Author: Nammur Express Admin

ಭತ್ತದ ಗದ್ದೆಯಲ್ಲಿ ನಾಟಿ ಮಾಡಿದ ರಾಹುಲ್ ಗಾಂಧಿ! – ಮಾರ್ಗಮಧ್ಯೆ ಕಾರಿನಿಂದ ಇಳಿದು ನಾಟಿ ಮಾಡಿದರು – ಟ್ರ್ಯಾಕ್ಟರ್ ಚಲಾಯಿಸಿ ಗಮನ ಸೆಳೆದ ರಾಹುಲ್ NAMMUR EXPRESS NEWS ಚಂಡೀಗಢ: ದೇಶದಲ್ಲಿ ಮಳೆಗಾಲ ಆರಂಭವಾಗಿದ್ದು, ಕೃಷಿ ಚಟುವಟಿಕೆ ಜೋರಾಗಿದೆ. ಈ ನಡುವೆ ಯುವ ನಾಯಕ ರಾಹುಲ್ ಗಾಂಧಿ ಶನಿವಾರ ಬೆಳ್ಳಂಬೆಳಗ್ಗೆ ಹರಿಯಾಣದ ಸೋನಿಪತ್‌ನ ಮದೀನಾ ಗ್ರಾಮಕ್ಕೆ ಭೇಟಿ ನೀಡಿದ್ದುಅಲ್ಲಿ ರೈತರೊಂದಿಗೆ ಗದ್ದೆಗಿಳಿದು ಭತ್ತದ ನಾಟಿ ಮಾಡಿದ್ದಾರೆ. ಹಿಮಾಚಲ ಪ್ರದೇಶಕ್ಕೆ ಹೋಗುತ್ತಿದ್ದ ರಾಹುಲ್ ಗಾಂಧಿ ಭತ್ತದ ಗದ್ದೆಯಲ್ಲಿ ರೈತರು ನಾಟಿ ಮಾಡುತ್ತಿರುವುದನ್ನು ಕಂಡಿದ್ದಾರೆ. ಈ ವೇಳೆ ಕಾರು ನಿಲ್ಲಿಸಿ, ಹಳ್ಳಿ ಹುಡುಗನಂತೆ ಮೊಣಕಾಲುದ್ದಕ್ಕೆ ಪ್ಯಾಂಟ್ ಮಡಿಸಿಕೊಂಡು ರೈತರೊಂದಿಗೆ ಗದ್ದೆಗಿಳಿದು ಅವರಿಗೆ ನಾಟಿ ಮಾಡಲು ಸಹಾಯ ಮಾಡಿದ್ದಾರೆ. ಕಾಂಗ್ರೆಸ್ ಮುಖಂಡರೂ ಸಹ ರೈತರೊಂದಿಗೆ ಸೇರಿಕೊಂಡು ಟ್ರ್ಯಾಕ್ಟರ್ ಮೂಲಕ ಗದ್ದೆ ಉಳುಮೆ ಮಾಡಿ ಭತ್ತದ ನಾಟಿಗೆ ಸಹಕರಿಸಿದ್ದಾರೆ.ಬಳಿಕ ರೈತರೊಂದಿಗೆ ಸಂವಾದ ನಡೆಸಿ, ಕಷ್ಟ ಸುಖ ವಿಚಾರಿಸಿದ್ದಾರೆ. 2024ರ ಲೋಕಸಭೆ ಚುನಾವಣೆ ಹಿನ್ನೆಲೆಯ ಭರ್ಜರಿ ಚುನಾವಣಾ ಪ್ರಚಾರ…

Read More

ನಿತ್ಯಾನಂದ ಸ್ವಾಮಿಯ ದೇಶಕ್ಕೆ ರಂಜಿತಾ ನೂತನ ಪ್ರಧಾನ ಮಂತ್ರಿ! – ‘ಕೈಲಾಸ ದೇಶಂ’ ದೇಶ ಸ್ಥಾಪಿಸಿದ ವಿವಾದಿತ ಸ್ವಾಮೀಜಿ – ನಟಿ ರಂಜಿತಾ ಈಗ ಕೈಲಾಸ ದೇಶದ ಪಿಎಂ NAMMUR EXPRESS NEWS ಕೈಲಾಸ: ಹೊಸ ದೇಶ ಸೃಷ್ಟಿಸಿದ ವಿವಾದಿತ ಸ್ವಾಮಿ ದೊರೆಯಾಗಿರುವ ಕೈಲಾಸ ದೇಶಕ್ಕೆ ರಂಜಿತಾ ನೂತನ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ನಿತ್ಯಾನಂದ ಸ್ವಾಮಿ ಮತ್ತಷ್ಟು ಕುತೂಹಲ ಮೂಡಿಸಿದ್ದಾನೆ. ವಿವಾದಿತ ಸ್ವಾಮಿ ನಿತ್ಯಾನಂದ ಭಾರತ ದೇಶ ಬಿಟ್ಟು ಮತ್ತೊಂದು ದೇಶವನ್ನು ಸೃಷ್ಟಿಸಿಕೊಂಡಿದ್ದಾರೆ. ನಿತ್ಯಾನಂದ ತನ್ನನ್ನು ‘ಆ ದ್ವೀಪದ ದೊರೆ’ ಎಂದು ಘೋಷಿಸಿಕೊಂಡಿದ್ದಾರೆ. ಆ ದ್ವೀಪಕ್ಕೆ ಈ ಮುಂಚೆನೇ ‘ಕೈಲಾಸ ದೇಶಂ’ ಘೋಷಿಸಿದ್ದ. ಇದೀಗ ಆ ಕೈಲಾಸಕ್ಕೆ ಪ್ರಧಾನಿಯಾಗಿ ತನ್ನ ಆಪ್ತೆಯಾಗಿರುವ ನಟಿ ರಂಜಿತಾಳನ್ನು ಪ್ರಧಾನಿಯಾಗಿ ಆಯ್ಕೆ ಮಾಡಿದ್ದಾರೆ. ನಿತ್ಯಾನಂದ ತನ್ನ ಆತ್ಮೀಯ ಶಿಷ್ಯೆಯಾಗಿರುವ ನಟಿ ರಂಜಿತಾಳನ್ನು ಕೈಲಾಸಕ್ಕೆ ಪ್ರಧಾನಿಯನ್ನಾಗಿ ಮಾಡಿದ್ದಾರೆ. ನಿತ್ಯಾನಂದರ ವೆಬ್‌ಸೈಟ್‌ನಲ್ಲಿ ಕೈಲಾಸ ಪ್ರಧಾನಿ ಕುರಿತು ಪ್ರಕಟಗೊಂಡಿರುವುದು ಸಂಚಲನ ಮೂಡಿಸುತ್ತಿದೆ. ವೆಬ್‌ಸೈಟ್‌ನಲ್ಲಿ ಫೋಟೋ ಅಡಿಯಲ್ಲಿ ನಿತ್ಯಾನಂದ ಸ್ವಾಮಿ…

Read More

ಕಾರ್ಕಳ ಕ್ರಿಯೇಟಿವ್‌ ಕಾಲೇಜಲ್ಲಿ “ಕ್ರಿಯೇಟಿವ್‌ ಸಮಾಗಮ”! – ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ – ಪ್ರಥಮ ಪಿಯುಸಿ ತರಗತಿಯಲ್ಲಿ ಹೆಚ್ಚು ಅಂಕ ಪಡೆದವರಿಗೆ ಗೌರವ NAMMUR EXPRESS NEWS ಕಾರ್ಕಳ: ಕಾರ್ಕಳ ಕ್ರಿಯೇಟಿವ್‌ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ “ಕ್ರಿಯೇಟಿವ್‌ ಸಮಾಗಮ” ಕಾರ್ಯಕ್ರಮ ಕಾಲೇಜಿನ ನೇಸರ ಸಭಾಂಗಣದಲ್ಲಿ ನಡೆಯಿತು. ಕ್ರಿಯೇಟಿವ್‌ ಶಿಕ್ಷಣ ಪ್ರತಿಷ್ಠಾನ (ರಿ) ಕಾರ್ಕಳ ಇದರ ವತಿಯಿಂದ ಜು.7ರ ಶುಕ್ರವಾರ ಶೈಕ್ಷಣಿಕ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ʼಕ್ರಿಯೇಟಿವ್‌ ಸಮಾಗಮʼ ನಡೆಯಿತು. ಸಂಸ್ಥಾಪಕರಾದ ಅಮೃತ್‌ ರೈ ಕಾಲೇಜಿನ ವಿವಿಧ ಸಂಘಗಳನ್ನು ಉದ್ಘಾಟಿಸಿದರು. ಪ್ರಾಸ್ತಾವಿಕ ಮಾತುಗಳನ್ನಾಡಿದ ಅಶ್ವತ್‌ ಎಸ್‌.ಎಲ್‌, ಬದುಕನ್ನು ನಿರ್ಧರಿಸುವ ಪಿ.ಯು ಶಿಕ್ಷಣದಲ್ಲಿ ತಾವುಗಳೆಲ್ಲ ತಮ್ಮ ಅಪ್ಪ ಅಮ್ಮಂದಿರ ಭರವಸೆ ಉಳಿಸಿಕೊಳ್ಳುವಂತಹ ಸಾಧನೆ ಮಾಡುವಂತಾಗಬೇಕೆಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ವಿದ್ವಾನ್‌ ಗಣಪತಿ ಭಟ್‌ ಮಾತನಾಡಿ, ಕ್ರಿಯಾಶೀಲ ವ್ಯಕ್ತಿತ್ವದಿಂದ ಮಾತ್ರ ಸವಾಲುಗಳನ್ನು ಎದುರಿಸಲು ಸಾಧ್ಯ. ಸಾಧನೆಗೆ ಯಾವುದೇ ಅಡ್ಡದಾರಿಗಳಿಲ್ಲ. ನೇರ…

Read More

ಇನ್ಮುಂದೆ ಆನ್‌ಲೈನ್‌ನಲ್ಲಿ ವಿವಾಹ ನೋಂದಣಿ! – ನೂತನ ವಧು ವರರಿಗೆ ಗುಡ್ ನ್ಯೂಸ್ ನೀಡಿದ ಬಜೆಟ್ – ಅಂಗವಿಕಲರು, ಮಹಿಳೆಯರ ಉದ್ಯೋಗಕ್ಕೂ ಯೋಜನೆ NAMMUR EXPRESS NEWS ಬೆಂಗಳೂರು : ರಾಜ್ಯ ಸರಕಾರ ನೂತನ ವಧು-ವರರಿಗೆ ಗುಡ್‌ನ್ಯೂಸ್ ಕೊಟ್ಟಿದೆ. ಇನ್ಮುಂದೆ ಆನ್‌ಲೈನ್‌ನಲ್ಲಿ ವಿವಾಹ ನೋಂದಣಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದಾರೆ. ಇಷ್ಟು ವರ್ಷಗಳ ಕಾಲ ಉಪ ನೊಂದಣಿ ಕಚೇರಿಗಳಲ್ಲಿ ಮಾತ್ರವೇ ವಿವಾಹ ನೋಂದಣಿಯನ್ನು ಮಾಡಲಾಗುತ್ತಿತ್ತು. ಆದರೆ ಇದೀಗ ಹೊಸದಾಗಿ ಕಾವೇರಿ2.0 ತಂತ್ರಾಶದಲ್ಲಿ ಆನ್ ಲೈನ್ ಮೂಲಕ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಇನ್ನು ವಿವಾಹ ನೋಂದಣಿಗೆ ಗ್ರಾಮ ಪಂಚಾಯಿತಿ ಬಾಪೂಜಿ ಸೇವಾ ಕೇಂದ್ರ ಹಾಗೂ ಗ್ರಾಮ್ ಒನ್ ಕೇಂದ್ರಗಳಲ್ಲಿಯೂ ಅರ್ಜಿಯನ್ನು ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ಅಲ್ಲದೇ ವಿಶೇಷ ಚೇತನರಿಗೆ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸದೃಢತೆಯನ್ನು ಒದಗಿಸಲು ಇಲಾಖೆಯಲ್ಲಿ ನೋಂದಣಿಯಾಗಿರುವ ಸುಮಾರು 4,000 ವಿಶೇಷಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನಗಳನ್ನು 30 ಕೋಟಿ ರೂ.ಗಳ ವೆಚ್ಚದಲ್ಲಿ ಒದಗಿಸಲಾಗುವುದು. ಇದಲ್ಲದೆ,…

Read More

ಈ ವಾರ ಮಳೆ ಕೊಂಚ ಇಳಿಮುಖ? – ಮಲೆನಾಡಲ್ಲಿ ಬಿಡದೇ ಸುರಿಯುತ್ತಿರುವ ಮಳೆ – ಕರಾವಳಿ ಜಿಲ್ಲೆಗಳಲ್ಲಿ ಕೊಂಚ ವಿಶ್ರಾಂತಿ – ಶಾಲಾ ಕಾಲೇಜುಗಳು ಎಂದಿನಂತೆ ಓಪನ್ – ಕಾರ್ಕಳದಲ್ಲಿ ಮತ್ತೋರ್ವ ಮಹಿಳೆ ಬಲಿ NAMMUR EXPRESS NEWS ಬೆಂಗಳೂರು: ರಾಜ್ಯದ ಮಲೆನಾಡಲ್ಲಿ ಒಂದೇ ಸಮನೆ ಮಳೆ ಸುರಿಯುತ್ತಿದೆ. ಕರಾವಳಿ ಜಿಲ್ಲೆಗಳಲ್ಲಿ ಕಳೆದ ವಾರದಿಂದ ಆರ್ಭಟಿಸುತ್ತಿರುವ ಮಳೆ ಸ್ವಲ್ಪಮಟ್ಟಿಗೆ ಇಳಿಮುಖವಾಗಿದೆ. ಹೀಗಾಗಿ ಶಾಲಾ ಮಕ್ಕಳಿಗೆ ಎಂದಿನಂತೆ ತರಗತಿಗಳು ನಡೆಯಲಿದೆ. ಮಲೆನಾಡಲ್ಲಿ ಈ ಸಲ ಮಳೆ ಹಗಲು ವೇಳೆ ಹೆಚ್ಚು ಸುರಿಯುತ್ತಿದ್ದು ರಾತ್ರಿ ಕೊಂಚ ತಣ್ಣಗಾಗುತ್ತಿರುವುದು ವಿಶೇಷ. ಸತತ ಮಳೆಯಿಂದಾಗಿ ಕರಾವಳಿಯಲ್ಲಿ ನೆರೆ ಹಾವಳಿಯಿಂದಾಗಿ ಅನೇಕ ಜನರನ್ನು ಬಲಿ ತೆಗೆದುಕೊಂಡಿದೆ. ಹೀಗಾಗಿ ಈ ಪ್ರದೇಶದ ಜನರು ಎಚ್ಚರಿಕೆ ಇರುವಂತೆ ಹೇಳಿದೆ. ಒಂದೇ ವಾರದಲ್ಲಿ ಮಳೆ ಸುರಿದು ಬಹುತೇಕ ನದಿ ಕೊಳ್ಳಗಳು ತುಂಬಿವೆ. ಕಾರ್ಕಳದಲ್ಲಿ ನದಿಗೆ ಬಿದ್ದು ಮಹಿಳೆ ಸಾವು ಕಾರ್ಕಳ ತಾಲೂಕು ನಲ್ಲೂರು ಗ್ರಾಮದಲ್ಲಿ ಮಹಿಳೆಯೊಬ್ಬಳು ನೀರುಪಾಲಾಗಿದ್ದಾರೆ. ನಡಾಯಿಪ ನಿವಾಸಿ ಬೇಬಿಶೆಟ್ಟಿ (55)…

Read More

ಸಾಗರದ ಸಿಗಂದೂರು ಲಾಂಚ್ ಪ್ರಯಾಣ ಶುರು! – ಚೌಡೇಶ್ವರಿ ದೇವಸ್ಥಾನಕ್ಕೆ ಹೋಗುವವರಿಗೆ ಅನುಕೂಲ – ಪ್ರಯಾಣಿಕರ ಜತೆ ವಾಹನ ಕೂಡ ಹೂತ್ತು ಸಾಗಾಟ! NAMMUR EXPRESS NEWS ಸಾಗರ: ಮಳೆಯಿಲ್ಲದೇ ಹಿನ್ನೀರಲ್ಲಿ ನೀರಿನ ಪ್ರಮಾಣ ಸಂಪೂರ್ಣ ಕಡಿಮೆಯಾಗಿದ್ದರಿಂದ ಸಂಚಾರವನ್ನೇ ಸ್ಥಗಿತಗೊಳಿಸುವ ಮಟ್ಟಕ್ಕೆ ತಲುಪಿದ್ದ ಸಿಗಂದೂರು ಲಾಂಚ್​ ಇದೀಗ ಮತ್ತೆ ಶುರುವಾಗಿದೆ. ವಾಹನಗಳನ್ನು ಸಹ ಹೊತ್ತುಕೊಂಡು ಈ ಕಡೆಯಿಂದ ಆ ಕಡೆ , ಆ ಕಡೆಯಿಂದ ಈ ಕಡೆಗೆ ಸಂಚರಿಸಲಿವೆ. ಲಿಂಗನಮಕ್ಕಿ ಜಲಾಶಯದ ಹಿನ್ನೀರಿನ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಮಳೆಬೀಳುತ್ತಿದ್ದು, ಹಿನ್ನೀರಿನಲ್ಲಿ ಏರಿಕೆ ಕಾಣುತ್ತಿದೆ. ವಿಶೇಷವಾಗಿ ಲಾಂಜ್​ನ ಪ್ಲಾಟ್​ ಫಾರಂನವರೆಗೂ ಕಳಸವಳ್ಳಿ, ಅಂಬಾರಗೊಡ್ಡು, ಹೊಳೆಬಾಗಿಲಿನಲ್ಲಿ ನೀರು ಏರಿಕೆಯಾಗಿದೆ. ಇದರಿಂದಾಗಿ ಶುಕ್ರವಾರದಿಂದ ಸಂಚಾರ ಶುರುವಾಗಿದೆ. ಕಳೆದ 20 ದಿನಗಳಿಂದ ಲಾಂಚ್‌ ನಲ್ಲಿ ಪ್ರಯಾಣಿಕರನ್ನ ಮಾತ್ರ ಸಾಗಿಸಲಾಗುತ್ತಿತ್ತು. ಇದೀಗ ನೀರು ಏರಿಕೆಯಾಗಿದ್ದರಿಂದ ವಾಹನಗಳನ್ನ ಲಾಂಚ್​ಗೆ ಹಾಕಲಾಗಿತ್ತು. ಯಾವುದೇ ತೊಂದರೆ ಆಗದ ಹಿನ್ನೆಲೆಯಲ್ಲಿ ಮತ್ತೆ ಅಧಿಕೃತವಾಗಿ ಲಾಂಚ್​ನಲ್ಲಿ ವಾಹನ ಸಾಗಾಟಕ್ಕೆ ಅನುವು ಮಾಡಿಕೊಡಲಾಗಿದೆ. ಇದನ್ನೂ ಓದಿ : ರೈತರಿಗೆ…

Read More

ಸಿದ್ದರಾಮಯ್ಯ ಬಜೆಟ್… ಯಾವ ಕ್ಷೇತ್ರಕ್ಕೆ ಏನು? – ಪಟಾಪಟ್ ಡೀಟೇಲ್ಸ್ ಇಲ್ಲಿದೆ… ಯಾವ ಯೋಜನೆ? – ಕೃಷಿ, ಶಿಕ್ಷಣ, ಉದ್ಯೋಗ, ಆಹಾರಕ್ಕೆ ಹೆಚ್ಚು ಒತ್ತು NAMMUR EXPRESS NEWS ಕೃಷಿ ಮತ್ತು ಪೂರಕ ಚಟುವಟಿಕೆಗಳಿಗೆ ಬೆಂಬಲ: •ಕೃಷಿ ಭಾಗ್ಯ ಯೋಜನೆ 100 ಕೋಟಿ ರೂ. ವೆಚ್ಚದಲ್ಲಿ ಮರುಜಾರಿ. •ರೇಷ್ಮೆ ನೂಲು ಬಿಚ್ಚಾಣಿಕೆದಾರರಿಗೆ ಐದು ಲಕ್ಷ ರೂ. ವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ. •ಜಾನುವಾರುಗಳ ಆಕಸ್ಮಿಕ ಸಾವಿನ ಸಂಕಷ್ಟ ನಿವಾರಣೆಗೆ ಅನುಗ್ರಹ ಯೋಜನೆ ಮರುಜಾರಿ ಮೀನುಗಾರಿಕೆಗೆ ಉತ್ತೇಜನ: •ಮೀನುಗಾರ ಮಹಿಳೆಯರಿಗೆ ಬ್ಯಾಂಕುಗಳಲ್ಲಿ ಬಡ್ಡಿರಹಿತವಾಗಿ ನೀಡುವ ಸಾಲದ ಮಿತಿ 50,000 ರೂ. ಗಳಿಂದ 3 ಲಕ್ಷ ರೂ. ಗಳಿಗೆ ಹೆಚ್ಚಳ. •ಮೀನುಗಾರರ ದೋಣಿಗಳಿಗೆ ರಿಯಾಯಿತಿ ದರದ ಡೀಸೆಲ್‌ ಮಿತಿ 2 ಲಕ್ಷ ಕಿಲೋ ಲೀಟರ್‌ಗಳವರೆಗೆ ಹೆಚ್ಚಿಸಲು 250 ಕೋಟಿ ರೂ. ನೆರವು. •ಮೀನುಗಾರಿಕಾ ದೋಣಿಗಳ ಸೀಮೆ ಎಣ್ಣೆ ಇಂಜಿನ್‌ಗಳನ್ನು… ಅನ್ನದಾತನಿಗೆ ಸಾಲ ಸೌಲಭ್ಯ •ಶೂನ್ಯ ಬಡ್ಡಿ ದರದಲ್ಲಿ ನೀಡುವ ಅಲ್ಪಾವಧಿ ಸಾಲದ ಮಿತಿ…

Read More

ರಾಮ ಮಂಟಪದತ್ತ ತುಂಗಾ ನದಿ ನೀರು! – ಎರಡೇ ದಿನದಲ್ಲಿ ನೀರಿನ ಪ್ರಮಾಣ ಏರಿಕೆ – ಹೀಗೆ ಮಳೆ ಬಂದ್ರೆ ರಾಮ ಮಂಟಪ ಮುಳುಗಡೆ! NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ಹಾಗೂ ಶೃಂಗೇರಿ ಭಾಗದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ತೀರ್ಥಹಳ್ಳಿ ತುಂಗಾ ನದಿ ಅಪಾಯದ ಹಂತದಲ್ಲಿ ಹರಿಯುತ್ತಾ ಇದೆ. ತುಂಗಾ ನದಿ ರಾಮ ಮಂಟಪದ ಹತ್ತಿರ ನೀರು ಬಂದಿರುವುದರಿಂದ ನೀರಿನ ಪ್ರಮಾಣ ಹೆಚ್ಚಾಗಿದೆ. ನದಿ ಅಕ್ಕಪಕ್ಕದಲ್ಲಿರುವ ಜನತೆಗೆ ತಾಲೂಕು ಆಡಳಿತ ಎಚ್ಚರಿಕೆಯನ್ನು ನೀಡಿದೆ. ಶೃಂಗೇರಿಯಲ್ಲಿ ಕೂಡ ತುಂಗಾ ನದಿಯು ಅಪಾಯ ಮಟ್ಟದಲ್ಲಿ ಹರಿಯುತ್ತಾ ಇದೆ. ಶಿವಮೊಗ್ಗದಲ್ಲಿ ತುಂಗಾ ನದಿಯ ಮಂಟಪ ಅರ್ಧ ಭಾಗಕ್ಕೆ ಬಂದಿತ್ತು. ನದಿಯ ನೀರಿನ ಪ್ರಮಾಣ ಹೆಚ್ಚಾಗಿದೆ. ಭದ್ರ, ಶರಾವತಿ, ಮಾಲತಿ ನದಿ ಸೇರಿದಂತೆ ಮಲೆನಾಡಿನ ಬಹುತೇಕ ನದಿಗಳು ತುಂಬಿ ಹರಿಯುತ್ತಾ ಇದೆ. ಇನ್ನು ಹೀಗೆ ಮುಂದುವರೆದಲ್ಲಿ ಮಳೆಯಿಂದಾಗಿ ನದಿಗಳು ಅಪಾಯ ಮಟ್ಟಕ್ಕೆ ಸಾಗಲಿವೆ. ಇದನ್ನೂ ಓದಿ : ರೈತರಿಗೆ ಶೂನ್ಯ ಬಡ್ಡಿದರದಲ್ಲಿ 5 ಲಕ್ಷವರೆಗೆ ಸಾಲ! HOW…

Read More

ಮಳೆ ನಡುವೆ ಮನೆಗೆ ನುಗ್ಗಿದ ಕಳ್ಳರು! – ಬೆಜ್ಜವಳ್ಳಿಯಲ್ಲಿ ಎರಡು ಮನೆ ಕಳ್ಳತನ ಯತ್ನ – ಕೋಣಂದೂರಲ್ಲಿ ಶವ ಸಂಸ್ಕಾರಕ್ಕೆ ಮಳೆ ಅಡ್ಡಿ – ಮಳೆ ಹಿನ್ನೆಲೆ: ಹೊಸನಗರ ಕೆಲ ಶಾಲೆಗಳಿಗೆ ರಜೆ NAMMUR EXPRESS NEWS ತೀರ್ಥಹಳ್ಳಿ: ಮಳೆ ನಡುವೆ ಕಳ್ಳರು ತಮ್ಮ ಕರಾಮತ್ತು ಶುರು ಮಾಡಿದ್ದಾರೆ. ತೀರ್ಥಹಳ್ಳಿ ತಾಲೂಕಿನ ಬೆಜ್ಜವಳ್ಳಿಯಲ್ಲಿ ಚಾಲಕ ಇಮಿಯಾಜ್ ಹಾಗೂ ಶಾಂತ ಎಂಬುವರ ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ ಗುರುವಾರ ರಾತ್ರಿ ನಡೆದಿದೆ. ಇಮ್ಮಿಯಾಜ್ ಅವರ ಮನೆಯ ಬೆಳಗಿನ ಜಾವಾ 3.30ರ ಸಮಯದಲ್ಲಿ ಹಂಚು ತೆಗೆದು ಕೆಳಗೆ ಇಳಿದಿದ್ದಾರೆ. ಆ ಸಮಯದಲ್ಲಿ ಗಾಜು ಹೊಡೆದು ಹೋಗಿದ್ದು ಶಬ್ದ ಆದ ತಕ್ಷಣಕ್ಕೆ ಮನೆಯವರು ಎದ್ದು ನೋಡಿದಾಗ ಎಚ್ಚರಗೊಂಡಿರುವ ಮನೆಯವರನ್ನು ಕಂಡು ಹಿಂಭಾಗಲಿನಿಂದ ಕಳ್ಳರು ಓಡಿದ್ದಾರೆ. ಬಳಿಕ ಶಾಂತ ಎಂಬುವರ ಮನೆಯೊಳಗೆ ನುಗ್ಗಿದ್ದಾರೆ. ಅಪರಿಚಿತ ವ್ಯಕ್ತಿಯನ್ನು ಕಂಡು ಮನೆಯವರು ಕಿರುಚಿದ ಕೂಡಲೇ ಮೊಬೈಲನ್ನು ಕದ್ದು ಕಳ್ಳರು ಓಡಿ ಹೋಗಿದ್ದಾರೆ. ಮಾಳೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಶವ…

Read More

ಅಪೇಕ್ಷಾ ಟಿ ಎಂ ಅವರಿಗೆ ರಾಜ್ಯಮಟ್ಟದ ಪ್ರಶಸ್ತಿ – ತೀರ್ಥಹಳ್ಳಿಯ ಸಹ್ಯಾದ್ರಿ ಶಾಲೆಯ ವಿದ್ಯಾರ್ಥಿನಿ – ಎಸ್.ಎಸ್.ಎಲ್.ಸಿ ಕನ್ನಡದಲ್ಲಿ 125ಕ್ಕೆ 125 ಅಂಕ NAMMUR EXPRESS NEWS 2022-23ನೇ ಸಾಲಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪ್ರಥಮ ಭಾಷೆ ಕನ್ನಡ ಮಾಧ್ಯಮದಲ್ಲಿ 125ಕ್ಕೆ 125 ಪರಿಪೂರ್ಣ ಅಂಕ ಪಡೆದ ತೀರ್ಥಹಳ್ಳಿಯ ಸಹ್ಯಾದ್ರಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಕುಮಾರಿ ಅಪೇಕ್ಷಾ. ಟಿ.ಎಂ.ಇವರಿಗೆ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ, ದಾವಣಗೆರೆ ವತಿಯಿಂದ ಕನ್ನಡ ಕೌಸ್ತುಭ ರಾಜ್ಯ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ಇವರ ಅಧ್ಯಕ್ಷತೆಯಲ್ಲಿ ಇದೇ ಜುಲೈ,30 ಭಾನುವಾರ ದಾವಣಗೆರೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ, ಅಪೇಕ್ಷಾ ಅವರು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ. 95% ರಷ್ಟು ಅಂಕ ಪಡೆದು ತಾಲೂಕಿಗೆ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಇವರು ತೀರ್ಥಹಳ್ಳಿ ಪಟ್ಟಣದ ಶಂಕರ ಗುಡ್ಡ ನಿವಾಸಿಗಳಾದ ಶ್ರೀಮಂಜುನಾಥ್,ಟಿ.ಎಸ್. ಶ್ರೀಮತಿ ಭಾಗ್ಯಲಕ್ಷ್ಮಿ.…

Read More