ಗಾಜನೂರು ಬಳಿ ಬಸ್, ಕಾರು ಆಕ್ಸಿಡೆಂಟ್! – ಕಾರಿನ ಅತೀ ವೇಗ ಕಾರಣ: ಕಾರು ಜಖಂ: ಮೂವರಿಗೆ ಗಾಯ – ಮಳೆಗಾಲ ವಾಹನ ನಿಧಾನ ಚಲಿಸಿ ಹುಷಾರ್ – ಕದ್ದ ಕಾರು ರಸ್ತೆ ಬದಿ ಬಿಟ್ಟು ಹೋದ ಕಳ್ಳರು! NAMMUR EXPRESS NEWS ತೀರ್ಥಹಳ್ಳಿ ಶಿವಮೊಗ್ಗ ರಸ್ತೆಯ ಗಾಜನೂರಿನ ಬಳಿ ಕಾರು ಮತ್ತು ಬಸ್ ನಡುವೆ ರಸ್ತೆ ಅಪಘಾತ ನಡೆದಿದ್ದು ಕಾರಿನಲ್ಲಿದ್ದ ಮೂವರಿಗೆ ಗಾಯಗಳಾಗಿವೆ. ಹಣಗೇರಮ್ಮ ದೇವಿ ದೇವಸ್ಥಾನ, ಮೊರಾರ್ಜಿ ಶಾಲೆ ಹತ್ತಿರ ಘಟನೆ ನಡೆದಿದ್ದು ಕಾರಿನವನು ಪಲ್ಟಿಯಾಗಿ ಬಂದು ಬಸ್ ಗೆ ಹೊಡೆಯಲಾಗಿದೆ. ಒಂದು ವೇಳೆ ಬಸ್ ಸ್ವಲ್ಪ ಸ್ಪೀಡ್ ಇದ್ದಿದ್ರೂ ಭಾರೀ ಅನಾಹುತ ಆಗುತ್ತಿತ್ತು. ಬೆಂಗಳೂರಿನಿಂದ ಸಕ್ರೆಬೈಲಿನ ಕಡೆ ಹೋಗುತ್ತಿದ್ದ ಕಾರು ಗಾಜನೂರಿನ ಬಳಿ ಕಾರೊಂದನ್ನ ಓವರ್ ಟೇಕ್ ಮಾಡಲು ಹೋಗಿ ಕಾರಿನ ನಿಯಂತ್ರಣ ತಪ್ಪಿದೆ. ಎದುರಿನಿಂದ ಬರುತ್ತಿದ್ದ ಬಸ್ ಗೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ನಾಲ್ವರಲ್ಲಿ ಓರ್ವ ಮೆಗ್ಗಾನ್ ಗೆ ದಾಖಲಾಗಿದ್ದಾರೆ. ಕದ್ದ ಕಾರು ರಸ್ತೆ…
Author: Nammur Express Admin
ನಿಧಾನಕ್ಕೆ ಸೆಟ್ ಆಗುತ್ತಿದೆ ಮುಂಗಾರು! – ಕರಾವಳಿಯಲ್ಲಿ 2 ದಿನ ಭಾರೀ ಮಳೆ! – ಆರೆಂಜ್ ಅಲರ್ಟ್ ಘೋಷಣೆ – ರಾಜ್ಯದ ಹಲವೆಡೆ ಮಳೆ ಶುರು NAMMUR EXPRESS NEWS ಕರಾವಳಿ : ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮುಂಗಾರು ಚುರುಕಾಗಿದ್ದು ಮುಂದಿನ ದಿನಗಳಲ್ಲಿ ವರುಣನ ಆರ್ಭಟ ಜೋರಾಗಲಿದ್ದು, ಆರೆಂಜ್ ಅಲರ್ಟ್ ಹಾಗೂ ಯೆಲ್ಲೋ ಅಲರ್ಟ್ ಅನ್ನು ಭಾರತೀಯ ಹವಾಮಾನ ಇಲಾಖೆ ಘೋಷಿಸಿದೆ. ಉತ್ತರ ಒಳನಾಡಿನಲ್ಲಿ ವರುಣನ ಆಗಮನವಿಲ್ಲದೇ ಕರಾವಳಿ ಜಿಲ್ಲೆಗಳಲ್ಲಿ ಆರ್ಭಟ ಜೋರಾಗಿದ್ದು, ಮುಂದಿನ ಐದು ದಿನಗಳ ಕಾಲ ಮಳೆರಾಯನ ಆರ್ಭಟ ಇನ್ನಷ್ಟು ಜೋರಾಗಲಿದೆ. ವಾಡಿಕೆಯಂತೆ ಈ ಬಾರೀ ಕರ್ನಾಟಕದಲ್ಲಿ ಮುಂಗಾರು ಮಳೆ ಆರಂಭದಲ್ಲಿ ವಿಳಂಬವಾಗಿದ್ದರೂ, ಈಗ ರಾಜ್ಯದಲ್ಲಿ ಚುರುಗೊಂಡಿರುತ್ತದೆ. ಹೀಗಾಗಿ ಕರಾವಳಿ ಭಾಗಗಳಲ್ಲಿ ಮಳೆ ವಿಳಂಬದಿಂದಾಗಿ ಕೃಷಿ ಚಟುವಟಿಕೆಗಳು ತಡವಾಗಿ ಆರಂಭಗೊಂಡಿದೆ. ಆದರೆ ಉತ್ತರ ಕರ್ನಾಟಕ ಸೇರಿದಂತೆ ಒಳನಾಡಿನ ಜಿಲ್ಲೆಗಳಿಗೆ ಮಳೆಯ ಅವಶ್ಯಕತೆ ತುಂಬಾ ಇರುತ್ತದೆ. ಜೂನ್ 24 ರಿಂದ ಜೂನ್ 28ರವರೆಗೂ ಕರಾವಳಿಯ ಉತ್ತರ ಕನ್ನಡ ಜಿಲ್ಲೆಗೆ ಎರಡು…
ಕಾರ್ಕಳ ತಾಲೂಕಿನ 27 ಗ್ರಾ. ಪಂ. ಅಧ್ಯಕ್ಷ – ಉಪಾಧ್ಯಕ್ಷತೆಗೆ ಮೀಸಲಾತಿ ಪ್ರಕಟ: ಯಾರಿಗೆ ಸ್ಥಾನ? NAMMUR EXPRESS NEWS ಕಾರ್ಕಳ: ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆ 2020ಕ್ಕೆ ಸಂಬಂಧಿಸಿ 2ನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗಳ ಚುನಾವಣೆ ಕುರಿತು ಮೀಸಲಾತಿ ಪ್ರಕಟವಾಗಿದೆ. ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್,ಅಪರಜಿಲ್ಲಾಧಿಕಾರಿ ಬೀಣಾ ಬಿ.ಎಂ, ತಹಶೀಲ್ದಾರ್ ಅನಂತಶಂಕರ್.ಬಿ. ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಗುರುದತ್, ಎನ್ ಐ.ಸಿ ಮಂಜುನಾಥ, ಕಂದಾಯ ನಿರೀಕ್ಷಕ ಶಿವಪ್ರಸಾದ್, ಎಲ್ಲಾ ಗ್ರಾಮ ಪಂಚಾಯತಿಗಳ ಗ್ರಾಮಾಭಿವ್ರದ್ದಿ ಅಧಿಕಾರಿಗಳು ಉಪಸ್ಥಿತರಿದ್ದರು. ಯಾವ ಗ್ರಾಮ ಪಂಚಾಯತ್ ಯಾರಿಗೆ? ಕಡ್ತಲ : ಅಧ್ಯಕ್ಷ – ಹಿಂದುಳಿದ ವರ್ಗ (ಬಿ) , ಉಪಾಧ್ಯಕ್ಷ – ಹಿಂದುಳಿದ ವರ್ಗ (ಎ) ಮಹಿಳೆ ಮರ್ಣೆ : ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ – ಹಿಂದುಳಿದ (ಬಿ) ಮಹಿಳೆ ಹಿರ್ಗಾನ : ಅಧ್ಯಕ್ಷ – ಹಿಂದುಳಿದ ವರ್ಗ (ಎ) ಮಹಿಳೆ ಉಪಾಧ್ಯಕ್ಷ – ಸಾಮಾನ್ಯ ಶಿರ್ಲಾಲು : ಅಧ್ಯಕ್ಷ – ಹಿಂದುಳಿದ ವರ್ಗ (ಎ)…
ಶೀಘ್ರದಲ್ಲಿ ಜಿಪಂ, ತಾಪಂ ಚುನಾವಣೆ!? ಚುನಾವಣೆ ತಯಾರಿ ಮಾಡಿದ ಚುನಾವಣೆ ಆಯೋಗ ಎಲ್ಲಾ ಪಕ್ಷದಿಂದಲೂ ಆಕಾಂಕ್ಷಿಗಳ ಸಿದ್ಧತೆ ಆಗಸ್ಟ್ ಅಥವಾ ಸೆಪ್ಟೆಂಬರ್ ಅಲ್ಲಿ ಚುನಾವಣೆ NAMMUR EXPRESS NEWS ಬೆಂಗಳೂರು: ರಾಜ್ಯದ ಪ್ರತಿಷ್ಠಿತ ಚುನಾವಣಾ ಆಯೋಗ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗೆ ಸಿದ್ಧತೆ ಆರಂಭಿಸಿದೆ. ಇನ್ನು ಎಲ್ಲಾ ಕಡೆ ಲೋಕಸಭೆ ಜತೆಗೆ ಮತ್ತೊಂದು ಚುನಾವಣೆ ಕಣ ರಂಗೇರಲಿದೆ. ಮತಪಟ್ಟಿ, ಮತ ಕೇಂದ್ರಗಳ ತಯಾರಿ ಮಾಡಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಆಯೋಗ ಸೂಚನೆಯನ್ನು ನೀಡಿದೆ. ಇದರಿಂದ ಶೀಘ್ರ ಚುನಾವಣೆ ನಡೆಯುವ ಇದೆ ಎನ್ನಲಾಗುತ್ತಿದೆ. ಈ ಸಂಬಂಧ ಸುತ್ತೋಲೆ ಹೊರಡಿಸಿರುವ ಚುನಾವಣಾ ಆಯೋಗ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿ ಆಯೋಗಕ್ಕೆ ವರದಿ ಸಲ್ಲಿಸುವಂತೆ ಸೂಚಿಸಿದೆ. ಆಕ್ಷೇಪಣೆಗಳನ್ನು ಸಲ್ಲಿಸಲು ಕೊನೆಯ ಜುಲೈ 4 ಕೊನೆಯ ದಿನ. 7ರ ಒಳಗೆ ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಲು ಕೊನೆಯ ದಿನ. ಆದರೆ ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಲು ದಿನಾಂಕ ನಿಗದಿಪಡಿಸಿಲ್ಲ. ಹೊಸ ಸರ್ಕಾರ ಬಂತು!: ಈಗಷ್ಟೇ ವಿಧಾನಸಭಾ ಚುನಾವಣೆ ಮುಗಿದು ನೂತನ…
ಬಸ್ ಪ್ರಯಾಣಿಕನಿಗೆ ತೀರ್ಥಹಳ್ಳಿಯಲ್ಲಿ ಹೃದಯಾಘಾತ! ಅಪರಿಚಿತನ ಜೀವ ಉಳಿಸಿದ ತೀರ್ಥಹಳ್ಳಿ ಜನ ಬಸ್ ಸಿಬ್ಬಂದಿ, ಆಂಬುಲೆನ್ಸ್ ಚಾಲಕರ ಸೇವೆ NAMMUR EXPRESS NEWS ತೀರ್ಥಹಳ್ಳಿ: ಬಸ್ಸಿನಲ್ಲಿದ್ದ ಪ್ರಯಾಣಿಕರೊಬ್ಬರಿಗೆ ತೀರ್ಥಹಳ್ಳಿಯಲ್ಲಿ ಹೃದಯಾಘಾತವಾದ ಘಟನೆ ನಡೆದಿದ್ದು ಆತನನ್ನು ಬದುಕಿಸಲು ತೀರ್ಥಹಳ್ಳಿಗರು ಹೋರಾಟ ನಡೆಸಿದ್ದಾರೆ. ಶುಕ್ರವಾರ ಶಿವಮೊಗ್ಗ-ಮಂಗಳೂರಿಗೆ ದುರ್ಗಾಂಬಾ ಬಸ್ ಹೊರಟಿತ್ತು. ಇನ್ನೇನು ತೀರ್ಥಹಳ್ಳಿ ತಲುಪುವ ಹೊತ್ತಿಗೆ ಬಸ್‌ನಲ್ಲಿದ್ದ ಪ್ರಯಾಣಿಕರೊಬ್ಬರಿಗೆ ಹೃದಯಾಘಾತವಾಗಿದೆ. ಇದನ್ನ ಗಮನಿಸಿದ ಕಂಡಕ್ಟರ್, ಡ್ರೈವರ್‌ಗೆ ವಿಷಯ ತಿಳಿಸಿದ್ದಾನೆ. ತಕ್ಷಣ ಚಾಲಕ ಬಸ್‌ನ್ನ ತೀರ್ಥಹಳ್ಳಿ ಜೆಸಿ ಆಸ್ಪತ್ರೆ ಕಡೆಗೆ ಚಲಾಯಿಸಿದ್ದಾನೆ. ಸಮಯಕ್ಕೆ ಸರಿಯಾಗಿ ಬಸ್‌ನ್ನ ಆಸ್ಪತ್ರೆಗೆ ಚಲಾಯಿಸಿದ ಡ್ರೈವರ್ ಹಾಗೂ ಕಂಡಕ್ಟರ್, ಅಲ್ಲಿ ಪ್ರಯಾಣಿಕನನ್ನ ದಾಖಲಿಸಿ, ಮುಂದಕ್ಕೆ ಹೋಗಿದ್ದಾರೆ. ಆ್ಯಂಬುಲೆನ್ಸ್ ಡ್ರೈವರ್‌ಗಳ ಮಾನವೀಯತೆ: ಇನ್ನೂ ಹೃದಯಾಘಾತಕ್ಕೊಳಗಾದ ಪ್ರಯಾಣಿಕನ ಪರಿಸ್ಥಿತಿ ಗಂಭೀರವಾಗಿತ್ತು. ಪ್ರಾಥಮಿಕ ಚಿಕಿತ್ಸೆ ನೀಡಿದರೂ ಸಹ, ತುರ್ತಾಗಿ ಹೆಚ್ಚಿನ ಟೆಂಟ್ ಒದಗಿಸುವ ಅಗತ್ಯವಿತ್ತು. ಆಗ ಅಲ್ಲಿದ್ದ ಆಂಬುಲೆನ್ಸ್ ಡ್ರೈವರ್ ರಂಜಿತ್, ರಹಮತ್, ಪವನ್‌ರವರು ಪ್ರಯಾಣಿಕನನ್ನು ಶಿವಮೊಗ್ಗದ ಆಸ್ಪತ್ರೆಗೆ ಶಿಫ್ಟ್ ಮಾಡುವ ಜವಾಬ್ದಾರಿ ಹೊತ್ತಿದ್ದಾರೆ, ಕೆಲವೇ…
ಮಾನಸಿಕ ಖಿನ್ನತೆಗೊಳಗಾಗಿದ್ದ ಯುವಕನ ಭೇಟಿ ಮಾಡಿದ ನಟ ದರ್ಶನ್! – ಹೊಸನಗರ ತಾಲೂಕಿನ ಯುವಕನಿಗೆ ಡಿ ಬಾಸ್ ಜೋಷ್ – ಏನಿದು ದರ್ಶನ್ ಹಾಗೂ ಅಭಿಮಾನಿ ಕಥೆ? NAMMUR EXPRESS NEWS ಹೊಸನಗರ: ಚಿತ್ರ ನಟ ದರ್ಶನ್ ತೂಗುದೀಪ್ ಅವರನ್ನು ನೋಡಬೇಕು ಎಂದು ಹಗಲಿರುಳು ಪರಿತಪ್ಪಿಸುತ್ತಾ ಖಿನ್ನತೆಗೊಳಗಾಗಿದ್ದ ಮಲೆನಾಡಿನ ಕುಗ್ರಾಮ ಮತ್ತಿಕೊಪ್ಪದ ಯುವಕನನ್ನು ದರ್ಶನ್ ಶುಕ್ರವಾರ ಭೇಟಿಯಾಗಿದ್ದಾರೆ. ಚಿಕ್ಕಂದಿನಿಂದಲೇ ದರ್ಶನ್ ಬಗ್ಗೆ ಅಪಾರ ಅಭಿಮಾನವನ್ನಿಟ್ಟು ಕೊಂಡಿರುವ ಸುದೀಪ ದರ್ಶನ್ ರವರನ್ನು ಹಲವು ಬಾರಿ ಭೇಟಿ ಮಾಡಲು ಪ್ರಯತ್ನಿಸಿ ವಿಫಲನಾಗಿ ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದ ಎನ್ನಲಾಗಿತ್ತು. ಈ ಹಿನ್ನಲೆಯಲ್ಲಿ ಚಿತ್ರನಟ ದರ್ಶನ್ ಶುಕ್ರವಾರ ಯುವಕನನ್ನು ಮೈಸೂರಿಗೆ ಕರೆಸಿಕೊಂಡು ಭೇಟಿಯಾಗಿ ಧೈರ್ಯ ತುಂಬುವ ಮಾತುಗಳನ್ನಾಡುವ ಮೂಲಕ ಯುವಕನಲ್ಲಿ ಭರವಸೆ ಮೂಡಿಸಿದ್ದಾರೆ. ಚಿತ್ರ ನಟ ದರ್ಶನ್ ನಟಿಸಿರುವ ಹಲವು ಚಿತ್ರಗಳನ್ನು ನೋಡಿ ಅಕರ್ಷಿತನಾದ ಹೊಸನಗರ ತಾಲ್ಲೂಕಿನ ಬೆಳ್ಳೂರು ಗ್ರಾಮ ಪಂಚಾಯಿತ್ ವ್ಯಾಪ್ತಿಯ ಮತ್ತಿಕೊಪ್ಪ ವಾಸಿ ಬಡಕೂಲಿ ಕಾರ್ಮಿಕ ಹಿರಿಯಣ್ಣ ಮತ್ತು ತಾರಾ ಎಂಬುವರ ದ್ವಿತೀಯ ಪುತ್ರ ಇಪ್ಪತ್ನಾಲ್ಕು…
ಮೆಟ್ರೋದಲ್ಲಿ ಕೆಲಸ ಪಡೆಯಬೇಕಾ? ಅರ್ಜಿ ಹಾಕಿ! – ಏನಿದು ಹುದ್ದೆ… ವಿವರ ಇಲ್ಲಿದೆ..! NAMMUR EXPRESS NEWS ಬೆಂಗಳೂರು ನಗರದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅಭ್ಯರ್ಥಿಗಳು ಆನ್‌ಲೈನ್ & ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಜುಲೈ 21, 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಒಟ್ಟು 2 ಜನರಲ್ ಮ್ಯಾನೇಜರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈಗಲೇ ಅರ್ಜಿ ಸಲ್ಲಿಸಿ. ಜುಲೈ 21, 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ವಿದ್ಯಾರ್ಹತೆ: ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಎಂಬಿಎ, HRM/HRD/ಪರ್ಸನಲ್ ಮ್ಯಾನೇಜ್‌ಮೆಂಟ್/ ಇಂಡಸ್ಟ್ರಿಯಲ್ ರಿಲೇಶನ್ಸ್/ ಸೋಷಿಯಲ್ ವರ್ಕ್/ ಲೇಬರ್ ವೆಲ್‌ಫೇರ್ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು. ವಯೋಮಿತಿ: ಬೆಂಗಳೂರು…
ಭಾರತೀಯ ಸೈನಿಕರಿಂದ 4 ಪಾಕ್ ಉಗ್ರರ ಹತ್ಯೆ! – ಗಡಿಯಲಿ ಒಳ ನುಸುಳಲು ಯತ್ನಿಸಿದ ಉಗ್ರರು – ಚಾ.ನಗರ: ಒಂದೇ ಕುಟುಂಬದ ಮೂವರು ನೇಣಿಗೆ – ಶಿಕ್ಷಕನ ಮೇಲೆ ಗುಂಡಿನ ದಾಳಿ ನಡೆಸಿದ ವಿದ್ಯಾರ್ಥಿಗಳು – ಉಡುಪಿ ವಿದ್ಯಾರ್ಥಿನಿ ಸಾವು: ಹೋರಾಟಕ್ಕಿಳಿದ ಜನ – ಕರ್ತವ್ಯದಲ್ಲಿದ್ದ ನಾಲ್ವರು ಪೊಲೀಸರು ಫುಲ್ ಟೈಟಾಗಿ ಜನರ ಜತೆ ಕಿರಿಕ್! NAMMUR EXPRESS NEWS ಕುಪ್ಪಾರ: ಭಾರತ ಗಡಿಯೊಳಗೆ ಒಳ ನುಸುಳಿ ಬರಲು ಯತ್ನಿಸಿದ್ದ ನಾಲ್ವರು ಭಯೋತ್ಪಾದಕರನ್ನು ಭದ್ರತಾ ಪಡೆ ಗುಂಡಿಕ್ಕಿ ಸಾಯಿಸಿದ ಘಟನೆ ಶುಕ್ರವಾರ ನಸುಕಿನ ಹೊತ್ತು ಕುಪ್ಪಾರ ಜಿಲ್ಲೆಯಲ್ಲಿ ನಡೆದಿದೆ. ಪಾಕ್ ಆಕ್ರಮಿತ ಕಾಶ್ಮೀರದಿಂದ ಒಳ ನುಸುಳಲು ಯತ್ನಸಿದ ನಾಲ್ವರು ಉಗ್ರರು ಗುಂಡಿಗೆ ಬಲಿಯಾಗಿದ್ದಾರೆ. ಭದ್ರತಾ ಪಡೆ ಮತ್ತು ಸ್ಥಳೀಯ ಪೊಲೀಸದರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಇದು ಈ ವಾರದಲ್ಲಿ ನಡೆದಿರುವ ಎರಡನೇ ದೊಡ್ಡ ಎನ್‌ಕೌಂಟರ್. ಕೇಂದ್ರ ಗೃಹ ಸಚಿವ ಅಮಿತ್ ಶಾ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಇದೇ…
ಸಮುದ್ರದಲ್ಲಿ ತೇಲಿ ಬಂತು ನೂಡಲ್ಸ್ ಮಾದರಿ ವಸ್ತು! – ಮಲ್ಪೆ ಸೇರಿ ಉಡುಪಿ ಜಿಲ್ಲೆಯ ಸುಮಾರು 15 ಕಿ.ಮೀ. ಕಡಲ ತೀರದಲ್ಲಿ ವಿಚಿತ್ರ ವಸ್ತು ಪತ್ತೆ! – ನಿಧಿಗಾಗಿ ಮಧ್ಯರಾತ್ರಿ ಹುಡುಕಾಟ! – 25 ಅಡಿ ಆಳದ ಗುಂಡಿ ತೆಗೆದ ದುಷ್ಕರ್ಮಿಗಳು ರಾಜ್ಯದಲ್ಲಿ ಎರಡು ಘಟನೆಗಳು ಕುತೂಹಲಕ್ಕೆ ಕಾರಣವಾಗಿವೆ. ಒಂದು, ಮಲ್ಪೆ ಸೇರಿ ಉಡುಪಿ ಜಿಲ್ಲೆಯ ಸುಮಾರು 15 ಕಿ.ಮೀ. ಕಡಲ ತೀರದಲ್ಲಿ ನೂಡಲ್ಸ್ ಹೋಲುವ ವಿಚಿತ್ರ ವಸ್ತು ಪತ್ತೆಯಾಗಿದೆ. ಇನ್ನೊಂದು ಘಟನೆಯಲ್ಲಿ ಚಿಕ್ಕಮಗಳೂರು ತಾಲೂಕಿನ ಕೆಸರಿಕೆ ಗ್ರಾಮದಲ್ಲಿ ನಿಧಿಗಾಗಿ ಹುಡುಕಾಟ ನಡೆದಿದೆ. ನಿಧಿ ಹುಡುಕಿ ಓಡಿ ಹೋದರು!: ನಿಧಿ ಹುಡುಕಲೆಂದು ದುಷ್ಕರ್ಮಿಗಳ ತಂಡವು ಚಿಕ್ಕಮಗಳೂರು ತಾಲೂಕಿನ ಅಣೂರು ಸಮೀಪದ ಕೆಸರಿಕೆ ಗ್ರಾಮದಲ್ಲಿ ನಿಧಿಗಾಗಿ ಮಧ್ಯರಾತ್ರಿ 25 ಅಡಿ ಆಳದ ಗುಂಡಿ ತೆಗೆದಿದೆ. ಉಡುಪಿ ನೋಂದಣಿ ಸಂಖ್ಯೆ ಇರುವ ಎರಡು ಕಾರಿನಲ್ಲಿ ಬಂದಿದ್ದ ನಿಧಿ ಶೋಧದ ತಂಡವು ಕೆಸರಿಕೆ ಗ್ರಾಮದಲ್ಲಿ ಪೂಜೆ ನಡೆಸಿದೆ. ಮಧ್ಯರಾತ್ರಿ ಸುಮಾರು 15 ಅಡಿ ಅಗಲ, 25…
ಕೆಇಬಿ ಸಿಬ್ಬಂದಿ ಎಡವಟ್ಟು: ಅಜ್ಜಿಗೆ ಬಂತು 1 ಲಕ್ಷ ಬಿಲ್! – ಎರಡು ಬಲ್ಪ್ ಉರಿಸಿದ್ದ ಅಜ್ಜಿ: ಬಿಲ್ ಬಂದಿದ್ದು ಹೇಗೆ? – ವಿದ್ಯುತ್ ದರ ನಾವು ಕಾರಣ ಅಲ್ಲ: ಸಚಿವ ಜಾರ್ಜ್ NAMMUR EXPRESS NEWS ಬೆಂಗಳೂರು: ಕೊಪ್ಪಳದ ಭಾಗ್ಯನಗರದಲ್ಲಿ ವಾಸವಾಗಿರುವ ಅಜ್ಜಿಯೊಬ್ಬರಿಗೆ 1 ಲಕ್ಷ ರೂ. ವಿದ್ಯುತ್ ಬಿಲ್ ಬಂದಿದೆ. ಅವರ ಮನೆಯಲ್ಲಿ ಉರಿಯೋದು ಎರಡು ಬಲ್ಫ್ ಮಾತ್ರ. ಪ್ರತಿ ತಿಂಗಳು ರೂ.70-80 ಬರುತ್ತಿದ್ದ ವಿದ್ಯುತ್ ಬಿಲ್ ಈ ತಿಂಗಳು ರೂ.1 ಲಕ್ಷ ರೂ ಬಂದಿದ್ದು ಅಜ್ಜಿ ಆತಂಕಕ್ಕೊಳಗಾಗಿದ್ದಾರೆ. ಆದರೆ ಕೆಇಬಿ ಸಿಬ್ಬಂದಿಯ ಬೇಜವಾಬ್ದಾರಿ ಕೆಲಸದಿಂದ ಬಿಲ್ ಬಂದಿದೆ. ರಾಜ್ಯದ ಹಲವೆಡೆ ಕೂಡ ಇಂತಹ ಪ್ರಕರಣ ಕಂಡು ಬರುತ್ತಿವೆ. ಮೀಟರ್ ರೀಡರ್, ಕೆಈ ಎರಡು ಬಲ್ಪ್ ಉರಿಯುವ ಅಜ್ಜಿ ಮನೆಗೆ ಬಂತು 1 ಲಕ್ಷ ರೂ. ವಿದ್ಯುತ್ ಬಿಲ್ – ಈ ಬಗ್ಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದೇನು? NAMMUR EXPRESS NEWS ಬೆಂಗಳೂರು: ಕೊಪ್ಪಳದ ಭಾಗ್ಯನಗರದಲ್ಲಿ ವಾಸವಾಗಿರುವ…