Author: Nammur Express Admin

ಈಗ ತಿಂಗಳಿಗೆ ಎರಡು ವಾರ 5 ದಿನ ಕೆಲಸಆರ್.ಬಿ. ಐ ಮುಂದೆ ಬ್ಯಾಂಕ್ ಯೂನಿಯನ್ ಪ್ರಸ್ತಾಪ NAMMUR EXPRESS NEWSದೇಶದ ಬ್ಯಾಂಕಿಂಗ್ ವಲಯದ ಕೆಲಸದ ಅವಧಿಯಲ್ಲಿ ಬಹುದೊಡ್ಡ ಬದಲಾವಣೆ ಆಗಲಿದ್ದು, ವಾರಕ್ಕೆ ಐದೇ ದಿನ ಕೆಲಸದ ವ್ಯವಸ್ಥೆ ಜಾರಿಯಾಗಲಿದೆ. ಹಾಗೆ ಆದ್ರೆ ಜನ ಮತ್ತಷ್ಟು ಸಂಕಟಕ್ಕೆ ಒಳಗಾಗಲಿದ್ದಾರೆ.ಈಗಾಗಲೇ ಭಾರತೀಯ ಬ್ಯಾಂಕ್ ಅಸೋಸಿಯೇಶನ್ ಮತ್ತು ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಎಂಪ್ಲಾಯೀಸ್ ನಡುವೆ ಮಾತುಕತೆ ಆರಂಭವಾಗಿದೆ. ಮೂಲಗಳು ಹೇಳಿರುವಂತೆ ಬ್ಯಾಂಕ್ ಅಸೋಸಿಯೇಶನ್, ವಾರದಲ್ಲಿ ಐದು ದಿನಗಳ ಕೆಲಸಕ್ಕೆ ತಾತ್ವಿಕ ಒಪ್ಪಿಗೆಯನ್ನೂ ನೀಡಿದೆ.ಸದ್ಯ ತಿಂಗಳಲ್ಲಿ ಎರಡು ವಾರ ಮಾತ್ರ ಬ್ಯಾಂಕ್ ಉದ್ಯೋಗಿಗಳಿಗೆ ಐದು ದಿನದ ಕೆಲಸವಿದೆ. ಅಂದರೆ ಪರ್ಯಾಯ ವಾರದಲ್ಲಿ ಈ ರೀತಿ ಬರುತ್ತದೆ. ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರ ಉದ್ಯೋಗಿಗಳಿಗೆ ರಜೆ ಇರಲಿದೆ. ಈಗ ಇದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ತಿಂಗಳ ಎಲ್ಲ ಶನಿವಾರಗಳಲ್ಲಿಯೂ ರಜೆ ನೀಡಲು ಮುಂದಾಗಿದೆ. ಈ ನಿರ್ಧಾರ ಖಚಿತವಾದ ಬಳಿಕ ಮೊದಲಿಗೆ ಕೇಂದ್ರ ವಿತ್ತ ಸಚಿವಾಲಯಕ್ಕೆ…

Read More

ಈಗಾಗಲೇ ಅಭ್ಯರ್ಥಿಗಳ ಪಟ್ಟಿ ಅಂತಿಮಮಾ.7ರಂದು ಪಟ್ಟಿ ಬಿಡುಗಡೆಗೆ ಸಿದ್ಧತೆ NAMMUR EXPRESS NEWSಹಾಸನ: ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಎಲ್ಲಾ ಪಕ್ಷದಲ್ಲೂ ರಾಜಕೀಯ ಬಿರುಸಿನ ಹಂತ ತಲುಪಿದೆ. ಈ ನಡುವೆ ಮುಂದಿನ ವಾರ ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ ಆಗುವ ಸಾಧ್ಯತೆಗಳಿವೆ.ಅದರಂತೆ ಕಾಂಗ್ರೆಸ್ ಪಕ್ಷದ ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ. ಅಭ್ಯರ್ಥಿಗಳ ಆಯ್ಕೆಗೆ ಈಗಾಗಲೇ ಆಕಾಂಕ್ಷಿಗಳಿಂದ ಅರ್ಜಿ ಸ್ವೀಕರಿಸಿರುವ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನ ಮಾರ್ಚ್ 7 ರಂದು ಬಿಡುಗಡೆ ಮಾಡಲಿದೆ.ಈಗಾಗಲೇ ಜೆಡಿಎಸ್ ಪಕ್ಷದಿಂದ ಮುಂಬರುವಂತ ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲ ಕ್ಷೇತ್ರಗಳಿಗೆ ಅಭ್ಯರ್ಧಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಕಾಂಗ್ರೆಸ್ ಪಕ್ಷದಿಂದ ಮಾರ್ಚ್ 7ರಂದು ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಪಕ್ಷದ ಟಿಕೆಟ್ ಗಾಗಿ ಸಲ್ಲಿಸಲಾಗಿದ್ದ ಆಕಾಂಕ್ಷಿಗಳ ಅರ್ಜಿಗಳನ್ನು ಪರಿಶೀಲಿಸಿ, ಸಮಾಲೋಚನೆ ನಡೆಸಲಾಗಿದೆ. ಇದಲ್ಲದೇ ವೀಕ್ಷಕರು ಎಲ್ಲಾ ಜಿಲ್ಲೆಗಳಲ್ಲಿ ಸಂಚರಿಸಿ, ಕಾರ್ಯಕರ್ತರ ಅಭಿಪ್ರಾಯವನ್ನು ಸಂಗ್ರಹಿಸಿ, ಕೆಪಿಸಿಸಿಗೆ ವರದಿ ನೀಡಲಿದ್ದಾರೆಕಾಂಗ್ರೆಸ್ ಪಕ್ಷವು ವೀಕ್ಷಕರು ನೀಡುವ ವರದಿಯ ಆಧಾರದ ಮೇಲೆ…

Read More

ಡಾ.ಸಿ.ಎನ್. ಅಶ್ವಥನಾರಾಯಣ ಅವರಿಗೆ ಧನ್ಯವಾದಗಳು ರಾಜ್ಯ ಒಕ್ಕಲಿಗರ ಸಂಘಕ್ಕೆ ಖಾಸಗಿ ವಿಶ್ವವಿದ್ಯಾಲಯ ಮಂಜೂರು ಮಾಡಲು ಅವಿರತ ಶ್ರಮವಹಿಸಿ ಸಹಕಾರ ನೀಡಿದ ಸಮುದಾಯದ ಸೇವೆಗೆ ಕಂಕಣಬದ್ದರಾದ ಉನ್ನತ ಶಿಕ್ಷಣ, ಐಟಿಬಿಟಿ, ವಿಜ್ಞಾನ ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಸಚಿವರಾದ ಡಾ.ಸಿ.ಎನ್. ಅಶ್ವಥನಾರಾಯಣ ಅವರಿಗೆ ಸಮಸ್ತ ಒಕ್ಕಲಿಗರ ಪರವಾಗಿ ಅನಂತ ಅನಂತ ಅಭಿನಂದನೆಗಳು ಹಾಗೂ ವಿವಿ ಸ್ಥಾಪನೆಗೆ ಕಾರಣವಾಗಿರುವ ರಾಜ್ಯ ಸರ್ಕಾರಕ್ಕೆ ಅಭಿನಂದನೆಗಳು. ತೀರ್ಥಹಳ್ಳಿ ಒಕ್ಕಲಿಗ ವಿದ್ಯಾರ್ಥಿ ನಿಲಯಕ್ಕೆ 25 ಲಕ್ಷ ದೇಣಿಗೆ ಪ್ರಕಟಿಸಿದ ಸಚಿವ ಅಶ್ವಥನಾರಾಯಣ ಅವರಿಗೆ ಧನ್ಯವಾದಗಳು. ಅಭಿನಂದನೆ ಸಲ್ಲಿಸುವವರು ಸಿರಿಬೈಲ್ ಧರ್ಮೇಶ್ಸಂಚಾಲಕರು, ರಾಜ್ಯ ಒಕ್ಕಲಿಗ ವಿಶ್ವವಿದ್ಯಾನಿಲಯನಿರ್ದೇಶಕರು, ರಾಜ್ಯ ಒಕ್ಕಲಿಗರ ಸಂಘಬೆಂಗಳೂರು

Read More

ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಅವಕಾಶ ಕಲ್ಪಿಸಿ ಶಿಕ್ಷಣ ಇಲಾಖೆ ಆದೇಶ NAMMUR EXPRESS NEWSಬೆಂಗಳೂರು : ರಾಜ್ಯದ ಯಾವುದೇ ಸಾರ್ವಜನಿಕ ವಿಶ್ವವಿದ್ಯಾಲಯ ಹಾಗೂ ಅವುಗಳ ಸಂಯೋಜಿತ ಕಾಲೇಜುಗಳಲ್ಲಿ ಪದವಿ, ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳು ಇನ್ನು ಮುಂದೆ ವ್ಯಾಸಂಗದ ನಡುವೆ ರಾಜ್ಯದ ಯಾವುದೇ ಕಾಲೇಜುಗಳಿಗೆ ವರ್ಗಾವಣೆ ಪಡೆದು ಓದು ಮುಂದುವರೆಸಲು ನೂತನ ರಾಷ್ಟ್ರೀಯ ಶಿಕ್ಷಣ ನೀತಿ 2020 ರಡಿ ಅವಕಾಶ ನೀಡಿ ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಜೊತೆಗೆ ವರ್ಗ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸಲಾಗಿದೆ. ಆ ಪ್ರಕಾರವಾಗಿ ವಿದ್ಯಾರ್ಥಿಯು ಹಾಲಿ ವಿಶ್ವವಿದ್ಯಾಲಯದ ಒಂದು ಸಂಯೋಜಿತ ಕಾಲೇಜಿನಿಂದ ಅದೇ ವಿಶ್ವವಿದ್ಯಾಲಯದಡಿಯ ಇನ್ನೊಂದು ಸಂಯೋಜಿತ ಕಾಲೇಜಿಗೆ ಅಥವಾ ರಾಜ್ಯದ ಬೇರೆ ಯಾವುದೇ ವಿವಿಯ ಸಂಯೋಜಿತ ಕಾಲೇಜಿಗೆ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿಯೇ ಬೆಸ ಸಂಖ್ಯೆಯ ಸೆಮಿಸ್ಟರ್ ಗಳಿಗೆ ಮಾತ್ರ ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ನಿರ್ವಹಣಾ ವ್ಯವಸ್ಥೆಯ ತಂತ್ರಾಂಶ ಬಳಸಿ ಕಾಲೇಜುಗಳು ವರ್ಗಾವಣೆಗೆ ಅವಕಾಶ ಕಲ್ಪಿಸಬೇಕು. ಹಿಂದಿನ ಸೆಮಿಸ್ಟರ್ ರಲ್ಲಿ ಪಾಸ್ ಆಗದೆ…

Read More

ದೇಶದಲ್ಲಿ ಸರಾಸರಿ 29.5 ಡಿಗ್ರಿ ತಾಪ ದಾಖಲುಬೇಸಿಗೆಯಲ್ಲಿ ಬಾರಿ ಬಿಸಿ ವಾತಾವರಣ ಸಂಭವ NAMMUR EXPRESS NEWSನವದೆಹಲಿ : ಈ ವರ್ಷ ಫೆಬ್ರವರಿಯಲ್ಲಿ ಸರಾಸರಿ ತಾಪಮಾನ 29.54 ಡಿಗ್ರಿ ಸೆಲ್ಸಿಯಸ್ ನಷ್ಟು ದಾಖಲಾಗಿದ್ದು, ಇದು ಕಳೆದ 146 ವರ್ಷಗಳಲ್ಲಿ ಫೆಬ್ರವರಿ ತಿಂಗಳಿನಲ್ಲಿ ದಾಖಲಾದ ಗರಿಷ್ಠ ತಾಪಮಾನ ಎನಿಸಿಕೊಂಡಿದೆ. ಹಾಗಾಗಿ ಈ ವರ್ಷ ಬೇಸಿಗೆ ಮತ್ತಷ್ಟು ಬಿಸಿಯಿಂದ ಕೂಡಿರಲಿದ್ದು, ಜನರ ಸಂಕಷ್ಟ ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. 1877ರ ಬಳಿಕ 2023ರ ಫೆಬ್ರವರಿಯಲ್ಲಿ ಅತಿ ಅಧಿಕ ಗರಿಷ್ಠ ತಾಪಮಾನ ದಾಖಲಾಗಿದೆ. ಇದೆ ವೇಳೆ 1901ರ ಬಳಿಕ ಫೆಬ್ರವರಿಯಲ್ಲಿ ದಾಖಲಾಗಿರುವ ಕನಿಷ್ಠ ತಾಪಮಾನ 5ನೇ ಅತಿ ಹೆಚ್ಚಿನ ಕನಿಷ್ಠ ತಾಪಮಾನ ಎನಿಸಿಕೊಂಡಿದೆ. ಫೆಬ್ರವರಿಯಲ್ಲಿ ಈ ಸ್ಥಿತಿ ಇರುವ ಕಾರಣ ಈ ವರ್ಷ ಮಾರ್ಚ್ ನಿಂದ ಮೇ ತಿಂಗಳ ಅವಧಿಯಲ್ಲಿ ಹಗಲು ಮತ್ತು ರಾತ್ರಿಯ ತಾಪಮಾನ ಸಾಮಾನ್ಯಕ್ಕಿಂತ ಅಧಿಕವಾಗಿರಲಿದೆ ಎಂದು ಹವಮಾನ ಇಲಾಖೆ ಅಂದಾಜಿಸಿದೆ. ದಕ್ಷಿಣ ಭಾರತವನ್ನು ಹೊರತುಪಡಿಸಿ ಭಾರತದ ಬಹುತೇಕ ಎಲ್ಲ…

Read More

ಬೆಂಗಳೂರಿನಲ್ಲಿ ಮಲೆನಾಡಿನ ಮನಸ್ಸುಗಳ ಸಮಾಗಮಶೃಂಗೇರಿ ಕ್ಷೇತ್ರ ಮೂಲದ ಬೆಂಗಳೂರಿಗರ ಸಮಾವೇಷಕ್ಕೆ ರಾಜೇಗೌಡರ ಆಹ್ವಾನ NAMMUR EXPRESS NEWSಬೆಂಗಳೂರಿನಲ್ಲಿ ವಾಸವಿರುವ ಎಲ್ಲಾ ಮಲೆನಾಡಿನ ಮನಸ್ಸುಗಳಿಗೆ ನನ್ನ ಸವಿ ನೆನಪುಗಳು, ನನ್ನ ಶೃಂಗೇರಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಾದ ಕೊಪ್ಪ ತಾಲ್ಲೂಕು, ಶೃಂಗೇರಿ ತಾಲ್ಲೂಕು, ನ ರಾ ಪುರ ತಾಲ್ಲೂಕು ಹಾಗೂ ಖಾಂಡ್ಯಾ ಹೋಬಳಿ ಮತ್ತು ಮಲೆನಾಡಿನ ಅಸಂಖ್ಯಾತ ಜನರು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ನೆಲೆ ನಿಂತು ಉದ್ಯೋಗ, ವ್ಯವಹಾರಗಳ ಮುಖೇನ ತಮ್ಮದೇ ಆದ ಛಾಪನ್ನು ಮೂಡಿಸಿ, ಹುಟ್ಟಿದ ಊರಿಗೆ ಗೌರವವನ್ನು ತಂದಿರುತ್ತೀರಿ. ನಿಮ್ಮೊಂದಿಗೆ ಪ್ರತೀ ವರ್ಷವೂ ಸಂವಾದ ನಡೆಸಿ ಬೆರೆತು ಮಾತನಾಡುವ ಉತ್ಸಾಹ ನನ್ನದು. ಹಾಗಾಗಿಯೇ ಬೆಂಗಳೂರಿನ ನನ್ನ ಆತ್ಮೀಯರ ಸಹಕಾರದೊಂದಿಗೆ “ಸ್ನೇಹ ಶೃಂಗ” ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದೇವೆ.ಈ ವರ್ಷದ ಸ್ನೇಹ ಶೃಂಗ ಕಾರ್ಯಕ್ರಮವು ದಿನಾಂಕ: 04-03-2023 ರ ಶನಿವಾರದಂದುಆನಂದ್‌ ರಾವ್ ಸರ್ಕಲ್ ಹತ್ತಿರದ ರೇಸ್ ಕೋರ್ಸ್ ರಸ್ತೆಯ ಕೆ.ಇ.ಬಿ ಸಭಾಭವನದಲ್ಲಿ ನೆರವೇರಲಿದೆ. ಈ ಕಾರ್ಯಕ್ರಮಕ್ಕೆ ಮಲೆನಾಡಿಗರಾದ ನೀವೆಲ್ಲರೂ ಹಾಗೂ ಮಲೆನಾಡಿನ ಎಲ್ಲಾ ಪ್ರಾತಿನಿಧಿಕ…

Read More

20 ಜನರಿಗೆ ಗಾಯ: ಜೀವ ಉಳಿಸಿದ ಚಾಲಕಸೊರಬದಲ್ಲಿ ಹೆಜ್ಜೇನು ಹೊಡೆದು ಗಂಡ ಹೆಂಡತಿಗೆ ಸ್ಥಿತಿ ಗಂಭೀರಹೊಸನಗರದ ಸೊನಲೆಯಲ್ಲಿ ಬಕೆಟ್ ನೀರಿಗೆ ಬಿದ್ದು ಮಗು ಸಾವು NAMMUR EXPRESS NEWSತೀರ್ಥಹಳ್ಳಿ: ಆಗುಂಬೆ ಘಾಟಿಯಲ್ಲಿ ಖಾಸಗಿ ಬಸ್‌ ಬ್ರೇಕ್ ಫೇಲ್ ಆಗಿ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಬುಧವಾರ ಸಂಜೆ ನಡೆದಿದ್ದು ಚಾಲಕನ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ.ಪ್ರವಾಸಿಗರನ್ನು ಕರೆದೊಯ್ಯುತಿದ್ದ ಖಾಸಗಿ ಬಸ್ ಆಗುಂಬೆ ಘಾಟಿಯ 12 ನೇ ತಿರುವಿನಲ್ಲಿ ಬ್ರೇಕ್ ವಿಫಲವಾಗಿಮರಕ್ಕೆ ಡಿಕ್ಕಿ ಹೊಡೆದಿದೆ.ಘಾಟಿ ರಸ್ತೆಯ 11ನೇ ತಿರುವಿನಲ್ಲಿ ಖಾಸಗಿ ಮಿನಿ ಬಸ್ ಬ್ರೇಕ್ ವೈಫಲ್ಯಗೊಂಡಿದ್ದು ಚಾಲಕನ ಸಮಯ ಪ್ರಜ್ಞೆಯಿಂದ ಸಂಭವನೀಯ ದೊಡ್ಡ ದುರಂತ ತಪ್ಪಿದೆ. 12ನೇ ತಿರುವಿನಲ್ಲಿ ಮರಕ್ಕೆ ಡಿಕ್ಕಿ ಹೊಡೆದು ಬಸ್ ನಿಂತಿದೆ.ಬಸ್ ನಲ್ಲಿ ಮಹಿಳೆಯರು ಮಕ್ಕಳು ಸೇರಿ 20 ಜನರಿದ್ದು ಹಲವರಿಗೆ ಗಾಯಗಳಾಗಿದ್ದು ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಹೆಬ್ರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ ನಲ್ಲಿದ್ದವರೆಲ್ಲಾ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟ ಪಡುಕೆರೆ…

Read More

ಕಾಲು ಊತದ ಕಾರಣ ಬೆಂಗಳೂರಲ್ಲಿ ಚಿಕಿತ್ಸೆಕುಮಾರಸ್ವಾಮಿ ಮಾಹಿತಿ: ಈಗ ಚೇತರಿಕೆ NAMMUR EXPRESS NEWSಬೆಂಗಳೂರು : ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೀಗ ಚೇತರಿಕೆಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.ಕಾಲು ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ 10:30ಕ್ಕೆ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರ ಪುತ್ರ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ. ದೇವೇಗೌಡರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗಿದ್ದಾರೆ. ಅವರು ಗುಣಮುಖರಾಗಿ ಬಂದ ಬಳಿಕ ಕೆಲವು ಕ್ಷೇತ್ರಗಳ ಚುನಾವಣೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಸಿದ್ಧತೆ ನಡೆದಿದೆ ಎನ್ನಲಾಗಿದೆ.

Read More

ಸರ್ಕಾರಿ ನೌಕರರ ವೇತನ ಹೆಚ್ಚಳ, ನಿಜವಾಗಿ ಕೆಲಸ ಮಾಡೋರಿಗೆ ಇಲ್ಲ?ಹಗಲು ರಾತ್ರಿ ದುಡಿದರೂ ಬದುಕು ಸಾಗಿಸೋದು ಕಷ್ಟ! NAMMUR EXPRESS NEWSಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರ ವೇತನ ಶೇ.17ರಷ್ಟು ಹೆಚ್ಚಳ ಮಾಡಲಾಗಿದೆ. ಆದ್ರೆ ನಿಜವಾಗಿಯೂ ಅತೀ ಹೆಚ್ಚು ಕೆಲಸ ಮಾಡುವ ದಿನಗೂಲಿ, ಹೊರ ಗುತ್ತಿಗೆ ನೌಕರರ ಗೋಳು ಕೇಳೋರಿಲ್ಲವಾಗಿದೆ.ಸರ್ಕಾರಿ ನೌಕರರಿಗೆ ಉತ್ತಮ ಸೌಲಭ್ಯ ಇದೆ. ಜೊತೆಗೆ ಅಧಿಕಾರಿಗಳು ಬಹಳಷ್ಟು ಸಂಬಳ ಪಡೆಯುತ್ತಾರೆ. ಆದರೆ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ದಿನಗೂಲಿ, ಹೊರ ಗುತ್ತಿಗೆ ನೌಕರರಿಗೆ ಇನ್ನು ಸಂಬಳ ಹೆಚ್ಚಿಲ್ಲ. ಜೊತೆಗೆ 3-4 ತಿಂಗಳು ಸಂಬಳವೇ ಸಿಗಲ್ಲ. ಆದರೆ ಸಂಘಗಳು ಗಟ್ಟಿಯಾಗಿಲ್ಲದ ಕಾರಣ ಅವರಿಗೆ ದನಿ ಇಲ್ಲದಾಗಿದೆ.ವಯಸ್ಸಿನ ಆಧಾರದಲ್ಲಿ ಸರ್ಕಾರಿ ನೌಕರರಿಗೆ 70 ಸಾವಿರ ಸಂಬಳ ಇದ್ದರೆ ಗುತ್ತಿಗೆ ಆಧಾರದ ನೌಕರರಿಗೆ 15 ಸಾವಿರ ಸಂಬಳ ಇರುತ್ತದೆ. ಆದರೆ ಅತೀ ಹೆಚ್ಚು ಕೆಲಸ ಮತ್ತು ಶ್ರಮ ಅರೆಕಾಲಿಕ ನೌಕರರದ್ದಾಗಿದೆ.ಬಹುತೇಕ ಬಡವರು, ಅಂಗವಿಕಲರು, ಓದಿದವರು ದಿನಗೂಲಿ, ಹೊರ ಗುತ್ತಿಗೆ…

Read More

ತೀರ್ಥಹಳ್ಳಿ ತಾಲೂಕು ಜೆಡಿಎಸ್ ಅಭ್ಯರ್ಥಿ ರಾಜಾರಾಮ್ NAMMUR EXPRESS NEWSತೀರ್ಥಹಳ್ಳಿ : ಪಂಚರತ್ನ ಯಾತ್ರೆಯನ್ನು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಯಶಸ್ಸಿಗೆ ಕಾರಣರಾದ ಜೆಡಿಎಸ್ ಮುಖಂಡರಿಗೂ ಮತ್ತು ಕಾರ್ಯಕರ್ತರಿಗೂ ದೇವೇಗೌಡರ ಅಭಿಮಾನಿಗಳಿಗೂ, ಕುಮಾರಸ್ವಾಮಿಯವರ ಅಭಿಮಾನಿಗಳಿಗೂ, ತೀರ್ಥಹಳ್ಳಿಯ ಪ್ರಜ್ಞಾವಂತ ನಾಗರೀಕರಿಗೂ ಹೃದಯಪೂರ್ವಕ ಧನ್ಯವಾದಗಳನ್ನು ತೀರ್ಥಹಳ್ಳಿ ತಾಲೂಕು ಜೆಡಿಎಸ್ ಅಭ್ಯರ್ಥಿ ಯಡೂರು ರಾಜಾರಾಮ್ ತಿಳಿಸಿದ್ದಾರೆ.ಸಮಾವೇಷದಲ್ಲಿ ಬೃಹತ್ ಅಡಿಕೆ ಹಾರವನ್ನು ಹಾಕಿದ ಕುಮಾರಸ್ವಾಮಿಯವರ ಅಭಿಮಾನಿಯಾದ ಅಂಬಳಿಕೆ ಮಹೇಂದ್ರ ಗೌಡರಿಗೆ ಅಭಿನಂದನೆಗಳು ಹಾಗೂ ಸಹಕರಿಸಿದ ಎಲ್ಲ ತೀರ್ಥಹಳ್ಳಿ ನಾಗರೀಕರಿಗೂ ಧನ್ಯವಾದಗಳನ್ನು ತೀರ್ಥಹಳ್ಳಿ ತಾಲೂಕು ಜೆಡಿಎಸ್ ಅಧ್ಯಕ್ಷರಾದ ಕುಣಜೆ ಪ್ರಭಾಕರ್, ಜಿಲ್ಲಾ ಜೆಡಿಎಸ್ ಮುಖಂಡರಾದ ನಟರಾಜ್ ಹೆಗಡೆ ಹೆದ್ದೂರು ಮತ್ತು ಯುವ ಜನತಾದಳದ ಅಧ್ಯಕ್ಷರಾದ ರಾಘವೇಂದ್ರ ತಲಬಿ ಹಾಗೂ ಪಕ್ಷದ ಪರವಾಗಿ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಪಂಚರತ್ನ ಯಾತ್ರೆಯಲ್ಲಿ ಹೊಡಿಯಾಲದ ಸಮೀಪ ತಾಲೂಕು ಅಧ್ಯಕ್ಷರಾದ ಪ್ರಭಾಕರ್ ಅವರನ್ನು ಕುಮಾರಸ್ವಾಮಿಯವರು ಕರೆಯಿಸಿ ತೀರ್ಥಹಳ್ಳಿ ತಾಲೂಕು ಸಂಘಟನೆಯ ಬಗ್ಗೆ ಮಾತನಾಡಿ, ತಾಲೂಕಿನಲ್ಲಿ ಜೆಡಿಎಸ್ ಮತದಾರರಿದ್ದಾರೆ, ಆದರೆ ಆ ಮತಗಳನ್ನು ಕ್ರೂಢೀಕರಿಸುವ ಮತ್ತು…

Read More