Categories
ತೀರ್ಥಹಳ್ಳಿ

ತೀರ್ಥಹಳ್ಳಿ ಹುಲಿಮಂಡೆ ಜ್ಞಾನದರ್ಶನಿ ಆಂಗ್ಲಮಾಧ್ಯಮ ಶಾಲೆ ವಿದ್ಯಾರ್ಥಿನಿ ಸಾಧನೆ!

ತೀರ್ಥಹಳ್ಳಿ ಹುಲಿಮಂಡೆ ಜ್ಞಾನದರ್ಶನಿ ಆಂಗ್ಲಮಾಧ್ಯಮ ಶಾಲೆ ವಿದ್ಯಾರ್ಥಿನಿ ಸಾಧನೆ!

* ತೀರ್ಥಹಳ್ಳಿಯ ಹಿರಿಮೆ ಹೆಚ್ಚಿಸಿದ ವಿದ್ಯಾರ್ಥಿನಿ ಖುಷಿಕಿರಣ್!!
* ಜಿಲ್ಲಾ ಮಟ್ಟದ ಗುಂಡು ಎಸೆತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ!
* ವಿದ್ಯಾರ್ಥಿನಿ ಖುಷಿಕಿರಣ್ ರಾಜ್ಯಮಟ್ಟಕ್ಕೆ ಆಯ್ಕೆ!

NAMMUR EXPRESS NEWS
ತೀರ್ಥಹಳ್ಳಿ:ಪಲಿಮಾರು ಮಠ ಎಜುಕೇಶನ್ ಕೌನ್ಸಿಲ್ ನ ಅಂಗ ಸಂಸ್ಥೆಯಾದ ಜ್ಞಾನದರ್ಶಿನಿ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ  ಶಾಲೆ ಹುಲಿಮಂಡೆ ತೀರ್ಥಹಳ್ಳಿ ತಾಲೂಕು ವಿದ್ಯಾರ್ಥಿಯಾಗಿರುವ ಖುಷಿಕಿರಣ್ ತೀರ್ಥಹಳ್ಳಿಯ ಹೆಮ್ಮೆಗೆ ಪಾತ್ರರಾಗಿದ್ದಾರೆ.
ಏಳನೇ ತರಗತಿ ವಿದ್ಯಾರ್ಥಿನಿ ಕುಮಾರಿ ಖುಷಿಕಿರಣ್ ಇವರು ಶಿವಮೊಗ್ಗದಲ್ಲಿ ನಡೆದ  ಜಿಲ್ಲಾ ಮಟ್ಟದ 14 ವರ್ಷ ವಯೋಮಿತಿಯ ಬಾಲಕಿಯರ ಅಥ್ಲೆಟಿಕ್ಸ್ ವಿಭಾಗದ ಗುಂಡು ಎಸೆತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರ
ತರಬೇತುದಾರರಾಗಿ ದೈಹಿಕ ಶಿಕ್ಷಣ ಶಿಕ್ಷಕರು ಪರಶುರಾಮ್ ಮಾರ್ಗದರ್ಶನ ನೀಡಿದ್ದಾರೆ.
ಇವರಿಗೆ ಆಡಳಿತ ಮಂಡಳಿ, ಮುಖ್ಯಶಿಕ್ಷಕರು ಮತ್ತು ಸಹಶಿಕ್ಷರು ಈ ಮೂಲಕ ಅಭಿನಂದನೆ ತಿಳಿಸಿದ್ದಾರೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.