Categories
ಬೆಂಗಳೂರು

ಬೈಕಲ್ಲಿ ರೊಮಾನ್ಸ್: ಯುವಕ ಅರೆಸ್ಟ್!

  • ಬೈಕ್ ಟ್ಯಾಂಕ್ ಮೇಲೆ ಕುಳಿತು ಕಿಸ್: ಜನರಿಂದ ವಿಡಿಯೋ ವೈರಲ್

NAMMUR EXPRESS NEWS
ಚಾಮರಾಜನಗರ: ಚಲಿಸುವ ಬೈಕ್ ಮೇಲೆ ರೊಮಾನ್ಸ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಮರಾಜನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲು ಮಾಡಿಕೊಂಡಿದ್ದು, ಬೈಕ್ ಹಾಗೂ ಯುವಕನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಅಜಾಗರೂಕ, ಹೆಲ್ಮೆಟ್ ರಹಿತ, ಅಪಾಯಕಾರಿ ಚಾಲನೆ ಮೂಲಕ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಚಲಿಸುವ ಬೈಕ್ ಮೇಲೆ ರಸ್ತೆಯಲ್ಲಿ ರೊಮಾನ್ಸ್ ಮಾಡಿದ ಪ್ರೇಮಿಗಳ ವಿಡಿಯೊಗೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎಚ್.ಡಿ.ಕೋಟೆ ಶಿವಪುರ ಗ್ರಾಮದ ಸ್ವಾಮಿ ವಿರುದ್ಧ ಪ್ರಕರಣ ದಾಖಲು‌ ಮಾಡಿಕೊಂಡಿದ್ದಾರೆ. ವಿಚಾರಣೆ ವೇಳೆ ಯುವತಿ ಜೊತೆಗೆ ಜಾಲಿ ರೈಡ್ ಬಂದಿದ್ದಾಗಿ ಸ್ವಾಮಿ ಒಪ್ಪಿಕೊಂಡಿದ್ದಾರೆ.
ನಡುರಸ್ತೆಯಲ್ಲಿ ಇವರಿಬ್ಬರ ರೊಮಾನ್ಸ್​ನ ವಿಡಿಯೊ ಭಾರಿ ವೈರಲ್ ಆಗಿತ್ತು. ಪೆಟ್ರೋಲ್ ಟ್ಯಾಂಕ್ ಮೇಲೆ ಯುವತಿಯನ್ನು ಕೂರಿಸಿಕೊಂಡು ರೈಡ್ ಮಾಡಿ ಯುವಕ ತನ್ನ ಪ್ರೀತಿ ಪ್ರದರ್ಶನ ಮಾಡಿದ್ದ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.