ಅಗಲಿದ ನಾಯಕನ ಜನ್ಮದಿನದಂದು ಸೇವೆ ಸ್ಮರಿಸೋಣ NAMMUR EXPRESS NEWSದೇಶ ಕಂಡ ಅಪ್ರತಿಮ ನಟ, ಜನ ಸೇವಕ, ಲಕ್ಷ ಲಕ್ಷ ಜನರಿಗೆ ಮಾದರಿಯಾಗಿರುವ ಪುನೀತ್ ರಾಜ್ ಕುಮಾರ್ ಜನ್ಮ ದಿನ ಇಂದು. ನಾಡಿನ ಎಲ್ಲೆಡೆ ಪುನೀತ್ ಹೆಸರಲ್ಲಿ ವಿವಿಧ ರಕ್ತದಾನ, ನೇತ್ರದಾನ, ಸಾಮಾಜಿಕ ಕೆಲಸಗಳು ನಡೆಯುತ್ತಿವೆ. ಪುನೀತ್ ಹೆಸರು ಅಮರವಾಗುತ್ತಿದೆ.ಪುನೀತ್ ರಾಜಕುಮಾರ್ ಬರೀ ನಟ ಅಲ್ಲದೆ ನಿರ್ಮಾಪಕ, ಗಾಯಕ , ನಿರೂಪಕ ಆಗಿ ಎಲ್ಲದಕ್ಕೂ ಸೈ ಎನಿಸಿಕೊಂಡಿದ್ದಾರೆ.50ಕ್ಕೂ ಅಧಿಕ ಸಿನಿಮಾದಲ್ಲಿ ಹಾಡಿ ಅದರಲ್ಲಿ ಬಂದ ಹಣವನ್ನು ಸಮಾಜ ಸೇವೆ ಸಂಪೂರ್ಣವಾಗಿ ಬಳಸಿ ಎಲ್ಲರಿಗೂ ಸ್ಪೂರ್ತಿ ಆಗಿದ್ದಾರೆ.ಜೊತೆಗಿರದ ಜೀವ ಎಂದಿಗೂ ಜೀವಂತ.ಎಲ್ಲದಾಗು ಸೈ ಎನಿಸಿಕೊಂಡ ನಟ ಒಮ್ಮೆಲೆ ನಮ್ಮನು ಆಗಲಿ ಹೋಗಿಯೇ ಬಿಡುತ್ತಾರೆ. ಆಗ ಮಾತ್ರ ಆಕ್ಷರ ಸಹ ಇಡೀ ಕರ್ನಾಟಕ ಅನ್ನೋದಕ್ಕಿಂತ ಇಡೀ ಭಾರತದಲ್ಲಿ ಸ್ಮಶಾನ ಮೌನದಲ್ಲಿ ತುಂಬಿರುತ್ತದೆ.ದೊಡ್ಡವರು ಹೇಳುವ “ಬದುಕಿ ಸಾಯೋದಕ್ಕಿಂತ ಸತ್ತು ಬದುಕ ಬೇಕು ಲೇಸು” ಎಂಬ ಮಾತಿಗೆ ನಿದರ್ಶನ ಆಗಿದ್ದಾರೆ ಅಪ್ಪು.ಅಪ್ಪು ವಿನ ಅಂತಿಮ ದರ್ಶನಕ್ಕೆ ಬಂದ…
Author: Nammur Express Admin
ಮಾಜಿ ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಪೊಲೀಸ್ ವಶಕ್ಕೆ.! NAMMUR EXPRESS NEWSರಾಮನಗರ : ರಾಮನಗರ ಜಿಲ್ಲಾ ಪೊಲೀಸರು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ದಶಪಥ ಹೆದ್ದಾರಿಯ ಟೋಲ್ ಸಂಗ್ರಹಣೆಗೆ ಸಂಬಂಧಿಸಿದಂತೆ ಜೆಡಿಎಸ್‌ನ ಯುವನಾಯಕ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಹೆಜ್ಜಾಲ ಬಳಿಯ ಕಣಮಿನಕಿ ಟೋಲ್ ಬಳಿ ರಸ್ತೆ ಮಧ್ಯೆ ಕುಳಿತು ಮಾಗಡಿ ಶಾಸಕ ಎ.ಮಂಜು ಹಾಗೂ ಕಾರ್ಯಕರ್ತರೊಂದಿಗೆ ನಿಖಿಲ್ ಕುಮಾರಸ್ವಾಮಿ ಪ್ರತಿಭಟನೆ ನಡೆಸುತ್ತಿದ್ದರು. ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಕಳಪೆ ಕಾಮಗಾರಿ ನಡೆದಿದೆ. ಇನ್ನು ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ಇರುವ ಸರ್ವಿಸ್ ರಸ್ತೆಯನ್ನು ಸಮರ್ಪಕವಾಗಿ ಅಭಿವೃದ್ಧಿ ಮಾಡದಿದ್ದರೂ ಸಹ ಟೋಲ್ ಸಂಗ್ರಹಣೆ ಮಾಡುತ್ತಿರುವುದು ರಾಜ್ಯ ಸಾರ್ವಜನಿಕರಿಗೆ ಮಾಡುತ್ತಿರುವ ಅನ್ಯಾಯವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ನಿಖಿಲ್ ಕುಮಾರಸ್ವಾಮಿ ಟೋಲ್ ಸಂಗ್ರಹ ಕೇಂದ್ರ ಬಳಿ ಸುಮಾರು ಎರಡು ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀಧರ್…
ಹಲವು ಕಾರ್ಯಕ್ರಮಗಳಿಗೆ ಶಂಕು ಸ್ಥಾಪನೆ NAMMUR EXPRESS NEWSಶಿವಮೊಗ್ಗ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾ.17ರಂದು ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಶಿಕಾರಿಪುರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಅವರು ಚಾಲನೆ ನೀಡಲಿದ್ದಾರೆ.ಬೆಳಗ್ಗೆ 10 ಗಂಟೆಗೆ ಹೆಚ್.ಎ.ಎಲ್ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಶಿಕಾರಿಪುರಕ್ಕೆ ಆಗಮಿಸಲಿದ್ದಾರೆ. ಹುಚ್ಚರಾಯ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿರುವ ಹೆಲಿಪ್ಯಾಡ್ ಗೆ ಬಂದಿಳಿಯಲಿದ್ದಾರೆ. ಬಳಿಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಆಸ್ಪತ್ರೆ, ಶಿಕಾರಿಪುರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣವನ್ನು ಸಿಎಂ ಉದ್ಘಾಟಿಸಲಿದ್ದಾರೆ.ಮಧ್ಯಾಹ್ನ 12 ಗಂಟೆಗೆ ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ ಉದ್ಘಾಟನೆ ನೆರವೇರಿಸಲಿದ್ದಾರೆ. ಮಧ್ಯಾಹ್ನ 12.30ಕ್ಕೆ ಉಡುತಡಿ – ಉಡುಗಣಿಯಲ್ಲಿ ಶಿವಶರಣೆ ಅಕ್ಕಮಹಾದೇವಿ ಅವರ ಪುತ್ಥಳಿ ಅನಾವರಣ, ಅಕ್ಷರಧಾಮ ಮಾದರಿಯ ಯಾತ್ರಾ ಸ್ಥಳ, ವಿವಿಧ ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲಿದ್ದಾರೆ.ಮಧ್ಯಾಹ್ನ 2.15ಕ್ಕೆ ಶಿಕಾರಿಪುರದ ಹುಚ್ಚರಾಯ ಸ್ವಾಮಿ ದೇವಸ್ಥಾನದ ಪಕ್ಕದ ಹೆಲಿಪ್ಯಾಡ್ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿಗೆ ತೆರಳಲಿದ್ದಾರೆ.
ಮಾ. 21ರಿಂದ ಕೆಎಸ್ ಆರ್ ಟಿಸಿ ನೌಕರರ ಮುಷ್ಕರ NAMMUR EXPRESS NEWSಬೆಂಗಳೂರು: ಯುಗಾದಿ ಹಬ್ಬಕ್ಕೆಂದು ನಗರಗಳಿಂದ ತಮ್ಮ ತಮ್ಮ ಊರುಗಳಿಗೆ ತೆರೆಳುವ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್ ಕಾದಿದ್ದು ಮಾರ್ಚ್ 21 ರಂದು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಎಸ್ ಆರ್ ಟಿಸಿ ನೌಕರರು ಮುಷ್ಕರ ಹೂಡಿದ್ದಾರೆ.ರಾಜ್ಯ ಸರ್ಕಾರ ಸಾರಿಗೆ ನೌಕರರ ವೇತನ ಹೆಚ್ಚಳ ಮಾಡದ ಹಿನ್ನೆಲೆ ಹಾಗೂ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸದಿರುವುದಕ್ಕೆ ಮಾರ್ಚ್ 21 ರಿಂದು ಮುಷ್ಕರ ನಡೆಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರು ಮುಂದಾಗಿದ್ದಾರೆ.ಈ ಕುರಿತು ಮಾತನಾಡಿರುವ ಸಾರಿಗೆ ನೌಕರರ ಸಂಘದ ಅಧ್ಯಕ್ಷ ಹೆಚ್.ವಿ. ಅನಂತ ಸುಬ್ಬರಾವ್, ವೇತನ ಪರಿಷ್ಕರಣೆ ಮಾಡುವಂತೆ ಆಗ್ರಹಿಸಿದ್ದವು. ಆದರೆ ಸರ್ಕಾರ ನೌಕರರ ಮನವಿಗೆ ಸ್ಪಂದಿಸುತ್ತಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಾರಿಗೆ ಸಚಿವ ಬಿ. ಶ್ರೀರಾಮುಲು ನಮ್ಮಎಲ್ಲ ಬೇಡಿಕೆಗಳನ್ನು ಈಡೇರಿಸುತ್ತೇವೆ ಎಂದು ಈ ಹಿಂದೆ ನಡೆದ ಹಲವು ಸಭೆಗಳಲ್ಲಿ ಹೇಳಿದ್ದರು. ಆದರೆ ಇನ್ನುವರೆಗೂ ನಮ್ಮಬೇಡಿಕೆಗಳನ್ನು ಈಡೇರಿಸಿಲ್ಲ. ಇತ್ತೀಚಿಗೆ ಸರ್ಕಾರಿ…
NAMMUR EXPRESS NEWSಶಿವಮೊಗ್ಗ: ಕೃಷಿ ಮತ್ತು ತೋಟಗಾರಿಕಾ ಮೇಳ-2023ನ್ನ ಮಾ.19 ರಿಂದ 20 ರ ವರೆಗೆ ನವುಲೆಯ ಕೃಷಿ ವಿವಿಯಲ್ಲಿ ನಡೆಯಲಾಗಿತ್ತಿದೆ.ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಕುಲಪತಿ ಜಗದೀಶ್ ಮಾ.17 ರಂದು ಬೆಳಿಗ್ಗೆ 11 ಗಂಟೆಗೆ ಕಾರ್ಯಕ್ರಮದ ಉದ್ಘಾಟನೆಯನ್ನ ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ನೆರವೇರಿಸಲಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ.ಬಿ.ಅಶೋಕ್ ನಾಯ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಣರಷಿ ಸವಿವ ಬಿ.ಸಿ.ಪಾಟೀಲ್ ಹಾಗೂ ಗೌರವಾನ್ವಿತ ಅತಿಥಿಗಳಾಗಿ ಬಿ.ಎಸ್.ಯಡಿಯೂರಪ್ಪ ಆಗಮಿಸಲಿದ್ದಾರೆ ಎಂದರು.ವಿಶೇಷ ಅತಿಥಿಗಳಾಗಿ ಕೇಂದ್ರ ಸಚಿವೆ ಶೋಭಾ ಕರದ್ಲಾಂಜೆ, ಗೃಹ ಸಚಿವ ಆರಗಜ್ಞಾನೇಂದ್ರ, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಈಶ್ವರಪ್ಪ, ಸಾಗರ ಶಾಸಕ ಹರತಾಳು ಹಾಲಪ್ಪ, ಸೊರಬ ಶಾಸಕ ಕುಮಾರ ಬಂಗಾರಪ್ಪ, ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್, ಎಂಎಲ್ ಸಿ ಆಯನೂರು ಮಂಜುನಾಥ್, ರುದ್ರೇಗೌಡ, ಭಾರತಿ ಶೆಟ್ಟಿ, ಭೋಜೇಗೌಡ, ಡಿ ಎಸ್ ಅರುಣ್ ಮೊದಲಾದವರು ಭಾಗಿಯಾಗಲಿದ್ದಾರೆ ಎಂದರು.ಮಾ.18 ರಂದು ತಾಂತ್ರಿಕ ಸಮಾವೇಶ ಹಾಗೂ ತಾಂತ್ರಿಕ ಕೈಪಿಡಿಗಳ ಬಿಡುಗಡೆ ಕಾರ್ಯಕ್ರಮ ನಡೆಯಲಿದ್ದು ಈ ಕಾರ್ಯಕ್ರಮವನ್ನ ಸಚಿವ…
NAMMUR EXPRESS NEWSಬೆಂಗಳೂರು : ಕೃಷಿ ಇಲಾಖೆಯ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ತಾಂತ್ರಿಕ ಸಲಹೆಗಾರ ಮೂರು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಎರಡು ವರ್ಷಗಳ ಅವಧಿಗೆ ಕೆಲಸ ಮಾಡಲು ತಾಂತ್ರಿಕ ಸಲಹೆಗಾರ ಮೂರು ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.ಆಸಕ್ತರು ಅರ್ಹರು 20/3/2023 ರೊಳಗಾಗಿ ಅರ್ಜಿಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವವರು ಕೃಷಿ ಮತ್ತು ಕೃಷಿ ಸಂಬಂಧಿತ ವಿಷಯಗಳಲ್ಲಿ ಐಸಿಎಆರ್ ಮಾನ್ಯತೆ ಪಡೆದ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಆಸಕ್ತ ಅಭ್ಯರ್ಥಿಗಳು https://raitamitra.karnataka.gov.in ವೆಬ್ ಸೈಟ್ ಮೂಲಕ ಡೌನ್ಲೋಡ್ ಮಾಡಿಕೊಂಡು ಸೂಕ್ತ ದಾಖಲಾತಿಗಳ ಜೊತೆ ಭರ್ತಿ ಮಾಡಿ ಸಲ್ಲಿಕೆ ಮಾಡುವುದು. ಭರ್ತಿ ಮಾಡಿದ ಅರ್ಜಿಯನ್ನು Director of Agriculture, Commissionerate of Agriculture, Seshadri Road, Bengaluru-01 ಇಲ್ಲಿಗೆ ಕಳುಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 080-22074161 ಸಂಖ್ಯೆಗೆ ಕರೆ ಮಾಡಬಹುದಾಗಿದೆ.
NAMMUR EXPRESS NEWSವಡೋದರಾ: ವೈದ್ಯಕೀಯ ವಿಮೆಗೆ ಸಂಬಂಧಿಸಿದ ವಿಷಯದಲ್ಲಿ ವಡೋದರಾ ಗ್ರಾಹಕರ ವೇದಿಕೆ ಪ್ರಮುಖ ನಿರ್ಧಾರವನ್ನು ನೀಡಿದೆ. ಫೋರಂ ಪ್ರಕಾರ, ವೈದ್ಯಕೀಯ ವಿಮೆಯನ್ನು ಪಡೆಯಲು, ಒಬ್ಬ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸುವುದು ಅಥವಾ ಅವನನ್ನು 24 ಗಂಟೆಗಳ ಕಾಲ ಆಸ್ಪತ್ರೆಯಲ್ಲಿರುವುದು ಅನಿವಾರ್ಯವಲ್ಲ.ಹೀಗಾಗಿ ಗ್ರಾಹಕರ ವೇದಿಕೆ ವತಿಯಿಂದ ರೋಗಿಗೆ ಹಣ ನೀಡುವಂತೆ ವೈದ್ಯಕೀಯ ವಿಮಾ ಕಂಪನಿಗೆ ಆದೇಶಿಸಲಾಗಿದೆ.ವಾಸ್ತವವಾಗಿ, ವಡೋದರಾದ ರಮೇಶ್ ಚಂದ್ರ ಜೋಶಿ ಅವರು 2017 ರಲ್ಲಿ ಗ್ರಾಹಕರ ವೇದಿಕೆಯಲ್ಲಿ ರಾಷ್ಟ್ರೀಯ ವಿಮಾ ಕಂಪನಿಯ ವಿರುದ್ಧ ದೂರು ದಾಖಲಿಸಿದ್ದರು. ಜೋಶಿ ಅವರು ತಮ್ಮ ಪತ್ನಿಗೆ 2016 ರಲ್ಲಿ ಡರ್ಮಟೊಮಿಯೊಸಿಟಿಸ್ ಇತ್ತು ಮತ್ತು ಅಹಮದಾಬಾದ್‌ನ ಲೈಫ್‌ಕೇರ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಮತ್ತು ರಿಸರ್ಚ್ ಸೆಂಟರ್‌ಗೆ ದಾಖಲಾಗಿದ್ದರು. ಜೋಶಿಯವರ ಪತ್ನಿ ಚಿಕಿತ್ಸೆ ನಂತರ ಮರುದಿನ ಡಿಸ್ಚಾರ್ಜ್ ಆಗಿದ್ದರು ಎಂದಿದ್ದಾರೆ.ಇದಾದ ನಂತರ ಜೋಶಿ ಕಂಪನಿಗೆ 44,468 ರೂಪಾಯಿ ಬಿಲ್ ಪಾವತಿಸುವಂತೆ ಕೇಳಿದ್ದರು. ಆದರೆ ವಿಮಾ ಕಂಪನಿ ಜೋಶಿ ಅವರ ಹಕ್ಕನ್ನು ತಿರಸ್ಕರಿಸಿತು. ಇದರ ವಿರುದ್ಧ ಜೋಶಿ ಗ್ರಾಹಕರ…
ಕರ್ನಾಟಕ ಮಹಿಳಾ ರತ್ನ ಅವಾರ್ಡ್ ಪಡೆದ ಕಲಾವಿದೆತೀರ್ಥಹಳ್ಳಿ ಹಿರಿಮೆಗೆ ಮತ್ತೊಂದು ಗರಿ NAMMUR EXPRESS NEWSತೀರ್ಥಹಳ್ಳಿ: ತೀರ್ಥಹಳ್ಳಿ ಮೂಲದ ನೃತ್ಯ ಶಿಕ್ಷಕಿ ಹರ್ಷಿತ ಎಸ್ ಅವರಿಗೆ ಕರ್ನಾಟಕ ಮಹಿಳಾ ರತ್ನ ಅವಾರ್ಡ್ ಲಭಿಸಿದೆ.ಕರ್ನಾಟಕ ಮಹಿಳಾ ರತ್ನ ಅವಾರ್ಡ್ ಪಡೆದ ಕಲಾವಿದೆತೀರ್ಥಹಳ್ಳಿ ಹಿರಿಮೆಗೆ ಮತ್ತೊಂದು ಗರಿ ಮೂಡಿಸಿದ್ದಾರೆ.ತೀರ್ಥಹಳ್ಳಿ ಬಾಳೆಬೈಲಿನ ಸಂತೋಷ್ ಅವರ ಪುತ್ರಿ ಹರ್ಷಿತ ಎಸ್ ರವರಿಗೆ ಮಾರ್ಚ್ 12ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಕರ್ನಾಟಕ ಮಹಿಳಾ ರತ್ನ ಅವಾರ್ಡನ್ನು ಕೊಟ್ಟು ಗೌರವಿಸಲಾಗಿದೆ.ಮಾರ್ಚ್ 26ರಂದು ಬೆಂಗಳೂರಿನಲ್ಲಿ ನಡೆಯಲಿರುವ ಇಂಟರ್ನ್ಯಾಷನಲ್ ಗೋಲ್ಡನ್ ಅಚೀವ್ಮೆಂಟ್ ಅವಾರ್ಡ್ ಗೆ ಇವರು ಭಾಜನರಾಗಿದ್ದಾರೆ.75ನೇ ಅಮೃತ ಮಹೋತ್ಸವ ಬೆಂಗಳೂರಿನಲ್ಲಿ ಸೌಹಾರ್ದ ಅಕಾಡೆಮಿ ಕಾರ್ಯಕ್ರಮದಲ್ಲಿ ನೃತ್ಯದಲ್ಲಿ ಪ್ರಥಮ ಸ್ಥಾನ ಕೂಡ ಪಡೆದಿದ್ದರು. ಬೆಂಗಳೂರು ಎಲೈಟ್ ಸ್ಟಾರ್ ಫ್ಯಾಷನ್ ಶೋ ದಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಹೊಸನಗರ ಲಿಟಲ್ ಪ್ರಿನ್ಸೆಸ್ ಫ್ಯಾಷನ್ ಶೋನಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಮೈಸೂರು ದಸರಾ ಸಮಿತಿ ಮೈಸೂರು ನೃತ್ಯದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡು 25,000 ನಗದು ಬಹುಮಾನವನ್ನು…
ಸರಳ ನಾಯಕನಿಗೆ ಅಭಿಮಾನದ ಮಹಾಪೂರ NAMMUR EXPRESS NEWSರಾಜ್ಯದ ಗೃಹ ಸಚಿವರು, ತೀರ್ಥಹಳ್ಳಿ ಶಾಸಕರು, ಬಿಜೆಪಿ ಹಿರಿಯ ನಾಯಕರಾದ ಆರಗ ಜ್ಞಾನೇಂದ್ರ ಅವರಿಗೆ 71ನೇ ವರ್ಷದ ಹುಟ್ಟು ಹಬ್ಬದ ಶುಭಾಶಯಗಳು. ಕೌಟುಂಬಿಕ ರಾಜಕೀಯ ಹಿನ್ನೆಲೆಯಿಲ್ಲದೇ , ಆರ್ಥಿಕವಾಗಿ ಬಲಾಢ್ಯರಾಗಿರದೇ ಕೇವಲ ಹೋರಾಟಗಳಿಂದ, ಪಕ್ಷ, ಸಂಘಟನೆಗಳ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿದ್ದು ಉನ್ನತ ಸ್ಥಾನ ಗಳಿಸಿಕೊಳ್ಳುವುದು ಜೀವನದ ದೊಡ್ಡ ಸಾಧನೆ. ವಿದ್ಯಾರ್ಥಿ ಸಂಘದ ನಾಯಕನಾಗಿ ಯೌವನದ ದಿನಗಳಲ್ಲಿ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದವರು ಇಂದು ತಮ್ಮ 71ನೇ ವಯಸ್ಸಿನಲ್ಲಿಯೂ ಆರಗ ಜ್ಞಾನೇಂದ್ರ ರವರು ಅದೇ ಹುಮ್ಮಸ್ಸು ವರ್ಚಸ್ಸುಗಳೊಂದಿಗೆ ಮುನ್ನಡೆಯುತ್ತಿದ್ದಾರೆ.ರೈತ ನಾಯಕರಾಗಿ, ಅಡಿಕೆ ಟಾಸ್ಕ್ ಫೋರ್ಸ್ ಅಧ್ಯಕ್ಷರಾಗಿ ಆರಗ ಜ್ಞಾನೇಂದ್ರ ಅವರು ತಮ್ಮ ಗೃಹ ಇಲಾಖೆಯನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದು ಭ್ರಷ್ಟಾಚಾರವಿಲ್ಲದ ಆಡಳಿತ ಕ್ಷೇತ್ರದ ಜನತೆಗೆ ಗೌರವ ತಂದಿದೆ. ತಮ್ಮ ರಾಜಕೀಯ, ಸಾಮಾಜಿಕ ಸೇವೆ ಹೀಗೆಯೇ ಅವಿರತವಾಗಿ ನಡೆಯಲಿ. ಆರಗ ಜ್ಞಾನೇಂದ್ರ ಅಭಿಮಾನಿಗಳುತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರ
ಎಫ್ ಎಂ, ರೇಡಿಯೋ ಸಿಟಿಯಲ್ಲಿ ವಿಶೇಷ ಸಂದರ್ಶನ – ರಾಜಕೀಯ ಜೀವನ, ಬೆಳೆದು ಬಂದ ದಾರಿ ಬಗ್ಗೆ ಚರ್ಚೆ NAMMUR EXPRESS NEWSಬೆಂಗಳೂರು: ಎಫ್ ಎಂ, ರೇಡಿಯೋ ಸಿಟಿ ಮಾಧ್ಯಮ ವಾಹಿನಿಯ ‘ನೋ ಪೊಲಿಟಿಕ್ಸ್ ಪ್ಲೀಸ್’ ಎಂಬ ವಿನೂತನ ಸಂವಾದ ಕಾರ್ಯಕ್ರಮದಲ್ಲಿ ಗೃಹ ಸಚಿವ, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಸಂದರ್ಶನ ನೀಡಿದರು.ತಮ್ಮ ರಾಜಕೀಯ ಜೀವನ, ಬೆಳೆದು ಬಂದ ದಾರಿ, ಶೈಕ್ಷಣಿಕ ಜೀವನ, ಇತ್ಯಾದಿ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದೇನೆ. ಖ್ಯಾತ ನಿರೂಪಕಿ ನೇತ್ರಾ ಸಂದರ್ಶನ ನಡೆಸಿದ್ದಾರೆ. ಇನ್ನೆರಡು ದಿನಗಳಲ್ಲಿ ಈ ಸಂದರ್ಶನ ಪ್ರಸಾರವಾಗಲಿದೆ. ಅಡಿಕೆ ಬೆಳೆಗಾರರಿಗೆ ನ್ಯಾಯ ಕೊಟ್ಟಿದ್ದು ನಾವು: ಆರಗ ಅಡಿಕೆ ಬೆಳೆಗಳಿಗೆ ಬಂದಿರುವ ಮಾರಕ ರೋಗಗಳಿಗೆ ತೀರ್ಥಹಳ್ಳಿ ಅಡಿಕೆ ಸಂಶೋಧನಾ ಕೇಂದ್ರಕ್ಕೆ ಈ ಬಾರಿಯ ಬಜೆಟ್ ನಲ್ಲಿ 10 ಕೋಟಿ ರೂಪಾಯಿಗಳ ಅನುದಾನ ಒದಗಿಸಲಾಗಿದೆ. ವಿಜ್ಞಾನಿಗಳು ಎಲೆ ಚುಕ್ಕಿ ರೋಗ ಮತ್ತು ಬೇರೆ ಬೇರೆ ರೋಗಗಳಿಗೆ ಪರ್ಯಾಯ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದು ಅಡಿಕೆ ಬೆಳೆಗಾರರ ಕುರಿತಾದ ಸಮಗ್ರ…