Author: Nammur Express Admin

ವಿಧಾನ ಸಭಾ ಮತದಾನ ಶುರುವಾಯ್ತು!80 ವರ್ಷ ಮೇಲ್ಪಟ್ಟವರಿಗೆ, ವಿಶೇಷ ಚೇತನರಿಗೆ ಮತದಾನಮೇ.10 ರಂದು ಕಾರ್ಮಿಕರಿಗೆ ವೇತನ ಸಹಿತ ರಜೆಮೇ.2ರಿಂದ 4ರವರೆಗೆ ಸರ್ಕಾರಿ ನೌಕರರ ಅಂಚೆ ಮತದಾನ NAMMUR EXPRESS NEWSಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆಗೆ ಏಪ್ರಿಲ್ 29ರ ಶನಿವಾರದಿಂದ ಮತದಾನ ಆರಂಭಗೊಳ್ಳಲಿದೆ.ಹೌದು.80 ವರ್ಷ ಮೇಲ್ಪಟ್ಟವರಿಗೆ, ವಿಶೇಷ ಚೇತನರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ನೀಡಲಾಗಿದೆ. ಹೀಗಾಗಿ ಬ್ಯಾಲೆಟ್ ಪೇಪರ್ ವೋಟಿಂಗ್ ಪ್ರಕ್ರಿಯೆ ಆರಂಭಗೊಳ್ಳಲಿದೆ.ಈಗಾಗಲೇ ಈ ಬಗ್ಗೆ ಚುನಾವಣಾ ಆಯೋಗದಿಂದ ಮಾಹಿತಿ ಬಿಡುಗಡೆ ಮಾಡಲಾಗಿದೆ. ಏಪ್ರಿಲ್ 29ರಿಂದ ಮೇ.6ರವರೆಗೆ 80 ವರ್ಷ ಮೇಲ್ಪಟ್ಟವರಿಗೆ, ಅಂಗವಿಕಲರು ಹಾಗೂ ವಿಕಲಚೇತನರಿಗೆ ಚುನಾವಣಾ ಸಿಬ್ಬಂದಿಗಳು ಬ್ಯಾಲೆಟ್ ಪೇಪರ್ ನೀಡುವ ಮೂಲಕ ಮತದಾನ ಪ್ರಕ್ರಿಯೆಯನ್ನು ನಡೆಸಲಿದ್ದಾರೆ ಎಂದಿದೆ.ಅಂದಹಾಗೇ ರಾಜ್ಯದಲ್ಲಿ 12.15 ಲಕ್ಷದಷ್ಟು 80 ವರ್ಷ ಮೇಲ್ಪಟ್ಟವರಿದ್ದಾರೆ. ಅವರಿಗೆಲ್ಲ ಇಂದಿನಿಂದ ಮನೆ ಮನೆಗೆ ತೆರಳಿ ಚುನಾವಣಾ ಸಿಬ್ಬಂದಿಗಳು ಬ್ಯಾಲೆಟ್ ಪೇಪರ್ ನೀಡಿ, ಮತದಾನ ಪ್ರಕ್ರಿಯೆಯನ್ನು ನಡೆಸಲಿದ್ದಾರೆ.ಬೆಂಗಳೂರಿನಲ್ಲಿ 80 ವರ್ಷ ಮೇಲ್ಪಟ್ಟವರ ಸಂಖ್ಯೆ 2 ಲಕ್ಷಕ್ಕೂ ಹೆಚ್ಚು ಮಂದಿ ಇದ್ದಾರೆ. ಇವರಲ್ಲಿ…

Read More

ಮೇ.1ರಿಂದ ಫೇಕ್ ಕಾಲ್, ಮೆಸೇಜ್ ಬಂದ್ಟೆಲಿಕಾಂ ನೀತಿ ಬದಲಾವಣೆ ಮಾಡಿದ ಟ್ರಾಯ್ NAMMUR EXPRESS NEWSನವದೆಹಲಿ : ನಕಲಿ ಕರೆಗಳು, ನಕಲಿ ಮೆಸೇಜ್ ಕಿರಿಕಿರಿ ಅನುಭವಿಸಿದ ಮೊಬೈಲ್ ಬಳಕೆದಾರರ ಸಮಸ್ಯೆಗೆ ಕೊನೆಗೂ ಪರಿಹಾರ ಸಿಕ್ಕಿದೆ. ಟ್ರಾಯ್ ಇದೀಗ ಟೆಲಿಕಾಂ ನೀತಿಯಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಮೇ.1 ರಿಂದ ಮೊಬೈಲ್ ಬಳಕೆದಾರರಿಗೆ ಈ ರೀತಿಯ ಯಾವುದೇ ಅನಗತ್ಯ ಕರೆ, ಅನಗತ್ಯ ಮೆಸೇಜ್ ಬರುವುದಿಲ್ಲ. ಈ ಫೇಕ್ ಕಾಲ್ ಹಾಗೂ ಮೆಸೇಜ್‌ಗೆ ಟ್ರಾಯ್ ಕಡಿವಾಣ ಹಾಕಿದೆ. ಮೊಬೈಲ್ ಬಳಕೆದಾರರು ಪ್ರತಿನಿತ್ಯ ಲೋನ್, ಬಂಪರ್ ಬಹುಮಾನ ಸೇರಿದಂತೆ ಹಲವು ಅನಗತ್ಯ ಕರೆ ಹಾಗೂ ಸಂದೇಶಗಳಿಂದ ಹೈರಾಣಾಗುತ್ತಿದ್ದವರಿಗೆ ಟ್ರಾಯ್ ಸಿಹಿ ಸುದ್ದಿ ನೀಡಿದೆ.ಮೊಬೈಲ್‌ಗಳಿಗೆ ಬರುವ ಅನಗತ್ಯ ಮೆಸೇಜ್‌ಗಳಿಗೆ ಕಡಿವಾಣ ಹಾಕುವಂತೆ ಟೆಲಿಕಾಂ ಆಪರೇಟರ್‌ಗಳಿಗೆ ನಿಯಂತ್ರಕ ಸಂಸ್ಥೆ ಟ್ರಾಯ್ ಗುರುವಾರ ಸೂಚನೆ ನೀಡಿದೆ. ಮೇ.01 ರಿಂದ ಟೆಲಿಕಾಂ ಕಂಪನಿಗಳು ಅನಗತ್ಯ ಕಾಲ್ ಹಾಗೂ ಸಂದೇಶ ಫಿಲ್ಟರ್ ಮಾಡಲಿದೆ. ಇದರಿಂದಾಗಿ ಗ್ರಾಹಕರಿಗೆ ಅನಗತ್ಯ ಮೆಸೇಜ್‌ಗಳಿಂದ ಉಂಟಾಗುವ ಕಿರಿಕಿಯಿಂದ ಮುಕ್ತಿ ಸಿಗಲಿದೆ.…

Read More

ಚುನಾವಣಾ ಆಯೋಗಕ್ಕೆ ಜೆಡಿಎಸ್ ಪಕ್ಷದ ದೂರುಪಕ್ಷಾಪಾತಿ ಅಧಿಕಾರಿಗಳಿಗೆ ವರ್ಗಾವಣೆ ಶಿಕ್ಷೆ NAMMUR EXPRESS NEWSಬೆಂಗಳೂರು : ಚುನಾವಣೆ ಸಂದರ್ಭದಲ್ಲಿ ಕೆಲ ಅಧಿಕಾರಿಗಳು ಕೆಲ ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಚುನಾವಣಾ ಆಯೋಗಕ್ಕೆ ಜೆಡಿಎಸ್ ದೂರು ನೀಡಿದೆ.ಚುನಾವಣೆ ಸಂದರ್ಭದಲ್ಲಿ ಕೆಲ ಅಧಿಕಾರಿಗಳು ಕೆಲ ಪಕ್ಷದ ಪರವಾಗಿ ಕೆಲಸ ಮಾಡ್ತಿದ್ದಾರೆ ಎಂದು ಚುನಾವಣಾ ಆಯೋಗಕ್ಕೆ ಜೆಡಿಎಸ್ ದೂರು ನೀಡಿದ್ದು, ಈ ಬಗ್ಗೆ ವಿಧಾನಪರಿಷತ್ ಸದಸ್ಯ ತಿಪ್ಪೇಸ್ವಾಮಿ ಹೇಳಿಕೆ ನೀಡಿದ್ದಾರೆ. ಚುನಾವಣೆ ಸಮಯದಲ್ಲಿ ಕೆಲ ಅಧಿಕಾರಿಗಳು ಕೆಲ ಪಕ್ಷದ ಪರವಾಗಿ ಕೆಲಸ ಮಾಡ್ತಿದ್ದಾರೆ. ಹಾಗಾಗಿ ಅಂತಹ ಅಧಿಕಾರಿಗಳನ್ನ ವರ್ಗಾವಣೆ ಮಾಡಬೇಕು ಎಂದು ವಿಧಾನಪರಿಷತ್ ಸದಸ್ಯ ತಿಪ್ಪೇಸ್ವಾಮಿ ಜೊತೆಗೂಡಿ ಜೆಡಿಎಸ್ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ವಿಧಾನಪರಿಷತ್ ಸದಸ್ಯ ತಿಪ್ಪೇಸ್ವಾಮಿ ಯವರು ಚುನಾವಣಾಧಿಕಾರಿಗಳು, ತಹಶೀಲ್ದಾರ್, ಪೊಲೀಸ್ ಸೇರಿದಂತೆ, ಕೆಲ ಉನ್ನತ ಅಧಿಕಾರಿಗಳ ಬದಲಾವಣೆಗೆ ತಿಪ್ಪೇಸ್ವಾಮಿ ಮನವಿ ಮಾಡಿದ್ದಾರೆ, ಈಗಾಗಲೇ ಕೆಲ ಅಧಿಕಾರಿಗಳ ಬದಲಾವಣೆ ಮಾಡಲಾಗಿದೆ ಹಾಗೂ ಇನ್ನೂ ಕೆಲವು ಅಧಿಕಾರಿಗಳ…

Read More

ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಆಮ್ ಆದ್ಮಿ, ಕೆಆರ್ ಎಸ್ ಪಕ್ಷಗಳ ಸ್ಪರ್ಧೆಹಲವು ಕ್ಷೇತ್ರದಲ್ಲಿ ಪಕ್ಷೇತರರು ಕೂಡ ಅಖಾಡಕ್ಕೆರಾಜ್ಯದಲ್ಲೇ ಕುತೂಹಲ ಮೂಡಿಸಿದ ಶಿವಮೊಗ್ಗ NAMMUR EXPRESS NEWSಶಿವಮೊಗ್ಗ ಜಿಲ್ಲೆಯ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂಬಂಧಿಸಿದಂತೆ ಏ.24 ಉಮೇದುವಾರಿಕೆ ಹಿಂಪಡೆಯಲು ಕಡೆಯ ದಿನವಾಗಿದ್ದು, ಜಿಲ್ಲೆಯಲ್ಲಿ ಅಂತಿಮವಾಗಿ ಚುನಾವಣೆ ಎದುರಿಸಲು 74 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಇಡೀ ಜಿಲ್ಲೆಯಲ್ಲಿ ರಾಜಕೀಯ ಗರಿಗೆದ್ದರಿದ್ದು, ಎಲ್ಲೆಡೆ ಪ್ರಚಾರ ಜೋರಾಗಿದೆ. ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ಕೆ.ಬಿ.ವಿಜಯ- ಕಲ್ಯಾಣ ರಾಜ್ಯ ಪ್ರಗತಿ ಪಕ್ಷಶ್ರೀನಿವಾಸ್ ಎಸ್.ಕೆ- ಕಾಂಗ್ರೆಸ್ಮಂಜುನಾಥ ಎಸ್. ಎಸ್- ಆಮ್ ಆದ್ಮಿ ಪಾರ್ಟಿಕೆ.ಬಿ.ಅಶೋಕನಾಯ್ಕ- ಬಿಜೆಪಿಎ.ಡಿ. ಶಿವಪ್ಪ- ಬಹುಜನ ಸಮಾಜ ಪಾರ್ಟಿನಿರಂಜನ ಇ- ಕರ್ನಾಟಕ ರಾಷ್ಟ್ರ ಸಮಿತಿಶಾರದಾ ಪೂರ್ಯಾನಾಯ್ಕ- ಜೆಡಿಎಸ್ಭೀಮಪ್ಪ ಬಿ.ಹಚ್- ಪಕ್ಷೇತರರಂಗಸ್ವಾಮಿ ಎಲ್-ಪಕ್ಷೇತರತಿಪ್ಪೇರುದ್ರಸ್ವಾಮಿ ಟಿ-ಪಕ್ಷೇತರಪುವೀಣ್ ನಾಯ್ಕ – ಪಕ್ಷೇತರ ಶಿವಮೊಗ್ಗ ವಿಧಾನಸಭಾ ಕ್ಷೇತ್ರ: (113) ಎಸ್.ಎನ್. ಚನ್ನಬಸಪ್ಪ- ಬಿಜೆಪಿಹೆಚ್.ಸಿ. ಯೋಗೇಶ್‌- ಕಾಂಗ್ರೆಸ್ನೇತ್ರಾವತಿ.ಟಿ- ಎಎಪಿ (ಆಮ್ ಆದ್ಮಿ ಪಾರ್ಟಿ)ಆಯನೂರ್ ಮಂಜುನಾಥ- ಜೆಡಿಎಸ್‌ವೆಂಕಟೇಶ್ ಆರ್- ಉತ್ತಮ ಪ್ರಜಾಕೀಯ ಪಾರ್ಟಿರಾಜೇಂದ್ರಡಿ- ಕರ್ನಾಟಕ ರಾಷ್ಟ್ರ ಸಮಿತಿ…

Read More

ವೇತನ ಹೆಚ್ಚಳ ಜಾರಿಗೆ ಅನುದಾನ: ಆರ್ಥಿಕ ಇಲಾಖೆಯಿಂದ ಸೂಚನೆ NAMMUR EXPRESS NEWSಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಈಗಾಗಲೇ ರಾಜ್ಯ ಸರ್ಕಾರ ಆದೇಶಿಸಿರುವ ಶೇ.17 ರಷ್ಟು ವೇತನ ಹೆಚ್ಚಳವು ಏಪ್ರಿಲ್ 1ರಿಂದಲೇ ಜಾರಿಗೆ ಬಂದಿದೆ. ಈ ವೇತನ ಹೆಚ್ಚಿಸಲು ಅಗತ್ಯವಾಗಿರುವ ಅನುದಾನಕ್ಕೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳಿಗೆ ಆರ್ಥಿಕ ಇಲಾಖೆಯು ಅಗತ್ಯ ಸೂಚನೆ ನೀಡಿದೆ.ವೇತನ ಹೆಚ್ಚಳ ಮಾಡುವಂತೆ ಕಳೆದ ಮಾರ್ಚ್ 1 ರಂದು ಸರ್ಕಾರಿ ನೌಕರರು ಮುಷ್ಕರ ನಡೆಸಿದ ವೇಳೆ ನೌಕರರ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರವು ಶೇ. 17 ರಷ್ಟು ವೇತನ ಹೆಚ್ಚಳ ಮಾಡಿ ಅಧಿಕೃತ ಆದೇಶ ಹೊರಡಿಸಿತ್ತು. ಏಪ್ರಿಲ್ 1 ರಿಂದ ಇದು ಜಾರಿಗೆ ಬರಲಿದೆ ಎಂದು ಪ್ರಕಟಿಸಲಾಗಿತ್ತು.ಆದರೆ ‘ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಏಪ್ರಿಲ್ ತಿಂಗಳ ವೇತನದಲ್ಲಿಯೇ ಈ ಹೆಚ್ಚಳ ಜಾರಿಗೆ ಬರುತ್ತದೆಯೇ ಎಂಬುದರ ಕುರಿತು ನೌಕರರಲ್ಲಿ ಸಣ್ಣ ಆತಂಕವೂ ಇತ್ತು. ಇದೀಗ ಆ ಆತಂಕ ದೂರವಾಗಿದೆ. ‘ಪ್ರಸ್ತುತ ರಾಜ್ಯ ಸರ್ಕಾರಿ ನೌಕರರ…

Read More

ಮೀನು ಹಿಡಿಯಲು ಹೋಗಿ ಪ್ರಾಣ ಕಳೆದುಕೊಂಡ ಯುವಕರುಬ್ರಹ್ಮಾವರದಲ್ಲಿ ಘಟನೆ: ಶೃಂಗೇರಿ ಮೂಲದವರ ಸಾವು NAMMUR EXPRESS NEWSಬ್ರಹ್ಮಾವರ : ದೋಣಿ ಮಗುಚಿ ನಾಲ್ವರು ಯುವಕರು ಮೃತಪಟ್ಟ ಹೃದಯವಿದ್ರಾವಕ ಘಟನೆ ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯ ಕುಕ್ಕುಡೆ ಕುದ್ರು ಎಂಬಲ್ಲಿ ಭಾನುವಾರ ಸಂಜೆ ವೇಳೆ ನಡೆದಿದೆ.ಒಟ್ಟು 7 ಮಂದಿ ಯುವಕರು ದೋಣಿಯಲ್ಲಿ ತೆರಳುವಾಗ ಈ ಅವಘಡ ಸಂಭವಿಸಿದೆ.ಮೃತ ಯುವಕರನ್ನು ಹೂಡೆ ನಿವಾಸಿ ಟೈಲರ್ ಫಾರೂಕ್ ಪುತ್ರ ಫೈಝಾನ್ ಹಾಗೂ ಅವರ ಸಹೋದರಿಯ ಪುತ್ರ ಇಬಾದ್ ಹಾಗೂ ಇವರ ಸಂಬಂಧಿ ಶೃಂಗೇರಿ ಮೂಲದ ಸುಫಾನ್, ಫರ್ಹಾನ್ ಎಂದು ಗುರುತಿಸಲಾಗಿದೆ.ಇನ್ನೂ ಮೂವರು ಯುವಕರು ಈಜಿ ಕುದ್ರು (ನದಿಯಲ್ಲಿರುವ ಸಣ್ಣ ದ್ವೀಪ) ಸೇರುವಲ್ಲಿ ಯಶಸ್ವಿಯಾಗಿ ಪ್ರಾಣ ಉಳಿಸಿಕೊಂಡರು.ರಮ್ಯಾನ್ ರಜೆ ಹಿನ್ನೆಲೆಯಲ್ಲಿ ಒಟ್ಟು ಏಳು ಯುವಕರು ಉಡುಪಿ ಜಿಲ್ಲೆಯ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಹೂಡೆಯ ಗುಡ್ಡರಿ ಕಂಬಳದಿಂದ ಕುಕ್ಕುಡೆಕುದ್ರುವಿಗೆ ಬೋಟ್ ನಲ್ಲಿ ತೆರಳಿದ್ದರು. ಇವರಲ್ಲಿ ಶೃಂಗೇರಿಯ ಯುವಕರು ಹೂಡೆಯಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಬಂದಿದ್ದರು. ಬೋಟ್ ನಲ್ಲಿ…

Read More

ತೀವ್ರ ಜ್ವರದಿಂದ ಬಳಲುತ್ತಿರುವ ಮಾಜಿ ಸಿಎಂ NAMMUR EXPRESS NEWSಬೆಂಗಳೂರು : ನಿರಂತರ ಪ್ರವಾಸ ಹಾಗೂ ಕಾರ್ಯಕ್ರಮಗಳ ಒತ್ತಡದಿಂದ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ವೈದ್ಯರ ಸಲಹೆಯ ಮೇರೆಗೆ ನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವಿಶ್ರಾಂತವಾಗಿ ಪ್ರವಾಸ ಮಾಡಿದ್ದ ಮಾಜಿ ಮುಖ್ಯಮಂತ್ರಿಗಳು ಜ್ವರದಿಂದ ಬಳಲುತ್ತಿದ್ದು, ಅವರಿಗೆ ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ಸಲಹೆ ಮಾಡಿದ್ದಾರೆ.ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಮಾಜಿ ಮುಖ್ಯಮಂತ್ರಿಗಳು, ವಿಶ್ರಾಂತಿ ನಂತರ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಜೆಡಿಎಸ್ ಪಕ್ಷದ ಕಾರ್ಯಕರ್ತರು, ಮುಖಂಡರು ಈ ಬಗ್ಗೆ ಆತಂಕಕ್ಕೆ ಒಳಗಾಗುವುದು ಬೇಡ ಎಂದು ಹೆಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ವಿಧಾನಸಭೆ ಚುನಾವಣೆಗೆ ಜೆಡಿಎಸ್ ಪಕ್ಷದ ಪರ ಪ್ರಚಾರದಲ್ಲಿ ನಿರತರಾಗಿದ್ದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ, ನಿರಂತರ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದ ಕಾರಣ, ಆಯಾಸದಿಂದಾಗಿ ಜ್ವರ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿಶ್ರಾಂತಿ ತೆಗೆದುಕೊಂಡ ಬಳಿಕ ಚುನಾವಣಾ ಪ್ರಚಾರದ ಕಾರ್ಯಗಳಲ್ಲಿ ಮತ್ತೆ ಭಾಗಿಯಾಗುವುದಾಗಿ ಹೆಚ್​ಡಿಕೆ ತಿಳಿಸಿದ್ದಾರೆ.

Read More

ಕೊಪ್ಪ ಮೂಲದ ನಟ: ಧಾರವಾಹಿ, ಸಿನಿಮಾದಲ್ಲಿ ನಟನೆ: ಸಿನಿಮಾ ರಂಗದ ಕಂಬನಿ NAMMUR EXPRESS NEWSಬೆಂಗಳೂರು: ಕೊಪ್ಪ ಮೂಲದ ಖ್ಯಾತ ಕಿರುತೆರೆ ನಟ ಸಂಪತ್ ಜಯರಾಮ್ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆಂದು ತಿಳಿದುಬಂದಿದೆ.ಸ್ಯಾಂಡಲ್’ವುಡ್’ ಕೆಲವು ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಸಂಪತ್ ಜಯರಾಮ್ ಅವರು ನಟಿಸಿದ್ದರು. ಆದರೆ, ಇತ್ತೀಚೆಗೆ ಕೆಲ ದಿನಗಳಿಂದ ಸೂಕ್ತ ಅವಕಾಶ ಸಿಗಲಿಲ್ಲ ಎಂಬ ಚಿಂತೆ ಸಂಪತ್‌ ಅವರಲ್ಲಿ ಎದುರಾಗಿತ್ತು ಎಂದು ವರದಿಗಳು ತಿಳಿಸಿವೆ.ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಸಿಗದಾಳು ಗ್ರಾಮದವರಾದ ಸಂಪತ್ ತಮ್ಮ ಪ್ರತಿಭೆಯಿಂದ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಹೆಸರು ಮಾಡಿದ್ದರು. ಕಿರುತೆರೆಯಲ್ಲಿ ಅಗ್ನಿಸಾಕ್ಷಿ ದಾರಾವಾಹಿ, ಇತ್ತೀಚೆಗೆ ಬಿಡುಗಡೆಯಾಗಿದ್ದ ಕಂಬ್ಬಿಹುಳ, ಬಾಲಾಜಿ ಫೋಟೋ ಸ್ಟುಡಿಯೋ ಚಲನಚಿತ್ರಗಳಲ್ಲಿ ಸಹಜ ಅಭಿನಯದಿಂದ ಪಾತ್ರಗಳಿಗೆ ಜೀವ ತುಂಬಿದ್ದ ಅವರು ಅದ್ಭುತ ನಟನಾಗಿ ಬೆಳೆಯುವ ಭರವಸೆ ಹುಟ್ಟಿಸಿದ್ದರುಸಂಪತ್ ಶನಿವಾರ ರಾತ್ರಿ ನೆಲಮಂಗಲದ ತಮ್ಮ ನಿವಾಸದಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸಂಪತ್ 6 ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು. ಆತ್ಮಹತ್ಯೆಗೆ ನಿಖರ ಕಾರಣ…

Read More

ಮೋಡ ಕವಿದ ವಾತಾವರಣ: ಮಳೆ ಸಾಧ್ಯತೆಅಡಿಕೆ, ಇತರೆ ಬೆಳೆಗಳಿಗೆ ನೀರಿಲ್ಲದೆ ರೈತರ ಪರದಾಟ NAMMUR EXPRESS NEWSಬೆಂಗಳೂರು : ರಾಜ್ಯದಲ್ಲಿ ಬಿಸಿಲಿನ ಝಳ ಹೆಚ್ಚುತ್ತಿರುವ ನಡುವೆ ಮುಂದಿನ ಐದು ದಿನಗಳ ಕಾಲ ಗುಡುಗು ಮಿಂಚು ಸಹಿತ ಮಳೆ ಸುರಿಯಲಿದೆ.ಶುಕ್ರವಾರ ರಾಜ್ಯದ ಕೆಲವೆಡೆ ಮೂಡ ಕವಿದ ವಾತಾವರಣ ಕಂಡು ಬಂದಿರುವ ಜೊತೆಗೆ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಿದೆ. ಹಾಸನ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ,ಕೋಲಾರ,ಮಂಡ್ಯ, ಮೈಸೂರು,ತುಮಕೂರು ಮತ್ತು ವಿಜಯನಗರದಲ್ಲಿ ಏ.22 – 26ರವರೆಗೆ ಬೆಳಗಾವಿ, ಬೀದರ್, ಧಾರವಾಡ, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು ಮತ್ತು ಯಾದಗಿರಿಯಲ್ಲಿ ಮುಂದಿನ ನಾಲ್ಕು ದಿನ ಮಳೆ ಬೀಳಲಿದೆ.ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿಯಲ್ಲಿ ಎ.22,23 ರಂದು ಸಾಧಾರಣ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕಲಬುರಗಿಯಲ್ಲಿ 41.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾದರೆ, ರಾಯಚೂರು 40.2 ವಿಜಯಪುರ 39.4 ಮತ್ತು ಬಳ್ಳಾರಿ 39.1 ಉಷ್ಣಾಂಶ…

Read More

ತೀರ್ಥಹಳ್ಳಿಯಲ್ಲಿ 20 ಸಾವಿರ ಜನರ ಅಭಿಮಾನ! ಬೈಕ್ ಅಲ್ಲಿ ರೈಡ್ ಮಾಡಿದ ಜ್ಞಾನೇಂದ್ರಕುಶಾವತಿಯಿಂದ ಬಾಳೆಬೈಲುವರೆಗೆ ಜನ: ಜ್ಞಾನೇಂದ್ರ ಪರ ಜಯಘೋಷನಾಮಪತ್ರ ಸಲ್ಲಿಸಿ ಬೈಕಲ್ಲೇ ಸಿಟಿ ರೌಂಡ್ಸ್ ಹಾಕಿದ ಆರಗಜನರ ಪ್ರೀತಿ ಕಂಡು ಸಂತಸ: ಕುಣಿದು ಕುಪ್ಪಳಿಸಿದ ಜನ NAMMUR EXPRESS NEWSತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ 20 ಸಾವಿರ ಜನ ಸೇರಿ ಗೃಹ ಸಚಿವ ಆರಗ ಜ್ಞಾನೆಂದ್ರ ನಾಮಪತ್ರ ಸಲ್ಲಿಕೆಗೆ ಜತೆಯಾಗಿದ್ದಾರೆ.ತೀರ್ಥಹಳ್ಳಿಯ ಕುಶಾವತಿಯಿಂದ ತೀರ್ಥಹಳ್ಳಿ ತಾಲೂಕು ಕಚೇರಿ ತೆರಳಿ ಅಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಅಲ್ಲಿಂದ ರಸ್ತೆಯಲ್ಲಿ ಜನರ ಸಂತಸ ನೋಡಿ ಜ್ಞಾನೇಂದ್ರ ಅವರುಬೈಕ್ ಅಲ್ಲಿ ರೈಡ್ ಮಾಡಿದ್ದಾರೆ. ಕುಶಾವತಿಯಿಂದ ಬಾಳೆಬೈಲುವರೆಗೆ ಜನ ಸೇರಿದ್ದು ಇಡೀ ಪಟ್ಟಣದಲ್ಲಿ ಬಿಜೆಪಿ ಭಾವುಟ ರಾರಾಜಿಸಿತು.ಜ್ಞಾನೇಂದ್ರ ಪರ ಜಯಘೋಷನಾಮಪತ್ರ ಸಲ್ಲಿಸಿ ಬೈಕಲ್ಲೇ ಸಿಟಿ ರೌಂಡ್ಸ್ ಹಾಕಿದ ಆರಗ ಗಮನ ಸೆಳೆದರು. ಕಾರ್ಯಕರ್ತರ ಸಂತಸ, ನೃತ್ಯ ಗಮನ ಸೆಳೆಯಿತು. ದೇಗುಲಗಳಿಗೆ ಜ್ಞಾನೇಂದ್ರ ರೌಂಡ್ಸ್ ತೀರ್ಥಹಳ್ಳಿ ವಿಧಾನ ಸಭಾ ಬಿಜೆಪಿ ಅಭ್ಯರ್ಥಿ ಹಾಲಿ ಶಾಸಕ ಆರಗ ಜ್ಞಾನೇಂದ್ರ ಅವರು ಮಂಗಳವಾರ ತೀರ್ಥಹಳ್ಳಿಯ ಮಾರಿಕಾಂಬಾ,…

Read More