ಅನ್ನಭಾಗ್ಯ ಫಲಾನುಭವಿಗಳ ಖಾತೆಗೆ ಹಣ! – ಜು.10ರಿಂದಲೇ ಜಮೆಯಾಗಲಿದೆ ಹಣ – ಏನಿದು ಯೋಜನೆ.. ಏನೇನು ದಾಖಲೆ ಬೇಕು? NAMMUR EXPRESS NEWS ಬೆಂಗಳೂರು: ಕಾಂಗ್ರೆಸ್ ಸರಕಾರ ನೀಡಿರುವ ಐದು ಗ್ಯಾರಂಟಿ ಯೋಜನೆಯ ಪೈಕಿ ಈಗಾಗಲೇ ಶಕ್ತಿ ಯೋಜನೆ, ಗೃಹಜ್ಯೋತಿ ಯೋಜನೆ ಜಾರಿಗೆ ಬಂದಿದೆ. ಇದೀಗ ಅನ್ನಭಾಗ್ಯ ಫಲಾನುಭವಿಗಳಿಗೆ ಅಕ್ಕಿಯ ಬದಲು ಹಣ ನೀಡುವುದಾಗಿ ಸರಕಾರ ಘೋಷಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ಖಾತೆದಾರರ ಖಾತೆಗಳಿಗೆ ಸೋಮವಾರದಿಂದ ಹಣ ಜಮೆಯಾಗಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಅನ್ನಭಾಗ್ಯ ಫಲಾನುಭವಿಗಳಿಗೆ ತಲಾ 10 ಕೆಜಿ ಅಕ್ಕಿ ನೀಡುವುದಾಗಿ ಘೋಷಣೆ ಮಾಡಿದೆ. ಈ ಪೈಕಿ ಐದು ಕೆಜಿ ಅಕ್ಕಿ ಕೇಂದ್ರ ಸರಕಾರದಿಂದ ನೀಡಲಾಗುತ್ತಿದ್ದು, ಹೆಚ್ಚುವರಿ ಐದು ಕೆಜಿ ಅಕ್ಕಿ ನೀಡಲು ಅಕ್ಕಿಯ ಲಭ್ಯತೆ ಇಲ್ಲದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಅಕ್ಕಿ ಬದಲು ಹಣ ನೀಡುವುದಾಗಿ ಘೋಷಣೆ ಮಾಡಿದೆ. ಅಂತೆಯೇ ಹಂತ ಹಂತವಾಗಿ ಅನ್ನಭಾಗ್ಯ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಲಿದೆ. 5 ಯೋಜನೆಯ ಪ್ರಕ್ರಿಯೆ ಶುರು! ರಾಜ್ಯ…
Author: Nammur Express Admin
ಹಾಲಿನ ದರ 5 ರೂ. ಏರಿಕೆ..?! – ದರ ಏರಿಸಲು ನಂದಿನಿ ನಿರ್ಧಾರ ಸಾಧ್ಯತೆ – ರೈತರಿಗೆ ಪ್ರತಿ ಲೀ. ಗೆ 5 ರೂ. ಸಹಾಯ ಧನ NAMMUR EXPRESS NEWS ಬೆಂಗಳೂರು: ರೈತರಿಗೆ ಹಾಲಿನ ಪ್ರೋತ್ಸಾಹ ಧನ ಹೆಚ್ಚಿಸಲು ನಡೆಸಿದ್ದು ನಂದಿನಿ ಹಾಲಿನ ದರ ಹೆಚ್ಚಳದ ಮುನ್ಸೂಚನೆ ಸಿಕ್ಕಿದೆ. ಹಾಲು ಉತ್ಪಾದಕರಿಗೆ ನೀಡುತ್ತಿರುವ ಸಹಾಯಧನವನ್ನು ಹೆಚ್ಚಿಸಲು ಚಿಂತನೆ ಮಾಡುತ್ತಿದೆ ಎಂದು ಸಹಕಾರ ಖಾತೆ ಸಚಿವ ಕೆಎನ್ ರಾಜಣ್ಣ ಹೇಳಿದ್ದಾರೆ. ಈ ಮೂಲಕ ನಂದಿನ ಹಾಲಿನ ದರವನ್ನು ಹೆಚ್ಚಿಸಬಹುದು ಎನ್ನುವ ಪರೋಕ್ಷ ಸೂಚನೆಯನ್ನು ನೀಡಿದ್ದಾರೆ. ಹಾಲಿನ ದರ ಏರಿಕೆ ಎಂದ ಕೂಡಲೇ ಎಲ್ಲರೂ ಗಾಬರಿಯಾಗುತ್ತಾರೆ. ದರ ಹೆಚ್ಚಳ ಎಂದರೆ ಎರಡು ರೀತಿ ಇರುತ್ತದೆ. ಉತ್ಪಾದಕರಿಗೆ ಹೆಚ್ಚಿನ ದರವನ್ನು ನೀಡುವುದು, ಖರೀದಿ ಮಾಡುವವರಿಗೆ ದರ ಹೆಚ್ಚು ಮಾಡುವುದು. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದಾಗ ಕರ್ನಾಟಕದಲ್ಲಿ ಈ ಎರಡೂ ಕಡಿಮೆ ಇದೆ, ಹಾಲು ಉತ್ಪಾದಕರಿಗೆ ನಾವು ನೆರವು ನೀಡಬೇಕಿದೆ. ಯಾರಿಗೂ ಹೊರೆಯಾಗದಂತೆ ಮುಂದಿನ ದಿನಗಳಲ್ಲಿ…
ಬಸ್ ಚಾಲಕ ಮೊಬೈಲಲ್ಲಿ ಮಾತಾಡಂಗಿಲ್ಲ! – ಶಿವಮೊಗ್ಗದಲ್ಲಿ 5000 ರೂ ದಂಡ ಹಾಕಿದ ಪೊಲೀಸರು – ಬಿಸಿಯೂಟದಲ್ಲಿ ಹಲ್ಲಿ: 42 ವಿದ್ಯಾರ್ಥಿಗಳು ಅಸ್ವಸ್ಥ! – ಶಾಲಾ ಬಸ್ ಹಾಯ್ದು ಬಾಲಕಿ ದುರ್ಮರಣ! – ಬಸ್ಸಿನ ಕಿಟಕಿ ಒಡೆದ ಮಹಿಳೆಗೆ ದಂಡ! NAMMUR EXPRESS NEWS ಶಿವಮೊಗ್ಗ: ಖಾಸಗಿ ಬಸ್ ಚಾಲಕನೋರ್ವ ಮೊಬೈಲ್‌ನಲ್ಲಿ ಮಾತನಾಡುತ್ತ ಬಸ್ ಚಲಾಯಿಸಿದ್ದಕ್ಕೆ ಶಿವಮೊಗ್ಗ ಸಂಚಾರಿ ಪೊಲೀಸರು ಐದು ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ಈ ಮೂಲಕ ಸರ್ಕಾರಿ ಹಾಗೂ ಖಾಸಗಿ ಬಸ್ ಚಾಲಕರಿಗೆ ಎಚ್ಚರಿಕೆ ನೀಡಲಾಗಿದೆ. ಶಿವಮೊಗ್ಗ ಸಕ್ರೆಬೈಲ್ ನಿವಾಸಿ ಮನ್ಸೂರ್ ಅಲಿ ಎಂಬವರಿಗೆ ದಂಡ ವಿಧಿಸಲಾಗಿದೆ. ಮನ್ಸೂರ್ ಅವರು ಶಿವಮೊಗ್ಗದಿಂದ ಸಾಗರಕ್ಕೆ ಸಂಚರಿಸುವ ಖಾಸಗಿ ಬಸ್‌ನಲ್ಲಿ ಚಾಲಕನಾಗಿದ್ದಾರೆ. ಇವರು ಬಸ್ ಚಲಾಯಿಸುವಾಗ ಮೊಬೈಲ್‌ನಲ್ಲಿ ಮಾತನಾಡುತ್ತಿರುವುದನ್ನು ಕಂಡ ಪ್ರಯಾಣಿಕರೋರ್ವರು ಮೊಬೈಲ್‌ನಲ್ಲಿ ಸೆರೆ ಹಿಡಿದು ಶಿವಮೊಗ್ಗ ಸಂಚಾರಿ ಪೊಲೀಸರಿಗೆ ರವಾನಿಸಿದ್ದರು. ಈ ಬಗ್ಗೆ ಎಚ್ಚೆತ್ತ ಸಂಚಾರಿ ಪೊಲೀಸರು ಚಾಲಕನಿಗೆ 5 ಸಾವಿರ ರೂ. ದಂಡ ಹಾಕಿದ್ದಾರೆ. ಬಸ್ಸಿನ ಗಾಜು…
ಕಳೆ ನಾಶಕ ಮುಟ್ಟಿ ಜೀವ ಕಳೆದುಕೊಂಡ ಅಧಿಕಾರಿ! – ಕುಮುಟಾ ಮೂಲದ ಅರಣ್ಯಾಧಿಕಾರಿ ಸಾವು – ಬೆತ್ತಲೆಯಾಗಿ ಮೊಬೈಲ್ ಟವರ್ ಏರಿ ಯುವಕನ ಹುಚ್ಚಾಟ.! – ಶಿವಮೊಗ್ಗ ರೈಲಿಗೆ ಸಿಲುಕಿ ಯುವಕನ ಕಾಲು ತುಂಡು! NAMMUR EXPRESS NEWS ಸಾಗವಾನಿ ಮಡಿಗಳಿಗೆ (ಟೀಕ್ ಬಡ್) ಕಳೆನಾಶಕ ಹಾಕುವ ಸಂದರ್ಭದಲ್ಲಿ ವಿಷಪೂರಿತ ಕಳೆನಾಶಕವನ್ನು ಸಿಂಪಡಿಸಿದ ಕೈಯಿಂದಲೇ ನೀರು ಸೇವಿಸಿದ ಕಾರಣ ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿ ಯೋಗೇಶ ನಾಯ್ಕ (33), ಶುಕ್ರವಾರ ಮೃತಪಟ್ಟಿದ್ದಾರೆ. ಮೃತರಿಗೆ ಪತ್ನಿ, ಪುತ್ರ, ತಂದೆ, ತಾಯಿ, ಸಹೋದರ, ಸಹೋದರಿ ಇದ್ದಾರೆ. ಮೂಲತಃ ಕುಮಟಾ ತಾಲೂಕಿನ ಬಾಡ ಗ್ರಾಮದವರಾಗಿದ್ದ ಅವರು 13 ವರ್ಷಗಳಿಂದ ದಾಂಡೇಲಿ ಅರಣ್ಯ ವ್ಯಾಪ್ತಿಯಲ್ಲಿ ಉಪವಲಯ ಅರಣ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಸದ್ಯ, ವಿರ್ನೋಲಿ ವಲಯದ ಕುಳಗಿ ಶಾಖೆಯಲ್ಲಿದ್ದರು. ಆರೇಳು ದಿನಗಳ ಹಿಂದೆ ಪ್ಯಾರಾಕ್ಯೂಟ್ ಎಂಬ ಕೀಟನಾಶಕವನ್ನು ಸಾಗವಾನಿ ಮಡಿಗಳಿಗೆ ಸಿಂಪಡಿಸುವ ಕೆಲಸ ಮಾಡುತ್ತಿರುವಾಗ ನೀರು ಕುಡಿದಿದ್ದಾರೆ. ತುಸು ಹೊತ್ತಿನಲ್ಲಿ ಹೊಟ್ಟೆನೋವು ಶುರುವಾಗಿದ್ದರಿಂದ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.…
ದೇಶಕ್ಕೆ ಮತ್ತೊಮ್ಮೆ ಬೇಕು ಮೋದಿ! – ಬಿಜೆಪಿ ಸಮಾವೇಶದಲ್ಲಿ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ – ವಿಶ್ವ ನಾಯಕತ್ವಕ್ಕೆ ಮೋದಿ ಸಾರಥಿ: ರಾಘವೇಂದ್ರ NAMMUR EXPRESS NEWS ತೀರ್ಥಹಳ್ಳಿ: ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆ ಸಂದರ್ಭ ಕ್ಷೇತ್ರದಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಜೊತೆಗೆ ನಮ್ಮ ಅಭಿವೃದ್ಧಿ ಕಾರ್ಡ್ ಪ್ರತಿ ಮನೆ ಮನೆಗೆ ಕಾರ್ಯಕರ್ತರು ತಲುಪಿಸಿರುವುದರಿಂದ ಈ ಬಾರಿ ಚುನಾವಣೆಯಲ್ಲಿ ನಾವು ಗೆಲುವು ಸಾಧಿಸಿದ್ದೇವೆ. ದೇಶಕ್ಕೆ ಮತ್ತೊಮ್ಮೆ ನರೇಂದ್ರ ಮೋದಿ ಅವರ ಸಾರಥ್ಯ ಬೇಕು ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ತೀರ್ಥಹಳ್ಳಿ ಪಟ್ಟಣದ ವಿದ್ಯಾಧಿರಾಜ ಸಭಾ ಭವನದಲ್ಲಿ ಕೇಂದ್ರ ಸರ್ಕಾರ 9ನೇ ವರ್ಷದ ಪೂರೈಸಿರುವ ಸಂದರ್ಭ ತಾಲೂಕು ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ವಿವಿಧ ಮೋರ್ಚಾಗಳ ಸಂಯುಕ್ತ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಕ್ಷ ಕಟ್ಟುವುದು ಶಾಸಕ, ಮಂತ್ರಿ ಹಾಗೂ ಪ್ರಧಾನಿ ಮಾಡುವುದಕಲ್ಲ. ಬಿಜೆಪಿಯಲ್ಲಿ ಒಂದು ಸಿದ್ಧಾಂತಕ್ಕಾಗಿ ಒಂದು ರಾಷ್ಟ್ರಕ್ಕಾಗಿ ಕೆಲಸ ಮಾಡುವುದು ನಮ್ಮ ಪಕ್ಷದ ಬದ್ಧತೆ ಎಂದರು.…
ತೀರ್ಥಹಳ್ಳಿ ರೋಟರಿ ಕ್ಲಬ್,ಇನ್ನರ್ ವ್ಹಿಲ್ ಕ್ಲಬ್ ಪದಾಧಿಕಾರಿಗಳ ಪದವಿ ಸ್ವೀಕಾರಕ್ಕೆ ಕ್ಷಣಗಣನೆ – ಜು.8ರಂದು ತೀರ್ಥಹಳ್ಳಿಯಲ್ಲಿ ಕಾರ್ಯಕ್ರಮ – ಸರ್ವರನ್ನು ಸ್ವಾಗತಿಸಿದ ರೋಟರಿ ಪ್ರಮುಖರು NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ರೋಟರಿ ಕ್ಲಬ್,ಇನ್ನರ್ ವ್ಹಿಲ್ ಕ್ಲಬ್ 2023-24ರ ಪದಾಧಿಕಾರಿಗಳ ಪದವಿ ಸ್ವೀಕಾರ ಕಾರ್ಯಕ್ರಮ ಜು.9ರಂದು ತೀರ್ಥಹಳ್ಳಿಯಲ್ಲಿ ನಡೆಯಲಿದೆ. 09-07-2023ರ ಭಾನುವಾರ ಸಂಜೆ 6:30ಕ್ಕೆ ಮಾಧವ ಮಂಗಳ ಸಭಾಭವನ ತೀರ್ಥಹಳ್ಳಿಯಲ್ಲಿ ನಡೆಯಲಿದೆ. ರೊ.ದೇವ್ ಆನಂದ್ ಪದವಿ ಪ್ರಧಾನ ಮಾಡುವರು. ಕಾರ್ಯಕ್ರಮವು ಸಹಾಯಕ ಗೌರ್ನರ್ ರೊ. ರವಿ ಕೋಟೋಜಿ ಹಾಗೂ ಝೋನಲ್ ಲಿಫ್ಟಿನೆಂಟ್ ರೊ. ಚಂದ್ರಪ್ಪ ಕೆ ಟಿ ರವರ ಗೌರವ ಉಪಸ್ಥಿತಿಯಲ್ಲಿ ನಡೆಯಲಿದೆ. ಇನ್ನರ್ ವೀಲ್ ಕ್ಲಬ್ ಜಿಲ್ಲಾ ಕಾರ್ಯದರ್ಶಿಗಳಾದ ಶ್ರೀಮತಿ ಶಬರಿ ಕಡಿದಾಳ್ ರವರು ಇನ್ನರ್ ವೀಲ್ ಪದವಿ ಪ್ರಧಾನ ಮಾಡುವರು. ಅಧಿಕಾರ ವರ್ಗಾವಣೆ : ರೋಟರಿ ಕ್ಲಬ್ : ರೊ. ಮನೋಜ್ ಕುಮಾರ್ ಇವರಿಂದ ರೊ.ಭರತ್ ಕುಮಾರ್ ಕೊಡ್ಲು ಇವರಿಗೆ, ಇನ್ನರ್ ವೀಲ್ ಕ್ಲಬ್ : ಶ್ರೀಮತಿ ಶಾಕುಂತಲಾ…
ತೂದೂರಿಂದ ಕೋಟಿ ವೃಕ್ಷ ಅಭಿಯಾನ ಶುರು! – ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಚಾಲನೆ – ಗ್ರಾಮಾಡಳಿತದಿಂದ ನೈಸರ್ಗಿಕ ಅರಣ್ಯ ವೃದ್ಧಿಗೆ ಕ್ರಮ – ಅಕೇಶಿಯಾ ನಿರ್ಮೂಲನೆಗೆ ಮುಂದಾದ ಗ್ರಾಪಂ NAMMUR EXPRESS NEWS ತೀರ್ಥಹಳ್ಳಿ: ನೈಸರ್ಗಿಕ ಅರಣ್ಯಕ್ಕೆ ಕಂಟಕವಾಗಿರುವ ಅಕೇಶಿಯಾ ನೆಡುತೋಪು ನಿರ್ಮೂಲನೆಗೆ ತೂದೂರು ಗ್ರಾಮ ಪಂಚಾಯಿತಿ ಮುಂದಾಗಿದ್ದು ಕೋಟಿ ವೃಕ್ಷ ಅಭಿಯಾನ ಹಮ್ಮಿಕೊಂಡಿದೆ. ಶನಿವಾರ ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ ಮೂಡ್ಲು-ಹೊಸ್ಕೆರೆ ಗ್ರಾಮದಲ್ಲಿ ಗಿಡನೆಟ್ಟು ಅಭಿಯಾನಕ್ಕೆ ಚಾಲನೆ ನೀಡಿದರು. ಗ್ರಾಮಸ್ತರು, ಯುವಕರು, ಮಹಿಳೆಯರು ಹಾಗೂ ಪರಿಸರ ಪ್ರೇಮಿಗಳು ಸುಮಾರು ಮೂರು ಎಕರೆ ಪ್ರದೇಶದಲ್ಲಿ ವಿವಿಧ ಜಾತಿಯ ಸಸಿ ನೆಡುವ ಅಭಿಯಾನದಲ್ಲಿ ಭಾಗಿಯಾಗಿದ್ದಾರೆ. ಗಿಡಗಳ ಸಂರಕ್ಷಣೆಗೆ ಗ್ರಾಮಾಡಳಿತ, ಪರಿಸರ ಪ್ರೇಮಿಗಳು ಸುತ್ತಮುತ್ತಲು ಬೀಲಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಗ್ರಾಮದ ವ್ಯಾಪ್ತಿಯ ರಸ್ತೆಯ ಇಕ್ಕೆಲಗಳಲ್ಲಿ ದೂಪದ ಮರ ಬೆಳೆಸುವ ದೂರದೃಷ್ಟಿಯನ್ನು ಹೊಂದಿದ್ದಾರೆ. ಮಲೆನಾಡಿನಲ್ಲಿ ಸುಮಾರು ನಾಲ್ಕು ದಶಕಗಳಿಂದ ಅಕೇಶಿಯಾ ನೆಡುತೋಪು ಇದೆ. ಏಕಜಾತಿಯ ಮರಗಳು ಎಲ್ಲೆಡೆ ಆವರಿಸಿಕೊಳ್ಳುತ್ತಿದ್ದು ಜೈವಿಕ ವೈವಿಧ್ಯತೆ…
ಕ್ರಿಕೆಟ್ ಪಟು ಕ್ರಿಕೆಟ್ ಬೆಟ್ಟಿಂಗಿಗೆ ಬಲಿ! – ತೀರ್ಥಹಳ್ಳಿಯಲ್ಲಿ ಬೆಟ್ಟಿಂಗ್ ಜಾಲ: ಸಾಲದಿಂದ ಮನನೊಂದು ಸಾವು – ಮಲೆನಾಡಲ್ಲಿ ಹಬ್ಬಿದ ಕ್ರಿಕೆಟ್ ಬೆಟ್ಟಿಂಗ್ ದಂಧೆ! – ಹುಡುಗರಿಂದ ಹಿಡಿದು ಮುದುಕರವರೆಗೆ ಬೆಟ್ಟಿಂಗ್ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಕ್ರಿಕೆಟ್ ಕ್ರೀಡಾಪಟುವೊಬ್ಬ ಬೆಟ್ಟಿಂಗ್ ಆಡಲು ಸಾಲ ಮಾಡಿ ಸಾಲಗಾರರ ಕಿರಿಕಿರಿಯಿಂದ ಇದೀಗ ಶುಕ್ರವಾರ ನೇಣಿಗೆ ಶರಣಾಗಿದ್ದಾನೆ. ತೀರ್ಥಹಳ್ಳಿಯ ಕಟ್ಟೆಹಕ್ಲುವಿನಲ್ಲಿ ಮೊಬೈಲ್ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದ 22 ವಯಸ್ಸಿನ ಮಿಥುನ್ ಶೆಟ್ಟಿ ಎಂಬ ಯುವಕ ಅಂಗಡಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೊಮ್ಮನಹಳ್ಳಿ ಸಂಜೀವ್ ಶೆಟ್ಟಿ ಅವರ ಪುತ್ರ ಮಿಥುನ್ ಶೆಟ್ಟಿ ಎಂಬ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿಯಾಗಿದ್ದು ಬೆಟ್ಟಿಂಗ್ ಸಾಲ ಕ್ಕೆ ಬಲಿಯಾಗಿದ್ದಾನೆ ಎನ್ನಲಾಗಿದೆ. ಮಿಥುನ್ ಶೆಟ್ಟಿ ಉತ್ತಮ ಕ್ರಿಕೆಟ್ ಪಟುವಾಗಿದ್ದು, ಆನ್ ಲೈನ್ ಬೆಟ್ಟಿಂಗ್ ಗೆ ಬಲಿಯಾಗಿರುವುದಾಗಿ ನೆರೆಹೊರೆಯವರ ಆರೋಪವಾಗಿದೆ. ತೀರ್ಥಹಳ್ಳಿಯ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಎಂದು…
ಟಾಪ್ ನ್ಯೂಸ್ ಕರ್ನಾಟಕ – ಸುಳ್ಯದಲ್ಲಿ ನೀರುಪಾಲಾದ ಕಾರ್ಮಿಕ: ಶೋಧ – ಫೇಸ್‌ಬುಕ್‌ನಲ್ಲಿ ಹಿಂದೂ ಧರ್ಮದ ಅವಹೇಳನ : ಆರೋಪಿ ಅರೆಸ್ಟ್.! – ಜೈನಮುನಿ ಕೊಲೆ: ಇಬ್ಬರ ಬಂಧನ.! – ಕರಾವಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್! – ಇನ್ನು ಹಲವು ಸುದ್ದಿಗಳು… ಪೂರ್ತಿ ಓದಿ! NAMMUR EXPRESS NEWS ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕೂರ್ನಡ್ಕ ಎಂಬಲ್ಲಿ ಪಾಲ ದಾಟುತ್ತಿರುವ ವೇಳೆಯಲ್ಲಿ ಜು.6ರ ಸಂಜೆಗೆ ಹೊಳೆಗೆ ಬಿದ್ದು ಕೊಚ್ಚಿಕೊಂಡು ಹೋಗಿರುವ ಕಾರ್ಮಿಕ ನಾಪತ್ತೆಯಾಗಿದ್ದು ಶೋಧ ಕಾರ್ಯಾಚರಣೆ ಶುಕ್ರವಾರ ಬೆಳಗ್ಗಿನಿಂದ ಆರಂಭಗೊಂಡರರೂ ಕಾರ್ಮಿಕನ ಸುಳಿವು ಲಭ್ಯವಾಗಿಲ್ಲ. ಎಸ್.ಡಿ.ಆರ್.ಎಫ್ ಹಾಗೂ ಅಗ್ನಿಶಾಮಕ ದಳ ತಂಡದ ಸುಮಾರು 15-20 ಮಂದಿ ಆಗಮಿಸಿ ಮೆಷಿನ್ ಬೋಟ್ ಬಳಸಿ ಹುಡುಕಾಟ ನಡೆಸಿದರು. ಸ್ಥಳೀಯ ಮುಳುಗು ತಜ್ಞರು ಆಗಮಿಸಿ ನೀರಿನಲ್ಲಿ ಮುಳುಗಿ ಹುಡುಕಾಟ ನಡೆಸಲಾಗುತ್ತಿದೆ. ಸದ್ಯ ಶೋಧ ಕಾರ್ಯ ನಡೆಯುತ್ತಿದೆ. ಫೇಸ್‌ಬುಕ್‌ನಲ್ಲಿ ಹಿಂದೂ ಧರ್ಮದ ಅವಹೇಳನ : ಆರೋಪಿ ಅರೆಸ್ಟ್.! ಫೇಸ್ ಬುಕ್ ನಲ್ಲಿ…
ವಿಧಾನ ಸೌಧದಲ್ಲೇ ಪೊಲೀಸ್ ಯಾಮಾರಿಸಿದ ಲಾಯರ್! – ವಿಧಾನಸೌಧದಲ್ಲಿ ಬಜೆಟ್ ದಿನವೇ ಭದ್ರತಾ ಲೋಪ – ಶಾಸಕರ ಆಸನದಲ್ಲಿ ಕುಳಿತ ವಕೀಲ ಅರೆಸ್ಟ್ – 15 ನಿಮಿಷ ಶಾಸಕರ ಕುರ್ಚಿಯಲ್ಲೇ ಕುಳಿತಿದ್ದ! NAMMUR EXPRESS NEWS ಬೆಂಗಳೂರು: ವಿಧಾನ ಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡಿಸುತ್ತಿದ್ದ ಸಂದರ್ಭದಲ್ಲಿ, ದೇವದುರ್ಗ ಕ್ಷೇತ್ರದ ಶಾಸಕಿ ಕರೆಮ್ಮ ಜಿ. ನಾಯಕ ಅವರ ಕುರ್ಚಿಯಲ್ಲಿ ಕುಳಿತಿದ್ದ ಆರೋಪದಡಿ ವಕೀಲ ತಿಪ್ಪೇರುದ್ರಪ್ಪ (76) ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಚ್ಚರಿ ಎಂದರೆ ವಿಧಾನಸೌಧದಲ್ಲಿ ಬಜೆಟ್ ದಿನವೇ ಭದ್ರತಾ ಲೋಪ ನಡೆದಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. ‘ಚಿತ್ರದುರ್ಗದ ತಿಪ್ಪೇರುದ್ರಪ್ಪ, ಮೊಳಕಾಲ್ಮುರು ಕ್ಷೇತ್ರದ ಶಾಸಕ ಎಂದು ಹೇಳಿಕೊಂಡು ಒಳಗೆ ಪ್ರವೇಶಿಸಿದ್ದರು. ಅವರನ್ನು ಮಾರ್ಷಲ್‌ಗಳು ಹಿಡಿದು, ಠಾಣೆಗೆ ಒಪ್ಪಿಸಿದ್ದಾರೆ. ವಿಧಾನಸಭೆ ದಂಡನಾಯಕ ಎಚ್.ಎಲ್. ಜಯಕೃಷ್ಣ ನೀಡಿರುವ ದೂರು ಆಧರಿಸಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತಿಪ್ಪೇರುದ್ರಪ್ಪ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ. ‘ಆರೋಪಿ ತಿಪ್ಪೇರುದ್ರಪ್ಪ, ಮಾನಸಿಕ…