Author: Nammur Express Admin

ಬೆಂಗಳೂರಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆಮಾ.4ರ ಕೇಜ್ರಿವಾಲ್ ಭೇಟಿ ನಡುವೆ ಮಹತ್ವದ ನಡೆ NAMMUR EXPRESS NEWSಬೆಂಗಳೂರು: ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರು ಆಮ್ ಆದ್ಮಿ ಪಕ್ಷ ತೊರೆದು ಗುರುವಾರ ಅಧಿಕೃತವಾಗಿ ಬಿಜೆಪಿ ಸೇರಿದ್ದಾರೆ. ಈ ಮೂಲಕ ಆಮ್ ಆದ್ಮಿ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಿದೆ.ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕಚೇರಿಯಲ್ಲಿ ರಾಜ್ಯ ಬಿಜೆಪಿ ಘಟಕ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾಗಿದ್ದಾರೆ. ಬುಧವಾರ ಈ ಬಗ್ಗೆ ಘೋಷಣೆ ಮಾಡಿದ್ದಾರೆ.ಆಮ್ ಆದ್ಮಿ ಪಕ್ಷದಲ್ಲಿ ಪ್ರಬಲ ಹಾಗೂ ಮುಂಚೂಣಿ ನಾಯಕರಾಗಿ ಗುರುತಿಸಿಕೊಂಡಿದ್ದ ಭಾಸ್ಕರ್ ರಾವ್ ಅವರು ಬಿಜೆಪಿ ವಿರುದ್ಧ ಹಲವು ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ್ದರು. ಅವರ ಬಿಜೆಪಿ ಸೇರ್ಪಡೆ ಹಲವು ಚರ್ಚೆಗಳಿಗೆ ಗ್ರಾಸವಾಗಿದೆ.ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಮಾರ್ಚ್ 4ಕ್ಕೆ ದಾವಣಗೆರೆಯಲ್ಲಿ ನಡೆಯುವ ಸಮಾವೇಶಕ್ಕೆ ಆಗಮಿಸುತ್ತಿದ್ದಾರೆ.ಬಿಜೆಪಿ ಸೇರ್ಪಡೆಗೆ ಮುನ್ನ ಕಂದಾಯ ಸಚಿವ ಆರ್.ಅಶೋಕ್ ಅವರನ್ನು ಪದ್ಮನಾಭನಗರದಲ್ಲಿರುವ ಶಾಸಕರ ಕಚೇರಿಯಲ್ಲಿ ಭೇಟಿಯಾಗಿ ಸುಮಾರು 15 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದರು.ಬೆಂಗಳೂರು ನಗರ ಪೊಲೀಸ್…

Read More

ಶೇಕಡಾ 17ರಷ್ಟು ವೇತನಕ್ಕೆ ಗ್ರೀನ್ ಸಿಗ್ನಲ್ಸಿಎಂ ಬೊಮ್ಮಾಯಿ ಮಹತ್ವದ ಘೋಷಣೆ NAMMUR EXPRESS NEWSಬೆಂಗಳೂರು: ಸರ್ಕಾರಿ ನೌಕರರ ಮುಷ್ಕರ ಬೆನ್ನಲ್ಲೇ ಸಿಎಂ ಬಸವರಾಜ್ ಬೊಮ್ಮಾಯಿ ಶೇ.17ರಷ್ಟು ವೇತನ ಹೆಚ್ಚಳ ಮಾಡೋದಾಗಿ ಮಹತ್ವದ ಘೋಷಣೆ ಮಾಡಿದ್ದಾರೆ. ಶೀಘ್ರದಲ್ಲಿಯೇ ಘೋಷಣೆ ಸಂಬಂಧ ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಸರ್ಕಾರಿ ನೌಕರರ ಜೊತೆ ಮಂಗಳವಾರ ತಡರಾತ್ರಿವರೆಗೂ ಸಿಎಂ ಸುದೀರ್ಘ ಸಭೆ ನಡೆಸಿದ್ದರು. ಬುಧವಾರ ಬೆಳಗ್ಗೆ ಹಣಕಾಸು ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ವೇತನ ಹೆಚ್ಚಳದ ಬಗ್ಗೆ ಘೋಷಣೆ ಮಾಡಿದ್ದಾರೆ.7ನೇ ವೇತನ ಆಯೋಗ ಶಿಪಾರಸ್ಸು ಅನ್ವಯ ಶೇ.17ರಷ್ಟು ವೇತನ ಹೆಚ್ಚಳಕ್ಕೆ ನಿರ್ಧರಿಸಲಾಗಿದೆ. ಎನ್‌ಸಿಎಸ್ ನೇತೃತ್ವದ ಸಮಿತಿ ರಚನೆ ಮಾಡಲಾಗಿದೆ. ವರದಿ ಕೊಟ್ಟ ನಂತರ ಎನ್ ಪಿಎಸ್ ಜಾರಿ ಮಾಡುವ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು. ಈ ಕುರಿತಂತೆ ಆದಷ್ಟು ಬೇಗ ಆದೇಶ ಹೊರಡಿಸಲಾಗುವುದು ಎಂದು ಹೇಳಿದರು.

Read More

JEE B. Arch ನಲ್ಲಿ ಉತ್ತಮ ಸಾಧನೆದೀಕ್ಷಾ, ಸಾತ್ವಿಕ್, ವರುಣ್ ಉತ್ತಮ ಫಲಿತಾಂಶ NAMMUR EXPRESS NEWSಕಾರ್ಕಳ: ಕಾರ್ಕಳದ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜನವರಿ ತಿಂಗಳಿನಲ್ಲಿ ನ್ಯಾಷನಲ್‌ ಎಜೆನ್ಸಿ ನಡೆಸಿದ ಜಂಟಿ ಪ್ರವೇಶಪರೀಕ್ಷೆ-ಮುಖ್ಯ (ಜೆಇಇ-ಮೈನ್) ‌2ಎ (ಆರ್ಕಿಟೆಕ್ಚರ್‌) ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿದ್ದಾರೆ.ವಿದ್ಯಾರ್ಥಿಗಳಾದ ಕು. ದೀಕ್ಷಾ ಪಾಂಡು 95.8311 ಪರ್ಸಂಟೈಲ್‌, ಸಾತ್ವಿಕ್‌ ಕೆ ಭಟ್‌ 91.4659 ಪರ್ಸಂಟೈಲ್‌, ವರುಣ್‌ ಜಿ ನಾಯಕ್‌ 86.1552 ಪರ್ಸಂಟೈಲ್‌ ಅಂಕ ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.ವಿದ್ಯಾರ್ಥಿಗಳ ಈ ಸಾಧನೆಯನ್ನು ಕ್ರಿಯೇಟಿವ್‌ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಪರೀಕ್ಷಾ ಸಂಯೋಜಕ ಸುಮಂತದಾಮ್ಲೆ, ಉಪನ್ಯಾಸಕ ವರ್ಗದವರು ಅಭಿನಂದಿಸಿದ್ದಾರೆ.ಕ್ರಿಯೇಟಿವ್‌ ಕಾಲೇಜಿನ ಪ್ರಥಮ ವರ್ಷದಲ್ಲಿಯೇ ಅತ್ಯುತ್ತಮ ಫಲಿತಾಂಶಕ್ಕೆ ಸಾಕ್ಷಿಯಾಗಿದೆ.

Read More

ಅರೋಗ್ಯ ಹಾಗೂ ತುರ್ತು ಸೇವೆ ಎಂದಿನಂತೆ ಲಭ್ಯಸರ್ಕಾರಿ ಕಚೇರಿಗಳಲ್ಲಿ ನೌಕರರ ಹಾಜರಾತಿ ಇಲ್ಲಸರ್ಕಾರಿ ಶಾಲೆಗೆ ಶಿಕ್ಷಕರು ಬರಲಿಲ್ಲ.. ಸರ್ಕಾರದ ಸಂಧಾನ? NAMMUR EXPRESS NEWSಬೆಂಗಳೂರು: ಸರ್ಕಾರಿ ನೌಕರರ ಸಂಘದ ಬಂದ್ ಹಿನ್ನೆಲೆ ರಾಜ್ಯದ ಬಹುತೇಕ ರಾಜ್ಯ ಸರ್ಕಾರಿ ನೌಕರರು ಕೆಲಸಕ್ಕೆ ಹಾಜರಾತಿ ಆಗದೆ ಜನರಿಗೆ ಭಾರೀ ತೊಂದರೆಯಾಗಿದೆಬಂದ್ ಹಿನ್ನೆಲೆ ಎಲ್ಲೆಡೆ ಮೌನ ಕಾಣುತ್ತಿದೆ.ಲಿಖಿತ ಹೇಳಿಕೆ ಆಗುವವರೆಗೆ ನಾವು ಹೋರಾಟ ಕೈ ಬಿಡುವುದಿಲ್ಲ ಎಂದು ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ಹೇಳಿದ್ದಾರೆ.ಕಂದಾಯ, ಶಿಕ್ಷಣ ಇಲಾಖೆ ಸೇರಿ ಎಲ್ಲಾ ಇಲಾಖೆ ನೌಕರರು ಕೆಲಸಕ್ಕೆ ಗೈರಾಗಿದ್ದಾರೆ. ಈ ನಡುವೆ ಸಿಎಂ ಹಣಕಾಸು ಇಲಾಖೆ ಯ ಸಭೆ ಕರೆದಿದ್ದು ನಿರ್ಧಾರ ಹೊರ ಬೀಳಲಿದೆ. ಸರಕಾರಕ್ಕೆ ನೌಕರರ ನಡೆ ಇಕ್ಕಟ್ಟಿಗೆ ಕಾರಣವಾಗಿದೆ ಅರೋಗ್ಯ ಹಾಗೂ ತುರ್ತು ಸೇವೆ ಎಂದಿನಂತೆ ಲಭ್ಯ ಸರ್ಕಾರಿ ನೌಕರರ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ನೀಡಿ ಆರೋಗ್ಯ ಇಲಾಖೆಯ ಎಲ್ಲಾ ಅಧಿಕಾರಿ ನೌಕರರ ವರ್ಗದವರು, ಕರ್ನಾಟಕ ರಾಜ್ಯ ಸ ನೌಕರರ ಸಂಘದ ಮುಷ್ಕರದ ಮಾರ್ಗ ಸೂಚಿಯಂತೆ…

Read More

ಬುಧವಾರದಿಂದ ಗ್ಯಾಸ್ ಬೆಲೆ 50 ರೂ ಹೆಚ್ಚಳ2023ರಲ್ಲಿ ಸಿಲಿಂಡರ್ ಬೆಲೆ ಎರಡನೇ ಬಾರಿಗೆ ಏರಿಕೆ NAMMUR EXPRESS NEWSನವದೆಹಲಿ: ದೇಶಾದ್ಯಂತ ಗೃಹ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ 50 ರೂಪಾಯಿ ಹಾಗೂ ವಾಣಿಜ್ಯ ಉದ್ದೇಶಕ್ಕಾಗಿ ಬಳಸುವ ಸಿಲಿಂಡರ್ ಬೆಲೆ 350 ರೂಪಾಯಿ ಏರಿಕೆಯಾಗಿದೆ.ಪೆಟ್ರೋಲಿಯಂ ಮತ್ತು ಆಯಿಲ್ ಮಾರ್ಕೆಟಿಂಗ್ ಕಂಪನಿಗಳು ಪ್ರತಿ ತಿಂಗಳ ಮೊದಲ ದಿನ ಎಲ್ ಪಿಜಿ ಸಿಲಿಂಡರ್ ಬೆಲೆ ಪರಿಷ್ಕರಣೆ ಮಾಡುತ್ತವೆ. ದೇಶಾದ್ಯಂತ ಬುಧವಾರದಿಂದ ಹೊಸ ದರಗಳು ಜಾರಿಯಾಗಿದೆ. ದೆಹಲಿಯಲ್ಲಿ ಗೃಹ ಬಳಕೆಯ ಸಿಲಿಂಡರ್ ದರ 1,103 ರೂಪಾಯಿ, ವಾಣಿಜ್ಯ ಸಿಲಿಂಡರ್ ಬೆಲೆ 2,119 ರೂಪಾಯಿ ನಿಗದಿಯಾಗಿದೆ.2023ರಲ್ಲಿ ಎಲ್ ಪಿಜಿ ಸಿಲಿಂಡರ್ ಬೆಲೆ ಎರಡನೇ ಬಾರಿಗೆ ಏರಿಕೆಯಾಗಿದೆ. ಜನವರಿ 1ರಂದು ಸಿಲಿಂಡರ್ ಬೆಲೆಯನ್ನ 25 ರೂಪಾಯಿಯಷ್ಟು ಏರಿಕೆ ಮಾಡಲಾಗಿತ್ತು. ಇದೀಗ ತೈಲ ಕಂಪನಿಗಳಿಂದ ಮತ್ತೊಮ್ಮೆ ಸಿಲಿಂಡರ್ ಬೆಲೆ ಪರಿಷ್ಕರಣೆ ಆಗಿದೆ. ಎಲ್ ಪಿಜಿ ಸಿಲಿಂಡರ್ ಬೆಲೆ 50 ರೂಪಾಯಿ ಏರಿಕೆಯಾಗಿದ್ದು ಗೃಹಿಣಿಯರಿಗೆ ಶಾಕಿಂಗ್ ಸುದ್ದಿಯಾಗಿದೆ.

Read More

ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮದಲ್ಲಿ ನಾಯಕತ್ವಪ್ರಧಾನಿ ಮೋದಿ ಅವರಿಂದ ಬಣ್ಣನೆ: ಮೋದಿ ನೋಡಲು ಜನವೋ ಜನವಿಮಾನ ನಿಲ್ದಾಣ ಹೆಸರು ಘೋಷಣೆ ಮಾಡಲೇ ಇಲ್ಲ! NAMMUR EXPRESS NEWSಶಿವಮೊಗ್ಗ: ಶಿವಮೊಗ್ಗದಲ್ಲಿ ಪ್ರಧಾನಿ ನರೇಂದ್ರ ಮೋದಿ ನೋಡಲು ಜನ ಸಾಗರವೇ ಆಗಮಿಸಿದ್ದು, ವಿಮಾನ ನಿಲ್ದಾಣ ಪ್ರವಾಸಿ ತಾಣದಂತಾಗಿತ್ತು.ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಕಂಡು ಬಂತು. ಶಿವಮೊಗ್ಗದಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದ್ದರಿಂದ ವಿಮಾನ ನಿಲ್ದಾಣ ಉದ್ಘಾಟನೆ ಸಮಾರಂಭಕ್ಕೆ ಆಗಮಿಸಿದ್ದ ಜನರು ಕಾರ್ಯಕ್ರಮಕ್ಕೂ ತೆರಳಲಾಗದೆ, ಹಿಂದಕ್ಕೆ ಮರಳಲಾಗದೆ ಪರದಾಡಿದರು. ಬಿರು ಬಿಸಿಲಿನಲ್ಲಿ ಪರದಾಡುತ್ತ ನೀರು, ತಿಂಡಿಗಾಗಿ ಪರಿತಪಿಸಬೇಕಾಯಿತು.ಶಿವಮೊಗ್ಗ ಜಿಲ್ಲೆ ಮತ್ತು ಹೊರ ಜಿಲ್ಲೆಯಿಂದ ಲಕ್ಷಾಂತರ ಜನರು ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಆದರೆ ಸಂಚಾರ ದಟ್ಟಣೆಯಿಂದಾಗಿ ಕಾರ್ಯಕ್ರಮದ ಸ್ಥಳಕ್ಕೆ ತಲುಪಲಾಗದೆ ಸಂಕಷ್ಟಕ್ಕೀಡಾದರು.:ಜನರನ್ನು ಕರೆತರಲು ದೊಡ್ಡ ಸಂಖ್ಯೆಯಲ್ಲಿ ವಾಹನದ ವ್ಯವಸ್ಥೆ ಮಾಡಲಾಗಿತ್ತು. ನೂರಾರು ಕೆಎಸ್ ಆರ್ ಟಿ ಸಿ ಬಸ್ಸುಗಳು, ಖಾಸಗಿ ಬಸ್ಸುಗಳು, ಟಿಟಿ ವಾಹನಗಳು, ಕಾರು ಸೇರಿದಂತೆ ಹಲವು ವಾಹನಗಳ ವ್ಯವಸ್ಥೆಯಾಗಿತ್ತು. ಹಳ್ಳಿ ಹಳ್ಳಿಯಿಂದಲು ಜನರನ್ನು ಕರೆಯಿಸಲಾಗಿತ್ತು.ಕೆಲವು ಕಡೆ…

Read More

ಮೇಲಿನ ಕುರವಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರ ಮೇಲೆ ಪಿಡಿಓ ಸರಿತಾ ಹಲ್ಲೆ ಆರೋಪಸೂಕ್ತ ಕ್ರಮ ಕೈಗೊಳ್ಳಲು ಇಲಾಖೆ ಮೇಲಾಧಿಕಾರಿಗಳಿಗೆ ದೂರು ನೀಡಿದರು ಕ್ರಮ ಕೈಗೊಂಡಿಲ್ಲಮಾ.7ಕ್ಕೆ ಶಿವಮೊಗ್ಗ ಜಿಪಂ ಸಿಇಓ ಕಚೇರಿ ಮುಂದೆ ಪ್ರತಿಭಟನೆ NAMMUR EXPRESS NEWSಜ.30ರಂದು ಮೇಲಿನ ಕುರವಳ್ಳಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮೇಲಾಧಿಕಾರಿಗಳ ಸಮ್ಮುಖದಲ್ಲಿ ನೇರವಾಗಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರ ಮೇಲೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸರಿತಾ ರವರು ಯಾವುದೇ ಸಕಾರಣಗಳಿಲ್ಲದೆ ತಾನು ದಲಿತ ಮಹಿಳೆ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಗೃಹ ಸಚಿವರು ಮತ್ತು ಬಿಜೆಪಿ ಪುಂಡರ ಬೆಂಬಲ ಮತ್ತು ಮಾರ್ಗದರ್ಶನದ ಮೇಲೆ ಹಲ್ಲೆ ನಡೆಸಿರುವುದು ಗಮನಕ್ಕೆ ಬಂದಿದೆ. ಗ್ರಾಮ ಪಂಚಾಯಿತಿಯ ಅಧ್ಯಕ್ಷರು,ಉಪಾಧ್ಯಕ್ಷರು, ಗ್ರಾಮ ಪಂಚಾಯಿತಿ ನ ಸದಸ್ಯರು ಯಾವುದೇ ಪ್ರತಿರೋಧವನ್ನು ಮಾಡದೆ ಇರುವ ಕಾರಣ, ಸಚಿವರ ಮಾರ್ಗದರ್ಶನದಲ್ಲಿ ಪರಿಶಿಷ್ಟ ಜಾತಿ ದೌರ್ಜನ್ಯ ತಡೆ ಕಾಯ್ದೆ ಬಳಸಿ ಅಧ್ಯಕ್ಷರು ಉಪಾಧ್ಯಕ್ಷರು ಸೇರಿದಂತೆ ಒಂಬತ್ತು ಸದಸ್ಯರನ್ನು ಜೈಲಿಗೆ ಕಳುಹಿಸುವ…

Read More

ಅತೀ ಹೆಚ್ಚು ಜನ ಬಂದಿದ್ದು ತೀರ್ಥಹಳ್ಳಿಯಿಂದ?!ಮೋದಿ ಅವರನ್ನು ಸ್ವಾಗತಿಸಿದ ತೀರ್ಥಹಳ್ಳಿ ಯಕ್ಷಗಾನ ಕಲಾವಿದರು: ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಹೈ ಸೆಕ್ಯೂರಿಟಿಸಿಗಂದೂರು ಸ್ಮರಿಸಿದ ಪ್ರಧಾನಿ ಇನ್ನಷ್ಟು ಸುದ್ದಿ ನಮ್ಮೂರ್ ಎಕ್ಸ್ಪ್ರೆಸ್ ವಿಶೇಷ ಇಂದಿನ ಪುರವಣಿಯಲ್ಲಿ ಓದಿ! NAMMUR EXPRESS NEWSಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮ ಮಲೆನಾಡಲ್ಲಿ ಹೊಸ ಇತಿಹಾಸ ಸೃಷ್ಟಿ ಮಾಡಿದೆ. ಇದರ ನಡುವೆ ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮದಲ್ಲಿ ತೀರ್ಥಹಳ್ಳಿ ಮಹತ್ವದ ಪಾತ್ರ ವಹಿಸಿದೆ.ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಿದ ಈ ಕಾರ್ಯಕ್ರಮಕ್ಕೆ ತೀರ್ಥಹಳ್ಳಿಯಿಂದ ಅತೀ ಹೆಚ್ಚು ಬಿಜೆಪಿ ಕಾರ್ಯಕರ್ತರು, ಮುಖಂಡರು ಭೇಟಿ ನೀಡಿದ್ದರು. ಜೊತೆಗೆ ವಿವಿಧ ವ್ಯವಸ್ಥೆಯನ್ನು ನೋಡಿಕೊಂಡಿದ್ದರು.ಗೃಹ ಮಂತ್ರಿ ಆರಗ ಜ್ಞಾನೇಂದ್ರ ಅವರ ನೇತೃತ್ವದಲ್ಲಿ ಇಡೀ ಕಾರ್ಯಕ್ರಮಕ್ಕೆ ಭದ್ರತೆ ಮಾಡಲಾಗಿದ್ದು ಸಣ್ಣ ಪುಟ್ಟ ಲೋಪದೋಷವೂ ಆಗದೆ ಕಾರ್ಯಕ್ರಮ ಯಶಸ್ವಿಯಾಗಿದೆ. ಪೊಲೀಸ್ ಇಲಾಖೆ, ಸ್ವಯಂ ಸೇವಕರು ಅತ್ಯುತ್ತಮ ಕೆಲಸ ಮಾಡಿದ್ದಾರೆ.ತೀರ್ಥಹಳ್ಳಿ ಕಲಾವಿದರಿಂದ ಮೋದಿಗೆ ಸ್ವಾಗತ!ಶಿವಮೊಗ್ಗದ ವಿಮಾನ ನಿಲ್ದಾಣ ಉದ್ಘಾಟನಾ ಕಾರ್ಯಕ್ರಮ ಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ…

Read More

ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆ ವಿಡಿಯೋ ನ್ಯೂಸ್: ನಮ್ಮೂರ್ ಎಕ್ಸ್ ಪ್ರೆಸ್ ಶಿವಮೊಗ್ಗದ ಪಾಲಿಗೆ ಸೋಮವಾರ ಐತಿಹಾಸಿಕ ದಿನ.ಪ್ರಧಾನಿ ನರೇಂದ್ರ ಮೋದಿ ವಿಮಾನ ನಿಲ್ದಾಣ ಉದ್ಘಾಟನೆ, ಜನರಿಗೆ ಸಂತಸ: ರಾಜ್ಯದ ಸಿಎಂ ಸೇರಿ ಗಣ್ಯರು ಹಾಜರ್ ಎಲ್ಲೆಲ್ಲೂ ಟ್ರಾಫಿಕ್ ಜಾಮ್.

Read More

ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಬಿಎಸ್ ವೈಗೆ ಶಾಲು ಹೊದಿಸಿ ವಿಶೇಷ ಸನ್ಮಾನಮಲೆನಾಡಲ್ಲಿ ಎಲ್ಲೆಲ್ಲೂ ಸಂಭ್ರಮ… ಸಡಗರ NAMMUR EXPRESS NEWSಶಿವಮೊಗ್ಗ: ಶಿವಮೊಗ್ಗದ ಪಾಲಿಗೆ ಸೋಮವಾರ ಐತಿಹಾಸಿಕ ದಿನ. ಪ್ರಧಾನಿ ನರೇಂದ್ರ ಮೋದಿ ಸೋಗಾನೆಯ ನೂತನ ವಿಮಾನ ನಿಲ್ದಾಣ ಉದ್ಘಾಟನೆ ಮಾಡಿದ್ದು ಶಿವಮೊಗ್ಗ ಹಾಗೂ ಮಲೆನಾಡಿಗೆ ಹೊಸ ಐತಿಹ್ಯ ಬರೆದಿದೆ.ವಿಮಾನ ನಿಲ್ದಾಣ ಮಾತ್ರವಲ್ಲದೆ ವಿವಿಧ 7,165 ಕೋಟಿ ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಮೂಲೆ ಮೂಲೆಯಿಂದ ಜನ ಆಗಮಿಸಿದ್ದು, ಎಲ್ಲರಿಗೂ ಅವಕಾಶ ಕಲ್ಪಿಸಲಾಗಿತ್ತು.ಮೋದಿ ಅವರು ದೆಹಲಿಯಿಂದ ವಿಮಾನದ ಮೂಲಕ ಆಗಮಿಸಿ ವಿಮಾನ ನಿಲ್ದಾಣ ಉದ್ಘಾಟನೆ ಮಾಡಿದರು. ಸಿಎಂ ಬಸವರಾಜ್ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಗೃಹ ಸಚಿವ ಆರಗ ಜ್ಞಾನೇಂದ್ರ, ಸಂಸದ ರಾಘವೇಂದ್ರ ಸೇರಿದಂತೆ ಬಹುತೇಕ ನಾಯಕರು ಹಾಜರಿದ್ದರು. ಈ ವೇಳೆ ಯಡಿಯೂರಪ್ಪ ಅವರಿಗೆ ಸಭೆಯಲ್ಲಿ ಶಾಲು ಹೊದಿಸಿ ಸನ್ಮಾನ ಮಾಡಿದರು. ಅಲ್ಲದೆ ಯಡಿಯೂರಪ್ಪ ಅವರ ಸೇವೆಯನ್ನು ಗುಣಗಾನ ಮಾಡಿದರು.ಯಡಿಯೂರಪ್ಪನವರ 80ನೇ ವರ್ಷದ ಹುಟ್ಟುಹಬ್ಬದ ಹಿನ್ನೆಲೆಯ ವಿಶೇಷ ಉಡುಗೊರೆಯನ್ನು ನೀಡಿ…

Read More