ಮಂಗಳೂರು, ಶಿವಮೊಗ್ಗ, ತೀರ್ಥಹಳ್ಳಿ ರೌಂಡ್ಸ್ಮಂಗಳವಾರ ರಾತ್ರಿ ಬೆಂಗಳೂರಿಗೆ ಪಯಣ NAMMUR EXPRESSತೀರ್ಥಹಳ್ಳಿ: ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತವರು ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಿ, ಸರಣಿ ಸಭೆ, ಅಧಿಕಾರಿಗಳ ಜತೆ meeting, ಪಕ್ಷದ ನಾಯಕರ ಜತೆ ಸಭೆ, ಅಭಿಮಾನಿಗಳ ಜತೆ ಮಾತುಕತೆ, ಅಹವಾಲು ಸ್ವೀಕಾರ, ಅಭಿಮಾನಿಗಳ ಸನ್ಮಾನ ಸ್ವೀಕರಿಸುವ ಮೂಲಕ ಮಲೆನಾಡು ರೌಂಡ್ಸ್ ಹಾಕುತ್ತಿದ್ದಾರೆ.ಮಂಗಳೂರು ಪೊಲೀಸ್ ಇಲಾಖೆ ಅಧಿಕಾರಿಗಳ ಭೇಟಿ ಮಾಡಿದ ಆರಗ ಶಿವಮೊಗ್ಗದಲ್ಲಿ ಈಶ್ವರಪ್ಪ,ರಾಘವೇಂದ್ರ ಸೇರಿದಂತೆ ಜನಪ್ರತಿನಿದಿಗಳು, ಅಧಿಕಾರಿಗಳ ಸಭೆ ನಡೆಸಿದರು. ಹುಂಚ, ಅಮೃತ ಈಡಿಗ ಮಠಕ್ಕೆ ಭೇಟಿ ನೀಡಿ ಬಳಿಕತೀರ್ಥಹಳ್ಳಿಯಲ್ಲಿ ಎಪಿಎಂಸಿ ಕಾರ್ಯಕ್ರಮ, ಬಳಿಕ ಇಂಜಿನಿಯರ್ ಪ್ರಗತಿ ಪರಿಶೀಲನೆ ಸಭೆ, ಬಳಿಕ ಪಕ್ಷದ ಸಂಘಟನಾ ಸಭೆ ನಡೆಸಿ ಮನೆಗೆ ತೆರಳಿದರು.ಭಾನುವಾರ ಬೆಳಿಗ್ಗೆಯಿಂದಲೇ ಗುಡ್ಡೆಕೊಪ್ಪದ ನಿವಾಸದಲ್ಲಿ ಅಭಿಮಾನಿಗಳು, ಕಾರ್ಯಕರ್ತರ ಜತೆ ಮಾತುಕತೆ ನಡೆಸಿದ್ದಾರೆ. ಸೋಮವಾರ ಗೋಪಾಲ ಗೌಡ ರಂಗ ಮಂದಿರದಲ್ಲಿ 10:30ಕ್ಕೆ ಮಳೆ ಹಾನಿ, ಕೋವಿಡ್ ಹಾನಿ, ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನ ಸಭೆ ನಡೆಸಲಿದ್ದಾರೆ.ಮಂಗಳವಾರ ರಾತ್ರಿ…
Author: Nammur Express Admin
ಸಹೋದರ ಸಹೋದರಿಯರ ಮೆಚ್ಚಿನ ಹಬ್ಬಪ್ರೀತಿ ಪಾತ್ರರ ನೆನಪಲ್ಲಿ ಗಿಡ ನೆಡಿ..!ನಮ್ಮೂರ್ ಎಕ್ಸ್ಪ್ರೆಸ್ ಶುಭಾಶಯಗಳು NAMMUR EXPRESSನಾಡಿನ ಸಮಸ್ತ ಜನತೆಗೆ ರಕ್ಷಾ ಬಂಧನ ಹಬ್ಬದ ಶುಭಾಶಯಗಳು.ಸಹೋದರ-ಸಹೋದರಿಯರ ಈ ಹಬ್ಬದ ಸಡಗರ ಬರೀ ಆಚರಣೆ ಆಗದೆ ಒಂದು ಮಹತ್ವದ ದಿನವಾಗಲಿ..!ತಮ್ಮ ಸಹೋದರ ಸಹೋದರಿಯರ ಪವಿತ್ರ ಬಾಂಧವ್ಯದ ನೆನಪಿಗೆ ಒಂದು ಗಿಡ ನೆಟ್ಟು ವಿಭಿನ್ನವಾಗಿ ಆಚರಿಸಿ..!ರಕ್ಷಾ ಬಂಧನ ಎಲ್ಲಾ ಕಡೆ ಆಚರಣೆ ಮಾಡಲಾಗುತ್ತಿದೆ. ಪವಿತ್ರ ಹಬ್ಬದಂದು ಸಹೋದರರಿಗೆ ರಾಖಿ ಕಟ್ಟಿ ಬಾಂಧವ್ಯ ಮೆರೆಯಲಾಗುತ್ತದೆ.ಎಲ್ಲಾ ಅಣ್ಣ ತಮ್ಮ, ಅಕ್ಕ ತಂಗಿಯರಿಗೆ ಹಬ್ಬದ ಶುಭಾಶಯಗಳು. ಮುಂದಿನ ತಲೆಮಾರಿಗೂ ಪರಿಸರ ಉಳಿಸುವ ಅಭಿಯಾನದೊಂದಿಗೆ ತಮ್ಮ ಅಕ್ಕ ತಮ್ಮ ಅಣ್ಣ ತಂಗಿ ನೆನಪಲ್ಲಿ ಅವರ ಹೆಸರಲ್ಲಿ ಮನೆ ಅಥವಾ ನಿಮ್ಮ ತೋಟ, ಜಾಗದಲ್ಲಿ ಒಂದು ಗಿಡ ನೆಟ್ಟು ಬೆಳೆಸಿ. ಮುಂದಿನ ವರ್ಷದ ರಾಖಿ ಆ ಗಿಡಡೆದುರು ಕಟ್ಟಿ ಇದು ನಮ್ಮ ಅಭಿಯಾನ.ಗಿಡ ನೆಟ್ಟು ರಾಖಿ ಕಟ್ಟಿ nammur express ಮಾಧ್ಯಮದ 9481949101 ಸಂಖ್ಯೆಗೆ ನಿಮ್ಮ ಹೆಸರು,ಊರು ವಾಟ್ಸಾಪ್ ಮಾಡಿ..!ರಾಜ್ಯದ, ಮಲೆನಾಡಿನ ಎಲ್ಲಾ…
ಆ.20ರಿಂದ ಸುವರ್ಣಾದಲ್ಲಿ ಕಾರ್ಯಕ್ರಮಬಹುಮುಖ ಪ್ರತಿಭೆ ನಿಧಿ ಸುರೇಶ್ ಸ್ಪರ್ಧೆಮಲೆನಾಡ ಪ್ರತಿಭೆಗೆ ಬೆಂಬಲ, ಪ್ರೋತ್ಸಾಹವಿರಲಿ! ತೀರ್ಥಹಳ್ಳಿ: ಮಲೆನಾಡು ಪ್ರತಿಭೆಗಳ ತವರೂರು. ಕಲೆ, ಸಾಹಿತ್ಯ, ನೃತ್ಯ, ಕ್ರೀಡೆ, ಸಿನಿಮಾ ಹೀಗೆ ಮಲೆನಾಡಿಗರು ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮೆರೆದಿದ್ದಾರೆ. ಈ ಸಾಲಿಗೆ ಮತ್ತೊಂದು ಸೇರ್ಪಡೆ ತೀರ್ಥಹಳ್ಳಿಯ ಬಹುಮುಖ ಪ್ರತಿಭೆ ನಿಧಿ ಸುರೇಶ್. ಸ್ಟಾರ್ ಸುವರ್ಣ ಚಾನಲ್‌ನಲ್ಲಿ ಆ.20ರಿಂದ ಪ್ರಸಾರವಾಗುವ ‘ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಕಾರ್ಯಕ್ರಮದಲ್ಲಿ ನಿಧಿ ಸ್ಪರ್ಧಿಯಾಗಿ ನೃತ್ಯ ಪ್ರದರ್ಶನ ನೀಡಲಿದ್ದಾರೆ. ಆ.20ರಂದು ಸಂಜೆ 6-30ಕ್ಕೆ ಕಾರ್ಯಕ್ರಮದ ಗ್ರಾಂಡ್ ಓಪನಿಂಗ್‌ನಲ್ಲಿ ನಿಧಿ ಹಾಸ್ಯ ಕಲಾವಿದ ಜಗ್ಗಪ್ಪ ಜೊತೆ ” ರಗಡ್ ಅದಿನಿ ಬಾ ‘ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ. ತೀರ್ಥಹಳ್ಳಿಯ ಪ್ರಭಾವಿ ರಾಜಕೀಯ ಮುಖಂಡರಾದ ಅಮ್ರಪಾಲಿ ಸುರೇಶ್ ಮತ್ತು ಬಿ.ಎಲ್.ನಾಗಮಣಿ ಅವರ ಸುಪುತ್ರಿ ನಿಧಿ ಪ್ರಾಥಮಿಕ ಶಿಕ್ಷಣವನ್ನು ಬೆಂಗಳೂರಿನಲ್ಲಿ ಪಡೆದಿದ್ದಾರೆ. ನಿಧಿ ಸದ್ಯ ಜಯನಗರದ ಜೈನ್ ಕಾಲೇಜಿನ ಪಿಯುಸಿ ವಿದ್ಯಾರ್ಥಿ. ನೃತ್ಯ ಕ್ಷೇತ್ರದಲ್ಲಿ ನಿಧಿ ಆಸಕ್ತಿ ಗುರುತಿಸಿದ ಪೋಷಕರು 4 ನೇ ವಯಸ್ಸಿನಿಂದಲೇ ನೃತ್ಯ…
ಹೂವು, ಹಣ್ಣು, ಅಂಗಡಿಗಳು ರಶ್ದೇಗುಲಗಳಲ್ಲಿ ವಿಶೇಷ ಪೂಜೆ ಇಲ್ಲತೀರ್ಥಹಳ್ಳಿ ಮಾರಿಕಾಂಬಾ, ಶೃಂಗೇರಿ, ಸಾಗರದಲ್ಲಿ ವಿಶೇಷ ಪೂಜೆ ಇಲ್ಲ NAMMUR EXPRESSಮಲೆನಾಡು: ಹಿಂದೂಗಳ ಪವಿತ್ರ ಹಬ್ಬ ವರ ಮಹಾಲಕ್ಷ್ಮಿ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ.ಶುಭ ಶುಕ್ರವಾರ ಹಬ್ಬ ನಡೆಯಲಿದ್ದು ಕರೋನಾ ಹಿನ್ನೆಲೆ ಸರಳ ಹಬ್ಬಕ್ಕೆ ಎಲ್ಲಾ ಕಡೆ ಸಿದ್ಧತೆ ನಡೆದಿದೆ. ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿ ಹಬ್ಬ ಆಚರಣೆ ಮಾಡಲು ಸರ್ಕಾರ ಕರೆ ನೀಡಿದೆ.ಮಾರುಕಟ್ಟೆಗಳಲ್ಲಿ ಜನವೋ ಜನ!: ಮಲೆನಾಡಿನ ತೀರ್ಥಹಳ್ಳಿ, ಕೊಪ್ಪ, ಶೃಂಗೇರಿ, ಸಾಗರ, ಶಿವಮೊಗ್ಗ, ಚಿಕ್ಕಮಗಳೂರು ಸೇರಿ ಮಲೆನಾಡಿನ ಎಲ್ಲಾ ಪಟ್ಟಣಗಳಲ್ಲೂ ಹಿಂದಿನ ದಿನವೇ ತಯಾರಿ ಕಂಡು ಬಂತು. ಹೂ, ಹಣ್ಣು ಅಂಗಡಿಗಳಲ್ಲಿ ಜನ ಹೆಚ್ಚಿತ್ತು. ಮಾರುಕಟ್ಟೆಗಳು ರಶ್ ಆಗಿದ್ದವು. ರಾಜಧಾನಿ ಬೆಂಗಳೂರಲ್ಲಿ ಕೂಡ ಜನರ ಓಡಾಟ ಹೆಚ್ಚಿತ್ತು.ದೇಗುಲಗಳಲ್ಲಿ ವಿಶೇಷ ಪೂಜೆ ಇಲ್ಲ!: ಮಲೆನಾಡಿನ ಬಹುತೇಕ ದೇವಾಲಯಗಳಲ್ಲಿ ವಿಶೇಷ ಪೂಜೆ ಇಲ್ಲ. ತೀರ್ಥಹಳ್ಳಿ ಮಾರಿಕಾಂಬಾ, ರಾಮೇಶ್ವರ, ಶೃಂಗೇರಿ, ಸಾಗರ, ಸಿಗಂದೂರು ಸೇರಿ ಎಲ್ಲಾ ದೇವಾಲಯಗಳಲ್ಲಿ ವಿಶೇಷ ವರ ಮಹಾಲಕ್ಷ್ಮಿ ಪೂಜೆ ಇರುವುದಿಲ್ಲ. ಶುಕ್ರವಾರದ…
ಸರಕಾರದ ಸಹಾಯಕ್ಕೆ ಕುಟುಂಬದ ಮನವಿಕಾಬುಲ್ ತಲುಪಲು ಹರ ಸಾಹಸ..!ಕನ್ನಡಿಗರಿಗೆ 080-22094498 ಹೆಲ್ಪ್ ಲೈನ್…ಅಫ್ಘಾನಿಸ್ತಾನದಲ್ಲಿರುವ ಕನ್ನಡಿಗರಿಗೆ ಸಹಾಯವಾಣಿ! NAMMUR EXPRESS EXCLUSIVEತೀರ್ಥಹಳ್ಳಿ: ಅಫ್ಘಾನಿಸ್ತಾನ ತಾಲೀಬಾನಿಗಳ ಕೈ ವಶವಾಗುತ್ತಿದ್ದಂತೆ, ಅಲ್ಲಿ ಅರಾಜಕತೆ ಸೃಷ್ಟಿಯಾಗಿದ್ದು, ಅಲ್ಲಿ ನೆಲೆಸಿದ್ದ ವಿದೇಶಿಗರು ದೇಶ ತೊರೆಯಲು ಹರಸಾಹಸ ಪಡುತ್ತಿದ್ದಾರೆ. ಈ ನಡುವೆ ಕರ್ನಾಟಕದ ಅನೇಕರು ಕೂಡ ಅಲ್ಲಿ ಸಿಲುಕಿಕೊಂಡಿದ್ದಾರೆ. ಈ ನಡುವೆ ತೀರ್ಥಹಳ್ಳಿ ಮೂಲದ ಪಾದ್ರಿ ಒಬ್ಬರು ಅಫ್ಘಾನಿಸ್ತಾನದಲ್ಲಿ ಸಿಲುಕಿಕೊಂಡಿದ್ದು, ಇದೀಗ ಅವರಿಗೆ ಭಾರತ ಸರಕಾರದ ನೆರವು ಬೇಕಿದೆ. ರಾಜ್ಯದ ಗೃಹ ಮಂತ್ರಿಗಳಾಗಿ ತೀರ್ಥಹಳ್ಳಿ ಶಾಸಕ ಆರಗ ಅವರು ಈ ಬಗ್ಗೆ ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.ತೀರ್ಥಹಳ್ಳಿಯ ದೊಡ್ಡಮನೆ ಕೇರಿಯ ವಾಸಿಯಾಗಿರುವ ಫಾದರ್ ರಾಬರ್ಟ್ ತೀರ್ಥಹಳ್ಳಿ ತುಂಗಾ ಕಾಲೇಜಿನಲ್ಲಿ ಪದವಿ ಪೂರೈಸಿ ಬಳಿಕ ಕ್ರೈಸ್ತ ಗುರುವಾಗಿ ಕೆಲಸ ಮಾಡಿದ್ದರು. ಮಂಗಳೂರು, ಬೆಂಗಳೂರು ಬಳಿಕ ಸಮಾಜ ಸೇವೆಯ ಕನಸು ಹೊತ್ತು ಅಫ್ಘಾನಿಸ್ತಾನಕ್ಕೆ ಹೋಗಿದ್ದರು. ಮಧ್ಯ ಅಫ್ಘಾನಿಸ್ತಾನದ ಬಾಮಿಯಾನ್ ಪ್ರಾಂತ್ಯದ ರಾಜಧಾನಿಯಾದ ಬಾಮಿಯಾನ್ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇವರು ಜೆಸ್ಯೂಟ್ ಸಮುದಾಯದ…
ಇಬ್ಬರ ಬಂಧನ, 7 ಜಾನುವಾರು ರಕ್ಷಣೆಮಲೆನಾಡಿನಲ್ಲಿ ಗೋ ಕಳ್ಳ ಸಾಗಣೆ ಅವ್ಯಾಹತಗೋ ಕಳ್ಳರ ಸ್ವರ್ಗವಾಗುತ್ತಿದೆ ಮಲೆನಾಡು NAMMUR EXPRESSಮೂಡಿಗೆರೆ: ಮಲೆನಾಡು ಭಾಗದಲ್ಲಿ ಗೋವುಗಳನ್ನು ಕದ್ದೊಯ್ಯುವುದು, ಗೋಮಾಂಸ ಸಾಗಣೆ ಅವ್ಯಾಹತವಾಗಿ ಸಾಗುತ್ತಿದ್ದು, ಗೋ ಕಳ್ಳರ ಆಟಾಟೋಪ ಮಿತಿಮೀರುತ್ತಿದೆ. ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಬಣಕಲ್ ಹೋಬಳಿಯ ಕೋಳೂರು ಗ್ರಾಮದ ರಸ್ತೆಯ ಬದಿ ಮಲಗಿರುವ ಜಾನುವಾರುಗಳನ್ನು ವಾಹನಕ್ಕೆ ತುಂಬಿಸುತ್ತಿದ್ದ ಗೋ ಕಳ್ಳರನ್ನು ಬಣಕಲ್ ಪೊಲೀಸರು ಬಂಧಿಸಿದ್ದು, 7 ಜಾನುವಾರುಗಳನ್ನು ರಕ್ಷಿಸಿದ್ದಾರೆ. ಬಣಕಲ್ ಹೋಬಳಿಯ ಕೋಳೂರು ಗ್ರಾಮದ ರಸ್ತೆಯ ಬದಿ ಮಲಗಿರುವ ಜಾನುವಾರುಗಳನ್ನು ಇಬ್ಬರು ಅಪರಿಚಿತರು ವಾಹನಕ್ಕೆ ತುಂಬುತ್ತಿರುವ ಬಗ್ಗೆ ಮಾಹಿತಿ ಪಡೆದ ಬಣಕಲ್ ಸಬ್ ಇನ್ಸ್ಪೆಕ್ಟರ್ ಗಾಯತ್ರಿ ನೇತೃತ್ವದ ತಂಡ ದಾಳಿ ನಡೆಸಿ, ಇಬ್ಬರು ಆರೋಪಿಗಳನ್ನು ವಾಹನ ಸಮೇತ ಬಂಧಿಸಿದ್ದಾರೆ. ಆರೋಪಿಗಳಾದ ಬೇಲೂರು ತಾಲೂಕಿನ ತೊಳಲು ಗ್ರಾಮದ ಅಹಮದ್ ಹನೀಫ್, ಮತ್ತೊಬ್ಬ ಆರೋಪಿ ಬೇಲೂರಿನ ಹೊಸನಗರ ದೇವರಾಜ್, ಗೋವುಗಳನ್ನು ಕದ್ದು ಗೋಮಾಂಸ ಮಾರಾಟ ಮಾಡುವ ಉದ್ದೇಶದಿಂದ ಕಳ್ಳತನ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ…
ಇಬ್ಬರು ವಿದ್ಯಾರ್ಥಿಗಳಿಗೆ ಗಾಯಮಾತಿನ ಭರದಲ್ಲಿ ಡಿಕೆಶಿ ಯಡವಟ್ಟು!ಸಚಿವೆ ಜೊಲ್ಲೆ ಧ್ವಜಾರೋಹಣ ವಿರೋಧಿಸಿ ಧರಣಿ NAMMUR EXPRESSತುಮಕೂರು: ಕೋರ ಹೋಬಳಿ ಕರೀಕೆರೆ ಗ್ರಾಮದಲ್ಲಿ ಸ್ವಾತಂತ್ರ್ಯ ದಿನಾಚರಣೆ ದಿನದಂದು ಧ್ವಜಕಂಬ ಅಳವಡಿಸುವಾಗ ವಿದ್ಯುತ್ ಸ್ಪರ್ಶಿಸಿ ವಿದ್ಯಾರ್ಥಿ ಮೃತಪಟ್ಟಿದ್ದು, ಮತ್ತಿಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಚಂದನ್ (16) ಮೃತಪಟ್ಟ ವಿದ್ಯಾರ್ಥಿ. ಚಿಕ್ಕತೊಟ್ಲುಕೆರೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ರೇಣುಕ ವಿದ್ಯಾಪೀಠದಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪವನ್, ಟ್ರಾಕ್ಟರ್ ಷೋರೂಂನಲ್ಲಿ ಕೆಲಸ ಮಾಡುತ್ತಿರುವ ಶಶಾಂಕ್ ಗಾಯಗೊಂಡಿದ್ದಾರೆ. ಪವನ್ ಹಾಗೂ ಶಶಾಂಕ್ ಅವರನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಮೂವರು ಕರೀಕೆರೆ ಗ್ರಾಮದ ವಾಸಿಗಳಾಗಿದ್ದು ಸ್ವಾತಂತ್ರ್ಯ ದಿನಾಚರಣೆಗೆ ರಾಷ್ಟ್ರಧ್ವಜ ಅಳವಡಿಸಲು ಧ್ವಜಕಂಬವನ್ನು ಕೆಳಗಿಳಿಸುವ ಸಮಯದಲ್ಲಿ ಹಾದು ಹೋಗಿದ್ದ ವಿದ್ಯುತ್ ಲೈನ್‌ಗೆ ಸ್ಪರ್ಶಿಸಿ ಈ ಅವಘಡ ಸಂಭವಿಸಿದೆ.ಹುತಾತ್ಮ ಸೋನಿಯಾ ಗಾಂಧಿ ಎಂದ ಡಿಕೆಶಿ!:ಬೆಂಗಳೂರಿನ ಕಾಂಗ್ರೆಸ್ ಭವನದಲ್ಲಿ ನಡೆದ 75ನೇ ಸ್ವಾತಂತ್ರ್ಯ ದಿನಾಚರಣೆ ಭಾಷಣದ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಎಡವಟ್ಟು ಮಾಡಿಕೊಂಡಿದ್ದಾರೆ.ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಡಿ.ಕೆ. ಶಿವಕುಮಾರ್, ಹುತಾತ್ಮರಾದ ಇಂದಿರಾ ಗಾಂಧಿ…
ನಮ್ಮೂರ್ ಸಾಧಕರ ಪರಿಚಯಕ್ಕೆ ನಮ್ಮೂರ್ ಹೀರೋ ಸ್ವಾತಂತ್ರ್ಯ ಸಂಭ್ರಮ: ನಿಮ್ಮ ಊರಿನ ಆಚರಣೆ, ವಿಶೇಷತೆ, ಸ್ವಾತಂತ್ರ್ಯ ದಿನದ ವಿಶೇಷ ಉಡುಗೆ, ಮಕ್ಕಳ ದೇಶ ಪ್ರೇಮ, ಇತರೆ ದೇಶ ಪ್ರೇಮ ಮೆರೆಯುವ ಸಂಗತಿಗಳ ಫೋಟೋಗಳು, 2 ನಿಮಿಷದ ವಿಡಿಯೋ ಕಳುಹಿಸಿ… ದೇಶಕ್ಕಾಗಿ ನಾವೆಲ್ಲ ಸೇರಿ ಹೋರಾಡೋಣ..!ಧ್ವಜರೋಹಣ, ದೇಶಪ್ರೇಮದ ಚಿತ್ರಗಳು ವಿಡಿಯೋ ಇರಲಿ..!.ಸ್ವಾತಂತ್ರ್ಯ ಸಂಭ್ರಮದ ಫೋಟೋ, ವಿಡಿಯೋಗಳನ್ನು9481949101 ವಾಟ್ಸಾಪ್ ಸಂಖ್ಯೆಗೆ ತಮ್ಮ ಹೆಸರು, ಊರು, ಉದ್ಯೋಗ ಮಾಹಿತಿ ಸಮೇತ ಕಳುಹಿಸಿ.E Mail: [email protected].ಸ್ವಾತಂತ್ರ್ಯ ದಿನದಿಂದ ನಮ್ಮೂರ್ ಎಕ್ಸ್ಪ್ರೆಸ್ ಮಾಧ್ಯಮದಲ್ಲಿ ಪ್ರತಿ ದಿನವೂ ವಿಶೇಷ ಕಾರ್ಯಕ್ರಮ. ದೇಶಕ್ಕೆ ಸೇವೆ ಸಲ್ಲಿಸಿದ ಸೇವಕರ, ಸಾಧಕರ ಪರಿಚಯ ನಿರೀಕ್ಷಿಸಿ..ನಮ್ಮೂರ್ ಹೀರೋ..!ನಿಮ್ಮ ಸಾಧನೆ… ನಮ್ಮ ಫೋಕಸ್
ವಾಟ್ಸಾಪ್ ಸುಳ್ಳು ಸುದ್ದಿ ಜನ ಕಂಗಾಲುದಯವಿಟ್ಟು ಇಂತಹ ಸುಳ್ಳು ಶೇರ್ ಮಾಡಬೇಡಿ!ಸುಳ್ಳು ಸುದ್ದಿ ಹರಡಿದ್ರೆ ಕ್ರಮ: ಡಿವೈಎಸ್ಪಿ ಆರ್ಡರ್ವಿಷ ಬಾಟಲಿ ಕಚ್ಚಲು ಹೋಗಿ ಬಾಯಿಗೆ ವಿಷ!: ಅಸ್ವಸ್ಥಗೊಂಡಿದ್ದ ಬಾಲಕ ಸಾವು..!ಶಿವಮೊಗ್ಗ ಜಿಲ್ಲೆಯ ಕರೋನಾ ರಿಪೋರ್ಟ್ NAMMUR EXPRESSತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಕಾಡು ಹಂದಿ ದಾಳಿ ನಡೆಸಿ ನಾಲ್ಕು ಮಂದಿ ಸಾವು ಎಂಬ ಸುಳ್ಳು ಸುದ್ದಿ ಎಲ್ಲೆಡೆ ಕಳೆದ ಮೂರು ನಾಲ್ಕು ದಿನಗಳಿಂದ ವೈರಲ್ ಆಗಿದೆ. ಆದರೆ ಈ ಬಗ್ಗೆ ಪೊಲೀಸ್ ಇಲಾಖೆ ಯಾವುದೇ ಸ್ಪಷ್ಟನೆ ನೀಡಿಲ್ಲ.ಜನ ಇದರಿಂದ ಗೊಂದಲವಾಗಿದ್ದು, ಘಟನೆ ನಡೆದಿದೆ ಎಂದೇ ಮಾತನಾಡಿಕೊಳ್ಳುತ್ತಿದ್ದಾರೆ. ನಮ್ಮೂರ್ ಎಕ್ಸ್ಪ್ರೆಸ್ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದು ಇದೊಂದು ಸುಳ್ಳು ಮಾಹಿತಿ ಎಂಬುದನ್ನು ಓದುಗರಿಗೆ ಖಚಿತಪಡಿಸುತ್ತದೆ.ಖಚಿತವಾಗದೆ ಶೇರ್ ಮಾಡಿದ್ರೆ ಕ್ರಮ!: ಯಾವುದೇ ವಿಚಾರದಲ್ಲಿ ತಪ್ಪು ಮಾಹಿತಿ ಶೇರ್ ಮಾಡಿದ್ರೆ ಕ್ರಮ ತೆಗೆದುಕೊಳ್ಳುವುದಾಗಿ ತೀರ್ಥಹಳ್ಳಿ ಡಿವೈಎಸ್ಪಿ ಶಾಂತವೀರ ತಿಳಿಸಿದ್ದಾರೆ.ತೀರ್ಥಹಳ್ಳಿ: ವಿಷ ಬಾಟಲಿ ಕಚ್ಚಲು ಹೋಗಿ ಬಾಯಿಗೆ ವಿಷ!: ಅಸ್ವಸ್ಥಗೊಂಡಿದ್ದ ಬಾಲಕ ಸಾವು..!ತೀರ್ಥಹಳ್ಳಿ ಭತ್ತದ ಸಸಿಗೆ ಸಿಂಪಡಿಸುವ ಔಷಧಿ ಬಾಟಲಿಯ…
ಬಸ್ ಹತ್ತಿ ಗೋ ಸಾವು: ಪೊಲೀಸ್ ತನಿಖೆ ಶುರುಬಸ್ ನಿಲ್ದಾಣದಲ್ಲಿ ಸಿಸಿಟಿವಿ ಇಲ್ಲ: ಇದೇ ತಲೆನೋವುಗೃಹ ಮಂತ್ರಿಗಳ ಹೆಸರು ಉಳಿಸುವ ಹೊಣೆ ನಮ್ಮದು! NAMMUR EXPRESSತೀರ್ಥಹಳ್ಳಿ: ತೀರ್ಥಹಳ್ಳಿ ಮುಖ್ಯ ಬಸ್ ನಿಲ್ದಾಣದ ಬಳಿ ದನದ ಕಳೆಬರ ಶುಕ್ರವಾರ ರಾತ್ರಿ ಪತ್ತೆಯಾಗಿದ್ದು ಜನರಲ್ಲಿ ಭೀತಿಗೆ ಕಾರಣವಾಗಿತ್ತು, ಆದರೆ ಅದು ಬಸ್ ಹತ್ತಿ ನಡೆದ ಘಟನೆ ಎನ್ನಲಾಗಿದೆ. ಅಚ್ಚರಿ ಎಂದರೆ ಬಸ್ ನಿಲ್ದಾಣ ಸದಾ ಜನರ ದಟ್ಟಣೆಯಿಂದ ಕೂಡಿದ್ದು ಯಾರಿಗೂ ಇದು ಗಮನಕ್ಕೆ ಬಂದಿಲ್ಲ. ರಾತ್ರಿ ವೇಳೆಗೆ ಜನರಿಗೆ ಗೊತ್ತಾಗಿದ್ದು ಸ್ಥಳದಲ್ಲಿ ಸೇರಿದ ನೂರಾರು ಜನ ಇದೀಗ ಗೊಂದಲಕ್ಕೆ ಕಾರಣ ಆಗಿದೆ.ಯಾರಾದರೂ ತಂದು ಇಲ್ಲಿಗೆ ಹಾಕಿರಬಹುದಾ.. ಬಸ್ ಚಕ್ರಕ್ಕೆ ಸಿಲುಕಿರಬಹುದಾ ಎಂಬ ಎರಡು ದಿಕ್ಕಿನಲ್ಲಿ ತನಿಖೆ ನಡೆಯುತ್ತಿದೆ.ಬಸ್ ಅಡಿ ಸಿಲುಕಿ ಈ ಘಟನೆ ನಡೆದಿದೆ. ಒಂದು ಬಸ್ ಮೇಲೆ ಶಂಕೆ ಇದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಡಿವೈಎಸ್ಪಿ ನಮ್ಮೂರ್ ಎಕ್ಸ್ಪ್ರೆಸ್ ಮಾಧ್ಯಮಕ್ಕೆ ತಿಳಿಸಿದ್ದಾರೆ.ತೀರ್ಥಹಳ್ಳಿ ಶಾಂತಿಯ ಊರು. ಅದರಲ್ಲೂ ಈಗ ನಮ್ಮವರೇ ಗೃಹ…