Author: Nammur Express Admin

ಕಿಮ್ಮನೆ ಉಪವಾಸ ಸತ್ಯಾಗ್ರಹ ಯಶಸ್ವಿಯಾಯ್ತು! – ಬಿಜೆಪಿ ಭರವಸೆ ಈಡೇರಿಸಿ ಆಮೇಲೆ ಮಾತನಾಡಲಿ – ಜನರ ಬದುಕಿನ ಮೇಲೆ ಬರೆ ಎಳೆದಿದ್ದೇ ಬಿಜೆಪಿ ಸಾಧನೆ: ಕಿಮ್ಮನೆ NAMMUR EXPRESS NEWS ಶಿವಮೊಗ್ಗ: 9 ವರ್ಷ ಕಳೆದರೂ ಕೇಂದ್ರ ಸರ್ಕಾರ ತನ್ನ ಭರವಸೆ ಈಡೇರಿಸಿಲ್ಲ. ಮೊದಲು ತಾವು ಕೊಟ್ಟ ಭರವಸೆ ಈಡೇರಿಸಿ ಆಮೇಲೆ ಕಾಂಗ್ರೆಸ್ ಬಗ್ಗೆ ಮಾತನಾಡಿ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ. ಶಿವಮೊಗ್ಗ ಗಾಂಧಿ ಪಾರ್ಕ್ ಅಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದ ಅವರು, ಬಿಜೆಪಿ ಕೊಟ್ಟ ಯಾವ ಭರವಸೆಗಳನ್ನೂ ಈಡೇರಿಸಿಲ್ಲ. ಮನೆಗಳನ್ನು ಹಂಚಿಕೆ ಮಾಡಲಿಲ್ಲಿ. ಉದ್ಯೋಗ ಕೊಡಲಿಲ್ಲ. ಡಾಲರ್‌ ದರ ಕಡಿಮೆ ಮಾಡುವುದಾಗಿ ಘೋಷಿಸಿದ್ದರು. ಅದನ್ನೂ ಮಾಡಿಲ್ಲ. ಈಗ ಕಾಂಗ್ರೆಸ್ ತನ್ನ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದ್ದು ಅದನ್ನು ಇವರಿಗೆ ನೋಡಲು ಆಗುತ್ತಿಲ್ಲ ಎಂದು ಆರೋಪಿಸಿದರು. ಹಿಂದು ಧರ್ಮದ ಪ್ರತಿಪಾದಕ ಗಾಂಧೀಜಿಯವರನ್ನೇ ದೂರ ತಳ್ಳುತ್ತಿದ್ದಾರೆ. ಅಂಬೇಡ್ಕರ್ ಅವರ ಬಗ್ಗೆ ಮಾತನಾಡುವ ಧೈರ್ಯವು ಇಲ್ಲ. ಹಿಂದು ಧರ್ಮದಲ್ಲಿ ಇರುವ ನ್ಯೂನತೆ ಸರಿಪಡಿಸುವ ಬಗ್ಗೆ…

Read More

ಹೊಸ ಮೆಸೇಜ್ ನೀಡಿದ “90 ಬಿಡಿ ಮನೀಗ್ ನಡಿ” ಚಿತ್ರ ತಂಡ! – ಸಾಮಾಜಿಕ ಸಂದೇಶ ಸಾರುವ ಚಿತ್ರಕ್ಕೆ ಬೆಂಬಲಿಸಿ : ನಟಿ ನೀತಾ ಹಿರೇಮಠ – ಹಾಸ್ಯ ಕಲಾವಿದ ವೈಜನಾಥ ಬಿರಾದಾರ ಅಭಿನಯದ 500ನೆಯ ಚಿತ್ರ – ಮಧ್ಯಪಾನ ಸೇವನೆಯಿಂದ ಬೀರುವ ಅಡ್ಡ ಪರಿಣಾಮಗಳ ಕುರಿತು ಜಾಗೃತಿ ಸಾರುವ ಚಿತ್ರ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಸಿಂದಗಿ: ಸಾಮಾಜಿಕ ಸಂದೇಶವುಳ್ಳ ಚಿತ್ರಕ್ಕೆ ಪ್ರೇಕ್ಷಕರ ಬೆಂಬಲ ಬೇಕಾಗಿದೆ ಎಂದು “90 ಬಿಡಿ ಮನೀಗ್ ನಡಿ” ಚಿತ್ರದ ನಾಯಕಿ ನೀತಾ ಹಿರೇಮಠ ಹೇಳಿದರು. ಉಮೇಶ ಬಾದರದಿನ್ನಿ ಹಾಗೂ ನಾಗರಾಜ ಅರೆಹೊಳೆ ನಿರ್ದೇಶನದ, 9೦ರ ದಶಕದಲ್ಲಿ ಪ್ರಸಿದ್ದ ಹಾಸ್ಯ ಕಲಾವಿದರಲ್ಲೊಬ್ಬರಾಗಿದ್ದ ವೈಜನಾಥ ಬಿರಾದಾರವರ ಅಭಿನಯದ 5೦೦ನೇ ಚಿತ್ರ ಹಾಗೂ ನಾಯಕ ನಟನಾಗಿ ಅಭಿನಯಿಸಿದ ಮೊದಲ ಚಿತ್ರ “90 ಬಿಡಿ ಮನೀಗ್ ನಡಿ” ಜೂ.29 ರಂದು ರಾಜ್ಯಾದ್ಯಾಂತ ಬಿಡುಗಡೆಯಾಗಿದೆ. ಈ ಹಿನ್ನಲೆ ಪಟ್ಟಣದ ವಿನಾಯಕ ಚಿತ್ರ ಮಂದಿರಕ್ಕೆ ಭೇಟಿ ನೀಡಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು…

Read More

ಜೆಡಿಎಸ್ ಉಪ ನಾಯಕಿಯಾಗಿ ಶಾರದಾ ಪೂರ್ಯನಾಯ್ಕ್ – ಮಲೆನಾಡ ಮತ್ತೊಬ್ಬರಿಗೆ ಇದೀಗ ಮಹತ್ವದ ಹುದ್ದೆ – ಜೆಡಿಎಸ್ ನಾಯಕರು, ಜೆಡಿಎಸ್ ಕಾರ್ಯಕರ್ತರ ಸಂತಸ NAMMUR EXPRESS NEWS ಶಿವಮೊಗ್ಗ: ಜೆಡಿಎಸ್ ಶಾಸಕಾಂಗ ಉಪ ನಾಯಕಿಯಾಗಿ ಶಿವಮೊಗ್ಗ ಗ್ರಾಮಾಂತರ ಜನಪ್ರಿಯ ಶಾಸಕರಾದ ಶಾರದಾ ಪೂರ್ಯನಾಯ್ಕ್ ರವರು ಆಯ್ಕೆ ಆಗಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಿಂದ ಎರಡನೇ ಬಾರಿಗೆ ಗೆಲುವು ಸಾಧಿಸಿದ್ದು ತಮ್ಮ ವ್ಯಕ್ತಿತ್ವದ ಮೂಲಕವೇ ಗಮನ ಸೆಳೆದಿದ್ದರು. ಇದೀಗ ರಾಜ್ಯ ಮಟ್ಟದಲ್ಲಿ ಹೊಣೆ ಸಿಕ್ಕಿದೆ. ಮಲೆನಾಡ ಮತ್ತೊಬ್ಬರಿಗೆ ಇದೀಗ ಮಹತ್ವದ ಹುದ್ದೆ ಸಿಕ್ಕಿದೆ. ಜೆಡಿಎಸ್ ನಾಯಕರು, ಜೆಡಿಎಸ್ ಕಾರ್ಯಕರ್ತರು ಅಭಿನಂದನೆ ಸಲ್ಲಿಸಿದ್ದಾರೆ. ಇದನ್ನೂ ಓದಿ : ಲಕ್ಷಕ್ಕೆ ಬರುತ್ತಾ ಅಡಿಕೆ ದರ? HOW TO APPLY : NEET-UG COUNSELLING 2023

Read More

ತೀರ್ಥಹಳ್ಳಿಗೆ ಬಂತು ಫ್ಲೈ ಓವರ್! – 56 ಕೋಟಿ ವೆಚ್ಚದಲ್ಲಿ ಹೊಸ ಪ್ಲೇ ಓವರ್ ನಿರ್ಮಾಣ – ಭಾರತಿಪುರ ಕ್ರಾಸ್ ನಿಂದ ತೀರ್ಥಹಳ್ಳಿ ಪಟ್ಟಣಕ್ಕೆ ಸಂಪರ್ಕ – ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರ ಸಾಧನೆ – ಕಾಮಗಾರಿ ಶುರು: ತೀರ್ಥಹಳ್ಳಿ ಆಗುತ್ತಿದೆ ಹೈಟೆಕ್ NAMMUR EXPRESS NEWS ತೀರ್ಥಹಳ್ಳಿ: ಮಲೆನಾಡಿನ ಪ್ರತಿಷ್ಠಿತ ಹಾಗೂ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪಟ್ಟಣಗಳಲ್ಲಿ ಒಂದಾದ ತೀರ್ಥಹಳ್ಳಿಗೆ ಇದೀಗ ಫ್ಲೈ ಓವರ್ ಭಾಗ್ಯ ಬಂದಿದೆ. ತೀರ್ಥಹಳ್ಳಿಯ ಭಾರತಿ ಪುರ ಕ್ರಾಸ್ ಬಳಿ ಸುಮಾರು 56 ಕೋಟಿ ವೆಚ್ಚದಲ್ಲಿ ಫ್ಲೈ ಓವರ್ ನಿರ್ಮಾಣ ಕಾಮಗಾರಿ ಶುರುವಾಗಿದ್ದು, ಇದೀಗ ಕಾಮಗಾರಿಗೆ ಚಾಲನೆ ಸಿಕ್ಕಿದೆ. ಭಾರತಿಪುರದಿಂದ ತೀರ್ಥಹಳ್ಳಿ ಪಟ್ಟಣಕ್ಕೆ ಸಂಪರ್ಕಿಸುವ ಈ ಫ್ಲೈ ಓವರ ಕಾಮಗಾರಿ ಡಿಸೆಂಬರ್ ನಲ್ಲಿ ಶುರುವಾಗಿದ್ದು 2024 ಜೂನ್ ನಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಬೆಂಗಳೂರು ಮಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿರುವ ಫ್ಲೈ ಓವರ್ ಮಾದರಿ ಅತಿ ಆಧುನಿಕ ಫ್ಲೈ ಓವರ್ ನಿರ್ಮಾಣವಾಗುತ್ತಿದ್ದು, ವಾಹನಗಳು ಫ್ಲೈ…

Read More

ಲಕ್ಷಕ್ಕೆ ಬರುತ್ತಾ ಅಡಿಕೆ ದರ? – ಅಡಿಕೆ ದರ ಎಷ್ಟಿದೆ? – ಸರಕು ದರ 83, 330 ಸರಕು 60009 83330 ಬೆಟ್ಟೆ 53009 55199 ರಾಶಿ 52009 54509 ಗೊರಬಲು 40009 40509 ಮಾಹಿತಿ: ಸಹ್ಯಾದ್ರಿ ವಿವಿಧೋದ್ದೇಶ ಅಡಿಕೆ ಬೆಳೆಗಾರರ ಮಾರಾಟ ಸಹಕಾರ ಸಂಘ ತೀರ್ಥಹಳ್ಳಿ ಇದನ್ನೂ ಓದಿ : ನಾಯಿ ವೇದಿಕೆ ಮೇಲೆ ಪ್ರಶಸ್ತಿ ಪಡೆಯಿತು!! HOW TO APPLY : NEET-UG COUNSELLING 2023

Read More

ಉಚಿತ ಬಸ್ ಸೀಟಿಗಾಗಿ ಮಹಿಳೆಯರ ಹೊಡೆದಾಟ! – ಶಿಕ್ಷಕರ ಕಿರುಕುಳಕ್ಕೆ ಹತ್ತನೇ ಕ್ಲಾಸ್ ಬಾಲಕಿ ಬಲಿ? – ಆಗುಂಬೆ ಘಾಟಿಯಲ್ಲಿ ಆಂಬುಲೆನ್ಸ್ ಪರದಾಟ! NAMMUR EXPRESS NEWS ರಾಯಚೂರು: ಮಹಿಳೆಯರು ಬಸ್ ಹತ್ತುವಾಗ ಡೋರ್, ಕಿಟಕಿಯ ಸರಳುಗಳು ಕಿತ್ತುಕೊಂಡು ಬಂದಿರುವ ಫೋಟೋ ಹಾಗು ವಿಡಿಯೋ ನಡುವೆ ಇದೀಗ ಸೀಟಿಗಾಗಿ ಮಹಿಳೆಯರು ಹೊಡದಾಡಿಕೊಂಡಿರುವ ಘಟನೆ ರಾಯಚೂರಲ್ಲಿ ನಡೆದಿದೆ. ಸರ್ಕಾರಿ ಬಸ್ಸಿನಲ್ಲಿ ಕುಳಿತುಕೊಳ್ಳುವ ವಿಚಾರವಾಗಿ ಮೂವರು ಮಹಿಳೆಯರ ನಡುವೆ ಹೊಡೆದಾಟವಾಗಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆಯೂ ಸಿರವಾರ-ರಾಯಚೂರು ನಡುವಿನ ಮಾರ್ಗದಲ್ಲಿ ನಡೆದಿದೆ. ಸಿರವಾರದಿಂದ-ರಾಯಚೂರಿನತ್ತ ಹೊರಟ ಬಸ್ನಲ್ಲಿ ಕಳಿತುಕೊಳ್ಳುವ ವಿಚಾರವಾಗಿ ಇಬ್ಬರು ಮಹಿಳೆಯರ ನಡುವೆ ಮೊದಲಿಗೆ ಜಗಳ ಶುರುವಾಗಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಮೂವರು ಮಹಿಳೆಯರು ಬಡಿದಾಡಿಕೊಂಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ಶಿಕ್ಷಕನ ಪುತ್ರನ ಕಿರಿಕ್: ಬಾಲಕಿ ಆತ್ಮಹತ್ಯೆ! ಬೆಂಗಳೂರು ನಗರದಲ್ಲಿ ಶಾಲೆಯ ಶಿಕ್ಷಕರ ಮತ್ತು ಶಿಕ್ಷಕರ ಪುತ್ರನ ಕಿರುಕುಳದಿಂದ ಬೇಸತ್ತ ನಗರದ ಖಾಸಗಿ ಶಾಲೆಯ ಎಸ್‌ಎಸ್ಎಲ್…

Read More

ವಾಹನ ನೋಂದಣಿ ಬೋರ್ಡ್ ಗೋಲ್ಮಾಲ್!? – ಅಕ್ರಮಕ್ಕೆ ಅವಕಾಶ ನೀಡಲ್ಲ ಎಂದ ಸಾರಿಗೆ ಸಚಿವರು – ಸರ್ಕಾರದ ಕ್ರಮಕ್ಕೆ ಸಂಘಟನೆಗಳ ಅಭಿನಂದನೆ – ರಾಜ್ಯದಲ್ಲಿವೆ 2 ಕೋಟಿ ಹಳೆಯ ವಾಹನ ಇವೆ! NAMMUR EXPRESS NEWS ಬೆಂಗಳೂರು: ರಾಜ್ಯದಲ್ಲಿ ವಾಹನಗಳಿಗೆ ಅತೀ ಸುರಕ್ಷಾ ನೋಂದಣಿ ಫಲಕ (HSRP) ಅಳವಡಿಸುವ ಯೋಜನೆ ಜಾರಿಗೆ ವಿಚಾರದಲ್ಲಿ ಬೆಂಗಳೂರು ವಿವಿ ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟ ಆರಂಭಿಸಿರುವ ಹೋರಾಟಕ್ಕಷ್ಟೇ ವಿವಿಧ ಸಂಘಟನೆಗಳು ಬೆಂಬಲ ಘೋಷಿಸಿವೆ. ಇದೇ ವೇಳೆ, ಹಿಂದಿನ ಸರ್ಕಾರದ ಅವಧಿಯಲ್ಲಿ ತಪ್ಪುಗಳು ಆಗಿದ್ದರೆ ಸರಿಪಡಿಸುವುದಾಗಿ ಭರವಸೆ ನೀಡಿರುವ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರನ್ನು ರಾಜ್ಯದ ಭ್ರಷ್ಟಾಚಾರ ವಿರೋಧಿ ಹೋರಾಟ ಸಮಿತಿ ಹಾಗೂ ಸಮತಾ ಸೈನಿಕ ದಳ ವಿದ್ಯಾರ್ಥಿ ಒಕ್ಕೂಟ ಅಭಿನಂಧಿಸಿದೆ. ಅಪರಾಧ ಕೃತ್ಯಗಳನ್ನು ತಡೆಯಲು ಹಾಗೂ, ಕಾನೂನು ಉಲ್ಲಂಘನೆಯಂತಹ ಪ್ರಕರಣಗಳನ್ನು ಬೇಧಿಸಲು ಅನುಕೂಲವಾಗುವಂತೆ HSRP ಅಳವಡಿಕೆ ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದ್ದು, ಇದಕ್ಕಾಗಿ ವಿಶಿಷ್ಟ ನಂಬರ್ ಪ್ಲೇಟ್’ಗಳನ್ನು ತಯಾರಿಸುವ ಸುಮಾರು 20 ಕಂಪನಿಗಳಿಗೆ…

Read More

ಜು.7ಕ್ಕೆ ರಾಜ್ಯ ಬಜೆಟ್! – ಅಧಿವೇಶನ ಜು.3ರಿಂದ ಶುರು: ಗ್ಯಾರಂಟಿ ಗಲಾಟೆ! – ಜು.14ರವರೆಗೆ ಅಧಿವೇಶನ: ಬಿಜೆಪಿ, ಜೆಡಿಎಸ್ ಸಜ್ಜು – ಜುಲೈ 7ರಂದು ದಾಖಲೆಯ 14ನೇ ಬಜೆಟ್ – ವಿಧಾನಸೌಧ ಸುತ್ತಮುತ್ತ ಕರ್ಫ್ಯೂ ವಿಧಿಸಿ ಆದೇಶ NAMMUR EXPRESS NEWS ಬೆಂಗಳೂರು: ವಿಧಾನಮಂಡಲ ಅಧಿವೇಶನ ಸೋಮವಾರದಿಂದ ಶುರುವಾಗಲಿದ್ದು, ಉಭಯ ಸದನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ಜುಲೈ 14ರವರೆಗೂ ಸದನ ಕಲಾಪ ನಡೆಯಲಿದೆ. ಅಧಿವೇಶನದಲ್ಲಿ ಗ್ಯಾರಂಟಿ ಅಸ್ತ್ರ ಹಿಡಿದು ಹೋರಾಟಕ್ಕೆ ಬಿಜೆಪಿ, ಜೆಡಿಎಸ್ ಸಜ್ಜು ಆಗಿದ್ದು ಉತ್ತರ ಕೊಡಲು ಕಾಂಗ್ರೆಸ್ ನಾಯಕರು ಸಿದ್ಧತೆ ನಡೆಸಿದ್ದಾರೆ. ಸದನದಲ್ಲಿ ಮತಾಂತರ, ಗೋಹತ್ಯೆ ನಿಷೇಧ ಕಾಯ್ದೆಗಳ ರದ್ದು ಯುದ್ಧ ನಡೆಯಲಿದೆ. ಜುಲೈ 3ರಿಂದ 14ರವರೆಗೆ ಕಲಾಪ ನಡೆಯಲಿದೆ. ಜು.7ಕ್ಕೆ ಬಜೆಟ್ ಅನ್ನು ಸಿದ್ದರಾಮಯ್ಯ ಮಂಡಿಸಲಿದ್ದಾರೆ. ನಿಷೇಧಾಜ್ಞೆ ಜಾರಿ: ಮೊದಲ ದಿನ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜುಲೈ 7ರಂದು ದಾಖಲೆಯ 14ನೇ ಬಜೆಟ್ ಮಂಡಿಸಲಿದ್ದು, ಬಿಜೆಪಿಯ ವಿವಾದಾತ್ಮಕ ತಿದ್ದುಪಡಿ…

Read More

ಅಂತೂ ಶುರುವಾಯ್ತು ಮಳೆ..! – ಕರಾವಳಿ, ಮಲೆನಾಡು ಸೇರಿ ಎಲ್ಲೆಡೆ ಮಳೆ ಆರಂಭ – ಕರಾವಳಿ, ಮಲೆನಾಡಿಗೆ ಅಲರ್ಟ್ NAMMUR EXPRESS NEWS ಬೆಂಗಳೂರು: ರಾಜ್ಯದಲ್ಲಿ ನಿಧಾನಕ್ಕೆ ಮಳೆ ಸೆಟ್ ಆಗುತ್ತಿದೆ. ಕಳೆದೊಂದು ವಾರದಿಂದ ರಾಜ್ಯದ ಕರಾವಳಿ ಜಿಲ್ಲೆಗಳು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕಳೆದ ಎರಡು ವಾರದಿಂದ ಉತ್ತಮ ಮಳೆಯಾಗುತ್ತಿದೆ. ಆದ್ರೆ ಈ ಬಾರಿ ಮಲೆನಾಡಲ್ಲಿ ಇನ್ನು ಮಳೆ ಶುರುವಾಗಿಲ್ಲ. ಬೆಂಗಳೂರಲ್ಲಿ ಮಳೆ ಹೆಚ್ಚೇ ಸುರಿಯುತ್ತಿದೆ. ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಜುಲೈ 5ರವರೆಗೂ ವರುಣನ ಆರ್ಭಟ ಹೆಚ್ಚಾಗಲಿದೆ. ಹೀಗಾಗಿ ಜುಲೈ 6 ರಂದು ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಯಲ್ಲಿ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಜುಲೈ 3ರಂದು ಭಾರಿ ಮಳೆ ಸುರಿಯಲಿದ್ದು, ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ. ಕರಾವಳಿ ಜಿಲ್ಲೆಗಳ ಪೈಕಿ ಉತ್ತರ ಕನ್ನಡ ಜಿಲ್ಲೆಯಲ್ಲಿಯೇ…

Read More

ಶಿವಮೊಗ್ಗ ಡಿಸಿಸಿ ಬ್ಯಾಂಕ್ ಹಗರಣ ಮತ್ತೆ ತನಿಖೆ?! – 62 ಕೋಟಿ ಬಂಗಾರದ ಸಾಲ ಪ್ರಕರಣಕ್ಕೆ ಹೊಸ ಟ್ವಿಸ್ಟ್ – ತನಿಖಾ ಸಂಸ್ಥೆ ಜಾರಿ ನಿರ್ದೇಶನಾಲಯ ಎಂಟ್ರಿ – ಯಾರಿಗೆ ಸುತ್ತಲಿದೆ ತನಿಖೆ ಉರುಳು?! NAMMUR EXPRESS NEWS ಶಿವಮೊಗ್ಗ: ಶಿವಮೊಗ್ಗ ನಗರದ ಡಿಸಿಸಿ ಬ್ಯಾಂಕಿನಲ್ಲಿ ನಡೆದಿದ್ದ 62 ಕೋಟಿ ರೂಪಾಯಿ ಬಂಗಾರದ ಅಡಮಾನ ಸಾಲ ಪ್ರಕರಣಕ್ಕೆ ದೇಶದ ಆರ್ಥಿಕ ಅವ್ಯವಹಾರಗಳ ತನಿಖಾ ಸಂಸ್ಥೆ ಜಾರಿ ನಿರ್ದೇಶನಾಲಯ ಎಂಟ್ರಿಯಾಗುವ ಸಾಧ್ಯತೆ ಇದೆ. ಸಾಕ್ಷಿ ಎಂಬಂತೆ ಸದ್ಯ ಜಾರಿ ನಿರ್ದೇಶನಾಲಯದ ಬೆಂಗಳೂರು ಪ್ರಾದೇಶಿಕ ಕಚೇರಿಯ ಸಹಾಯಕ ನಿರ್ದೇಶಕ ಅಜಯ್ ಚೌದರಿ ಡಿಸಿಸಿ ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕರಿಗೆ ಪ್ರಮುಖ ಮಾಹಿತಿಗಳನ್ನು ಮೂರು ದಿನಗಳಲ್ಲಿ ಸಲ್ಲಿಸುವಂತೆ ಸೂಚಿಸಿದ್ದಾರೆ. ತನಿಖೆಯಲ್ಲಿ ಕೇಳಿದ್ದೇನು? ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಗರ ಶಾಖೆಗೆ ಸಂಬಂಧಿಸಿದ 2012 ರಿಂದ 2014 ರ ಅವಧಿಯ, 62 ಕೋಟಿ ರೂಪಾಯಿ ಬಂಗಾರ ಅಡಮಾನದ ಪ್ರಕರಣಕ್ಕೆ ಸಂಬಂಧಿಸಿದ 34 ಸಾಲ ಖಾತೆಗಳಿಗೆ ಸಂಬಂಧಿಸಿದ ಎಲ್ಲಾ ಕೆವೈಸಿ ದಾಖಲೆಗಳನ್ನು…

Read More