ಕರಾವಳಿಯಲ್ಲಿ ಮಹಾ ಮಳೆಗೆ ಮೂವರು ಬಲಿ! – ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ವರುಣನ ಆರ್ಭಟ – ಭಾರೀ ಹಾನಿ: ಶಾಲೆ, ಕಾಲೇಜುಗಳಿಗೆ ರಜೆ – ಎರಡು ದಿನದಲ್ಲಿ ನಾಲ್ಕು ಮಂದಿ ದುರ್ಮರಣ NAMMUR EXPRESS NEWS ದಕ್ಷಿಣ ಕನ್ನಡ/ ಉಡುಪಿ: ಕರಾವಳಿಯಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆ ಇದೀಗ ಉಗ್ರ ರೂಪ ತಾಳಿದೆ. ಎರಡು ಜಿಲ್ಲೆಯಲ್ಲಿ ಮಳೆ ತೀವ್ರತೆ ಹೆಚ್ಚಾಗಿದ್ದು ಮಂಗಳೂರು ನಗರ ಸೇರಿದಂತೆ ಎಲ್ಲಾ ಕಡೆ ಅಪಾಯ ಸೃಷ್ಟಿ ಮಾಡಿದೆ. ಭಾರೀ ಮಳೆಯಿಂದಾಗಿ ಸ್ಕೂಟರ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕೆರೆಗೆ ಬಿದ್ದ ಪರಿಣಾಮ ಸವಾರ ನೀರಿನಲ್ಲಿ ಮುಳುಗಿ ಸಾವನಪ್ಪಿದ ಘಟನೆ ತೆಕ್ಕಟ್ಟೆ ಸಮೀಪದ ಮಲ್ಯಾಡಿ ಎಂಬಲ್ಲಿ ಮಂಗಳವಾರ ಮಧ್ಯರಾತ್ರಿ ವೇಳೆ ನಡೆದಿದೆ. ಮೃತರನ್ನು ಸ್ಥಳಿಯ ನಿವಾಸಿ ದಿವಾಕರ್ ಶೆಟ್ಟಿ( 65) ಎಂದು ಗುರುತಿಸಲಾಗಿದೆ. ಸ್ಕೂಟರಿನಲ್ಲಿ ರಾತ್ರಿ ಮನೆಗೆ ಬರುತ್ತಿದ್ದಾಗ ಮನೆ ಸಮೀಪದ ರಸ್ತೆಯ ತಿರುವಿನಲ್ಲಿ ಭಾರಿ ಮಳೆಯಿಂದಾಗಿ ನಿಯಂತ್ರಣ ತಪ್ಪಿ, ರಸ್ತೆ ಬದಿ ಯಾವುದೇ ತಡೆಗೋಡೆ ಇಲ್ಲದ…
Author: Nammur Express Admin
ಉದ್ಯೋಗವಿಲ್ಲದೆ ಸುಮ್ಮನೆ ಕೂರುವ ಪತ್ನಿಗೆ ವಿಚ್ಛೇದಿತ ಗಂಡ ಸಂಪೂರ್ಣ ಜೀವನಾಂಶ ಕೊಡುವಂತಿಲ್ಲ! – ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು – ಏನಿದು ತೀರ್ಪು… ಇಲ್ಲಿದೆ ಕೇಸ್ ಡೀಟೇಲ್ಸ್ NAMMUR EXPRESS NEWS ಬೆಂಗಳೂರು:ವಿಚ್ಛೇದಿತ ಗಂಡನಿಂದ ಸಂಪೂರ್ಣ ಜೀವನಾಂಶವನ್ನು ಬಯಸುತ್ತಾ ಹೆಂಡತಿಯು ಉದ್ಯೋಗವಿಲ್ಲದೆ ಸುಮ್ಮನೆ ಕೂರುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ಈ ಹಿಂದೆ ಉದ್ಯೋಗದಲ್ಲಿದ್ದ ಪತ್ನಿಯು ತನ್ನ ಪತಿಯಿಂದ ಸಂಪೂರ್ಣ ಜೀವನಾಂಶವನ್ನು ಪಡೆಯಲು ಸುಮ್ಮನೆ ಕೂರುವಂತಿಲ್ಲ ಆದರೆ ಆಕೆಯ ಜೀವನೋಪಾಯವನ್ನು ಪೂರೈಸಲು ಕೆಲವು ಪ್ರಯತ್ನಗಳನ್ನು ಮಾಡಬೇಕು ಎಂದು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ಹೇಳಿದೆ. ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಆಕೆಗೆ ಮಂಜೂರು ಮಾಡಿರುವ ಜೀವನಾಂಶ ಮತ್ತು ಪರಿಹಾರ ಮೊತ್ತದಲ್ಲಿನ ಕಡಿತವನ್ನು ಪ್ರಶ್ನಿಸಿ ಮಹಿಳೆಯೊಬ್ಬರು ಸಲ್ಲಿಸಿದ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಮಹಿಳೆಗೆ ನೀಡಲಾಗಿದ್ದ ಜೀವನಾಂಶವನ್ನು10,000 ರೂಗಳಿಂದ 5,000 ಕ್ಕೆ ಮತ್ತು ಪರಿಹಾರವನ್ನು 3,00,000 ರೂ ಗಳಿಂದ 2,00,000 ಕ್ಕೆ ಇಳಿಸಿದ ಸೆಷನ್ಸ್ ನ್ಯಾಯಾಲಯದ (ಅಪೀಲು ನ್ಯಾಯಾಲಯ ಆದೇಶವನ್ನು ಪ್ರಶ್ನಿಸಿ ಮಹಿಳೆ ಮತ್ತು ಆಕೆಯ ಮಗುವಿನ ಮೇಲ್ಮನವಿಯನ್ನು…
ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್! – ವಿವಿ, ಶಿಕ್ಷಣ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಂದ ಶುಲ್ಕ ಪಡೆಯುವಂತಿಲ್ಲ – ರಾಜ್ಯ ಸರ್ಕಾರ ಸುತ್ತೋಲೆ NAMMUR EXPRESS NEWS ಬೆಂಗಳೂರು: ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿ ಸಮುದಾಯ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ನೀಡಿದ್ದು, ಮೆಟ್ರಿಕ್ ನಂತರದ ವಿವಿಧ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಶುಲ್ಕ ಪಡೆಯದಂತೆ ವಿಶ್ವವಿದ್ಯಾಲಯಗಳು ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಸುತ್ತೋಲೆ ಹೊರಡಿಸಿದೆ. ಮೆಟ್ರಿಕ್ ನಂತರದ ವಿವಿಧ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಾಗೂ ಕುಟುಂಬದ ವಾರ್ಷಿಕ ಆದಾಯ ರೂ.2.50 ಲಕ್ಷ ಒಳಗಿರುವ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಕಾರ್ಯಕ್ರಮದಡಿ ವಿದ್ಯಾರ್ಥಿವೇತನ ಮಂಜೂರು ಮಾಡಲಾಗುತ್ತಿದೆ. ಸರ್ಕಾರ ಆಯಾ ಕೋರ್ಸಿಗೆ ನಿಗದಿ ಮಾಡಿರುವ ಕಾಲೇಜು ಶುಲ್ಕವನ್ನು ಮಾರುಪಾವತಿ ಮಾಡಲಾಗುತ್ತಿದೆ ಹಾಗೂ ಸದರಿ ಮೊತ್ತವನ್ನು ವಿದ್ಯಾರ್ಥಿಯು ತನ್ನ ಖಾತೆಗೆ ಜಮೆಯಾದ ನಂತರದಲ್ಲಿ ಸಂಬಂಧಪಟ್ಟ ಕಾಲೇಜಿಗೆ ಪಾವತಿಸಲು ಸೂಚಿಸಲಾಗಿರುತ್ತದೆ. ಈ ಹಿನ್ನೆಲೆಯಲ್ಲಿ, ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು ಸ್ನಾತಕ/ಸ್ನಾತಕೋತ್ತರ/ಡಿಪ್ಲಮೋ/ಪಾಲಿಟೆಕ್ನಿಕ್/ ವೃತ್ತಿಪರ…
ಮಳೆ ಮಳೆ: ವಿದ್ಯುತ್, ಮೊಬೈಲ್ ಸಂಪರ್ಕ ಕಟ್! – ಮಲೆನಾಡ ಹಲವೆಡೆ ಭಾರೀ ಮಳೆ: ತುಂಬಿದ ನದಿ, ಹಳ್ಳ, ಕೆರೆಗಳು – ಎರಡೇ ದಿನಕ್ಕೆ ಮಲೆನಾಡಲ್ಲಿ ಭಾರೀ ಮಳೆ NAMMUR EXPRESS NEWS ತೀರ್ಥಹಳ್ಳಿ: ಮಲೆನಾಡಿನಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಗೆ ವಿದ್ಯುತ್ ಸಂಪರ್ಕ ಮತ್ತು ಮೊಬೈಲ್ ನೆಟ್ವರ್ಕ್ ಸಂಪರ್ಕ ಹಲವು ತಾಲೂಕಿನಲ್ಲಿ ಕಡಿತಗೊಂಡಿದೆ. ಹಲವು ಕಡೆ ವಿದ್ಯುತ್ ಕಂಬ ಮತ್ತು ಮರಗಳು ಧರೆಗೆ ಉರುಳಿವೆ. ತುಂಗಾ, ಭದ್ರ, ಮಾಲತಿ, ಶರಾವತಿ ನದಿ ಸೇರಿದಂತೆ ಅನೇಕ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ. ಎಲ್ಲಾ ಕಡೆ ಮಳೆಯ ವಾತಾವರಣ ಕಂಡು ಬಂದಿದೆ. ಮಲೆನಾಡಿನಲ್ಲಿ ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಈಗಾಗಲೇ ಅನೇಕ ನದಿಗಳು ಎರಡೇ ದಿನಕ್ಕೆ ತುಂಬಿ ಹರಿಯುತ್ತಾ ಇದೆ. ನೀರಿನ ಮಟ್ಟ ಹೆಚ್ಚಳವಾಗಿದ್ದು ಗಾಜನೂರು ಡ್ಯಾಂ ಭರ್ತಿಯಾಗಿದೆ. ಮಲೆನಾಡಿನ ಹಲವು ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕ ಹಾಗೂ ಮೊಬೈಲ್ ನೆಟ್ವರ್ಕ್ ಸಮಸ್ಯೆ ಇರುವುದರಿಂದ ಜನರು ಪರದಾಡುವಂತಹ ಪರಿಸ್ಥಿತಿಗಳು ಬಂದಿದೆ. ತೀರ್ಥಹಳ್ಳಿ,…
ಕುಮಾರ್ ಮಾಸ್ಟರ್ ವಾಪಾಸ್ ಬಂದಿದ್ದು ಹೇಗೆ ಗೊತ್ತಾ? – ಮಕ್ಕಳು, ಪೋಷಕರ ಪ್ರತಿಭಟನೆಗೆ ಮಣಿದ ಶಿಕ್ಷಣ ಇಲಾಖೆ – ಆರಗ, ಕಿಮ್ಮನೆ, ಆರ್ ಎಂ ಕೂಡ ದನಿಗೂಡಿಸಿದ್ರು – ಮಳೆಯಲ್ಲಿಯೇ ಅಂಗವಿಕಲ ಮಕ್ಕಳ ಪ್ರತಿಭಟನೆ ನಡೆಸಿದ್ರು NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದ ಸೊಪ್ಪು ಗುಡ್ಡೆಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ (ವಿಕಲಚೇತನ ) ಶಾಲೆಯ ಮುಖ್ಯೋಪಾಧ್ಯಾಯರಾದ ಕುಮಾರ್ ಅವರನ್ನು ಇತ್ತೀಚಿಗೆ ಶಿಕ್ಷಣ ಇಲಾಖೆ ವರ್ಗಾಯಿಸಿದ್ದು ತೀರ್ಥಹಳ್ಳಿಯಲ್ಲಿ ಭಾರೀ ಹೋರಾಟಕ್ಕೆ ಕಾರಣವಾಗಿದ್ದು ಸರ್ಕಾರ ಇದೀಗ ಅವರನ್ನು ಉಳಿಸಿಕೊಂಡಿದೆ. ಮಕ್ಕಳಿಗೆ ಉತ್ತಮ ಆರೈಕೆ ಮಾಡುತ್ತಿದ್ದ ಶಿಕ್ಷಕರ ವರ್ಗಾವಣೆಯನ್ನು ಖಂಡಿಸಿ ಯುವ ನಾಯಕ, ಪಟ್ಟಣ ಪಂಚಾಯಿತಿ ಸದಸ್ಯರಾದ ಸೊಪ್ಪುಗುಡ್ಡೆ ರಾಘವೇಂದ್ರ ಅವರ ನೇತೃತ್ವದಲ್ಲಿ ಪೋಷಕ ವರ್ಗ ಮಂಗಳವಾರ ತಾಲೂಕು ಕಚೇರಿ ಮುಂಭಾಗದಲ್ಲಿ ಮಕ್ಕಳ ಜೊತೆ ಪ್ರತಿಭಟನೆ ನಡೆಸಿದ್ದರು. ಶಾಸಕರಾದ ಆರಗ ಜ್ಞಾನೇಂದ್ರ, ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್, ಕಾಂಗ್ರೆಸ್ ಮುಖಂಡರಾದ ಮಂಜುನಾಥ್ ಗೌಡ ಸಂಬಂಧಪಟ್ಟ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಕುಮಾರ್ ಅವರನ್ನು ಇದೇ…
ಬೆಂಗಳೂರು, ಹುಬ್ಬಳ್ಳಿ, ಮೈಸೂರು 904 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ – ರೋಬೋಸಾಫ್ಟ್ ಟೆಕ್ನಾಲಜಿಯಲ್ಲಿ ಉದ್ಯೋಗ NAMMUR EXPRESS NEWS ಉಡುಪಿಯ ಪ್ರಖ್ಯಾತ ತಂತ್ರಜ್ಞಾನ ಸಂಸ್ಥೆಯಾದ ರೋಬೋಸಾಫ್ಟ್ ಟೆಕ್ನಾಲಜಿಯಲ್ಲಿ ಟ್ರಾವೆಲ್ ಅಸೋಸೊಯೇಟ್ ಹುದ್ದೆ ಖಾಲಿ ಇದ್ದು, ಯಾವುದೇ ಪದವಿ ಪೂರೈಸಿದ ಟ್ರಾವೆಲ್ ಮತ್ತು ಟೂರಿಸಂ ನಲ್ಲಿ 2 ರಿಂದ 5 ವರ್ಷ ಅನುಭವ ಇರುವ ಅಭ್ಯರ್ಥಿಗಳು ಬೇಕಾಗಿದ್ದಾರೆ. ಟ್ರಾವೆಲ್ ಮತ್ತು ಟೂರಿಸಂ ಕ್ಷೇತ್ರದ ಒಳಹೊರಗನ್ನು ಬಲ್ಲ, ನಿರರ್ಗಳವಾಗಿ ಮಾತನಾಡಬಲ್ಲ, ಸಂವಹನ ಕಲೆ ಇರುವ, ಇಂಗ್ಲೀಷ್ ಭಾಷಾ ಹಿಡಿತವಿರುವ ಅಭ್ಯರ್ಥಿಗಳು ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಆಸಕ್ತರು ರೆಸೂಮ್ ಕಳುಹಿಸಬೇಕಾದ ವಿಳಾಸ: [email protected] ಬೆಂಗಳೂರು, ಹುಬ್ಬಳ್ಳಿ, ಮೈಸೂರು 904 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ 904 ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ನೈರುತ್ಯ ರೈಲ್ವೆಯಲ್ಲಿ ಬೆಂಗಳೂರು, ಹುಬ್ಬಳ್ಳಿ ಮತ್ತು ಮೈಸೂರು ವಿಭಾಗದಲ್ಲಿ ಖಾಲಿ ಇರುವ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ರೈಲ್ವೆ ನೇಮಕಾತಿ ಘಟಕ ಅರ್ಜಿ ಆಹ್ವಾನಿಸಿದೆ. ಒಂದು ವರ್ಷದ ಗುತ್ತಿಗೆ…
ಅಡಿಕೆ ದರ ಎಷ್ಟಿದೆ..ಕಾಳು ಮೆಣಸು ದರ ಎಷ್ಟು? – ಮಲ್ನಾಡ್ ಮಾರ್ಕೆಟ್ ಎಷ್ಟಿದೆ..ಇಲ್ಲಿದೆ ಡೀಟೇಲ್ಸ್ ಬೆಟ್ಟೆ- 50099-53609 ಗೊರಬಲು- 20209-43399 ರಾಶಿ – 38191-56006 ಸರಕು- 56100-77700 ಸಿಪ್ಪೆಗೋಟು – 11012-21899 ಚಾಲಿ- 37099-38449 ಕಾಳು ಮೆಣಸು: 480 ರೂ. ಇದನ್ನೂ ಓದಿ : ಲಕ್ಷಕ್ಕೆ ಬರುತ್ತಾ ಅಡಿಕೆ ದರ? HOW TO APPLY : NEET-UG COUNSELLING 2023
4 ಕರುಗಳಿಗೆ ಜನ್ಮ ನೀಡಿದ ಹಸು! – ತುಮಕೂರಿನ ಚೇಳೂರಿನಲ್ಲಿ ಕೌತುಕ – ಹಸು, ಕರು ನೋಡಲು ಜನವೋ ಜನ! NAMMUR EXPRESS NEWS ತುಮಕೂರು: ಇದೊಂದು ವಿಚಿತ್ರ ಘಟನೆ ತುಮಕೂರಲ್ಲಿ ನಡೆದಿದೆ. ಹಸುವೊಂದು ನಾಲ್ಕು ಕರುಗಳಿಗೆ ಜನ್ಮ ನೀಡಿರುವಂತಹ ಅಚ್ಚರಿಯ ಘಟನೆಯೊಂದು ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಚೇಳೂರು ಗ್ರಾಮದಲ್ಲಿ ನಡೆದಿದೆ. ಚೇಳೂರು ಗ್ರಾಮದ ಮುನಿಯಪ್ಪ ಎಂಬುವವರಿಗೆ ಸೇರಿದ ಆಕಳು ಏಕಕಾಲದಲ್ಲಿ ನಾಲ್ಕು ಕರುಗಳಿಗೆ ಜನ್ಮ ನೀಡಿದ ವಿಶೇಷ ಹಸು. ನಾಲ್ಕರ ಪೈಕಿ ಮೂರು ಗಂಡು ಹಾಗೂ ಒಂದು ಹೆಣ್ಣು ಕರುವಿಗೆ ಹಸು ಜನ್ಮ ನೀಡಿದೆ. ತಾಯಿ ಹಾಗೂ ನಾಲ್ಕು ಕರುಗಳ ಆರೋಗ್ಯದಿಂದಿವೆ. ಏಕಕಾಲದಲ್ಲಿ ನಾಲ್ಕು ಕರುಗಳಿಗೆ ಜನ್ಮ ನೀಡಿದ ಹಸುವನ್ನು ನೋಡಲು ಸುತ್ತಮುತ್ತಲಿನ ಗ್ರಾಮಗಳಿಂದ ಜನರು ಆಗಮಿಸುತ್ತಿರುವುದು ವಿಶೇಷವಾಗಿದೆ. ಇದನ್ನೂ ಓದಿ : ಲಕ್ಷಕ್ಕೆ ಬರುತ್ತಾ ಅಡಿಕೆ ದರ? HOW TO APPLY : NEET-UG COUNSELLING 2023
ಕುಂದಾದ್ರಿಯಲ್ಲಿ ವನ ಮಹೋತ್ಸವ! – ಶ್ರೀ ಕ್ಷೇತ್ರ ಹುಂಬುಜ ಮಠದ ಜಾಗದಲ್ಲಿ ಗಿಡ ನೆಡುವ ಕಾರ್ಯಕ್ರಮ – ಅರಣ್ಯ ಇಲಾಖೆ, ಗ್ರಾಮ ಪಂಚಾಯತ್ ಸಹಯೋಗ NAMMUR EXPRESS NEWS ತೀರ್ಥಹಳ್ಳಿ: ಸಸಿ ನೆಡುವ ಸಪ್ತಾಹ ಅಂಗವಾಗಿ ಕುಂದಾದ್ರಿಯಲ್ಲಿ ಗಿಡ ನೆಡಲಾಯಿತು. ಮೇಗರವಳ್ಳಿ ಅರಣ್ಯ ಇಲಾಖೆಯ ಸಹಯೋಗದಲ್ಲಿ ಹೊನ್ನೇತಾಳು ಗ್ರಾ.ಪಂ.ವ್ಯಾಪ್ತಿಯ ನಂಟೂರು ಗ್ರಾಮದ ಶ್ರೀ ಕ್ಷೇತ್ರ ಹುಂಬುಜ ಮಠದ ಜಾಗದಲ್ಲಿ ಮಠದ ಮುಖ್ಯ ಆಡಳಿತಾಧಿಕಾರಿ ಪ್ರಕಾಶ್ ಎನ್. ಮಗಧಮ್ ಅವರು ಗಿಡ ನೆಡುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿಗಳಾದ ಮಧುಕರ್ ,ಮಠದ ಅಡ್ಮಿನಿಸ್ಟ್ರೇಶನ್ ಅಧಿಕಾರಿ ಸಿ.ಡಿ.ಅಶೋಕ ಕುಮಾರ್, ಕುಂದಾದ್ರಿ ಜೈನ ಬಸದಿ ಮೇಲ್ವಿಚಾರಕರಾದ ಡಾ. ಜೀವಂಧರ್ ಜೈನ್ , ಗ್ರಾಮಪಂಚಾಯ್ತಿ ಸದಸ್ಯ ರಾಘವೇಂದ್ರ ಕುಂದಾದ್ರಿ, ನಂಟೂರು ವಿಎಫ್ ಸಿ ಅಧ್ಯಕ್ಷ ಕಿರಣ್, ಫಾರೆಸ್ಟ್ ಆಫೀಸರ್ ರಾಜೇಂದ್ರ, ವನಪಾಲಕರಾದ ಪಾಂಡು, ಗ್ರಾಮಸ್ಥರಾದ ಶಾಂತಿನಾಥ ಜೈನ್, ಶಿವಪ್ಪಹೆಗ್ಡೆ ಪಾಲ್ಗೊಂಡಿದ್ದರು. ಇದನ್ನೂ ಓದಿ : ತೀರ್ಥಹಳ್ಳಿ ಟಾಪ್ ಸುದ್ದಿಗಳು 04-07-2023 ಇದನ್ನೂ ಓದಿ…
ತೀರ್ಥಹಳ್ಳಿ ಟಾಪ್ ಸುದ್ದಿಗಳು ತೀರ್ಥಹಳ್ಳಿ – ಶಿವಮೊಗ್ಗ ರಸ್ತೆಯಲ್ಲಿ ಭೀಕರ ಅಪಘಾತಕ್ಕೆ ಓರ್ವ ಬಲಿ! – ಬಸ್ ಮತ್ತು ಕಾರು ನಡುವೆ ಅಪಘಾತ – ವಿಡಿಯೋ ವೈರಲ್: ಕುಡುಮಲ್ಲಿಗೆಯದಲ್ಲ! – ಕೈಮರ ಬಳಿ ಕಾರು ನುಜ್ಜು ಗುಜ್ಜು! – ಕುರುವಳ್ಳಿಯಲ್ಲಿ ಆಟೋ ಪಲ್ಟಿ: ಇಬ್ಬರಿಗೆ ಗಾಯ! NAMMUR EXPRESS NEWS ತೀರ್ಥಹಳ್ಳಿ: ರಾಷ್ಟ್ರೀಯ ಹೆದ್ದಾರಿ 169A ತೀರ್ಥಹಳ್ಳಿ ಶಿವಮೊಗ್ಗ ಮಾರ್ಗ ಮಧ್ಯ ಗಾಜನೂರಿನ ಬಳಿ ಕಾರು ಮತ್ತು ಬಸ್ ನಡುವೆ ರಸ್ತೆ ಅಪಘಾತ ಸಂಭವಿಸಿದ್ದು ಕಾರಿನಲ್ಲಿದ್ದ ಮೂರು ಜನ ಪೈಕಿ ಓರ್ವ ವ್ಯಕ್ತಿ ಸ್ಥಳದಲ್ಲಿ ಸಾವನ್ನಪ್ಪಿದ್ದದ್ದಾರೆ. ಒಬ್ಬನಿಗೆ ಗಂಭೀರ ಗಾಯ ಆಗಿದೆ. ಕಾರು ತೀರ್ಥಹಳ್ಳಿ ಕಡೆಗೆ ಬರುತ್ತಿತ್ತು ಎನ್ನಲಾಗಿದೆ. ಇತ್ತೀಚಿಗೆ ಕಾರೊಂದು ಅತೀ ವೇಗವಾಗಿ ಮೂರು ಪಲ್ಟಿಯಾಗಿ ಸಹ್ಯಾದ್ರಿ ಬಸ್ಸಿಗೆ ಪಲ್ಟಿ ಹೊಡೆದು ಕೂದಲೆಳೆ ಅಂತರದಲ್ಲಿ ಪ್ರಾಣ ಅಪಾಯದಿಂದ ಪಾರಾಗಿದ್ದರು. ಕೈಮರ ಬಳಿ ಕಾರು ಜಖಂ ತೀರ್ಥಹಳ್ಳಿ ತಾಲೂಕು ಕೈಮರ ಬಳಿ ಕ್ರೇಟಾ ಕಾರೊಂದು ಅಪಘಾತಕ್ಕೆ ಒಳಗಾಗಿ ಸಂಪೂರ್ಣ ನುಜ್ಜು ಗುಜ್ಜಾಗಿದೆ.…