Author: Nammur Express Admin

ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ ಜಿಲ್ಲಾ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ  ಕಾರ್ಯಕ್ರಮದಲ್ಲೇ 8 ಜನರ ಮೊಬೈಲ್ ಕಳವು NAMMUR EXPRESS NEWS ಶಿವಮೊಗ್ಗ: ಶಿಕ್ಷಣ ಸಚಿವರಾಗಿ ಮೊದಲ ಬಾರಿಗೆ ತವರು ಕ್ಷೇತ್ರ ಶಿವಮೊಗ್ಗಕ್ಕೆ ಆಗಮಿಸಿದ ಮಧು ಬಂಗಾರಪ್ಪನವರಿಗೆ ಜಿಲ್ಲಾ ಕಾಂಗ್ರೆಸ್ ಅದ್ಧೂರಿ ಸ್ವಾಗತ ಮಾಡಿದೆ. ಜೊತೆಗೆ ಈ ಅದ್ದೂರಿ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗಿಯಾಗಿದ್ದರು. ಮಧು ಬಂಗಾರಪ್ಪ ಅವರನ್ನು ಕಾಂಗ್ರೆಸ್ ಪ್ರಮುಖರು ಸನ್ಮಾನಿಸಿದರು. ಭದ್ರಾವತಿಯಿಂದ ಎಂ.ಆರ್.ಎಸ್ ವೃತ್ತದ ಬಳಿ ಜಿಲ್ಲಾ ಕಾಂಗ್ರೆಸ್ ನಾಯಕರು ಅನಾನಸ್ ಹಣ್ಣಿನ ಹಾರ ಹಾಕಿ ಬೈಕ್ ರ್ಯಾಲಿ ಮೂಲಕ ಮಧು ಬಂಗಾರಪ್ಪನವರನ್ನ ಸ್ವಾಗತ ಮಾಡಿ ಕರೆತರಲಾಯಿತು. ವಿದ್ಯಾನಗರದ ಚೌಡಮ್ಮ ಗುಡಿಯ ಬಳಿ ಮಹಿಳೆಯ ಪೂರ್ಣ ಕುಂಬ ಸ್ವಾಗತ ಕೋರಿ ಕ್ರೀನ್ ಮೂಲಕ ಹೂವಿನ ಸ್ವಾಗತ ಕೋರಲಾಯಿತು. ಹೊಳೆ ಬಸ್ ನಿಲ್ದಾಣದ ಬಳಿಯೂ ಹೂವಿನ ಹಾರ ಹಾಕಿ ಸ್ವಾಗತಕೋರಲಾಯಿತು. ನಂತರ ಗೋಪಾಳದ ಲಗಾನ್ ಕಲ್ಯಾಣ ಮಂದಿರದಲ್ಲಿ ಸನ್ಮಾನ ಮತ್ತು ಅಭಿನಂದನಾ ಸಮಾರಂಭ ನಡೆಯಿತು. ನೂತನ ಶಿಕ್ಷಣ ಸಚಿವರಾಗಿ ನೇಮಕಗೊಂಡು ಮೊದಲ ಬಾರಿಗೆ…

Read More

ಜೂ.14ರ ತನಕ ಉಚಿತವಾಗಿ ಅಪ್ ಡೇಟ್ ಮಾಡಲು ಅರ್ಜಿ ಏನೇನು ಬದಲಾವಣೆ ಮಾಡಬಹುದು? ಇಲ್ಲಿದೆ ಡೀಟೇಲ್ಸ್ NAMMUR EXPRESS NEWS ಬೆಂಗಳೂರು: ಆನ್‌ಲೈನ್‌ನಲ್ಲಿ ಸಾರ್ವಜನಿಕರು ತಮ್ಮ ವಿಳಾಸವನ್ನು ಅಗತ್ಯ ಗುರುತಿನ ದಾಖಲೆಗಳನ್ನು ಒದಗಿಸಿ ಜೂ.14ರ ತನಕ ಉಚಿತವಾಗಿ ಅಪ್ ಡೇಟ್ ಮಾಡಲು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಅವಕಾಶ ನೀಡಿದೆ. ಆದರೆ, 10 ವರ್ಷಗಳಿಂದ ವಿಳಾಸ ಮತ್ತು ಗುರುತಿನ ದಾಖಲೆಗಳನ್ನು ಅಪ್‌ಡೇಟ್ ಮಾಡದವರಿಗಷ್ಟೇ, ಜೂ.14ರ ತನಕ ಆನ್ ಲೈನ್‌ನಲ್ಲಿ ಉಚಿತವಾಗಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ. ಏನೇನು ಅವಕಾಶ?: ಹೆಸರು, ಲಿಂಗ, ಜನ್ಮ ದಿನಾಂಕ, ಪೋಟೊ, ಮೊಬೈಲ್ ನಂಬರ್ ಮತ್ತು ಬಯೋಮೆಟ್ರಿಕ್ ಗಳನ್ನು ಪರಿಷ್ಕರಿಸಲು ಸಾರ್ವಜನಿಕರು ಸಮೀಪದ ಆಧಾರ್ ಕೇಂದ್ರಕ್ಕೆ ತೆರಳಬೇಕು. ಇವುಗಳನ್ನು ಆನ್‌ಲೈನ್‌ನಲ್ಲಿ ಅಪ್‌ಡೇಟ್ ಮಾಡಲು ಸಾಧ್ಯವಿಲ್ಲ. ಆಧಾರ್ ಕೇಂದ್ರಕ್ಕೆ ತೆರಳಿ ಅಪ್ ಡೇಟ್ ಮಾಡಿಸಿದರೆ 50 ರೂ. ಶುಲ್ಕವನ್ನು ತೆರಬೇಕಾಗುತ್ತದೆ. ಎಂದು ಯುಐಡಿಎಐ ಸ್ಪಷ್ಟಿಕರಣ ನೀಡಿದೆ.

Read More

ಹೊಸ ಫೀಚರ್: ಬಳಕೆದಾರರಿಗೆ ಹಲವು ಅನುಕೂಲ ಟೆಕ್ ಲೋಕದಲ್ಲಿ ಭಾರೀ ಸದ್ದು ಮಾಡಿರುವ ತಂತ್ರಜ್ಞಾನ NAMMUR EXPRESS NEWS ಡಿಜಿಟಲ್ ಕ್ಷೇತ್ರದಲ್ಲಿ ಕ್ರಾಂತಿ ಮಾಡಿರುವ ಚಾಟ್​ಜಿಪಿಟಿಯಲ್ಲಿ ಇನ್ನುಮುಂದೆ ನಮಗೆ ಅಗತ್ಯವಿರುವುದನ್ನು ಸ್ಕ್ರೀನ್ ಶಾಟ್ ತೆಗೆದಿಕೊಟ್ಟುಕೊಳ್ಳುವ ಪ್ರಮೇಯ ಇರುವುದಿಲ್ಲ. ನೀವು ಹಂಚಿಕೊಳ್ಳಬಹುದಾದ ಲಿಂಕ್​ಗೆ ಹೆಸರನ್ನು ಕೂಡ ಇಡಬಹುದು. ಟೆಕ್ ಲೋಕದಲ್ಲಿ ಭರ್ಜರಿ ಯಶಸ್ಸು ಸಾಧಿಸಿ ಸುದ್ದಿಯಲ್ಲಿರುವ ಚಾಟ್‌ಜಿಪಿಟಿಗೆ (ChatGPT) ಇದೀಗ ಹೊಸ ಫೀಚರ್ ಒಂದು ಸೇರ್ಪಡೆ ಆಗಿದೆ. OpenAI ಚಾಟ್‌ಜಿಪಿಟಿಗೆ ನೂತನ ವೈಶಿಷ್ಟ್ಯವನ್ನು ಸೇರಿಸಿದೆ. ಈ ಆಯ್ಕೆಯ ಮೂಲಕ ಬಳಕೆದಾರರು ತಮ್ಮ ಸಂಭಾಷಣೆಗಳನ್ನು ಮತ್ತು ಚಾಟ್‌ಗಳನ್ನು ಇತರೆ ಸಾಮಾಜಿಕ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಬಹುದಾಗಿದೆ. ಅಂದರೆ ಇಮೇಲ್, ಫೇಸ್​ಬುಕ್, ವಾಟ್ಸ್​ಆಯಪ್​ ಸೇರಿದಂರೆ ಇತರ ಮಾಧ್ಯಮಗಳ ಮೂಲಕ ಬೇರೆಯವರ ಜೊತೆ ಸುಲಭವಾಗಿ ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇದಕ್ಕೆಂದು ಒಂದು ಯುಆರ್​ಎಲ್ ರಚಿಸಲಾಗಿದ್ದು ಅನ್ನು ಕಾಪಿ ಮಾಡುವ ಮೂಲಕ ಲಿಂಕ್ ಪಡೆಯಬಹುದು. ಈ ನೂತನ ಆಯ್ಕೆಯಿಂದ ಚಾಟ್​ಜಿಪಿಟಿಯಲ್ಲಿ ಇನ್ನುಮುಂದೆ ನಮಗೆ ಅಗತ್ಯವಿರುವುದನ್ನು ಸ್ಕ್ರೀನ್ ಶಾಟ್ ತೆಗೆದಿಕೊಟ್ಟುಕೊಳ್ಳುವ…

Read More

ಕರಾವಳಿ ಜಿಲ್ಲೆಗಳಲ್ಲಿ ಜೂ.1ರಿಂದ ಜು.31ವರೆಗೆ ಮೀನುಗಾರಿಕೆ ನಿಷೇಧ! ಮೀನು ಸಂತಾನೋತ್ಪತ್ತಿ ಸಮಯದಲ್ಲಿ ಮೀನುಗಾರಿಕೆ ಇಲ್ಲ NAMMUR EXPRESS NEWS ಮಂಗಳೂರು: ಎಂದಿನಂತೆ ಪಶ್ಚಿಮ ಕರಾವಳಿಯಲ್ಲಿ ಮೀನುಗಾರಿಕಾ ಋತು ಮುಕ್ತಾಯವಾಗಿದೆ. ಜಿಲ್ಲೆಗಳಲ್ಲಿ ಜೂ.1ರಿಂದ ಜು.31ರ ವರೆಗೆ ಆಳಸಮುದ್ರ ಮೀನುಗಾರಿಕೆಗೆ ನಿಷೇಧ ಹೇರಲಾಗಿದೆ. ಈ ಹಿನ್ನೆಲೆಯಲ್ಲಿ ಮೀನಿನ ದರ ಗಗನಕ್ಕೇರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡಗಳಲ್ಲಿ ಮೀನುಗಾರಿಕೆ ಪ್ರಮುಖ ಉದ್ಯಮ. ಮೀನುಗಾರಿಕಾ ಋತುವಿನಲ್ಲಿ ಸಾವಿರಾರು ಕೋಟಿ ವಹಿವಾಟು ನಡೆಯುವ ಈ ಉದ್ಯಮದಲ್ಲಿ ವರ್ಷದಲ್ಲಿ ಎರಡು ತಿಂಗಳ ರಜಾ ಅವಧಿ ಇರುತ್ತದೆ. ಪ್ರತಿ ವರ್ಷ ಆಗಸ್ಟ್ ತಿಂಗಳಿಂದ ಮೇ ತಿಂಗಳವರೆಗೆ ಪಶ್ಚಿಮ ಕರಾವಳಿಯಲ್ಲಿ ಮೀನುಗಾರಿಕೆ ಮಾಡಲು ಅವಕಾಶ ಇರುತ್ತದೆ.ಈ ಸಂದರ್ಭದಲ್ಲಿ ಪಶ್ಚಿಮ ಕರಾವಳಿಯಿಂದ ಸಾವಿರಾರು ಮೀನುಗಾರಿಕಾ ಬೋಟ್ಗಳು ಆಳ ಸಮುದ್ರ ಮೀನುಗಾರಿಕೆ ನಡೆಸುತ್ತವೆ. ಆಳ ಮೀನುಗಾರಿಕಾ ಉದ್ಯಮಕ್ಕೆ ಜೂನ್ ಮತ್ತು ಜುಲೈ ತಿಂಗಳು ರಜಾ ಅವಧಿಯಾಗಿದೆ. ಈ ಅವಧಿಯಲ್ಲಿ ಮೀನುಗಾರಿಕೆ ನಡೆಸದಂತೆ ಸರ್ಕಾರ ನಿಷೇಧ ವಿಧಿಸುತ್ತದೆ.…

Read More

 ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ಸಂಘಟನೆಯ ನಿಷೇಧಕ್ಕೆ ಸೇಡು  ವ್ಯಕ್ತಿಗಳ ಖಾತೆಗಳಿಗೆ ವಿದೇಶದಿಂದ ಹಣ ಜಮೆ? NAMMUR EXPRESS NEWS ಬೆಂಗಳೂರು: ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ಸಂಘಟನೆಯ ನಿಷೇಧಕ್ಕೆ ಸೇಡು ತೀರಿಸಿಕೊಳ್ಳಲು ಮತ್ತಷ್ಟು ಟೀಂಗಳು ತಯಾರಾಗುತ್ತಿರುವ ವಿಚಾರ ರಾಷ್ಟ್ರೀಯ ತನಿಖಾ ದಳದ ತನಿಖೆಯಿಂದ ಬೆಳಕಿಗೆ ಬಂದಿದೆ. ಇತ್ತೀಚಿಗೆ ದಕ್ಷಿಣ ಕನ್ನಡ, ಶಿವಮೊಗ್ಗದಲ್ಲಿ ನಡೆದ ದಾಳಿಗಳಲ್ಲಿ ಸಿಕ್ಕಿರುವ ಸಾಕ್ಷ್ಯಗಳು ಇದಕ್ಕೆ ಪುಷ್ಟಿ ನೀಡಿವೆ. ಸಾಮಾಜಿಕ ಜಾಲತಾಣದಲ್ಲಿ ಬೇರೆ ಬೇರೆ ಗುಂಪುಗಳನ್ನು ತೆರೆದು ಪಿಎಫ್‌ಐ ಕಾರ್ಯಕರ್ತರು ಸಕ್ರೀಯವಾಗಿರುವ ವಿಚಾರ ಈಗ ಗೊತ್ತಾಗಿದೆ. ಪಿಎಫ್‌ಐ ನಿಷೇಧಕ್ಕೆ ಪ್ರತೀಕಾರವನ್ನು ತೀರಿಸಿಕೊಳ್ಳಲು ಪ್ಲ್ಯಾನಿಂಗ್ ಮಾಡಲಾಗಿತ್ತು. ಭಾರತದ ಹಲವು ಭಾಗಗಳಲ್ಲಿ ವಿಧ್ವಂಸಕ ಕೃತ್ಯ ನಡೆಸಲು ತಯಾರಿ ನಡೆಸುತ್ತಿದ್ದ ವಿಚಾರ ತನಿಖೆಯ ವೇಳೆ ಪತ್ತೆಯಾಗಿದೆ. ವಿಧ್ವಂಸಕ ಕೃತ್ಯಕ್ಕೆ ಶಿವಮೊಗ್ಗ ಮತ್ತು ದಕ್ಷಿಣ ಕನ್ನಡದಲ್ಲೇ ಪ್ರಮುಖವಾಗಿ ತಯಾರಿ ನಡೆದಿತ್ತು. ಎನ್‌ಐಎ ದಾಳಿ ವೇಳೆ ವ್ಯಕ್ತಿಗಳ ಖಾತೆಗಳಿಗೆ ವಿದೇಶದಿಂದ ಹಣ ಜಮೆ ಆಗಿದ್ದಕ್ಕೆ ಮಹತ್ವದ ಸಾಕ್ಷ್ಯಗಳು ಲಭ್ಯವಾಗಿದೆ. ಡಿಕೆಶಿಗೆ ಮತ್ತೆ ರಿಲೀಫ್ ಬೆಂಗಳೂರು:…

Read More

ಒಡಿಶಾದಲ್ಲಿ ಘಟನೆ: 900ಕ್ಕೂ ಹೆಚ್ಚು ಮಂದಿಗೆ ಗಾಯ  ಸಾವಿನ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆ  ರೈಲು ಡಿಕ್ಕಿಗೆ ಕಾರಣ ಏನು? ತನಿಖೆಗೆ ಆದೇಶ! NAMMUR EXPRESS NEWS ಒಡಿಶಾ: ಒಡಿಶಾದ ಬಾಲಸೋರ್‌ನ ಬಹನಾಗಾ ನಿಲ್ದಾಣದ ಬಳಿ 3 ರೈಲುಗಳ ನಡುವೆ ನಡೆದ ರೈಲು ಡಿಕ್ಕಿ ಸುಮಾರು 300 ಮಂದಿ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಈ ಘಟನೆಯಲ್ಲಿ 300 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಬಿರುಸಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಯಶವಂತಪುರದಿಂದ ಹೌರಾದೆಡೆಗೆ ಸಾಗುತ್ತಿದ್ದ ಮತ್ತೊಂದು ರೈಲು ಅದೇ ಮಾರ್ಗವಾಗಿ ಸಾಗುತ್ತಿದ್ದಾಗ ಹಳಿ ತಪ್ಪಿದ ಬೋಗಿಗಳಿಗೆ ಡಿಕ್ಕಿ ಹೊಡೆದು ಮತ್ತೊಂದು ಹಳಿ ಮೇಲೆ ಬಿದ್ದಿತ್ತು. ಸ್ವಲ್ಪ ಸಮಯದ ನಂತರ ಯಶವಂತಪುರದಿಂದ ಹೌರಾಕ್ಕೆ ತೆರಳುತ್ತಿದ್ದ ಮತ್ತೊಂದು ರೈಲು ಹಳಿತಪ್ಪಿದ ಬೋಗಿಗಳಿಗೆ ಡಿಕ್ಕಿ ಹೊಡೆದು ಅದರ 3-4 ಬೋಗಿಗಳು ಹಳಿತಪ್ಪಿವೆ ಎಂದು ತಿಳಿಸಿದ್ದಾರೆ. 23 ಬೋಗಿಗಳಲ್ಲಿ 3 ಬೋಗಿಗಳು ಸಂಪೂರ್ಣ ನುಜ್ಜು ಗುಜ್ಜಾಗಿವೆ. ದೇಶದ ದೊಡ್ಡ ದುರಂತ ಇದಾಗಿದೆ.…

Read More

 ಕರಾವಳಿಯಲ್ಲಿ ಮಳೆ: ಮಲೆನಾಡಲ್ಲಿ ಮೋಡ ರಾಜ್ಯದ ಹಲವೆಡೆ ಮಳೆ ನಿಧಾನಕ್ಕೆ ಶುರು NAMMUR EXPRESS NEWS ನವ ದೆಹಲಿ: ಕೇರಳಕ್ಕೆ ನೈಋತ್ಯ ಮಾನ್ಸೂನ್ ಆಗಮನ ಸ್ವಲ್ಪ ವಿಳಂಬವಾಗಬಹುದು ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಶುಕ್ರವಾರ ತಿಳಿಸಿದೆ.ಸಾಮಾನ್ಯವಾಗಿ ಮಾನ್ಸುನ್ ಆರಂಭದ ದಿನಾಂಕ ಜೂನ್ 1 ಆಗಿದ್ದರೂ ಈ ಬಾರಿ ಜೂನ್ 4ರಂದು ಮಲಬಾರ್ ಕರಾವಳಿಯನ್ನು ತಲುಪಬಹುದು ಎಂದು ಹವಾಮಾನ ಸಂಸ್ಥೆ ಹೇಳಿದೆ. ಆದರೆ, ಐಎಂಡಿ ವಿಜ್ಞಾನಿಗಳು ಇನ್ನೂ ಮೂರು ದಿನ ವಿಳಂಬವಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಕೇರಳಕ್ಕೆ ಮಾನ್ಸೂನ್ ಜೂನ್ 5ರಿಂದ 7ರ ನಡುವೆ ಕಾಲಿಡಲಿದೆ. 2019 ರಲ್ಲಿ ಮಾನ್ಸೂನ್ ಆಗಮನ ವಿಳಂಬವಾಗಿತ್ತು. ಜೂನ್ 6 ರ ಬದಲಿಗೆ ಜೂನ್ 8 ರಂದು ಕೇರಳ ತಲುಪಿತ್ತು. 24 ಗಂಟೆಗಳಲ್ಲಿ ಮೀನುಗಾರರು ಕಡಲಿಗಿಳಿಯದಂತೆ ಮುನ್ಸೂಚನೆ: ಉಡುಪಿ ಸಹಿತ ಕರಾವಳಿ ಕರ್ನಾಟಕದ ಅಲ್ಲಲ್ಲಿ ಗಾಳಿ, ಮಿಂಚು, ಗುಡುಗು, ಸಿಡಿಲು ಸಾಧಾರಣ ಮಳೆ ಜೂ.3ರಿಂದ 7ರ ತನಕ ಬೀಳಲಿದೆ. ಮುಂದಿನ 24 ಗಂಟೆಗಳಲ್ಲಿ ಗಂಟೆಗೆ 40ರಿಂದ 45…

Read More

ರಾಜಧಾನಿಯಿಂದ ತೆರಳಿದ ಇಬ್ಬರ ಸಾವಿನ ಮಾಹಿತಿ ಚಿಕ್ಕಮಗಳೂರಿನ ಕಳಸದ 150 ಮಂದಿ ಸೇಫ್! ಜೂ.1ರಂದು ಜಾರ್ಕಂಡ್ ತೆರಳಿದ್ದ ಜನತೆ NAMMUR EXPRESS NEWS ಒಡಿಶಾ: ಕೋಲ್ಕತ್ತಾದಿಂದ ಚೆನ್ನೈಗೆ ಹೋಗುತ್ತಿದ್ದ ಕೋರಮಂಡಲ್ ಎಕ್ಸ್ ಪ್ರೆಸ್ ರೈಲು ಒಡಿಶಾದ ಬಾಲಸೋರ್‌ನ ಬಹನಾಗಾ ನಿಲ್ದಾಣದ ಬಳಿ ಗೂಡ್ಸ್ ರೈಲಿಗೆ ಢಿಕ್ಕಿ ಹೊಡೆದು ಮತ್ತೊಂದು ಡಿಕ್ಕಿಯಾದ ಪರಿಣಾಮ ಸುಮಾರು 50 ಮಂದಿ ಸಾವನ್ನಪ್ಪಿದ್ದಾರೆ. ಈ ದುರಂತದಲ್ಲಿ ಬೆಂಗಳೂರು ಯಶವಂತಪುರದಿಂದ ಪಶ್ಚಿಮ ಬಂಗಾಳದ ಹೌರಾ ಹೊರಟಿದ್ದ ರೈಲು ಡಿಕ್ಕಿಯಾಗಿದೆ. ಘಟನೆಯಲ್ಲಿ ಬೆಂಗಳೂರಿಂದ ತೆರಳಿದ್ದ ಇಬ್ಬರು ಬೆಂಗಳೂರಿಗರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಆದರೆ ವಿಳಾಸ ದೃಢವಾಗಿಲ್ಲ. ಘಟನೆಯಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಈ ಘಟನೆಯಲ್ಲಿ 300 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಕಳಸದವರು ಸೇಫ್!:ಚಿಕ್ಕಮಗಳೂರು ಜಿಲ್ಲೆಯ ಕಳಸದಿಂದ ಜಾರ್ಕಂಡ್ ಹೊರಟಿದ್ದ 150 ಮಂದಿ ಪ್ರವಾಸಿಗರು ಜೀವ ಅಪಾಯದಿಂದ ಪಾರಾಗಿದ್ದಾರೆ. ಕಳಸದಿಂದ ಉತ್ತರದ ಜೈನ ದೇವಾಲಯಗಳಿಗೆ ತೆರಳಿದ್ದ 150 ಮಂದಿ ಕೊನೆ ಬೋಗಿಯಲ್ಲಿದ್ರೂ ಅಪಾಯದಿಂದ ಪಾರಾಗಿದ್ದಾರೆ.

Read More

ಗ್ಯಾರಂಟಿ ಯೋಜನೆಗಳ ನಿಯಮಗಳೇನು: ಇಲ್ಲಿದೆ ಡೀಟೇಲ್ಸ್! ಎಲ್ಲಾ ಯೋಜನೆಗಳು ಜಾರಿ: ಸರ್ಕಾರದ ಘೋಷಣೆ NAMMUR EXPRESS NEWS ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರವು ಚುನಾವಣೆ ವೇಳೆ ಘೋಷಿಸಿದಂತೆ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದೆ. ಸಚಿವ ಸಂಪುಟ ಸಭೆಯ ಬಳಿಕ ಪ್ರಮುಖ ಸಚಿವರೊಂದಿಗೆ ಸುದ್ದಿಗೋಷ್ಠಿ ನಡೆಸಿ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದರು. ಗ್ಯಾರಂಟಿ ಯೋಜನೆಗಳ ವಿವರಗಳು : 1) ಗೃಹ ಜ್ಯೋತಿ ಯೋಜನೆ : ಒಬ್ಬಾತ 12 ತಿಂಗಳಲ್ಲಿ ಬಳಸಿದ ವಿದ್ಯುತ್ ನ ಸರಾಸರಿಗೆ ಹತ್ತು ಶೇಕಡಾ ಹೆಚ್ಚಿಸಿ ಅಷ್ಟು ಪ್ರಮಾಣದ ವಿದ್ಯುತ್ ಉಚಿತ (200 ಯುನಿಟ್ ವರೆಗೆ). ಜುಲೈ 1ರಿಂದ ಎಲ್ಲಾ ಜನರಿಗೆ ವಿದ್ಯುತ್‌ ಉಚಿತ. ಈಗಾಗಲೇ ಪಾವತಿ ಬಾಕಿ ಉಳಿದಿರುವುದನ್ನು ಆತನೇ ಕಟ್ಟಬೇಕು. 2) ಗೃಹ ಲಕ್ಷ್ಮೀ ಯೋಜನೆ : ಮನೆಯ ಯಜಮಾನಿಯ ಖಾತೆಗೆ ತಿಂಗಳಿಗೆ 2000 ರೂ ಜಮೆ. ಬಿಪಿಎಲ್, ಎಪಿಎಲ್ ಎಲ್ಲರಿಗೂ ಈ ಯೋಜನೆ ಎಲ್ಲರಿಗೂ ಅನ್ವಯವಾಗಲಿದೆ. ಬ್ಯಾಂಕ್‌ ಖಾತೆ, ಆಧಾರ್ ಕಾರ್ಡ್ ನೊಂದಿಗೆ ಅರ್ಜಿ…

Read More

ಎಪಿಎಲ್, ಬಿಪಿಎಲ್ ಕುಟುಂಬಗಳಿಗೆ ವಿದ್ಯುತ್ ಗೃಹ ಲಕ್ಷ್ಮಿ ಯೋಜನೆ: ಜೂನ್ 15ರಿಂದ ಜುಲೈ 15ರವರೆಗೆ ಅರ್ಜಿ ಸಲ್ಲಿಸಲು ಸಮಯಾವಕಾಶ NAMMUR EXPRESS NEWS ಬೆಂಗಳೂರು: ಕಾಂಗ್ರೆಸ್ ಸರ್ಕಾರ ಘೋಷಿಸಿದ ಐದು ಗ್ಯಾರಂಟಿಗಳನ್ನು ಈ ಆರ್ಥಿಕ ವರ್ಷದಲ್ಲಿ ಜಾರಿ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಜುಲೈ 1ರಿಂದ 200 ಯೂನಿಟ್ ವಿದ್ಯುತ್ ಉಚಿತ ಘೋಷಣೆ ಮಾಡಿದ್ದು ಎಪಿಎಲ್, ಬಿಪಿಎಲ್ ಕುಟುಂಬಗಳಿಗೆ ವಿದ್ಯುತ್ಸಿಗಲಿದೆ. ಇನ್ನು ಗೃಹ ಲಕ್ಷ್ಮಿ ಯೋಜನೆಯಡಿ ಜೂನ್ 15ರಿಂದ ಜುಲೈ 15ರವರೆಗೆ ಅರ್ಜಿ ಸಲ್ಲಿಸಲು ಸಮಯಾವಕಾಶ ನೀಡಲಾಗಿದೆ. ಗೃಹಜೋತಿ ಯೋಜನೆ ಅಡಿ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು. ಯಾರು 200 ಯೂನಿಟ್ ಒಳಗಡೆ ವಿದ್ಯುತ್ ಬಳಸುತ್ತಾರೆ ಅವರು ಬಿಲ್ ಕಟ್ಟಬೇಕಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಜುಲೈ ಒಂದರಿಂದ 200 ಯೂನಿಟ್ ಫ್ರೀ ನೀಡಲಿದ್ದೇವೆ ಎಂದು ಘೋಷಿಸಿದ್ದಾರೆ. ಗೃಹ ಲಕ್ಷ್ಮಿ ಯೋಜನೆ!: ಕಾಂಗ್ರೆಸ್ ನೀಡಿದ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಯಂತೆ ಪ್ರತಿ ತಿಂಗಳು ಮನೆಯ ಒಡತಿಗೆ 2,000…

Read More