Categories
ಕೊಪ್ಪ

ಲವ್ವಿ ಡವ್ವಿ ಪ್ರಕರಣದಲ್ಲಿ ಡ್ರೈವರ್ ಅಂದರ್!

ಲವ್ವಿ ಡವ್ವಿ ಪ್ರಕರಣದಲ್ಲಿ ಡ್ರೈವರ್ ಅಂದರ್!
– ಅಶ್ಲೀಲ ವಿಡಿಯೋ ವೈರಲ್: ಓರ್ವ ಅರೆಸ್ಟ್!
– ಹರಿಹರ ಪುರ ಠಾಣಾ ವ್ಯಾಪ್ತಿಯಲ್ಲಿ ಘಟನೆ

NAMMUR EXPRESS NEWS
ಕೊಪ್ಪ: ಮಲೆನಾಡಲ್ಲಿ ಈಗ ಹಲವೆಡೆ ಅಶ್ಲೀಲ ವಿಡಿಯೋ ಪ್ರಕರಣ ಸದ್ದು ಮಾಡುತ್ತಿರುವ ನಡುವೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಹರಿಹರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂತಹದ್ದೇ ಪ್ರಕರಣ ವರದಿಯಾಗಿದೆ.

ವಾಟ್ಸಪ್ ವಿಡಿಯೋ ಕಾಲ್ ನಲ್ಲಿ ಅಶ್ಲೀಲ ಚಿತ್ರ ಸೆರೆಹಿಡಿದು ಶೇರ್ ಮಾಡಿದ ಆರೋಪದ ಮೇಲೆ ವಿನಯ್ ಹೆಚ್‌.ಬಿ ಅಲಿಯಾಸ್ ಪವನ್( 25 ವರ್ಷ) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈತನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳವಡಿಸಿದ್ದಾರೆ.

ಈತ ಚಾಲಕ ವೃತ್ತಿ ಮಾಡಿಕೊಂಡಿದ್ದು ಸಕಲೇಶಪುರದ ಬೆಳಗೋಡು ಹೋಬಳಿಯ ಬನವಾಸೆ ಬಾಳ್ಳುಪೇಟೆ ಗ್ರಾಮದ ವಾಸಿಯಾಗಿದ್ದಾನೆ. ಇದೀಗ ಪೊಲೀಸ್ ಇಲಾಖೆ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದೆ.

ಇದನ್ನೂ ಓದಿ : ಲಕ್ಷಕ್ಕೆ ಬರುತ್ತಾ ಅಡಿಕೆ ದರ?

HOW TO APPLY : NEET-UG COUNSELLING 2023

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.