ರಾಜ್ಯ ಸರ್ಕಾರದ ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿಬೆಂಗಳೂರಲ್ಲಿ ಮುಖ್ಯಮಂತ್ರಿಗಳಿಂದ ಪ್ರಶಸ್ತಿ ಸ್ವೀಕಾರ NAMMUR EXPRESS NEWSಬೆಂಗಳೂರು: ಪ್ರಜಾವಾಣಿ ಪತ್ರಿಕೆಯ ಹಿರಿಯ ವರದಿಗಾರ ಸುಬ್ರಮಣ್ಯ ವಿ.ಎಸ್. ವಾರಳಿ ಕುಂದಾಗ್ರಾಮ ,ತೀರ್ಥಹಳ್ಳಿ ಇವರಿಗೆ ರಾಜ್ಯ ಸರ್ಕಾರದ ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ಪ್ರಜಾವಾಣಿ ಪತ್ರಿಕೆ ಹಿರಿಯ ವರದಿಗಾರರಾಗಿ ಸೇವೆ ಸಲ್ಲಿಸುತ್ತಿರುವ ಸುಬ್ರಮಣ್ಯ ಅವರು ನೇರಾನಿಷ್ಠುರ ನಡೆಯಿಂದ ಮಾಧ್ಯಮ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗೆ ರಾಜ್ಯಸರಕಾರದಿಂದ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ಗಣ್ಯರು ಅವರನ್ನು ಸನ್ಮಾನಿಸಿದರು.
Author: Nammur Express Admin
ಶಿವಮೊಗ್ಗ ಜಿಲ್ಲಾ ರೈತ ಮೋರ್ಚಾ ಸಮಾವೇಶಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಬೃಹತ್ ಶೋಭಾಯಾತ್ರೆ NAMMUR EXPRESS NEWSತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಮಾರ್ಚ್ 15ರಂದು ಮಧ್ಯಾಹ್ನ 3 ಗಂಟೆಗೆ ಶಿವಮೊಗ್ಗ ಜಿಲ್ಲಾ ರೈತ ಮೋರ್ಚಾ ಸಮಾವೇಶ ನಡೆಯಲಿದೆ. ಹಾಗೂ ರಾಜ್ಯಾದ್ಯಂತ ಸಂಚರಿಸುತ್ತಿರುವ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಎಲ್.ಇ.ಡಿ. ಪರದೆಯ ವಾಹನ ತೀರ್ಥಹಳ್ಳಿಗೆ ಅದೇ ದಿನ ಸಂಜೆ 5-30 ಕ್ಕೆ ಆಗಮಿಸಲಿದ್ದು ಬೃಹತ್ ಶೋಭಾಯಾತ್ರೆ ನಡೆಯಲಿದೆ. ಈ ಮೆರವಣಿಗೆಯಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ, ಗೃಹಸಚಿವರಾದ ಆರಗ ಜ್ಞಾನೇಂದ್ರ, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ,ಇಂಧನ ಸಚಿವರಾದ ಸುನಿಲ್ ಕುಮಾರ್ , ರಾಜ್ಯ ನಾಯಕರೂ ಮಾಜಿ ಸಚಿವರೂ ಆಗಿರುವ ಕೆ.ಎಸ್. ಈಶ್ವರಪ್ಪರವರು ಹಾಗೂ ಸಂಸದರಾದ ಬಿ.ವೈ.ರಾಘವೇಂದ್ರರವರು ಹಾಗೂ ಇತರ ಗಣ್ಯರು ಉಪಸ್ಥಿತರಿರಲಿದ್ದಾರೆ.
ಧಾರವಾಡ ಕಾರ್ಯಕ್ರಮದಲ್ಲಿ ಮೋದಿಯಿಂದಲೇ ಪ್ರಸ್ತಾಪಫೆ.27ರಂದು ಶಿವಮೊಗ್ಗದಲ್ಲಿ ಉದ್ಘಾಟನೆ ಆಗಿದ್ದ ಏರ್ ಪೋರ್ಟ್ NAMMUR EXPRESS NEWSಧಾರವಾಡ: ಧಾರವಾಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದ ಹೆಸರನ್ನು ಪ್ರಸ್ತಾಪಿಸಿದ ನರೇಂದ್ರ ಮೋದಿ ಅವರು ಕುವೆಂಪು ನಿಲ್ದಾಣ’ ಎಂದು ಕರೆದಿದ್ದಾರೆ. ಈ ಮೂಲಕ ಕುವೆಂಪು ಹೆಸರು ಅಧಿಕೃತ ಎಂದು ಘೋಷಣೆ ಆಗಲಿದೆ. ಶಿವಮೊಗ್ಗದಲ್ಲಿ ಉದ್ಘಾಟನೆಯಾದ ನಿಲ್ದಾಣಕ್ಕೆ ಯಾವುದೇ ಹೆಸರನ್ನು ಅಂತಿಮಗೊಳಿಸಿರಲಿಲ್ಲ. ನಿಲ್ದಾಣಕ್ಕೆಕುವೆಂಪು ಅವರ ನಾಯಕ ಬಿ.ಎಸ್.ಯಡಿಯೂರಪ್ಪ ಕೇಂದ್ರವನ್ನು ಕೋರಿದ್ದರು. ಫೆ.27ರಂದು ವಿಮಾನ ನಿಲ್ದಾಣ ಅದ್ದೂರಿಯಾಗಿ ಉದ್ಘಾಟನೆ ಆಗಿತ್ತು. ಪ್ರಧಾನಿ ಮೋದಿ, ಸಿಎಂ ಬಸವರಾಜ್ ಬೊಮ್ಮಾಯಿ, ಯಡಿಯೂರಪ್ಪ ಸೇರಿ ಅನೇಕ ನಾಯಕರು ಆಗಮಿಸಿದ್ದರು. 1 ಲಕ್ಷಕ್ಕೂ ಹೆಚ್ಚು ಜನ ಆಗಮಿಸಿದ್ದರು. ಮಂಡ್ಯದಲ್ಲಿ ಮೋದಿ ಹವಾ: ಬೆಂಗಳೂರು ಮೈಸೂರುಎಕ್ಸ್‌ಪ್ರೆಸ್‌ವೇ ಉದ್ಘಾಟನೆ ಮಂಡ್ಯ: ಪ್ರಧಾನಿ ನರೇಂದ್ರ ಮೋದಿ ಮೈಸೂರಿನ ಮಂಡಕಳ್ಳಿ ಏರ್‌ಪೋರ್ಟ್ ಮೂಲಕ ಮಂಡ್ಯಕ್ಕೆ ಆಗಮಿಸಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯದ ನಾಯಕರು ಅವರನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ.ಪ್ರವಾಸಿಮಂದಿರ ವೃತ್ತದಿಂದ ನಂದಾ ಸರ್ಕಲ್‌ವರೆಗೆ ರೋಡ್‌ಶೋ ನಡೆಯಲಿದ್ದು ರೋಡ್ ಶೋ…
ಕಾಂಗ್ರೆಸ್‌ಗೆ ಬಹುಮತ, ಜೆಡಿಎಸ್ ಅಷ್ಟಕಷ್ಟೇಕಾಂಗ್ರೆಸ್ ಪಕ್ಷಕ್ಕೆ 116 -122 ಸ್ಥಾನ ಬರುತ್ತೆ ಎಂದ ಸಮೀಕ್ಷೆ NAMMUR EXPRESS NEWSಬೆಂಗಳೂರು: ರಾಜ್ಯದಲ್ಲಿ ಲೋಕ್‌ಪೋಲ್ ಎಂಬ ಹೆಸರಿನಲ್ಲಿ ಸಂಸ್ಥೆಯೊಂದು ಮಾಡಿದ ಸಮೀಕ್ಷೆ ಜೆಡಿಎಸ್ ಮತ್ತು ಬಿಜೆಪಿಯ ನಿದ್ದೆಗೆಡಿಸಿದ್ದರೆ ಕಾಗ್ರೆಸ್ ಮುಖದಲ್ಲಿ ಮಂದಹಾಸ ಮೂಡಿಸಿದೆ.ಲೋಕ್‌ಪೋಲ್ ಸಮೀಕ್ಷೆ ಪ್ರಕಾರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸರಳ ಬಹುಮತ ಬರಲಿದೆ. ಕಾಂಗ್ರೆಸ್ 116 ರಿಂದ 122 ಸ್ಥಾನಗಳು ಪಡೆಯಬಹುದು ಎಂದು ಅಂದಾಜಿಸಲಾಗಿದ್ದು, ಈ ಸಮೀಕ್ಷೆಯನ್ನು ಆಧರಿಸಿಯೇ ಕಾಂಗ್ರೆಸ್ ಚುನಾವಣಾತಂತ್ರಗಾರಿಕೆಯನ್ನ ರೂಪಿಸುತ್ತಿದೆ.ಆಡಳಿತರೂಢ ಬಿಜೆಪಿ 140ಕ್ಕೂ ಸ್ಥಾನಗಳನ್ನ ಗೆಲ್ಲುವ ವಿಶ್ವಾಸದಲ್ಲಿದ್ದರೂ ಸಮೀಕ್ಷೆಯ ಪ್ರಕಾರ ಸಿಗುವುದು ಬರೀ 77 ರಿಂದ 83 ಸ್ಥಾನ. ಜೆಡಿಎಸ್‌ಗೆ 21 ರಿಂದ 27 ಸ್ಥಾನಗಳು ಸಿಗಬಹುದು ಎಂದು ಅಂದಾಜಿಸಲಾಗಿದೆ. 1 ರಿಂದ 4 ಪಕ್ಷೇತರರು ಗೆಲುವು ಸಾಧಿಸಬಹುದು ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.ಶೇಕಡಾವಾರು ಮತ: ಬಿಜೆಪಿಗೆ ಶೇ ಶೇ.33 ರಿಂದ 36ರಷ್ಟು ಮತಗಳು, ಕಾಂಗ್ರೆಸ್‌ಗೆ ಶೇ.39 ರಿಂದ 42 ಮತ ಸಿಗಬಹುದು. ಜೆಡಿಎಸ್ ಶೇ. 15 ರಿಂದ 18ರಷ್ಟು ಮತ…
ಹವಾಮಾನ ವೈಪರೀತ್ಯದಿಂದ ಜನ ಕಂಗಾಲುಅನಾರೋಗ್ಯ ಹೆಚ್ಚಳ: ಆಸ್ಪತ್ರೆಗಳು ಫುಲ್ ಫುಲ್ NAMMUR EXPRESS NEWSಬೆಂಗಳೂರು: ಅಯ್ಯೋ ಹಗಲು ವೇಳೆ ಎಲ್ಲೆಲ್ಲೂ ಬಿಸಿಲೋ ಬಿಸಿಲು. ಬಿಸಿಲಿನ ಝಳವನ್ನೂ ತಡೆಯೋಕೆ ಸಾಧ್ಯವೇ ಇಲ್ಲ ಎಂಬಷ್ಟು ಮೈಸುಡುವ ಬಿಸಿಲಿನ ಜೊತೆಗೆ ಸೆಕೆಯ ಬೇಗೆಗೆ ಜನರು ತತ್ತರಿಸಿ ಹೋಗಿದ್ದಾರೆ. ಇನ್ನು ಶಿವರಾತ್ರಿ ಮುಗಿದರೂ ಚಳಿ ಬಿಟ್ಟಿಲ್ಲ.ಮೈ ಕೊರೆಯುವ ಚಳಿ ಜನರಿಗೆ ಗಾಬರಿ ಹುಟ್ಟಿಸಿದೆ. ಚಳಿ ಕಾರಣ ಅನಾರೋಗ್ಯ ಹೆಚ್ಚಳವಾಗುತ್ತಿದೆ. ಮಕ್ಕಳು ಸೇರಿ ಎಲ್ಲರೂ ಜ್ವರ, ಶೀತದಿಂದ ಬಳಲುತ್ತಿದ್ದಾರೆ.ಕರಾವಳಿಯ ಜನತೆ ಬಿಸಿಲಿನ ಧಗೆಗೆ ಹೈರಾಣಾಗಿದ್ದರೆ ಬೆಂಗಳೂರು ಮತ್ತೆ ಕೆಲ ಕಡೆಗಳಲ್ಲಿ ಕಳೆದ ಎರಡು ಮೂರು ದಿನಗಳಿಂದ ಬೆಳಗ್ಗೆ ಮತ್ತು ರಾತ್ರಿ ತಂಪು ವಾತಾವರಣದ ಮೋಡ ಕವಿದ ವಾತಾವರಣ ಕಂಡುಬರುತ್ತಿದೆ. ಈ ನಡುವೆ ಈ ಹವಾಮಾನದ ಪರಿಣಾಮ ಅನಾರೋಗ್ಯ ಸಮಸ್ಯೆಗಳು ಹೆಚ್ಚು ಕಂಡುಬರುತ್ತಿವೆ.ಒಂದೆಡೆ ಮೈ ಸುಡುವ ಬಿಸಿಲಿನ ಶಾಖ ಮತ್ತೊಂದೆಡೆ ಎಚ್3ಎನ್2 ವೈರಸ್ ಹರಡುವಿಕೆ ಹೆಚ್ಚಾಗುತ್ತಿದೆ. ಆಸ್ಪತ್ರೆಗಳು ಫುಲ್ ಫುಲ್: ಅರೋಗ್ಯ ಸಿಬ್ಬಂದಿ ಕೊರತೆ ರಾಜ್ಯದಲ್ಲಿ ಹವಾಮಾನ ಏರುಪೇರು ಕಾರಣ…
ತೀರ್ಥಹಳ್ಳಿ ತಾಲೂಕು ಕಲ್ಲುಕೊಡಿಗೆಯಲ್ಲಿ ಕಾರ್ಯಕ್ರಮರಕ್ತದಾನ, ನೇತ್ರದಾನ, ಅರೋಗ್ಯ ಶಿಬಿರ, ಸಾಧಕರಿಗೆ ಸನ್ಮಾನ, ಸಂಗೀತ ಸಂಜೆಸಿನಿಮಾ ನಟ ನಟಿಯರು, ಪ್ರಸಿದ್ಧ ಗಾಯಕರಿಂದ ಕಾರ್ಯಕ್ರಮ NAMMUR EXPRESS NEWSತೀರ್ಥಹಳ್ಳಿ: ವಿಶ್ವ ಮಾನವ ಕನ್ನಡ ವೇದಿಕೆ ಹಾಗೂ ಪುನೀತ್ ಬ್ರಿಗೇಡ್, ಕಲ್ಲುಕೊಡಿಗೆ ಕುಪ್ಪಳಿ ಹಾಗೂ ಬೆಕ್ಕನೂರು ಸಮಸ್ತ ಗ್ರಾಮಸ್ಥರ ಸಹಯೋಗದಲ್ಲಿ ಮಾ.17ರಂದು ದಿನವಿಡಿ ಪುನೀತ್ ನೆನಪಿನೋತ್ಸವ-2023 ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.ಮಾ.17, ಶುಕ್ರವಾರ ಸಮುದಾಯ ಭವನ,ಮುಸ್ಸಿನಕೊಪ್ಪ, ಕಲ್ಲುಕೊಡಿಗೆ ಆವರಣದಲ್ಲಿ ಬೆಳಿಗ್ಗೆ 8:30ಕ್ಕೆ ಪುನೀತ್ ಹುಟ್ಟು ಹಬ್ಬದ ಅಂಗವಾಗಿ ರಕ್ತದಾನ, ನೇತ್ರದಾನ ಶಿಬಿರ, ಉಚಿತ ಅರೋಗ್ಯ ಶಿಬಿರ ಆಯೋಜನೆ ಮಾಡಲಾಗಿದೆ. ಬೆಕ್ಕನೂರು ಗ್ರಾಮಸ್ಥರು ಈ ಶಿಬಿರದಲ್ಲಿ ಪಾಲ್ಗೊಳ್ಳಬಹುದು, ಸರ್ವರೂ ರಕ್ತದಾನ ಮಾಡಬಹುದು. ಬೆಳಿಗ್ಗೆ 8:30ಕ್ಕೆ ದೇವಂಗಿ, ಹಿರೇಕೊಡಿಗೆ ಗ್ರಾಮ ಪಂಚಾಯತ್ ಮಟ್ಟದ ವಾಲಿಬಾಲ್, ಥ್ರೋಬಾಲ್, ಹಗ್ಗ ಜಗ್ಗಾಟ ಸ್ಪರ್ಧೆ ಆಯೋಜನೆ ಮಾಡಲಾಗಿದೆ.ಸುಮಾರು 29 ಮಂದಿ ಸ್ಥಳೀಯ ಸಾಧಕರು, ಸೇವಕರಿಗೆ ಸನ್ಮಾನ ಮಾಡಲಾಗುತ್ತದೆ.ನಾಡಿನ ಖ್ಯಾತ ಸಿನಿಮಾ ತಾರೆಯರು, ಕಲಾವಿದರು, ಗಾಯಕರರು, ಕಾಮಿಡಿ ಕಲಾವಿದರು, ನೃತ್ಯ ಕಲಾವಿದರ ಪುನೀತ್ ಸಂಗೀತ ಸಂಜೆ…
ಮತಗಟ್ಟೆಗೆ ಎತ್ತಿಕೊಂಡು ಅಥವಾ ಹೊತ್ತುಕೊಂಡು ಬರುವ ಅವಶ್ಯಕತೆ ಇಲ್ಲದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾರಿ? NAMMUR EXPRESS NEWSಬೆಂಗಳೂರು: ವಯೋವೃದ್ಧರು ಮತ್ತು ವಿಕಲ ಚೇತನರನ್ನು ಈ ಸಲ ಮತಗಟ್ಟೆಗೆ ಎತ್ತಿಕೊಂಡು ಅಥವಾ ಹೊತ್ತುಕೊಂಡು ತರುವ ಅಗತ್ಯ ಇಲ್ಲ. 80 ವರ್ಷಕ್ಕೂ ಮೇಲ್ಪಟ್ಟವರಿಗೆ ಹಾಗೂ ವಿಶೇಷ ಚೇತನರಿಗೆ ಮನೆಯಿಂದಲೇ ಮತದಾನ ಮಾಡಲು ವ್ಯವಸ್ಥೆ ಮಾಡಲಾಗುವುದು ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ.ರಾಜ್ಯ ವಿಧಾನಸಭಾ ಚುನಾವಣೆಯ ಪೂರ್ವ ಸಿದ್ಧತೆ ಪರಿಶೀಲಿಸಿದ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್, ಇದೇ ಮೊದಲ ಬಾರಿಗೆ ರಾಜ್ಯದಲ್ಲಿ 80 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ವಿಶೇಷ ಚೇತನ ಮತದಾರರು ಬಯಸಿದರೆ ಮನೆಯಿಂದಲೂ ಮತದಾನ ಮಾಡುವ ಸೌಲಭ್ಯ ಒದಗಿಸಲಿದ್ದೇವೆ. ಅಧಿಸೂಚನೆ ಹೊರಡಿಸಿದ 5 ದಿನಗಳೊಳಗೆ ಫಾರ್ಮ್ 12ಡಿ ಲಭ್ಯವಿರುತ್ತದೆ. ಇದರಿಂದ 80 ವರ್ಷಕ್ಕೂ ಮೇಲ್ಪಟ್ಟವರು ಅಥವಾ ವಿಶೇಷ ಚೇತನ ಮತದಾರರು ಮನೆಯಿಂದಲೇ ತಮ್ಮ ಹಕ್ಕು ಚಲಾಯಿಸಬಹುದು ಎಂದರು. 80 ವರ್ಷ ಮೇಲ್ಪಟ್ಟವರನ್ನು ಮತದಾನ ಕೇಂದ್ರಕ್ಕೆ ಬರುವಂತೆ ಚುನಾವಣಾ ಆಯೋಗ…
ಐಐಟಿ ಬಾಂಬೆ ನಡೆಸಿದ ಪರೀಕ್ಷೆಯಲ್ಲಿ ಇಶಾನ್ ಅವರಿಗೆ ರ್‍ಯಾಂಕ್ಕಾರ್ಕಳ ಕ್ರಿಯೇಟಿವ್ ಕಾಲೇಜಿನ ಆಡಳಿತ ಮಂಡಳಿ ಅಭಿನಂದನೆ NAMMUR EXPRESS NEWSಕಾರ್ಕಳ: ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ಇಶಾನ್ ಪಿ ಸುಬ್ಬಾಪುರ್ ಮಠ್ ಐಐಟಿ ಬಾಂಬೆ ನಡೆಸಿದ ಪರೀಕ್ಷೆಯಲ್ಲಿ ರ್‍ಯಾಂಕ್ ಪಡೆಯುವ ಮೂಲಕ ನಾಡಿಗೆ ಹಾಗೂ ಕಾಲೇಜಿಗೆ ಕೀರ್ತಿ ತಂದಿದ್ದಾರೆ.ವೃತ್ತಿ ಶಿಕ್ಷಣ ತರಬೇತಿ ನೀಡುವ ದೇಶದ ಪ್ರತಿಷ್ಠಿತ ವಿದ್ಯಾಸಂಸ್ಥೆ IIT ಬಾಂಬೆಯವರು ನಡೆಸಿದ UCEED ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಇಶಾನ್ ಪಿ ಸುಬ್ಬಾಪುರ 95.53 ಅಂಕ ಗಳಿಸಿ ಆಲ್ ಇಂಡಿಯಾ ರಾಂಕ್ ನಲ್ಲಿ 1919ನೇ ಸ್ಥಾನ ಪಡೆದಿರುತ್ತಾನೆ. IITಯಲ್ಲಿ ಡಿಸೈನ್ಸ್ ಕೋರ್ಸ್ ಪ್ರವೇಶಾತಿಗಾಗಿ ಜನವರಿ 2023ರಲ್ಲಿ ನಡೆದ ಪರೀಕ್ಷೆಯಲ್ಲಿ ಇಶಾನ್ ಅತ್ಯುತ್ತಮ ಅಂಕಗಳಿಸುವ ಮೂಲಕ ಸಂಸ್ಥೆಗೆ ಮತ್ತು ಹೆತ್ತವರಿಗೆ ಕೀರ್ತಿ ತಂದಿರುತ್ತಾನೆ. ವಿದ್ಯಾರ್ಥಿಯ ಈ ಸಾಧನೆಗೆ ಕ್ರಿಯೇಟಿವ್ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ, ಉಪನ್ಯಾಸಕ ವರ್ಗದವರು ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ ಲಿಶನ್ ಗೌಡ ಅಭಿನಂದನೆ ಸಲ್ಲಿಸಿದ್ದಾರೆ.
ತಪ್ಪು ಮಾಹಿತಿ, ಅಕ್ರಮ, ಹಗರಣಕ್ಕೆ ಹೈಕೋರ್ಟ್ ಕಡಿವಾಣರಾಜ್ಯದ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ದಾಳಿ NAMMUR EXPRESS NEWSಬೆಂಗಳೂರು: ರಾಜ್ಯದ 200 ಕ್ಕೂ ಅಧಿಕ ಗ್ರಾಮಗಳಲ್ಲಿ ಸ್ಮಶಾನಕ್ಕೆ ಜಾಗ ಕಲ್ಪಿಸದಿದ್ದರೆ, 319 ಗ್ರಾಮಗಳಿಗಷ್ಟೇ ಸಶಾನ ಜಾಗ ಒದಗಿಸಬೇಕಿದೆ ಎಂದು ತಪ್ಪು ಮಾಹಿತಿ ನೀಡಿರುವ ಎಲ್ಲ ಜಿಲ್ಲಾಧಿಕಾರಿ ಹಾಜರಾಗಬೇಕು ಎಂದು ತಾಕೀತು ಮಾಡಿರುವ ಹೈಕೋರ್ಟ್, ತಪ್ಪು ಮಾಹಿತಿ ನೀಡುವ ಜೈಲಿಗೆ ಕಳುಹಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.ರಾಜ್ಯದಲ್ಲಿ ಸ್ಮಶಾನಕ್ಕೆ ಜಾಗ ಇಲ್ಲದೆ ಗ್ರಾಮಗಳಿಗೆ ಅಗತ್ಯ ಭೂಮಿ ಒದಗಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಬೆಂಗಳೂರು ನಿವಾಸಿ ಮಹಮದ್ ಇಕಾರ ಸಲ್ಲಿಸಿದ್ದ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಬಿ, ನೀರಪ್ಪ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ನಿರ್ದೇಶನ ನೀಡಿದೆ.ಜ10ರಂದು ಸರ್ಕಾರ ಸಲ್ಲಿಸಿದ್ದ ಪ್ರಮಾಣ ಪತ್ರದಲ್ಲಿ ರಾಜ್ಯದ ಒಟ್ಟು 29,616 ಗ್ರಾಮಗಳ ಪೈಕಿ ಈವರೆಗೆ 27,903 ಗ್ರಾಮಗಳಲ್ಲಿ ಸ್ಮಶಾನಕ್ಕೆ ಜಮೀನು ಒದಗಿಸಲಾಗಿದೆ. 319 ಗ್ರಾಮಗಳಿಗೆ ಸ್ಥಾನ ಸೌಲಭ್ಯ ಒದಗಿಸಬೇಕಾಗಿದೆ. ಒಟ್ಟು 1,394 ಬೇಚರಾಕ್…
ರದ್ದುಗೊಳಿಸಿ ಕರ್ನಾಟಕ ಹೈಕೋರ್ಟ್ ಆದೇಶ NAMMUR EXPRESS NEWSಬೆಂಗಳೂರು: ರಾಜ್ಯದಲ್ಲಿ 5 ಹಾಗೂ 8ನೇ ತರಗತಿ ಪಬ್ಲಿಕ್ ಪರೀಕ್ಷೆ ರದ್ದುಗೊಳಿಸಿ ಕರ್ನಾಟಕ ಹೈಕೋರ್ಟ್ ಆದೇಶ ಮಾಡಿದೆ.ರಾಜ್ಯ ಪರೀಕ್ಷಾ ಮಂಡಳಿ ಪರೀಕ್ಷೆಯನ್ನು ನಡೆಸಲು ನಿರ್ಧರಿಸಿತ್ತು. ಆದರೆ ಹೈಕೋರ್ಟ್ ಏಕಸದಸ್ಯ ಬೋರ್ಡ್ ರದ್ದುಗೊಳಿಸಿ ಆದೇಶ ಹೊರಡಿಸಿದೆ.ಮುಂದಿನ 2022-23ನೇ ಸಾಲಿನಿಂದ 5ನೇ ತರಗತಿ 8ನೇ ತರಗತಿ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಪರಿಶೀಲನೆಗಾಗಿ ಪಬ್ಲಿಕ್ ನಡೆಸಲು ಮತ್ತು ಸಾಕ್ಷರತಾ ನಿರ್ಧರಿಸಿತ್ತು. ರಾಜ್ಯ ಅನುಸರಿಸುತ್ತಿರುವ ಎಲ್ಲಾ ಸರ್ಕಾರಿ, ಅನುದಾನಿತ ಅನುದಾನರಹಿತ ಈ ಬೆನ್ನಲ್ಲೇ ಮತ್ತು ತರಗತಿಯ ಬೋರ್ಡ್ ಪರೀಕ್ಷೆ ರದ್ದುಗೊಳಿಸಿ ಹೈಕೋರ್ಟ್ ಪೀಠ ಆದೇಶ ಹೊರಡಿಸಿದೆ.