ವಿಧಾನ ಸೌಧದ ಸುತ್ತ ದಾರ್ಶನಿಕರ ಪ್ರತಿಮೆ ನಿರ್ಮಾಣತೀರ್ಥಹಳ್ಳಿ ಹೆಸರನ್ನು ಕಲಾ ಪ್ರಪಂಚದಲ್ಲಿ ಅರಳಿಸಿದ ಕಲಾವಿದ NAMMUR EXPRESS NEWSನಾಡಿನ ಖ್ಯಾತ ಕಲಾವಿದರಾದ ತೀರ್ಥಹಳ್ಳಿ ಮೂಲದ ಬಿ.ಡಿ.ಜಗದೀಶ್ ಬಾಣಂಕಿ ನಿರ್ಮಿಸಿರುವ ಬಸವಣ್ಣ, ಕೆಂಪೇಗೌಡ, ಕೆ.ಸಿ.ರೆಡ್ಡಿ ಮತ್ತು ಡಾ.ಅಂಬರೀಶ್ ಅವರ ಪ್ರತಿಮೆಯನ್ನು ರಾಜ್ಯ ಸರ್ಕಾರ ಸಮರ್ಪಣೆ ಮಾಡಿದೆ.ವಿಧಾನ ಸೌಧದ ಮುಂದೆ ಬಸವಣ್ಣ, ಕೆಂಪೇಗೌಡ ಹಾಗೂ ಕೆ.ಸಿ. ರೆಡ್ಡಿ ಪ್ರತಿಮೆ ಈ ನಾಡಿನ ಹಿರಿಯರ ನೆನಪಿನ ಪುಟವಾಗಿ ನಿಂತಿದೆ.ಇನ್ನು ಕಂಠೀರವ ಸ್ಟುಡಿಯೋದಲ್ಲಿ ನಟ ಅಂಬರೀಷ್ ಪ್ರತಿಮೆಯನ್ನು ಸೋಮವಾರ ಲೋಕಾರ್ಪಣೆಗೊಳಿಸಲಾಗಿದೆ. ಈ ಎಲ್ಲಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗಣ್ಯರ ಸಮ್ಮುಖದಲ್ಲಿ ನಾಡಿಗೆ ಸಮರ್ಪಿಸಲಾಗಿದೆ.ತೀರ್ಥಹಳ್ಳಿಯ ದೇವಂಗಿ ಸಮೀಪದ ಬಾಣಂಕಿ ಮೂಲದ ಜಗದೀಶ್ ಈಗ ನಾಡಿನ ಕಲಾ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದು ಇವರ ಕಲೆ ಬಗ್ಗೆ ಸಿಎಂ ಬೊಮ್ಮಾಯಿ, ಸಚಿವ ಆರ್ ಅಶೋಕ್, ಅಂಬರೀಷ್ ಪತ್ನಿ ಸುಮಲತಾ, ಮಗ ಅಭಿಷೇಕ್, ಹಾಗೂ ಎಲ್ಲಾ ಗಣ್ಯರು ಹೆಮ್ಮೆ ವ್ಯಕ್ತಪಡಿಸಿ ಗೌರವಿಸಿದ್ದಾರೆ.ತುಂಗಾ ಕಾಲೇಜಿನಲ್ಲಿ ಪಿಯುಸಿ ವಿಧಾನ ಸೌಧದ ಎದುರು…
Author: Nammur Express Admin
224 ವಿಧಾನ ಸಭಾ ಕ್ಷೇತ್ರ ಚುನಾವಣೆ ದಿನಾಂಕ: ಮೇ 10ಫಲಿತಾಂಶ ದಿನಾಂಕ: ಮೇ 13ಅಧಿಸೂಚನೆ ಪ್ರಕಟ: ಏಪ್ರಿಲ್ 13ನಾಮಪತ್ರ ಸಲ್ಲಿಕೆ: ಏ.20ನಾಮಪತ್ರ ಪರಿಶೀಲನೆ: ಏ.21ನಾಮಪತ್ರ ಹಿಂಪಡೆಯಲು ಕೊನೆ ದಿನಾಂಕ:ಏ.24 Vote : ತೀರ್ಥಹಳ್ಳಿ ವಿಧಾನ ಸಭಾ ಚುನಾವಣೆ – 2023 ಗೆಲ್ಲುವವರು ಯಾರು…?
ಎ.13ರಿಂದ ಚುನಾವಣೆ ಪ್ರಕ್ರಿಯೆ ಶುರುಇಂದಿನಿಂದಲೇ ನೀತಿ ಸಂಹಿತೆ ಜಾರಿ: ಎಲ್ಲೆಡೆ ಅಲರ್ಟ್ದೆಹಲಿಯಲ್ಲಿ ಚುನಾವಣಾ ಆಯೋಗದಿಂದ ಘೋಷಣೆಎಲ್ಲಾ ಶಾಸಕರು, ಸಚಿವರು, ಸಿಎಂ ಎಲ್ಲರೂ ಮಾಜಿ! NAMMUR EXPRESS NEWSನವ ದೆಹಲಿ: ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ಪ್ರಕಟವಾಗಿದ್ದು ರಾಜ್ಯದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ.ಮೇ 10ಕ್ಕೆ ಚುನಾವಣೆ: ಮೇ 13ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಏ.20 ನಾಮಪತ್ರ ಸಲ್ಲಿಕೆ ಕೊನೆ ದಿನ, ಏ.21 ನಾಮಪತ್ರ ಸಲ್ಲಿಕೆಗೆ ಪರಿಶೀಲನೆ, ಏ.24 ನಾಮಪತ್ರ ಹಿಂಪಡೆಯಲು ಕೊನೆ ದಿನ ಆಗಲಿದೆ.ರಾಜ್ಯದ 224 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.ಮೇ 23ರೊಳಗೆ ಹೊಸ ಸರ್ಕಾರ ರಚನೆ ಆಗಬೇಕು. ಇನ್ನೂ 80 ವರ್ಷದ ನಂತರ ವಯಸ್ಸಿನವರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಒಂದು ಮತಗಟ್ಟೆಗೆ 883 ಮತದಾರರು ಇರಬೇಕು. ರಾಜ್ಯದಲ್ಲಿ 5.22 ಕೋಟಿ ಮತದಾರರಿದ್ದಾರೆ.2 ಕೋಟಿ 59 ಲಕ್ಷ ಮಹಿಳಾ ಮತದಾರರು, 2 ಕೋಟಿ 62 ಲಕ್ಷ ಪುರುಷ,4699 ತೃತೀಯ ಲಿಂಗಿಗಳು, 12.15 ಲಕ್ಷ ಯುವ ಮತದಾರರಿದ್ದಾರೆ. 18-19ರ ವಯಸ್ಸಿನ 9.17 ಲಕ್ಷ…
ಏನಿದು ಕಥೆ… ಏನು ಚಂದ್ರನ ನೋಡುವ ಪುರಾಣ?ಬೇವು ಬೆಲ್ಲ ಎಂಬ ಬದುಕಿನ ಎರಡು ಮುಖಗಳು NAMMUR EXPRESS NEWSಹಬ್ಬದ ಆಚರಣೆಯ ಸುತ್ತಮುತ್ತ ಹರಡಿರುವ ಕಥೆಗಳು ಸಂಪ್ರದಾಯ ಎಲ್ಲರನ್ನು ಆಕರ್ಷಿಸುತ್ತದೆ. ಜೊತೆಗೆ ಅದು ಸಂಪ್ರದಾಯವಾಗಿ ಎಲ್ಲಾ ಕಡೆ ಆಚರಣೆಯಲ್ಲಿದೆ.ಯುಗಾದಿ ಹಬ್ಬದ ದಿನ ರಾತ್ರಿ ಕಾದು ಕೂತು ಹುಡುಕಿ ಚಂದಿರನ ನೋಡುವ ಸಂಪ್ರದಾಯದ ಹಿಂದೆ ಇರುವ ಕಥೆ ಎಲ್ಲರನ್ನೂ ಸಹ ಸೆಳೆಯುತ್ತದೆ.ಚಂದ್ರಮಾನ ಯುಗಾದಿ ಎಂದು ಕೂಡ ಯುಗಾದಿ ಹಬ್ಬಕ್ಕೆ ಕರೆಯುತ್ತಾರೆ. ಯುಗಾದಿ ಹಬ್ಬದ ದಿನ ಹಬ್ಬದ ಊಟ ಮುಗಿಸಿ ರಾತ್ರಿ ಚಂದ್ರನ ನೋಡುವುದು ಒಳ್ಳೆಯದು ಎಂಬ ನಂಬಿಕೆ ಇದೆ.ಗಣೇಶ ಚತುರ್ಥಿ ಸಮಯದಲ್ಲಿ ಗಣೇಶ ಎಲ್ಲಾರ ಮನೆಯ ಮೋದಕ ಕಡುಬು ತಿಂದು ಹೊಟ್ಟೆ ದೊಡ್ಡ ಮಾಡಿಕೊಂಡು ಗದ್ದೆ ಬಯಲಲ್ಲಿ ಬರುವಾಗ ಜಾರಿ ಬಿದ್ದು ಗಣೇಶನ ಹೊಟ್ಟೆ ಒಡೆದು ಹೋಗುತ್ತದೆ ಅಗ ಗಣೇಶ ಪಕ್ಕದಲ್ಲಿ ಹರಿದು ಹೋಗುತ್ತಿದ ಹಾವು ಹಿಡಿದು ಹೊಟ್ಟೆಗೆ ಕಟ್ಟುಕೊಳ್ಳುತ್ತಾನೆ ಇದನ್ನೆಲ್ಲ ಮೇಲಿನಿಂದ ನೋಡುತ್ತಿದ ಚಂದ್ರ ಜೋರಾಗಿ ನಗುತ್ತಾನೆ. ಅಗ ಗಣೇಶನಿಗೆ ಸಿಟ್ಟು ಬಂದು…
ಧರ್ಮಸ್ಥಳ, ಕುಕ್ಕೆ, ಕೊಲ್ಲೂರು, ಮಂದಾರ್ತಿ ಭೇಟಿಮಠಗಳಿಗೂ ತೆರಳಿ ವಿವಿಧ ಸ್ವಾಮೀಜಿಗಳಿಂದ ಆಶೀರ್ವಾದ NAMMUR EXPRESS NEWSತೀರ್ಥಹಳ್ಳಿ: ಮಾಜಿ ಸಚಿವ, ತೀರ್ಥಹಳ್ಳಿ ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಚುನಾವಣೆ ಸಮೀಪಿಸುತ್ತಿದ್ದಂತೆ ದೇವರ ಮೊರೆ ಹೋಗಿದ್ದಾರೆ.ರಾಜ್ಯದಲ್ಲೇ ಸರಳ, ಸಜ್ಜನ ರಾಜಕಾರಣಿ ಎಂದೇ ಪ್ರಸಿದ್ಧರಾದವರು ಕಿಮ್ಮನೆ. ಕೊಟ್ಟ ಮಾತು ಉಳಿಸಿಕೊಂಡವರು. ಪ್ರಾಮಾಣಿಕ ರಾಜಕಾರಣಿ ಎಂದೇ ಖ್ಯಾತಿ ಗಳಿಸಿದವರು. ಈ ಬಾರಿ ಚುನಾವಣೆ ಅವರಿಗೆ ಅದೃಷ್ಟ ಪರೀಕ್ಷೆಯೇ ಸರಿ. ಹೀಗಿರುವಾಗ ಇಲ್ಲಿ ಟಿಕೆಟ್ ಗೊಂದಲವೂ ಇದೆ. ಹೀಗಿರುವಾಗ ಕಿಮ್ಮನೆ ಅವರು ಧರ್ಮಸ್ಥಳ, ಕೊಲ್ಲೂರು, ಮಂದಾರ್ತಿ, ರಾಮಚಂದ್ರಪುರ ಮಠ ಸೇರಿದಂತೆ ಎಲ್ಲೆಡೆ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ದೇವರಲ್ಲಿ ವಿಶೇಷ ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ತೀರ್ಥಹಳ್ಳಿ ಪಟ್ಟಣದ ಸಾರ್ವಜನಿಕ ಕ್ರೀಡಾಂಗಣದಲ್ಲಿ ತುಳುನಾಡಿನ ದೈವ ಪರಂಪರೆಗೆ ಸೇರಿದ ಗುಳಿಗ ದೈವದ ಹುಟ್ಟು, ಬದುಕು, ನೆಲೆಗಳನ್ನು ಅವಲಂಬಿಸಿ ರೂಪುಗೊಂಡಿರುವ “ಶಿವದೂತೆ ಗುಳಿಗೆ” ನಾಟಕ ಪ್ರದರ್ಶನ ಕಿಮ್ಮನೆ ಸಾರಥ್ಯದಲ್ಲಿ ಭರ್ಜರಿ ಯಶಸ್ಸು ಕಂಡಿತ್ತು. 10 ಸಾವಿರಕ್ಕೂ ಹೆಚ್ಚು ಮಂದಿ ನಾಟಕ ನೋಡಿದ್ದರು.ನಾಗ ದೋಷಕ್ಕೂ ವಿಶೇಷ…
4 ದಿನದ ಕೃಷಿ ಮೇಳ: ಸಾವಿರಾರು ಜನರ ಭೇಟಿಮಿನಿ ಟ್ರ್ಯಾಕ್ಟರ್ ವಿಭಾಗದಲ್ಲಿ ಕ್ಯಾಪ್ಟನ್ ಟ್ರ್ಯಾಕ್ಟರ್ ಬಗ್ಗೆ ಜನರ ಸ್ಪಂದನೆ NAMMUR EXPRESS NEWSಶಿವಮೊಗ್ಗ: ಶಿವಮೊಗ್ಗದ ನವುಲೆ ಕೃಷಿ ವಿವಿ ಯಲ್ಲಿ ನಡೆದ 4 ದಿನಗಳ ಕೃಷಿ ಹಾಗೂ ತೋಟಗಾರಿಕೆ ಮೇಳದಲ್ಲಿ ಪ್ರತಿ ದಿನ ಸಾವಿರಾರು ಮಂದಿ ಭೇಟಿ ನೀಡಿ ಕೃಷಿ ಮತ್ತು ತೋಟಗಾರಿಕೆ ಮಾಹಿತಿ ಪಡೆದರು. ಕೃಷಿ ಮೇಳದಲ್ಲಿ ತಮಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡಿದರು.300ಕ್ಕೂ ಹೆಚ್ಚು ಮಂದಿ ಕೃಷಿ ಉತ್ಪನ್ನ ಉತ್ಪಾದಕರು, ಸ್ಟಾಲ್ ಮಾರಾಟಗಾರರು, ಟ್ರ್ಯಾಕ್ಟರ್ ಮತ್ತು ಕೃಷಿ ಯಂತ್ರ ಮಾರಾಟಗಾರರು ಭಾಗಿಯಾದರು.ವಿವಿಧ ಹಸು, ಶ್ವಾನ ತಳಿಗಳು, ಅಡಿಕೆ ಮಿಷನ್, ವಿವಿಧ ಯಂತ್ರಗಳು, ಸಾವಯವ ಕೃಷಿ ಗಮನ ಸೆಳೆಯಿತು. ಕೃಷಿ ಮೇಳದಲ್ಲೂ ಕ್ಯಾಪ್ಟನ್ ಮಿನಿ ಟ್ರ್ಯಾಕ್ಟರ್ ಹವಾ ರಾಜ್ಯದಲ್ಲಿ ಬಹು ಬೇಡಿಕೆ ಸೃಷ್ಟಿ ಮಾಡುತ್ತಿರುವ ಮಿಶ್ಚಿಬ್ಯುಷಿ ಇಂಜಿನ್ನಿನ ಕ್ಯಾಪ್ಟನ್ ಮಿನಿ ಟ್ರ್ಯಾಕ್ಟರ್ ಕೃಷಿಕರ ಗಮನ ಸೆಳೆಯಿತು. ಶಿವಮೊಗ್ಗದ ಆಟೋ ಕಾಂಪ್ಲೆಕ್ಸ್ ಅಲ್ಲಿರುವ ಕ್ಯಾಪ್ಶನ್ ಮಿನಿ ಟ್ರ್ಯಾಕ್ಟರ್ ಶೋ ರೂಂವತಿಯಿಂದ ಕೃಷಿ…
ಟ್ವಿಟರ್ ನಲ್ಲಿ ವಿಧಾನಸಭಾ ಚುನಾವಣೆಗೆ ಅರ್ಜಿಉಪೇಂದ್ರ ನೇತೃತ್ವದ ಪಕ್ಷಕ್ಕೆ ಭಾರೀ ಡಿಮ್ಯಾಂಡ್ NAMMUR EXPRESS NEWSಬೆಂಗಳೂರು: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ದೇಶ, ರಾಜ್ಯದಾದ್ಯಂತ ಪ್ರತಿ ಪಕ್ಷದಲ್ಲೂ ಚುನಾವಣೆ ಬಿಸಿ ಏರಿದೆ. ಅಳೆದು ತೂಗಿ ಅಭ್ಯರ್ಥಿಗಳ ಆಯ್ಕೆ ಮಾಡುತ್ತಿದ್ದು, ಈಗಾಗಲೇ ಹೆಚ್ಚಿನ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹೊಸ ಪಕ್ಷ ಪ್ರಜಾಕೀಯದ ಮೂಲಕ ದೇಶದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರುವುದಕ್ಕೆ ಮುಂದಾಗಿದ್ದಾರೆ. ಇದೀಗ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮುಂಬರುವ 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಅರ್ಜಿಗಳನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗಾಗಿ ಅಗತ್ಯದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ನಟ ಉಪೇಂದ್ರ ತಮ್ಮ ಟ್ವಿಟರ್ ನಲ್ಲಿ “ಮುಂಬರುವ 2023 ರ ಕರ್ನಾಟಕ ವಿಧಾನಸಭಾ ಚುನಾವಣೆಗೆ prajaakeeya.org ನಲ್ಲಿ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನ 24ನೇ ಮಾರ್ಚ್ 2023 ರ ಮಧ್ಯರಾತ್ರಿ 12.00 ಗಂಟೆಗೆ ನಿಗದಿಪಡಿಸಲಾಗಿದೆ. 24ರ ನಂತರ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ನಿಮ್ಮ ಅರ್ಜಿಗಳನ್ನು ಸಮಯದೊಳಗೆ ಸಲ್ಲಿಸಿ” ಎನ್ನುವ ಪೋಸ್ಟನ್ನು ಹಂಚಿಕೊಂಡಿದ್ದಾರೆ. 2018 ಮಾರ್ಚ್ ನಲ್ಲಿ ಪ್ರಜಾಕೀಯ…
ಕುವೆಂಪು ಪ್ರತಿಷ್ಠಾನದ ಹೆಸರಲ್ಲಿ ಯೂಟ್ಯೂಬ್ ಬಿಡುಗಡೆ30 ನಿಮಿಷಗಳ ಸಾಕ್ಷ್ಯಚಿತ್ರ ಸಧ್ಯದಲ್ಲಿಯೇ ಬಿಡುಗಡೆ NAMMUR EXPRESS NEWSರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಕುಪ್ಪಳಿ ವತಿಯಿಂದ ಕುವೆಂಪು ಅವರ ವಿಚಾರಧಾರೆ ತಲುಪಿಸುವ ಉದ್ದೇಶದಿಂದ ಆಧುನಿಕ ತಂತ್ರಜ್ಞಾನದಲ್ಲಿ ಚಿತ್ರೀಕರಣ ಮಾಡಿರುವ ವಿಡಿಯೋ ಕ್ಲಿಪ್ ಬಿಡುಗಡೆ ಮಾಡಲಾಗಿದೆ.ಕರ್ನಾಟಕದ ಪ್ರವಾಸಿ ಭೂಪಟದಲ್ಲಿ ಕುಪ್ಪಳಿ ಗಮನಾರ್ಹ ಸ್ಥಾನದಲ್ಲಿದೆ. ಸಹಸ್ರಾರು ಜನರು ಕುಪ್ಪಳಿಗೆ ಭೇಟಿ ನೀಡುತ್ತಿದ್ದಾರೆ. ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನವು, ಕವಿಮನೆ, ಕವಿಶೈಲ ಹಾಗೂ ಕುಪ್ಪಳಿಯ ಇತರೆ ಸ್ಮಾರಕಗಳನ್ನು ಹೊಸ ತಲೆಮಾರಿನ ಕನ್ನಡಿಗರಿಗೆ, ಕನ್ನಡೇತರರಿಗೆ ಪರಿಚಯಿಸುವ ಉದ್ದೇಶದಿಂದ, ಆಧುನಿಕ ತಂತ್ರಜ್ಞಾನದೊಂದಿಗೆ ಚಿತ್ರೀಕರಿಸಿ, ಹಲವು ವಿಡಿಯೋ ಕ್ಲಿಪ್‌ಗಳನ್ನು ಸಿದ್ಧಪಡಿಸಲಾಗಿದೆ.ಸನ್ನಿವೇಶಕ್ಕೆ ಅನುಗುಣವಾಗಿ ಇಂಪಾದ ಹಿನ್ನೆಲೆ ಸಂಗೀತ, ಅಗತ್ಯವಿರುವ ಕಡೆ ಕುವೆಂಪು ಕವಿತೆಯ ಸಾಲುಗಳನ್ನು ಸಂಯೋಜಿಸಲಾಗಿದೆ. ಕನ್ನಡೇತರರಿಗಾಗಿ ಇಂಗ್ಲಿಷ್ ಸಬ್‌ಟೈಟಲ್‌ಗಳನ್ನು ಒದಗಿಸಲಾಗಿದೆ. ಈ ವಿಡಿಯೋ ತುಣುಕುಗಳನ್ನು ಸೋಮವಾರದಿಂದ ಪ್ರತಿಷ್ಠಾನದ ಯೂಟ್ಯೂಬ್ (ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಕುಪ್ಪಳಿ) ಚಾನಲ್ಲಿನಲ್ಲಿ ಬಿಡುಗಡೆ ಮಾಡಲಾಗುವುದು ಸಹೃದಯರು ಇವುಗಳನ್ನು ನೋಡಿ, ಇತರರಿಗೂ ಇತರ ಸಾಮಾಜಿಕ ಮಾದ್ಯಮಗಳ ಮೂಲಕ ಹಂಚಬೇಕಾಗಿ ಪ್ರತಿಷ್ಠಾನ ವಿನಂತಿ ಮಾಡಿದೆ.ಪ್ರತಿಷ್ಠಾನದ…
ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್’ಗೆ ಮೇಲ್ಮನವಿ ಸಲ್ಲಿಕೆಮಾರ್ಚ್ 27ರಂದು ಪ್ರಕರಣದ ವಿಚಾರಣೆ NAMMUR EXPRESS NEWSಬೆಂಗಳೂರು: ಅನುದಾನ ರಹಿತ ಖಾಸಗಿ ಶಾಲೆಗಳ ಸಂಘಗಳಿಂದ ರಾಜ್ಯದ 5 ಮತ್ತು 8 ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆಗೆ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದೆ.ಹೈಕೋರ್ಟ್ ಐದು ಮತ್ತು ಎಂಟನೇ ತರಗತಿ ಬೋರ್ಡ್ ಪರೀಕ್ಷೆ ನಡೆಸಲು ಗ್ರೀನ್ ಸಿಗ್ನಲ್ ಕೊಟ್ಟಿದೆ. 5 ಮತ್ತು 8ನೇ ತರಗತಿಗಳಿಗೆ ಮೌಲ್ಯಾಂಕನ ಪರೀಕ್ಷೆ ನಡೆಸುವಂತೆ ಆದೇಶ ಹೊರಡಿಸಿದೆ.ಆದರೆ ಈ ಆದೇಶವನ್ನು ಪ್ರಶ್ನಿಸಿ ಅನುದಾನರಹಿತ ಖಾಸಗಿ ಶಾಲೆಗಳ ಸಂಘಗಳು ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿವೆ.5 ಮತ್ತು 8 ನೇ ತರಗತಿಗೆ ಬೋರ್ಡ್ ಪರೀಕ್ಷೆಗೆ ಹೈಕೋರ್ಟ್ ಆದೇಶ ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿದ್ದು, ತುರ್ತು ವಿಚಾರಣೆ ನಡೆಸುವಂತೆ ಸುಪ್ರೀಂಕೋರ್ಟ್ ಗೆ ವಕೀಲರು ಮನವಿ ಮಾಡಿದ್ದಾರೆ. ಮಾರ್ಚ್ 27ರಂದು ವಿಚಾರಣೆ ನಡೆಸುವುದಾಗಿ ಸಿಜೆಐ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಖಡಕ್ ವಾರ್ನಿಂಗ್ಗೆ ಸಚಿವ ಮುನಿರತ್ನ ಯೂಟರ್ನ್ಉರಿಗೌಡ-ನಂಜೇಗೌಡ ಸಿನಿಮಾಗೆ ಬ್ರೇಕ್ಕೇಸ್ ಕೊಡಲು ಬಂದವಳನ್ನೇ ರೂಂಗೆ ಕರೆದ ಇನ್ಸ್ ಪೆಕ್ಟರ್! NAMMUR EXPRESS NEWSಬೆಂಗಳೂರು: ನಿರ್ಮಲಾನಂದನಾಥಶ್ರೀಗಳು ಸಚಿವ ಮುನಿರತ್ನಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದು, ಸ್ವಾಮೀಜಿ ಖಡಕ್ ವಾರ್ನಿಂಗ್ಗೆ ಮುನಿರತ್ನ ಯೂಟರ್ನ್ ಹೊಡೆದಿದ್ಧಾರೆ.ಉರಿಗೌಡ-ನಂಜೇಗೌಡ ಸಿನಿಮಾಗೆ ಬ್ರೇಕ್ ಹಾಕಲಾಗಿದೆ. ಈ ಸಿನಿಮಾ ಭಾರೀ ಕೋಲಾಹಲಕ್ಕೆ ಕಾರಣವಾಗಿತ್ತು. ಉರಿಗೌಡ-ನಂಜೇಗೌಡ ಸಿನಿಮಾ ವಿರುದ್ಧ ಒಕ್ಕಲಿಗರು ಆಕ್ರೋಶಗೊಂಡಿದ್ದರು. ಒಕ್ಕಲಿಗ ಮುಖಂಡರು ಚುಂಚನಗಿರಿ ಸ್ವಾಮೀಜಿಗೆ ದೂರು ನೀಡಿದ್ದಾರೆ. ಯಾವುದೇ ಕಾರಣಕ್ಕೂ ಸಿನಿಮಾ ಮಾಡದಂತೆ ಸೂಚಿಸಲು ಆಗ್ರಹಿಸಿದ್ದರು, ಕೇವಲ ಜಾಹಿರಾತಿಗಷ್ಟೇ ಸೀಮಿತವಾದ ಉರಿಗೌಡ-ನಂಜೇಗೌಡ ಸಿನಿಮಾವಾಗಿದೆ. ಒಕ್ಕಲಿಗರ ಆಕ್ರೋಶ, ನಿರ್ಮಲಾನಂದನಾಥಶ್ರೀಗಳ ವಾರ್ನಿಂಗ್ಗೆ ಯೂಟರ್ನ್ ಹೊಡೆದಿದ್ದು, ಉರಿಗೌಡ-ನಂಜೇಗೌಡ ಸಿನಿಮಾ ಮಾಡದೇ ಇರಲು ನಿರ್ಧಾರ ಮಾಡಿದ್ದಾರೆ. ಮುನಿರತ್ನ ಕೆಲ ಹೊತ್ತಿನ ಹಿಂದೆ ಶ್ರೀಗಳನ್ನು ಭೇಟಿಯಾಗಿದ್ದರು.ಕೇಸ್ ಕೊಡಲು ಬಂದವಳನ್ನೇ ರೂಂಗೆ ಕರೆದ ಇನ್ಸ್ ಪೆಕ್ಟರ್: ರಾಜಧಾನಿಯಲ್ಲಿ ಕೇಸ್ ಕೊಡಲು ಬಂದವಳನ್ನೇ ಇನ್ಸ್ ಪೆಕ್ಟರ್ ರೂಂಗೆ ಕರೆದಿದ್ದಾರೆ. ಮಗಳ ವಯಸ್ಸಿನ ಯುವತಿ ಮೇಲೆ ಇನ್ಸ್ ಪೆಕ್ಟರ್ ಕಣ್ಣು ಬಿದ್ದಿದೆ. ಆ ಮಹಿಳೆಚಾಟಿಂಗ್…