Author: Nammur Express Admin

ಕಾಂಗ್ರೆಸ್‌ನಲ್ಲಿ ಕಾಗೋಡು ಪುತ್ರಿ ರಾಜ ನಂದಿನಿ ಬಂಡಾಯಎದೆಗೆ ಚೂರಿ ಹಾಕಿದ ಹಾಗೆ ಮಾಡಿದ್ದಾಳೆ ಎಂದ ಕಾಗೋಡು NAMMUR EXPRESS NEWSಶಿವಮೊಗ್ಗ: ಶಿವಮೊಗ್ಗ ನಗರ ಬಿಜೆಪಿಯಲ್ಲಿ ಈಶ್ವರಪ್ಪನವರ ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಸಾಗರದಲ್ಲೂ ರಾಜಕೀಯ ಜೋರಾಗಿದೆ.ಸಾಗರ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಕಾಗೋಡು ತಿಮ್ಮಪ್ಪ ಅವರ ಪುತ್ರಿ ಡಾ.ರಾಜನಂದಿನಿ ಅವರು ಸಿಎಂ ಬೊಮ್ಮಾಯಿ ಹಾಗೂ ಯಡಿಯೂರಪ್ಪ ಭೇಟಿ ಮಾಡಿ ಬಿಜೆಪಿ ಸೇರಿದ್ದಾರೆ.ಡಾ. ರಾಜನಂದಿನಿ ಜೊತೆಗೆ ಹನಗೋಡು ರತ್ನಾಕರ್ ಸೇರಿದಂತೆ ಹಲವರು ಬಿಜೆಪಿ ಸೇರಲಿದ್ದಾರೆ ಎನ್ನಲಾಗಿದೆ.ಅಸಮಾಧಾನಿತರಿಗೆ ಹರತಾಳು ಹಾಲಪ್ಪ ಗಾಳ ಹಾಕಿದ್ದಾರಾ ಎಂಬ ಅನುಮಾನ ಶುರು ಆಗಿದೆಬೇಳೂರು ಗೋಪಾಲಕೃಷ್ಣರಿಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಬೆನ್ನಲ್ಲೆ ಡಾ.ರಾಜನಂದಿನಿ ಬೇಸರಗೊಂಡಿದ್ದರು. ಅಲ್ಲಿವರೆಗೂ ಪಕ್ಷದ ಎಲ್ಲಾ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಅವರು, ಆನಂತರದ ಬೆಳವಣಿಗೆಯಲ್ಲಿ ಬೇಳೂರು ಗೋಪಾಲಕೃಷ್ಣರಿರುವ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಆರಂಭದಲ್ಲಿ ಮುನಿಸು ತೋರಿದ್ದ ಕಾಗೋಡು ತಿಮ್ಮಪ್ಪನವರು, ನಮ್ಮನಮ್ಮ ತಪ್ಪಿಗೆ ಪಕ್ಷವನ್ನು ಸೋಲಿಸುವುದು ಸರಿಯಲ್ಲ, ಎಲ್ಲರೂ ಸೇರಿ ಬೇಳೂರು ಗೋಪಾಲಕೃಷ್ಣರನ್ನು ಗೆಲ್ಲಿಸೋಣ ಎಂದಿದ್ದರು. ಅಲ್ಲದೆ ಹರತಾಳು ಹಾಲಪ್ಪರನ್ನು ಟೀಕಿಸಿದ್ದರು. ಇನ್ನೊಂದೆಡೆ…

Read More

ತೀರ್ಥಹಳ್ಳಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆಇದು ನನ್ನ ಕೊನೆ ಚುನಾವಣೆ, ಈ ಚುನಾವಣೆ ಮಂಜುನಾಥ ಗೌಡರ ನೇತೃತ್ವ: ಕಿಮ್ಮನೆ NAMMUR EXPRESS NEWSತೀರ್ಥಹಳ್ಳಿ : ಏ.19ಕ್ಕೆ ನಾನು ಎಲ್ಲಾ ಅಭಿಮಾನಿಗಳು, ತೀರ್ಥಹಳ್ಳಿ ಸಮಸ್ತ ಜನತೆಯ ಬೆಂಬಲದೊಂದಿಗೆ ನಾಮಪತ್ರ ಸಲ್ಲಿಸುತ್ತೇನೆ. ಈ ಚುನಾವಣೆಯನ್ನು ಮಂಜುನಾಥ ಗೌಡ ಅವರ ನೇತೃತ್ವದಲ್ಲಿ ಮಾಡುತ್ತೇವೆ. ಜ್ಞಾನೇಂದ್ರ ಅವರ ಸುಳ್ಳುಗಳು, ಅವರ ಕೆಲವು ಬೆಂಬಲಿಗರ ದರ್ಪ ಈ ಚುನಾವಣೆಯಲ್ಲಿ ಜನ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿಸುತ್ತದೆ ಎಂದು ತೀರ್ಥಹಳ್ಳಿ ಮಾಜಿ ಶಾಸಕ, ಮಾಜಿ ಸಚಿವ, ಕಾಂಗ್ರೆಸ್ ಅಭ್ಯರ್ಥಿ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.ತೀರ್ಥಹಳ್ಳಿಯಲ್ಲಿ ಮಂಜುನಾಥ ಗೌಡರ ಮನೆಯಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾದ ವಾತಾವರಣ ಇದೆ. ಆರಗ ಜ್ಞಾನೇಂದ್ರ ಅವರು ನಾನು ನನ್ನ ಅವಧಿಯಲ್ಲಿ ಮಂಜೂರು ಮಾಡಿಸಿದ ಯೋಜನೆಗಳನ್ನು ನಾನು ಮಾಡಿಸಿದ್ದು ಎಂದು ಎಲ್ಲಾ ಕಡೆ ಬೋರ್ಡ್ ಹಾಕಿಕೊಂಡಿದ್ದಾರೆ. ಎಲ್ಲಾ ಕಡೆ ಕಳಪೆ ಕಾಮಗಾರಿ ಮಾಡಲಾಗಿದೆ. ಜನರೇ ಇದೀಗ ಎಲ್ಲಾ ಕಡೆ ಹಿಡಿಶಾಪ…

Read More

ಹಣದ ಆಸೆಗೆ ಜೀವ, ಜೀವನ ಹಾಳು: ಕೇಳೋರ್ಯಾರು?ಪೊಲೀಸ್ ಇಲಾಖೆ ಮೌನ: ಎಲ್ಲೆಲ್ಲೂ ಬೆಟ್ಟಿಂಗ್ NAMMUR EXPRESS NEWSಯುವ ಪೀಳಿಗೆ ಈಗ ಬರೀ ಫೋನ್ ಎಂಬ ಮಾಯಾಜಾಲದ ಒಳಗೆ ಸೇರಿ ತಮ್ಮ ಅಮೂಲ್ಯ ಬದುಕು ಹಾಳು ಮಾಡಿಕೊಳ್ಳುತ್ತಿದೆ.ಮೊಬೈಲ್ ಕ್ರಿಕೆಟ್ ಬೆಟ್ಟಿಂಗ್, ಗೇಮ್ ಬೆಟ್ಟಿಂಗ್, ಫೋನ್ ಹುಚ್ಚಿಗೆ ಜೀವ, ಜೀವನ ಕಳೆದುಕೊಳ್ಳುತ್ತಿರುವ ಪ್ರಕರಣ ಹೆಚ್ಚಾಗಿದೆ.ಉದ್ಯೋಗ ಮಾಡದೇ, ಇರುವ ಅವಕಾಶ ಬಳಸಿಕೊಳ್ಳದೆ ಕಡಿಮೆ ಸಮಯದಲ್ಲಿ ಹೆಚ್ಚೂ ದುಡ್ಡು ಮಾಡುವ ದುರಾಸೆಯಿಂದ ಬೆಟ್ಟಿಂಗ್ ದಂಧೆಗೆ ಬಿದ್ದು ಹಣ, ಅಸ್ತಿ ಪಾಸ್ತಿ ಕಳೆದುಕೊಂಡು ಬೀದಿಗೆ ಬೀಳುವ ಪ್ರಕರಣಗಳು ಹೆಚ್ಚಿವೆ. ಇಂತಹ ವ್ಯಕ್ತಿಗಳು ಬದುಕು ಹಾಳು ಮಾಡಿಕೊಳ್ಳುವ ಜೊತೆಗೆ ಸಮಾಜದಲ್ಲಿ ಘನತೆ ಗೌರವವನ್ನು ಕಳೆದುಕೊಂಡು ಬದುಕಲೂ ಆಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.ಇದಕ್ಕೆ ಉದಾಹರಣೆ ಎಂಬಂತೆ ಇತ್ತೀಚಿಗೆ ತೀರ್ಥಹಳ್ಳಿ ತಾಲೂಕಿನ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ, ಪ್ರತಿ ನಿತ್ಯ ಹತ್ತಾರು ಮಂದಿ ಜೀವ ಕಳೆದುಕೊಳ್ಳುತ್ತಿದ್ದಾರೆ.ಬೆಟ್ಟಿಂಗ್ ಪೊಲೀಸ್ ಇಲಾಖೆ ಮೌನ!?: ಉಡುಪಿ ಜಿಲ್ಲೆ ಸಾಲಿಗ್ರಾಮ‌ದಲ್ಲಿ ಕ್ರಿಕೆಟ್ ಬೆಟ್ಟಿಂಗ್ ವೇಳೆ ಕೋಟ ಪೊಲೀಸರ ದಾಳಿ…

Read More

ಬೆಂಗಳೂರು : ಬಿಜೆಪಿ ಪರ ಪ್ರಚಾರ ಮಾಡುತ್ತೇನೆ ಎಂದು ಘೋಷಣೆ ಮಾಡಿರುವ ಸುದೀಪ್ ವಿರುದ್ಧ ಚುನಾವಣಾ ಆಯೋಗಕ್ಕೆ ರಾಜ್ಯ ಜೆಡಿಎಸ್ ಹಾಗೂ ಶಿವಮೊಗ್ಗ ವಕೀಲ ಕೆ.ಪಿ.ಶ್ರೀಪಾಲ್ ದೂರು ನೀಡಿದ್ದಾರೆ.ಸುದೀಪ್ ಬಿಜೆಪಿಯ ಸ್ಟಾರ್ ಪ್ರಚಾರಕರಾಗಿದ್ದು, ಅವರ ಸಿನಿಮಾ, ಜಾಹೀರಾತು, ಪೋಸ್ಟರ್ ಮತದಾರರ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿ ಚುನಾವಣೆ ಮುಗಿಯುವವರೆಗೂ ನಟನೆ, ಶೋ ಗಳ ಭಾವಚಿತ್ರವಿರುವ ಜಾಹೀರಾತು ಪ್ರಸಾರಕ್ಕೆ ತಡೆ ನೀಡುವಂತೆ ದೂರು ನೀಡಿದ್ದಾರೆ. ಈ ಬಗ್ಗೆ ಜೆಡಿಎಸ್ ಕಾನೂನು ವಿಭಾಗ ದೂರು ನೀಡಿದೆಚುನಾವಣಾ ಸಂಬಂಧ ನಟ ಸುದೀಪ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾನು ಮಾಮ ಅಂತಲೇ ಸಿಎಂ ಅವ್ರನ್ನ ಕರೆಯುವೆ, ಬೊಮ್ಮಾಯಿ ಅವ್ರು ನನ್ನ ಅಂಕಲ್, ಅವ್ರ ಪರ ನಿಲ್ಲುವೆ. ಸಿಎಂ ಆಗಿ ಬೊಮ್ಮಾಯಿ ಅಂಕಲ್ ಉತ್ತಮ ಕೆಲ್ಸ ಮಾಡಿದ್ದಾರೆ, ಪಕ್ಷಕ್ಕಾಗಿ ಬೊಮ್ಮಾಯಿ ಅಂಕಲ್ ಪ್ರಚಾರಕ್ಕೆ ಕರೆದ್ರೆ ಹೋಗುವೆ. ಅವ್ರು ಎಲ್ಲಿ ಹೇಳ್ತಾರೋ ಅಲ್ಲಿ ಹೋಗುವೆ ಪ್ರಚಾರ ಮಾಡುವೆ.ನನ್ನ ಕಷ್ಟ ಕಾಲದಲ್ಲಿ ಕೆಲವರು ನೆರವಾಗಿದ್ದಾರೆ. ನನ್ನ ಕೆಲ ಹಿತೈಷಿಗಳ ಪರ ಪ್ರಚಾರ ಮಾಡುವೆ,…

Read More

ಆನ್ ಲೈನ್ ಮೂಲಕ ರಾಜ್ಯದಲ್ಲಿ ಅಮೂಲ್ ಉತ್ಪಾದನೆಗೆ ರಾಜ್ಯ ಸರ್ಕಾರ ಅನುಮತಿ ನೀಡಿರುವ ಹಿನ್ನಲೆಯಲ್ಲಿ ರಾಜ್ಯ ರೈತ ಸಂಘ ಆಕ್ಷೇಪಿಸಿದೆ. ಒಂದು ವೇಳೆ ಅಮೂಲ್ ಗೆ ಅವಕಾಶ ಮಾಡಿಕೊಟ್ಟರೆ ಅಮೂಲ್ ಉತ್ಪನ್ನಗಳನ್ನ ಬೀದಿಗೆ ಚೆಲ್ಲುವ ಮೂಲಕ ಹೋರಾಟದ ಎಚ್ಚರಿಕೆ ನೀಡಿದ್ದಾರೆ.ಮಂಡ್ಯಕ್ಕೆ ಈ ಹಿಂದೆ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಿದಾಗ ಅಮೂಲ್ ಉತ್ಪನ್ನಗಳನ್ನ ರಾಜ್ಯದಲ್ಲಿ ಮಾರಾಟಕ್ಕೆ ಅವಕಾಶ ನೀಡುವುದರ ಬಗ್ಗೆ ಪ್ರಸ್ತಾಪಿಸಿದ್ದರು. ಶನಿವಾರ ಆನ್ ಲೈನ್ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.ಅಮೂಲ್ ರಾಜ್ಯಕ್ಕೆ ಬಂದರೆ ಒಂದು ಕೋಟಿ ಜನ ರೈತ ಮತ್ತು ರೈತ ಮಹಿಳೆ ಕೆಎಂಎಫ್ ನ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಅಗ್ಗದ ಬೆಲೆಗೆ ಕೆಎಂಎಫ್ ಉತ್ಪನ್ನಗಳು ಗ್ರಾಹಕರಿಗೆ ಲಭಿಸುತ್ತಿವೆ. ಆದರೆ ಅಮೂಲ್ ರಾಜ್ಯಕ್ಕೆ ಲಗ್ಗೆ ಇಡುವ ಮೂಲಕ ಉದ್ಯೋಗವನ್ನ ಕಿತ್ತುಕೊಳ್ಳುವ ಭಯವಿದೆ ಎಂದು ಆರೋಪಿಸಿದರು.

Read More

ಏ.10ರವರೆಗೆ ಭಾರೀ ಮಳೆ: ಜನರಿಗೆ ಎಚ್ಚರಿಕೆಕಳೆದ ಕೆಲ ದಿನಗಳಿಂದ ಬೆಂಗಳೂರಲ್ಲೂ ಮಳೆ NAMMUR EXPRESS NEWSಬೆಂಗಳೂರು: ರಾಜ್ಯದ ಹಲವೆಡೆ ಕಳೆದ ಎರಡು ಮೂರು ದಿನಗಳಿಂದಲೂ ಭಾರೀ ಮಳೆ ಸುರಿಯುತ್ತಿದೆ. ಬೆಂಗಳೂರು ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದೆ.ಮುಂದಿನ ನಾಲ್ಕು ದಿನಗಳ ಕಾಲ ಬಾರೀ ಮಳೆ ಸುರಿಯುವ ಕುರಿತು ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಅಧಿಕ ಮಳೆಯಾಗುವ ಸಾಧ್ಯತೆಯಿದೆ ಎಂದಿದೆ.ರಾಜ್ಯದ ಹಲವು ಜಿಲ್ಲೆಗಳಲ್ಲಿ ಏಪ್ರಿಲ್ 10ರವರೆಗೆ ಭಾರೀ ಮಳೆಯಾಗಲಿದ್ದು, ಮಲೆನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಇಲಾಖೆ ನೀಡಿದೆ. ಉಳಿದ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಕರಾವಳಿಯ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲೂ ಮಳೆಯಾಗಲಿದ್ದು ಉತ್ತರ ಒಳನಾಡಿನ ಜಿಲ್ಲೆಗಳಾದ ವಿಜಯಪುರ, ಕಲಬುರಗಿ, ಹಾವೇರಿ, ಧಾರವಾಡ, ಬೀದರ್, ಬೆಳಗಾವಿ, ಬಾಗಲಕೋಟೆ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಕೊಡಗು, ಕೋಲಾರ, ಮೈಸೂರು, ರಾಮನಗರ ಜಿಲ್ಲೆಗಳ ಹಲವು…

Read More

ತೀರ್ಥಹಳ್ಳಿ ಕ್ಷೇತ್ರದಿಂದ ಕಿಮ್ಮನೆ ಹೆಸರು ಅಂತಿಮತೀರ್ಥಹಳ್ಳಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ NAMMUR EXPRESS NEWSತೀರ್ಥಹಳ್ಳಿ: ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಘೋಷಣೆಯಾಗಿದ್ದು ಅಧಿಕೃತ ಪಟ್ಟಿಯಲ್ಲಿ ಮಾಜಿ ಸಚಿವ, ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಹೆಸರು ಬಿಡುಗಡೆ ಮಾಡಲಾಗಿದೆ.ರಾಜ್ಯದ 42 ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡಲಾಗಿದ್ದು ಅಂತೂ ಕಿಮ್ಮನೆ ರತ್ನಾಕರ್ ಸ್ಥಾನ ಪಡೆದಿದ್ದಾರೆ.ಗುರುವಾರ ತಾನೇ ತೀರ್ಥಹಳ್ಳಿ ಕ್ಷೇತ್ರದ ಇಬ್ಬರು ನಾಯಕರು ಸಭೆ ನಡೆಸಿ ಯಾರಿಗೆ ಟಿಕೆಟ್ ನೀಡಿದರೂ ಕೆಲಸ ಮಾಡುವುದಾಗಿ ಘೋಷಣೆ ಮಾಡಿದ್ದರು. ಇದೀಗ ತೀರ್ಥಹಳ್ಳಿ ಕಾಂಗ್ರೆಸ್ ಪಕ್ಷದಲ್ಲಿ ಹೊಸ ಸಂಚಲನ ಮೂಡಿಸಿದೆ.ಡಿ. ಕೆ. ಶಿವಕುಮಾರ್ ಕಿಮ್ಮನೆ ಅವರಿಗೆ ಕರೆ ಮಾಡಿ ಇಬ್ಬರೂ ಸೇರಿ ಈ ಚುನಾವಣೆ ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದು ಹೇಳಿದ್ದಾರೆ. ಸಹಕಾರಿ ನಾಯಕ, ಹಾಗೂ ತೀರ್ಥಹಳ್ಳಿ ಕ್ಷೇತ್ರದ ಪ್ರಬಲ ಸಂಘಟಕ ಡಾ. ಆರ್. ಎಂ. ಮಂಜುನಾಥ ಗೌಡ ಅವರು ಕೂಡ ಒಗ್ಗಟ್ಟಿನ ಮಂತ್ರ ಜಪಿಸಿದ್ದು ಇದೀಗ ಇಡೀ ಕ್ಷೇತ್ರದ ಕಾರ್ಯಕರ್ತರಿಗೆ…

Read More

ರಾಜ್ಯದ 42 ಅಭ್ಯರ್ಥಿಗಳ ಪಟ್ಟಿಯಲ್ಲಿ ತೀರ್ಥಹಳ್ಳಿ ಘೋಷಣೆ NAMMUR EXPRESS NEWSತೀರ್ಥಹಳ್ಳಿ: ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಘೋಷಣೆಯಾಗಿದ್ದು ಅಧಿಕೃತ ಪಟ್ಟಿಯಲ್ಲಿ ಬಿಡುಗಡೆ ಮಾಡಲಾಗಿದೆ.ರಾಜ್ಯದ 42 ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡಲಾಗಿದೆ.ಶಿವಮೊಗ್ಗ ನಗರ, ಶಿಕಾರಿಪುರ, ಗ್ರಾಮಾಂತರ ಟಿಕೆಟ್ ಘೋಷಣೆ ಆಗಿಲ್ಲ. ಈ ಮೂಲಕ ತೀರ್ಥಹಳ್ಳಿ ರಾಜಕಾರಣ ರಂಗೇರಿದೆ.

Read More

ಬೊಮ್ಮಾಯಿ ಅವರಿಗೆ ಬೆಂಬಲ ಕೊಡ್ತೇನೆನಾನು ರಾಜಕೀಯಕ್ಕೆ ಬರಲ್ಲ: ಸುದೀಪ್ ಸ್ಪಷ್ಟನೆನನಗೆ ಸಹಾಯ ಮಾಡಿದವರ ಪರ ಪ್ರಚಾರ ಮಾಡ್ತೇನೆ NAMMUR EXPRESS NEWSಬೆಂಗಳೂರು : ನಾನು ಚಿಕ್ಕ ವಯಸ್ಸಿನಿಂದಲೂ ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ನೋಡಿಕೊಂಡು ಬಂದಿದ್ದೇನೆ. ನನ್ನ ಕಷ್ಟದ ದಿನಗಳಲ್ಲಿ ಕೆಲವೇ ಕೆಲವು ಜನರು ನನ್ನ ಜೊತೆಗೆ ನಿಂತಿದ್ದರು. ಅದರಲ್ಲಿ ಒಬ್ಬರು ನನ್ನ ಬಸವರಾಜ್ ಬೊಮ್ಮಾಯಿ ಮಾಮ. ನನ್ನ ನಿಲುವು ಅಂತಾ ಅಲ್ಲಾ ನಾನು ನಿಮ್ಮಜೊತೆಗೆ ನಿಲ್ಲುತ್ತೇನೆ ಎಂದು ಹೇಳಲು ಬಂದಿದ್ದೇನೆ. ಕೆಲವು ವ್ಯಕ್ತಿಗಳು ನನಗೆ ಸಹಕಾರ ಮಾಡಿದ್ದಾರೆ. ನಾನು ರಾಜಕೀಯಕ್ಕೆ ಬರುವುದಿಲ್ಲ. ನಾನು ಪಕ್ಷದ ಪರ ನಿಂತಿಲ್ಲ ಬದಲಾಗಿ ವ್ಯಕ್ತಿಯ ಪರ ನಿಲ್ಲುತ್ತೇನೆ ಎಂದು ಸುದೀಪ್ ಹೇಳಿದ್ದಾರೆ.ಬೆಂಗಳೂರಿನ ಅಶೋಕ ಹೋಟೆಲ್‌ನಲ್ಲಿ ನಟ ಸುದೀಪ್ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಜೊತೆಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಬಿಜೆಪಿ ಪಕ್ಷ ನನ್ನನ್ನು ಕರೆದಿಲ್ಲ ಬೊಮ್ಮಾಯಿ ಅವರು ಬೆಂಬಲ ಕೋರಿದ್ದಾರೆ. ಹೀಗಾಗಿ ನಾನು ಅವರನ್ನು ಬೊಮ್ಮಾಯಿ ಅವರಿಗೆ ಬೆಂಬಲ ನೀಡುತ್ತೇನೆ. ನಾನು ರಾಜಕೀಯಕ್ಕೆ ಬಂದಿಲ್ಲ.…

Read More

ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಮಾಹಿತಿ ಕೊರತೆ ಆರೋಪಅಧಿಕಾರಿಗಳಿಂದ ಜನತೆಗೆ ಸ್ಥಳೀಯ ನೌಕರರಿಗೆ ಮಾಹಿತಿ ಇಲ್ಲ NAMMUR EXPRESS NEWSಬೆಂಗಳೂರು : ವಿಧಾನಸಭಾ ಚುನಾವಣೆ ಘೋಷಣೆಯಾಗಿದೆ. ಮೇ 10ರಂದು ಚುನಾವಣೆ 13 ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ನೀತಿ ಸಂಹಿತೆ ಜಾರಿಯಾಗಿದೆ. ಚುನಾವಣೆ ಪ್ರಚಾರ ಜೊತೆಗೆ ಚುನಾವಣೆ ಪ್ರಕ್ರಿಯೆಗೆ ಸಂಬಂಧಪಟ್ಟಂತೆ ಅಧಿಕಾರಿಗಳು ಹಾಗೂ ಚುನಾವಣಾ ಆಯೋಗ ಸಿದ್ಧತೆ ಪಡೆಸಿಕೊಂಡಿದೆ.ಪ್ರತಿ ತಾಲೂಕು ಮಟ್ಟದಲ್ಲಿ ಅಧಿಕಾರಿಗಳನ್ನು ನೇಮಕಾತಿ ಮಾಡಲಾಗಿದೆ. ಜೊತೆಗೆ ಹಳ್ಳಿ ಹಳ್ಳಿಗಳಲ್ಲೂ ಕೂಡ ಸರ್ಕಾರಿ ನೌಕರರನ್ನು ಚುನಾವಣೆ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ. ಚೆಕ್ ಪೋಸ್ಟ್ ಗಳನ್ನು ನಿರ್ಮಾಣ ಮಾಡಲಾಗಿದೆ. ಮತದಾನದ ಪ್ರಕ್ರಿಯೆಗಳ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸಲಾಗುತ್ತಿದೆ. ಆದರೆ ಸರ್ಕಾರಿ ಕಚೇರಿಗಳಲ್ಲಿ ಮಾಹಿತಿಯ ಕೊರತೆ ಎದ್ದು ಕಾಣುತ್ತಿದೆ.ಜನರಿಗೆ ಮನೆಗಳಲ್ಲಿ ಖಾಸಗಿ ಕಾರ್ಯಕ್ರಮಗಳನ್ನು ನಡೆಸಲು, ಸಭೆ ಸಮಾರಂಭಗಳು ಹಾಗೂ ಇತರೆ ದೈನಂದಿನ ಚಟುವಟಿಕೆಗಳಲ್ಲಿ ಚುನಾವಣಾ ನೀತಿ ಸಂಹಿತೆ ನಿಯಮಗಳ ಅಳವಡಿಕೆ ಬಗ್ಗೆ ಅನೇಕ ಗೊಂದಲಗಳು ನಿರ್ಮಾಣವಾಗಿದೆ. ಇದು ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಕಂಡು ಬರುತ್ತಿದ್ದು,…

Read More