ವಿದ್ಯಾರ್ಥಿಗಳ ಮೊಬೈಲ್ ಬಳಕೆ ನಿಷೇಧ ಸಾಧ್ಯತೆ?! – ಶಿಕ್ಷಣ ಸಚಿವ ಮಧು ಬಂಗಾರಪ್ಪರನ್ನ ಭೇಟಿ ಮಾಡಿದ ಆಯೋಗ – ಯುವ ಜನತೆಯ ಬದುಕನ್ನೇ ಬಲಿ ಪಡೆಯುತ್ತಿರುವ ಮೊಬೈಲ್? NAMMUR EXPRESS NEWS ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಿಂದ ಮೊಬೈಲ್ ಮೊಬೈಲ್ ಬಳಕೆ ಹೆಚ್ಚುತ್ತಿದ್ದು, ಫೋನ್‌ಗಳು ಮತ್ತು ಸೈಬರ್ ಅಪರಾಧದಿಂದ ವಿದ್ಯಾರ್ಥಿಗಳ ಮೇಲೆ ಬೀರುವ ಪರಿಣಾಮಗಳ ಕುರಿತು ಅಧ್ಯಯನ ನಡೆಸುವಂತೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಕೆಎಸ್‌ಪಿಸಿಆರ್) ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿಯಾಗಿದೆ. ಈ ಮೂಲಕ ರಾಜ್ಯದ ಮಕ್ಕಳ ಭವಿಷ್ಯದ ಬಗ್ಗೆ ಚರ್ಚೆ ಮಾಡಲು ಮನವಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಮಕ್ಕಳು, ವಿದ್ಯಾರ್ಥಿಗಳು, ಯುವ ಜನರು ಮೊಬೈಲ್ ಬಳಕೆ ಅವರ ಬದುಕನ್ನು ಬಲಿ ಪಡೆಯುತ್ತಿದೆ ಎಂಬ ಚರ್ಚೆ ನಡುವೆ ಆಯೋಗದ ಭೇಟಿ ಮಹತ್ವ ಪಡೆದಿದೆ. ಮಕ್ಕಳು ಸೈಬರ್ ಅಪರಾಧಕ್ಕೆ ಒಡ್ಡಿಕೊಳ್ಳುವುದು ಹಾಗೂ ಅತಿಯಾದ ಇಂಟರ್ನೆಟ್ ಬಳಕೆಯಂತಹ ವಿಷಯಗಳನ್ನು ಒಳಗೊಂಡಿರುವ ಅಧ್ಯಯನದ ವಿವರಗಳಿಗೆ ಸಂಬಂಧಿಸಿದಂತೆ…
Author: Nammur Express Admin
ಸಕಲೇಶಪುರದಿಂದ ಕರಾವಳಿಗೆ ಸುರಂಗ ಮಾರ್ಗ! – ಧರ್ಮಸ್ಥಳ, ಕುಕ್ಕೆ, ಕರಾವಳಿ, ಬೆಂಗಳೂರು ಪ್ರಯಾಣ ಸಲೀಸು – ಶಿರಾಡಿ ಘಾಟ್‌ನಲ್ಲಿನ ಟ್ರಾಫಿಕ್ ಸಮಸ್ಯೆಗೆ ಪರಿಹಾರ? NAMMUR EXPRESS NEWS ಹಾಸನ: ಶಿರಾಡಿ ಘಾಟ್‌ನಲ್ಲಿನ ಟ್ರಾಫಿಕ್ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಇದೀಗ ಸುರಂಗ ಮಾರ್ಗ ಮಾಡಲಾಗುತ್ತಿದೆ. ಕರಾವಳಿ ಹಾಗೂ ಹಾಸನ ಬೆಂಗಳೂರು ಪ್ರಯಾಣಿಕರಿಗೆ ಇದು ಅನುಕೂಲ ಆಗಲಿದೆ. ಜೊತೆಗೆ ಧರ್ಮಸ್ಥಳ, ಕುಕ್ಕೆ ಪ್ರವಾಸಿಗರಿಗೆ ಹೆಚ್ಚು ಅನುಕೂಲ ಆಗಲಿದೆ. ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಮಾರನಹಳ್ಳಿ ಗ್ರಾಮದಿಂದ ದಕ್ಷಿಣ ಕನ್ನಡ ಜಿಲ್ಲೆಯ ಅಡ್ಡಹೊಳೆಯವರಗೆ 30 ಕಿ.ಮಿ ಸುರಂಗ ರಸ್ತೆ ನಿರ್ಮಿಸಲಾಗಿದ್ದು ಇದರಲ್ಲಿ ಮೂರು ಬೆಟ್ಟಗಳಲ್ಲಿ 3.8 ಕಿ.ಮಿ. ಸುರಂಗ ಹಾಗೂ ಪಶ್ಚಿಮಘಟ್ಟದ ಪ್ರಪಾತದಲ್ಲಿ ನಾಲ್ಕು ಕಿ.ಮಿ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಈ ರಸ್ತೆ ಕಾಮಗಾರಿ ಪೂರ್ಣಗೊಂಡ ನಂತರ ಶಿರಾಡಿಘಾಟ್‌ನಲ್ಲಿ ಏಕಮುಖ ಸಂಚಾರಕ್ಕೆ ಅವಕಾಶ ಒದಗಿಸಲಾಗುವುದು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಹಾಸನದಿಂದ ಸಕಲೇಶಪುರದ ಹೆಗದ್ದೆ ಗ್ರಾಮದವರಗೆ ನಡೆಯುತ್ತಿರುವ 45 ಕಿ.ಮಿ ಚುತುಷ್ಪಥ ರಸ್ತೆಯಲ್ಲಿ ಸಾಕಷ್ಟು…
ಕೆಂಪೇಗೌಡ ಜಯಂತಿ ಆಚರಣೆಗೆ ಸಜ್ಜು! – ಜೂ.27ರಂದು ತಾಲೂಕು, ಜಿಲ್ಲಾ ಕೇಂದ್ರದಲ್ಲಿ ಆಚರಣೆ – ಸರ್ಕಾರದಿಂದ ರಾಜಧಾನಿಯಲ್ಲಿ ಕಾರ್ಯಕ್ರಮ – 198 ಮಂದಿಗೆ ಸನ್ಮಾನ: ಸರ್ಕಾರದ ಆದೇಶ NAMMUR EXPRESS NEWS ಬೆಂಗಳೂರು: ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ರಾಜ್ಯಾದ್ಯಂತ ಜೂ.27ರಂದು ಆಚರಣೆ ಮಾಡಲು ಸಿದ್ಧತೆ ನಡೆದಿದೆ. ರಾಜ್ಯಮಟ್ಟದ ಕಾರ್ಯಕ್ರಮವು ವಿಧಾನಸೌಧ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆಯಲಿದ್ದು, ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಇದಕ್ಕಾಗಿ ಮಾಜಿ ಸಚಿವ ಬಿ.ಎಲ್. ಶಂಕರ್ ನೇತೃತ್ವದಲ್ಲಿ ಆಯ್ಕೆ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಮಾಹಿತಿ ನೀಡಿದ್ದಾರೆ. ರಾಜಧಾನಿಯಲ್ಲಿ ವಾರ್ಡ್ ಗೆ ಒಬ್ಬರಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಗುರುತಿಸಿ ಮಾಡಿರುವವರನ್ನು 198 ಜನರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಜು.9ರಂದು ಪ್ರಶಸ್ತಿ ವಿತರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ. ಎಲ್ಲ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಜಯಂತಿಯನ್ನು ಕಡ್ಡಾಯವಾಗಿ ಆಚರಿಸಲು ನಿರ್ದೇಶನ ನೀಡಲಾಗಿದೆ. ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ : ಗೃಹಜ್ಯೋತಿ ಅರ್ಜಿ…
ಕುಳ್ಳನೆಂದು ಹುಡುಗಿಯ ತಿರಸ್ಕಾರ: ಎತ್ತರವಾಗಲು 66 ಲಕ್ಷ ಖರ್ಚು ಮಾಡಿದ ಭೂಪ! – 21 ವರ್ಷದ ಯುವಕನ ಸಾಹಸ ಏನು? – ಕಾಲಿನ ಮೂಳೆ ಕತ್ತರಿಸಿ ರಾಡ್ ಹಾಕಿಸಿಕೊಂಡ! NAMMUR EXPRESS NEWS ಕುಳ್ಳನಾಗಿದ್ದು ಹುಡುಗಿಯರಿಂದ ತಿರಸ್ಕಾರಗೊಂಡ ಯುವಕ ತನ್ನ ಎತ್ತರ ಹೆಚ್ಚಿಸಿಕೊಳ್ಳಲು ಬರೋಬ್ಬರಿ 66 ಲಕ್ಷ ಖಾಲಿ ಮಾಡಿದ್ದಾನೆ. ಜಾರ್ಜಿಯಾದ ನೌಕಾಪಡೆಯಲ್ಲಿರುವ 21 ವರ್ಷದ ಡಿನೈಲ್ ಸೈಗರ್ಸ್‌ಗೆ ಕುಳ್ಳನೆಂಬ ಕಾರಣಕ್ಕೆ ಅನೇಕ ಹುಡುಗಿಯರಿಂದ ತಿರಸ್ಕರಿಸಲ್ಪಟ್ಟನು. ಇದರಿಂದ ಬೇಸತ್ತು ಈತ ತನ್ನ ಎತ್ತರವನ್ನು ಹೆಚ್ಚಿಸುವ ಶಸ್ತ್ರಚಿಕಿತ್ಸೆಗೆ 66 ಲಕ್ಷ ರೂ. ಖರ್ಚು ಮಾಡುವ ಮೂಲಕವಾಗಿ ಸುದ್ದಿಯಾಗಿದ್ದಾನೆ. ಮೊದಲು 5.5 ಅಡಿ ಎತ್ತರ ಇದ್ದ ಡಿನೈಲ್ ಸೈಗರ್ಸ್ ಶಸ್ತ್ರಚಿಕಿತ್ಸೆ ಬಳಿಕ ಎತ್ರವನ್ನು 6 ಅಡಿಗೆ ಹೆಚ್ಚಿಸಿದ್ದಾನೆ. ಇದಕ್ಕಾಗಿ ಸುಮಾರು 66 ಲಕ್ಷ ರೂ. ಹಣವನ್ನು ಖರ್ಚು ಮಾಡಿದ್ದಾನೆ. ಆತನ ಎರಡೂ ಕಾಲುಗಳ ಮೂಳೆಯನ್ನು ಅರ್ಧದಷ್ಟು ಕತ್ತರಿಸಿ ರಾಡ್ ಹಾಕಲಾಗಿದೆ. 90 ದಿನಗಳಲ್ಲಿ ಹೊಸ ಮೂಳೆಯು ಬೆಳೆದ ಬಳಿಕ ರಾಡ್ ಅನ್ನು ತೆಗೆಯಲಾಗುತ್ತದೆ. ಒಟ್ಟಾರೆ…
ಮಧು ಬಂಗಾರಪ್ಪ ತವರು ಜಿಲ್ಲೆ ಪ್ರವಾಸ – ಜೂ.27ಕ್ಕೆ ಶಿವಮೊಗ್ಗ, ಸೊರಬ, ತೀರ್ಥಹಳ್ಳಿ ಭೇಟಿ – ಸಾರ್ವಜನಿಕ ಅಹವಾಲು ಸ್ವೀಕಾರ: ಅಧಿಕಾರಿಗಳ ಸಭೆ NAMMUR EXPRESS NEWS ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಜೂ.27ರಂದು ಶಿವಮೊಗ್ಗ ಜಿಲ್ಲೆ ಪ್ರವಾಸ ಕೈಗೊಂಡಿದ್ದಾರೆ. ಜಿಲ್ಲೆಯ ಜನರ ಅಹವಾಲು ಸ್ವೀಕಾರ ಮಾಡಲಿದ್ದಾರೆ. ಬೆಳಗ್ಗೆ 4 ಗಂಟೆಗೆ ಬೆಂಗಳೂರಿನಿಂದ ಹೊರಟು ಬೆಳಗ್ಗೆ 9.30ಕ್ಕೆ ಸೊರಬದ ಆನವಟ್ಟಿ ತಲುಪಲಿದ್ದಾರೆ. ಆನವಟ್ಟಿಯಲ್ಲಿ ಸಚಿವರ ಸ್ಥಳೀಯ ಕಚೇರಿ ಉದ್ಘಾಟನೆ ನಡೆಸಿ, ಸಾರ್ವಜನಿಕರ ಅಹವಾಲು ಸ್ವೀಕರಿಸಲಿದ್ದಾರೆ. ಬೆಳಗ್ಗೆ 11.30ಕ್ಕೆ ಸೊರಬ ಪ್ರವಾಸಿ ಮಂದಿರ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಉದ್ಘಾಟನೆ, ಅಹವಾಲು ಸ್ವೀಕರಿಸಲಿದ್ದಾರೆ. ಮಧ್ಯಾಹ್ನ 3ಕ್ಕೆ ತೀರ್ಥಹಳ್ಳಿಯ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಲಿದ್ದಾರೆ. 3.30ಕ್ಕೆ ತಾಲೂಕು ಕಚೇರಿಯಲ್ಲಿ ತಾಲೂಕಿನ ಪ್ರಗತಿ ಸಭೆ ನಡೆಸಲಿದ್ದಾರೆ. ಸಂಜೆ 5ಕ್ಕೆ ತೀರ್ಥಹಳ್ಳಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ. ಇದನ್ನೂ ಓದಿ : ಗೃಹಜ್ಯೋತಿ ಅರ್ಜಿ ನೋಂದಣಿಗೆ ಹೊಸ ಲಿಂಕ್! HOW TO APPLY…
ಅಂತೂ ಮುಂಗಾರು ಮಳೆ ಶುರುವಾಯಿತು! – ರಾಜ್ಯದ ವಿವಿಧೆಡೆ ಮಳೆ: ಮಳೆಗೆ ಇಬ್ಬರು ಬಲಿ! – ಮುಂಗಾರು ಬಹುತೇಕ ಫಿಕ್ಸ್: ಜನರಲ್ಲಿ ಹೊಸ ಭರವಸೆ NAMMUR EXPRESS NEWS ಬೆಂಗಳೂರು: ರಾಜ್ಯದ ಕರಾವಳಿ, ಮಲೆನಾಡು ಸೇರಿ ಬಾಗಲಕೋಟೆ, ಹಾವೇರಿ, ವಿಜಯನಗರ, ಗದಗ, ರಾಮನಗರ, ಕಲ್ಯಾಣ ಕರ್ನಾಟಕದ ಕಲಬುರಗಿ, ಯಾದಗಿರಿ, ಬೀದರ್, ಕೊಪ್ಪಳ, ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಶನಿವಾರ ಮಳೆಯಾಗಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಸಿಡಿಲಿಗೆ ರೈತರೊಬ್ಬರು ಮೃತಪಟ್ಟಿದ್ದು, ಮತ್ತೊಬ್ಬರಿಗೆ ಗಾಯವಾಗಿದೆ. ಇನ್ನು ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿ ಮಳೆ ಕಾರಣ ವಿದ್ಯುತ್ ತಂತಿ ತಗುಲಿ ಮಹಿಳೆ ಮೃತಪಟ್ಟಿದ್ದಾಳೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಆಲಗುಂಡಿ ಬಿ.ಕೆ. ಗ್ರಾಮದಲ್ಲಿ ಶನಿವಾರ ಸಿಡಿಲು ಬಡಿದು ರೈತ ಬಸಪ್ಪ ಮಾದರ (36) ಎಂಬುವರು ಮೃತಪಟ್ಟಿದ್ದಾರೆ. ವಿಠಲ ಮಾದರ ಎಂಬುವರಿಗೆ ಗಾಯವಾಗಿದೆ. ಬೆಳಗಾವಿ, ಹಾವೇರಿ, ಗದಗ, ವಿಜಯನಗರ ಜಿಲ್ಲೆಯ ವಿವಿಧೆಡೆ ಮಳೆಯಾಗಿದೆ. ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ರಾಮನಗರ, ತುಮಕೂರು ಜಿಲ್ಲೆಯಲ್ಲೂ ಮಳೆ ಆಗಮನವಾಗಿದೆ. ಕಲ್ಯಾಣ ಕರ್ನಾಟಕ ಭಾಗದ…
ಪತ್ನಿಯ ಪ್ರಿಯಕರನ ಕತ್ತು ಸೀಳಿ ರಕ್ತ ಕುಡಿದ ಪತಿ.! – ಪತ್ನಿ ಜತೆ ಅಕ್ರಮ ಸಂಬಂಧಕ್ಕೆ ಪ್ರತೀಕಾರ – ಪೊಲೀಸ್ ಠಾಣೆಯಲ್ಲೇ ಸಾವಿಗೆ ಶರಣಾದ ಆರೋಪಿ: ಇಬ್ಬರು ಪೊಲೀಸರು ಅಮಾನತು NAMMUR EXPRESS NEWS ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕ್ರೂರ ಹತ್ಯೆ ಯತ್ನವೊಂದು ನಡೆದಿದೆ. ವ್ಯಕ್ತಿಯೋರ್ವನ ಕತ್ತು ಸೀಳಿ ರಕ್ತ ಕುಡಿದ ನರಹಂತಕ ಕೃತ್ಯವು ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲೂಕಿನ ಸಿದ್ದೇಪಲ್ಲಿ ಕ್ರಾಸ್ ಬಳಿ ನಡೆದಿದೆ. ಕತ್ತು ಸೀಳಲ್ಪಟ್ಟ ಹಿನ್ನೆಲೆಯಲ್ಲಿ ಒದ್ದಾಡುತ್ತಿದ್ದ ವ್ಯಕ್ತಿಯ ರಕ್ತವನ್ನು ಹೀರಿ ಕ್ರೌರ್ಯ ಮೆರೆದಿದ್ದಾನೆ. ಆ ಕುರಿತ ವಿಡಿಯೋ ವೈರಲ್ ಆಗುತ್ತಿದ್ದಂತೆ ಕತ್ತು ಸೀಳಿ ವ್ಯಕ್ತಿ ಪರಾರಿಯಾಗಿ ತಲೆಮರೆಸಿಕೊಂಡಿದ್ದಾನೆ. ರಕ್ತ ಹೀರಿದ ವ್ಯಕ್ತಿ ಚಿಂತಾಮಣಿಯ ಬಟ್ಲಹಳ್ಳಿ ಗ್ರಾಮದ ನಿವಾಸಿ ವಿಜಯ್ ಎಂದು ಮತ್ತು ಕತ್ತು ಸೀಳಲ್ಪಟ್ಟು ಒದ್ದಾಡುತ್ತಿದ್ದ ವ್ಯಕ್ತಿ ಚೇಳೂರು ತಾಲೂಕಿನ ಮಾಡೇಂಪಲ್ಲಿ ನಿವಾಸಿ ಮಾರೇಶ್ ಎಂದು ಗುರುತಿಸಲಾಗಿದೆ. ಹಲ್ಲೆಗೊಳಗಾದ ವ್ಯಕ್ತಿ ಮಾರೇಶ್ ವಿಜಯ್ ಪತ್ನಿ ಮಾಲಾ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು.ಈ ಹಿನ್ನೆಲೆಯಲ್ಲಿ…
ಟಿವಿ ವಿಚಾರಕ್ಕೆ ಗಂಡ ಹೆಂಡತಿ ಗಲಾಟೆ: ಬಾವಿಗೆ ಹಾರಿ ಇಬ್ಬರು ಸಾವು! – ಕಾರ್ಕಳದಲ್ಲಿ ನಡೆದ ಘಟನೆ: ಇಬ್ಬರು ಮಕ್ಕಳು ಅನಾಥ – ಮೂಡಿಗೆರೆಯಲ್ಲಿ ಬಸ್ಸಿಗೆ ಅಡ್ಡ ನಿಂತ ಕಾಡಾನೆ! – ಯುವತಿಯರ ಸ್ನಾನ ದೃಶ್ಯ ಸೆರೆ: ಕಾಮುಕ ಅರೆಸ್ಟ್! NAMMUR EXPRESS NEWS ಕಾರ್ಕಳ: ಟಿವಿ ವಿಚಾರಕ್ಕಾಗಿ ದಂಪತಿಗಳ ಮಧ್ಯೆ ಜಗಳವಾಗಿ ಸಾವಿನಲ್ಲಿ ಅಂತ್ಯ ಕಂಡಿರುವ ಘಟನೆ ಜೂ. 25ರಂದು ಕಾರ್ಕಳ ತಾಲೂಕು ನಲ್ಲೂರು ಎಂಬಲ್ಲಿ ನಡೆದಿದೆ. ಮೃತಪಟ್ಟ ದಂಪತಿಗಳು ಯಲ್ಲಾಪುರ ಮೂಲದವರು ಎಂದು ತಿಳಿದು ಬಂದಿದೆ. ಇಮ್ಯಾನುಲ್ ಸಿದ್ದಿ (40) ಹಾಗೂ ಯಶೋಧಾ (32) ಎಂಬವರೇ ಸಾವಿಗೀಡಾದ ದಂಪತಿ. ಭಾನುವಾರ ಬೆಳಿಗ್ಗೆ ಟಿವಿ ವಿಚಾರಕ್ಕೆ ಸಂಬಂಧಿಸಿದಂತೆ ದಂಪತಿಗಳ ಮಧ್ಯೆ ಜಗಳವಾಗಿದ್ದು, ಈ ವೇಳೆ ಯಶೋಧಾ ತೋಟದಲ್ಲಿದ್ದ ಬಾವಿಗೆ ಹಾರಿದರು. ಯಶೋಧಾರನ್ನು ರಕ್ಷಿಸಲು ತೆರಳಿದ್ದ ಪತಿ ಇಮ್ಯಾನುಲ್ ಕೂಡ ನೀರುಪಾಲಾದವರು. ಕಳೆದ ಎರಡು ವರ್ಷಗಳಿಂದ ಇಮ್ಯಾನುಲ್, ಯಶೋಧಾ ದಂಪತಿ ನಲ್ಲೂರಿನ ತೋಟವೊಂದರಲ್ಲಿ ಕೆಲಸಕ್ಕಿದ್ದರು. ದಂಪತಿ ಸಾವಿನಿಂದ ಇದೀಗ 10 ವರ್ಷದ ಬಾಲಕ ಹಾಗೂ…
ಹುಡುಗಿಯಿಂದ ಅಧಿಕಾರಿಯ ಹನಿ ಟ್ರಾಪ್ ಕೇಸ್!? – ಅಧಿಕಾರಿಯನ್ನೇ ಖೆಡ್ದಾಕ್ಕೆ ಬೀಳಿಸಿತ್ತಾ ಹನಿ ಟ್ರಾಪ್ ಗ್ಯಾಂಗ್?! – ತೀರ್ಥಹಳ್ಳಿ ಠಾಣೆ ಮೆಟ್ಟಿಲೇರಿದ್ಯಾ ಪ್ರಕರಣ? – ಗುಸು ಗುಸು ಸುದ್ದಿ: ಏನಿದು ಪ್ರಕರಣ? NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಅಶ್ಲೀಲ ವಿಡಿಯೋ, ವೇಶ್ಯಾವಾಟಿಕೆ ಜಾಲ ಬಯಲು ಬಳಿಕ ಇದೀಗ ಮತ್ತೊಂದು ಗುಸು ಗುಸು ಸುದ್ದಿ ಕೇಳಿ ಬರುತ್ತಿದೆ. ತೀರ್ಥಹಳ್ಳಿ ತಾಲೂಕಿನ ಪ್ರತಿಷ್ಠಿತ ಅಧಿಕಾರಿಯೊಬ್ಬರನ್ನು ಹನಿ ಟ್ರಾಪ್ ಮಾಡಿ ಬೆದರಿಕೆ ಹಾಕಿರುವ ಬಗ್ಗೆ ದೂರೊಂದು ದಾಖಲಾಗುವ ಹಂತಕ್ಕೆ ಬಂದಿದೆ. ಆದರೆ ಪೊಲೀಸ್ ಠಾಣೆ ಮೆಟ್ಟಿಲೇರಲು ಈ ಪ್ರಕರಣಕ್ಕೆ ಕೆಲವು ಪ್ರಭಾವಿಗಳು ಅಡ್ಡಗಾಲು ಹಾಕುತ್ತಿದ್ದಾರೆ ಎನ್ನಲಾಗಿದೆ. ಇಬ್ಬರು ಯುವತಿಯರು, ಗ್ಯಾಂಗ್, ಅಧಿಕಾರಿ ನಡುವಿನ ಹನಿ ಹನಿ ಕಹಾನಿ ಈಗ ಭಾರೀ ಸುದ್ದಿಯಲ್ಲಿದೆ. ಒಂದು ಹಂತಕ್ಕೆ 15 ಲಕ್ಷ ಹಣಕ್ಕೆ ಈ ಪ್ರಕರಣವನ್ನು ಆರೋಪಿಗಳು ಡೀಲ್ ಮಾಡಿದ್ದರು ಎಂದು ಹೇಳಲಾಗುತ್ತಿದೆ. ಸಾರ್ವಜನಿಕ ಚರ್ಚೆಯ ಪ್ರಕಾರ ಈಗಾಗಲೇ ಬೆಜ್ಜವಳ್ಳಿ ಸಮೀಪದ ಯುವತಿಯೊಬ್ಬಳನ್ನು ತನಿಖೆಗೆ ಕರೆತರಲಾಗಿದೆ ಎಂದು ಹೇಳಲಾಗಿದೆ.…
ಸೇನೆ ಸೇರಲು ಈಗ ಯುವತಿಯರಿಗೂ ಅವಕಾಶ! – ಏನಿದು ಯೋಜನೆ? ಅಗ್ನಿವೀರ್ ನೇಮಕಾತಿಯಲ್ಲಿ ಯುವತಿಯರು ಹಾಜರ್ – ದೇಶದ ಹಲವೆಡೆ ಯುವತಿಯರ ನೇಮಕಾತಿ? NAMMUR EXPRESS NEWS ಭಾರತ ಮುಂದುವರಿಯುತ್ತಿದೆ. ಎಲ್ಲಾ ಕ್ಷೇತ್ರದಲ್ಲೂ ಪುರುಷರು ಮತ್ತು ಮಹಿಳೆಯರು ಸಮಾನವಾಗಿ ಕೆಲಸ ಮಾಡುತ್ತಿದ್ದಾರೆ. ಇದೀಗ ಪೊಲೀಸ್ ಇಲಾಖೆ, ಆಡಳಿತ ವಲಯ, ರಾಜಕೀಯ ವಲಯದಲ್ಲೂ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ಈ ನಡುವೆ ಉತ್ತರಾಖಂಡದಲ್ಲಿ ಅಗ್ನಿವೀರ್ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಇಲ್ಲಿ ಹೆಣ್ಣು ಮಕ್ಕಳಿಗೂ ಸೇನೆ ಸೇರುವ ಅವಕಾಶ ಸಿಗಲಿದೆ. ಹೌದು, ಇಲ್ಲಿ ಹೆಣ್ಣು ಮಕ್ಕಳಿಗೂ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಹೆಣ್ಣುಮಕ್ಕಳು ಆರ್ಮಿ ಪೊಲೀಸ್‌ಗೆ ಆಯ್ಕೆಯಾಗುವ ಹೆಮ್ಮೆಯ ಅವಕಾಶಗಳನ್ನೂ ಪಡೆಯಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಲಖನೌದಲ್ಲಿ ಮಹಿಳಾ ಸೇನಾ ಪೊಲೀಸ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ನವೆಂಬರ್ ತಿಂಗಳಲ್ಲಿ ನಡೆಸಲಾಗುವುದು ಎಂದು ಅವರು ಹೇಳಿದರು. ದೇಶದ ಬಹುತೇಕ ಕಡೆ ಈಗ ಮಹಿಳಾ ಅಭ್ಯರ್ಥಿಗಳನ್ನು ಸೇನೆಗೆ ಸೇರಿಸಿಕೊಳ್ಳುವ ಪ್ರಕ್ರಿಯೆ ಶುರುವಾಗಿದೆ. ಇನ್ಮುಂದೆ ಹೆಣ್ಣು ಮಕ್ಕಳು ಕೂಡ ದೇಶ ಸೇವೆಯಲ್ಲಿ ಪುರುಷರಷ್ಟೇ…