Author: Nammur Express Admin

ಎಸ್ಎಸ್ಎಲ್‌ಸಿ ಪಾಸ್ ಆದವರಿಗೆ ಉದ್ಯೋಗವಕಾಶಕರ್ನಾಟಕ ರಾಜ್ಯ ಸಾರಿಗೆ 2000 ಹುದ್ದೆಗಳಿಗೆ ಅರ್ಜಿ NAMMUR EXPRESS NEWSಬೆಂಗಳೂರು: ಎಸ್‌ಎಸ್‌ಎಲ್‌ಸಿ ಪಾಸ್ ಆದವರಿಗೆ ಉದ್ಯೋಗವಕಾಶವಿದ್ದು ಕರ್ನಾಟಕ ರಾಜ್ಯ ಸಾರಿಗೆ 2000 ಹುದ್ದೆಗಳಿಗೆ ಅರ್ಜಿ ಸಲ್ಲಿಸಿದೆ.ಸಂಸ್ಥೆ – ಕೆಎಸ್‌ಆರ್‌ಟಿಸಿಹುದ್ದೆಯ ಹೆಸರು – ಚಾಲಕ ಹುದ್ದೆಯಸಂಖ್ಯೆ – 2000ವಿದ್ಯಾರ್ಹತೆ – ಎಸ್‌ಎಸ್‌ಎಲ್‌ಸಿಉದ್ಯೋಗದ ಸ್ಥಳ – ಕರ್ನಾಟಕವೇತನ ತಿಂಗಳಿಗೆ – 10,000 ರಿಂದ 20,000 ವರೆಗೆ.ಅರ್ಹತೆ : ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಯಾವುದೇ ಮಾನ್ಯತೆ ಸಂಸ್ಥೆಯಿಂದ 10 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.ವಯಸ್ಸಿನ ಮಿತಿ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೇಮಕಾತಿ ಅಧಿಸೂಚನೆಯ ಪ್ರಕಾರ, ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೆಎಸ್ ಆರ್ ಟಿಸಿ ನಿಯಮಗಳ ಪ್ರಕಾರ ವಯಸ್ಸಿನ ಮಿತಿಯನ್ನು ಹೊಂದಿರಬೇಕು. ವಯೋಮಿತಿ ಸಡಿಲಿಕೆ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಿಮಯಗಳ ಅನುಸಾರವಾಗಿ ವಯೋಮಿತಿ ಸಡಿಲಿಕೆ ಇರುತ್ತದೆ.ಅರ್ಜಿಯ ಶುಲ್ಕ : ಈ ಹುದ್ದೆಗೆ ಅರ್ಜಿ ಸಲ್ಲಿಸುವಾಗ ಯಾವುದೇ ಅಪ್ಲಿಕೇಷನ್ ಫೀಸ್ ಅಥವಾ…

Read More

ಕಾಡಾನೆಗಳನ್ನು ಹಿಮ್ಮೆಟ್ಟಿಸಲು ಎಲಿಫೆಂಟ್ ಟಾಸ್ಕ್ ಫೋರ್ಸ್ ರಚನೆಸರ್ಕಾರದ ಆದೇಶದಲ್ಲಿ ಏನೇನು..ಶಿವಮೊಗ್ಗ ಜಿಲ್ಲೆ ಸೇರಿಸಿಲ್ಲ ಏಕೆ? NAMMUR EXPRESS NEWSರಾಜ್ಯದ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಜನರನ್ನು ತೀವ್ರವಾಗಿ ಕಾಡುತ್ತಿರುವ, ಅನೇಕರನ್ನು ಬಲಿ ಪಡೆದುಕೊಂಡಿರುವ ಕಾಡಾನೆಗಳನ್ನು ಹಿಮ್ಮೆಟ್ಟಿಸುವ ಸಲುವಾಗಿ ಟಾಸ್ಕ್‌ ಫೋರ್ಸ್ ರಚನೆ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿದೆ.ಹಾಸನ, ಚಿಕ್ಕಮಗಳೂರು, ಮೈಸೂರು, ಮತ್ತು ಕೊಡಗು ಜಿಲ್ಲೆಗಳಲ್ಲಿ ಕಾಡಾನೆ ಹಾವಳಿ ದಿನೇ ದಿನೇ ಹೆಚ್ಚಳವಾಗುತ್ತಿರುವುದರಿಂದ, ಇದನ್ನು ತಡೆಗಟ್ಟುವ ಸಲುವಾಗಿ ಪ್ರತಿ ಜಿಲ್ಲೆಗೆ ಒಂದರಂತೆ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಎಲಿಫೆಂಟ್ ಟಾಸ್ಕ್ ಫೋರ್ಸ್ ರಚಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ.ಕಾಡಾನೆ ಹಾವಳಿ ತಡೆಗಟ್ಟುವ ಕುರಿತು ಹಿರಿಯ ಅರಣ್ಯ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿದ ಬೆನ್ನಲ್ಲೇ ಆನೆಯ ದಾಳಿ ಹೆಚ್ಚಾಗಿರುವ ನಾಲ್ಕು ಜಿಲ್ಲೆಗಳಲ್ಲಿ ಟಾಸ್ಕ್ ಫೋರ್ಸ್ ಗಳನ್ನು ರಚಿಸುವ ಕುರಿತು ಆದೇಶ ಹೊರಡಿಸಲಾಗಿದೆ. ಜೊತೆಗೆ ಈ ಕಾರ್ಯಪಡೆಗಳು ಆಯಾ ಅರಣ್ಯವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ನಿರ್ದೇಶನದಲ್ಲಿ ತಕ್ಷಣದಿಂದಲೇ ನಿರ್ವಹಿಸುವಂತೆಯೂ ಆದೇಶ ಹೊರಡಿಸಲಾಗಿದೆ. ಕಳೆದ ಮೂರು ದಿನಗಳ ಹಿಂದಷ್ಟೇ ಚಿಕ್ಕಮಗಳೂರು ಜಿಲ್ಲೆಯ…

Read More

ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿಶೇಷ ಕಾರ್ಯಕ್ರಮಡಾ.ಹಿರೇಮಗಳೂರು ಕಣ್ಣನ್, ಸಚಿವ ಸುನಿಲ್ ಕುಮಾರ್ ಭಾಗಿ NAMMUR EXPRESS NEWSಕಾರ್ಕಳದ ಕ್ರಿಯೇಟಿವ್ ಕಾಲೇಜಿನ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ನ.29ರಂದು ನುಡಿಹಬ್ಬ ಕಾರ್ಯಕ್ರಮ ನಡೆಯಲಿದೆ.ಬೆಳಿಗ್ಗೆ 10 ಗಂಟೆಯಿಂದ ಹೀರ್ಗಾನ ಶ್ರೀ ಆದಿಶಕ್ತಿ ಮಹಾಲಕ್ಷ್ಮೀ ದೇವಸ್ಥಾನದ ಸಭಾಂಗಣದಲ್ಲಿ ನುಡಿಹಬ್ಬ ನಡೆಯಲಿದ್ದು, ಮುಖ್ಯ ಅತಿಥಿಯಾಗಿ ಡಾ. ಹಿರೇಮಗಳೂರು ಕಣ್ಣನ್ ಭಾಗವಹಿಸಲಿದ್ದಾರೆ. ಇಂಧನ ಸಚಿವ ವಿ.ಸುನಿಲ್ ಕುಮಾರ್, ಹಿರ್ಗಾನ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಶೆಟ್ಟಿ ಉಪಸ್ಥಿತರಿರಲಿದ್ದಾರೆ ಎಂದು ಕ್ರಿಯೇಟಿವ್‌ ಶಿಕ್ಷಣ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.ಶಿಕ್ಷಣದ ಜತೆಗೆ ಭಾಷೆ, ಸಂಸ್ಕೃತಿ, ಸಂಪ್ರದಾಯ, ನಾವಿನ್ಯತೆಗೆ ಒತ್ತು ಕೊಡುತ್ತಿರುವ ಸಂಸ್ಥೆ ಇದೀಗ ಅದ್ದೂರಿ ನುಡಿ ಹಬ್ಬ ನಡೆಸುತ್ತಿದೆ.

Read More

ಮಲೆನಾಡಿನಲ್ಲಿ ಮಳೆ ಬಿಸಿಲಿನ ಆಟದ ನಡುವೆ ಮೈ ಕೊರೆಯುವ ಚಳಿಜ್ವರ ಶೀತದಿಂದ ಮಕ್ಕಳು, ಹಿರಿಯ ನಾಗರಿಕರಿಗೆ ಅನಾರೋಗ್ಯ NAMMUR EXPRESS NEWSಮಲೆನಾಡು: ತೀರ್ಥಹಳ್ಳಿ ತಾಲೂಕು ಸೇರಿದಂತೆ ಮಲೆನಾಡಿನ ಬಹುತೇಕ ಕಡೆ ತಂಡಿ ಮತ್ತು ಶೀತದ ಗಾಳಿ ವಾತಾವರಣ ಕಂಡು ಬಂದಿದೆ.ಕಳೆದೊಂದು ವಾರದಿಂದ ಕೆಲವೆಡೆ ಮಳೆ ಸುರಿಯುತ್ತಿದೆ. ಇನ್ನು ಬಿಸಿಲು ಕೂಡ ಮಧ್ಯಾಹ್ನದ ವೇಳೆ ಇದೆ ಹಾಗೂ ಸಂಜೆಯಾಗುತ್ತಿದ್ದಂತೆ ಮೈ ಕೊರೆಯುವ ಚಳಿ ಜನರನ್ನು ದಂಗು ಮಾಡಿದೆ. ಹಿರಿಯ ನಾಗರಿಕರು, ಮಕ್ಕಳು ಇದರಿಂದ ತೊಂದರೆಗೆ ಒಳಗಾಗುತ್ತಿದ್ದಾರೆ.ಆಸ್ಪತ್ರೆಗಳಲ್ಲಿ ರಶ್ ಕಂಡುಬರುತ್ತಿದೆ. ಶೀತ ಜ್ವರ ಮೈ-ಕೈ ನೋವಿನಂತ ಸಾಂಕ್ರಾಮಿಕ ರೋಗಗಳು ಜನರನ್ನು ಈಗ ಆತಂಕಕ್ಕೆ ತಳ್ಳಿದೆ. ಅಡಿಕೆ ಕೊಯ್ಲು, ಭತ್ತದ ಬೆಳೆಗೆ ಹಾನಿ? ಇನ್ನು ಮಲೆನಾಡಿನಲ್ಲಿ ಅಡಿಕೆ ಕೊಯ್ಲು ಇರುವುದರಿಂದ ಪ್ರತಿದಿನ ಕೆಲಸ ಮಾಡಬೇಕಾಗಿರುವುದರಿಂದ ಶೀತ ಹಾಗೂ ತಂಡಿ ಆತಂಕ ಹುಟ್ಟಿಸಿದೆ. ಒಂದು ಕಡೆ ಮಳೆ ಕೂಡ ತೊಂದರೆ ನೀಡುತ್ತಿದೆ.

Read More

ಮಲೆನಾಡಿಗೆ ಆಗಮಿಸಿದ ತಂಡವನ್ನು ಸ್ವಾಗತಿಸಿದ ಆರಗಸಿಎಂ ಕೂಡ ತೋಟಕ್ಕೆ ಭೇಟಿ ನೀಡಲಿದ್ದಾರೆ NAMMUR EXPRESS NEWSತೀರ್ಥಹಳ್ಳಿ: ಮಲೆನಾಡಿಗೆ ಆಗಮಿಸಿದ ಕೇಂದ್ರದ ಎಲೆಚುಕ್ಕಿ ರೋಗ ಸಂಶೋಧನಾ ತಂಡಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಸಾಥ್ ನೀಡಿದ್ದಾರೆ.ಮಲೆನಾಡಿನಲ್ಲಿ ತೀವ್ರವಾಗಿ ಹಬ್ಬುತ್ತಿರುವ ಎಲೆಚುಕ್ಕಿ ರೋಗಕ್ಕೆ ತಿಂಗಳ ಹಿಂದೆ ಯಡಿಯೂರಪ್ಪನವರ ನೇತೃತ್ವದಲ್ಲಿ ಕೇಂದ್ರಕ್ಕೆ ನಿಯೋಗ ಮಾತುಕತೆ ನಡೆಸಿದ್ದುಮಂಗಳವಾರ ಐದು ಜನ ಕೇಂದ್ರದಿಂದ ವಿಜ್ಞಾನಿಗಳು ಭೇಟಿ ನೀಡಿದ್ದಾರೆ. ರೈತರ ತೋಟಗಳಿಗೆ ಭೇಟಿ ನೀಡಿ, ರೈತರ ಜತೆ ಸಂವಾದ ಮಾಡಿದ್ದಾರೆ ಎಂದು ಆರಗ ಜ್ಞಾನೇಂದ್ರ ಹೇಳಿದರು.ಎಲೆ ಚುಕ್ಕೆ ರೋಗಕ್ಕೆ ದೀರ್ಘಕಾಲದ ಪರಿಹಾರ ಏನು ಮತ್ತು ತಕ್ಷಣದ ಪರಿಹಾರ ಯಾವ ರೀತಿಯಲ್ಲಿ ಮಾಡಬೇಕು, ಯಾವ ಔಷಧಿಯಿಂದ ಸಮಸ್ಯೆ ಬಗೆಹರಿಸಬಹುದು ಎಂದು ಚರ್ಚೆ ಮಾಡಿದ್ದೇವೆ. ಕೇಂದ್ರದ ಹಾಗೂ ರಾಜ್ಯದ ವಿಜ್ಞಾನಿಗಳು ಭೇಟಿ ನೀಡಿ ಯಾವ ರೀತಿಯಲ್ಲಿ ಪರಿಹಾರ ಕಂಡುಕೊಳ್ಳಬಹುದು ಎಂದು ತೋಟಗಳನ್ನು ವೀಕ್ಷಿಸಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದರು.ಕೋವಿಡ್ ಸಮಯದಲ್ಲಿ ತಕ್ಷಣದಲ್ಲಿ ಹೇಗೆ ಔಷಧಿ ಕಂಡು ಹಿಡಿದರೋ ಹಾಗೆ ಈಗ ರೈತರ ಸಮಸ್ಯೆಯ ಎಲೆ…

Read More

ಚೆಕ್ ಅಮಾನ್ಯ ಪ್ರಕರಣಕ್ಕೆ ಈಗ ಶಿಕ್ಷೆ ಬೇಗ! ಕಾಪು ತಾಲೂಕಿನ ಆರೋಪಿಗೆ ಒಂದು ವರ್ಷ ಜೈಲು ಶಿಕ್ಷೆಚೆಕ್ ಕೊಡುವ ಮುನ್ನ ಎಚ್ಚರ ಎಚ್ಚರ..! NAMMUR EXPRESS NEWSಉಡುಪಿ: ಚೆಕ್ ಅಮಾನ್ಯ ಪ್ರಕರಣಕ್ಕೆ ಈಗ ಶಿಕ್ಷೆ ಬೇಗ. ಎಲ್ಲೆಡೆ ಚೆಕ್ ಬೌನ್ಸ್ ಪ್ರಕರಣಕ್ಕೆ ಶಿಕ್ಷೆ ಪ್ರಕಟವಾಗುತ್ತಿದೆ. ಈ ನಡುವೆ ಉಡುಪಿ ಜಿಲ್ಲೆ ಕಾಪು ತಾಲೂಕಿನ ಆರೋಪಿಗೆ ಒಂದು ವರ್ಷ ಜೈಲು ಶಿಕ್ಷೆಯಾಗಿದೆ.ಕಾಪು ತಾಲೂಕಿನ ಕುರ್ಕಾಲು ಗ್ರಾಮದ ನಿವಾಸಿ, ಬಂಗೇರ ಫ್ಲೋರ್ ಮಿಲ್ಸ್‌ ನ ಮಾಲಕ ಆರೋಪಿ ಆಕಾಶ್ ಬಂಗೇರರಿಗೆ ಒಂದು ವರ್ಷ ಶಿಕ್ಷೆ ಹಾಗೂ 6,35,000ರೂ ಪರಿಹಾರ ಹಣವನ್ನು ಉಡುಪಿ ಫಿರ್ಯಾದಿದಾರರಾದ ಕೆ.ಎನ್.ಎಸ್.ಕಾಮತ್ ಎಂಡ್ ಸನ್ಸ್ ನ ಮಾಲಿಕರಾದ ಕಟಪಾಡಿಯ ಹಿರಿಯ ಪ್ರಜೆ ವಿಠಲ್ ಎನ್.ಕಾಮತ್ ರಿಗೆ ನೀಡುವಂತೆ ಉಡುಪಿ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಧೀಶ ಜ.ಶ್ಯಾಮ್‌ ಪ್ರಕಾಶ್ ಆದೇಶಿಸಿದ್ದಾರೆ.ಪ್ರಕರಣದ ಹಿನ್ನೆಲೆ: ಆರೋಪಿ ದಿನಾಂಕ 14-5-2019 ರಂದು 4,73,185 ರೂ ಮೌಲ್ಯದ ದಿನಸಿ ಸಾಮಾಗ್ರಿಗಳನ್ನು ಸಾಲವಾಗಿ ವಿಠಲ್ ಕಾಮತ್ ರವರ…

Read More

ಪಶ್ಚಿಮ ಕೇಂದ್ರ ರೈಲ್ವೇಯಲ್ಲಿ ಬಂಪರ್ ಹುದ್ದೆಗೆ ನೇಮಕಾತಿ NAMMUR EXPRESS NEWSನವದೆಹಲಿ: ರೈಲ್ವೇ ನೇಮಕಾತಿ ಕೋಶವು ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಅದರ ಅಧಿಸೂಚನೆ ಪ್ರಕಾರ ಪಶ್ಚಿಮ ಕೇಂದ್ರ ರೈಲ್ವೇಯಲ್ಲಿ ಬಂಪರ್ ಹುದ್ದೆಗೆ ನೇಮಕಾತಿ ನಡೆಸಲಿದೆ. ಈ ನೇಮಕಾತಿಗಾಗಿ ಅರ್ಜಿ ಪ್ರಕ್ರಿಯೆಯು ಈಗಾಗಲೇ ಪ್ರಾರಂಭವಾಗಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅಧಿಕೃತ ಸೈಟ್ iroams.com ಗೆ ಭೇಟಿ ನೀಡಬೇಕಾಗಿದೆ. ಈ ನೇಮಕಾತಿ ಅಭಿಯಾನವು ಡಿಸೆಂಬರ್ 17ರವರೆಗೆ ನಡೆಯಲಿದೆ. ರೈಲ್ವೇಯಲ್ಲಿ ಈ ನೇಮಕಾತಿ ಅಭಿಯಾನದ ಮೂಲಕ ಒಟ್ಟು 2,521 ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಕಾರ್ಪೆಂಟರ್, ಕಂಪ್ಯೂಟರ್ ಆಪರೇಟರ್ ಪ್ರೋಗ್ರಾಮಿಂಗ್ ಅಸಿಸ್ಟೆಂಟ್, ಡ್ರಾಫ್ಟ್ಮನ್ (ಸಿವಿಲ್), ಎಲೆಕ್ಟ್ರಿಷಿಯನ್, ಫಿಟ್ಟರ್, ಪೇಂಟರ್, ಪ್ಲಂಬರ್, ಬ್ಲ್ಯಾಕ್ ಸ್ಮಿತ್, ವೆಲ್ಡರ್ ಇತ್ಯಾದಿ ಹುದ್ದೆಗಳಿಗೆ ಈ ನೇಮಕಾತಿ ನಡೆಯಲಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ಸಂಸ್ಥೆಯಿಂದ ಮಧ್ಯಂತರ ಅಥವಾ ತತ್ಸಮಾನ ಕೋರ್ಸ್‌ನೊಂದಿಗೆ 10 ನೇ ತರಗತಿಯನ್ನು ಕನಿಷ್ಠ 55 ಶೇಕಡಾ ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ರಾಷ್ಟ್ರೀಯ…

Read More

ಮಲೆನಾಡಿನಲ್ಲಿ ಮತ್ತೆ ಮಳೆರಾಯನ ಆರ್ಭಟ ಎಲೆಚುಕ್ಕಿ ರೋಗ ಹೆಚ್ಚಾಗುವ ಸಾಧ್ಯತೆ : ರೈತರಿಗೆ ಸಂಕಷ್ಟ NAMMUR EXPRESS NEWSತೀರ್ಥಹಳ್ಳಿ : ಮಲೆನಾಡಿನಲ್ಲಿ ಕೃಷಿ ಚಟುವಟಿಗೆ ಶುರುವಾಗುತ್ತಿದ್ದಂತೆ ಮಳೆರಾಯನ ಹಾವಳಿ ಕೂಡ ಶುರುವಾಗಿದೆ. ಹವಾಮಾನ ವೈಪರೀತ್ಯದಿಂದ ಮಲೆನಾಡಿನಲ್ಲಿ ಮಂಗಳವಾರ ಮಧ್ಯಾಹ್ನದ ವೇಳೆಗೆ ಮಳೆ ಶುರುವಾಗಿದ್ದು ರೈತರಿಗೆ ಎಲೆಚುಕ್ಕಿ ರೋಗದ ಜೊತೆ ಮಳೆ ಬರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಹೀಗೆ ಮಳೆ ಬಂದರೆ ಎಲ್ಲಾ ಬೆಳೆಗಳು ನಾಶವಾಗುವ ಸಾಧ್ಯತೆ ಇದೆ ಹಾಗೂ ಎಲೆಚುಕ್ಕಿ ರೋಗ ಹೆಚ್ಚಾಗಿ ಅಡಿಕೆ ಮರಗಳು ನಾಶವಾಗುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ.ಇನ್ನೂ ಗದ್ದೆಗಳಲ್ಲಿ ಭತ್ತದ ತೆನೆ ಬರುವ ಮೊದಲೇ ಹೀಗೆ ಮಳೆಬಂದರೆ ತೆನೆ ಕಡಿಮೆ ಆಗುತ್ತದೆ. ಇದರಿಂದ ಆಹಾರ ಆಭದ್ರತೆ ಉಂಟಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

Read More

2023ನೇ ಸಾಲಿನ ಸಾರ್ವತ್ರಿಕ ರಜೆಗಳೆಷ್ಟು? ರಜೆ ದಿನಗಳ ಪಟ್ಟಿ ಪ್ರಕಟಿಸಿದ ರಾಜ್ಯ ಸರಕಾರ NAMMUR EXPRESS NEWSಬೆಂಗಳೂರು: ಕರ್ನಾಟಕ ಸರಕಾರವು 2023ನೇ ಸಾಲಿಗೆ ಮಂಜೂರು ಮಾಡಿರುವ ಸಾರ್ವತ್ರಿಕ ಹಾಗೂ ಪರಿಮಿತ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ತಿಂಗಳ ಎಲ್ಲಾ ಎರಡನೇ ಶನಿವಾರ, ನಾಲ್ಕನೇ ಶನಿವಾರ ಮತ್ತು ಪ್ರತಿ ಭಾನುವಾರಗಳನ್ನು ಹೊರತುಪಡಿಸಿ 19 ದಿನಗಳ ರಜೆಯನ್ನು ಘೋಷಿಸಲಾಗಿದೆ.ಈ ಸಾರ್ವತ್ರಿಕ ರಜಾ ದಿನಗಳಲ್ಲಿ ರಾಜ್ಯಾದ್ಯಾಂತ ಸರಕಾರಿ ಕಚೇರಿಗಳು ಮುಚ್ಚಲ್ಪಡುತ್ತವೆ. ಮುಸಲ್ಮಾನ ಭಾಂದವರ ಹಬ್ಬಗಳು ನಿಗದಿತ ದಿನಾಂಕದಂದು ಆಚರಣೆ ಮಾಡದೇ ಇದ್ದಲ್ಲಿ ಬದಲಾದ ದಿನಗಳಂದು ರಜೆಯನ್ನು ಘೋಷಿಸಬಹುದಾಗಿದೆ. ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಪ್ರತ್ಯೇಕ ರಜಾದಿನಗಳ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಪ್ರಕಟಿಸಲಿದ್ದಾರೆ. ಸಾರ್ವತ್ರಿಕ ರಜಾ ದಿನಗಳ ಜೊತೆಗೆ ರಾಜ್ಯ ಸರ್ಕಾರಿ ನೌಕರರು ಎರಡು ದಿವಸಗಳಿಗೆ ಮೀರದಂತೆ 2023 ನೇ ವರ್ಷದಲ್ಲಿ ಅಧಿಸೂಚನೆ ಒಂದರ ಅನುಬಂಧದಲ್ಲಿ ತಿಳಿಸಿರುವ ಪರಿಮಿತ ರಜೆಯನ್ನು ಮುಂಚಿತವಾಗಿ ಅನುಮತಿ ಪಡೆದು ಉಪಯೋಗಿಸಿಕೊಳ್ಳಬಹುದಾಗಿದೆ. ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲು ಅಧಿಕಾರವುಳ್ಳ ಅಧಿಕಾರಿಗಳು…

Read More

ಕೆಲವು ಸಾಮಾಜಿಕ ಮಾಧ್ಯಮಗಳಿಂದ ಸುಳ್ಳು ಸುದ್ದಿ ಬಿತ್ತರ ಹಿನ್ನೆಲೆತೀರ್ಥಹಳ್ಳಿಯಲ್ಲಿ ವಿನಯ್ ಗುರೂಜಿ ಭಕ್ತವೃಂದದಿಂದ ಪೊಲೀಸ್ ಇಲಾಖೆಗೆ ಮನವಿ ಪತ್ರ NAMMUR EXPRESS NEWSತೀರ್ಥಹಳ್ಳಿ: ಶ್ರೀ ಅವಧೂತ ವಿನಯ್ ಗುರೂಜಿ ಅವರ ಬಗ್ಗೆ ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿರುವುದು ಮತ್ತು ಮಠದ, ಹಿಂದೂ ಭಾವನೆಗಳಿಗೆ ಧಕ್ಕೆ ತರುತ್ತಿರುವುದರಿಂದ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸರ್ಕಾರ, ಪೊಲೀಸ್ ಇಲಾಖೆಗೆ ತೀರ್ಥಹಳ್ಳಿ ಶ್ರೀ ವಿನಯ್ ಗುರೂಜಿ ಭಕ್ತ ವೃಂದ ಮನವಿ ಮಾಡಿದೆ.ತೀರ್ಥಹಳ್ಳಿ ಗುರೂಜಿ ಪ್ರತಿ ದಿನ ಸಾವಿರಾರು ಮಂದಿಗೆ ಸಹಾಯ ಮಾಡುತ್ತಿದ್ದಾರೆ. ಅರೋಗ್ಯ, ಶಿಕ್ಷಣ, ಅನಾಥ ಆಶ್ರಮ, ಗೋ ಶಾಲೆ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿದ್ದಾರೆ. ಗುರೂಜಿ ಮತ್ತು ಮಠದ ಏಳಿಗೆ ಸಹಿಸಲಾಗದೆ ಈ ಷಡ್ಯಂತ್ರ ಮಾಡಲಾಗುತ್ತಿದೆ. ಆದರೆಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಹಾಗೂ ಸುದ್ದಿ ಪ್ರಕಟ ಮಾಡಲಾಗುತ್ತಿದೆ. ಇದರಿಂದಾಗಿ ವಿನಯ್ ಗುರೂಜಿ ಅವರ ಲಕ್ಷಾಂತರ ಭಕ್ತರ ಮನಸಿಗೆ ನೋವು ಉಂಟು ಮಾಡಿದೆ. ಅಲ್ಲದೆ ಹಿಂದೂ ಧರ್ಮದ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ. ಹೀಗಾಗಿ ಸಾಮಾಜಿಕ…

Read More