Categories
ರಾಜ್ಯ

ರಾಜ್ಯದಲ್ಲಿ ಜಲ ಪ್ರಳಯ ಆಗುತ್ತೆ! – ಕೋಡಿ ಮಠದ ಶ್ರೀ

ರಾಜ್ಯದಲ್ಲಿ ಜಲ ಪ್ರಳಯ ಆಗುತ್ತೆ!
– ಒಂದೆರಡು ದೇಶಗಳು ಮುಳುಗುತ್ತವೆ
– ಕರ್ನಾಟಕಕ್ಕೂ ಅನಾಹುತ ತಪ್ಪಿದಲ್ಲ
– ಕಾಂಗ್ರೆಸ್ ಸರ್ಕಾರ ಒಳ್ಳೆಯದು ಮಾಡುತ್ತದೆ: ಕೋಡಿ ಮಠದ ಶ್ರೀ

NAMMUR EXPRESS NEWS
ಹುಬ್ಬಳ್ಳಿ: ರಾಜ್ಯದಲ್ಲಿ ಸಾಕಷ್ಟು ಮಳೆ ಬಂದು ಜಳಪ್ರಳಯವಾಗುತ್ತದೆ. ಪ್ರಕೃತಿ ಮುನಿದು ಸರಿಯಾಗುತ್ತದೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀ ಭವಿಷ್ಯ ನುಡಿದಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ವಿಪರೀತವಾದ ಜಲಪ್ರಳಯದಿಂದ ಜಾಗತಿಕ ಮಟ್ಟದ ಒಂದೆರಡು ರಾಷ್ಟ್ರಗಳು ಮುಚ್ಚುತ್ತವೆ. ಎಲ್ಲಿಯೋ ಆದ ಘಟನೆ ವಾಯುವ್ಯ ಮಾಲಿನ್ಯವಾಗಿ ಜನರು ಅಕಾಲಿಕ ಮರಣ ಹೊಂದುತ್ತಾರೆ. ಎಲ್ಲೋ ಹಾಕಿದ ಬಾಂಬ್ ನಮ್ಮ ರಾಷ್ಟ್ರದ ಜನರ ಮೇಲೆ ಪರಿಣಾಮ ಬೀರುತ್ತದೆ. ವಿಜಯ ದಶಮಿಯಿಂದ ಸಂಕ್ರಾತಿಯವರೆಗೆ ಜಗತ್ತಿನ ಸಾಮ್ರಾಟರು ತಲ್ಲಣಗೊಳ್ಳುತ್ತಾರೆ. ಆಳುವವರು ಅರಿತುಕೊಳ್ಳಬೇಕು. ಇಲ್ಲದಿದ್ದರೇ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಕೆ ನೀಡಿದರು.

ಲೋಕಸಭಾ ಚುನಾವಣೆಯ ವಿಚಾರವಾಗಿ ಮಾತನಾಡಿದ ಅವರು, ಸತ್ಯಂ ಅಪ್ರಿಯಂ ಅಸ್ಯತಂ ಪ್ರಿಯ, ಸತ್ಯ ಹೇಳಿದರೆ ನಾನು ಮಠ ಸೇರುವುದಿಲ್ಲ. ಕಾದು ನೋಡಿ, ಏನಾಗುತ್ತದೆ ಎಂಬುದನ್ನು ಸಮಯ ಬಂದಾಗ ಹೇಳುತ್ತೇನೆ ಎಂದರು.
ಕಾಂಗ್ರೆಸ್ ಸರ್ಕಾರ ಐದು ವರ್ಷಗಳ ಪೂರೈಕೆ ಬಗ್ಗೆ ಮೂಗು ಮತ್ತು ಬಾಯಿಯನ್ನು ಉದಾಹರಣೆಯಾಗಿ ಕೊಟ್ಟ ಅವರು, ಮೂಗು ಎಲ್ಲಾ ವಾಸನೆ ಗ್ರಹಿಸುತ್ತದೆ. ಆದರೆ ಬಾಯಿಯಲ್ಲಿರುವ ಹೊಲಸನ್ನು ತೋರಿಸುವುದಿಲ್ಲ ಎಂದು ಮಾರ್ಮಿಕವಾಗಿ ಹೇಳಿದರು.

ಇದು ಬಹುದೊಡ್ಡ ದುರ್ಘಟನೆಯಾಗಿದ್ದು, ಕರುನಾಡಿಗೆ ಕೆಲವೊಂದು ಆಪತ್ತು ಇದೆ. ಕೆಲವು ಸಾವು-ನೋವು ಸಂಭವಿಸುತ್ತವೆ. ಗೌರಿಶಂಕರ ಶಿವ ಶಿವ ಎಂದಿತು. ಭೂಮಿ ನಡುಗಿತು. ಮಳೆ ಬೆಳೆ ತಲ್ಲಣಗೊಂಡಿತು. ಜನರು ತೊಂದರೆಗೆ ಒಳಗಾಗುವರು. ನಾನು ಹೇಳಿದಾಗ ಒಂದು ಘಟನೆ ಆಗಿಯೇ ಆಗುತ್ತದೆ. ಅದನ್ನು ತಪ್ಪಿಸಿಕೊಳ್ಳುವುದು ಆಳುವವರ ಕೈಯಲ್ಲಿದೆ ಎಂದರು.

ಕಾಂಗ್ರೆಸ್ ಸರ್ಕಾರ ಸ್ಥಿರವಾಗಿರುತ್ತದೆ. ಕಾಂಗ್ರೆಸ್‌ನ ಗ್ಯಾರಂಟಿಗಳಿಂದ ಒಳಿತಾಗುತ್ತದೆ. ಯಾವ ಮಹಿಳೆಗೆ ಸ್ವಾತಂತ್ರ್ಯವಿರಲಿಲ್ಲ, ಇವತ್ತು ಅವರು ಬಸ್‌ಗಳಲ್ಲಿ ಉಚಿತವಾಗಿ ಓಡಾಡುತ್ತಿದ್ದಾರೆ ಎಂದು ನುಡಿದರು

ಇದನ್ನೂ ಓದಿ : ನಾಯಿ ವೇದಿಕೆ ಮೇಲೆ ಪ್ರಶಸ್ತಿ ಪಡೆಯಿತು!!

HOW TO APPLY : NEET-UG COUNSELLING 2023

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.