Author: Nammur Express Admin

NAMMUR EXPRESS JOB NEWSತೀರ್ಥಹಳ್ಳಿಯ ಪ್ರತಿಷ್ಠಿತ ಮಳಿಗೆಯಲ್ಲಿ ಅಕೌಂಟೆಂಟ್, ಸೇಲ್ಸ್ ಬಾಯ್, ಗರ್ಲ್ಸ್ ಕೂಡಲೇ ಬೇಕಾಗಿದ್ದಾರೆ. ಸೇಲ್ಸ್ ಹುದ್ದೆಗೆ ತೀರ್ಥಹಳ್ಳಿಯಲ್ಲಿ ವಾಸ ಇರುವವರಿಗೆ ಆಧ್ಯತೆ.ಉತ್ತಮ ಸಂಬಳ, ಉತ್ತಮ ಸೌಲಭ್ಯ ನೀಡಲಾಗುತ್ತದೆ.ಹೆಚ್ಚಿನ ಮಾಹಿತಿಗೆ 9632391112, 9945419234.ರಾಜ್ಯದ, ಮಲೆನಾಡಿನ ಎಲ್ಲಾ ಉದ್ಯೋಗ, ಉದ್ಯಮ ಸುದ್ದಿಗಳಿಗೆ NAMMUR EXPRESS ” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ , ಸಬ್ಸೈಬ್ ಆಗಿ , ವಾಟ್ಸಾಪ್ನಲ್ಲಿ ಎಲ್ಲಾ ನಿಮ್ಮ ಊರಿನ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು , ಊರು , ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು..!.

Read More

150 ವಿದ್ಯಾರ್ಥಿಗಳಿಗೆ 625 ಕ್ಕೆ 625ಬೇರೆಯವರಿಂದ ಪರೀಕ್ಷೆ ಬರೆಸಿದ್ದವ ಫೇಲ್!ಪರೀಕ್ಷೆ ಬರೆದ ಎಲ್ಲರೂ ಉತ್ತೀರ್ಣ NAMMUR EXPRESSಬೆಂಗಳೂರು: ಪ್ರಸಕ್ತ ಸಾಲಿನ ಎಸ್ಎಸ್ಎಲ್ ಸಿ ಫಲಿತಾಂಶ ಪ್ರಕಟವಾಗಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಫಲಿತಾಂಶ ಬಿಡುಗಡೆ ಮಾಡಿದರು. ಒಟ್ಟು 157 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದಿದ್ದಾರೆ. 289 ವಿದ್ಯಾರ್ಥಿಗಳು 623 ಅಂಕ, ಇಬ್ಬರು 622 ಅಂಕ, 449 ವಿದ್ಯಾರ್ಥಿಗಳು 621, 28 ವಿದ್ಯಾರ್ಥಿಗಳು 620 ಅಂಕ ಪಡೆದಿದ್ದಾರೆ. ಜುಲೈ 19 ಮತ್ತು 22ರಂದು ನಡೆದಿದ್ದ ಎಸ್ ಎಸ್ಎಲ್ ಸಿ ಪರೀಕ್ಷೆಯಲ್ಲಿ ಹಾಜರಾಗಿದ್ದ 8,71,443 ವಿದ್ಯಾರ್ಥಿಗಳಲ್ಲಿ ಒಂದು ವಿದ್ಯಾರ್ಥಿ ಹೊರತುಪಡಿಸಿ  ಉಳಿದೆಲ್ಲರೂ ತೇರ್ಗಡೆಯಾಗಿದ್ದಾರೆ. ಆತ ತನ್ನ ಬದಲು ಬೇರೆಯವರಿಂದ ಪರೀಕ್ಷೆ ಬರೆಸಿದ್ದ. ಹೀಗಾಗಿ ಆತನನ್ನು ಅನುತ್ತೀರ್ಣ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು. ಕೋವಿಡ್ ಕಾರಣದಿಂದ ಈ ಬಾರಿ ವಿಶಿಷ್ಟ ರೀತಿಯಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆ ನಡೆಸಲಾಗಿತ್ತು. ಮೂರು ವಿಷಯಗಳನ್ನೊಳಗೊಂಡ ಒಂದು ಪತ್ರಿಕೆಯಂತೆ ಒಟ್ಟು ಎರಡು ದಿನ ಪರೀಕ್ಷೆ ನಡೆಸಲಾಗಿತ್ತು.…

Read More

ದೇವಸ್ಥಾನ, ಹಿರಿಯ ನಾಯಕರ ಮನೆಗೆ ಭೇಟಿಸಂಘದ ಗುರು ವಂದನೆಯಲ್ಲಿ ಹಾಜರ್ಮುಂಜಾನೆಯಿಂದ 3000 ಜನರ ಜತೆ ಮಾತು! NAMMUR EXPRESSತೀರ್ಥಹಳ್ಳಿ: ನೂತನ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಮ್ಮ ತವರು ತೀರ್ಥಹಳ್ಳಿಗೆ ಆಗಮಿಸಿದ್ದು ಸಾವಿರಾರು ಜನರು ಅವರಿಗೆ ಸನ್ಮಾನಿಸಿ ಅಭಿನಂದಿಸಿದರು. ಈ ನಡುವೆ ಆರಗ ಅವರು ತಮ್ಮ ಕುಲದೇವರು ದೇವರಗುಡಿಗೆ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಅರುಣಗಿರಿಯ ವೆಂಕಟರಮಣ ದೇವಾಲಯಕ್ಕೆ ತೆರಳಿ ಪೂಜೆ ನೆರವೇರಿಸಿದರು. ಬಳಿಕ ರಾಜಕೀಯ ಹಾಗೂ ಬದುಕಿಗೆ ಸಹಾಯ ಮಾಡಿದ ಬಳಿಕ ಅವರ ಗುರುಗಳಾದ , ನಾಗರಾಜ ರಾಯರ ಮನೆಗೆ ಭೇಟಿ ನೀಡಿ ಅವರ ಸಂಬಂಧಿಕರಿಂದ ಸನ್ಮಾನ ಪಡೆದರು.ಅಲ್ಲಿಂದ‌ ತೀರ್ಥಹಳ್ಳಿಯ ರೋಟರಿ ಕ್ಲಬ್ ಬ್ಲಡ್ ಬ್ಯಾಂಕ್ ಗೆ ಆಗಮಿಸಿ ಉದ್ಘಾಟನೆ ಸಮಾರಂಭದಲ್ಲಿ ಭಾಗಿಯಾಗಲು ಆಗದ ಕಾರಣ ವಿಶೇಷವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸರ್ಕಾರದ ಸೌಲಭ್ಯಗಳನ್ನು ಕೊಡಿಸುವ ಭರವಸೆ ನೀಡಿದರು. ನಂತರ‌ ತೀರ್ಥಹಳ್ಳಿಯ ಪ್ರೇರಣಕ್ಕೆ ಭೇಟಿ ನೀಡಿ ರಾಷ್ಟ್ರೀಯ ಸ್ವಯಂ‌ಸೇವಕ ಸಂಘದ ಗುರುಪೂಜೆಯಲ್ಲಿ ಭಾಗಿಯಾದರು. ನಂತರ ಅಲ್ಲಿಂದ‌…

Read More

ಮಧ್ಯಾಹ್ನ 3:30ಕ್ಕೆ ಫಲಿತಾಂಶ: ಸಚಿವರ ಘೋಷಣೆಫಲಿತಾಂಶ ನೋಡೋದೆಲ್ಲಿ.. ಇಲ್ಲಿದೆ ಡೀಟೇಲ್ಸ್ವಿದ್ಯಾರ್ಥಿಗಳೇ ನಿಮಗೆ ಬೆಸ್ಟ್ ಆಫ್ ಲಕ್..! NAMMUR EXPRESSಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್‌ ವೈರಸ್‌ ಸೋಂಕಿನ ನಡುವಲ್ಲೇ ನಡೆದಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಅಗಸ್ಟ್‌ 9 ( ಇಂದು) ಪ್ರಕಟವಾಗಲಿದೆ. ಮಧ್ಯಾಹ್ನ 3.30ಕ್ಕೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ. ಈ ಮೂಲಕ ಪಿಯುಸಿ ಬಳಿಕ ಈ ಫಲಿತಾಂಶ ಪ್ರಕಟ ಆಗಲಿದೆ.ರಾಜ್ಯದಲ್ಲಿ ಜುಲೈ 19ಮತ್ತು 22 ರಂದುಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆದಿತ್ತು. ಕೊರೊನಾ ಹಿನ್ನೆಲೆಯಲ್ಲಿ ಪರೀಕ್ಷೆಯ ದಿನವನ್ನು ಕಡಿತ ಮಾಡಲಾಗಿತ್ತು. ಆದ್ರೂ ರಾಜ್ಯದಲ್ಲಿ ಬರೋಬ್ಬರಿ ಶೇ.96 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಫಲಿತಾಂಶ ಎಲ್ಲಿ ನೋಡಬಹುದು..?!: ವಿದ್ಯಾರ್ಥಿಗಳು ಫಲಿತಾಂಶವನ್ನು ಪ್ರೌಢಶಾಲಾ ಪರೀಕ್ಷಾ ಮಂಡಳಿಯ ಅಧಿಕೃತ ವೆಬ್‌ಸೈಟ್‌ sslc.karnataka.gov.in or kseeb.kar.nic.in or karresults.nic.in ಮೂಲಕ ಪಡೆಯಬಹುದಾಗಿದೆ. ವಿದ್ಯಾರ್ಥಿಗಳು ರೋಲ್‌ ನಂಬರ್‌ ಬಳಸಿ ಫಲಿತಾಂಶವನ್ನುವೀಕ್ಷಿಸಬಹುದಾಗಿದ್ದು, ತಾತ್ಕಾಲಿಕ ಅಂಕ ಪಟ್ಟಿ ಕೂಡ ಆನ್‌ಲೈನ್‌ನಲ್ಲಿಯೇ ಡೌನ್‌ ಲೋಡ್‌ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಒಂದು ವೇಳೆ…

Read More

ಕನ್ನಡ ಚಿತ್ರ ರಂಗಕ್ಕೆ ಮತ್ತೊಂದು ಶಾಕ್ಅಪಘಾತದಲ್ಲಿ ತೀವ್ರ ತಲೆಗೆ ಪೆಟ್ಟು ಬಿದ್ದು ಸಾವುಕರೋನಾ ಸಂಕಷ್ಟದಲ್ಲಿರುವವರಿಗೆ ಫುಡ್ ಕಿಟ್ ಕೊಟ್ಟು ವಾಪಾಸ್ ಆಗುತ್ತಿದ್ದ ವೇಳೆ ಅಪಘಾತ NAMMUR EXPRESSಬೆಂಗಳೂರು: ಕನ್ನಡ ಚಿತ್ರರಂಗದ ಭರವಸೆಯ ನಟನಾಗಿದ್ದ ಸಂಚಾರಿ ವಿಜಯ್(38) ಅಪಘಾತಕ್ಕೆ ಬಲಿಯಾಗಿದ್ದಾರೆ.ಶನಿವಾರ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ವಿಜಯ್ ಮೆದುಳು ಕೆಲಸ ಮಾಡುತ್ತಿರಲಿಲ್ಲ. ಗಂಭೀರ ಗಾಯಗೊಂಡ ವಿಜಯ್ ಬೆಂಗಳೂರಿನ ಬನ್ನೇರುಘಟ್ಟ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಶನಿವಾರ ಕರೋನಾ ಸಂಕಷ್ಟದಲ್ಲಿರುವ ಜನತೆಗೆ ಫುಡ್ ಕಿಟ್ ಕೊಟ್ಟು ವಾಪಾಸ್ ಬರುತ್ತಿದ್ದ ವೇಳೆ ಬೈಕ್ ಅಪಘಾತ ಆಗಿತ್ತು. ಸೋಮವಾರ ಸಂಚಾರಿ ವಿಜಯ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಮಾಹಿತಿ ಹಂಚಿಕೊಂಡಿರುವ ನಟ ಕಿಚ್ಚ ಸುದೀಪ್, ನಟ ಸಂಚಾರಿ ವಿಜಯ್ ಇನ್ನಿಲ್ಲ ಎಂಬುದನ್ನು ನೆನಪಿಸಿಕೊಳ್ಳಲು ಕೂಡ ಆಗುತ್ತಿಲ್ಲ. ಲಾಕ್ ಡೌನ್ ಸಂದರ್ಭದಲ್ಲಿ ಅನೇಕ ಬಾರಿ ನಾನು ಅವರು ಭೇಟಿಯಾಗಿದ್ದೆವು. ಅಲ್ಲದೇ ಅವರ ಮುಂದಿನ ಚಿತ್ರದ ಬಗ್ಗೆಯೂ ಕುತೂಹಲ ಮೂಡಿತ್ತು. ಮುಂದಿನ ಚಿತ್ರ ಬಿಡುಗಡೆ ಮುನ್ನವೇ ಅವರು ಇನ್ನಿಲ್ಲವಾಗಿದ್ದಾರೆ. ಅವರ ಆತ್ಮಕ್ಕೆ…

Read More

ತೀರ್ಥಹಳ್ಳಿ ಬಳಿ ಸುರಾನಿಯಲ್ಲಿ ಹೊಂಡಕ್ಕೆ ಬಿದ್ದ ಕಾರುತಾಯಿ ಸಾವಿನ ಸುದ್ದಿ ಅಮೇರಿಕಾದಲ್ಲಿರುವ ಮಗನಿಗೆ ತಿಳಿಸಲು ಪರದಾಟ!ಮಾನವೀಯತೆ ಮೆರೆದ ಬಾಂದ್ಯಾ ರಾಘು..! NAMMUR EXPRESSತೀರ್ಥಹಳ್ಳಿ: ಮಗನೆದುರೇ ತಾಯಿ ಅಪಘಾತದಲ್ಲಿ ಮೃತಪಟ್ಟ ಘಟನೆ ತೀರ್ಥಹಳ್ಳಿ ಪಟ್ಟಣದ ಸುರಾನಿ ಬಳಿ ಸಂಭವಿಸಿದೆ.ಕೋಣಂದೂರು ಸಮೀಪದ ಶಂಕ್ರಳ್ಳಿಯ ದರ್ಶನ್ ಚಾಲನೆ ಮಾಡುತ್ತಿದ್ದ ಕಾರು ಸುರಾನಿ ಸಮೀಪದ ಭೂತರಾಯ ಸ್ವಾಮಿ ದೇಗುಲದ ಬಳಿ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಕಾರಣ ಕೋಣಂದೂರು ಸಮೀಪದ ಶಂಕರಹಳ್ಳಿಯ ಸದಾಶಿವ ಎಂಬುವರ ಪತ್ನಿ ಸುಂದರಮಾಲಾ(63) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸುಂದರಮಾಲಾ ಅವರ ಮಗ ದರ್ಶನ್ ಗಾಯಗೊಂದು ಜೆಸಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದಿದ್ದಾರೆ. ಇವರ ಇನ್ನೊರ್ವ ಪುತ್ರ ಅಮೇರಿಕಾದಲ್ಲಿದ್ದಾರೆ.ತೀರ್ಥಹಳ್ಳಿ ಖಾಸಗಿ ಆಸ್ಪತ್ರೆಗೆ ತಮ್ಮ ಕಾರಿನಲ್ಲಿ ಬಂದು ಮನೆಗೆ ಮರಳುವಾಗ ಈ ಘಟನೆ ನಡೆದಿದೆ.ಕಾರು ಚಾಲನೆ ಮಾಡುತ್ತಿದ್ದ ಮಗ ಸೀಟ್ ಬೆಲ್ಟ್ ಹಾಕಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ತಾಯಿ ಸೀಟ್ ಬೆಲ್ಟ್ ಹಾಕದ ಕಾರಣ ತಲೆ ಹೊಡೆದಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.ಇನ್ನೊರ್ವ ಮಗ ಅಮೇರಿಕಾದಲ್ಲಿದ್ದು ತಾಯಿ ಸಾವಿನ ಸುದ್ದಿ ತಿಳಿಸಲು…

Read More

ತೀರ್ಥಹಳ್ಳಿಯಲ್ಲಿ ಸಂಸದ ರಾಘವೇಂದ್ರ ಚಾಲನೆಶಾಸಕ ಜ್ಞಾನೇಂದ್ರ ನೇತೃತ್ವದಲ್ಲಿ ವಿಶೇಷ ಯೋಜನೆಬಡವರಿಗೆ, ಕಾರ್ಮಿಕರಿಗೆ ಸಹಾಯ ಹಸ್ತ..!ಮೋದಿ ಇಲ್ಲದಿದ್ದರೆ ದೇಶ ಕಷ್ಟಕ್ಕೆ ಹೋಗುತ್ತಿತ್ತು!ಕರೋನಾ ಸೇವಕ ಪತ್ರಕರ್ತರಿಗೂ ವಿಶೇಷ ಕಿಟ್ NAMMUR EXPRESSತೀರ್ಥಹಳ್ಳಿ: ಆಟೋ ಚಾಲಕರು, ಟ್ಯಾಕ್ಸಿ ಚಾಲಕರು, ಹಮಾಲಿಗಳು, ಬಡ ಕಾರ್ಮಿಕರು, ಕ್ಷೇತ್ರದ ಬಡವರು ಸೇರಿದಂತೆ ಹಲವರಿಗೆ ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಆಹಾರದ ಕಿಟ್ ವಿತರಣೆ ನಿರಂತರವಾಗಿ ಸಾಗಿದೆ. ಈ ನಡುವೆ ಗುರುವಾರ ಶಿವಮೊಗ್ಗ ಸಂಸದ ರಾಘವೇಂದ್ರ ಅವರು ಸುಮಾರು 6000 ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಭಾಗಿಯಾಗಿ ಚಾಲನೆ ನೀಡಿದರು.ಪ್ರೇರಣಾ ಟ್ರಸ್ಟ್, ಸೇವಾ ಭಾರತಿ ಮತ್ತು ಪರಿವಾರ ಸಂಘಟನೆಗಳ ನೂರಾರು ಕಾರ್ಯಕರ್ತರು ಈ ಕಿಟ್ ಸಿದ್ದಪಡಿಸಿದ್ದಾರೆ.ತೀರ್ಥಹಳ್ಳಿಯ ಶಾಂತವೇರಿ ಗೋಪಾಲ ಗೌಡ ರಂಗಮಂದಿರದಲ್ಲಿ ಸೇವಾ ಭಾರತಿ, ಪ್ರೇರಣಾ ಟ್ರಸ್ಟ್, ಪರಿವಾರ ಸಂಘಟನೆಗಳ ವತಿಯಿಂದ ಆಯೋಜಿಸಿದ್ದ ಶ್ರಮಿಕ ವರ್ಗದವರಿಗೆ ಆಹಾರದ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ರಾಘವೇಂದ್ರ ಅವರು,ಪ್ರಧಾನಿ ಮೋದಿ ಅವರು ಇಂತಹ ಸ್ಥಿತಿಯಲ್ಲಿ ಇಲ್ಲದಿದ್ದರೆ ಈ ದೇಶದ ಸ್ಥಿತಿ ಕಷ್ಟ ಇತ್ತು. ವಿಶ್ವದಲ್ಲೇ…

Read More

ಅನೇಕ ಚಟುವಟಿಕೆಗಳಿಗೆ ಗ್ರೀನ್ ಸಿಗ್ನಲ್ಜೂ.14ರಿಂದ ಏನೇನ್ ಇರುತ್ತೆ..ಯಾವ ಜಿಲ್ಲೆಗೆ ಏನು?ಯಾವ ಸೇವೆ ಇರುತ್ತೆ… ಏನಿರಲ್ಲ..ಸಂಪೂರ್ಣ ಸುದ್ದಿ! NAMMUR EXPRESSಬೆಂಗಳೂರು: ರಾಜ್ಯ ಅರ್ಧ ಓಪನ್ ಆಗಲಿದೆ. ಹೌದು. ಸೋಮವಾರದಿಂದ 19 ಜಿಲ್ಲೆಗಳಲ್ಲಿ ಲಾಕ್ ಡೌನ್ ಕೊಂಚ ತೆರವು ಆಗಲಿದೆ. ಆದರೆ ಸುಖಾಸುಮ್ಮನೆ ಓಡಾಡುವ ಹಾಗಿಲ್ಲ. ಬೆಂಗಳೂರಿನಲ್ಲಿ ವೀಕೆಂಡ್ ಬಂದ್ ಆಗಲಿದೆ.ಸೋಮವಾರದಿಂದಅನ್ ಲಾಕ್ ಬಳಿಕ ಏನೇನ್ ಇರುತ್ತೆ..ಯಾವ ಜಿಲ್ಲೆಗೆ ಏನು?:ಅಗತ್ಯ ವಸ್ತು ಖರೀದಿಗೆ ಬೆಳಿಗ್ಗೆ 6ರಿಂದ ಮಧ್ಯಾಹ್ನ2 ವರೆಗೆ ಅವಕಾಶ. ಪಾರ್ಕ್ ಬೆಳಿಗ್ಗೆ 5ರಿಂದ 10, ಬೀದಿ ಬದಿ ವ್ಯಾಪಾರಿಗಳಿಗೆ ಅವಕಾಶ. ಆಟೋ, ಟ್ಯಾಕ್ಸಿ ಓಡಾಟ. 2 ಮಂದಿ ಪ್ರಯಾಣಿಕರು ಮಾತ್ರ. ಗಾರ್ಮೆಂಟ್ಸ್ ಶೇ.30ರಷ್ಟು ಕಾರ್ಮಿಕರು ಮಾತ್ರ. ಕೈಗಾರಿಕೆಗಳು ಓಪನ್ ಆಗಲಿದ್ದು ಶೇ.50ರಷ್ಟು ಕಾರ್ಮಿಕರನ್ನು ಬಳಸಬಹುದಾಗಿದೆ. ಹೋಟೆಲ್ಗಳಲ್ಲಿ ಪಾರ್ಸೆಲ್ ಅವಕಾಶ ನೀಡಲಾಗಿದೆ. ಕಟ್ಟಡ ನಿರ್ಮಾಣ, ಕೃಷಿ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಸಿಮೆಂಟ್, ಸ್ಟೀಲ್, ಪೈಪ್ ಅಂಗಡಿಗಳು ಓಪನ್ ಆಗಲಿವೆ.ಪ್ರತಿದಿನ ಸಂಜೆ 7ಗಂಟೆಯಿಂದ ಬೆಳಗ್ಗೆ 5ಗಂಟೆವರೆಗೆ ನೈಟ್ ಕರ್ಫ್ಯೂ ಮತ್ತು ಶುಕ್ರವಾರ ಸಂಜೆ 7ರಿಂದ ಸೋಮವಾರ…

Read More

ಜೂ.21ರವರೆಗೆ ಲಾಕ್ ಡೌನ್ಕೈಗಾರಿಕೆ, ಕೃಷಿಗೆ ಅನುಮತಿ NAMMUR EXPRESSಬೆಂಗಳೂರು: ಮೈಸೂರು, ಬೆಳಗಾವಿ, ಶಿವಮೊಗ್ಗ, ವಿಜಯಪುರ, ಹಾಸನ, ಮಂಡ್ಯ, ದ.ಕನ್ನಡ, ಬೆಳಗಾವಿ ಜಿಲ್ಲೆಗಳಲ್ಲಿ ಜೂನ್ 21 ವರೆಗೆ ಲಾಕ್ ಡೌನ್ ಮುಂದುವರಿಕೆ ಮಾಡಲಾಗಿದೆ. ಅನೇಕ ಚಟುವಟಿಕೆಗಳಿಗೆ ಅವಕಾಶ ಸಿಕ್ಕಿದೆ.ಕರೋನಾ ಸೋಂಕು ಶೇಕಡಾವಾರು 5 ಬರುವವರೆಗೂ ಈ ಜಿಲ್ಲೆಗಳು ಲಾಕ್ ಆಗಲಿದೆ. ಅಗತ್ಯ ವಸ್ತುಗಳು ಹಾಗೂ ವ್ಯಾಪಾರಸ್ತರಿಗೆ, ಕಟ್ಟಡ ನಿರ್ಮಾಣ ಕಾರ್ಯ ಚಟುವಟಿಕೆಗಳನ್ನು ನಡೆಸಲು ಮತ್ತು ಹೆಚ್ಚಿನ ಸಮಯ ನೀಡುವ ವಿನಾಯಿತಿ ಜಿಲ್ಲಾಡಳಿತ, ತಾಲ್ಲೂಕು ಆಡಳಿತ, ಉಸ್ತುವಾರಿ ಸಚಿವರಿಗೆ ಅಧಿಕಾರ ನೀಡಲಾಗಿದೆ.22 ಜಿಲ್ಲೆಗಳಲ್ಲಿ ವೀಕೆಂಡ್ ಲಾಕ್ ಡೌನ್ ಮತ್ತು ರಾತ್ರಿ ನಿಷೇಧಾಜ್ಞೆ ಜಾರಿಯಾಗುವ ಸಾಧ್ಯತೆ ಇದೆ. ಜನರ ಓಡಾಟದ ಮೇಲೆ ನಿಗಾ ಮಾಡಲಾಗುತ್ತದೆ. ಆಯಾ ಜಿಲ್ಲಾಧಿಕಾರಿಗಳಿಗೆ ಜಿಲ್ಲೆಗಳ ಹೊಣೆ ನೀಡಲಾಗಿದೆ.

Read More

ಸಾವಿರಾರು ಮಂದಿಗೆ ಪ್ರತಿ ದಿನ ಊಟ ಉಪಹಾರಎಲ್ಲಾ ಸಾಮಾಜಿಕ ಸೇವೆಗಳಲ್ಲಿ ವೇದಿಕೆ ಕೆಲಸಹಿರಿ, ಕಿರಿ ನಾಯಕರ, ಕಾರ್ಯಕರ್ತರ ಸಾರಥ್ಯ NAMMUR EXPRESSತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಕರೋನಾ ಸೇವೆಯಲ್ಲಿ ಕಳೆದ ವರ್ಷದಿಂದ ಮುಂಚೂಣಿಯಲ್ಲಿರುವ ಸಂಸ್ಥೆ ಸಮಾನ ಮನಸ್ಕರ ವೇದಿಕೆ.2020ರ ಲಾಕ್ ಡೌನ್ ವೇಳೆ ಶುರುವಾದ ಈ ವೇದಿಕೆ 25000ಕ್ಕೂ ಹೆಚ್ಚು ಮಂದಿಗೆ ಊಟ, ಕಿಟ್, ವಾಹನ, ಇತರೆ ಆರೋಗ್ಯ ಸೇವೆ ನೀಡಿತ್ತು. ಈ ವರ್ಷದ ಲಾಕ್ ಡೌನ್ ವೇಳೆಯೂ ಕಳೆದ 40 ದಿನದಿಂದ ಈ ವೇದಿಕೆ ಸೇವೆ ನೀಡುತ್ತಿದೆ. ತೀರ್ಥಹಳ್ಳಿ ಜೆಸಿ ಆಸ್ಪತ್ರೆ ಎದುರು ಕ್ಯಾಂಟೀನ್ ಅಲ್ಲಿ ಉಚಿತ ಊಟ ನೀಡಲಾಗುತ್ತಿದೆ. ತೀರ್ಥಹಳ್ಳಿಯ ಜನಸ್ನೇಹಿ ನಾಯಕ ರಾಘವೇಂದ್ರ ಸೊಪ್ಪುಗುಡ್ಡೆ ಮತ್ತು ಸಂದೇಶ ಜವಳಿ, ರಾಘವೇಂದ್ರ ಬಾಳೆಬೈಲು ಸೇರಿದಂತೆ ಹಲವರು ನೇತೃತ್ವದಲ್ಲಿ ಈ ಸೇವೆ ನಡೆಯುತ್ತಿದೆ. ರೋಟರಿ, ಲಯನ್ಸ್, ಜೆಸಿ ಸೇರಿದಂತೆ ಹಲವಾರು ಸಂಘಟನೆ, ಸಂಸ್ಥೆಗಳು, ಉದ್ಯಮಿಗಳು, ದಾನಿಗಳು ಸಹಕಾರ ಮಾಡಿದ್ದಾರೆ. ಜಾತಿ, ಧರ್ಮ, ಪಕ್ಷಬೇಧ ಮರೆತು ಎಲ್ಲಾ ಸೇವಕರು ಸೇವೆ ಮಾಡುತ್ತಿದ್ದಾರೆ. ಸಮಾನ ಮನಸ್ಕ…

Read More