ಮಂಡಳಿ, ಮುಖ್ಯಶಿಕ್ಷಕರು ಮತ್ತು ಸಹಶಿಕ್ಷರು ಈ ಮೂಲಕ ಅಭಿನಂದನೆ ತಿಳಿಸಿದ್ದಾರೆ

Read More

ಈ ದಿನದ ರಾಶಿ ಭವಿಷ್ಯ ಹೇಗಿದೆ? – ಇಂದು ನವರಾತ್ರಿ 6ನೇ ದಿನ ಯಾವ ರಾಶಿಯವರಿಗೆ ಲಾಭ? ಯಾವ ರಾಶಿಯವರಿಗೆ ನಷ್ಟ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಮೇಷ ರಾಶಿಯ ಜನರು ಇಂದು ಸವಾಲುಗಳನ್ನು ಎದುರಿಸಬೇಕಾಗಬಹುದು. ನಿಮ್ಮ ನಿರ್ಧಾರಗಳ ಬಗ್ಗೆ ಸ್ಪಷ್ಟವಾಗಿರಿ. ತರಾತುರಿಯಲ್ಲಿ ತಪ್ಪುಗಳನ್ನು ಮಾಡುವುದನ್ನು ತಪ್ಪಿಸಿ. ಆರೋಗ್ಯದ ಕಡೆ ಗಮನ ಕೊಡಿ. ಯಾವುದೇ ಕೆಲಸವು ಇಂದು ನಿಮಗೆ ತುಂಬಾ ಅಪಾಯಕಾರಿ ಎಂದು ತೋರುತ್ತಿದ್ದರೆ, ಸಹಾಯ ಪಡೆಯಲು ಹಿಂಜರಿಯಬೇಡಿ. ** ವೃಷಭ ರಾಶಿ : ವೃಷಭ ರಾಶಿಯವರಿಗೆ ಮನಸ್ಸು ಗೊಂದಲಮಯವಾಗಿರುತ್ತದೆ. ಅಜ್ಞಾತ ಭಯವು ನಿಮ್ಮನ್ನು ಕಾಡುತ್ತದೆ. ಹೂಡಿಕೆಯಿಂದ ಆರ್ಥಿಕ ನಷ್ಟದ ಲಕ್ಷಣಗಳಿವೆ. ಕೆಲಸದ ಸವಾಲುಗಳು ಹೆಚ್ಚಾಗುತ್ತವೆ. ಎಲ್ಲಾ ಕೆಲಸಗಳು ಮಧ್ಯಂತರವಾಗಿ ನಡೆಯುತ್ತವೆ. ಆದರೆ ಸಂಪತ್ತು ಮತ್ತು ಆಸ್ತಿಯಲ್ಲಿ ಹೆಚ್ಚಳದ ಸಾಧ್ಯತೆಗಳಿವೆ. ಪ್ರಯಾಣದ…

Read More

ಮಾಜಿ ಶಾಸಕ ಮೊಯ್ದಿನ್ ಬಾವಾ ಸಹೋದರನ ಮೃತದೇಹ ಪತ್ತೆ! – ನದಿಯಲ್ಲಿ ಶವ ಪತ್ತೆ: ಕುಟುಂಬದ ಕಣ್ಣೀರು – ಬ್ಲಾಕ್‌ಮೇಲ್‌ ಮಾಡುತ್ತಿದ್ದವರ ವಿರುದ್ಧ ಎಫ್‌ಐಆ‌ರ್ – ಮಹಿಳೆ ಬಳಸಿಕೊಂಡು ಬ್ಲಾಕ್ ಮೇಲ್ ಮಾಡಿದ್ರಾ? NAMMUR EXPRESS NEWS ಮಂಗಳೂರು: ಮಾಜಿ ಶಾಸಕ ಮೊಯ್ದಿನ್ ಬಾವಾ ಸಹೋದರನ ಮೃತದೇಹ ಪತ್ತೆಯಾಗಿದೆ. ಇತ್ತ ಮುಲ್ತಾಜ್ ಅಲಿಗೆ ಬ್ಲಾಕ್‌ಮೇಲ್ ಮಾಡುತ್ತಿದ್ದವರ ವಿರುದ್ಧ ಎಫ್‌ಐಆ‌ರ್ ದಾಖಲಾಗಿದ್ದು, ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಮಾಜಿ ಶಾಸಕ ಮೊಯ್ದಿನ್ ಬಾವಾ ಸಹೋದರ ಮುಲ್ತಾಜ್ ಅಲಿ (52) ಎಂಬುವವರು ಸಾಯುವುದಾಗಿ ಕುಟುಂಬಸ್ಥರಿಗೆ ಮಸೇಜ್ ಕಳಿಸಿ ಮಂಗಳೂರು ಹೊರವಲಯದ ಕೂಳೂರು ಬ್ರಿಡ್ಜ್‌ನಲ್ಲಿ ಕಾರು ನಿಲ್ಲಿಸಿ ನಾಪತ್ತೆ ಆಗಿದ್ದರು. ಇದೀಗ ಇಪ್ಪೆತ್ತೆಂಟು ಗಂಟೆಗಳ ಸತತ ಕಾರ್ಯಾಚರಣೆ ಬಳಿಕ ಮುಲ್ತಾಜ್ ಅವರ ಮೃತದೇಹ ಸಿಕ್ಕಿದೆ. ತಣ್ಣೀರುಬಾವಿ ಮುಳುಗುಗಾರರು ಮೃತದೇಹ ಪತ್ತೆ ಮಾಡಿ ಹೊರತೆಗೆದಿದ್ದಾರೆ. ಮೃತದೇಹ ಕಂಡು ಮಾಜಿ ಶಾಸಕ ಮೊಯಿದ್ದೀನ್ ಬಾವ ಗೋಳಾಡಿದರು. ಏನಾಗಿತ್ತು? ಭಾನುವಾರ ಬೆಳಗಿನ ಜಾವ ಮೂರು ಗಂಟೆಗೆ ಮನೆಯಿಂದ ಹೊರಟ್ಟಿದ್ದ ಮುಲ್ತಾಜ್ ಆಲಿ,…

Read More

ಗ್ರಾಮ ಪಂಚಾಯಿತಿ ಆಡಳಿತ ಸ್ತಬ್ದ! – ಗ್ರಾಪಂ ಕಾರ್ಯದರ್ಶಿಗಳು, ನೌಕರರ ಜಿಲ್ಲೆಯಾದ್ಯಂತ ಧರಣಿ – ಎಲ್ಲಾ ಜಿಲ್ಲೆಗಳಲ್ಲಿ ಧರಣಿ ಮುಂದುವರಿಸುವ ಸಾಧ್ಯತೆ: ಇತರ ಸೇವೆಗಳೂ ಬಂದ್? NAMMUR EXPRESS NEWS ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆ ಅಗ್ರಹಿಸಿ ರಾಜ್ಯಾದ್ಯಂತ ಪಂಚಾಯತ್ ಅಭಿವೃದ್ಧಿ (ಪಿಡಿಒ), ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಹಾಗೂ ಇತರೆ ನೌಕರರು ಧರಣಿ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ಧರಣಿ ನಡೆಸುತ್ತಿರುವ ಇವರು, ಎಲ್ಲ ಜಿಲ್ಲೆಗಳಲ್ಲಿ ಧರಣಿ ಮುಂದುವರಿಸಿದ್ದಾರೆ. ಇದರೊಂದಿಗೆ ಇತರ ಸೇವೆಗಳು ಬಂದ್ ಆಗುವ ಸಾಧ್ಯತೆ ಇದೆ. ಪಿಡಿಒ, ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಇತರೆ ನೌಕರರು ಧರಣಿ ನಡೆಸಿದ ಕಾರಣ ಪಂಚಾಯಿತಿಗಳು ಎಲ್ಲ ಸೇವೆಗಳಲ್ಲಿ ಧರಣಿ ನಡೆಸುತ್ತಿದ್ದಾರೆ. ಕಚೇರಿಗಳಲ್ಲಿ ಸಿಬ್ಬಂದಿ ಇಲ್ಲದೆ ಸಾರ್ವಜನಿಕರು ಪರದಾಡುವಂತಾಗಿದೆ. ಬರೋಬ್ಬರಿ ನಲವತ್ತಕ್ಕೂ ಹೆಚ್ಚು ಸೇವೆಗಳು ಬಂದ್ ಆಗಲಿದೆ. ಎರಡು ದಿನ ಮಾತ್ರ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಧರಣಿ ನಡೆಸಲು ಅನುಮತಿ ನೀಡುವಂತೆ ಜಿಲ್ಲಾಮಟ್ಟದಲ್ಲಿ ಧರಣಿ ನಡೆಸಲು ನಿರ್ಧರಿಸಲಾಗಿದೆ. ಧರಣಿ ಸ್ಥಳಕ್ಕೆ ಹೆಚ್ಚುವರಿ ಕಾರ್ಯದರ್ಶಿ ಉಮಾ ಧವನ್‌ ಭೇಟಿ ನೀಡಿ…

Read More

ಎತ್ತಿಗೆ ಕಟ್ಟಿದ ಹಗ್ಗ ಜೀವ ತೆಗೆಯಿತು! – ಸೊರಬ: ಎತ್ತು ಮೈ ತೊಳೆಯಲು ಹೋದ ಯುವಕ ನೀರುಪಾಲು! – ಚಿಕ್ಕಮಗಳೂರು: ಪ್ರವಾಸಕ್ಕೆ ಬಂದ ಟಿಟಿ ಡ್ರೈವರ್ ಸಾವು – ಶಿವಮೊಗ್ಗ : ಚಿರತೆ ಸಂಚಾರದಿಂದ ಭಯಭೀತರಾದ ಗ್ರಾಮಸ್ಥರು NAMMUR EXPRESS NEWS ಸೊರಬ: ಕೆರೆಯಲ್ಲಿ ಎತ್ತಿಗೆ ಮೈ ತೊಳೆಯಲು ಹೋದ ಯುವಕ ಕೆರೆ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸೊರಬ ತಾಲೂಕಿನ ಆನವಟ್ಟಿ ಹೋಬಳಿಯ ಕೋಟೆಕೊಪ್ಪ ಗ್ರಾಮದಲ್ಲಿ ನಡೆದಿದೆ. ಕೋಟೆಕೊಪ್ಪ ಗ್ರಾಮದ ನಿವಾಸಿ ಸಂತೋಷ (28) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಗ್ರಾಮದ ಕೆರೆಯಲ್ಲಿ ಎತ್ತಿನ ಮೈ ತೊಳೆಯಲು ಯುವಕ ತೆರಳಿದ್ದು, ಈ ವೇಳೆ ಎತ್ತು ಗಾಬರಿಗೊಂಡು ಓಡಿ ಹೋಗಿದೆ. ಎತ್ತಿನ ಹಗ್ಗವು ಸಂತೋಷ್ ಕಾಲಿಗೆ ಸುತ್ತಿಕೊಂಡು, ಈಜಲು ಸಾಧ್ಯವಾಗದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ತಂಡ ಭೇಟಿಯಿತ್ತು, ಕೆರೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿ ಶವ ಪತ್ತೆ ಹಚ್ಚಿದೆ. ಈ ಸಂಬಂಧ ಸೊರಬ ಪೊಲೀಸ್…

Read More