Author: Nammur Express Admin

ಪುಸ್ತಕ ಬರೆಯುವ, ಓದುವವರಿಗೆ ನಮ್ಮ ಸೇವೆ ಇಂದು ಪುಸ್ತಕ ದಿನ.. ಪುಸ್ತಕ ಓದುವ ಹವ್ಯಾಸ ಕಡಿಮೆಯಾಗುತ್ತಿದ್ದು, ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕಿದೆ..! ನಮ್ಮೂರ್ ಎಕ್ಸ್ ಪ್ರೆಸ್ ಮಾಧ್ಯಮ ಸಂಸ್ಥೆ ಇನ್ನು ಪುಸ್ತಕ, ಮ್ಯಾಗ್ ಜಿನ್, ವಿಶೇಷ ಬರಹಗಳ ವಿಮರ್ಶೆ ಪ್ರಕಟ ಮಾಡಲಿದೆ. ಜೊತೆಗೆ ಪುಸ್ತಕ ಬರೆಯುವ, ಮುದ್ರಣ ಮಾಡುವ, ಪುಸ್ತಕವನ್ನು ಪ್ರಚಾರ ಮಾಡುವ, ಓದುಗರಿಗೆ ಪುಸ್ತಕದ ಬಗ್ಗೆ ಮಾಹಿತಿ ನೀಡುವ ಕೆಲಸಕ್ಕೆ ಮುನ್ನುಡಿ ಬರೆಯಲಿದೆ. ಈ ಮೂಲಕ ಜನತೆಗೆ ಪುಸ್ತಕ ಓದುವ ಅಭಿರುಚಿ ಬೆಳೆಸಲು ಸಣ್ಣ ಪ್ರಯತ್ನ ಮಾಡಲಿದೆ. ಪುಸ್ತಕ ವಿಮರ್ಶೆ, ಪ್ರಚಾರ, ಡಿಸೈನ್ ಅಂಡ್ ಪ್ರಿಂಟ್, ಪಬ್ಲಿಶ್ ಸೇವೆಗೆ ಸಂಪರ್ಕಿಸಿ: 9483937620( ವಾಟ್ಸಾಪ್ ಮಾಡಿ) ಪುಸ್ತಕ ದಿನದಿಂದ ವಿಶೇಷ ಸೇವೆ..! ಸಮಸ್ತ ಜನತೆ ಪುಸ್ತಕ ಓದುವ, ಬರೆಯುವ ಮೂಲಕ ಪುಸ್ತಕ ದಿನ ಆಚರಣೆ ಮಾಡೋಣ..!

Read More

ಬೈಕ್ ಟ್ಯಾಂಕ್ ಮೇಲೆ ಕುಳಿತು ಕಿಸ್: ಜನರಿಂದ ವಿಡಿಯೋ ವೈರಲ್ NAMMUR EXPRESS NEWSಚಾಮರಾಜನಗರ: ಚಲಿಸುವ ಬೈಕ್ ಮೇಲೆ ರೊಮಾನ್ಸ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಮರಾಜನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲು ಮಾಡಿಕೊಂಡಿದ್ದು, ಬೈಕ್ ಹಾಗೂ ಯುವಕನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.ಅಜಾಗರೂಕ, ಹೆಲ್ಮೆಟ್ ರಹಿತ, ಅಪಾಯಕಾರಿ ಚಾಲನೆ ಮೂಲಕ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಚಲಿಸುವ ಬೈಕ್ ಮೇಲೆ ರಸ್ತೆಯಲ್ಲಿ ರೊಮಾನ್ಸ್ ಮಾಡಿದ ಪ್ರೇಮಿಗಳ ವಿಡಿಯೊಗೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎಚ್.ಡಿ.ಕೋಟೆ ಶಿವಪುರ ಗ್ರಾಮದ ಸ್ವಾಮಿ ವಿರುದ್ಧ ಪ್ರಕರಣ ದಾಖಲು‌ ಮಾಡಿಕೊಂಡಿದ್ದಾರೆ. ವಿಚಾರಣೆ ವೇಳೆ ಯುವತಿ ಜೊತೆಗೆ ಜಾಲಿ ರೈಡ್ ಬಂದಿದ್ದಾಗಿ ಸ್ವಾಮಿ ಒಪ್ಪಿಕೊಂಡಿದ್ದಾರೆ.ನಡುರಸ್ತೆಯಲ್ಲಿ ಇವರಿಬ್ಬರ ರೊಮಾನ್ಸ್​ನ ವಿಡಿಯೊ ಭಾರಿ ವೈರಲ್ ಆಗಿತ್ತು. ಪೆಟ್ರೋಲ್ ಟ್ಯಾಂಕ್ ಮೇಲೆ ಯುವತಿಯನ್ನು ಕೂರಿಸಿಕೊಂಡು ರೈಡ್ ಮಾಡಿ ಯುವಕ ತನ್ನ ಪ್ರೀತಿ ಪ್ರದರ್ಶನ ಮಾಡಿದ್ದ.

Read More

ತೋಟದಲ್ಲಿದ್ದಾಗ ಘಟನೆ: ಅಭಿಮಾನಿಗಳ ಕಣ್ಣೀರುಮೂರು ಪಕ್ಷದ ಜಿಲ್ಲಾ ಅಧ್ಯಕ್ಷರಾಗಿದ್ದ ನಾಯಕ! NAMMUR EXPRESS NEWSಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಮಾಜಿ ಅದ್ಯಕ್ಷರು ಹಾಗೂ 2 ಬಾರಿ ಕಾಫಿ ಮಂಡಳಿ ಅದ್ಯಕ್ಷರು ಆಗಿದ್ದ ಎಂ ಎಸ್ ಭೋಜೆಗೌಡರು ಹೆಜ್ಜೇನಿನ ದಾಳಿಯಿಂದಶನಿವಾರ ಮರಣ ಹೊಂದಿದ್ದಾರೆ.ಕಾಫಿ ಮಂಡಳಿ ಮಾಜಿ ಅಧ್ಯಕ್ಷ ಎಂ.ಎಸ್. ಬೋಜೇಗೌಡ(73) ಮೃತರು. ಅರಶಿನಗುಪ್ಪೆ ಸಮೀಪದ ಕೃಷ್ಣಗಿರಿ ಕಾಫಿ ತೋಟದಲ್ಲಿ ಈ ದುರ್ಘಟನೆ ಸಂಭವಿಸಿದೆ. ಒಮ್ಮೆಲೆ ನೂರಾರು ಜೇನು ನೊಣಗಳು ದಾಳಿ ಮಾಡಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಬೋಜೇಗೌಡರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ ಮಾರ್ಗಮಧ್ಯೆಯೇ ಕೊನೆಯುಸಿರೆಳೆದರು.ಎರಡು ಬಾರಿ ಬೋಜೇಗೌಡರು ಕಾಫಿ ಮಂಡಳಿ ಅಧ್ಯಕ್ಷರಾಗಿದ್ದರು. ಎರಡು ಭಾರಿ ಬಿಜೆಪಿ ಜಿಲ್ಲಾ ಅಧ್ಯಕ್ಷರು ಕೂಡ ಆಗಿದ್ದರು. ಒಂದು ಬಾರಿ ಜನತಾ ಪಕ್ಷದ ಜಿಲ್ಲಾಧ್ಯಕ್ಷರಾಗಿದ್ದರು. ಒಮ್ಮೆ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು.ಜಿಲ್ಲೆಯ ಎಲ್ಲಾ ನಾಯಕರು ಇವರ ಸಾವಿಗೆ ಕಂಬನಿ ಮಿಡಿದಿದ್ದಾರೆ.

Read More

ಮೇ 16ರಂದು ಶಾಲೆಗಳು ಪುನರಾರಂಭಕರೋನಾ ಮಾರ್ಗಸೂಚಿ ಮರೆತ ಸರ್ಕಾರ..!? NAMMUR EXPRESS NEWSಬೆಂಗಳೂರು: ಕರ್ನಾಟಕದಲ್ಲಿ ಶೈಕ್ಷಣಿಕ ವೇಳಾಪಟ್ಟಿ ಬಿಡುಗಡೆಗೊಂಡಿದ್ದು ಮೇ 16ರಂದು ಶಾಲೆಗಳು ಆರಂಭವಾಗಲಿವೆ.ಶೈಕ್ಷಣಿಕ ವರ್ಷದಲ್ಲಿ 60 ಸರ್ಕಾರಿ ರಜಾ ದಿನಗಳಿದ್ದು 270 ದಿನಗಳನ್ನು ಶೈಕ್ಷಣಿಕ ಚಟುವಟಿಕೆಗಳಿಗೆ ಮೀಸಲಿಡಲಾಗಿದೆ. ದಸರಾಗೆ 14 ದಿನ ರಜೆ ಘೋಷಿಸಲಾಗಿದೆ. ಪಠ್ಯೇತರ ಚಟುವಟಿಕೆಗಳಿಗೆ 10 ದಿನ, ಪರೀಕ್ಷೆ ಮತ್ತು ಸಿಸಿ ಮೌಲ್ಯಂಕ ವಿಶ್ಲೇಷಣೆ 12 ದಿನ ನೀಡಲಾಗಿದ್ದು ಪ್ರಸಕ್ತ ವರ್ಷದ ಬೋಧನಾ ಕಲಿಕೆ ಪ್ರಕ್ರಿಯೆ 228 ದಿನ ಇರಲಿದೆ.ಕರೋನಾ ಕಾರಣದಿಂದ 3 ವರ್ಷಗಳಿಂದ ಪೂರ್ಣ ಪ್ರಮಾಣದಲ್ಲಿ ತರಗತಿ ನಡೆಸಲು ಆಗಿರಲಿಲ್ಲ, ಶಾಲಾ ಕರ್ತವ್ಯದ ಮೊದಲನೆ ಅವಧಿ ಮೇ 16ರಿಂದ ಅ.2 ರ ವರೆಗೆ ಇರಲಿದೆ ಎರಡನೇ ಅವಧಿ ಅ.17 ನಿಂದ 2023ರ ಎ.10 ರ ವರೆಗೆ ಇರಲಿದೆ. ಅ.3 ರಿಂದ 16 ರವರೆಗೆ ದಸರಾ ರಜೆ ಇರಲಿದ್ದು, ಎ.11 ರಿಂದ ಮೇ 28ರವರೆಗೆ ಬೇಸಿಗೆ ರಜೆ ಇರಲಿದೆ. ಸರ್ಕಾರದ ನಿಯಮವೇನು..? ಮಕ್ಕಳ ಶಾಲಾ ಪ್ರವೇಶಾತಿಯನ್ನು ಮೇ…

Read More

ಮಂಜುನಾಥ್ ಭಂಡಾರಿ, ಮಧು ಬಂಗಾರಪ್ಪ, ಕಲಗೋಡು ರತ್ನಾಕರ್, ಶಿವಕುಮಾರ್, ರಾಜನಂದಿನಿಗೆ ಹುದ್ದೆ NAMMUR EXPRESS NEWSಶಿವಮೊಗ್ಗ: ಕೆಪಿಸಿಸಿ ಪ್ರಕಟಿಸಿದ ಪದಾಧಿಕಾರಿಗಳ ಪಟ್ಟಿಯಲ್ಲಿ ಶಿವಮೊಗ್ಗ ಜಿಲ್ಲೆಯ ಐವರು ಸೇರ್ಪಡೆಯಾಗಿದ್ದಾರೆ.ಕೆಪಿಸಿಸಿ ನೂತನ ಉಪಾಧ್ಯಕ್ಷರಾಗಿ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ,ಮಾಜಿ ಶಾಸಕ ಮಧು ಬಂಗಾರಪ್ಪ ನೇಮಕಗೊಂಡಿದ್ದಾರೆ.ಪ್ರಧಾನ ಕಾರ್ಯದರ್ಶಿಗಳಾಗಿ ಮಾಜಿ ಜಿ.ಪಂ ಸದಸ್ಯ ಕಲಗೋಡು ರತ್ನಾಕರ್,ನಿವೃತ್ತ ಪೊಲೀಸ್ ಅಧಿಕಾರಿ ಪಿ.ಓ ಶಿವಕುಮಾರ್, ಕಾಗೋಡು ರಾಜನಂದಿನಿ ನೇಮಕಗೊಂಡಿದ್ದಾರೆ.ನೂತನವಾಗಿ ನೇಮಕಗೊಂಡಿರುವ ಪದಾಧಿಕಾರಿಗಳನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಭದ್ರಾವತಿ ಶಾಸಕ ಬಿ.ಕೆ ಸ೦ಗಮೇಶ್, ರಾಜ್ಯ ಕಾಂಗ್ರೆಸ್ ಮುಖಂಡರಾದ ಕಿಮ್ಮನೆ ರತ್ನಾಕರ್, ಡಾ.ಆರ್‌.ಎಂ ಮಂಜುನಾಥ ಗೌಡ, ಸಾಗರದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ಘಟಕದ ಅಧ್ಯಕ್ಷ ರಮೇಶ್ ಇಕ್ಕೇರಿ,ಭದ್ರಾವತಿ ಗ್ರಾಮಾಂತರ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ರಮೇಶ್ ಶಂಕರಘಟ್ಟ ಶಿವಮೊಗ್ಗದ ಕಾಂಗ್ರೆಸ್ ಮುಖಂಡ ಜಿ.ಡಿ ಮಂಜುನಾಥ ಅಭಿನಂದಿಸಿದ್ದಾರೆ.

Read More

ಸ್ಥಳಿಯರಿಂದ ಧರ್ಮದೇಟು: ಪೊಲೀಸರ ರಕ್ಷಣೆಆನೇಕಲ್ ಬಳಿ ನಡೆದ ಘಟನೆ: ಊಟಕ್ಕಾಗಿ ವೇಷದೇಶದ ನಿರುದ್ಯೋಗ ಸಮಸ್ಯೆ ಅನಾವರಣ…! NAMMUR EXPRESS NEWSಆನೇಕಲ್: ಆತ ಅಲ್ಪ ಸ್ವಲ್ಪ ಓದಿದ್ದ.. ಬಾಗಲಕೋಟೆಯಿಂದ ರೈಲು ಹತ್ತಿ ಬೆಂಗಳೂರಲ್ಲಿ ಕೆಲಸ ಹುಡುಕಿ ಬಂದಿದ್ದ.. ಆದರೆ ರಾಜಧಾನಿಯಲ್ಲಿ ಎಷ್ಟು ಅಲೆದಾಟ ನಡೆಸಿದರೂ ಕೆಲಸ ಸಿಗಲಿಲ್ಲ. ಹೊಟ್ಟೆಪಾಡಿಗೆ ದಾರಿ ಕಾಣದೆ ಕೊನೆಗೆ ಆನೇಕಲ್ ಬಳಿ ಸೀರೆ ಉಟ್ಟು ಭಿಕ್ಷೆ ಬೇಡಿ ಹೊಟ್ಟೆ ಹೊರೆಯುತ್ತಿದ್ದ. ಈತನ ಮುಖವಾಡ ಯಾರಿಗೋ ಗೊತ್ತಾಗಿದೆ.ಹೀಗೆ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಯುವಕ ಸೀರೆಯುಟ್ಟ ಯುವಕನನ್ನು ನೋಡಿ ಹಿಡಿದು ಕಟ್ಟಿಹಾಕಿದ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ಪಟ್ಟಣದ ಎಸ್ ಆರ್ ಆರ್ ಬಡಾವಣೆಯ ನಿವಾಸಿಗಳು ಆತನಿಗೆ ಧರ್ಮದೇಟು ನೀಡಿದ್ದಾರೆ. ಕೊನೆಗೆ ಪೊಲೀಸರು ಮಧ್ಯ ಪ್ರವೇಶ ಮಾಡಿ ರಕ್ಷಣೆ ಮಾಡಿದ್ದಾರೆ. ಆತ ಪೊಲೀಸರ ಬಳಿಯೂ ಊಟಕ್ಕಾಗಿ ಈ ಕೆಲಸ ಮಾಡಿದ್ದೇನೆ ಎಂದಿದ್ದಾನೆ.ಏನಿದು ಘಟನೆ?: ಬಾಗಲಕೋಟೆ ಮೂಲದ ಯುವಕ ಸೀರೆ ಕುಪ್ಪಸ ತೊಟ್ಟು ಮಂಗಳವಾರ ರಾತ್ರಿ ಬಡಾವಣೆ ಅಕ್ಕಪಕ್ಕದಲ್ಲಿ ಓಡಾಡುತ್ತಿದ್ದ. ಯುವಕನ ಹಾವಭಾವ ನೋಡಿ…

Read More

ರಾಜೀನಾಮೆಗೆ ಹೈಕಮಾಂಡ್ ಸೂಚನೆ: ಈಶ್ವರಪ್ಪ ವಿವರಣೆಗೆ ಹೈಕಮಾಂಡ್ ಗರಂರಾಜ್ಯದಲ್ಲಿ ಹೆಚ್ಚಾದ ಆಕ್ರೋಶ NAMMUR EXPRESS NEWSಬೆಂಗಳೂರು: ಉಡುಪಿ ಲಾಡ್ಜ್ ನಲ್ಲಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಕೆ.ಎಸ್ ಈಶ್ವರಪ್ಪ ಹೆಸರು ಕೇಳಿಬರುತ್ತಿದ್ದಂತೆಯೇ ಬಿಜೆಪಿ ಹೈಕಮಾಂಡ್ ಗರಂ ಆಗಿದ್ದು, ರಾಜೀನಾಮೆ ನೀಡುವಂತೆ ಸೂಚನೆ ನೀಡಿದೆ.ಹೈಕಮಾಂಡ್ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಬುಧವಾರ ಸಂಜೆ ಸಚಿವ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆ ನೀಡುವ ಸಾಧ್ಯತೆ ಇದೆ. ಅಲ್ಲದೆ ಹೈಕಮಾಂಡ್ ಸೂಚನೆ ಬೆನ್ನಲ್ಲೇ ಸಚಿವರು ಮೈಸೂರು ಪ್ರವಾಸ ಮೊಟಕುಗೊಳಿಸಿ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಬುಧವಾರ ಮಧ್ಯಾಹ್ನ ಸಿಎಂ ಭೇಟಿಯಾಗಿ ರಾಜೀನಾಮೆ ಸಲ್ಲಿಕೆ ಮಾಡುವ ಸಾಧ್ಯತೆಗಳಿವೆ. ಇತ್ತ ಮಂಗಳೂರು ಪ್ರವಾಸದಲ್ಲಿರುವ ಸಿಎಂ ಮಧ್ಯಾಹ್ನ ರಾಜಧಾನಿಗೆ ವಾಪಸ್ಸಾಗಲಿದ್ದಾರೆ.ಕಳೆದ ರಾತ್ರಿ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರು ದೆಹಲಿಯಲ್ಲಿ ಅಮಿತ್ ಶಾ ಜೊತೆ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಕುರಿತು ಚರ್ಚೆ ನಡೆಸಿದ್ದಾರೆ. ಪ್ರಕರಣ ರಾಜ್ಯದಲ್ಲಿ ಸರ್ಕಾರ ಮತ್ತು ಪಕ್ಷದ ಮೇಲೆ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಮಾಹಿತಿ…

Read More

ಸಂತೋಷ್ ಆತ್ಮಹತ್ಯೆಗೆ ಈಶ್ವರಪ್ಪ ಕಾರಣ: ಗುತ್ತಿಗೆ ದಾರರ ಸಂಘ: 1 ತಿಂಗಳು ಕೆಲಸ ಮಾಡಲ್ಲ..!ರಾಜ್ಯದ ಅನೇಕ ಬಿಜೆಪಿ ಸಚಿವರು, ಶಾಸಕರು ಗುತ್ತಿಗೆ ಕಾಂಟ್ರಾಕ್ಟ್ ಪಡೆದು ಗೋಲ್ ಮಾಲ್ಭ್ರಷ್ಟಾಚಾರ ಬಯಲು ಮಾಡಿದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ NAMMUR EXPRESS NEWSಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಎಲ್ಲಾ ಕಡೆ ಕಮಿಷನ್ ವಂಚನೆ ಆಗುತ್ತಿದೆ. ಸಿಎಂ ಕಚೇರಿ ಕೂಡ ಭ್ರಷ್ಟಾಚಾರದ ಕೇಂದ್ರವಾಗಿದೆ. ಬಿಜೆಪಿ ಶಾಸಕರು, ಸಚಿವರು ಕೂಡ ಭ್ರಷ್ಟಾಚಾರ ಮಾಡುತ್ತಿದ್ದೂ ಅವರ ಕುಟುಂಬದವರೇ ಟೆಂಡರ್ ಹಿಡಿಯುತ್ತಿದ್ದಾರೆ. 5% ಕೊಡದಿದ್ದರೆ ಟೆಂಡರ್ ಕೊಡಲ್ಲ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪಿಸಿದ್ದಾರೆ.ಸಂತೋಷ್ ಪಾಟೀಲ್ ಆತ್ಮಹತ್ಯೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಗುತ್ತಿಗೆದಾರರ ಸಂಘದಿಂದ ಮಹತ್ವದ ಸಭೆ ನಡೆಸಿ ಮಾತನಾಡಿದ ಅವರು, 15 ದಿನಗಳ ಒಳಗೆ ದಾಖಲೆ ಬಿಡುಗಡೆ ಮಾಡಲಾಗುವುದು. 1 ತಿಂಗಳು ಎಲ್ಲಾ ಕಡೆ ಕೆಲಸ ಬಹಿಷ್ಕಾರ ಮಾಡಲಾಗುವುದು ಎಂದು ಎಚ್ಚರಿಸಿದರು. ಶಿವಮೊಗ್ಗಕ್ಕೆ ಆಗಮಿಸಿದ ಈಶ್ವರಪ್ಪ!:ಗುತ್ತಿಗೆದಾರ, ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ್…

Read More

ಉಡುಪಿಯಲ್ಲಿ ಪ್ರಕರಣ ದಾಖಲು: ಮೊದಲ ಆರೋಪಿಈಶ್ವರಪ್ಪ ವಿರುದ್ಧ ಕುಟುಂಬಸ್ಥರ ಆಕ್ರೋಶ NAMMUR EXPRESS NEWSಉಡುಪಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಆತ್ಮಹತ್ಯೆ ಮಾಡಿಕೊಂಡಿರುವ ಸಂತೋಷ್ ಪಾಟೀಲ್ ಸಹೋದರ ಪ್ರಶಾಂತ್ ಅವರು ಉಡುಪಿ ನಗರ ಪೊಲೀಸ್ ಠಾಣೆಗೆ ಮಧ್ಯರಾತ್ರಿ ಆಗಮಿಸಿದ್ದು, ನನ್ನ ತಮ್ಮನ ಸಾವಿಗೆ ಈಶ್ವರಪ್ಪ ಕಾರಣ ಎಂದು ದೂರು ನೀಡಿದ್ದಾರೆ. ಸಾವಿಗೆ ಪ್ರಚೋದನೆ ನೀಡಿದ ಆರೋಪದ ಹಿನ್ನೆಲೆಯಲ್ಲಿ IPC-306, 34ರ ಅಡಿಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಆಪ್ತರಾಗಿರುವ ಬಸವರಾಜ್ ಹಾಗೂ ರಮೇಶ್ ಅವರ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.ಗುತ್ತಿಗೆದಾರ ಸಂತೋಷ್ ಪಾಟೀಲ್ ತನ್ನ ಸ್ನೇಹಿತರ ಜೊತೆಗೆ ಉಡುಪಿಗೆ ಪ್ರವಾಸಕ್ಕೆ ಬಂದಿದ್ದು, ಈ ವೇಳೆಯಲ್ಲಿ ನಗರದ ಲಾಡ್ಜ್ ವೊಂದರಲ್ಲಿ ತಂಗಿದ್ದರು. ಲಾಡ್ಜ್ ರೂಂನಲ್ಲಿ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಸಂತೋಷ್ ಡೆತ್‌ನೋಟ್ ಬರೆದಿಟ್ಟಿದ್ದು, ಅದರಲ್ಲಿ ತನ್ನ ಸಾವಿಗೆ ಸಚಿವ ಈಶ್ವರಪ್ಪ ಕಾರಣ ಎಂದು ಉಲ್ಲೇಖಿಸಿದ್ದರು.…

Read More