Categories
ತೀರ್ಥಹಳ್ಳಿ ಶಿವಮೊಗ್ಗ

ಗಾಜನೂರು ಬಳಿ ಬಸ್, ಕಾರು ಆಕ್ಸಿಡೆಂಟ್!

 

ಗಾಜನೂರು ಬಳಿ ಬಸ್, ಕಾರು ಆಕ್ಸಿಡೆಂಟ್!
– ಕಾರಿನ ಅತೀ ವೇಗ ಕಾರಣ: ಕಾರು ಜಖಂ: ಮೂವರಿಗೆ ಗಾಯ
– ಮಳೆಗಾಲ ವಾಹನ ನಿಧಾನ ಚಲಿಸಿ ಹುಷಾರ್
– ಕದ್ದ ಕಾರು ರಸ್ತೆ ಬದಿ ಬಿಟ್ಟು ಹೋದ ಕಳ್ಳರು!

NAMMUR EXPRESS NEWS
ತೀರ್ಥಹಳ್ಳಿ ಶಿವಮೊಗ್ಗ ರಸ್ತೆಯ ಗಾಜನೂರಿನ ಬಳಿ ಕಾರು ಮತ್ತು ಬಸ್ ನಡುವೆ ರಸ್ತೆ ಅಪಘಾತ ನಡೆದಿದ್ದು ಕಾರಿನಲ್ಲಿದ್ದ ಮೂವರಿಗೆ ಗಾಯಗಳಾಗಿವೆ.
ಹಣಗೇರಮ್ಮ ದೇವಿ ದೇವಸ್ಥಾನ, ಮೊರಾರ್ಜಿ ಶಾಲೆ ಹತ್ತಿರ ಘಟನೆ ನಡೆದಿದ್ದು ಕಾರಿನವನು ಪಲ್ಟಿಯಾಗಿ ಬಂದು ಬಸ್ ಗೆ ಹೊಡೆಯಲಾಗಿದೆ. ಒಂದು ವೇಳೆ ಬಸ್ ಸ್ವಲ್ಪ ಸ್ಪೀಡ್ ಇದ್ದಿದ್ರೂ ಭಾರೀ ಅನಾಹುತ ಆಗುತ್ತಿತ್ತು.
ಬೆಂಗಳೂರಿನಿಂದ ಸಕ್ರೆಬೈಲಿನ ಕಡೆ ಹೋಗುತ್ತಿದ್ದ ಕಾರು ಗಾಜನೂರಿನ ಬಳಿ ಕಾರೊಂದನ್ನ ಓವರ್ ಟೇಕ್ ಮಾಡಲು ಹೋಗಿ ಕಾರಿನ ನಿಯಂತ್ರಣ ತಪ್ಪಿದೆ. ಎದುರಿನಿಂದ ಬರುತ್ತಿದ್ದ ಬಸ್ ಗೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ನಾಲ್ವರಲ್ಲಿ ಓರ್ವ ಮೆಗ್ಗಾನ್ ಗೆ ದಾಖಲಾಗಿದ್ದಾರೆ.

ಕದ್ದ ಕಾರು ರಸ್ತೆ ಬದಿ ನಿಲ್ಲಿಸಿ ಹೋದರು!

ತೀರ್ಥಹಳ್ಳಿ ಸೀಬಿನಕೆರೆಯ ಗ್ಯಾರೇಜಿನಿಂದ ಮಾರುತಿ
ರಿಡ್ಜ್ ಕಾರು ಕಳುವು ಪ್ರಕರಣದಲ್ಲಿ ಕಾರು ತೀರ್ಥಹಳ್ಳಿ ತಾಲೂಕಿನ ಗುಡ್ಡೆ ಪಾಲು ಬಳಿ ಪತ್ತೆಯಾಗಿದೆ. ಕಾರನ್ನು ಲಾಕ್ ಮಾಡಿ ಕಳ್ಳರು ರಸ್ತೆ ಬದಿ ನಿಲ್ಲಿಸಿ ಹೋಗಿದ್ದಾರೆ. ವಾಟ್ಸಪ್ ಸಂದೇಶಗಳಲ್ಲಿ ಕಾರು ಕಳ್ಳತನಗಳ ಮಾಹಿತಿ ಪ್ರಕಟವಾಗಿರುವುದರಿಂದ ಹೆದರಿ ಕಾರನ್ನು ಅಲ್ಲಿಯೇ ಕಳ್ಳರು ಹೆದರಿ ಬಿಟ್ಟು ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ತೀರ್ಥಹಳ್ಳಿ ಪೊಲೀಸರು ಪ್ರಕರಣದ ಬಗ್ಗೆ ತನಿಖೆಯನ್ನು ನಡೆಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ತೀರ್ಥಹಳ್ಳಿಯಲ್ಲಿ ಕಾರು ಬೈಕು ಇತರೆ ಕಳ್ಳತನ ಹೆಚ್ಚಾಗಿದ್ದು ಈ ಬಗ್ಗೆ ಪೊಲೀಸ್ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರ ಅಗ್ರಹಿಸಿದ್ದಾರೆ.

ಇದನ್ನೂ ಓದಿ : ಗೃಹಜ್ಯೋತಿ ಅರ್ಜಿ ನೋಂದಣಿಗೆ ಹೊಸ ಲಿಂಕ್!

HOW TO APPLY : NEET-UG COUNSELLING 2023

Tunga college thirthahalli

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.