ಹಾವಿನಿಂದ ಮನೆಯವರನ್ನು ರಕ್ಷಿಸಿದ ಬೆಕ್ಕು! – ಗದಗದಲ್ಲಿ ನಡೆದ ಕುತೂಹಲಕಾರಿ ಘಟನೆ – ಅಡುಗೆ ಮನೆಯಲ್ಲೇ ಕುಳಿತಿದ್ದ ನಾಗರಹಾವು NAMMUR EXPRESS NEWS ಗದಗ: ಬೆಕ್ಕುಗಳು ವಿಷಕಾರಿ ಹಾವಿನಿಂದ ಕುಟುಂಬಸ್ಥರನ್ನು ಬಚಾವ್ ಮಾಡಿದ ಘಟನೆ ಗದಗ ಜಿಲ್ಲೆ ನರಗುಂದ ಪಟ್ಟಣದ ಅಂಬೇಡ್ಕರ್ ನಗರದಲ್ಲಿ ನಡೆದಿದ್ದು ಅಚ್ಚರಿ ಮೂಡಿಸಿದೆ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ವಿಷಕಾರಿ ನಾಗರಹಾವು ಅಡುಗೆ ಮನೆಗೆ ಸೇರಿದೆ. ಹಾವು ಸೇರಿದ್ದನ್ನು ಮನೆಯಲ್ಲಿ ಇದ್ದ ಜೋಡಿ ಬೆಕ್ಕುಗಳು ನೋಡಿವೆ. ಮನೆ ಮಾಲೀಕರು ಆಗಮಿಸುತ್ತಿದ್ದಂತೆಯೇ ಅಡುಗೆ ಮನೆ ಬಳಿ ಎರಡು ಬೆಕ್ಕುಗಳು ನಿಂತು ಮೆಂವ್….ಮೆಂವ್…ಅಂತ ಅಂದಿವೆ. ಇದರಿಂದಾಗಿ ಮನೆ ಮಾಲೀಕರು ಬೆಕ್ಕುಗಳ ವರ್ತನೆಯಿಂದ ಗಾಬರಿಯಾಗಿ ಕಣ್ಣಾಡಿಸಿದಾಗ ಹಾವು ಇರುವುದು ಗೊತ್ತಾಗಿದೆ. ತಕ್ಷಣವೇ ಉರಗ ತಜ್ಞ ಸುರೇಬಾನ ಅವರನ್ನು ಕರೆಸಿ ನಾಗರಹಾವು ಹಿಡಿಸಿದ್ದಾರೆ. ಅಡುಗೆ ಮನೆಯಲ್ಲಿ ಇದ್ದ ನಾಗರಹಾವು ಖಾಲಿ ಡಬ್ಬಾ ಸೇರುತ್ತಿದ್ದಂತೆಯೇ ಕುಟುಂಬ ಸದಸ್ಯರು ನಿಟ್ಟುಸಿರು ಬಿಟ್ಟರು. ಅಷ್ಟೇ ಅಲ್ಲ ಸೆರೆ ಸಿಕ್ಕ ನಾಗರಹಾವಿಗೆ ವಿಭೂತಿ, ಕುಂಕುಮ ಹಚ್ಚಿ ಪೂಜೆ ಸಲ್ಲಿಸಿದ್ದಾರೆ.…
Author: Nammur Express Admin
2.5 ಲಕ್ಷ ರೂ.ಮೌಲ್ಯದ ಟೊಮೋಟೊ ಕದ್ದ ಕಳ್ಳರು!? – ಹಾಸನದ ಬೇಲೂರು ತಾಲೂಕಿನ ಗೋಣಿ ಸೋಮನಹಳ್ಳಿಯಲ್ಲಿ ಘಟನೆ – ಟೋಮೋಟೋ ದರ ಏರಿಕೆ ಹಿನ್ನಲೆ ಕಳ್ಳತನ – ಭಿಕ್ಷೆ ಬೇಡಲು ಮಹಿಳೆಯಾದ ಪುರುಷ! – ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದ ವೇಷಧಾರಿ! NAMMUR EXPRESS NEWS ಹಾಸನ: ರೈತ ಮಹಿಳೆಯೊಬ್ಬರು ತಮ್ಮ ಜಮೀನಿನಿಂದ 2.5 ಲಕ್ಷ ರೂಪಾಯಿ ಮೌಲ್ಯದ ಟೊಮೆಟೊಗಳನ್ನು ಕಳವು ಮಾಡಿದ್ದಾರೆ ಎಂದು ಆರೋಪಿಸಿದ್ದು ಟೋಮೋಟೋ ದರ ಹೆಚ್ಚಳ ನಡುವೆ ಈ ಘಟನೆ ಕುತೂಹಲ ಮೂಡಿಸಿದೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಗೋಣಿ ಸೋಮನಹಳ್ಳಿ ಗ್ರಾಮದ ರೈತ ಮಹಿಳೆಯ ಕೃಷಿ ಜಮೀನಿನಲ್ಲಿ ಮಂಗಳವಾರ ರಾತ್ರಿ ಕಳ್ಳರು 50-60 ಚೀಲ ಟೊಮೇಟೊಗಳೊಂದಿಗೆ ಪರಾರಿಯಾಗಿದ್ದಾರೆ. ರೈತ ಮಹಿಳೆ ಧಾರಿಣಿ ಮತ್ತು ಅವರ ಕುಟುಂಬ ಸದಸ್ಯರು ಎರಡು ಎಕರೆ ಜಮೀನಿನಲ್ಲಿ ಟೊಮೆಟೊ ಬೆಳೆದಿದ್ದು, ಮುಂದಿನ ವಾರ ಇಳುವರಿಯನ್ನು ಮಾರುಕಟ್ಟೆಗೆ ಸಾಗಿಸಲು ಯೋಜಿಸಿದ್ದರು. ಆದರೆ ಅಷ್ಟರಲ್ಲಾಗಲೇ ಕಳ್ಳರು ಟೊಮೆಟೊಗಳನ್ನು ಕಳ್ಳತನ ಮಾಡಿದ್ದಾರೆ. ಟೊಮೆಟೊ ಬೆಲೆಗಳು ಗಗನಕ್ಕೇರಿರುವುದೇ…
ಸಿಡಿಲು ಬಡಿದು ಒಂದೇ ದಿನ 26 ಮಂದಿ ಸಾವು! – ಬಿಹಾರದ ಹಲವು ಜಿಲ್ಲೆಯಲ್ಲಿ ಮಳೆ ದುರಂತ – ಚೀನಾದಲ್ಲಿ ಮಳೆ ಅಬ್ಬರಕ್ಕೆ 15 ಮಂದಿ ಬಲಿ – ಕಮಲಶಿಲೆಯಲ್ಲಿ ಅರ್ಚಕರು ನೀರುಪಾಲು! – ಅನಿಲ ಸೋರಿಕೆಯಿಂದ 16 ಮಂದಿ ದುರ್ಮರಣ NAMMUR EXPRESS NEWS ಪಾಟ್ನಾ (ಬಿಹಾರ):ಸಿಡಿಲು ಬಡಿದು ಒಂದೇ ದಿನ 26 ಮಂದಿ ಸಾವು ಕಂಡಿರುವ ಘಟನೆ ಬಿಹಾರದ ಹಲವು ಜಿಲ್ಲೆಯಲ್ಲಿ ನಡೆದಿದೆ. ಸಿಡಿಲು ಬಡಿದು ರೋಹ್ಲಾಸ್‌ನಲ್ಲಿ 6 ಮಂದಿ ಹಾಗೂ ಬಕ್ಸಾರ್‌ನಲ್ಲಿ 3 ಮಂದಿ ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ. ಹಸುಗಳನ್ನು ಮೇಯಿಸಲು ಜಮೀನಿಗೆ ತೆರಳಿದ್ದ ಮಹಿಳೆ ಕೂಡ ಸಿಡಿಲು ಬಡಿದು ಮೃತಪಟ್ಟ ಘಟನೆ ನಡೆದಿದೆ. ಬಿರುಗಾಳಿ ಸಹಿತ ಭಾರಿ ಮಳೆಯಿಂದಾಗಿ ಬಿಹಾರದ ಜನಜೀವನ ಅಸ್ತವ್ಯಸ್ತವಾಗಿದೆ. ಬಿಹಾರದ ಹಲವು ಜಿಲ್ಲೆಗಳಲ್ಲಿ ಸಿಡಿಲು ಬಡಿದು ಬರೋಬ್ಬರಿ 26 ಮಂದಿ 24 ಗಂಟೆಯೊಳಗೆ ಸಾವನ್ನಪ್ಪಿದ್ದಾರೆ.ಬಿಹಾರದ ವಿವಿಧ ಜಿಲ್ಲೆಗಳಲ್ಲಿ ಸಿಡಿಲು ಬಡಿದು 26 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಚೀನಾದಲ್ಲಿ ಮಳೆರಾಯನ…
ತೀರ್ಥಹಳ್ಳಿ ಗಾಯಕಿ ಬಾಳೆಬೈಲು ಉಷಾ ಅವರಿಗೆ ಪ್ರಶಸ್ತಿ – ಸಂಗೀತ ಕ್ಷೇತ್ರದ ಸಾಧನೆಗಾಗಿ ವಿಶ್ವ ಸಂಗೀತ ಲೋಕ ದ್ರುವ ತಾರೆ ರಾಷ್ಟ್ರೀಯ ಪ್ರಶಸ್ತಿ – ಹುಬ್ಬಳ್ಳಿಯಲ್ಲಿ ಜು.20ರಂದು ಪ್ರಶಸ್ತಿ ಪ್ರದಾನ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿಯ ಗಾಯಕಿ ಉಷಾ ಅವರಿಗೆ ಇದೀಗ ಮತ್ತೊಂದು ಪ್ರಶಸ್ತಿ ಒಲಿದು ಬಂದಿದೆ. ಉಷಾ ಅವರು ವಿಶ್ವ ಸಂಗೀತ ಲೋಕ ದ್ರುವ ತಾರೆ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹುಬ್ಬಳ್ಳಿ- ಧಾರವಾಡ ಭಾಗದಲ್ಲಿ ಅತ್ಯಂತ ಪ್ರಸಾರವುಳ್ಳ ಡಾ. ಎಸ್.ಎಸ್ ಪಾಟೀಲ್ ಅವರ ಸಾರಥ್ಯದ, ವಿಶ್ವ ದರ್ಶನ ಕನ್ನಡ ದಿನಪತ್ರಿಕೆ ಹಾಗೂ ಕನ್ನಡ ಪ್ರಜಾ ದರ್ಶನ ಪತ್ರಿಕೆ, ಮತ್ತು ಕರ್ನಾಟಕ ಪ್ರಜಾ ಜನಪರ ಟ್ರಸ್ಟ್ ವತಿಯಿಂದ ಸಂಗೀತ, ಸಾಹಿತ್ಯ, ಕಲೆ, ರಾಜಕೀಯ, ಧಾರ್ಮಿಕ, ಆಧ್ಯಾತ್ಮ,ಜಾನಪದ, ಸಾಂಸ್ಕೃತಿಕ, ಮಾಧ್ಯಮ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಗಣನೀಯವಾಗಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಜಿಲ್ಲೆಯ ಸಾಧಕರಿಗೆ ಪ್ರತಿ ವರ್ಷ ಸನ್ಮಾನ ಸಮಾರಂಭವನ್ನು ಹಮ್ಮಿಕೊಂಡಿದ್ದು ಶಿವಮೊಗ್ಗ ಜಿಲ್ಲೆಯಿಂದ ಮಲೆನಾಡ ತೀರ್ಥಹಳ್ಳಿಯ ಹೆಮ್ಮೆಯ ಗಾಯಕಿ ಬಾಳೆಬೈಲಿನ ಉಷಾ.ಹೆಚ್.…
ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜು.6ಕ್ಕೂ ರಜೆ! – ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ – ಕರಾವಳಿಯಲ್ಲಿ ಮಳೆ ಆರ್ಭಟ: ಹಾನಿ ಹೆಚ್ಚಳ – ಗುರುವಾರವೂ ಎಲ್ಲಾ ಕಡೆ ಹೈ ಅಲರ್ಟ್ – ದಿನೇ ದಿನೇ ಮಳೆಗೆ ಸಾವು ಹೆಚ್ಚಳ: ಎಚ್ಚರ! NAMMUR EXPRESS NEWS ಉಡುಪಿ / ಮಂಗಳೂರು: ಉಡುಪಿಯಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು ಜಿಲ್ಲೆಯಾದ್ಯಂತ ಗುರುವಾರವೂ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಜಿಲ್ಲೆಯ ಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ರಜೆಯನ್ನು ಘೋಷಣೆ ಮಾಡಿ ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಅವರು ಆದೇಶ ಹೊರಡಿಸಿದ್ದಾರೆ. ಅಲ್ಲದೆ ಜನ ಎಚ್ಚರ ಇರುವಂತೆ ಎಚ್ಚರಿಕೆ ನೀಡಲಾಗಿದೆ. ಉಡುಪಿ ಜಿಲ್ಲೆಯ ಬ್ರಹ್ಮಾವರ, ಉಡುಪಿ, ಕಾಪು, ಕಾರ್ಕಳ, ಕುಂದಾಪುರ, ಬೈಂದೂರು, ಹೆಬ್ರಿ ತಾಲೂಕುಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಅಲ್ಲದೇ ಗುರುವಾರವೂ ಮಳೆ ಮುಂದುವರಿಕೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ…
ಶಿವಮೊಗ್ಗ, ಕಾರ್ಕಳ ಶಿರಸಿ ಸೇರಿ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ ಎಷ್ಟಿದೆ? – ರಾಶಿ, ಸರಕು, ಗೊರಬಲು ದರ ಎಷ್ಟು? ಶಿವಮೊಗ್ಗ ಮಾರುಕಟ್ಟೆ ಗೊರಬಲು 18020 – 43599 ಬೆಟ್ಟೆ 50000 – 56699 ರಾಶಿ 43009 – 55969 ಸರಕು 57109 – 76600 ಕಾರ್ಕಳ ಮಾರುಕಟ್ಟೆ ನ್ಯೂ ವೆರೈಟಿ 30000 – 41500 ಕುಮಟ ಮಾರುಕಟ್ಟೆ ಕೋಕ 21509 – 33099 ಚಿಪ್ಪು 30899 – 33019 ಫ್ಯಾಕ್ಟರಿ 14609 – 22529 ಹಳೆ ಚಾಲಿ 37899 – 41009 ಹೊಸ ಚಾಲಿ 36899 – 38699 ಬಂಟ್ವಾಳ ಮಾರುಕಟ್ಟೆ ಕೋಕ 12500 – 25000 ನ್ಯೂ ವೆರೈಟಿ 27500 – 41500 ವೋಲ್ಡ್ ವೆರೈಟಿ 48000 – 50500 ಸಿದ್ಧಾಪುರ ಮಾರುಕಟ್ಟೆ ಕೆಂಪುಗೋಟು 33699 – 35500 ಕೋಕ 27399 – 33899 ಚಾಲಿ 36889 – 39399 ತಟ್ಟಿಬೆಟ್ಟೆ 41160 – 52009…
ಲವ್ವಿ ಡವ್ವಿ ಪ್ರಕರಣದಲ್ಲಿ ಡ್ರೈವರ್ ಅಂದರ್! – ಅಶ್ಲೀಲ ವಿಡಿಯೋ ವೈರಲ್: ಓರ್ವ ಅರೆಸ್ಟ್! – ಹರಿಹರ ಪುರ ಠಾಣಾ ವ್ಯಾಪ್ತಿಯಲ್ಲಿ ಘಟನೆ NAMMUR EXPRESS NEWS ಕೊಪ್ಪ: ಮಲೆನಾಡಲ್ಲಿ ಈಗ ಹಲವೆಡೆ ಅಶ್ಲೀಲ ವಿಡಿಯೋ ಪ್ರಕರಣ ಸದ್ದು ಮಾಡುತ್ತಿರುವ ನಡುವೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಹರಿಹರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂತಹದ್ದೇ ಪ್ರಕರಣ ವರದಿಯಾಗಿದೆ. ವಾಟ್ಸಪ್ ವಿಡಿಯೋ ಕಾಲ್ ನಲ್ಲಿ ಅಶ್ಲೀಲ ಚಿತ್ರ ಸೆರೆಹಿಡಿದು ಶೇರ್ ಮಾಡಿದ ಆರೋಪದ ಮೇಲೆ ವಿನಯ್ ಹೆಚ್.ಬಿ ಅಲಿಯಾಸ್ ಪವನ್( 25 ವರ್ಷ) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈತನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳವಡಿಸಿದ್ದಾರೆ. ಈತ ಚಾಲಕ ವೃತ್ತಿ ಮಾಡಿಕೊಂಡಿದ್ದು ಸಕಲೇಶಪುರದ ಬೆಳಗೋಡು ಹೋಬಳಿಯ ಬನವಾಸೆ ಬಾಳ್ಳುಪೇಟೆ ಗ್ರಾಮದ ವಾಸಿಯಾಗಿದ್ದಾನೆ. ಇದೀಗ ಪೊಲೀಸ್ ಇಲಾಖೆ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದೆ. ಇದನ್ನೂ ಓದಿ : ಲಕ್ಷಕ್ಕೆ ಬರುತ್ತಾ ಅಡಿಕೆ ದರ? HOW TO…
ಟಾಪ್ ನ್ಯೂಸ್… ನಮ್ಮೂರ್ ಎಕ್ಸ್ ಪ್ರೆಸ್ – ವಂದೇ ಭಾರತ್ ರೈಲಿಗೆ ಕಲ್ಲು ತೂರಾಟ – ಶಿವಮೊಗ್ಗದಲ್ಲಿ ಬಾಲಕಿ ಮದುವೆ ತಡೆದ ಅಧಿಕಾರಿಗಳು – ಯುವತಿ ನಗ್ನ ವಿಡಿಯೋ: ದೂರು ದಾಖಲು – ಕಳಸದಲ್ಲಿ ಮಳೆಗೆ 2 ಗಂಟೆ ಟ್ರಾಫಿಕ್ ಜಾಮ್ – ಹಂಪಿಯಲ್ಲಿ ರಸ್ತೆಯಲ್ಲೇ ಸಿಲಿಂಡರ್ ಸ್ಫೋಟ! NAMMUR EXPRESS NEWS ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಕಿಡಿಗೇಡಿಗಳು ಕಲ್ಲು ತೂರಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ ಎನ್ನಲಾಗಿದೆ. ಆದ್ರೆ ಈ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ. ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ ಬೆಂಗಳೂರು-ಧಾರವಾಡ ನಡುವಿನ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಲ್ಲು ತೂರಲಾಗಿದೆ. ಬಾಲಕಿಗೆ ಮದುವೆ ವೇಳೆ ಅಧಿಕಾರಿಗಳ ದಾಳಿ! ಶಿವಮೊಗ್ಗ ಜಿಲ್ಲೆ ಭದ್ರಾವತಿ ಪೊಲೀಸರು ಹಾಗೂ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು ದೇವಸ್ಥಾನವೊಂದರಲ್ಲಿ ನಡೆದ ಬಾಲ್ಯ ವಿವಾಹವನ್ನು ತಡೆದಿದ್ದಾರೆ. ತಮಿಳುನಾಡು ಮೂಲದವರು ಅಪ್ರಾಪ್ತ ವಯಸ್ಸಿನ ಬಾಲಕಿಗೆ ಮದುವೆ ಮಾಡಲು…
ಸಿಂದಗಿ ತಾಲೂಕಲ್ಲಿ ಶಾಲೆಗಳ ಅವ್ಯವಸ್ಥೆ! – ಶಿಥಿಲಾವಸ್ಥೆ ತಲುಪಿದ ಶಾಲೆಯ ನೀರಿನ ಟ್ಯಾಂಕ್ – ಅನಾಹುತಕ್ಕೆ ಕಾದು ಕುಳಿತ ಓವರ್ ಹೆಡ್ ಟ್ಯಾಂಕ್ – 415 ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಭಯ ಭಯ! NAMMUR EXPRESS NEWS ಸಿಂದಗಿ: ಸಿಂದಗಿ ತಾಲೂಕಿನ ಬ್ಯಾಕೋಡ ಗ್ರಾಮದಲ್ಲಿರುವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಓವರ್ ಹೆಡ್ ಟ್ಯಾಂಕ್ ಶಿಥಿಲಾವಸ್ಥೆ ತಲುಪಿದ್ದು ಅನಾಹುತಕ್ಕೆ ಕಾದು ಕುಳಿತಿದೆ. ಸುಮಾರು ವರ್ಷಗಳಿಂದ ಶಿಥಿಲಾವಸ್ಥೆ ಈ ಟ್ಯಾಂಕ್ ನ್ನು ತೆರವುಗೊಳಿಸಿದ ಹಿನ್ನಲೆ ನೂರಾರು ಮಕ್ಕಳು ಕಲಿಯುವ ಶಾಲೆಯಲ್ಲಿ ಆತಂಕದ ವಾತಾವರಣವನ್ನು ಸೃಷ್ಟಿಸಿದೆ. ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸದ ಶಿಕ್ಷಕರು ಬ್ಯಾಕೋಡ ಗ್ರಾ. ಪಂ ವತಿಯಿಂದ ಹಲವು ವರ್ಷಗಳ ಹಿಂದೆಯೇ ಈ ಟ್ಯಾಂಕನ ತೆರವಿಗೆ ಆದೇಶವಾದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು. ಈ ಬಗ್ಗೆ ಮಾತನಾಡಿದ ಶಾಲಾ ಮಕ್ಕಳು ಈ ಟ್ಯಾಂಕನ್ನು ನೋಡಿದರೆ ಭಯ ಆಗುತ್ತದೆ ಆದಷ್ಟು ಬೇಗ ಅದನ್ನು ತೆರವುಗೊಳಿಸಬೇಕು ಎಂದು ಹೇಳಿದರು. ಮಕ್ಕಳ ಪೋಷಕರು ಮಾತನಾಡಿ, ನಾವು ಕೂಡ…
ಅಶ್ಲೀಲ ವಿಡಿಯೋ: ತೀರ್ಥಹಳ್ಳಿ ಬಿಜೆಪಿಯಿಂದ ದೂರು! – ಎನ್ಎಸ್.ಯು.ಐ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ವ್ಯಕ್ತಿ? – ರಾಜಕೀಯ ದಾಳ ಆಯ್ತಾ ವೈರಲ್ ವಿಡಿಯೋ? – ಬಿಜೆಪಿ ಯುವ ಮೋರ್ಚಾದಿಂದ ದೂರು ದಾಖಲು NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಕಳೆದ ಕೆಲವು ದಿನಗಳಿಂದ ಅಶ್ಲೀಲ ವಿಡಿಯೋ ಸದ್ದು ಮಾಡುತ್ತಿದೆ. ಈ ನಡುವೆ ಯುವ ಕಾಂಗ್ರೆಸ್ ಹಾಗೂ ಎನ್.ಎಸ್.ಯು.ಐ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಎಂದು ಆರೋಪಿಸಲಾದ ತೀರ್ಥಹಳ್ಳಿಯ ನಿವಾಸಿಯೊಬ್ಬ ತಾನು ಯುವತಿಯರ ಜೊತೆಯಲ್ಲಿ ಇರುವ ಖಾಸಗಿ ಕ್ಷಣಗಳನ್ನು ಚಿತ್ರಿಕರಿಸಿ ವಾಟ್ಸಾಪ್ ಮತ್ತು ಇತರ ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟ ಬಗ್ಗೆ ಇದೀಗ ದೂರು ದಾಖಲಾಗಿದೆ. ಯುವಕನೊಬ್ಬ ಹುಡುಗಿಯೊಂದಿಗೆ ಇರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮಹಿಳೆಯರಿಗೆ ಬೆದರಿಕೆ ಒಡ್ಡಿ ಮಾನಹಾನಿ ಮಾಡುತ್ತಿರುವುದಲ್ಲದೆ, ಕೋಮು ಸಾಮರಸ್ಯಕ್ಕೆ ಧಕ್ಕೆ ತರುತ್ತಿರುವ ಈತನನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ತೀರ್ಥಹಳ್ಳಿ ತಾಲೂಕು ಬಿಜೆಪಿ ಯುವ ಮೋರ್ಚಾದ ಪದಾಧಿಕಾರಿಗಳು ಬುಧವಾರ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಮಾಜಿ ತಾಲೂಕು…