ಮೋದಿ ಸರ್ಕಾರದ ವಿರುದ್ಧ ಕಿಮ್ಮನೆ ಉಪವಾಸ! – ಜುಲೈ 3ರಂದು ಶಿವಮೊಗ್ಗದಲ್ಲಿ ಉಪವಾಸ ಸತ್ಯಾಗ್ರಹ – ರಾಜ್ಯ ಸರ್ಕಾರಕ್ಕೆ ಆಹಾರ ಧಾನ್ಯ ವಿತರಣೆ ಲೋಪ – ಕೇಂದ್ರ ಸರ್ಕಾರ ಜನರ ಬೇಡಿಕೆ ಈಡೇರಿಸುವಲ್ಲಿ ವಿಫಲ NAMMUR EXPRESS NEWS ಶಿವಮೊಗ್ಗ: ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರವು ಆಹಾರಧಾನ್ಯ ವಿತರಣೆಯ ವಿಷಯದಲ್ಲಿ ಕರ್ನಾಟಕದ ವಿರುದ್ದ ಮಲತಾಯಿ ಧೋರಣೆ ಅನುಸರಿಸುತ್ತಿದ್ದು ಹಾಗಗೂ ದೇಶದಲ್ಲಿ ನಿರುದ್ಯೋಗ ಸಮಸ್ಯೆ ತೀವ್ರವಾಗಿದೆ ,ಮಣಿಪುರದಲ್ಲಿ ಹಿಂಸೆ ಗಲಭೆಗಳು ತಾರಕಕ್ಕೆ ಏರಿದ್ದು ಈ ವಿಷಯದಲ್ಲಿ ಕೇಂದ್ರಸರ್ಕಾರದ ಬೇಜವಾಬ್ದಾರಿ ನಿಲುವು ಹಾಗು ಸರ್ವ ಕ್ಷೇತ್ರಗಳಲ್ಲೂ ವಿಫಲವಾಗಿರುವ ಕೇಂದ್ರಸರ್ಕಾರದ ನಿಲುವು ನಡವಳಿಕೆಗಳನ್ನು ಖಂಡಿಸುವ ಸಲುವಾಗಿ ಮಾಜಿ ಸಚಿವರು ಕೆಪಿಸಿಸಿ ವಕ್ತಾರರು, ತೀರ್ಥಹಳ್ಳಿ ಮಾಜಿ ಶಾಸಕ ಕಿಮ್ಮನೆರತ್ನಾಕರ್ ಅವರು ಶಿವಮೊಗ್ಗದಲ್ಲಿ ಜುಲೈ 7ರಂದು ಉಪವಾಸ ಸತ್ಯಾಗ್ರಹ ನಡೆಯಲಿದೆ. ಜುಲೈ 3ರ ಸೋಮವಾರದಂದು ಶಿವಮೊಗ್ಗದ ಗಾಂಧಿ ಪಾರ್ಕಿನ ಗಾಂಧಿ ಪ್ರತಿಮೆ ಎದುರು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5.30ರ ತನಕ ಉಪವಾಸ ಸತ್ಯಾಗ್ರಹ ನಡೆಸಲಿದ್ದು ,ಈ…
Author: Nammur Express Admin
ರಾಜ್ಯದಲ್ಲಿ ಹಲವು ದಾಳಿಗೆ ಉಗ್ರರ ಪ್ಲಾನ್?! – ರಾಷ್ಟ್ರೀಯ ತನಿಖಾ ದಳದ ಮಹತ್ವದ ತನಿಖೆ – ರೋಬೋಟ್ ತಂತ್ರಜ್ಞಾನ ಬಳಸಿ ದಾಳಿಗೆ ಟ್ರೇನಿಂಗ್ – ಸೆಕ್ಯೂರಿಟಿ ಗಾರ್ಡನ್ನೇ ಕೊಲೆ ಮಾಡುತ್ತಿದ್ದ ಮೆಂಟಲ್! NAMMUR EXPRESS NEWS ಮಂಗಳೂರು: ರಾಜ್ಯದಲ್ಲಿ ಐಸಿಸ್ ಉಗ್ರರು ಹಲವು ಉಗ್ರ ದಾಳಿ ಮಾಡಲು ಪ್ಲಾನ್ ಮಾಡಿದ್ದರು ಎಂಬ ಮಾಹಿತಿ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳ ತನಿಖೆಯಿಂದ ಬೆಳಕಿಗೆ ಬಂದಿದೆ. ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ಲಾನ್ ಮಾಡಿದ್ದ ಉಗ್ರರು ತಮ್ಮ ಪ್ಲಾನ್ ಬಾಯಿ ಬಿಟ್ಟಿದ್ದಾರೆ. ರಾಜ್ಯದಲ್ಲಿ ರೋಬೋಟ್ ಗಳ ಮೂಲಕ ವಿದ್ವಂಸಕ ಕೃತ್ಯ ನಡೆಸಲು ಐಸಿಸ್ ಸಂಚು ರೂಪಿಸಿತ್ತು ಎಂಬ ಸ್ಫೋಟಕ ಮಾಹಿತಿ ರಾಷ್ಟ್ರೀಯ ತನಿಖಾದಳದ ಚಾರ್ಜ್ ಶೀಟ್ ನಿಂದ ಬಯಲಾಗಿದೆ. ಈ ಬಗ್ಗೆ ಶಂಕಿತ ಉಗ್ರರು ವಿಚಾರಣೆ ಸಂದರ್ಭ ಬಾಯ್ದಿಟ್ಟಿದ್ದಾರೆ ಎನ್ನಲಾಗಿದೆ. ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಮತ್ತು ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಶಂಕಿತ…
ಹೊಸೂರು ಗುಡ್ಡೇಕೇರಿಗೆ ಸರ್ಕಾರಿ ಪ್ರೌಢಶಾಲೆ ಬಹುಮಾನ – ಫಲಿತಾಂಶದಲ್ಲಿ ಉತ್ತಮ ಸಾಧನೆ: ಇಲಾಖೆಯಿಂದ 25 ಸಾವಿರ ನಗದು ಮತ್ತು ಪಾರಿತೋಷಕ – ಶೇ.100 ಫಲಿತಾಂಶ ದಾಖಲು ಮಾಡಿದ್ದಕ್ಕೆ ಗೌರವ NAMMUR EXPRESS NEWS ತೀರ್ಥಹಳ್ಳಿ: ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿಗೆ ಎಸ್.ಎಸ್.ಎಲ್.ಸಿ ಅತ್ಯುತ್ತಮ ಗುಣಮಟ್ಟದ ಫಲಿತಾಂಶಕ್ಕಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ 25 ಸಾವಿರ ನಗದು ಮತ್ತು ಪಾರಿತೋಷಕ ಲಭಿಸಿದೆ. ಶಿಕ್ಷಣ ಇಲಾಖೆಯ ಬಹುಮಾನದ ಚೆಕ್ ಮತ್ತು ಪಾರಿತೋಷಕವನ್ನು ಶಿವಮೊಗ್ಗ ಡಿ ಡಿ ಪಿ ಐ ಪರಮೇಶ್ವರಪ್ಪ ವಿತರಣೆ ಮಾಡಿದರು. ಇತ್ತೀಚಿನ ವರ್ಷಗಳಲ್ಲಿ ತಾಲ್ಲೂಕಿನ ಶೈಕ್ಷಣಿಕ, ಕ್ರೀಡೆ, ಸಹ ಪಠ್ಯ ಚಟುವಟಿಕೆಗಳ ಮೂಲಕ ಗಮನ ಸೆಳೆದಿರುವ, ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿ, ಮತ್ತೊಮ್ಮೆ ಗಮನ ಸೆಳೆದಿದೆ.. 2021-22 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 100 % ಫಲಿತಾಂಶ ದಾಖಲಿಸಿದ್ದು , ಗುಣಮಟ್ಟದ ಶಿಕ್ಷಣದಲ್ಲೂ ಅತ್ಯುತ್ತಮ ಸಾಧನೆ ಮಾಡಿತ್ತು, ಎಸ್ ಎಸ್ ಎಲ್ ಸಿ ಮಕ್ಕಳ ಕಲಿಕಾ…
ಮಾದಕ ವ್ಯಸನ ಮುಕ್ತಗೊಳಿಸಲು ಜನ ಜಾಗೃತಿ! – ಆಶಾಕಿರಣ ಸಮಗ್ರ ಪುನರ್ವಸತಿ ಕೇಂದ್ರದ ಸಹಯೋಗ NAMMUR EXPRESS NEWS ಶಂಕರಘಟ್ಟ: ಆಶಾಕಿರಣ ಸಮಗ್ರ ಪುನರ್ವಸತಿ ಕೇಂದ್ರವು ಅಂತರಾಷ್ಟ್ರೀಯ ಮಾದಕ ದ್ರವ್ಯ ಸೇವನೆ ಮತ್ತು ಅಕ್ರಮ ಸಾಗಾಟದ ವಿರುದ್ಧ ದಿನದ ಅಂಗವಾಗಿ ಸೋಮವಾರ ಜಾಗೃತಿ ಕಾರ್ಯಕ್ರಮವನ್ನು ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗ – ಶಂಕರಘಟ್ಟ ಶಿವಮೊಗ್ಗ ಮತ್ತು ಸಮಾಜ ಕಾರ್ಯ ವಿಭಾಗ – ಸಹ್ಯಾದ್ರಿ ಕಲಾ ಕಾಲೇಜು ಶಿವಮೊಗ್ಗ. ಸಹಯೋಗದಲ್ಲಿ ಆಯೋಜಿಸಲಾಗಿತ್ತು. ಸಮಾಜವನ್ನು ಮಾದಕ ವ್ಯಸನ ಮುಕ್ತಗೊಳಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಆರಂಭಿಸಲಾಯಿತು. ಕಾರ್ಯಕ್ರಮದಲ್ಲಿ ಆಶಾಕಿರಣ ಐಆರ್‌ಸಿಎ ನಿರ್ದೇಶಕ ಫಾ. ಪ್ರಕಾಶ್ ಪಿಂಟೋ, ಡಾ.ಶ್ರೇಯಸ್ ಹರೀಶ್ ದೇಲಂತಬೆಟ್ಟು, ಕುಮಾರ್ ಸ್ವಾಮಿ ಎಸ್ ಎಸ್ (ಸಮಾಜಕಾರ್ಯ ವಿಭಾಗದ ಉಪನ್ಯಾಸಕರು ಸಹ್ಯಾದ್ರಿ ಕಾಲೇಜು, ಶಿವಮೊಗ್ಗ), ಡಾ.ಹರೀಶ್ ದೇಲಂತಬೆಟ್ಟು (ಮನೋವೈದ್ಯ, ಭದ್ರಾವತಿ) ಭಾಗವಹಿಸಿದ್ದರು. ದೀಪ ಬೆಳಗಿಸಿ ನಂತರ ಸಭಿಕರನ್ನುದ್ದೇಶಿಸಿ ಡಾ.ಶ್ರೇಯಸ್ ಹರೀಶ್ ದೇಲಂತಬೆಟ್ಟು ಮಾದಕ ವಸ್ತು ಸೇವನೆ ವಿರುದ್ಧ ಮಾತನಾಡಿದರು ನಂತರ ಡಾ.ಹರೀಶ್…
ಅಪಘಾತಕ್ಕೆ ಒಂದೇ ದಿನ 14 ಬಲಿ! – ಟ್ರಕ್, ಎರಡು ಆಟೋಗಳ ನಡುವೆ ಅಪಘಾತ – ಭೀಕರ ಅಪಘಾತ ಪದೇ ಪದೇ ಹೆಚ್ಚಳ NAMMUR EXPRESS NEWS ಆಳಂದ/ಹೊಸಪೇಟೆ: ಬಳ್ಳಾರಿ ಗಡಿ ಹೊಸಪೇಟೆ ಹೊರವಲಯದ ವಡ್ಡರಹಳ್ಳಿ ಬಳಿ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ಒಟ್ಟು 14 ಮಂದಿ ಮೃತಪಟ್ಟಿದ್ದಾರೆ. ಹೊಸಪೇಟೆ ಹೊರವಲಯದ ವಡ್ಡರಹಳ್ಳಿ ರೈಲ್ವೆ ಸೇತುವೆ ಸಮೀಪ ಮಧ್ಯಾಹ್ನ ಟ್ರಕ್ ಮತ್ತು ಎರಡು ಆಟೊಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಬಳ್ಳಾರಿಯ ಒಂದೇ ಕುಟುಂಬದ ಐವರು ಸಹಿತ ಎಂಟು ಮಂದಿ ಮೃತಪಟ್ಟಿದ್ದಾರೆ. 11 ಮಂದಿ ಗಾಯಗೊಂಡಿದ್ದಾರೆ. ಬಳ್ಳಾರಿಯ ಕೌಲ್ ಬಜಾರ್ ನಗರದ ನಿವಾಸಿಗಳಾದ ಸಾಬೀ (55), ಕೌಸರ್ ಬಾನು (35), ಇಬ್ರಾಹಿಂ (33), ಯಾಸ್ಮಿನ್ (45), ಜಹೀರ್ (16), ಶಾನು (30) ಆಟೊ ಚಾಲಕ ಬಳ್ಳಾರಿ ಬಂಡಿಹಟ್ಟಿಯ ಉಮೇಶ್ (27) ಮತ್ತು ಇನ್ನೊಂದು ಆಟೊದಲ್ಲಿದ್ದ ಬಳ್ಳಾರಿ ಅಂದ್ರಾಳ್ ಡಿ.ಸಿ.ಕ್ಯಾಂಪ್‌ನ ಸಲೀಮಾ ಯಾನೆ ಶ್ಯಾಮ್ (40) ಮೃತರು ‘ಗಾಯಗೊಂಡವರ ಪೈಕಿ ನಾಲ್ವರನ್ನು ಬಳ್ಳಾರಿಯ ವಿಮ್ಸ್‌ಗೆ ದಾಖಲಿಸಲಾಗಿದ್ದು,…
ರಾಜ್ಯದಲ್ಲಿ ಜಲ ಪ್ರಳಯ ಆಗುತ್ತೆ! – ಒಂದೆರಡು ದೇಶಗಳು ಮುಳುಗುತ್ತವೆ – ಕರ್ನಾಟಕಕ್ಕೂ ಅನಾಹುತ ತಪ್ಪಿದಲ್ಲ – ಕಾಂಗ್ರೆಸ್ ಸರ್ಕಾರ ಒಳ್ಳೆಯದು ಮಾಡುತ್ತದೆ: ಕೋಡಿ ಮಠದ ಶ್ರೀ NAMMUR EXPRESS NEWS ಹುಬ್ಬಳ್ಳಿ: ರಾಜ್ಯದಲ್ಲಿ ಸಾಕಷ್ಟು ಮಳೆ ಬಂದು ಜಳಪ್ರಳಯವಾಗುತ್ತದೆ. ಪ್ರಕೃತಿ ಮುನಿದು ಸರಿಯಾಗುತ್ತದೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀ ಭವಿಷ್ಯ ನುಡಿದಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ವಿಪರೀತವಾದ ಜಲಪ್ರಳಯದಿಂದ ಜಾಗತಿಕ ಮಟ್ಟದ ಒಂದೆರಡು ರಾಷ್ಟ್ರಗಳು ಮುಚ್ಚುತ್ತವೆ. ಎಲ್ಲಿಯೋ ಆದ ಘಟನೆ ವಾಯುವ್ಯ ಮಾಲಿನ್ಯವಾಗಿ ಜನರು ಅಕಾಲಿಕ ಮರಣ ಹೊಂದುತ್ತಾರೆ. ಎಲ್ಲೋ ಹಾಕಿದ ಬಾಂಬ್ ನಮ್ಮ ರಾಷ್ಟ್ರದ ಜನರ ಮೇಲೆ ಪರಿಣಾಮ ಬೀರುತ್ತದೆ. ವಿಜಯ ದಶಮಿಯಿಂದ ಸಂಕ್ರಾತಿಯವರೆಗೆ ಜಗತ್ತಿನ ಸಾಮ್ರಾಟರು ತಲ್ಲಣಗೊಳ್ಳುತ್ತಾರೆ. ಆಳುವವರು ಅರಿತುಕೊಳ್ಳಬೇಕು. ಇಲ್ಲದಿದ್ದರೇ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಕೆ ನೀಡಿದರು. ಲೋಕಸಭಾ ಚುನಾವಣೆಯ ವಿಚಾರವಾಗಿ ಮಾತನಾಡಿದ ಅವರು, ಸತ್ಯಂ ಅಪ್ರಿಯಂ ಅಸ್ಯತಂ ಪ್ರಿಯ, ಸತ್ಯ ಹೇಳಿದರೆ ನಾನು ಮಠ ಸೇರುವುದಿಲ್ಲ. ಕಾದು ನೋಡಿ, ಏನಾಗುತ್ತದೆ…
ಡ್ರೋನ್ ಹಾರಿಸೇಬಿಟ್ರಾ ಡ್ರೋನ್ ಪ್ರತಾಪ್?! – ಅತೀ ದೊಡ್ಡ ಡ್ರೋನ್ ಜತೆ ಹಾಜರಾದ ಪ್ರತಾಪ್ – ತೀರ್ಥಹಳ್ಳಿಯಲ್ಲಿ ಡ್ರೋನ್ ಹಾರಿಸಿ ಪ್ರಯೋಗ – ಸುಳ್ಳೋ ಸತ್ಯವೋ ವಿಜ್ಞಾನಿಗಳೇ ಹೇಳ್ಬೇಕು! NAMMUR EXPRESS NEWS ತೀರ್ಥಹಳ್ಳಿ: ಡ್ರೋನ್ ಪ್ರತಾಪ್ ಈಗ ದೊಡ್ಡ ಡ್ರೋನ್ ಹಾರಿಸಿ ಮತ್ತೆ ಸುದ್ದಿಗೆ ಬಂದಿದ್ದಾರೆ. ಮಲೆನಾಡಿನ ಎಲೆಚುಕ್ಕಿ ರೋಗದ ಸಮಸ್ಯೆಗೆ ಡ್ರೋನ್ ಮೂಲಕ ಔಷಧಿ ಸಿಂಪಡಿಸಿ ಪರಿಹಾರ ಕಂಡು ಕೊಳ್ಳಬಹುದು ಎಂದಿರುವ ಅವರು ತೀರ್ಥಹಳ್ಳಿ, ಹೊಸನಗರ, ಭದ್ರಾವತಿ ಸೇರಿದಂತೆ ಎಲ್ಲೆಡೆ ತಾವು ತಯಾರು ಮಾಡಿರುವ ಡ್ರೋನ್ ತಂದು ಔಷಧಿ ಸಿಂಪಡಿಸಿದ್ದಾರೆ. ಈ ಮೂಲಕ ಮತ್ತೊಮ್ಮೆ ಸೋಶಿಯಲ್ ಮೀಡೀಯಾದಲ್ಲಿ ಸದ್ದು ಮಾಡುತ್ತಿದ್ದಾನೆ. ಕಳೆದ ಒಂದು ತಿಂಗಳಿಂದ ಡ್ರೋನ್ ಹಾರಿಸೋದ್ರಲ್ಲಿ ಬಿಝಿ ಆಗಿರುವ ಪ್ರತಾಪ್ ನ ಸಾಕಷ್ಟು ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇದೀಗ ತೀರ್ಥಹಳ್ಳಿಯ ಕೈಮರ ಬಳಿಯ ತೋಟವೊಂದರಲ್ಲಿ ಡ್ರೋನ್ ಹಾರಿಸಿದ್ದಾರೆ. ಮಲೆನಾಡಿನಲ್ಲಿ ವ್ಯಾಪಕವಾಗಿರುವ ಅಡಿಕೆ ಮರದ ಕೊಳೆ ರೋಗಕ್ಕೆ ಔಷಧಿ ಹೊಡೆಯಲು ಡ್ರೋನ್ ಡಿಸೈನ್ ಮಾಡಿರುವ ಡ್ರೋನ್…
ರಾಘವೇಂದ್ರ ಅವರಿಗೆ ಒಲಿಯುತ್ತಾ ಕೇಂದ್ರ ಸಚಿವ ಸ್ಥಾನ? – ಕೇಂದ್ರ ಸಂಪುಟ ವಿಸ್ತರಣೆಯಲ್ಲಿ ರಾಘವೇಂದ್ರ ಹೆಸರು – ಕರ್ನಾಟಕ ಲೋಕ ಸಭೆ ಮೇಲೆ ಹೈಕಮಾಂಡ್ ಕಣ್ಣು! NAMMUR EXPRESS NEWS ಬೆಂಗಳೂರು: ಕೇಂದ್ರ ಸಚಿವ ಸಂಪುಟ ವಿಸ್ತರಣೆ ಅಥವಾ ಮರು ಹಂಚಿಕೆ ಆಗುವ ಸಾಧ್ಯತೆಗಳಿದ್ದು, ಈ ಬಾರಿ ಯಡಿಯೂರಪ್ಪ ಪುತ್ರ ಶಿವಮೊಗ್ಗ ಸಂಸದ ರಾಘವೇಂದ್ರ ಅವರಿಗೆ ಮಂತ್ರಿಗಿರಿ ಸಿಗುವ ಸಾಧ್ಯತೆಗಳಿವೆ. ರಾಜ್ಯ ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ಕಹಿ ಅನುಭವದ ಆಧಾರದ ಹಿನ್ನೆಲೆಯಲ್ಲಿ ಲಿಂಗಾಯತ ಸಮುದಾಯದ ವಿಶ್ವಾಸವನ್ನು ತೆಗೆದುಕೊಳ್ಳುವ ಬಗ್ಗೆ ಹೈಕಮಾಂಡ್ ಯೋಚನೆ ಮಾಡಿದೆ. ಯಡಿಯೂರಪ್ಪ ಪುತ್ರ ಬಿ. ವೈ.ರಾಘವೇಂದ್ರ ಅವರು ಯುವ ನಾಯಕರಾಗಿದ್ದು ಪ್ರಭಾವಿ ಆಗಿದ್ದಾರೆ. ರಾಜ್ಯದಿಂದ ಪ್ರಹ್ಲಾದ್ ಜೋಶಿ, ನಿರ್ಮಲಾ ಸೀತಾರಾಮನ್, ರಾಜೀವ್ ಚಂದ್ರಶೇಖರ್, ಎ.ನಾರಾಯಣಸ್ವಾಮಿ ಮತ್ತು ಭಗವಂತ ಖೂಬಾ, ಶೋಭಾ ಕರಂದ್ಲಾಜೆ ಸಚಿವರಾಗಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಒಟ್ಟು 28 ಸ್ಥಾನಗಳ ಪೈಕಿ 25ರಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿ ಈ ಸಲ 20 ಸ್ಥಾನವನ್ನಾದ್ರೂ ಪಡೆಯಲು ಪ್ಲಾನ್…
ನೂಡಲ್ಸ್ ಸೇವಿಸಿದ ಇಬ್ಬರು ಮಕ್ಕಳ ಸಾವು! – ಓರ್ವ ಮಗು ಗಂಭೀರ: ಜಂಕ್ಸ್ ಫುಡ್ ಡೇಂಜರ್! – ಬ್ಯಾಂಕಲ್ಲೇ ಪತ್ತೆಯಾಯ್ತು ಕಳ್ಳ ನೋಟುಗಳು! NAMMUR EXPRESS NEWS ಹರಿಯಾಣ: ಫಾಸ್ಟ್ ಫುಡ್ ಇಬ್ಬರು ಮಕ್ಕಳ ಪ್ರಾಣವನ್ನೇ ತೆಗೆದ ಘಟನೆ ಹರಿಯಾಣದ ಸೋನಿಪತ್‌ನಲ್ಲಿ ನಡೆದಿದೆ ಎಂದು ವರದಿಯಿಂದ ತಿಳಿದುಬಂದಿದೆ. ನೂಡಲ್ಸ್, ಪರೋಟಾ ತಿಂದ ಮೂವರು ಮಕ್ಕಳ ಆರೋಗ್ಯ ಹದಗೆಟ್ಟಿದೆ. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೇ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು ಮತ್ತೊಂದು ಮಗುವಿನ ಸ್ಥಿತಿಯೂ ಗಂಭೀರವಾಗಿದೆ. ಭೂಪೇಂದ್ರ ಎಂಬುವವರ ಕುಟುಂಬದವರು ರಾತ್ರಿ ಪರೋಟಾ ಮತ್ತು ನೂಡಲ್ಸ್ ತಿಂದಿದ್ದಾರೆ. ಆದರೆ ರಾತ್ರಿ ಒಂದು ಗಂಟೆ ಸುಮಾರಿಗೆ ಭೂಪೇಂದ್ರ ಅವರ ಮೂವರು ಮಕ್ಕಳ ಸ್ಥಿತಿ ಹದಗೆಟ್ಟಿದೆ. ನಂತರ ಮೂವರನ್ನೂ ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಕ್ಕಳ ಗಂಭೀರ ಸ್ಥಿತಿ ಕಂಡು ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಬೆಳಿಗ್ಗೆ ಇಬ್ಬರು ಮಕ್ಕಳು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಹೇಮಾ (7)…
ಲಂಚ ಕೊಡುವ ವ್ಯಕ್ತಿಗೂ ಇನ್ನು ಮುಂದೆ ಶಿಕ್ಷೆ! – ಹೈಕೋರ್ಟಿನಿಂದ ಮಹತ್ವದ ಆದೇಶ – ಲಂಚ ತೆಗೆದುಕೊಳ್ಳುವ ವ್ಯಕ್ತಿಗೂ ಜೈಲು – ರಾಜ್ಯದಲ್ಲಿ ಹೆಚ್ಚಿದ ಲಂಚಾವತಾರ! NAMMUR EXPRESS NEWS ಬೆಂಗಳೂರು: ಲಂಚ ತೆಗೆದುಕೊಳ್ಳುವ ವ್ಯಕ್ತಿ ಮಾತ್ರವಲ್ಲ ಲಂಚ ಕೊಡುವ ವ್ಯಕ್ತಿಗೂ ಶಿಕ್ಷೆ ಆಗಬೇಕು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಅವರ ಪುತ್ರ ಎಂ.ವಿ. ಪ್ರಶಾಂತ್ ಕುಮಾರ್ ವಿರುದ್ಧದ ಲಂಚದ ಪ್ರಕರಣದಲ್ಲಿ ಐವರು ಆರೋಪಿಗಳ ವಿರುದ್ಧ ದಾಖಲಾಗಿರುವ ಭ್ರಷ್ಟಾಚಾರ ಪ್ರಕರಣ ರದ್ದುಪಡಿಸಲು ನಿರಾಕರಿಸಿದೆ. ಕರ್ನಾಟಕ ಅರೋಮಾ ಕಂಪೆನಿ ಮಾಲೀಕರಾದ ಕೈಲಾಶ್ ಎಸ್. ರಾಜ್, ವಿನಯ್ ಎಸ್. ರಾಜ್, ಚೇತನ್ ಮಾರ್ಲೇಚ, ಸಿಬ್ಬಂದಿ ಅಲ್ಬರ್ಟ್ ನಿಕೋಲಸ್ ಮತ್ತು ಗಂಗಾಧರ್ ವಿರುದ್ಧ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿದ್ದರು. ಮಾಡಾಳ್ ವಿರೂಪಾಕ್ಷಪ್ಪ ಮತ್ತು ಅವರ ಪುತ್ರ ಪ್ರಶಾಂತ್ ಕುಮಾರ್‌ಗೆ ಲಂಚ ನೀಡಲು ಮುಂದಾದ ಆರೋಪಕ್ಕೆ ಸಂಬಂಧಿಸಿದಂತೆ ನಮ್ಮ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಪ್ರಕರಣವನ್ನು ರದ್ದುಪಡಿಸಬೇಕು…