Author: Nammur Express Admin

ಮಂಗಳೂರುನಲ್ಲಿ ದಾಖಲು: ಮತ್ತಷ್ಟು ಹೆಚ್ಚುತ್ತಿರುವ ಉಷ್ಣತೆಮಲೆನಾಡಲ್ಲೂ ಬಿಸಿಲು ಹೆಚ್ಚಳ: ಬತ್ತಿದ ನೀರಿನ ಸೆಲೆ NAMMUR EXPRESS NEWSಮಂಗಳೂರು/ಶಿವಮೊಗ್ಗ: ದೇಶದಲ್ಲೇ ದಾಖಲೆಯ ಗರಿಷ್ಠ ತಾಪಮಾನ ಮಂಗಳೂರುನಲ್ಲಿ ದಾಖಲಾಗಿದ್ದು ಜನ ಸಾಮಾನ್ಯರಲ್ಲಿ ಆತಂಕ ಹೆಚ್ಚಾಗಿದೆ. ಇನ್ನು ಮಲೆನಾಡಲ್ಲಿ ಕೂಡ ಬಿಸಿಲಿನ ಝಳ ಜನರನ್ನು ಕಂಗಾಲಾಗಿಸಿದೆ.ಬಿಸಿಲ ದಗೆಗೆ ಕಾಡ್ಗಿಚ್ಚುಗಳು ಹೆಚ್ಚಾಗುತ್ತಿತ್ತು. ಇತ್ತ ತೀವ್ರವಾದ ತಾಪಮಾನದಿಂದಾಗಿ ಅನಾರೋಗ್ಯವೂ ಹೆಚ್ಚಾಗುತ್ತಿದೆ. ಇನ್ನೊಂದೆಡೆ ಬೆಂಕಿ ಅವಘಡಗಳು ಕೂಡ ಹೆಚ್ಚಾಗಿವೆ.ಮಾ, 2ರಂದು ದೇಶದಲ್ಲೇ ಗರಿಷ್ಠ ಎನಿಸಿಕೊಂಡ ಸರಿ ಸುಮಾರು 37 ಡಿ.ಸೆ ನಷ್ಟು ತಾಪಮಾನ ಮಂಗಳೂರುನಲ್ಲಿ ದಾಖಲಾಗಿದ್ದು. ಬುಧವಾರ 38.8 ಡಿ.ಸೆ ತಾಪಮಾನ ದಾಖಲಾಗಿದೆ.2010 ರಿಂದ ಇಲ್ಲಿಯವರೆಗೆ ದಾಖಲೆಯಾದ ಉಷ್ಣತೆಯಲ್ಲಿ ಅತೀ ಹೆಚ್ಚು ಉಷ್ಣತೆ ಇದಾಗಿದೆ. ದೇಶದಲ್ಲೇ ಅತೀ ಹೆಚ್ಚು ತಾಪಮಾನ ಮಂಗಳೂರುನಲ್ಲಿ ದಾಖಲಾಗಿದೆ.ಕರಾವಳಿ ಹಾಗೂ ಮಲೆನಾಡಲ್ಲಿ ಬಿಸಿಲ ಬೇಗೆ ಮತ್ತೆ ಮತ್ತೆ ಹೆಚ್ಚಾಗುತ್ತಲೇ ಇದ್ದು ಇನ್ನು ತಾಪಮಾನ 2 ರಿಂದ 3 ಡಿ.ಸೆ ನಷ್ಟು ಮತ್ತೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಏರುತ್ತಿರುವ ತಾಪಮಾನ ಮಕ್ಕಳ…

Read More

7 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರ್: ಶಿಕ್ಷಣ ಸಚಿವ ನಾಗೇಶ್ ಮಾಹಿತಿ NAMMUR EXPRESS NEWSತಿಪಟೂರು: ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಿದ್ದು ಸುಸೂತ್ರವಾಗಿ ನಡೆಯುತ್ತಿದೆ. ರಾಜ್ಯದ 1109 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಮೇ ಮೊದಲ ವಾರದಲ್ಲಿ ಪಿಯುಸಿ ಫಲಿತಾಂಶ ಪ್ರಕಟವಾಗಲಿದೆ ಎಂದು ಶಿಕ್ಷಣ ಸಚಿವ ನಾಗೇಶ್ ತಿಳಿಸಿದ್ದಾರೆ. ತಿಪಟೂರಿನ ಸರ್ಕಾರಿ ಶಾಲೆಗೆ ಭೇಟಿ ನೀಡಿದ ಬಳಿಕ ನಾಗೇಶ್ ಅವರು ಈ ಮಾಹಿತಿ ಹಂಚಿಕೊಂಡಿದ್ದಾರೆ.7 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆಗೆ ಹಾಜರಾಗಿದ್ದಾರೆ. ಮಾ.9ರಿಂದ ಪರೀಕ್ಷೆ ಆರಂಭವಾಗಿದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ ಕಲ್ಲಡ್ಕ: ದ್ವಿತೀಯ ಪಿಯುಸಿ ಪರೀಕ್ಷೆ ದಿನವೇ ವಿದ್ಯಾರ್ಥಿನಿಯೋರ್ವಳು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲ್ಲಡ್ಕದಲ್ಲಿ ನಡೆದಿದೆ.ಬಾಳ್ತಿಲ ಗ್ರಾಮ ಪಂಚಾಯತ್ ಬಳಿಯ ನಿವಾಸಿ ಚಂದ್ರಶೇಖರ್ ಗೌಡ ಮತ್ತು ಸೌಮ್ಯ ದಂಪತಿ ಪುತ್ರಿ ವೈಷ್ಣವಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಕಲ್ಲಡ್ಕ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ವೈಷ್ಣವಿ ಕಾಲೇಜಿಗೆಂದು ಹೊರಟು ಏನೋಮರೆತು ಹೋಗಿದ್ದೇನೆಂದು ವಾಪಾಸ್…

Read More

ಮಾ.16 ರಂದು ಬಿಜೆಪಿ ಪ್ರನಾಳಿಕೆಗಾಗಿ ಜನಾಭಿಪ್ರಾಯದ ಸಂಗ್ರಹದ ಅಭಿಯಾನಕ್ಕೆ ಚಾಲನೆಪ್ರತಿ ಕ್ಷೇತ್ರದಲ್ಲೂ ನಡೆಯಲಿದೆ ಕಾರ್ಯಕ್ರಮಜಿಲ್ಲಾ ಸಮಿತಿ ಅಧ್ಯಕ್ಷರಾಗಿ ಡಾ. ಧನಂಜಯ ಸರ್ಜಿ NAMMUR EXPRESS NEWSಶಿವಮೊಗ್ಗ: ಮಾ.16 ರಿಂದ ಬಿಜೆಪಿ ಪ್ರನಾಳಿಕೆಗಾಗಿ ಜನಾಬಿಪ್ರಾಯ ಸಂಗ್ರಹ ಅಭಿಯಾನ ಆರಂಭವಾಗಲಿದ್ದು ಅಂದು ರಾಯಲ್ ಆರ್ಕಿಡ್ ನಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಚಾಲನೆ ನೀಡಲಿದ್ದಾರೆ ಎಂದು ಪ್ರನಾಳಿಕೆ ಸಮಿತಿಯ ಜಿಲ್ಲಾಧ್ಯಕ್ಷ ವೈದ್ಯಡಾ.ಧನಂಜಯ್ ಸರ್ಜಿ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸರ್ಕಾರದ ಯೋಜನೆಗಳನ್ನ ಜನರಿಗೆ ಮುಟ್ಟಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ. 273 ಬೂತ್ ಗಳಿಗೂ ಜನರನ್ನ ಸಂಪರ್ಕಿಸಿ ಸರ್ಕಾರದ ಮಾಹಿತಿ ತಿಳಿಸಲಾಗುವುದು. 2016 ರ ನಂತರ 100 ಕೋಟಿ ಮನೆಗಳು ನಿರ್ಮಾಣವಾಗಿದೆ. ಜಲಜೀವನ್ ಮಿಷನ್, ನಗರದಲ್ಲಿ ವ್ಯವಸ್ಥೆಗಳಿವೆ. ವಿದ್ಯುತ್ ಚ್ಛಕ್ತಿ ಇಲ್ಲದ ಮನೆಗಳಿಗೆ ವಿದ್ಯುತ್ ಪೂರೈಕೆ ಇವುಗಳನ್ನ ಮಾಹಿತಿ ನೀಡಲಾಗುವುದು ಎಂದರು.ವ್ಯಾಕ್ಸಿನೇಷನ್ ಹಂಚಿಕೆ, ಆಪರೇಷನ್ ಗಂಗಾ, ಹೈವೆ ಕಾಮಗಾರಿ, 3500 ಕೋಟಿ ಹಣ ಹೈವೆಗೆ ಹರಿದು ಬರುತ್ತಿದೆ ಈ ಹಿಂದೆ 800 ಕೋಟಿ ಹರಿದು ಬರುತ್ತಿತ್ತು. 59 ಲಕ್ಷ…

Read More

ಬಿಜೆಪಿಯ ಹಲವರಿಗೆ ಟಿಕೆಟ್ ಇಲ್ಲ…?!ಕಾಂಗ್ರೆಸ್ ಪಕ್ಷದಿಂದ 140 ಕ್ಷೇತ್ರ ಫೈನಲ್ರಾಜ್ಯದಲ್ಲಿ ಚುನಾವಣೆಗೆ ಸಿದ್ಧತೆ ಜೋರು NAMMUR EXPRESS NEWSಬೆಂಗಳೂರು: ಕಾಂಗ್ರೆಸ್, ಬಿಜೆಪಿಯಲ್ಲಿ ಟಿಕೆಟ್ ಕುತೂಹಲ ಹೆಚ್ಚಿದೆ. ಬಿಜೆಪಿಯ ಹಲವು ಮೂಲ ನಾಯಕರಿಗೆ ಟಿಕೆಟ್ ಇಲ್ಲ ಎನ್ನಲಾಗಿದೆ.ಮೋದಿ ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ಅವಕಾಶವಿಲ್ಲ ಎಂದು ಘೋಷಿಸಿದ್ದರೂ ಬಿಜೆಪಿಯಲ್ಲಿ ಟಿಕೇಟ್ ಗಾಗಿ ಕಾಯುತ್ತಿರೋ ಅಪ್ಪ ಮಕ್ಕಳ ಪಟ್ಟಿ ದೊಡ್ಡದಿದೆ. ಈ ಮಧ್ಯೆ ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿಸಿಎಂ ಬಿಎಸೈ ನೀಡಿರೋ ಹೇಳಿಕೆ ಈಗ ಬಿಜೆಪಿಯ ಟಿಕೇಟ್ ಆಕಾಂಕ್ಷಿಗಳ ಎದೆಯಲ್ಲಿ ನಡುಕ ಮೂಡಿಸಿದೆ. ಕಲ್ಬುರ್ಗಿಯಲ್ಲಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ ಈ ಭಾರಿ ಒಂದು ನಾಲ್ಕು ಶಾಸಕರನ್ನು ಹೊರತು ಪಡಿಸಿ ಉಳಿದವರಿಗೆಲ್ಲ ಬಿಜೆಪಿಯಿಂದ ಟಿಕೇಟ್ ಸಿಗಲಿದೆ ಎಂದಿದ್ದಾರೆ.ಬಿಜೆಪಿಯ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿರೋ ಈ ಮಾತಿನಿಂದ ಬಿಜೆಪಿ ಪಾಳಯದಲ್ಲಿ ನಡುಕ ಮೂಡಿಸಿದೆ. ಹಲವು ಶಾಸಕರು ಬಿ.ಎಸ್.ಯಡಿಯೂರಪ್ಪ ಹೇಳಿಕೆಯಿಂದ ಕಂಗಾಲಾಗಿದ್ದಾರೆ.ಬಿಜೆಪಿ ಹೈಕಮಾಂಡ್‌ ತಳಮಟ್ಟದಿಂದ ಮಾಹಿತಿ ಸಂಗ್ರಹ ಮಾಡಿದ್ದು, ಜನಾಭಿಪ್ರಾಯ ಹಾಗೂ ಕಾರ್ಯಕರ್ತರ ಅಭಿಪ್ರಾಯ ಆಧರಿಸಿ ಹಲವು ಶಾಸಕರ ಮಾರ್ಕ್ಸ್ ಕಾರ್ಡ್…

Read More

ಮುಂಜಾನೆ ಹೃದಯಾಘಾತ: ಕಾಂಗ್ರೆಸ್ ಪಕ್ಷದ ಸಂಘಟಕ ವಿಧಿವಶ NAMMUR EXPRESS NEWSಬೆಂಗಳೂರು: ಮೈಸೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್​ಧ್ರುವನಾರಾಯಣ(61) ಹೃದಯಾಘಾತದಿಂದ ನಿಧನರಾಗಿದ್ದಾರೆ. ಆರ್.ಧ್ರುವನಾರಾಯಣ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಿಂದ 2 ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಹಾಗೇ ಕೊಳ್ಳೇಗಾಲ ಕ್ಷೇತ್ರದಿಂದ 1 ಬಾರಿ, ಸಂತೇಮರಹಳ್ಳಿ ಕ್ಷೇತ್ರದಿಂದ 1 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 1983ರಲ್ಲಿ ಕಾಂಗ್ರೆಸ್ ಪಕ್ಷ ಸೇರುವ ಮೂಲಕ ರಾಜಕೀಯ ಪ್ರವೇಶ 1986ರಲ್ಲಿ ಎನ್​ಎಸ್​ಯುಐ ಬೆಂಗಳೂರು​ ಘಟಕದ ಅಧ್ಯಕ್ಷರಾಗಿದ್ದರು.ಈ ಬಾರಿ ನಂಜನಗೂಡು ಕ್ಷೇತ್ರದಿಂದ ಸ್ಪರ್ಧೆಗೆ ಸಿದ್ಧತೆ ನಡೆಸಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದರು. ಇವರ ಸಾವು ಇದೀಗ ತುಂಬಲಾರದ ನಷ್ಟ ಉಂಟು ಮಾಡಿದೆ.ಧ್ರುವನಾರಾಯಣ ಅವರಿಗೆ ಮುಂಜಾನೆ ಹೃದಯಘಾತವಾಗಿದ್ದು, ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಪಕ್ಷದ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿಕೆಶಿ ಸೇರಿದಂತೆ ಎಲ್ಲಾ ಪಕ್ಷದ ನಾಯಕರು, ಪ್ರಮುಖರು ಸಂತಾಪ ವ್ಯಕ್ತಪಡಿಸಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಮಾಜಿ ಸಂಸದರಾದ ಶ್ರೀ ಧ್ರುವ ನಾರಾಯಣ…

Read More

ತೀರಾ ಚಿಕ್ಕ ವಯಸ್ಸಿನವರು ಕೂಡ ಬಲಿಏಕೆ… ಏನು.. ಇತ್ತ… ಇಲ್ಲಿದೆ ಅಧ್ಯಯನ ವರದಿ NAMMUR EXPRESS NEWSಕಳೆದ ಕೆಲವು ತಿಂಗಳಿಂದ ಜನರು ಹೃದಯಾಘಾತದಿಂದ ಮೃತಪಟ್ಟ ಹಲವು ಪ್ರಕರಣಗಳು ವರದಿಯಾಗಿವೆ. ಆರೋಗ್ಯವಂತರಾಗಿರುವವರು, ಮೈದಾನದಲ್ಲಿ ಆಡುತ್ತಿರುವವರು, ತೀರಾ ಚಿಕ್ಕವಯಸ್ಸಿನವರುಹೃದಯಾಘಾತದಿಂದ ಸಾವಿಗೀಡಾಗುತ್ತಿರುವ ಸುದ್ದಿಗಳು ಜನರನ್ನು ಕಳವಳಕ್ಕೀಡು ಮಾಡಿವೆ. ಕೋವಿಡ್ ಸೋಂಕಿಗೆ ಒಳಗಾಗಿ, ಚೇತರಿಸಿಕೊಂಡು ಆರೋಗ್ಯವಂತರಾಗಿದ್ದ ವ್ಯಕ್ತಿಗಳಲ್ಲಿ ಹೃದಯಸ್ತಂಭನದಿಂದ ಮರಣ ಸಂಭವಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ ಎಂಬುದು ಸಮೀಕ್ಷೆಯೊಂದರಿಂದ ತಿಳಿದುಬಂದಿದೆ. ಈ ರೀತಿ ಸಾವಿಗೀಡಾದವರಲ್ಲಿ ಶೇ.50ರಷ್ಟು ಮಂದಿ ಧೂಮಪಾನದ ಚಟ ಹೊಂದಿರಲಿಲ್ಲ. ಬಹುತೇಕ ಮಂದಿಗೆ ಹೃದಯ ಸಮಸ್ಯೆಯ ಕೌಟುಂಬಿಕ ಹಿನ್ನೆಲೆ ಇರಲಿಲ್ಲ ಎಂದು ವೈದ್ಯರು ಹೇಳಿದ್ದಾರೆ. ದಿಲ್ಲಿಯ ಕೆಲವು ಆಸ್ಪತ್ರೆಗಳಲ್ಲಿ ಹೃದಯಸ್ತಂಭನದಿಂದ ಸಾವು ಸಂಭವಿಸುವ ಪ್ರಕರಣಗಳ ಸಂಖ್ಯೆಯಲ್ಲಿ ಶೇ.10ರಿಂದ 15ರವರೆಗೂ ಹೆಚ್ಚಳ ಕಂಡುಬಂದಿದೆ. ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿದ್ದ ವ್ಯಕ್ತಿಗಳಲ್ಲಿ ಸಾವು ಹಾಗೂ ಹೃದಯ ಸ್ತಂಭನ, ಪಾರ್ಶ್ವವಾಯು, ಶ್ವಾಸಕೋಶದ ಸಮಸ್ಯೆ ಸಾಧ್ಯತೆ ಹೆಚ್ಚಾಗಿದೆ ಎಂದು ಅಮೆರಿಕದಲ್ಲಿ ಸಂಶೋಧನಾ ವರದಿ ಪ್ರಕಟವಾಗಿತ್ತು. ಅದಕ್ಕೆ ಪೂರಕವಾಗಿರುವ ಬೆಳವಣಿಗೆಗಳು ನಮ್ಮಲ್ಲೂ ನಡೆಯುತ್ತಿವೆ ಎಂದು…

Read More

ಟ್ರಯಲ್ ಬ್ಲಾಸ್ಟ್ ಮತ್ತು ಕುಕ್ಕರ್ ಬ್ಲಾಸ್ಟ್ ಬಗ್ಗೆ ಎನ್ ಐಎ ತನಿಖೆರಾಜ್ಯದಲ್ಲಿ ಮತ್ತೆ ಉಗ್ರ ಕಾರ್ಯಾಚರಣೆ ಮುನ್ನೆಲೆಗೆ NAMMUR EXPRESS NEWSಶಿವಮೊಗ್ಗಕ್ಕೆ ಮತ್ತೆ ಎನ್‌ಐಎ ಅಧಿಕಾರಿಗಳು ಬಂದಿದ್ದಾರೆ, ಬೆಂಗಳೂರಿನಲ್ಲಿಯೇ ಶಂಕಿತ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವ ಆರೋಪಿಗಳ ವಿಚಾರಣೆ ನಡೆಸ್ತಿರುವ ಎನ್‌ಐಎ ಅಧಿಕಾರಿಗಳು, ಗುರುಪುರದ ಸಮೀಪದ ಕೆಮ್ಮಣ್ಣುಗುಂಡಿ ಪ್ರದೇಶದಲ್ಲಿ ನಡೆಸಿದ ಟ್ರಯಲ್ ಬ್ಲಾಸ್ಟ್ ಹಾಗೂ ರಾಷ್ಟ್ರಧ್ವಜ ಸುಟ್ಟಿರುವ ಪ್ರಕರಣ ಮತ್ತು ಮಂಗಳೂರಿನಲ್ಲಿ ನಡೆದ ಕುಕ್ಕರ್ ಬ್ಲಾಸ್ಟ್ ಕೇಸ್‌ನ ನಡುವೆ ಇರಬಹುದಾದ ಲಿಂಕ್‌ಗಳನ್ನು ಸಹ ಹುಡುಕುತ್ತಿದ್ದಾರೆ. ಕಾರಣ ಶಾರೀಖ್, ಹೌದು. ತೀರ್ಥಹಳ್ಳಿ ಮೂಲದ ಶಾರೀಖ್ ಟ್ರಯಲ್ ಬ್ಲಾಸ್ಟ್ ಕೇಸ್‌ನಲ್ಲಿಯು ಆರೋಪಿಯಾಗಿದ್ದು . ಶಂಕಿತ ಮಾಜ್ ಹಾಗೂ ಯಾಸೀನ್‌ನಡುವೆ ಲಿಂಕ್ ಹೊಂದಿದ್ದವನು. ಅಲ್ಲದೆ ಪ್ರೇಮ್ ಸಿಂಗ್ ಗೆ ಇರಿತ ಪ್ರಕರಣದಲ್ಲಿಯು ಆರೋಪಿ ಜಬಿಗೆ ಶಾರೀಖ್ ಸಂಪರ್ಕ ಹೊಂದಿದ್ದ.ಈ ಆರೋಪಿಯೇ ಮಂಗಳೂರು ಕುಕ್ಕರ್ ಬ್ಲಾಸ್ಟ್‌ ಕೇಸ್‌ನ ಪ್ರಮುಖ ಆರೋಪಿ. ಇನ್ನೂ ಮಂಗಳೂರಿನಲ್ಲಿ ನಡೆದ ಗೋಡೆಬರಹ ಕೇಸ್‌ನಲ್ಲಿಯು ಈತ ಆರೋಪಿಯಾಗಿದ್ದ. ಈ ಎಲ್ಲಾ ಕಾರಣದಲ್ಲಿ ಎನ್‌ಐಎ ಕೈಗೆತ್ತಿಕೊಂಡಿರುವ ಕೇಸ್ ನಡಿಯಲ್ಲಿ…

Read More

ಮಲೆನಾಡ ಆಹಾರ ಮೇಳ ಮತ್ತು ಗೃಹಪಯೋಗಿ ವಸ್ತುಗಳ ಮಾರಾಟ ಮೇಳಮಲೆನಾಡ ಮಹಿಳಾ ವೇದಿಕೆ ಆಶ್ರಯದಲ್ಲಿ ನಯನಾ ಶೆಟ್ಟಿ ಸಾರಥ್ಯದಲ್ಲಿ ಕಾರ್ಯಕ್ರಮಸಾಧಕರಿಗೆ ಸನ್ಮಾನ ಸಮಾರಂಭ ಹಾಗೂ ರಾಜ್ಯಮಟ್ಟದ ನೃತ್ಯ ಸ್ಪರ್ಧೆ NAMMUR EXPRESS NEWSತೀರ್ಥಹಳ್ಳಿ : ಮಲೆನಾಡ ಮಹಿಳಾ ವೇದಿಕೆ ಆಶ್ರಯದಲ್ಲಿ ನಯನಾ ಶೆಟ್ಟಿ ಸಾರಥ್ಯದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಮಾರ್ಚ್ 8ರಂದು ಬೆಳಗ್ಗೆ 11:00ಗೆ ಡಾ. ಯು. ಆರ್ ಅನಂತಮೂರ್ತಿ ಸರ್ಕಾರಿ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ಮಲೆನಾಡ ಆಹಾರ ಮೇಳ ಮತ್ತು ಗೃಹ ಉಪಯೋಗಿ ವಸ್ತುಗಳ ಮಾರಾಟಮೇಳ, ಬೃಹತ್ ಮಹಿಳಾ ಜಾಥಾ, ಮಲೆನಾಡ ಮಹಿಳಾ ಸಾಧಕರಿಗೆ ಸನ್ಮಾನ ಸಮಾರಂಭ ಹಾಗೂ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಪ. ಪಂ ಮಾಜಿ ಅಧ್ಯಕ್ಷೆ ಶಬನಂ, ಪ. ಪಂ ಸದಸ್ಯರಾದ ಗೀತಾ ರಮೇಶ್, ಜ್ಯೋತಿ ಮೋಹನ್, ಮಂಜುಳ ನಾಗೇಂದ್ರ, ಜ್ಯೋತಿ ಗಣೇಶ್ ಕಾರ್ಯಕ್ರಮ ಉದ್ಘಾಟಿಸುವರು.ಸಂಜೆ 6:30ಕ್ಕೆ ಮಹಿಳಾ ಸಾಧಕರಿಗೆ ಸನ್ಮಾನ ಸಮಾರಂಭ ಹಾಗೂ ರಾಜ್ಯಮಟ್ಟದ ನೃತ್ಯ ಸ್ಪರ್ಧೆ ನಡೆಯಲಿದೆ. ತಾಲೂಕು ಬಂಟರ ಮಹಿಳಾ ಸಂಘದ…

Read More

ಕೊಪ್ಪ ತಾಲೂಕು ಭಂಡಿಗಡಿ ಶಾಲೆಯಲ್ಲಿ ವಿನೂತನ ಕಾರ್ಯಕ್ರಮಶಾಲಾ ಅಭಿವೃದ್ಧಿಗೆ ಊರವರೇ ಅಂಟಿಗೆ ಪಂಟಿಗೆ ಕಟ್ಟಿ ಹಣ ಕೊಟ್ಟರು!60ಕ್ಕೂ ಹೆಚ್ಚು ಅಂಟಿಗೆ ಪಂಟಿಗೆ ಹಾಡುಗಾರರಿಗೆ ಸನ್ಮಾನಕ್ರಿಯೇಟಿವ್ ಮೀಡಿಯಾದಿಂದ ಪುಸ್ತಕ, ನಮ್ಮ ಭಂಡಿಗಡಿ ಡಾಕ್ಯುಮೆಂಟ್ರಿ ಬಿಡುಗಡೆ NAMMUR EXPRESS NEWSಕೊಪ್ಪ: ಆ ಪುಟ್ಟ ಹಳ್ಳಿಯ ಸರ್ಕಾರಿ ಪ್ರೌಢ ಶಾಲೆ. ಸುಮಾರು 30 ವರ್ಷಗಳ ದೀರ್ಘ ಪಯಣದಲ್ಲಿ 15 ವರ್ಷದ ಬಳಿಕ ಸರ್ಕಾರದ ಅನುದಾನ, ಸೌಲಭ್ಯ ಪಡೆಯಿತು. 15 ವರ್ಷ ಗ್ರಾಮಸ್ಥರು ಅಂಟಿಗೆ ಪಂಟಿಗೆ ಕಟ್ಟಿ ಹಣ ಸಂಗ್ರಹಿಸಿ ಶಾಲೆ ನಡೆಸಿದ್ದರು, ಶಿಕ್ಷಕರು ಬಿಡಿಗಾಸು ಪಡೆಯದೇ ಸೇವೆ ಮಾಡಿದ್ದರು. ಗ್ರಾಮಸ್ಥರು ಶಾಲೆಯ ಅಭಿವೃದ್ಧಿಗೆ ಕೈ ಜೋಡಿಸಿದ್ದರು.ಸರ್ಕಾರಿ ಶಾಲೆ ಉಳಿಸಲು ಅಂಟಿಗೆ ಪಂಟಿಗೆ ಕಟ್ಟಿ ಊರೂರು ಹಾಡು ಹೇಳಿ ಹಣ ಸಂಗ್ರಹಿಸಿದ ಕೊಪ್ಪ ತಾಲೂಕು ಭಂಡಿಗಡಿ ಶ್ರೀ ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಇಂದು ಎಲ್ಲದರಲ್ಲೂ ಮುಂದಿದೆ.ಶಾಲಾ ಮುಖ್ಯ ಉಪಾಧ್ಯಾಯ ಎನ್.ಎಸ್. ಸುರೇಂದ್ರ ಹಾಗೂ ಎಲ್ಲಾ ಶಿಕ್ಷಕರ ಶ್ರಮ, ಗ್ರಾಮಸ್ಥರು, ದಾನಿಗಳ ಸಹಕಾರದಿಂದ ಶಾಲೆ ಎಲ್ಲರ ಗಮನ ಸೆಳೆದಿದೆ.ಸುರೇಂದ್ರ…

Read More

ವಿದ್ಯೆಗೆ ಸರಸ್ವತಿಸಂಪತ್ತಿಗೆ ಲಕ್ಷ್ಮಿಶಕ್ತಿಗೆ ಪಾರ್ವತಿ ಎಲ್ಲಕ್ಕೂ ಮಿಗಿಲಾಗಿ ಜನ್ಮ ಕೊಟ್ಟವಳು ಹೆಣ್ಣು ಭೂಮಿ ತಾಯಿಯೂ ಹೆಣ್ಣು.. ಇಂತಹ ಲೋಕ ಮಾತೆಗೆ ಕೋಟಿ ನಮನ..! ತಾಯಿಯಾಗಿ, ಅಕ್ಕ ತಂಗಿಯಾಗಿ, ಸ್ನೇಹಿತೆಯಾಗಿ, ಸಂಗಾತಿಯಾಗಿ, ತ್ಯಾಗ ಮಯಿಯಾಗಿ ಅಕ್ಕರೆಯ ಪ್ರೀತಿ, ವಾತ್ಸಲ್ಯ ನೀಡುವ… ಸಮಸ್ತ ಮಹಿಳೆಯರಿಗೆ ಮಹಿಳಾ ದಿನಾಚರಣೆಯ ಶುಭಾಶಯಗಳು

Read More