Categories
ಇತರೆ ಸುದ್ದಿ

ಕುಳ್ಳನೆಂದು ಹುಡುಗಿಯ ತಿರಸ್ಕಾರ: ಎತ್ತರವಾಗಲು 66 ಲಕ್ಷ ಖರ್ಚು ಮಾಡಿದ ಭೂಪ!

ಕುಳ್ಳನೆಂದು ಹುಡುಗಿಯ ತಿರಸ್ಕಾರ: ಎತ್ತರವಾಗಲು 66 ಲಕ್ಷ ಖರ್ಚು ಮಾಡಿದ ಭೂಪ!
– 21 ವರ್ಷದ ಯುವಕನ ಸಾಹಸ ಏನು?
– ಕಾಲಿನ ಮೂಳೆ ಕತ್ತರಿಸಿ ರಾಡ್ ಹಾಕಿಸಿಕೊಂಡ!

NAMMUR EXPRESS NEWS
ಕುಳ್ಳನಾಗಿದ್ದು ಹುಡುಗಿಯರಿಂದ ತಿರಸ್ಕಾರಗೊಂಡ ಯುವಕ ತನ್ನ ಎತ್ತರ ಹೆಚ್ಚಿಸಿಕೊಳ್ಳಲು ಬರೋಬ್ಬರಿ 66 ಲಕ್ಷ ಖಾಲಿ ಮಾಡಿದ್ದಾನೆ.  ಜಾರ್ಜಿಯಾದ ನೌಕಾಪಡೆಯಲ್ಲಿರುವ 21 ವರ್ಷದ ಡಿನೈಲ್ ಸೈಗರ್ಸ್‌ಗೆ ಕುಳ್ಳನೆಂಬ ಕಾರಣಕ್ಕೆ ಅನೇಕ ಹುಡುಗಿಯರಿಂದ ತಿರಸ್ಕರಿಸಲ್ಪಟ್ಟನು. ಇದರಿಂದ ಬೇಸತ್ತು ಈತ ತನ್ನ ಎತ್ತರವನ್ನು ಹೆಚ್ಚಿಸುವ ಶಸ್ತ್ರಚಿಕಿತ್ಸೆಗೆ 66 ಲಕ್ಷ ರೂ. ಖರ್ಚು ಮಾಡುವ ಮೂಲಕವಾಗಿ ಸುದ್ದಿಯಾಗಿದ್ದಾನೆ.

ಮೊದಲು 5.5 ಅಡಿ ಎತ್ತರ ಇದ್ದ ಡಿನೈಲ್ ಸೈಗರ್ಸ್ ಶಸ್ತ್ರಚಿಕಿತ್ಸೆ ಬಳಿಕ ಎತ್ರವನ್ನು 6 ಅಡಿಗೆ ಹೆಚ್ಚಿಸಿದ್ದಾನೆ. ಇದಕ್ಕಾಗಿ ಸುಮಾರು 66 ಲಕ್ಷ ರೂ. ಹಣವನ್ನು ಖರ್ಚು ಮಾಡಿದ್ದಾನೆ. ಆತನ ಎರಡೂ ಕಾಲುಗಳ ಮೂಳೆಯನ್ನು ಅರ್ಧದಷ್ಟು ಕತ್ತರಿಸಿ ರಾಡ್ ಹಾಕಲಾಗಿದೆ. 90 ದಿನಗಳಲ್ಲಿ ಹೊಸ ಮೂಳೆಯು ಬೆಳೆದ ಬಳಿಕ ರಾಡ್ ಅನ್ನು ತೆಗೆಯಲಾಗುತ್ತದೆ. ಒಟ್ಟಾರೆ ಈ ಚಿಕಿತ್ಸೆಯ ಅವಧಿ ಒಂದು ವರ್ಷ. ಆದರೂ ಮೊದಲಿನಂತೆ ಚಟುವಟಿಕೆಯಿಂದ ಇರಲು ಪೂರಕವಾದ ವ್ಯಾಯಾಮ ಮಾಡಬೇಕು.ಇದಕ್ಕೆ ಸಂಬಧಿಸಿದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ : ಗೃಹಜ್ಯೋತಿ ಅರ್ಜಿ ನೋಂದಣಿಗೆ ಹೊಸ ಲಿಂಕ್!

HOW TO APPLY : NEET-UG COUNSELLING 2023

Tunga college thirthahalli

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.