Author: Nammur Express Admin

ಬೆಂಗಳೂರಿನ ವಿಧಾನ ಸೌಧದ ಗೃಹ ಕಛೇರಿನೂತನ ಗೃಹ ಸಚಿವರಿಗೆ ಅಭಿನಂದನೆತವರಿಂದ ಅನೇಕ ನಾಯಕರ ಉಪಸ್ಥಿತಿ NAMMUR EXPRESSಬೆಂಗಳೂರು: ಬೊಮ್ಮಾಯಿ ನೂತನ ಸರ್ಕಾರದಲ್ಲಿ ಅತ್ಯುನ್ನತ ಸ್ಥಾನ ಪಡೆದ ಮಲೆನಾಡ ಮಗ ಆರಗ ಜ್ಞಾನೇಂದ್ರ ಶುಕ್ರವಾರ ವಿಧಾನ ಸೌಧದ ತಮ್ಮ ಕಛೇರಿಗೆ ಪದಾರ್ಪಣೆ ಮಾಡಿದರು‌.ಜ್ಞಾನೇಂದ್ರ ಅವರು ಕಚೇರಿಗೆ ಪೂಜೆ ಮತ್ತು ಧಾರ್ಮಿಕ ವಿಧಿ ವಿಧಾನಗಳಿಂದ ಪ್ರವೇಶ ಮಾಡಿದ ದೃಶ್ಯ ಕಂಡುಬಂತು.ರಾಜ್ಯದ ಗೃಹ ಸಚಿವರು ತೀರ್ಥಹಳ್ಳಿ ಕ್ಷೇತ್ರದ ಶಾಸಕರಾದ ಆರಗ ಜ್ಞಾನೇಂದ್ರ ಶ್ರಾವಣ ಮಾಸದ ಶುಕ್ರವಾರ ಶುಭ ದಿನದಂದು ಬೆಂಗಳೂರಿನ ವಿಧಾನಸೌಧದಲ್ಲಿ ತಮಗೆ ನೀಡಿರುವಂತಹ ಗೃಹ ಕಚೇರಿ ಪೂಜೆ ಸಲ್ಲಿಸುವುದರೊಂದಿಗೆ ಅಭಿಮಾನಿ ವರ್ಗ ಮತ್ತು ಅಧಿಕಾರಿಗಳೊಂದಿಗೆ ಕಚೇರಿಗೆ ಪ್ರವೇಶ ಮಾಡಿ ಕಾರ್ಯ ಪ್ರಾರಂಭ ಮಾಡಿದ್ದಾರೆ. ಈಗಾಗಲೇ ರಾಜ್ಯ ಮಟ್ಟದಲ್ಲಿ ಸದ್ದು ಮಾಡಿರುವ ನಾಯಕರ ಕಚೇರಿ ಇದೀಗ ಇಡೀ ರಾಜ್ಯದ ಗಮನ ಸೆಳೆದಿದೆ.ರಾಜ್ಯದ, ಮಲೆನಾಡಿನ ಎಲ್ಲಾ ಸುದ್ದಿಗಳಿಗೆ NAMMUR EXPRESS ” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ , ಸಬ್ಸೈಬ್ ಆಗಿ , ವಾಟ್ಸಾಪ್ನಲ್ಲಿ…

Read More

ಕಾಂಗ್ರೆಸ್ ನ 6 ಮುಖಂಡರ‌ ಖಾತೆ ಲಾಕ್ಟ್ವಿಟರ್ ನಿಯಮ‌ ಉಲ್ಲಂಘಿಸಿದ್ದಕ್ಕೆ ಕ್ರಮಕೇಂದ್ರದ ಅಣತಿಯಂತೆ ಕ್ರಮ; ಕಾಂಗ್ರೆಸ್ ಕಿಡಿ NAMMUR EXPRESSನವದೆಹಲಿ: ಟ್ವಿಟರ್ ನಿಯಮ ಪಾಲಿಸದ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟ್ಟರ್ ಖಾತೆ, ರಾಹುಲ್ ಗಾಂಧಿ ಸೇರಿದಂತೆ ಪಕ್ಷದ 6 ಮುಖಂಡರ ಟ್ವಿಟರ್ ಖಾತೆಯನ್ನು ಟ್ವಿಟ್ಟರ್ ಲಾಕ್ ಮಾಡಿದೆ. ಕಾಂಗ್ರೆಸ್ ಮಾಧ್ಯಮ ವಿಭಾಗದ ಮುಖ್ಯಸ್ಥ ರಣದೀಪ್ ಸುರ್ಜೇವಾಲಾ ಸೇರಿದಂತೆ ಐದು ಹಿರಿಯ ನಾಯಕರ ಹ್ಯಾಂಡಲ್ ಗಳ ವಿರುದ್ಧ ಇದೇ ರೀತಿಯ ಕ್ರಮ ತೆಗೆದುಕೊಳ್ಳಲಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವ ಅಜಯ್ ಮಾಕೆನ್, ಲೋಕಸಭೆಯಲ್ಲಿ ಪಕ್ಷದ ವಿಪ್ ಮಾಣಿಕ್ ಕಮ್ ಠಾಗೋರ್, ಅಸ್ಸಾಂ ಉಸ್ತುವಾರಿ ಮತ್ತು ಮಾಜಿ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮತ್ತು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಶ್ಮಿತಾ ದೇವ್ ಅವರ ಟ್ವಿಟರ್ ಖಾತೆ ಲಾಕ್ ಮಾಡಲಾಗಿದೆ ಎಂದು ಪಕ್ಷ ತಿಳಿಸಿದೆ. ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದು ಟ್ವಿಟರ್ ಈ ಕ್ರಮ ಕೈಗೊಂಡಿದೆ ಎಂದು ಕಾಂಗ್ರೆಸ್ ಕಿಡಿಕಾರಿದೆ. ಕಳೆದ…

Read More

ಮಾನವ- ಆನೆಗಳ‌ ಸಂಘರ್ಷ ಹೆಚ್ಚಳಅರಣ್ಯ ನಾಶ, ದಂತ, ಬೇಟೆಗೆ ಆನೆ ಸಂತತಿ ಬಲಿಆನೆಗಳ‌ ರಕ್ಷಣೆಗೆ ಪಣತೊಡೋಣ NAMMUR EXPRESSಜಗತ್ತಿನಲ್ಲಿ ಬಲಿಷ್ಟ ಪ್ರಾಣಿಯೆಂದರೆ ಆನೆ. ಗಜರಾಜನಷ್ಟು ಶಕ್ತಿಶಾಲಿಯಾದ ಪ್ರಾಣಿ ವನ್ಯಜೀವಿಗಳಲ್ಲಿ ಮತ್ತೊಂದಿಲ್ಲ. ಆದರೆ  ಅರಣ್ಯ ನಾಶ, ದಂತದ ಬೇಡಿಕೆ, ಮಾನವ ಆನೆಯ ಸಂಘರ್ಷ ಮುಂತಾದ ಕಾರಣಗಳಿಂದಾಗಿ ಆನೆಗಳ ಸಂತತಿ ವಿಶ್ವದಲ್ಲಿ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಗಜರಾಜನೆಂದೇ ಕರೆಯಲ್ಪಡುವ ಆನೆಗೆ ಒಂದು ಗತ್ತಿದೆ. ಅಂಥ ಆನೆಗಾಗಿ ಒಂದು ದಿನವನ್ನೂ ಕೂಡ ಆಚರಿಸಲಾಗುತ್ತದೆ. ಇಡೀ ವಿಶ್ವದಾದ್ಯಂತ ಪ್ರತಿವರ್ಷ ಆಗಸ್ಟ್​ 12ರಂದು ಆನೆಗಳ ದಿನ ವನ್ನಾಗಿ ಆಚರಿಸಲಾಗುತ್ತದೆ. ಇತ್ತೀಚಿನ‌ ವರ್ಷಗಳಲ್ಲಿ ಆನೆಗಳ ಬೇಟೆ ಜಾಸ್ತಿಯಾಗಿದೆ. ಹಾಗೇ, ಅವುಗಳ ಸಹಜ ನೆಲೆಗೆ ದಕ್ಕೆ ಬಂದೊದಗಿದೆ. ಮಾನವರೊಂದಿಗೆ ಆನೆಗಳ ಸಂಘರ್ಷ ಹೆಚ್ಚಾಗಿದೆ. ವಿವಿಧ ಕಾರಣಗಳಿಗಾಗಿ ಆನೆಗಳನ್ನು ಸೆರೆಹಿಡಿಯುವ ಪ್ರವೃತ್ತಿ ಬೆಳೆದುಬಂದಿದೆ. ಹೀಗೆ ಆನೆಗಳಿಗೆ ಒದಗಿದ ದುರ್ದೆಸೆಯನ್ನು ಕಡಿಮೆಮಾಡಿ, ಅವುಗಳಿಗೂ ಸುರಕ್ಷಿತ ಜೀವನ ನಡೆಸಲು ಅವಕಾಶ ಮಾಡಿಕೊಡಬೇಕು ಎಂಬ ಅರಿವು ಮೂಡಿಸಲು ಈ ವಿಶ್ವ ಆನೆಗಳ ದಿನ ಆಚರಿಸಲಾಗುತ್ತಿದೆ. ದೇಶದಲ್ಲಿ ಒಟ್ಟು…

Read More

ಶಾಲೆ ಓಪನ್ ಮುನ್ನವೇ ಮಕ್ಕಳಿಗೆ ಕಾಟತುಮಕೂರಿನಲ್ಲಿ ದೇಗುಲ, ಪ್ರವಾಸಿ ತಾಣ ಬಂದ್ದ.ಕ ದಲ್ಲಿ ಸ್ವತಂತ್ರ್ಯೋತ್ಸವದಂದೂ ಕರ್ಫ್ಯೂ ಬೆಂಗಳೂರು: ರಾಜ್ಯದಲ್ಲಿ ಆಗಸ್ಟ್ 11ರಂದು 1,826 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. 33 ಮಂದಿ ಸಾವನ್ನಪ್ಪಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಮೂರನೇ ಅಲೆ ಸದ್ದಿಲ್ಲದೇ ಕಾಲಿಟ್ಟಂತಿದೆ. ಕೊರೊನಾ ಹೊಸ ತಳಿ ಡೆಲ್ಟಾ, ಕಪ್ಪಾ ಬೆನ್ನಲ್ಲೇ ಇದೀಗ ಮಕ್ಕಳಲ್ಲಿ ಸೋಂಕು ಹೆಚ್ಚುತ್ತಿದೆ. ಕಳೆದ 10 ದಿನಗಳಲ್ಲಿ ಬೆಂಗಳೂರಿನಲ್ಲಿ 505 ಮಕ್ಕಳಲ್ಲಿ ಸೋಂಕು ಪತ್ತೆಯಾಗಿದೆ. ಆಗಸ್ಟ್ 1ರಿಂದ 10ರವರೆಗೆ ಒಟ್ಟು 246 ಹೆಣ್ಣುಮಕ್ಕಳು ಹಾಗೂ 259 ಗಂಡು ಮಕ್ಕಳಲ್ಲಿ ಸೋಂಕು ದೃಢಪಟ್ಟಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಎಲ್ಲಾ ಮಕ್ಕಳು 15 ವರ್ಷದೊಳಗಿನವರು ಎನ್ನಲಾಗಿದೆ. ರಾಜ್ಯ ಸರ್ಕಾರ ಶಾಲೆಗಳನ್ನು ಆರಂಭ ಮಾಡಲು ಮುಂದಾಗಿರುವ ಬೆನ್ನಲ್ಲೇ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಅದರಲ್ಲೂ ಚಿಕ್ಕ ಮಕ್ಕಳಲ್ಲಿ ಮಹಾಮಾರಿ ಇನ್ನಿಲ್ಲದಂತೆ ಕಾಡುತ್ತಿದೆ. ತುಮಕೂರಿನಲ್ಲಿ ನಿಷೇಧಾಜ್ಞೆ: ಜಿಲ್ಲೆಯಲ್ಲಿ ಕೊರೊನಾ ವೈರಸ್ 3 ನೇ ಅಲೆ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಮುಂಜಾಗ್ರತ ಕ್ರಮವಾಗಿ…

Read More

-ತಡರಾತ್ರಿ ನಾಲ್ವರು ಕಿಡಿಗೇಡಿಗಳಿಂದ ಕೃತ್ಯ-3 ನಿಮಿಷಗಳಲ್ಲಿ ಬೆಂಕಿ ಹಚ್ಚಿ ಪರಾರಿ!-ಗೃಹಸಚಿವ ಜ್ಞಾನೇಂದ್ರ ಬೇಟಿ, ಪರಿಶೀಲನೆ NAMMUR EXPRESSಬೆಂಗಳೂರು:ಬೆಂಗಳೂರಿನ ಬೊಮ್ಮನಹಳ್ಳಿ ಬಿಜೆಪಿ ಶಾಸಕ ಸತೀಶ್‌ ರೆಡ್ಡಿ ನಿವಾಸದ ಅಂಗಳದಲ್ಲಿ ನಿಲ್ಲಿಸಿದ್ದ ಎರಡು ಐಷಾರಾಮಿ ಕಾರುಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಬೊಮ್ಮನಹಳ್ಳಿಯ ನಿವಾಸದಲ್ಲಿ ತಡರಾತ್ರಿ 1.25 ರ ಸುಮಾರಿಗೆ ಘಟನೆ ನಡೆದಿದ್ದು, ಫಾರ್ಚೂನರ್‌ ಕಾರು ಹಾಗೂ ಮಹೀಂದ್ರಾ ಥಾರ್‌ ಜೀಪ್‌ ಬೆಂಕಿಗಾಹುತಿಯಾಗಿವೆ. ನಾಲ್ವರು ದುಷ್ಕರ್ಮಿಗಳು ಪೆಟ್ರೋಲ್‌ ಕ್ಯಾನ್‌ ತಂದು ಕಾರುಗಳಿಗೆ ಬೆಂಕಿ ಹಚ್ಚಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ. ಬೆಂಕಿ ಹಚ್ಚಿರುವುದು ಯಾರು ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್‌ ಜೋಶಿ ತಿಳಿಸಿದ್ದಾರೆ. ಇನ್ನು, ಘಟನೆಯ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಶಾಸಕ ಸತೀಶ್‌ ರೆಡ್ಡಿ, ರಾತ್ರಿ 1:25ಕ್ಕೆ ಬೈಕ್‌ನಲ್ಲಿ ಬಂದವರು ಕೇವಲ 3 ನಿಮಿಷದಲ್ಲಿ ಕಾರುಗಳಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. 1:30ಕ್ಕೆ ಬ್ಯಾಟರಿ ಸ್ಫೋಟದ ಶಬ್ಧ ಕೇಳಿ ನಮಗೆ ಎಚ್ಚರವಾಗಿದೆ. ಹಿಂದಿನ ಗೇಟ್‌ನಿಂದ ಆರೋಪಿಗಳು ಪರಾರಿ ಆಗಿದ್ದಾರೆ. ಇದು ರಾಜಕೀಯ ದ್ವೇಷ ಅಲ್ಲ. ಹೀಗಾಗಿ ಇದನ್ನು ರಾಜಕೀಯ…

Read More

ತರಕಾರಿ ಮೂಟೆಯಲ್ಲಿ ಗೋ ಮಾಂಸ ಸಾಗಣೆಶಿವಮೊಗ್ಗದಿಂದ ಮಂಗಳೂರಿಗೆ ಮಾಂಸ ಸಾಗಣೆಆಗುಂಬೆ ತಪಾಸಣಾ ಕೇಂದ್ರದಲ್ಲಿ ಇಬ್ಬರ ಬಂಧನಹಿಂದೂ ಪರ ಸಂಘಟನೆಗಳಿಗೆ ಸಿಕ್ಕ ಜಯ!ಜಮೀನು ಗಲಾಟೆ: ಓರ್ವ ರೈತ ಆತ್ಮಹತ್ಯೆ..! NAMMUR EXPRESSತೀರ್ಥಹಳ್ಳಿ: ಮಲೆನಾಡಲ್ಲಿ ಗೋ ಮಾಂಸ ದಂಧೆ ಇದೀಗ ಸಂಪೂರ್ಣ ಹೆಚ್ಚಾಗಿದ್ದು, ಇದೀಗ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಅರಣ್ಯ ಇಲಾಖೆ ತಪಾಸಣಾ ಕೇಂದ್ರದ ಬಳಿ ತರಕಾರಿ ಪಿಕ್ ಅಪ್ ಅಲ್ಲಿ 4 ಕ್ವಿಂಟಲ್ ಮಾಂಸ ಸಿಕ್ಕಿ ಬಿದ್ದಿದೆ.ಸ್ಥಳೀಯ ಅಧಿಕಾರಿಗಳು ವಾಹನ ತಪಾಸಣೆ ನಡೆಸುವ ವೇಳೆ ಪಿಕಪ್ ವಾಹನದಲ್ಲಿ ಶಿವಮೊಗ್ಗದಿಂದ ಮಂಗಳೂರಿಗೆ ಗೋಮಾಂಸ ಸಾಗಿಸುತ್ತಿದ್ದ ಇಬ್ಬರು ಸಿಕ್ಕಿಬಿದ್ದಿದ್ದಾರೆ.ಏನಿದು ಘಟನೆ?: ಶಿವಮೊಗ್ಗದಿಂದ ಮಂಗಳೂರಿಗೆ ತರಕಾರಿ ಹೊಡೆಯುವ ಪಿಕ್ ಅಪ್ ವಾಹನದಲ್ಲಿ ತರಕಾರಿ ಚೀಲದ ಜತೆಗೆ ಮಾಂಸ ಸಾಗಣೆ ಮಾಡಲಾಗುತ್ತಿತ್ತು.ಇರ್ಷಾದ್ ಬಿನ್ ಮುಸ್ತಾಫಾ ಕಂಕನಾಡಿ ಹಾಗೂ ದೇರಳಕಟ್ಟೆಯ ಇಮ್ತಿಯಾಜ್ ಬಿನ್ ಹಸನಬ್ಬ ಬಂಧಿತ ಆರೋಪಿಗಳು. ಸಿಕ್ಕಿ ಬಿದ್ದ ಆರೋಪಿಗಳಿಂದ ಸುಮಾರು 4 ಕ್ವಿಂಟಾಲ್ ಗೊಮಾಂಸ ವಶಪಡಿಸಿಕೊಳ್ಳಲಾಗಿದೆ.ಸಂಘಟನೆಗಳಿಂದ ಕಾರ್ಯಾಚರಣೆ! ತೀರ್ಥಹಳ್ಳಿಯ ವಿಶ್ವಹಿಂದೂ ಪರಿಷತ್ ಹಾಗೂ ತೀರ್ಥಹಳ್ಳಿ ಭಜರಂಗದಳದ ಮುಖಂಡರಾದ…

Read More

ಅನಾರೋಗ್ಯ ಕಾರಣದಿಂದ ಆತ್ಮಹತ್ಯೆಗೆ ಶರಣುಅಪಘಾತ: ರಸ್ತೆಯಲ್ಲಿ ಬಿದ್ದವನ ಪ್ರಾಣ ಉಳಿಸಿದ!ಶೆಡ್ಗಾರು ಬಳಿ ಕತ್ತಿಯಿಂದ ಹಲ್ಲೆ..!: ಆಸ್ಪತ್ರೆಗೆ ದಾಖಲು NAMMUR EXPRESSತೀರ್ಥಹಳ್ಳಿ: ಆಗುಂಬೆ ಬಳಿ ಗೃಹಿಣಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಅನಾರೋಗ್ಯ ಕಾರಣ ಮಾನಸಿಕವಾಗಿ ನೊಂದು ಸಾವಿಗೆ ಶರಣಾಗಿದ್ದಾಳೆ ಎಂದು ಪ್ರಕರಣ ದಾಖಲಾಗಿದೆ.ತೀರ್ಥಹಳ್ಳಿ ತಾಲ್ಲೂಕು ಆಗುಂಬೆ ಸಮೀಪದ ಮಳಲಿ ಗ್ರಾಮದಲ್ಲಿ ನಡೆದಿದೆ. ಬುಧವಾರ ಬೆಳಿಗ್ಗೆ ಈ ಘಟನೆ ನಡೆದಿದ್ದು, ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಭಾವತಿ (45 ವರ್ಷ) ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ಈಕೆಗೆ ಓರ್ವ ಹೆಣ್ಣು ಮಗಳಿದ್ದಾಳೆ.ರಸ್ತೆಯಲ್ಲಿ ಬಿದ್ದವನ ಜೀವ ಉಳಿಸಿದ ನೌಕರ!: ಇತ್ತೀಚೆಗೆ ರಸ್ತೆ ಅಪಘಾತಗಳು ದಿನೇದಿನೇ ಹೆಚ್ಚುತ್ತಿದ್ದು, ಪ್ರಾಣಾಪಾಯಗಳು ಉಂಟಾಗುತ್ತಿದೆ. ಮಂಗಳವಾರ ರಾತ್ರಿ ಕೋಣಂದೂರು ಸಮೀಪ ಬೈಕ್ ಹಾಗೂ ದನದ ನಡುವೆ ಅಪಘಾತ ಸಂಭವಿಸಿತ್ತು. ಬೈಕ್ ಸವಾರನಿಗೆ ಪೆಟ್ಟಾಗಿತ್ತು. ಅದೃಷ್ಟವಶಾತ್ ಆ ಸಂದರ್ಭದಲ್ಲಿ ತೀರ್ಥಹಳ್ಳಿಯ ಅಗ್ನಿಶಾಮಕ ದಳದ ಸಿಬ್ಬಂದಿಯಾದ ರವಿ ಶೆಟ್ಟಿ ಅವರು ಅದೇ ಮಾರ್ಗವಾಗಿ ಹೋಗುತ್ತಿದ್ದರು. ಅಪಘಾತವಾಗಿದ್ದನ್ನು‌ ಗಮನಿಸಿದ ರವಿ ಶೆಟ್ಟಿಯವರು ತಕ್ಷಣ…

Read More

1000ಕ್ಕೂ ಹೆಚ್ಚು ಮಂದಿ ಸಹಕಾರಿಗಳು ಹಾಜರ್ನನ್ನದು ತಂತಿ ಮೇಲಿನ ನಡಿಗೆ: ವಿಜಯ್ ದೇವ್ NAMMUR EXPRESSತೀರ್ಥಹಳ್ಳಿ: ಮೇರು ವ್ಯಕ್ತಿತ್ವದ ಕಠಿಣ ಪರಿಶ್ರಮಿ, ಸಹಕಾರಿ ನಾಯಕ, ಸಹಕಾರಿ ರಂಗದ ಭೀಷ್ಮ ವಿಜಯದೇವ್ ಅವರಿಗೆ ತೀರ್ಥಹಳ್ಳಿಯಲ್ಲಿ ಎಲ್ಲಾ ಸಹಕಾರಿಗಳಿಂದ ಸನ್ಮಾನ ನಡೆಯಿತು. ತೀರ್ಥಹಳ್ಳಿ ಸೇರಿದಂತೆ ರಾಜ್ಯದ ನೂರಾರು ಸಹಕಾರಿ ನಾಯಕರು ಹಾಜರಿದ್ದು ಅಪೂರ್ವ ಕ್ಷಣಗಳನ್ನು ಸವಿದರು. ಮೆಚ್ಚಿನ ನಾಯಕನಿಗೆ ಸನ್ಮಾನ ಮಾಡಿದರು.ಸಹಕಾರಿ ರತ್ನ ವಿಜಯದೇವ್ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ವಿಜಯದೇವ್, ಸಹಕಾರಿ ಕ್ಷೇತ್ರವನ್ನು ಮುನ್ನಡೆಸುವುದು ತಂತಿಯ ಮೇಲೆ ನಡಿಗೆಯಿದ್ದಂತೆ. ಸವಾಲು, ಸಂಕಷ್ಟಗಳಿಗೆ ಅಂಜದೆ ಮುನ್ನುಗ್ಗುವ ಛಾತಿಯುಳ್ಳವರು ಮಾತ್ರ ಸಹಕಾರಿಯನ್ನು ಮುನ್ನಡೆಸಲು ಸಾಧ್ಯ. ನೆಂಟಸ್ತಿಕೆ, ವಸೂಲಿಬಾಜಿಗೆ ಎಂದೂ ಕಟ್ಟುಬೀಳದೆ ಸಹಕಾರಿಯನ್ನು ಮುನ್ನಡೆಸಿದ್ದೇನೆ. ಈ ವರ್ಷ ಸಹ್ಯಾದ್ರಿ ಸಂಸ್ಥೆ 6 ಕೋಟಿ ನಿವ್ವಳ ಲಾಭಗಳಿಸಿದೆ. ಮುಂದಿನ ವರ್ಷ ಲಾಭದ ಪ್ರಮಾಣ 10 ಕೋಟಿಗೆ ತಲುಪಿಸುವ ಆತ್ಮವಿಶ್ವಾಸವಿದೆ ಎಂದು ಸಹಕಾರಿ ರತ್ನ ಬಸವಾನಿ ವಿಜಯದೇವ್ ಹೇಳಿದರು.ಮಲೆನಾಡ ಸಹಕಾರಿ ಕ್ಷೇತ್ರದಲ್ಲಿ ದಿಗ್ಗಜರಾಗಿ, ನೂರಾರು ಸಹಕಾರ ಸಂಸ್ಥೆಗಳನ್ನು ಬೆಳೆಸಿರುವ ಸಹಕಾರಿ ರತ್ನ…

Read More

53 ಲಕ್ಷ ಹಣ: ಬಿಗ್ಬಾಸ್ ಅತೀ ಹೆಚ್ಚು ವೋಟ್!ಬೈಕ್ ರೇಸರ್ ಅರವಿಂದ್ ಕೆ.ಪಿ ರನ್ನರ್ ಅಪ್!ದಿವ್ಯಾ ಉರುಡುಗ 2ನೇ ರನ್ನರ್ ಅಪ್ ಗರಿ..! NAMMUR EXPRESSಬೆಂಗಳೂರು: ಕನ್ನಡ ಬಿಗ್​ ಬಾಸ್​ ಸೀಸನ್​ 8ರ ಸುದೀರ್ಘ ಪ್ರಯಾಣ ಕೊನೆಗೊಂಡಿದೆ. ಎಲ್ಲರ ನಿರೀಕ್ಷೆ ಯಂತೆ ಮಂಜು ಪಾವಗಡ ಅವರು ಸೀಸನ್​ 8ರ ವಿನ್ನರ್​ ಆಗಿ ಹೊರ ಹೊಮ್ಮಿದ್ದಾರೆ.ಈ ಮೂಲಕ ಬಿಗ್​ಬಾಸ್​ ಟ್ರೋಫಿ​ ಹಾಗೂ 53 ಲಕ್ಷ ನಗದು ಬಹುಮಾನ ಮಂಜು ಪಾವಗಡ ಅವರಿಗೆ ಸಿಕ್ಕಿದೆ. ಹಾಗೆಯೆ ಅಂತಾರಾಷ್ಟ್ರೀಯ ಮಟ್ಟದ ಬೈಕ್ ರೇಸರ್ ಅರವಿಂದ್ ಕೆ.ಪಿ. ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದಾರೆ. ಈ ಸೀಸನ್​ನಲ್ಲಿ ವಿನ್ನರ್ ಆಗಿರುವ ಮಂಜು ಪಾವಗಡ ಬರೋಬ್ಬರಿ 45,03,495 ಮತಗಳನ್ನು ಪಡೆಯುವ ಮೂಲಕ ಬಿಗ್ ಬಾಸ್ ಕನ್ನಡದ ಇತಿಹಾಸದಲ್ಲೇ ಅತಿ ಹೆಚ್ಚು ವೋಟಿಂಗ್ ಪಡೆದಿದ್ದಾರೆ. ಮೊದಲ ರನ್ನರ್ ಅಪ್ ಆಗಿರುವ ಅರವಿಂದ್​ ಕೆ.ಪಿ. 43,35,957 ಮತಗಳನ್ನು ಪಡೆದಿದ್ದಾರೆ. ಎರಡನೇ ರನ್ನರ್ ಅಪ್ ಆಗಿರುವ ದಿವ್ಯಾ ಉರುಡುಗ 11,61,205, ಮೂರನೇ ರನ್ನರ್ ಅಪ್ ಆಗಿರುವ…

Read More

ತೀರ್ಥಹಳ್ಳಿಯ ತನಿಕಲ್ ಸರ್ಕಾರಿ ಶಾಲೆಯ ಹುಡುಗನ ಸಾಧನೆಕನ್ನಡ ಮಾಧ್ಯಮ, ಸರ್ಕಾರಿ ಶಾಲೆಯ ಹುಡುಗರ ಮೇಲುಗೈ NAMMUR EXPRESSತೀರ್ಥಹಳ್ಳಿ: ಆತ ಹಳ್ಳಿ ಹುಡುಗ. ಕೃಷಿ ಕುಟುಂಬದಲ್ಲಿ ಬೆಳೆದ ಹುಡುಗ. ಯಾವುದೇ ಹೈಟೆಕ್ ಶಿಕ್ಷಣ ಇಲ್ಲ. ಟ್ಯೂಷನ್ ಇಲ್ಲ. ಆದರೂ ರಾಜ್ಯದ ಟಾಪ್ ವಿದ್ಯಾರ್ಥಿಯಾಗಿ ಸ್ಥಾನ ಪಡೆದಿದ್ದಾನೆ.ತೀರ್ಥಹಳ್ಳಿ ತಾಲೂಕು ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಯಲ್ಲಿ ಓದಿದ ತೀರ್ಥಹಳ್ಳಿ ತಾಲೂಕು ತನಿಕಲ್ ಸತೀಶ್ ಹಾಗೂ ವೀಣಾ ದಂಪತಿಯ ಪುತ್ರ ಶ್ರೀಷ 625ಕ್ಕೆ 625 ಅಂಕ ಪಡೆದು ಸಾಧನೆ ಮಾಡಿದ್ದಾನೆ.ಈತ ಯಾವುದೇ ಟ್ಯೂಷನ್ ಪಡೆದಿಲ್ಲ. ರಾತ್ರಿ ಹಗಲು ಓದಿ ಈತ ಸಾಧನೆ ಮಾಡಿದ್ದಾನೆ. ತನಿಕಲ್ ಶಾಲೆಯಲ್ಲಿ 13 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.ಕೃಷಿ ಕುಟುಂಬದ ಶ್ರೀಷ ಸಾಧನೆ ಇದೀಗ ರಾಜ್ಯಕ್ಕೆ ಮಾದರಿಯಾಗಿದೆ.ನಾನು ಈ ಫಲಿತಾಂಶ ನಿರೀಕ್ಷೆ ಮಾಡಿದ್ದೆ. ನನ್ನ ಸಾಧನೆಗೆ ನಮ್ಮ ತಂದೆ ತಾಯಿ, ಶಿಕ್ಷಕರು, ಗ್ರಾಮಸ್ಥರು ಕಾರಣ. ನಾನು ಯಾವುದೇ ಟ್ಯೂಷನ್ ಪಡೆದಿಲ್ಲ. ಸರ್ಕಾರಿ ಶಾಲೆಯಲ್ಲೇ ಉತ್ತಮ ಶಿಕ್ಷಣ ಪಡೆದಿದ್ದೇನೆ. ವಿಜ್ಞಾನ ಶಿಕ್ಷಣ ಪಡೆದು ಮುಂದೆ…

Read More