Categories
ಅಂತಾರಾಷ್ಟ್ರೀಯ ಸುದ್ದಿ

ನಿತ್ಯಾನಂದ ಸ್ವಾಮಿಯ ದೇಶಕ್ಕೆ ರಂಜಿತಾ ನೂತನ ಪ್ರಧಾನ ಮಂತ್ರಿ!

ನಿತ್ಯಾನಂದ ಸ್ವಾಮಿಯ ದೇಶಕ್ಕೆ ರಂಜಿತಾ ನೂತನ ಪ್ರಧಾನ ಮಂತ್ರಿ!
– ‘ಕೈಲಾಸ ದೇಶಂ’ ದೇಶ ಸ್ಥಾಪಿಸಿದ ವಿವಾದಿತ ಸ್ವಾಮೀಜಿ
– ನಟಿ ರಂಜಿತಾ ಈಗ ಕೈಲಾಸ ದೇಶದ ಪಿಎಂ

NAMMUR EXPRESS NEWS
ಕೈಲಾಸ: ಹೊಸ ದೇಶ ಸೃಷ್ಟಿಸಿದ ವಿವಾದಿತ ಸ್ವಾಮಿ ದೊರೆಯಾಗಿರುವ ಕೈಲಾಸ ದೇಶಕ್ಕೆ ರಂಜಿತಾ ನೂತನ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ನಿತ್ಯಾನಂದ ಸ್ವಾಮಿ ಮತ್ತಷ್ಟು ಕುತೂಹಲ ಮೂಡಿಸಿದ್ದಾನೆ.
ವಿವಾದಿತ ಸ್ವಾಮಿ ನಿತ್ಯಾನಂದ ಭಾರತ ದೇಶ ಬಿಟ್ಟು ಮತ್ತೊಂದು ದೇಶವನ್ನು ಸೃಷ್ಟಿಸಿಕೊಂಡಿದ್ದಾರೆ. ನಿತ್ಯಾನಂದ ತನ್ನನ್ನು ‘ಆ ದ್ವೀಪದ ದೊರೆ’ ಎಂದು ಘೋಷಿಸಿಕೊಂಡಿದ್ದಾರೆ. ಆ ದ್ವೀಪಕ್ಕೆ ಈ ಮುಂಚೆನೇ ‘ಕೈಲಾಸ ದೇಶಂ’ ಘೋಷಿಸಿದ್ದ. ಇದೀಗ ಆ ಕೈಲಾಸಕ್ಕೆ ಪ್ರಧಾನಿಯಾಗಿ ತನ್ನ ಆಪ್ತೆಯಾಗಿರುವ ನಟಿ ರಂಜಿತಾಳನ್ನು ಪ್ರಧಾನಿಯಾಗಿ ಆಯ್ಕೆ ಮಾಡಿದ್ದಾರೆ.

ನಿತ್ಯಾನಂದ ತನ್ನ ಆತ್ಮೀಯ ಶಿಷ್ಯೆಯಾಗಿರುವ ನಟಿ ರಂಜಿತಾಳನ್ನು ಕೈಲಾಸಕ್ಕೆ ಪ್ರಧಾನಿಯನ್ನಾಗಿ ಮಾಡಿದ್ದಾರೆ. ನಿತ್ಯಾನಂದರ ವೆಬ್‌ಸೈಟ್‌ನಲ್ಲಿ ಕೈಲಾಸ ಪ್ರಧಾನಿ ಕುರಿತು ಪ್ರಕಟಗೊಂಡಿರುವುದು ಸಂಚಲನ ಮೂಡಿಸುತ್ತಿದೆ. ವೆಬ್‌ಸೈಟ್‌ನಲ್ಲಿ ಫೋಟೋ ಅಡಿಯಲ್ಲಿ ನಿತ್ಯಾನಂದ ಸ್ವಾಮಿ ಎಂಬ ಹೆಸರಿದೆ.

ಕೈಲಾಸ ದೇಶದ ಪರವಾಗಿ ಮಹಿಳಾ ರಾಯಭಾರಿಗಳೊಂದಿಗೆ ವಿಶ್ವಸಂಸ್ಥೆಯ ಸಭೆಗೂ ಹಾಜರಾಗಿದ್ದರು. ಈ ಹಿನ್ನೆಲೆಯಲ್ಲಿ ಕೈಲಾಸದ ಪ್ರಧಾನಿಯಾಗಿ ನಟಿ ರಂಜಿತಾ ಕೂಡ ಶೀಘ್ರವೇ ವಿಶ್ವಸಂಸ್ಥೆ ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಈ ನಡುವೆ ರಂಜಿತಾ ಪ್ರಧಾನಿಯಾಗುತ್ತಾರೆ ಎಂಬ ಸುದ್ದಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

ಕನ್ನಡದಲ್ಲೂ ನಟನೆ ಮಾಡಿದ್ದ ರಂಜಿತಾ!

ನಟಿಯಾಗಿ ರಂಜಿತಾ ತೆಲುಗು, ತಮಿಳು ಮತ್ತು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ವೃತ್ತಿಜೀವನ ಉತ್ತುಂಗದಲ್ಲಿರುವಾಗಲೇ ನಿತ್ಯಾನಂದನ ಆಶ್ರಮ ಸೇರಿದ್ದರು. ಅತಿ ಕಡಿಮೆ ಅವಧಿಯಲ್ಲಿ ನಿತ್ಯಾನಂದನ ನೆಚ್ಚಿನ ಶಿಷ್ಯೆಯಾದಳು. ನಿತ್ಯಾನಂದನ ಮನೆಯಲ್ಲಿ ರಂಜಿತಾ ಜೊತೆಗೆ ಆಕೆಯ ತಂಗಿಯೂ ಇದ್ದರು.

ಇದನ್ನೂ ಓದಿ : ರೈತರಿಗೆ ಶೂನ್ಯ ಬಡ್ಡಿದರದಲ್ಲಿ 5 ಲಕ್ಷವರೆಗೆ ಸಾಲ!

[embedyt] https://www.youtube.com/watch?v=-UejHxlYBXg%5B/embedyt%5D

HOW TO APPLY : NEET-UG COUNSELLING 2023

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.