Categories
ಮಲ್ನಾಡ್

ಹೆಜ್ಜೇನು ದಾಳಿಗೆ ಚಿಕ್ಕಮಗಳೂರು ಬಿಜೆಪಿ ನಾಯಕ ಬಲಿ

  • ತೋಟದಲ್ಲಿದ್ದಾಗ ಘಟನೆ: ಅಭಿಮಾನಿಗಳ ಕಣ್ಣೀರು
  • ಮೂರು ಪಕ್ಷದ ಜಿಲ್ಲಾ ಅಧ್ಯಕ್ಷರಾಗಿದ್ದ ನಾಯಕ!

NAMMUR EXPRESS NEWS
ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಮಾಜಿ ಅದ್ಯಕ್ಷರು ಹಾಗೂ 2 ಬಾರಿ ಕಾಫಿ ಮಂಡಳಿ ಅದ್ಯಕ್ಷರು ಆಗಿದ್ದ ಎಂ ಎಸ್ ಭೋಜೆಗೌಡರು ಹೆಜ್ಜೇನಿನ ದಾಳಿಯಿಂದಶನಿವಾರ ಮರಣ ಹೊಂದಿದ್ದಾರೆ.
ಕಾಫಿ ಮಂಡಳಿ ಮಾಜಿ ಅಧ್ಯಕ್ಷ ಎಂ.ಎಸ್. ಬೋಜೇಗೌಡ(73) ಮೃತರು. ಅರಶಿನಗುಪ್ಪೆ ಸಮೀಪದ ಕೃಷ್ಣಗಿರಿ ಕಾಫಿ ತೋಟದಲ್ಲಿ ಈ ದುರ್ಘಟನೆ ಸಂಭವಿಸಿದೆ. ಒಮ್ಮೆಲೆ ನೂರಾರು ಜೇನು ನೊಣಗಳು ದಾಳಿ ಮಾಡಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಬೋಜೇಗೌಡರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ ಮಾರ್ಗಮಧ್ಯೆಯೇ ಕೊನೆಯುಸಿರೆಳೆದರು.
ಎರಡು ಬಾರಿ ಬೋಜೇಗೌಡರು ಕಾಫಿ ಮಂಡಳಿ ಅಧ್ಯಕ್ಷರಾಗಿದ್ದರು. ಎರಡು ಭಾರಿ ಬಿಜೆಪಿ ಜಿಲ್ಲಾ ಅಧ್ಯಕ್ಷರು ಕೂಡ ಆಗಿದ್ದರು. ಒಂದು ಬಾರಿ ಜನತಾ ಪಕ್ಷದ ಜಿಲ್ಲಾಧ್ಯಕ್ಷರಾಗಿದ್ದರು. ಒಮ್ಮೆ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು.
ಜಿಲ್ಲೆಯ ಎಲ್ಲಾ ನಾಯಕರು ಇವರ ಸಾವಿಗೆ ಕಂಬನಿ ಮಿಡಿದಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.