Categories
ತೀರ್ಥಹಳ್ಳಿ

ತೀರ್ಥಹಳ್ಳಿ ತಾಲ್ಲೂಕು ಜಿ.ಎಸ್.ಬಿ ಸಮಾಜದ ಕಾರ್ಯಕಾರಿ ಸಮಿತಿ ರಚನೆ!

ತೀರ್ಥಹಳ್ಳಿ ತಾಲ್ಲೂಕು ಜಿ.ಎಸ್.ಬಿ ಸಮಾಜದ ಕಾರ್ಯಕಾರಿ ಸಮಿತಿ ರಚನೆ!
* ಅಧ್ಯಕ್ಷರಾಗಿ ಸಂದೇಶ್‌ ಜವಳಿ ಸತತ 8 ನೇ ಬಾರಿ ಆಯ್ಕೆ
* ಉಪಾಧ್ಯಕ್ಷರಾಗಿ ಕುಕ್ಕೆ ನಾಗರಾಜ ಪ್ರಭು, ಕಾರ್ಯದರ್ಶಿಯಾಗಿ ಅಚ್ಚುತ ನಾಯಕ್ ಆಯ್ಕೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕು ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಕಾರ್ಯಕಾರಿ ಸಮಿತಿ ರಚನೆ ಪ್ರಕ್ರಿಯೆ ಅಕ್ಟೋಬರ್ 6 ರಂದು ನೆರವೇರಿದ್ದು ನೂತನ ಸಮಿತಿ ಆಯ್ಕೆ ಆಗಿದೆ.
ನೂತನ ಆಡಳಿತ ಮಂಡಳಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಸಂದೇಶ್‌ ಜವಳಿ ಸತತ 8 ನೇ ಬಾರಿಗೆ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಕುಕ್ಕೆ ನಾಗರಾಜ ಪ್ರಭು, ಕಾರ್ಯದರ್ಶಿಯಾಗಿ ಅಚ್ಚುತ ನಾಯಕ್ ಬಿ.ಎಸ್, ಸಹಕಾರ್ಯದರ್ಶಿಯಾಗಿ ಬೊಬ್ಬಿ ನಾಗರಾಜ ಕಾಮತ್, ಖಜಾಂಚಿಯಾಗಿ ಶಿರವಂತೆ ರಾಜೇಶ್ ರಾವ್, ನಿರ್ದೇಶಕರುಗಳಾಗಿ ಶ್ರೀನಿವಾಸ ಭಟ್ ಯಾನೆ ನಾಗೇಶ್ ಭಟ್, ದಿವಾಕರ ಮಲ್ಯ, ಎ. ವೆಂಕಟದಾಸ್ ಪೈ, ವಾಸುದೇವ ಕಾಮತ್, ಗಣೇಶ್ ಪ್ರಭು, ಗೌರಿ ಭರತ್ ಪ್ರಭು, ಮಹಿಮಾ ಶೆಣೈ, ಪ್ರಶಾಂತ್‌ ಪ್ರಭು, ನೀಲೇಶ್ ಜವಳಿ ಆಯ್ಕೆಯಾಗಿದ್ದಾರೆ.
ತೀರ್ಥಹಳ್ಳಿ ತಾಲೂಕಿನಲ್ಲಿ ಎಲ್ಲಾ ರಂಗದಲ್ಲೂ ತೊಡಗಿಕೊಂಡಿರುವ ಜಿ.ಎಸ್.ಬಿ ಸಮಾಜ ತಾಲೂಕಿಗೆ ತನ್ನದೇ ಆದ ಕೊಡುಗೆ ನೀಡಿದೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.