ಸರಕಾರಕ್ಕೆ ಮತ್ತೊಂದು ತಲೆನೋವುಮಾ.24ರಿಂದ ಅನಿರ್ದಿಷ್ಟಾವಧಿ ಧರಣಿ NAMMUR EXPRESS NEWSಬೆಂಗಳೂರು: ಸರ್ಕಾರಿ ನೌಕರರ ನಂತರ ಇದೀಗ ಸಾರಿಗೆ ನೌಕರರು ಮುಷ್ಕರ ಹೂಡಲು ಮುಂದಾಗಿದ್ದು, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾ.24ರಿಂದ ಅನಿರ್ದಿಷ್ಟಾವಧಿ ಧರಣಿ ಮಾಡಲು ಸಾರಿಗೆ ನೌಕರರು ನಿರ್ಧರಿಸಿದ್ದಾರೆ.ಸಾರಿಗೆ ನಿಗಮ ನೌಕರರ ಸಮಾನ ಮನಸ್ಕರ ವೇದಿಕೆಯಿಂದ ಹೋರಾಟ ನಡೆಯಲಿದ್ದು, ಧರಣಿ ಸಂಬಂಧ ಇಂದು ಕಾರ್ಮಿಕ ಇಲಾಖೆಗೆ ಸಾರಿಗೆ ನೌಕರರು ನೋಟಿಸ್ ನೀಡಲಿದ್ದಾರೆ. ರಾಜ್ಯದ ನಾಲ್ಕು ನಿಗಮಗಳ ಬಸ್‌ಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲು ನಿರ್ಧಾರ ಮಾಡಲಾಗಿದೆ.ಸಾರಿಗೆ ನೌಕರರ ಕೂಟ ಈಗಾಗಲೇ ಎರಡು ಬಾರಿ ಮುಷ್ಕರ ಮಾಡಿದೆ. ನಾಲ್ಕು ದಿನ ಫ್ರೀಡಂ ಪಾರ್ಕ್‌ನಲ್ಲಿ ಸಾರಿಗೆ ನೌಕರರು ಪ್ರತಿಭಟನೆ ನಡೆಸಿದ್ದರು.ನಾಳೆಯಿಂದ ಎಲ್ಲ ಘಟಕಗಳಲ್ಲಿ ಮುಷ್ಕರದ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಈ ಹಿಂದೆ ಸರ್ಕಾರ ಕೊಟ್ಟ ಭರವಸೆ ಈಡೇರಿಸಬೇಕು ಎಂದು ಒತ್ತಾಯಿಸಲಿದ್ದಾರೆ. ಈ ಹಿಂದೆ ಸಾರಿಗೆ ನೌಕರರಿಗೆ ಸರ್ಕಾರ ಭರವಸೆಯನ್ನ ನೀಡಿತ್ತು. ಆದರೆ ವೇತನ ವಿಚಾರವಾಗಿ ಕೊಟ್ಟ ಮಾತನ್ನ ಉಳಿಸಿಕೊಳ್ಳಲಿಲ್ಲ ಎಂದು ಸಾರಿಗೆ ನೌಕರರ ಯೂನಿಯನ್…
Author: Nammur Express Admin
NAMMUR EXPRESS NEWSಸಾಗರ, ಹೊಸನಗರ ಕ್ಷೇತ್ರದ ಶಾಸಕರು, ರಾಜ್ಯದ ಮಾಜಿ ಸಚಿವರೂ, ಎಂಎಸ್ಐಎಲ್ ಅಧ್ಯಕ್ಷರಾದ ಹರತಾಳು ಹಾಲಪ್ಪ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳುಹರತಾಳು ಹಾಲಪ್ಪ ಶಿವಮೊಗ್ಗ ಜಿಲ್ಲೆಯ ಸಾಗರ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕ. ಮಲೆನಾಡು ಶೈಲಿಯ ರಾಜಕಾರಣಿಯಾಗಿದ್ದು ಈಡಿಗ ಸಮುದಾಯದ ನಾಯಕರಾಗಿದ್ದಾರೆ.ಬಿ.ಎಸ್.ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾಗಿದ್ದರು. 28 ಜುಲೈ 2020 ರಂದು ಅವರನ್ನು MSIL ನ ಅಧ್ಯಕ್ಷರನ್ನಾಗಿ ನೇಮಕವಾಗಿದ್ದಾರೆ.ಸಾಗರ ಶಾಸಕರಾಗಿ ಮಲೆನಾಡು ಭಾಗದ ಸಮಸ್ಯೆಗಳನ್ನು ವಿಧಾನ ಸಭೆಯಲ್ಲಿ ಪ್ರಸ್ತಾಪ ಮಾಡುವ ಮೂಲಕ ಅನೇಕ ಸಮಸ್ಯೆಗಳಿಗೆ ನ್ಯಾಯ ಕೊಡಿಸಿದ್ದಾರೆ.ಬಂಗಾರಪ್ಪ ಗರಡಿಯಲ್ಲಿ ಬೆಳೆದ ಹಾಲಪ್ಪ ಅವರು ಅಪ್ಪಟ ಗ್ರಾಮೀಣ ಶೈಲಿಯ ನಾಯಕರು. ಎಲ್ಲರ ಕಷ್ಟ ಸುಖದಲ್ಲಿ ಜೊತೆಯಾಗಿರುವ ಹಾಲಪ್ಪ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.
5 ಕ್ಷೇತ್ರಗಳ ಚುನಾವಣೆಗೆ ಪ್ರಚಾರ ಸಮಿತಿ ಸಂಯೋಜಕರ ನೇಮಕಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ಸಲ ಯಾರದು ಮೇಲುಗೈ? NAMMUR EXPRESS NEWSಚಿಕ್ಕಮಗಳೂರು: ರಾಜ್ಯದ ವಿಧಾನ ಸಭಾ ಚುನಾವಣೆ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯ 5 ವಿಧಾನಸಭಾ ಕ್ಷೇತ್ರದ ಪ್ರಚಾರ ಸಮಿತಿಗೆ ವಿಧಾನ ಸಭಾ ಕ್ಷೇತ್ರವಾರು ಸಂಯೋಜಕರನ್ನಾಗಿ ನೇಮಿಸಲಾಗಿದೆ.2023ರ ವಿಧಾನಸಭೆ ಚುನಾವಣೆಗೆ ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿಯ ಸಂಯೋಜಕರಾಗಿ ಶೃಂಗೇರಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳು ಹಾಗು ಬೆಟ್ಟಗೆರೆ ಕೃಷಿಪತ್ತಿನ ಸಹಕಾರ ಸಂಘ ನಿಯಮಿತ ತೆಕ್ಕೂರು ಕೆ ಎಂ ರಮೇಶ್ ಭಟ್ ಆಯ್ಕೆಯಾಗಿದ್ದಾರೆ. ಚಿಕ್ಕಮಗಳೂರು ಕ್ಷೇತ್ರದ ಪ್ರಚಾರ ಸಮಿತಿಯ ಸಂಯೋಜಕರಾಗಿ ಕೆ. ಆರ್ ಯೋಗಿಶ್, ಕಡೂರು ಕ್ಷೇತ್ರದ ಪ್ರಚಾರ ಸಮಿತಿಯ ಸಂಯೋಜಕರಾಗಿ ಎಂ.ಕೆ. ಮಹೇಶ್ವರಪ್ಪ, ಮೂಡಿಗೆರೆ ಕ್ಷೇತ್ರದ ಪ್ರಚಾರ ಸಮಿತಿಯ ಸಂಯೋಜಕರಾಗಿ ಡಿ.ಕೆ.ಕೇಶವ ಆಯ್ಕೆಯಾಗಿದ್ದಾರೆ.ಶೃಂಗೇರಿ ಕ್ಷೇತ್ರ ಹೊರತುಪಡಿಸಿ ಮಿಕ್ಕ 4 ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ. 2023ರ ಚುನಾವಣೆ ಮೇಲೆ ಎಲ್ಲರ ಗಮನ ಇದೆ. ಓವೈಸಿ ಪಕ್ಷದ ಮೊದಲ ಅಭ್ಯರ್ಥಿಗಳ ಪಟ್ಟಿ ಬಂತು!…
ಕರ್ನಾಟಕದ ಎಲ್ಲಾ ಚಿತ್ರಮಂದಿರಗಳಲ್ಲಿ ಉತ್ತಮ ಪ್ರತಿಕ್ರಿಯೆ: 25 ದಿನ ಪೂರೈಸಿದೆ ಸಿನಿಮಾಸಿನಿಮಾ ಹೇಳಿದ ಕಥೆ ಎಲ್ಲರಿಗೂ ಇಷ್ಟವಾಯ್ತುಮಲೆನಾಡ ಚಿತ್ರೀಕರಣ, ಮಲೆನಾಡ ಕಲಾವಿದರ ಸಿನಿಮಾ NAMMUR EXPRESS NEWSಬದುಕನ್ನು ಬಂದಹಾಗೆ ಸ್ವೀಕರಿಸಿ. ಹೊಂದಾಣಿಕೆಯಿಂದ ಬಾಳಿ, ಬೆಳಕು ಇರುವಲ್ಲಿ ಕತ್ತಲಿಗೆ ಜಾಗವಿಲ್ಲ ಹೀಗೆ ಬದುಕು, ಸಂಬಂಧಗಳ ಮೌಲ್ಯಗಳನ್ನು ಹೇಳಲು ಹೊರಟ ಸಿನಿಮಾ ‘ಹೊಂದಿಸಿ ಬರೆಯಿರಿ’.ಮಲೆನಾಡ ನಟ ಪ್ರವೀಣ್ ತೇಜ್, ಸಂಯುಕ್ತ ಹೊರನಾಡು, ಐಶಾನಿ ಶೆಟ್ಟಿ,ಭಾವನಾ, ಶ್ರೀ ಮಹದೇವ್, ಅರ್ಚನಾ, ನವೀನ್ ಸೇರಿದಂತೆ ಅನೇಕರ ನಟನೆಯ ಈ ಸಿನಿಮಾ ಈಗಾಗಲೇ 25 ದಿನ ಪೂರೈಸಿದೆ.ರಾಮೇನಹಳ್ಳಿ ಜಗನ್ನಾಥ ಬರೆದು ನಿರ್ದೇಶನ ಮಾಡಿರುವ ಈ ಸಿನಿಮಾ ಈಗ ಜನರ ಮೆಚ್ಚುಗೆ ಪಡೆಯುತ್ತಿದೆ.ಕಾಲೇಜು ಹುಡುಗರ ತುಂಟತನ, ಹೀರೊ ಬಿಲ್ಡಪ್‌ಗೆ ಹೊಡೆದಾಟ, ಸೀನಿಯರ್- ಜ್ಯೂನಿಯರ್ ತರಲೆ, ಒಂದೆರಡು ಕ್ಷಣ ನಗು ಮೂಡಿಸಿ ಮಾಯವಾಗುವ ಸನ್ನಿವೇಶ, ಎಂಜಿನಿಯರಿಂಗ್ ಕಾಲೇಜು ಹುಡುಗ-ಹುಡುಗಿಯರ ಎಂಟನೇ ತರಗತಿ ಮಟ್ಟದ ಪ್ರೇಮಕಥೆ, ಪ್ರೇಯಸಿಗೆ ಮುತ್ತಿಟ್ಟವನನ್ನು ಎಳೆದೊಯ್ಯುವ ಪೊಲೀಸ್‌ಗಿರಿ! ಇದನ್ನೆಲ್ಲ ಹೊಂದಿಸಿ ತೆಗೆದ ಸಿನಿಮಾ ಇದು.ಮಲೆನಾಡಿನ ಕುಪ್ಪಳಿಯ ಕವಿಶೈಲ, ಸಮುದ್ರ…
ಬೆಂಕಿ ಅವಘಡ, ವಾಹನ ಸ್ಫೋಟ ಹೆಚ್ಚಳಒಲೆ, ವಿದ್ಯುತ್, ಸಿಲಿಂಡರ್ ಬಗ್ಗೆ ಹುಷಾರ್ನಿಮ್ಮ ಎಲ್ಲಾ ಸ್ನೇಹಿತರಿಗೆ ಶೇರ್ ಮಾಡಿರಿ..! NAMMUR EXPRESS NEWSರಾಜ್ಯದಲ್ಲಿ ಬಿಸಿಲ ಧಗೆ ಹೆಚ್ಚಳವಾಗಿದ್ದು ಎಲ್ಲೆಡೆ ಸ್ಫೋಟಗಳು ಸಂಭವಿಸುತ್ತಿವೆ. ಇನ್ನು ಬಿಸಿಲು ಧಗೆ ಕಾರಣ ಬೆಂಕಿ ಅವಘಢಗಳೂ ಹೆಚ್ಚಾಗಿವೆ. ಈ ಹಿನ್ನೆಲೆನಿಮ್ಮ ವಾಹನ, ನಿಮ್ಮ ಮನೆ, ಕಚೇರಿ, ಸುತ್ತಮುತ್ತ ಬೆಂಕಿ ಹಾಗೂ ಸ್ಪೋಟಕ ವಸ್ತುಗಳಿಂದ ಜಾಗೃತರಾಗಿರಿ.ಅರಣ್ಯದ ಬಳಿ ಧೂಮಪಾನ, ಪಾರ್ಟಿ ಮಾಡಿ ಬೆಂಕಿ, ಬೆಂಕಿ ಕಡ್ಡಿ ಎಸೆಯಬೇಡಿ. ಅರಣ್ಯದಲ್ಲಿ ಕಿಚ್ಚು ಹಬ್ಬಬಹುದು. ಈಗಾಗಲೇ ತಿಂಗಳಲ್ಲಿ ಇಬ್ಬರು ಅರಣ್ಯ ಸಿಬ್ಬಂದಿ ಕಾಡಿನ ಕಿಚ್ಚು ಆರಿಸಲು ಬಲಿಯಾಗಿದ್ದಾರೆ.ಇನ್ನು ಮನೆಯಲ್ಲಿ ಒಲೆ, ಗ್ಯಾಸ್ ಸಿಲಿಂಡರ್ ಬಗ್ಗೆ ಎಚ್ಚರ ಇರಲಿ. ವಿದ್ಯುತ್ ಸಂಪರ್ಕಗಳನ್ನು ಪರೀಕ್ಷಿಸಿಕೊಳ್ಳಿ. ಒಂದು ಸಣ್ಣ ನಿರ್ಲಕ್ಷ್ಯ ದುರಂತಕ್ಕೆ ಕಾರಣವಾದೀತು.. ಎಚ್ಚರ..! ವಾಹನದಲ್ಲಿ ಸಂಚರಿಸುವವರೇ ಎಚ್ಚರಿಕೆ! ಮುಂಬರುವ ದಿನಗಳಲ್ಲಿ ತಾಪಮಾನವು ಹೆಚ್ಚಾಗಲಿದೆ, ಆದ್ದರಿಂದ ನಿಮ್ಮ ವಾಹನದಲ್ಲಿ ಗರಿಷ್ಠ ಮಿತಿಗೆ ಪೆಟ್ರೋಲ್ ತುಂಬ ಬೇಡಿ. ಗರಿಷ್ಠ ಮಿತಿ ಪೆಟ್ರೋಲ್/ ಡೀಸೆಲ್ ಟ್ಯಾಂಕಲ್ಲಿ ಸ್ಪೋಟಕ ಕಾರಣವಾಗಬಹುದು. ದಯವಿಟ್ಟು…
ಬದುಕು ಬಲು ಭಾರ: ಹೆಚ್ಚಿತು ಆತ್ಮಹತ್ಯೆ!ಬೆಲೆ ಏರಿಕೆ, ರಾಜಕೀಯ ಸಂಘರ್ಷ, ಉದ್ಯಮ ಸೋಲುಅವಕಾಶ ಇಲ್ಲ… ಉದ್ಯೋಗ ಇಲ್ಲ.. ಹೇಳೋಕೆ ಆಗಲ್ಲರಾಜ್ಯದಲ್ಲಿ ಹೆಚ್ಚಿದ ಆತ್ಮಹತ್ಯೆ: ಜನ ನಾಯಕರಿಗೆ ಬೇರೆಯವರ ಬದುಕಿನ ಕಾಳಜಿ ಇಲ್ಲ! NAMMUR EXPRESS NEWSಬೆಂಗಳೂರು: ಚುನಾವಣೆ ಬಂದಿದೆ. ಎಲ್ಲಾ ಪಕ್ಷಗಳೂ ಜನರ ಮನ ಗೆಲ್ಲಲು ತಮ್ಮ ಬಗೆಹರಿಯದ ನೂರಾರು ಭರವಸೆಗಳ ಪಾಪ್ಲೇಂಟ್ ಹಿಡಿದು ಊರು ತುಂಬಾ ಫ್ಲೆಕ್ಸ್ ಹಾಕಿ ಮತದಾರನ ಮನ ಗೆಲ್ಲಲು ಮುಂದಾಗಿವೆ.ಆದರೆ ದಿನೇ ದಿನೇ ಬಡ, ಮಧ್ಯಮ ವರ್ಗದವರ ಬದುಕು ಕುಸಿಯುತ್ತಿದೆ. ಕನಸುಗಳು ಕಮರುತ್ತಿವೆ.ಅಗತ್ಯ ವಸ್ತು ಬೆಲೆ ಏರಿಕೆ, ಹಣದ ಮಹತ್ವ ಹೆಚ್ಚಳ, ರಾಜಕೀಯ ಸಂಘರ್ಷ, ಉದ್ಯಮ ಸೋಲು ಹೀಗೆ ಸಾಲು ಸಾಲು ಸಾಮಾಜಿಕ ಸಮಸ್ಯೆಗಳು ಮನಸ್ಸನ್ನು ಹತಾಶೆಗೊಳಿಸುತ್ತಿದೆ. ಹೀಗಾಗಿ ಪ್ರತಿ ದಿನ ರಾಜ್ಯ, ದೇಶದಲ್ಲಿ ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ. ಒಂದು ಕಡೆ ಓದು, ಅರ್ಹತೆಗೆ ತಕ್ಕ ಅವಕಾಶ ಇಲ್ಲ…ಉದ್ಯೋಗ ಇಲ್ಲ.. ಪ್ರಸ್ತುತ ವ್ಯವಸ್ಥೆಯೊಳಗೆ ಹೇಳೋಕೆ ಆಗಲ್ಲ. ಎಲ್ಲವೂ ರಾಜಕೀಯ, ಪಕ್ಷದ ಮಾನದಂಡದಲ್ಲಿ ಅಳೆಯಲಾಗುತ್ತಿದೆ. ಹೀಗಾಗಿ ಯುವ ಸಮುದಾಯ…
ರೈತರಿಗೆ ಶೂನ್ಯ ಬಡ್ಡಿದರದಲ್ಲಿ 5 ಲಕ್ಷದವರೆಗೆ ಸಾಲ!ಏಪ್ರಿಲ್ 1ಕ್ಕೆ ಯೋಜನೆ ಜಾರಿ: ಸಹಕಾರ ಸಚಿವ ಸೋಮಶೇಖರ್ಏನೇನು ದಾಖಲೆ ಬೇಕು? ಎಲ್ಲಿ ಸಿಗುತ್ತೆ ಸಾಲ?ಇಲ್ಲಿದೆ ಸಂಪೂರ್ಣ ಮಾಹಿತಿ NAMMUR EXPRESS NEWSಬೆಂಗಳೂರು: ಸಂಕಷ್ಟದಲ್ಲಿರುವ ರೈತರಿಗೆ ರಾಜ್ಯ ಸರ್ಕಾರ ನೂತನ ಯೋಜನೆ ಘೋಷಿಸಿದ್ದು ಏಪ್ರಿಲ್ 1ರಿಂದ ರೈತರಿಗೆ ಶೂನ್ಯ ಬಡ್ಡಿದರದಲ್ಲಿ 5 ಲಕ್ಷದ ವರೆಗೆ ಸಾಲ ನೀಡುವ ಯೋಜನೆ ಆರಂಭವಾಗಲಿದೆ.ಸಹಕಾರ ಸಚಿವ ಎಸ್ ಟಿ ಸೋಮಶೇಖರ್ವಿಧಾನಸೌಧದಲ್ಲಿ ಮಾತನಾಡಿ, 5 ಲಕ್ಷದ ವರೆಗೆ ಶೂನ್ಯ ಬಡ್ಡಿದರದ ಬೆಳೆ ಸಾಲ ನೀಡುವ ಯೋಜನೆಯನ್ನು ಬಜೆಟ್ ನಲ್ಲಿ ಘೋಷಿಸಲಾಗಿದೆ. ಸದ್ಯ ರಾಜ್ಯಪಾಲರ ಅನುಮತಿ ದೊರೆಯಲಿದ್ದು,ಏಪ್ರಿಲ್ 1ರಿಂದ ಅನ್ವಯವಾಗುವಂತೆ ಯೋಜನೆ ಜಾರಿ ಆಗಲಿದೆ.ಈಗಾಗಲೇ ರೈತರಿಗೆ ಡಿಸಿಸಿ ಬ್ಯಾಂಕಿನಿಂದ ಶೂನ್ಯ ಬಡ್ಡಿದರದಲ್ಲಿ 3 ಲಕ್ಷ ರೂಪಾಯಿವರೆಗೆ ಸಾಲ ನೀಡುತ್ತಿದ್ದು, ಈ ಮಿತಿಯನ್ನು 2023-2024 ನೇ ಸಾಲಿನ ಬಜೆಟ್ ನಲ್ಲಿ 5 ಲಕ್ಷ ರೂಪಾಯಿ ಹೆಚ್ಚಿಸಲಾಗಿದೆ ಎಂದರು.ರಾಜ್ಯದ ರೈತರಿಗೆ ಸರ್ಕಾರವು ಶೇಕಡ 3ರಷ್ಟು ಬಡ್ಡಿದರದಲ್ಲಿ ಸಹಕಾರ ಸಂಸ್ಥೆಗಳ ಮೂಲಕ ಅಲ್ಪಾವಧಿ,ಮಧ್ಯಮಾವಧಿ ಮತ್ತು ದೀರ್ಘವಾದಿ…
ದೇಶದಲ್ಲಿ H3N2 ವೈರಸ್ ಸೋಂಕು ಹೆಚ್ಚಳ ಹಿನ್ನೆಲೆರಾಜ್ಯದಲ್ಲೂ ಹೈ ಅಲರ್ಟ್ : ಸರ್ಕಾರದ ಹೊಸ ನಿಯಮ ಏನು? NAMMUR EXPRESS NEWSಬೆಂಗಳೂರು: ದೇಶದಲ್ಲಿ H3N2 ವೈರಸ್ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಹಿರಿಯ ಅಧಿಕಾರಿಗಳು ಹಾಗೂ ತಜ್ಞರೊಂದಿಗಿನ ಸಭೆ ನಡೆಸಲಾಯಿತು.ರಾಜ್ಯದಲ್ಲಿ H3N2 ವೈರಸ್ ಸೋಂಕು ಹರಡುವಿಕೆ ತಡೆಗಟ್ಟಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಲಾಗಿದ್ದು ಶೀಘ್ರದಲ್ಲೇ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು.ಇಂದಿನಿಂದ ಆಸ್ಪತ್ರೆಗಳ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರಿಗೆ ಮಾಸ್ಕ್ ಕಡ್ಡಾಯಗೊಳಿಸಲಾಗಿದ್ದು, H3N2 ಸೋಂಕು ಹರಡುವಿಕೆಯ ಬಗ್ಗೆ ನಿಗಾ ವಹಿಸಲಾಗಿದೆ.ಮಕ್ಕಳು, ಹಿರಿಯ ನಾಗರಿಕರು ಹಾಗೂ ಗರ್ಭಿಣಿಯರು H3N2 ವೈರಸ್ ಸೋಂಕಿನಿಂದ ರಕ್ಷಿಸಿಕೊಳ್ಳಲು ಜನಸಂದಣಿಯಿಂದ ದೂರವಿರಬೇಕು ಹಾಗೂ ನೈರ್ಮಲ್ಯ ಕಾಪಾಡಿಕೊಳ್ಳಬೇಕಾಗಿ ಅರೋಗ್ಯ ಸಚಿವ ಸುಧಾಕರ್ ತಿಳಿಸಿದ್ದಾರೆ. ಆರೋಗ್ಯ ಸಚಿವ ಕೆ. ಸುಧಾಕರ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, H3N2 ನಿಂದ ದೇಶದಲ್ಲಿ ಸೋಂಕು ಹೆಚ್ಚಳವಾಗಿದೆ. ಅನೇಕರು ಗಾಬರಿಯಾಗಿದ್ದಾರೆ. ಹೀಗಾಗಿ ಉನ್ನತ ಮಟ್ಟದ ತಾಂತ್ರಿಕ ಸಲಹಾ ಸಮಿತಿ ಜೊತೆ ಸಭೆ ಮಾಡಿದೆವು. ಗಾಬರಿಯಾಗುವ ಪರಿಸ್ಥಿತಿ ನಿರ್ಮಾಣವಾಗಿಲ್ಲ.…
ಹೆಲಿಕಾಪ್ಟರ್ ಅಪಾಯದಿಂದ ಪಾರಾದ ಯಡಿಯೂರಪ್ಪ!ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಲೋಪ: ಹೆಲಿಪ್ಯಾಡ್ ಕಡೆ ಹಾರಿಬಂದ ಪ್ಲಾಸ್ಟಿಕ್ ಚೀಲಗಳುಕಲಬುರಗಿ ಜಿಲ್ಲೆ ಜೇವರ್ಗಿಯಲ್ಲಿ ನಡೆದ ಘಟನೆ NAMMUR EXPRESS NEWSಕಲಬುರಗಿ: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಇದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಲೋಪವಾಗಿದೆ.ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಪ್ಲಾಸ್ಟಿಕ್ ಚೀಲಗಳು ಹಾರಿಬಂದಿವೆ. ಇದರಿಂದ ಅಪಾಯ ಆಗುವ ಸಾಧ್ಯತೆಗಳಿದ್ದು ಫೈಲಟ್ ಗಮನಿಸಿದ್ದರಿಂದ ಅನಾಹುತ ತಪ್ಪಿದೆ.ಜೇವರ್ಗಿ ಪಟ್ಟಣ ಹೊರವಲಯದಲ್ಲಿ ಹೆಲಿಪಾಡ್ ನಿರ್ಮಿಸಲಾಗಿದೆ. ಹೆಲಿಪ್ಯಾಡ್ ಸುತ್ತು ಜಮೀನಿನಲ್ಲಿ ಪ್ಲಾಸ್ಟಿಕ್ ಚೀಲಗಳನ್ನು ಹಾಕಲಾಗಿದೆ. ಲ್ಯಾಂಡಿಂಗ್ ವೇಳೆ ಹೆಲಿಕಾಪ್ಟರ್ ಮೇಲೆ ಪ್ಲಾಸ್ಟಿಕ್ ಚೀಲಗಳು ಹಾರಿ ಬಂದಿದೆ. ಪೈಲೆಟ್ ತಕ್ಷಣ ಎಚ್ಚೆತ್ತುಕೊಂಡು ಹೋಗಿದ್ದಾರೆ. ಉತ್ಪನ್ನ ಪ್ಲಾಸ್ಟಿಕ್ ಚೀಲಗಳನ್ನು ತೆರವು ಮಾಡಿದ ನಂತರ ಲ್ಯಾಂಡಿಂಗ್ ಮಾಡಲಾಗಿದೆ. ಪೈಲೆಟ್ ಸುತ್ತು ಹಾರಾಟ ನಡೆಸಿ ಲ್ಯಾಂಡ್ ಮಾಡಿದ್ದಾರೆ. ಅಧಿಕಾರಿಗಳು ಪ್ಲಾಸ್ಟಿಕ್ ಚೀಲದಿಂದ ಕಕ್ಕಾಬಿಕ್ಕಿಯಾಗಿದ್ದರು.
ರಾಜ್ಯ ಚುನಾವಣೆ ಅಖಾಡಕ್ಕೆ ಕೆ. ಆರ್. ಎಸ್ ಪಕ್ಷ!ಪ್ರತಿ ವಿಧಾನ ಸಭೆಯಲ್ಲೂ ಸ್ಪರ್ಧೆ ಮಾಡಲು ಸಿದ್ಧತೆರವಿಕೃಷ್ಣಾ ರೆಡ್ಡಿ ನೇತೃತ್ವದಲ್ಲಿ ರಾಜ್ಯದಲ್ಲಿ ಹೋರಾಟ NAMMUR EXPRESS NEWSಬೆಂಗಳೂರು: ರಾಜ್ಯ ವಿಧಾನ ಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಎಲ್ಲಾ ಕ್ಷೇತ್ರದಲ್ಲೂ ಪಕ್ಷಗಳ ಬಲಾಬಲ ಶುರುವಾಗಿದೆ. ಈ ನಡುವೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಆಮ್ ಆದ್ಮಿ ಪಕ್ಷಗಳ ಎಲ್ಲಾ ಸರ್ಕಸ್ ಶುರುವಾಗಿದೆ. ಈ ನಡುವೆ ರಾಜ್ಯದಲ್ಲಿ ಗಮನ ಸೆಳೆಯುತ್ತಿರುವ ಪಕ್ಷ ಕೆ ಆರ್ ಎಸ್( ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ).ಹೋರಾಟಗಾರ ರವಿಕೃಷ್ಣ ರೆಡ್ಡಿ ನೇತೃತ್ವದಲ್ಲಿ ರಾಜ್ಯದಲ್ಲಿ ಹೊಸ ಅಲೆ ಸೃಷ್ಟಿ ಮಾಡಿರುವ ಕೆ. ಆರ್. ಎಸ್ ಪಕ್ಷ ತಮ್ಮ ಹೋರಾಟದ ಮೂಲಕವೇ ಜನರ ಮನ ಗೆದ್ದಿದೆ. ಅದರಲ್ಲೂ ಸರ್ಕಾರಿ ಕಚೇರಿ, ತಾಲೂಕು ಕಚೇರಿ, ಪೊಲೀಸ್ ಠಾಣೆಗಳಲ್ಲಿ ನಡೆಯುತ್ತಿರುವ ಬಡವರ ಶೋಷಣೆ, ಭ್ರಷ್ಟಾಚಾರ, ನಿರ್ಲಕ್ಷ್ಯದ ವಿರುದ್ಧ ದೊಡ್ಡ ಹೋರಾಟ ಮಾಡಿ ಈ ಪಕ್ಷದ ಅನೇಕರು ಜೈಲು ಸೇರಿದರೂ ಹೋರಾಟ ಕೈ ಬಿಡಲಿಲ್ಲ. ಈ ಕಾರಣ ರಾಜ್ಯದಲ್ಲಿ ಈ…