ಆಗಸ್ಟ್‌ನಿಂದ ಮಹಿಳೆಯರಿಗೆ ಕೋಣ ಓಡಿಸುವ ತರಬೇತಿ ದಕ್ಷಿಣ ಕನ್ನಡ ಕಂಬಳ ಅಕಾಡೆಮಿಯಿಂದ ಮಹತ್ವದ ಪ್ರಯೋಗ NAMMUR EXPRESS NEWS ಮಂಗಳೂರು: ದಕ್ಷಿಣ ಕನ್ನಡ ಕಂಬಳ ಅಕಾಡೆಮಿಯಿಂದ ಮಹತ್ವದ ಪ್ರಯೋಗವೊಂದಕ್ಕೆ ಸಿದ್ಧತೆ ನಡೆದಿದೆ. ಕರಾವಳಿಯ ಪ್ರಮುಖ ಕ್ರೀಡೆ ಕಂಬಳದಲ್ಲಿ ಮಹಿಳೆಯರು ಕೂಡ ಕೋಣಗಳನ್ನು ಓಡಿಸಲು ತರಬೇತಿ ಶುರುವಾಗಲಿದೆ. ಈಗ ಪುರುಷರಷ್ಟೇ ಕಂಬಳದ ಕೋಣಗಳನ್ನು ಓಡಿಸುತ್ತಿದ್ದರು. ಇನ್ನು ಮಹಿಳೆಯರು ಈ ಕ್ಷೇತ್ರಕ್ಕೂ ಇಳಿಯಲಿದ್ದಾರೆ. ಮೊದಲ ಬಾರಿಗೆ ಮಹಿಳೆಯರು ಕಂಬಳದ ಕೋಣಗಳನ್ನು ಓಡಿಸಲಿದ್ದು, ಅವರಿಗೆ ತರಬೇತಿ ನೀಡಲು ದಕ್ಷಿಣ ಕನ್ನಡ ಕಂಬಳ ಅಕಾಡೆಮಿ ಸಿದ್ಧತೆ ನಡೆಸಿದೆ. ಆಗಸ್ಟ್‌ನಲ್ಲಿಮಹಿಳೆಯರಿಗೆ ತರಬೇತಿ ಪ್ರಾರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ. ಕರ್ನಾಟಕ, ತಮಿಳುನಾಡು ಮತ್ತು ಮಹಾರಾಷ್ಟ್ರ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ-1960 ತಿದ್ದುಪಡಿಗಳನ್ನು ಸುಪ್ರೀಂ ಕೋರ್ಟ್ ಮಾನ್ಯ ಮಾಡಿ ಎತ್ತಿನಗಾಡಿ ಓಟದ ಜತೆಗೆ ಗೂಳಿ ಪಳಗಿಸುವ ಕ್ರೀಡೆಗಳಾದ ಜಲ್ಲಿಕಟ್ಟು ಮತ್ತು ಕಂಬಳಕ್ಕೆ ಅವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ಕಂಬಳಕ್ಕೆ ಮತ್ತಷ್ಟು ರಂಗು ಬಂದಿದೆ. ಕಂಬಳಕ್ಕೆ ಇದೀಗ ಕಾನೂನು ಮಾನ್ಯತೆ ಸಿಕ್ಕಿರುವುದರಿಂದ…
Author: Nammur Express Admin
8600 ಹುದ್ದೆಗಳಿಗೆ ಅಧಿಸೂಚನೆ ಪ್ರಕಟ ಪಿಒ, ಕ್ಲರ್ಕ್ ಹುದ್ದೆಗಳಿಗೆ ಆನ್‌ಲೈನ್ ನೋಂದಣಿ NAMMUR EXPRESS NEWS ಬ್ಯಾಂಕ್‌ನಲ್ಲಿ ಉದ್ಯೋಗ ಮಾಡಬೇಕೆಂಬ ಕನಸು ಕಂಡವರಿಗೆಲ್ಲ ಅದನ್ನು ನನಸಾಗಿಸಿಕೊಳ್ಳಲು ಇದು ಸಕಾಲ. ಯಾಕಂದ್ರೆ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್, ಐಬಿಪಿಎಸ್ ವಿವಿಧ ಹುದ್ದೆಗಳಿಗಾಗಿ ಆನ್‌ಲೈನ್ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಬ್ಯಾಂಕಿನ ಅಧಿಕೃತ ವೆಬ್‌ಸೈಟ್‌ನಲ್ಲಿ 2023ರ ಐಬಿಪಿಎಸ್ ಕ್ಲರ್ಕ್ ಪಿಒ ಪರೀಕ್ಷೆಯ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಬ್ಯಾಂಕ್‌ನ ವೆಬ್‌ಸೈಟ್‌ನಲ್ಲಿ 2023ರ ಜೂನ್ 01 ರಿಂದ ಜೂನ್ 21ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ದೇಶಾದ್ಯಂತ ಇರುವ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಿಗೆ ಆಫೀಸ್ ಅಸಿಸ್ಟೆಂಟ್ (ಗುಮಾಸ್ತ), ಆಫೀಸರ್ ಸ್ಕೇಲ್ -I/ಪಿಒ (ಸಹಾಯಕ ಮ್ಯಾನೇಜರ್) ಮತ್ತು ಆಫೀಸರ್ ಸ್ಕೆಲ್ 2 (ಮ್ಯಾನೇಜರ್) ಮತ್ತು ಆಫೀಸ್ ಸ್ಕೆಲ್ 3 (ಹಿರಿಯ ಮ್ಯಾನೇಜರ್) ಹುದ್ದೆಗೆ ಸುಮಾರು 8600 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಪರೀಕ್ಷೆಯನ್ನು ಸಾಮಾನ್ಯ ನೇಮಕಾತಿ ಪ್ರಕ್ರಿಯೆ (ಆರ್‌ಆರ್‌ಬಿಗಳಿಗೆ ಸಿಆರ್‌ಪಿ- XII) ಮೂಲಕ ನಡೆಸಲಾಗುತ್ತದೆ.ಆಫೀಸ್ ಅಸಿಸ್ಟೆಂಟ್…
NAMMUR EXPRESS NEWS ಶಿವಮೊಗ್ಗ:ಫೇಸ್‌ಬುಕ್‌ನಲ್ಲಿ ಪರಿಚಯವಾದ ವ್ಯಕ್ತಿ ತಾನು ಇಂಗ್ಲೆಂಡ್ ದೇಶದಲ್ಲಿ ಡಾಕ್ಟರ್ ಎಂದು ನಂಬಿಸಿ ನಗರದ 36.50 ಲಕ್ಷ ವಂಚಿಸಿದ್ದಾನೆ. ಈ ಸಂಬಂಧ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿವಮೊಗ್ಗದ ಮಹಿಳೆಯೊಬ್ಬರ ಫೇಸ್‌ಬುಕ್‌ಗೆ ವ್ಯಕ್ತಿಯೊಬ್ಬ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದ ಆಕೆ ರಿಕ್ವೆಸ್ಟ್ ಅಸೆಪ್ಟ್ ಮಾಡಿ ಕೆಲ ದಿನ ಆ ವ್ಯಕ್ತಿಯೊಂದಿಗೆ ಚಾಟಿಂಗ್ ನಡೆಸಿದ್ದರು. ತಾನೊಬ್ಬ ವೈದ್ಯ. ಇಂಗ್ಲೆಂಡ್‌ನಲ್ಲಿ ವಾಸವಿದ್ದೇನೆ ಎಂದು ಪರಿಚಯಿಸಿಕೊಂಡಿದ್ದ. ಮೇ 14ರಂದು ಚಾಟಿಂಗ್ ನಡೆಸಿದ್ದ ವೇಳೆ ಆತ, ಮಹಿಳೆಗೆ ಬೆಲೆಬಾಳುವ ಉಡುಗೊರೆ ಕಳುಹಿಸುವುದಾಗಿ ತಿಳಿಸಿದ್ದ. ಮೇ 16ರಂದು ಮಹಿಳೆಯ ಮೊಬೈಲ್ ಸಂಖ್ಯೆಗೆ ಅನಾಮಧೇಯ ವ್ಯಕ್ತಿ ಕರೆ ಮಾಡಿ, ತಾನು ಏರ್‌ಪೋರ್ಟ್ ಅಧಿಕಾರಿ ಎಂದು ಹೇಳಿದ್ದ. ನಿಮಗೆ ಕೊರಿಯರ್ ಬಂದಿದ್ದು ಅದಕ್ಕೆ ಕಸ್ಟಮ್ ವೆಚ್ಚ ತಗುಲಲಿದೆ ಎಂದು ಹೇಳಿದ್ದನು. ಆ ವ್ಯಕ್ತಿಯ ಮಾತು ನಂಬಿದ ಮಹಿಳೆ ಮೇ 16ರಿಂದ 20ರವರೆಗೆ ಬೇರೆ ಬೇರೆ ಸಮಯದಲ್ಲಿ 36.50 ಲಕ್ಷ ಹಣ ವರ್ಗಾಯಿಸಿದ್ದರು. ಆ ಬಳಿಕ ವೈದ್ಯ ಮತ್ತು…
NAMMUR EXPRESS NEWS ಮಂಡ್ಯ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೇದೆಯೊಬ್ಬರು, ಆಟೋ ಚಾಲಕನಿಗೆ ನಡು ರಸ್ತೆಯಲ್ಲೇ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಪಾಳಮೋಕ್ಷ ಮಾಡಿದ ಹಿನ್ನೆಲೆ ಅವರನ್ನು ಅಮಾನತು ಮಾಡಲಾಗಿದೆ. ಪೊಲೀಸ್ ಕಾನ್ಸ್ಟೇಬಲ್ ಮಹೇಂದ್ರ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಅವರು ಅಮಾನತು ಮಾಡಿದ್ದಾರೆ. ಪೊಲೀಸ್ ಕಾನ್ಸ್‌ಸ್ಟೇಬಲ್ ಸಾರ್ವಜನಿಕವಾಗಿ ಎಲ್ಲರ ಮುಂದೆ ಹಲ್ಲೆ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಕೆಲವರು ಟ್ವಿಟ್ ಮೂಲಕ ಮಂಡ್ಯ ಎಸ್‌ಪಿ ಹಾಗೂ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳ ಗಮನಕ್ಕೆ ಈ ಕೃತ್ಯವನ್ನು ತಂದು ಕ್ರಮಕ್ಕೆ ಆಗ್ರಹಿಸಿದ್ದರು ಎನ್ನಲಾಗಿದೆ. ಮಂಡ್ಯ ಜಿಲ್ಲಾಸ್ಪತ್ರೆಯ ಎದುರು ಆಟೋ ಚಾಲಕ ಮತ್ತು ಪೊಲೀಸರು ತೆರಳುತ್ತಿದ್ದ ಬೈಕ್ ನಡುವೆ ಅಪಘಾತವಾಗಿದೆ. ಪೊಲೀಸ್ ಪೇದೆ ರಸ್ತೆಗೆ ಬಿದ್ದು, ಕಾಲಿಗೆ ಸಣ್ಣ ಪೆಟ್ಟಾಗಿದೆ. ಸ್ಥಳೀಯರು ಪೇದೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಆಟೋ ಚಾಲಕನಿಗೆ ಹೇಳಿದ್ದಾರೆ. ಅದರಂತೆ ಚಾಲಕ ಪೇದೆಯನ್ನು ಆಸ್ಪತ್ರೆಗೆ ಹೋಗೋಣ ಬನ್ನಿ ಎಂದು ಕರೆದಿದ್ದಾರೆ. ಆತ ಕರೆದಾಗ ಸಿಟ್ಟಿಗೆದ್ದ…
ಸಚಿವ ಸಂಪುಟದಲ್ಲಿ ಹಣಕಾಸು ಹೊಂದಿಕೆ ಸರ್ಕಸ್ ಉಚಿತ ಭಾಗ್ಯಗಳಿಗೆ ಹಣ ಎಲ್ಲಿಂದ ಬರುತ್ತೆ? ಏನೇನು ನಿಯಮ…. ಯಾವಾಗ ಜಾರಿ.. ಇಲ್ಲಿದೆ ಡೀಟೇಲ್ಸ್ NAMMUR EXPRESS NEWS ಬೆಂಗಳೂರು: ನೂತನ ಸರಕಾರದಿಂದ ರಾಜ್ಯದ ಜನತೆ ಕಾತುರದಿಂದ ನಿರೀಕ್ಷಿಸುತ್ತಿರುವ ‘ಗ್ಯಾರಂಟಿ’ ಯೋಜನೆಗಳ ಜಾರಿ ಸಂಬಂಧ ಜೂ.2ರ ಶುಕ್ರವಾರ ಮಹತ್ವದ ತೀರ್ಮಾನ ಹೊರಬೀಳಲಿದೆ. ಹೀಗಾಗಿ ಇಡೀ ರಾಜ್ಯದ ಗಮನ ಈಗ ಈ ಸಭೆ ಮೇಲೆ ನೆಟ್ಟಿದೆ. ಭಾರೀ ಚರ್ಚೆ, 200 ಯೂನಿಟ್ ಉಚಿತ ವಿದ್ಯುತ್ ಪೂರೈಸುವ ‘ಗೃಹ ಜ್ಯೋತಿ’, ಪ್ರತಿ ವ್ಯಕ್ತಿಗೆ 10 ಕೆ.ಜಿ ಅಕ್ಕಿ ನೀಡುವ ‘ಅನ್ನಭಾಗ್ಯ’ ಹಾಗೂ ಮಹಿಳೆಯರಿಗೆ ಸರಕಾರಿ ಬಸ್‌ಗಳಲ್ಲಿಉಚಿತ ಪ್ರಯಾಣದ ‘ಶಕ್ತಿ’ ಈ ಮೂರು ಯೋಜನೆಗಳ ಅನುಷ್ಠಾನಕ್ಕೆ ಷರತ್ತು ಮತ್ತು ಮಾನದಂಡ ಸಹಿತದ ತೀರ್ಮಾನ ಸಚಿವ ಸಂಪುಟ ಸಭೆ ಬಳಿಕ ಪ್ರಕಟವಾಗಲಿದೆ. ಈ ನಿರ್ಧಾರ ಇಡೀ ರಾಜ್ಯದ ಗಮನ ಸೆಳೆದಿದೆ. ಪಂಚ ಗ್ಯಾರಂಟಿಯಲ್ಲಿ ಪ್ರಮುಖವಾದ ‘ಗೃಹ ಲಕ್ಷ್ಮಿ’ ಯೋಜನೆಯಡಿ ಮಾಸಿಕ 2,000 ರೂ. ಪಡೆಯಲು ಮನೆಯ ಒಡತಿಯರು ಇನ್ನೂ ಎರಡು-ಮೂರು…
ಭಾರತದ ಅಗ್ರಗಣ್ಯ ಸ್ಥಳ ಪಟ್ಟಿ ಸೇರಿದ ಜೈನ ಕೇಂದ್ರ ದೇಶದ 100 ಐತಿಹಾಸಿಕ ಆಗ್ರಗಣ್ಯ ಸ್ಥಳಗಳಲ್ಲಿ ಯೋಗ ಯೋಗ ಹಬ್ಬದ ವಿಶೇಷ ಏನು ಎತ್ತ..?! NAMMUR EXPRESS NEWS ಕಾರ್ಕಳ: ದೇಶದ 100 ಐತಿಹಾಸಿಕ ಆಗ್ರಗಣ್ಯ ಧಾರ್ಮಿಕ ಸ್ಥಳಗಳಲ್ಲಿ ಯೋಗ ದಿನಾಚರಣೆ ಆಚರಣೆ ಮಾಡಲು ಸಿದ್ಧತೆ ನಡೆದಿದೆ. ಅದರಂತೆ ಕಾರ್ಕಳ ತಾಲೂಕಿನ ವರಂಗ ಭಗವಾನ್ 1008 ಶ್ರೀ ನೇಮಿನಾಥ ಸ್ವಾಮಿ ಬಸದಿಯ ಆವರಣದಲ್ಲಿ ಜೂ.2ರಂದು ಬೆಳಗ್ಗೆ 6:30ರಿಂದ 8ರ ತನಕ ಯೋಗ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ. ಅಂತರಾಷ್ಟ್ರೀಯ ಯೋಗ ದಿನದ ಪೂರ್ವಭಾವಿಯಾಗಿ 100 ದಿನಗಳ ಮುಂಚಿತವಾಗಿ ಭಾರತದ 100 ಆಯ್ದ ಅಗ್ರಗಣ್ಯ ಯೋಗ ಸಂಸ್ಥೆಗಳಿಂದ ದೇಶದ 100 ಐತಿಹಾಸಿಕ ಸಂಸ್ಥೆಗಳಲ್ಲಿ 1 ದಿನದ ಯೋಗ ಪ್ರಾತ್ಯಕ್ಷಿಕೆ ಮತ್ತು ಯೋಗಕ್ಕೆ ಸಂಬಂಧಪಟ್ಟ ಸಂಪೂರ್ಣ ಮಾಹಿತಿ ನೀಡುವ ತಜ್ಞರಿಂದ ಕಾರ್ಯಗಾರ ನಡೆಸಲಾಗುತ್ತಿದೆ. ರಾಷ್ಟ್ರೀಯ ಯೋಗ ಮಹೋತ್ಸವ ಮೂಲಕ ಯೋಗ ದೊಂದಿಗೆ ದೇಶಿಯ ಐತಿಹಾಸಿಕ ಸ್ಥಳಗಳನ್ನು ಪರಿಚಯ ಮಾಡಿಸುವುದು ಅದರ ಉದ್ದೇಶ ಇದಾಗಿದೆ. ಅಂತರಾಷ್ಟ್ರೀಯ ಯೋಗ…
ಚಿಕ್ಕಮಗಳೂರು ಜಿಲ್ಲೆ ಕಳಸದಲ್ಲಿ ನಡೆದ ಘಟನೆ NAMMUR EXPRESS NEWS ಕಳಸ: ಮಹಿಳೆಯರಿಗೆ ಆಪರೇಶನ್ ಮಾಡಲು ಬಂದ ವೈದ್ಯ ಮದ್ಯ ಸೇವಿಸಿ ಮಲಗಿದ ಪರಿಣಾಮ, ಅನಸ್ತೇಶಿಯಾ ತೆಗೆದುಕೊಂಡು ಮಲಗಿದ್ದ ಮಹಿಳೆಯರು ಪರದಾಡಿದ ಘಟನೆ ಚಿಕ್ಕಮಗಳೂರಿನ ಕಳಸ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ. ಅರೋಗ್ಯ ಇಲಾಖೆ ವೈದ್ಯನನ್ನು ಅಮಾನತು ಮಾಡಿದೆ. ಮಹಿಳೆಯರಿಗೆ ಸಂತಾನಶಕ್ತಿ ಹರಣ ಆಪರೇಶನ್ ಮತ್ತು ಇತರ ಕೆಲವು ಸಮಸ್ಯೆಗಳಿರುವವರಿಗೆ ಶಸ್ತ್ರಚಿಕಿತ್ಸೆ ಮಾಡುವುದಕ್ಕೋಸ್ಕರ ಕೊಪ್ಪದಿಂದ ವೈದ್ಯ ಡಾ.ಬಾಲಕೃಷ್ಣ ಬಂದಿದ್ದರು. ಆದರೆ ಅವರು ಬರುವಾಗಲೇ ಮದ್ಯಸೇವನೆ ಮಾಡಿ ಬಂದಿದ್ದರು. ಆಪರೇಶನ್ ಮಾಡಲಾಗದೆ, ಶುಗರ್ ಹೆಚ್ಚಾದಂತೆ ನಾಟಕವಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಸ್ವಸ್ಥನಾಗಿ ಬಿದ್ದ ವೈದ್ಯನಿಗೆ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಟ್ಟು, ಆಂಬ್ಯುಲೆನ್ಸ್ ಮೂಲಕ ಕಳಿಸಲಾಗಿದೆ. ಡಾ.ಬಾಲಕೃಷ್ಣ ವಿರುದ್ಧ ಈ ಹಿಂದೆಯಿಂದಲೂ ಹಲವು ಆರೋಪಗಳು ಕೇಳಿ ಬರುತ್ತಲೇ ಇವೆ. ಶೃಂಗೇರಿ, ಕೊಪ್ಪ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುವಾಗಲೂ ಬೇಜವಾಬ್ದಾರಿತನದಿಂದ ವರ್ತಿಸಿ ಹಲವರ ಜೀವಕ್ಕೆ ಕುತ್ತು ತಂದಿದ್ದಾರೆ ಎಂಬ ಆರೋಪ ಇದೆ. ಅಮಾನತಿಗೆ ಆದೇಶ: ಕುಡಿದು ನಿರ್ಲಕ್ಷ್ಯ ವಹಿಸಿದ…
ಕೆಂಪಡಿಕೆ ದರ ಕ್ವಿಂಟಲ್ ಗೆ ₹49,000ಕ್ಕೆ ಏರಿಕೆ ಈ ವರ್ಷ ಹೆಚ್ಚಿನ ದರ ದಾಖಲಿಸಿದ ಅಡಿಕೆ NAMMUR EXPRESS NEWS ದಾವಣಗೆರೆ: ಅಡಿಕೆ ದರ ಕೊಂಚ ಏರಿಕೆಯಾಗಿದ್ದು, ಬೆಳೆಗಾರರಲ್ಲಿ ಮಂದಹಾಸ ಮೂಡಿದೆ. ಸದ್ಯ ಕೆಂಪಡಿಕೆ ದರ ಕ್ವಿಂಟಲ್ ಗೆ ₹49,000ಕ್ಕೆ ಏರಿಕೆ ಕಂಡಿದೆ. ಎರಡು ತಿಂಗಳಲ್ಲಿ ಒಂದು ಕ್ವಿಂಟಲ್ ಗೆ ₹1,500 ರಷ್ಟು ಹೆಚ್ಚಾಗಿದೆ. ಜನವರಿ, ಫೆಬ್ರವರಿಯಲ್ಲಿ ಅಡಿಕೆದರ ₹47,000 ದಿಂದ ₹48,000 ಇತ್ತು. ಏಪ್ರಿಲ್, ಮೇ ತಿಂಗಳಲ್ಲಿ ಅಡಿಕೆ ದರ ಏರಿಕೆಯಾಗುವುದು ಸಾಮಾನ್ಯ. ಕಳೆದ ವರ್ಷದ ಸೆಪ್ಟೆಂಬರ್ ಹೊತ್ತಿಗೆ ಕ್ವಿಂಟಲ್ ಗೆ ₹58,000ಕ್ಕೆ ಏರಿಕೆಯಾಗಿದ್ದ ಅಡಿಕೆ ದರ ಡಿಸೆಂಬರ್ ಹೊತ್ತಿಗೆ ಒಮ್ಮೆಲೆ ₹19,000 ರಷ್ಟು ಕುಸಿತ ಕಂಡು ₹39,000 ಕ್ಕೆ ಬಂದಿತ್ತು. ಸೆಪ್ಟೆಂಬರ್ ವರೆಗೂ ದರದಲ್ಲಿ ಏರಿಳಿತ ಇರುತ್ತದೆ.ದರ ₹49,000 ರ ಆಸು ಪಾಸಿನಲ್ಲೇ ಇರುವ ಸಾಧ್ಯತೆ ಇದೆ. ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಭಾಗದಲ್ಲಿ ಕೆಂಪಡಿಕೆ ದರ ಇದೇ ರೀತಿಯಲ್ಲಿ ಏರಿಕೆ ಕಾಣುವ ನಿರೀಕ್ಷೆ ಇದೆ ಎಂದು ತೋಟ ಉತ್ಪನ್ನಗಳ…
NAMMUR EXPRESS NEWS ಚಾಮರಾಜನಗರ: ಚಾಮರಾಜನಗರದ ಬಳಿ ಭಾರತ ವಾಯು ಸೇನೆಯ ವಿಮಾನ ಪತನವಾಗಿದ್ದು, ಅದೃಷ್ಟವಶಾತ್ ಇಬ್ಬರು ಪೈಲಟ್ ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭಾರತ ವಾಯು ಸೇನೆಯ ವಿಮಾನ ಚಾಮರಾಜನಗರ ಜಿಲ್ಲೆ ಭೋಗಪುರದ ಬಳಿ ಜಮೀನೊಂದರಲ್ಲಿ ಲಘು ಪತನವಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸರು ದೌಡಾಯಿಸಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ವಿಮಾನದಲ್ಲಿದ್ದ ಪೈಲಟ್ ಗಳಿಬ್ಬರು ಪ್ಯಾರಾಚೋಟ್ ಮೂಲಕ ವಿಮಾನದಿಂದ ಹಾರಿದ್ದು, ಹೀಗಾಗಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಒಮ್ಮೆಗೆ 10 ನೋಟು ಬದಲಾಯಿಸಿಕೊಳ್ಳಬಹುದುಬದಲಾಯಿಸುವುದು ಹೇಗೆ?.. ಇಲ್ಲಿದೆ ಮಾಹಿತಿ NAMMUR EXPRESS NEWSಹೊಸದಿಲ್ಲಿ: 2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದೆಗೆದುಕೊಂಡ ಬಳಿಕ ಈ ಕುರಿತು ಹಲವು ಗೊಂದಲಕಾರಿ ಮಾಹಿತಿಗಳು ಹರಿದಾಡುತ್ತಿವೆ. ಇದು 2016ರ ನೋಟ್ ಬ್ಯಾನ್ ಮಾದರಿಯ ಕ್ರಮ ಎಂದು ಕೆಲವರು ತಪ್ಪಾಗಿ ಭಾವಿಸಿದ್ದಾರೆ. ನೋಟ್ ಬ್ಯಾನ್‌ಗೂ ಚಲಾವಣೆಯಿಂದ ಹಿಂದೆಗೆದುಕೊಳ್ಳುವುದಕ್ಕೂ ವ್ಯತ್ಯಾಸವಿದೆ. ಅಲ್ಲದೆ ಸದ್ಯ 2,000 ರೂ. ನೋಟು ಚಲಾವಣೆ ಬಹಳ ಕಡಿಮೆಯಾಗಿರುವುದರಿಂದ ಜನರಿಗೆ ಈ ನೋಟುಗಳನ್ನು ಹಿಂದೆಗೆದುಕೊಳ್ಳುವುದರಿಂದ ಹೆಚ್ಚು ಸಮಸ್ಯೆಯಾಗುವುದಿಲ್ಲ. 2,000 ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಬದಲಾಯಿಸಿಕೊಳ್ಳಲು ಮುಂಬರುವ ಸೆ.30ರ ತನಕ ಸಮಯ ಇದೆ ಎಂದು ಆರ್‌ಬಿಐ ಪ್ರಕಟಣೆ ತಿಳಿಸಿದೆ. ಬದಲಾಯಿಸುವುದು ಹೇಗೆ? ಸಾರ್ವಜನಿಕರು ತಮ್ಮ ಬಳಿ 2,000 ರೂ. ಮುಖಬೆಲೆಯ ನೋಟುಗಳಿದ್ದರೆ ಅದನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಬಹುದು. ಯಾವುದೇ ಬ್ಯಾಂಕ್ ಬ್ಯಾಂಚ್‌ಗೆ ಹೋಗಿ ಹಣ ಡಿಪಾಸಿಟ್ ಮಾಡಲು ಅವಕಾಶ ಇರುತ್ತದೆ. 2016ರ ನೋಟ್ ಬ್ಯಾನ್ ಸಂದರ್ಭದಲ್ಲಿ ಇದ್ದ ನಿಯಮಗಳನ್ನು ಈಗ ಮಾಡಲಾಗುತ್ತಿಲ್ಲ. 2,000 ರೂ. ನೋಟುಗಳನ್ನು ಡೆಪಾಸಿಟ್…