Categories
ಬೆಂಗಳೂರು

ಹಳ್ಳಿ ಪ್ರತಿಭೆ ಮಂಜು ಪಾವಗಡ ಈಗ ಬಿಗ್ ಬಾಸ್!

  • 53 ಲಕ್ಷ ಹಣ: ಬಿಗ್ಬಾಸ್ ಅತೀ ಹೆಚ್ಚು ವೋಟ್!
  • ಬೈಕ್ ರೇಸರ್ ಅರವಿಂದ್ ಕೆ.ಪಿ ರನ್ನರ್ ಅಪ್!
  • ದಿವ್ಯಾ ಉರುಡುಗ 2ನೇ ರನ್ನರ್ ಅಪ್ ಗರಿ..!

NAMMUR EXPRESS
ಬೆಂಗಳೂರು: ಕನ್ನಡ ಬಿಗ್​ ಬಾಸ್​ ಸೀಸನ್​ 8ರ ಸುದೀರ್ಘ ಪ್ರಯಾಣ ಕೊನೆಗೊಂಡಿದೆ.  ಎಲ್ಲರ ನಿರೀಕ್ಷೆ ಯಂತೆ ಮಂಜು ಪಾವಗಡ ಅವರು ಸೀಸನ್​ 8ರ ವಿನ್ನರ್​ ಆಗಿ ಹೊರ ಹೊಮ್ಮಿದ್ದಾರೆ.ಈ ಮೂಲಕ ಬಿಗ್​ಬಾಸ್​ ಟ್ರೋಫಿ​ ಹಾಗೂ 53 ಲಕ್ಷ ನಗದು ಬಹುಮಾನ ಮಂಜು ಪಾವಗಡ ಅವರಿಗೆ ಸಿಕ್ಕಿದೆ. ಹಾಗೆಯೆ ಅಂತಾರಾಷ್ಟ್ರೀಯ ಮಟ್ಟದ ಬೈಕ್ ರೇಸರ್ ಅರವಿಂದ್ ಕೆ.ಪಿ. ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದಾರೆ. ಈ ಸೀಸನ್​ನಲ್ಲಿ ವಿನ್ನರ್ ಆಗಿರುವ ಮಂಜು ಪಾವಗಡ ಬರೋಬ್ಬರಿ 45,03,495 ಮತಗಳನ್ನು ಪಡೆಯುವ ಮೂಲಕ ಬಿಗ್ ಬಾಸ್ ಕನ್ನಡದ ಇತಿಹಾಸದಲ್ಲೇ ಅತಿ ಹೆಚ್ಚು ವೋಟಿಂಗ್ ಪಡೆದಿದ್ದಾರೆ. ಮೊದಲ ರನ್ನರ್ ಅಪ್ ಆಗಿರುವ ಅರವಿಂದ್​ ಕೆ.ಪಿ. 43,35,957 ಮತಗಳನ್ನು ಪಡೆದಿದ್ದಾರೆ. ಎರಡನೇ ರನ್ನರ್ ಅಪ್ ಆಗಿರುವ ದಿವ್ಯಾ ಉರುಡುಗ 11,61,205, ಮೂರನೇ ರನ್ನರ್ ಅಪ್ ಆಗಿರುವ ವೈಷ್ಣವಿ ಗೌಡ 10,21,831 ಹಾಗೂ ನಾಲ್ಕನೇ ರನ್ನರ್ ಅಪ್ ಆಗಿರುವ ಪ್ರಶಾಂತ್ ಸಂಬರಗಿ 6,69,020 ಮತಗಳನ್ನು ಪಡೆದಿದ್ದಾರೆ.
ದಿವ್ಯಾ ಉರುಡುಗ 2ನೇ ರನ್ನರ್ ಅಪ್!:
ಮಲೆನಾಡಿನ‌ ಹುಡುಗಿ ದಿವ್ಯಾ ಉರುಡುಗ ಮೂರನೇ ಸ್ಪರ್ಧಿಯಾಗಿ ಮನೆಯಿಂದ ಹೊರಬಂದರು. ಬಿಗ್‌ಬಾಸ್‌ ಆರಂಭದಿಂದಲೂ ಮುಗ್ದತೆ, ನಗುವಿನಿಂದಲೇ ಸದ್ದು ಮಾಡಿದ್ದ ದಿವ್ಯ ಉರುಡುಗ ಕೊನೆ ಹಂತದಲ್ಲಿ ಎಲಿಮನೇಟ್ ಆಗುವ ಮೂಲಕ ಬಿಗ್‌ಬಾಸ್ ಎರಡನೇ ರನ್ನರ್ ಅಪ್ ಸ್ಥಾನ ಪಡೆದರು. ದಿವ್ಯ ಹಾಗೂ ಅರವಿಂದ ಅವರ ನಡುವಿನ ಸ್ಪರ್ಧೆಯಲ್ಲಿ ಅಂತಿಮವಾಗಿ ದಿವ್ಯ ಹೊರ ನಡೆದರು. ನಂತರ ಅಂತಿಮವಾಗಿ ಮಂಜು ಪಾವಗಡ ಬಿಗ್ಬಾಸ್ ಟ್ರೋಫಿ ಒಲಿಸಿಕೊಂಡರು.
ಅದ್ದೂರಿ ಸ್ವಾಗತ, ಭಾರೀ ಆಫರ್!: ಕಾಮಿಡಿಯನ್ ಮಂಜು ಪಾವಗಡ ಅವರು ಈ ಬಾರಿಯ ಬಿಗ್‍ ಬಾಸ್ ಸೀನ್ -8ರ ವಿನ್ನರ್ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಗ್ ಬಾಸ್ ಮನೆಯಿಂದ ಹೊರಬರುತ್ತಿದ್ದಂತೆಯೇ ಮಂಜುಗೆ ಭರ್ಜರಿ ಸ್ವಾಗತ ಸಿಕ್ಕಿದೆ.
ಕುಟುಂಬಸ್ಥರು, ಆತ್ಮೀಯರು, ಸ್ನೇಹಿತರಿಂದ ಅದ್ಧೂರಿ ಸ್ವಾಗತ ದೊರೆತಿದೆ. ಸ್ನೇಹಿತರಂತೂ ಹೆಗಲ ಮೇಲೆ ಹೊತ್ಕೊಂಡು ಮೆರವಣಿಗೆ ಮಾಡಿದರು. ಹಾರ ಹಾಕಿ, ಪಟಾಕಿ ಸಿಡಿಸಿ, ಕೇಕ್ ಕತ್ತರಿಸಿ ಮಂಜು ಸಾಧನೆಯನ್ನು ಸಂಭ್ರಮಿಸಿದ್ದಾರೆ. ಇನ್ನು ಮಂಜು ಅವರಿಗೆ ಅತೀ ಹೆಚ್ಚು ಆಫರ್ ಬರುವ ಸಾಧ್ಯತೆ ಇದೆ.
ರಾಜ್ಯದ, ಮಲೆನಾಡಿನ ಎಲ್ಲಾ ಸುದ್ದಿಗಳಿಗೆ NAMMUR EXPRESS ” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ , ಸಬ್ಸೈಬ್ ಆಗಿ , ವಾಟ್ಸಾಪ್ನಲ್ಲಿ ಎಲ್ಲಾ ನಿಮ್ಮ ಊರಿನ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು , ಊರು , ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.