Author: Nammur Express Admin

ಅಣ್ಣಾಮಲೈ ಭೇಟಿ ವಿರುದ್ಧ ಕಾಂಗ್ರೆಸ್ ಸಿಡಿಮಿಡಿಬೆಂಗಳೂರು ಜನರಿಗೆ ಮೋಸ ಮಾಡಿದ್ದ ಬಿಜೆಪಿ: ಆರೋಪ NAMMUR EXPRESS NEWSಬೆಂಗಳೂರಿನಲ್ಲಿ ನೆಲೆಸಿರುವ ತೀರ್ಥಹಳ್ಳಿಗರ ಮತಕ್ಕಾಗಿ ಹತ್ತಾರು ಬಸ್ ಬುಕ್ ಮಾಡಿ ಕರೆ ತರುವ ದೊಡ್ಡ ಪ್ರಯತ್ನ ಬಿಜೆಪಿ ಮಾಡುತ್ತಿದೆ. ಬರುವವರಿಗೆ ಹಲವು ಆಮಿಷ ಒಡ್ಡುವ ಕೆಲಸವೂ ಸಾಂಗೋಪವಾಗಿ ನಡೆಯುತ್ತಿದೆ ಎನ್ನುವ ಮಾತಿದೆ. ಆದರೆ ಬರುವ ಮುನ್ನ ಈ ಮಾಹಿತಿ ನೋಡಿ ಬೆಂಗಳೂರಿನ ನಿವಾಸಿಗರೇ, ಬೆಂಗಳೂರಿನ ಶಾಶ್ವತ ಕುಡಿಯುವ ನೀರಿನ ಯೋಜನೆಯಾದ ಮೇಕೆದಾಟು ಯೋಜನೆಗೆ ಕನ್ನಡಿಗರು ಹೋರಾಟ ನಡೆಸುತ್ತಿದ್ದಾಗ, ಕಾಂಗ್ರೆಸ್ ಪಕ್ಷ ಧ್ವನಿಯಾಗಿ ಮೇಕೆದಾಟುವಿನಿಂದ ಪಾದಯಾತ್ರೆ ಹಮ್ಮಿಕೊಂಡಾಗ, ಸರ್ಕಾರವೇ ಬಜೆಟ್ ನಲ್ಲಿ ಈ ಯೋಜನೆಗೆ ಹಣ ಮೀಸಲಿರಿಸಿದಾಗ ಕರ್ನಾಟಕದ ವಿರುದ್ದ ಅಬ್ಬರಿಸಿದ್ದ, ಈ ಯೋಜನೆಯ ವಿರುದ್ದ ಉಪವಾಸ ಸತ್ಯಾಗ್ರಹ ಕೂತ ಅಣ್ಣಾಮಲೈ ಈಗ ತೀರ್ಥಹಳ್ಳಿಗೆ ಬಂದು ಶ್ರೀಯುತ ಆರಗ ಜ್ಞಾನೇಂದ್ರರವರೊಂದಿಗೆ ನಾಮಪತ್ರ ಸಲ್ಲಿಸಲು ಜೊತೆಯಾಗುತ್ತಿದ್ದಾರೆ.ತಮಿಳುನಾಡಿನಲ್ಲಿ ನಿ‌ಂತು ಕರ್ನಾಟಕದ ವಿರುದ್ಧ ಮಾತಾಡುವ ಅಣ್ಣಾಮಲೈ ರವರನ್ನು ಕರೆತಂದು ನಾಮಪತ್ರ ಸಲ್ಲಿಸುವ ಕೃತ್ಯಕ್ಕೆ ಬಿಜೆಪಿ ಇಳಿಯಬಾರದಿತ್ತು ಎಂದು ಕಾಂಗ್ರೆಸ್ ಟೀಕೆ…

Read More

ಬಿಜೆಪಿ ಕಟ್ಟಿ ಬೆಳೆಸಿದ ನಾಯಕ ಈಗ ಯೂಟರ್ನ್ರಾಜೀನಾಮೆ ನೀಡುವುದಾಗಿ ಮಾಜಿ ಸಿಎಂ ಘೋಷಣೆ NAMMUR EXPRESS NEWSಹುಬ್ಬಳ್ಳಿ : ಮಾಜಿ ಮುಖ್ಯಮಂತ್ರಿ, ಬಿಜೆಪಿಯ ನಾಯಕ ಹಾಲಿ ಶಾಸಕ ಜಗದೀಶ್ ಶೆಟ್ಟರ್ ಬಿಜೆಪಿಗೆ ರಾಜೀನಾಮೆ ಘೋಷಣೆ ಮಾಡಿದ್ದಾರೆ.ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಘೋಷಣೆಯಲ್ಲಿ ಶೆಟ್ಟರ್ ಅವರಿಗೆ ಸ್ಥಾನ ನೀಡಿರಲಿಲ್ಲ. ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ ನಾಯಕರಲ್ಲಿ ಶೆಟ್ಟರ್ ಅವರು ಕೂಡ ಒಬ್ಬರು. ಮಾಜಿ ಉಪಮುಖ್ಯಮಂತ್ರಿ, ಲಕ್ಷ್ಮಣ ಸವದಿ ಬೆನ್ನಲ್ಲೇ ಇದೀಗ ಮಾಜಿ ಮುಖ್ಯಮಂತ್ರಿ, ಹಾಲಿ ಬಿಜೆಪಿ ಶಾಸಕ ಜಗದೀಶ್ ಶೆಟ್ಟರ್ ಭಾನುವಾರ ಬೆಳಗ್ಗೆ ಸ್ಪೀಕರ್ ಅವರಿಗೆ ಶಾಸಕ ಸ್ಥಾನದ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ.ರಾಜ್ಯದಲ್ಲಿ ಈಗಾಗಲೇ ಮಾಜಿ ಡಿಸಿಎಂ ಲಕ್ಷಣ ಸವದಿ ಕಾಂಗ್ರೆಸ್ ಸೇರಿದ್ದಾರೆ. ಈಗ ಮತ್ತೊರ್ವ ಹಿರಿಯ ನಾಯಕ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ.

Read More

ಕಾರು ಬಸ್ ಮುಖಾಮುಖಿ ಡಿಕ್ಕಿಯಾಗಿ ಅಪಘಾತದಕ್ಷಿಣ ಕನ್ನಡ ಜಿಲ್ಲೆ ಸುಳ್ಯದ ಸಂಪಾಜೆಯಲ್ಲಿ ಘಟನೆಇಬ್ಬರು ಮಕ್ಕಳು ಸ್ಥಳದಲ್ಲೇ ದುರ್ಮರಣ NAMMUR EXPRESS NEWSಸುಳ್ಯ : ಕೆಎಸ್ಆರ್ಟಿಸಿ ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾಗಿ ಮಕ್ಕಳು ಸೇರಿ ಆರು ಮಂದಿ ದುರ್ಮರಣಕ್ಕೀಡಾಗಿರುವ ಘಟನೆ ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲೆಯ ಸಂಪಾಜಿಯಲ್ಲಿ ಸಂಭವಿಸಿದೆ.ಕಾರರಿನಲ್ಲಿ ಮಕ್ಕಳು ಸಹಿತ ಏಳು ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನುಚ್ಚುಗುಜ್ಜಾಗಿದ್ದು, ಇಬ್ಬರು ಮಕ್ಕಳು ಸ್ಥಳದಲ್ಲೇ ಕೊನೆ ಉಸಿರಳೆದಿದ್ದಾರೆ. ಗಂಭೀರ ಸ್ವರೂಪದ ಗಾಯಗಳಾಗಿದ್ದವರನ್ನು ಸುಳ್ಯ ಆಸ್ಪತ್ರೆಗೆ ರವಾನಿಸಲಾಗಿದೆ.ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ನಾಲ್ವರು ಅಸು ನೀಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮೃತರ ಬಗ್ಗೆ ಮಾಹಿತಿ ಇನ್ನಷ್ಟು ಸಿಗಬೇಕಿದೆ. ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.

Read More

ಶಿಕ್ಷಣ ಇಲಾಖೆಗೆ ವರದಿ ಕೇಳಿದ ಮಕ್ಕಳ ಆಯೋಗಬೆಂಗಳೂರು ಸೇರಿ ರಾಜ್ಯದ ಹಲವೆಡೆ ಸ್ಪೆಷಲ್ ಕ್ಲಾಸ್!? NAMMUR EXPRESS NEWSಬೆಂಗಳೂರು : ಪರೀಕ್ಷೆ ಮುಗಿದು ಬೇಸಿಗೆ ರಜೆ ಬಂತೆಂದರೇ ಸಾಕು ಮಕ್ಕಳಿಗೆ ಅದೆಲ್ಲಿಲ್ಲದ ಖುಷಿ. ಬೇಸಿಗೆ ರಜೆ ಸಂತೋಷದಿಂದ ಕಳೆಯಲು ವಿದ್ಯಾರ್ಥಿಗಳು ಹವಣಿಸುತ್ತಾರೆ. ಆದರೆ ಬೇಸಿಗೆ ರಜೆಯಲ್ಲಿಯೂ ಕೆಲವು ಶಾಲೆಗಳಲ್ಲಿ 9ನೇ ತರಗತಿಯಿಂದ 10ನೇ ತರಗತಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದು ಈ ಬಗ್ಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ವರದಿ ಕೇಳಿದೆ.ಬೇಸಿಗೆ ರಜೆಯಲ್ಲಿಯು ತರಗತಿಗೆ ಹಾಜರಾಗುವಂತೆ ಶಾಲೆಗಳು ಮಕ್ಕಳ ಮೇಲೆ ಒತ್ತಡ ಹೇರುವ ಮೂಲಕ ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸುತ್ತಿದ್ದು, ಈ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಮಕ್ಕಳ ಹಕ್ಕುಗಳ ಕಾರ್ಯಕರ್ತ ವಾಸುದೇವ ಶರ್ಮಾ ಅವರು ಆಯೋಗಕ್ಕೆ ಪತ್ರ ಬರೆದು ದೂರು ಸಲ್ಲಿಸಿದ್ದಾರೆ. ಕೆಲವು ಸಿಬಿಎಸ್ ಸಿ ಮತ್ತು ಐಸಿಎಸ್ ಸಿ ಶಾಲೆಗಳಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆಯೋಗ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯಿಂದ ವರದಿ ಕೇಳಿದೆ.ಸಿಬಿಎಸ್…

Read More

ಆಂಧ್ರ ಪ್ರದೇಶದಲ್ಲಿ ಒಂದು ವಿಚಿತ್ರ ದೂರು ದಾಖಲು ಮುಖ್ಯಮಂತ್ರಿಗಳ ಪೋಸ್ಟರ್ ಅನ್ನು ಹರಿದಿದ್ದಕ್ಕಾಗಿ ನಾಯಿಯೊಂದರ ವಿರುದ್ಧ ಪೊಲೀಸ್‌ ಠಾಣೆಗೆ ದೂರು ದಾಖಲಾದ ವಿಚಿತ್ರ ಘಟನೆ ನಡೆದಿದೆ.ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಪೋಸ್ಟರ್ ಅನ್ನು ನಾಯಿ ಹರಿದ ಕಾರಣ ದೂರು ದಾಖಲಾಗಿದೆ. ಇನ್ನೂ ವಿಜಯವಾಡದಲ್ಲಿ ಈ ಘಟನೆ ನಡೆದಿದೆ. ಘಟನೆಯ ಬಗ್ಗೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆ ಬಳಿಕ ಮಹಿಳೆಯರ ಗುಂಪು ಪೊಲೀಸರಿಗೆ ದೂರು ನೀಡಿದೆ.ಪ್ರತಿಪಕ್ಷ ತೆಲುಗು ದೇಶಂ ಪಕ್ಷದ (ಟಿಡಿಪಿ) ಕಾರ್ಯಕರ್ತೆ ಎನ್ನಲಾದ ದಾಸರಿ ಉದಯಶ್ರೀ ಎಂಬುವವರು ವ್ಯಂಗ್ಯವಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಮುಖ್ಯಮಂತ್ರಿಗೆ ಅವಮಾನ ಮಾಡಿದ ನಾಯಿ ಹಾಗೂ ಅದರ ಹಿಂದಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಹಿಳೆ ಒತ್ತಾಯಿಸಿದ್ದಾರೆ ಎಂದು ವರದಿಯಾಗಿದೆ.151 ವಿಧಾನಸಭಾ ಸ್ಥಾನಗಳನ್ನು ಗೆದ್ದಿರುವ ಜಗನ್ ಮೋಹನ್ ರೆಡ್ಡಿ ಅವರ ಬಗ್ಗೆ ನಮಗೆ ಅಪಾರ ಗೌರವವಿದೆ. ಅಂತಹ ನಾಯಕನನ್ನು ನಾಯಿಯೊಂದು ಅವಮಾನಿಸಿದ್ದು, ರಾಜ್ಯದ ಆರು ಕೋಟಿ ಜನರಿಗೆ ನೋವುಂಟು ಮಾಡಿದೆ…

Read More

ಸಾರ್ವಜನಿಕರಿಗೆ ಸ್ಪಷ್ಟನೆ ನೀಡಿದ ಕೇಂದ್ರ ಸರ್ಕಾರನಕಲಿ ಆಪ್ ಲಿಂಕ್ ನಂಬಿ ಹಣ ಕಳೆದುಕೊಳ್ಳಬೇಡಿ! ಪಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಲು ಮಾರ್ಚ್ 31ರ ಒಳಗಾಗಿ ಆಧಾರ್ ಹಾಗೂ ಪಾನ್ ಕಾರ್ಡ್ ಲಿಂಕ್ ಮಾಡುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿತ್ತು. ಇದಾದ ಬಳಿಕ ಜೂನ್ 30ರವರೆಗೆ ಗಡುವನ್ನು ವಿಸ್ತರಿಸಲಾಗಿದೆ. ಪಾನ್‌ಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು 1000 ರೂಪಾಯಿ ದಂಡ ಪಾವತಿ ಮಾಡಬೇಕಿದೆ.ಕೇಂದ್ರ ಸರ್ಕಾರ ಈ ರೀತಿ ಪಾನ್ ಕಾರ್ಡ್‌ಗೆ ಆಧಾರ್ ಲಿಂಕ್ ಮಾಡೋಕೆ 1000 ರೂಪಾಯಿ ದಂಡ ವಿಧಿಸುತ್ತಿರೋದು ಸಾರ್ವಜನಿಕವಾಗಿ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ 1000 ರೂಪಾಯಿ ದಂಡ ವಿಧಿಸಿರುವ ಸರ್ಕಾರದ ನಡೆ ವಿರುದ್ಧ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.ಈ ಎಲ್ಲದರ ನಡುವೆ ಆಧಾರ್ ಹಾಗೂ ಪಾನ್ ಲಿಂಕ್ ಮಾಡಲು ಈ ಹಿಂದೆ ವಿಧಿಸಲಾಗುತ್ತಿದ್ದ 1000 ರೂಪಾಯಿ ದಂಡವನ್ನು ಈಗ ತೆಗೆದು ಹಾಕಲಾಗಿದ್ದು ಉಚಿತ ಲಿಂಕ್‌ಗೆ ಅವಕಾಶ ನೀಡಲಾಗಿದೆ ಎಂಬ ಸುದ್ದಿ ಎಲ್ಲೆಡೆ ವೈರಲ್ ಆಗ್ತಿದೆ. ಈ ಲಿಂಕ್‌ನ ಮೂಲಕ…

Read More

ಸಿನಿಮಾ ಎಕ್ಸ್ ಪ್ರೆಸ್ ಸರ್ಕಾರಿ ಶಾಲೆಗಳ ಬಗ್ಗೆ ಚೆಲ್ಲಿದ ಕನ್ನಡ ಸಿನಿಮಾರಾಜ್ಯದ ಬಹುತೇಕ ಉತ್ತಮ ರೆಸ್ಪಾನ್ಸ್ NAMMUR EXPRESS NEWSಸರ್ಕಾರಿ ಶಾಲೆ ಹಾಗೂ ಖಾಸಗಿ ಶಾಲೆಗಳು ನಡುವಿನ ವ್ಯತ್ಯಾಸವನ್ನು ಕಥಾಹೂರಣವನ್ನಾಗಿಸಿಕೊಂಡು ಹಲವಾರು ಸಿನಿಮಾಗಳು ಕನ್ನಡ ಸಿನಿಪರದೆಯಲ್ಲಿ ತೆರೆ ಕಂಡಿವೆ. ಇದೀಗ ಇದೇ ಕಥಾಹಂದರವಿರುವ ʼಪ್ರವೀಣಾʼ ಸಿನಿಮಾ ಏಪ್ರಿಲ್ 7ಕ್ಕೆ ತೆರೆಕಂಡಿದ್ದು ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ.ಈ ಸಿನಿಮಾಕ್ಕೆ ಕಥೆ-ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಮಹೇಶ್ ಸಿಂದುವಳ್ಳಿ ಈ ಚಿತ್ರದ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದಾರೆ.ನಾನು ʼ10ನೇ ತರಗತಿʼ ಸಿನಿಮಾ ಮಾಡಿದ್ದು,ಇದು ನನ್ನ ಎರಡನೇ ಪ್ರಯತ್ನ. ನಾನು ʼಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ,ಕಾಸರಗೋಡುʼ ಸಿನಿಮಾ ಮಾಡುವಾಗ ಈ ತರಹ ಒಂದು ಲೈನ್ ಹೊಳೆಯಿತು. ನನ್ನ ಲೈಫ್ ನಲ್ಲಿ ಆದಂತ ಒಂದಿಷ್ಟು ಘಟನೆಗಳನ್ನು ಇಟ್ಟುಕೊಂಡು ಎಲ್ಲರಿಗೂ ಬೇಕಾಗಿರುವ ಸಿನಿಮಾ ಮಾಡಲಾಗಿದೆ” ಎಂದು ಹೇಳಿದ್ದಾರೆ.ಪ್ರವೀಣಾ ಚಿತ್ರವನ್ನು ನಿರ್ಮಾಣ ಮಾಡಿರುವ ನಟ ಜಗದೀಶ್ ಕೆ.ಆರ್ ಮಾತನಾಡಿ, ಪ್ರವೀಣಾ ಚಿತ್ರವು ನನ್ನ ಚೊಚ್ಚಲ ನಿರ್ಮಾಣವಾಗಿದ್ದು, ಮನರಂಜನೆಯ ಜೊತೆಗೆ ಸರ್ಕಾರಿ ಶಾಲೆಗಳ…

Read More

ಹಾಲಿ ಶಾಸಕ ಎಂ.ಪಿ. ಕುಮಾರಸ್ವಾಮಿಗೆ ಟಿಕೆಟ್ ಇಲ್ಲಕಾಫಿ ನಾಡಿನ ಪ್ರಬಲ ಸಂಘಟಕನಿಗೆ ಒಲಿದ ಟಿಕೆಟ್ NAMMUR EXPRESS NEWSಚಿಕ್ಕಮಗಳೂರು : ಮೂಡಿಗೆರೆ ವಿಧಾನಸಭಾ ಕ್ಷೇತ್ರದಿಂದ ಎಂ.ಪಿ.ಕುಮಾರಸ್ವಾಮಿ ಕೈಬಿಟ್ಟು ಹೊಸ ಅಭ್ಯರ್ಥಿ ದೀಪಕ್ ದೊಡ್ಡಯ್ಯ ಅವರಿಗೆ ಬಿಜೆಪಿ ಎರಡನೇ ಪಟ್ಟಿಯಲ್ಲಿ ಟಿಕೆಟ್ ನೀಡಿದೆ.ರಾಜ್ಯದ 51 ಮೀಸಲು ಕ್ಷೇತ್ರಗಳಲ್ಲಿ ಇದು ಕೂಡ ಒಂದಾಗಿದೆ. ಮೂಡಿಗೆರೆ ಕ್ಷೇತ್ರವು ಘಟಾನುಘಟಿಗಳ ಕ್ಷೇತ್ರವಾಗಿದ್ದು ಈ ಹಿಂದೆ ಸಚಿವರಾಗಿದ್ದ ಮೋಟಮ್ಮ , ಬಿ.ಬಿ. ನಿಂಗಯ್ಯನಂತವರು ಸ್ಪರ್ಧಿಸಿರುವ ಕ್ಷೇತ್ರ ಇದಾಗಿದೆ. 2013ರಿಂದ ಮೂಡಿಗೆರೆ ಕ್ಷೇತ್ರಕ್ಕೆ ಎಂ.ಪಿ. ಕುಮಾರಸ್ವಾಮಿಯವರು ಶಾಸಕರಾಗಿದ್ದಾರೆ. ಆದರೆ ಕಳೆದ ಹತ್ತು ವರ್ಷಗಳಿಂದ ಹೇಳಿಕೊಳ್ಳುವಂತಹ ಅಭಿವೃದ್ದಿ ಕಾರ್ಯಗಳು ಕ್ಷೇತ್ರದಲ್ಲಿ ಆಗಿಲ್ಲ ಎಂಬುವುದು ಇಲ್ಲಿನ ಸಾರ್ವಜನಿಕರ ಅಭಿಪ್ರಾಯವಾಗಿದೆ. 2023ರ ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ ಹೊಸ ಮುಖ ಕ್ಷೇತ್ರಕ್ಕೆ ಬೇಕು ಎಂಬ ಧ್ವನಿ ಇತ್ತೀಚಿನ ದಿನಗಳಲ್ಲಿ ಕ್ಷೇತ್ರದ ಜನರಲ್ಲಿ ಕೇಳಿ ಬರುತ್ತಿದ್ದು ಇದೀಗ ದೀಪಕ್ ದೊಡ್ಡಯ್ಯ ಅವರಿಗೆ ಹೈಕಮಾಂಡ್ ಮಣೆ ಹಾಕಿದೆ. ಬಡ ಕುಟುಂಬದಿಂದ ಬಂದ ದೀಪಕ್ ದೊಡ್ಡಯ್ಯ ಅವರ ತಂದೆ ಮೂಲತಃ…

Read More

ಬೆಂಗಳೂರು : ನಟ ಕಿಚ್ಚ ಸುದೀಪ್ ಅವರಿಗೆ ಬೆದರಿಕೆ ಪತ್ರವೊಂದು ಬಂದಿದ್ದು, ಈ ಸಂಬಂಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸುದೀಪ್ ಅವರ ಹೆಸರಿನಲ್ಲಿ ಎರಡು ಪತ್ರಗಳು ಬಂದಿದ್ದು, ಮಾನಹಾನಿ ಮಾಡುವಂತಹ ಕೆಲಸಕ್ಕೆ ಪತ್ರ ಬರೆದವರು ಕೈ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖವಾಗಿತ್ತು. ಇದೀಗ ದೂರಿಗೆ ಸಂಬಂಧಿಸಿದಂತೆ ಯಾವುದೇ ಸುದ್ದಿ ಪ್ರಸಾರ ಮಾಡದಂತೆ ಸುದೀಪ್ ಕೋರ್ಟ್ ಮೆಟ್ಟಿಲೇರಿ ಮಾಧ್ಯಮಗಳ ವಿರುದ್ಧ ನಿರ್ಬಂಧಕಾಜ್ಞೆ ತಂದಿದ್ದಾರೆ. ದೂರಿಗೆ ಸಂಬಂಧ ಯಾವುದೇ ಸುದ್ದಿ ಪ್ರಸಾರ ಮಾಡದಂತೆ 21ನೇ ಸಿಸಿಹೆಚ್ ನ್ಯಾಯಾಲಯ ಆದೇಶ ನೀಡಿದೆ. ಪ್ರಕರಣದ ಬಗ್ಗೆ ಕಿಚ್ಚ ಸುದೀಪ್ ಪರ ವಕೀಲ ಚನ್ನಬಸಪ್ಪ ವಾದ ಮಂಡಿಸಿದ್ದರು. ಬೆದರಿಕೆ ಪತ್ರದ ತನಿಖೆಯ ಜವಾಬ್ದಾರಿ ಇದೀಗ ಸಿಸಿಬಿ ಹೆಗಲಿಗೆ ಬಿದ್ದಿದ್ದು, ಮುಂದೆ ಏನು ಬೆಳವಣಿಗೆಯಾಗಲಿದೆ ಎಂದು ಕಾದು ನೋಡಬೇಕಿದೆ.

Read More

ಹೈಕಮಾಂಡ್, ಬಿಜೆಪಿ ನಾಯಕರು, ಕಾರ್ಯಕರ್ತರಿಗೆ ಧನ್ಯವಾದ ಹೇಳಿದ ಜ್ಞಾನೇಂದ್ರ NAMMUR EXPRESS NEWSತೀರ್ಥಹಳ್ಳಿ : ತೀರ್ಥಹಳ್ಳಿ ಕ್ಷೇತ್ರದಿಂದ ಹಾಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ.ಸತತವಾಗಿ ಹತ್ತನೇ ಬಾರಿ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದು ಇಡೀ ಕ್ಷೇತ್ರದಲ್ಲಿ ಮುಖಂಡರು, ಕಾರ್ಯಕರ್ತರು ಸಂಭ್ರಮ ವ್ಯಕ್ತಪಡಿಸಿದ್ದಾರೆ.ಆರಗ ಜ್ಞಾನೇಂದ್ರ ಅವರು ಈ ಬಗ್ಗೆ ಪ್ರತಿಕ್ರಿಯಿಸಿ ಅವಕಾಶ ಮಾಡಿಕೊಟ್ಟರುವಂತಹ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜೀಯವರಿಗೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ದಾ ಅವರಿಗೆ, ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರಿಗೆ, ಬಿ.ಎಸ್ ಯಡಿಯೂರಪ್ಪನವರಿಗೆ ಹಾಗೂ ಕರ್ನಾಟಕದ ನಮ್ಮ ಪಕ್ಷದ ಎಲ್ಲಾ ಹಿರಿಯರಿಗೂ ಹಾಗೂ ನನ್ನ ಜೀವಾಳದಂತಿರುವ ಕಾರ್ಯಕರ್ತರಿಗೆ ತುಂಬು ಹೃದಯದ ಧನ್ಯವಾದಗಳು.ಮತ್ತೊಮ್ಮೆ ತೀರ್ಥಹಳ್ಳಿಯಲ್ಲಿ ಕಮಲವನ್ನು ಅರಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಒಮ್ಮತದಿಂದ ಕಾರ್ಯನಿರ್ವಹಿಸೋಣ ಎಂದು ವಿನಂತಿಸಿಕೊಳ್ಳುತ್ತೇನೆ ಎಂದು ಮನವಿ ಮಾಡಿದ್ದಾರೆ.ಕಳೆದ ಒಂದು ವರ್ಷದಿಂದ ಗೃಹ ಸಚಿವರಾದ್ರೂ ಹಳ್ಳಿ ಹಳ್ಳಿ ಸುತ್ತಾಡಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ.

Read More